ಪುಟ:Mysore-University-Encyclopaedia-Vol-2-Part-2.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಟಲಿ ಅಲ್ಲದೆ ಕಿತ್ತಲೆ ಹಾಗೂ ನಿಂಬೆಹಣ್ಣುಗಳನ್ನು ಹೇರಳವಾಗಿ ಬೆಳೆಯುತ್ತಾರೆ.ದ್ರಾಕ್ಷಾರಸ ಹಾಗೂ ಆಲಿವ್ ಎಣ್ಣೆಗಳ ಉತ್ಪಾದನೆಯಲ್ಲಿ ಪ್ರಸಿದ್ಧವಾದ ರಾಷ್ಟ್ರಗಳ ಪೈಕಿ ಇಟಲಿಗೆ ಎರಡನೆಯ ಸ್ಥಾನ.ದೇಶದ ಎಲ್ಲ ಭಾಗಗಳಲ್ಲೂ ದನಕರುಗಳನ್ನೂ ಕುರಿ , ಮೇಕೆ , ಹಂದಿಗಳನ್ನೂ ನೋಡಬಹುದಾಗಿದೆ. ಉಳಿದ ಪ್ರಾಣಿ ಸಂಪತ್ತೆಂದರೆ ಕತ್ತೆ , ಕುದುರೆ ಹಾಗೂ ಹೇಸರಗತ್ತೆ. ಇಟಲಿಯಲ್ಲಿ ದೊರಕುವ ಖನಿಜಸಂಪತ್ತು ಅಷ್ಟೇನೂ ಆಶಾದಾಯ್ಕವಾದುದಲ್ಲ. ಗಂಧಕ ಹಾಗೂ ಪಾದರಸ ಹೇರಳವಾಗಿ ದೊರಕುತ್ತದೆ.ಇಟಲಿ ಇದನ್ನು ಹೇರಳವಾಗಿ ರಫ್ತುಮಾಡುತ್ತದೆ.ಪ್ರಪಂಚದ ೧/೩ ಭಾಗದಷ್ಟು ಪಾದರಸ ಇಟಲಿಯಲ್ಲಿ ಉತ್ಪಾದನೆಯಾಗುತ್ತದೆ. ಕಬ್ಬಿಣ , ಸತು , ಸೀಸ ,ಮ್ಯಾಅಮ್ಗನೀಸ್ ಮತ್ತು ಅಲ್ಯೂಮಿನಿಯಂ ಅದಿರುಗಳ ಉತ್ಪಾದನೆಯೂ ಇದೆ. ಆದರೆ ಕೈಗಾರಿಕೆಗೆ ಬೇಕಾದ ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು ಸಾಕಷ್ಟು ದೊರಕದಿರುವುದು ದೇಶದ ಕೈಗಾರಿಕೋದ್ಯಮಕ್ಕೆ ಭಾರಿ ಪೆಟ್ಟು. ಕೆಲವು ಮುಖ್ಯ ಗಣಿಗಳು ಸಿಸಿಲಿ , ಸಾರ್ಡಿನಿಯ , ಟಸ್ಕನಿ , ಲೊಂಬಾರ್ಡಿಗಳಲ್ಲಿವೆ. ಸಿಸಿಲಿಯಲ್ಲಿ ಅನೇಕ ಸಮೃದ್ದ ಎಣ್ಣೆ ಬಾವಿಗಳು ದೊರಕಿವೆ. ಆ ಪ್ರದೇಶಗಳನ್ನು ಅಭಿವೃದ್ದಿಪಡಿಸಿ ಯುರೋಪಿನಲ್ಲೇ ಅತಿಪ್ರಮುಖವಾದ ಎಣ್ಣೆ ದೊರಕುವ ಪ್ರದೇಶಗಳನ್ನಾಗಿ ಮಾಡುವ ಯೋಜನೆ ಹಾಕಿಕೊಂಡು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಜಲವಿದ್ಯುಚ್ಛಕ್ತಿಯನ್ನು ಅಧಿಕವಾಗಿ ಉತ್ಪಾದಿಸಲಾಗುತ್ತಿದೆ. ದೇಶದ ಕೈಗಾರಿಕೋದ್ಯಮಗಳು ಇಟಲಿಯ ಉತ್ತರಭಾಗದಲ್ಲಿ ಹೆಚ್ಚಾಗಿವೆ. ಆದರೆ ಇತ್ತೀಚೆಗೆ ದಕ್ಷಿಣದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಉತ್ಪಾದನೆ ಹೆಚ್ಚಿಸಬೇಕೆಂದು ನಿಯೋಜಿತ ಯೋಜನೆಯನ್ನು ಹಾಕಿಕೊಂಡು ದೇಶ ಮುಂದುವರೆಯುತ್ತಿದೆ. ಇಟಲಿಯ ಕೈಗಾರಿಕಾ ಕ್ಷೇತ್ರದಲ್ಲಿ ಪ್ರಮುಖವಾದದ್ದು ಎಂದರೆ ಬಟ್ಟೆ ಕೈಗಾರಿಕೆ. ಈ ಕೈಗಾರಿಕೆ ದೇಶದಲ್ಲಿ ಬಹುತೇಕ ಜನರಿಗೆ ಉದ್ಯೋಗ ನೀಡಿದೆ. ಕೈಗಾರಿಕೋದ್ಯಮದಲ್ಲಿ ಮುಖ್ಯವಾಗಿ ಸಿಲ್ಕ್ , ಉಣ್ಣೆ ಮತ್ತು ಹತ್ತಿ ಹಾಗೂ ಕೃತಕನೂಲಿನ ಬಟ್ಟೆಗಳ ಉತ್ಪಾದನೆ ಹೆಚ್ಚಾಗಿದೆ. ರಾಸಾಯನಿಕ ವಸ್ತು , ಸಕ್ಕರೆ ಹಾಗೂ ಮೋಟರ್ ಕಾರು , ಕೈಗಾರಿಕೆಗಳು ಪ್ರಮುಖವಾದ ಉದ್ಯಮಗಳಾಗಿವೆ. ವೈರ್ ಲೆಸ್ ಮತ್ತು ಬೆರಳಚ್ಚು ಯಂತ್ರ , ವ್ಯವಸಾಯಕ್ಕೆ ಬೇಕಾದ ಉಪಕರಣ ಬೈಸಿಕಲ್ಲು , ಮೋಟರ್ ಸೈಕಲ್ಲು-ಇವು ಕೈಗಾರಿಕೋದ್ಯಮದ ಇತರ ಉತ್ಪಾದಿತ ವಸ್ತುಗಳು. ಜನಜೀವನ:ಬಹುಪುರಾತನ ಕಾಲದಿಂದ ಇಟಲಿಗೆ ಅನೇಕ ಜನಾಂಗಗಳು ಬಂದು ಸೇರಿವೆ. ಆರ್ಯರು , ಕೆಲ್ಪರು , ಗೋಥರು , ಇಟ್ರಸ್ಕನರು ಮುಂತಾದ ಜನಾಂಗಗಳ ಜನರು ಇಟಲಿಯ ಮೇಲೆ ಧಾಳಿ ನಡೆಸಿದರು. ಪ್ರತಿಯೊಂದು ಧಾಳಿಯ ಅನಂತರವೂ ಅವರಲ್ಲಿ ಸ್ವಲ್ಪಜನ ಅಲ್ಲ್ರೇ ನೆಲೆಯೂರಿದರು. ಹೀಗೆ ಇಟಲಿಯಲ್ಲಿ ಅನೇಕ ಜನಾಂಗಗಳ ಮಿಶ್ರಣವಾಗುತ್ತ ಬಂದಿದೆ. ಈಗ ಅದು ತನ್ನದೇ ಆದ ಕೆಲವು ವಿಶಿಷ್ಟ ಲಕ್ಷ್ಣಗಳಿಂದ ಕೂಡಿದೆ. ಇಂದಿಗೂ ಇಟಲಿಯ ಜನರಲ್ಲಿ ವೈವಿಧ್ಯವನ್ನು ಕಾಣಬಹುದು. ದೇಶದ ಒಟ್ಟು ವಿಸ್ತೀರ್ಣದ ದೃಷ್ಟಿಯಿಂದ ಇಟಲಿಯಲ್ಲಿ ಇತರ ರಾಷ್ಟ್ರಗಳಿಗಿಂತ ಹೆಚ್ಚಿನ ಜನಸಾಂದ್ರತೆ ಇಲ್ಲದಿದ್ದರೂ ಪರ್ವತಮಯ ಪ್ರದೇಶದಿಂದಾಗಿ ಜನವಸತಿ ಕೆಲವೇ ಕಡೆ ಅತಿ ಹೆಚ್ಚಾಗಿದೆ. ಈಗಂತೂ ಇದೊಂದು ಸಮಸ್ಯೆಯೇ ಆಗಿ ಪರಿಣಮಿಸಿದೆ. ಜನಸಂಖ್ಯೆಯ ಏರಿಕೆಯ ಪ್ರಮಾಣ ಅಷ್ಟಾಗಿಲ್ಲ. ೧೯೩೮-೬೧ರ ವರೆಗೆ ಜನನ ಪ್ರಮಾಣ ಸಾಕಷ್ಟು ಇಳಿಯಿತು. ಆದರೆ ಸುಧಾರಿತ ವೈದ್ಯಕೀಯ ಸೌಲಭ್ಯದಿಂದಾಗಿ ನೈಸರ್ಗಿಕ ಮರಣಗಳ ಸಂಖ್ಯೆಯೂ ಇಳಿಯಿತು. ಹೀಗಾಗಿ ಒಟ್ಟಿನಲ್ಲಿ ಜನಸಂಖ್ಯೆಯ ಏರಿಕೆಯ ಪ್ರಮಾಣ ತಕ್ಕಮಟ್ಟಿಗೆ ಇತ್ತು. ಇಲ್ಲಿನ ಜನ ಮೊದಲಿನಿಂದಲೂ ಅಧಿಕಸಂಖ್ಯೆಯಲ್ಲಿ ಹೊರಕ್ಕೆ ವಲಸೆ ಹೋಗುತ್ತಿದ್ದುದರಿಂದ ಜನಸಂಖ್ಯೆಯ ಏರಿಕೆ ಅತಿಯಾಗಿ ಪರಿಣಮಿಸಿಲ್ಲವೆನ್ನಬಹುದು. ಇಟಲಿಯ ಬಹುಸಂಖ್ಯಾತ ಪ್ರಜೆಗಳು ಅಮೆರಿಕಕ್ಕೂ ಯುರೋಪಿನ ಇತರ ರಾಷ್ಟ್ರಗಳಿಗೂ ವಲಸೆ ಹೋಗುವುದು ಸಾಮಾನ್ಯವಾಗಿತ್ತು. ಈಗ ಈ ರೀತಿ ವಲಸೆ ಹೋಗುವವರ ಸಂಖ್ಯೆ ತಗ್ಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಧರ್ಮ:ಇಟಲಿಯನ್ನು ರೋಮನ್ ಕೆಥೋಲಿಕ್ ರಾಷ್ಟ್ರವೆಂದೇ ಹೇಳಬಹುದು. ಇಲ್ಲಿಯ ಜನರಲ್ಲಿ ಶೇ.೯೫ಕ್ಕೂ ಹೆಚ್ಚು ಜನ ಕೆಥೊಲಿಕರು. ಪ್ರಾಟೆಸ್ಟಂಟರೂ ಜ್ಯೂಗಳೂ ಇತರ ಮತಾವಲಂಬಿಗಳೂ ಅಲ್ಪಸಂಖ್ಯೆಯಲ್ಲಿದ್ದಾರೆ. ಕೆಥೊಲಿಕ್ ಮತವನ್ನು ರಾಷ್ಟ್ರೀಯಮತವೆಂದು ಪರಿಗಣಿಸಲಾಗಿದೆ. ಆದರೆ ಇತರ ಮತಗಳನ್ನೂ ಇದಕ್ಕೆ ಸರಿಸಮನಾಗಿಯೇ ಕಾಣಲಾಗುತ್ತದೆ. ಇಲ್ಲಿನ ಶಾಖೆಗಳಲ್ಲಿ ಕೆಥೊಲಿಕ್ ಧಾರ್ಮಿಕ ಶಿಕ್ಷಣ ಕಡ್ಡಾಯವಾಗಿದೆ. ಈ ಶಿಕ್ಷಣದ ಹೊಣೆಯನ್ನು ಚರ್ಚ್ ಗಳು ನಿರ್ವಹಿಸುತ್ತವೆ. ಧರ್ಮಾಧಿಕಾರಿಗಳಿಗೆ ರಾಜ್ಯದ ಬೊಕ್ಕಸದಿಂದಲೇ ವೇತನ ಕೊಡಲಾಗುವುದು.ಧರ್ಮಾಧಿಕಾರಿಗಳನ್ನು ( ಪ್ರೀಸ್ಟ್ , ಬಿಷಪ್ , ಆರ್ಚ್ಬಿಬಿಷಪ್ ಮುಂತಾದವರು ) ಪೋಪರೇ ನಿಯಮಿಸುತ್ತಾರೆ. ಆದರೆ ನೇಮಕದ ಮೊದಲು ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರದ ಅಂಗೀಕಾರಕ್ಕಾಗಿ ಕಳುಹಿಸಲಾಗುವುದು. ಕೆಥೊಲಿಕ್ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಬರದ ಇನ್ನಾವುದೇ ಧರ್ಮದ ಧಾರ್ಮಿಕ ಕಾರ್ಯಗಳಿಗೆ ಇಲ್ಲಿ ಮಾನ್ಯತೆ ಇದೆ. ಮೊದಲು ದಕ್ಷಿಣದ ಕೆಲವೇ ನಗರಗಳಲ್ಲಿ ದಟ್ಟೈಸಿದ್ದ ಜನ ಈಗ ಉತ್ತರದ ಬಯಲುಗಳಲ್ಲಿ ಸ್ಥಾಪಿಸಲಾಗುತ್ತಿರುವ ಕೈಗಾರಿಕಾ ಕೇಂದ್ರಗಳಿಗೆ ಹೋಗುತ್ತಿದ್ದಾರೆ. ಉತ್ತರದ ಕೆಲವೇ ಕಡೆ ಹೆಚ್ಚಾಗಿದ್ದ ಜನಸಂಖ್ಯೆ ಈಗ ಎಲ್ಲ ಕಡೆಗೆ ಹರಡಿ ಒಂದು ರೀತಿಯ ಸಮತೋಲ ಏರ್ಪಟ್ಟಿದೆ.ರೋಮ್ , ಮಿಲಾನ್ , ನೇಪಲ್ಸ್ , ಟ್ಯೂಊಉರಿನ್ , ಜಿನೋವ , ಫ್ಲಾರೆನ್ಸ್ , ವೆನಿಸ್ ಮುಂತಾದವು ಹೆಚ್ಚು ಜನಸಂಖ್ಯೆ ಇರುವ ಮುಖ್ಯ ನಗರಗಳು. ಆಡಳಿತ ವ್ಯವಸ್ಥೆ:೧೯೪೬ರ ಜೂನ್ ೧೦ರಿಂದ ಇಟಲಿ ಗಣರಾಜ್ಯವಾಗಿದೆ. ದ್ವಿತೀಯ ಮಹಾ ಯುದ್ಧದಲ್ಲಿ ಪರಾಜಯಗೊಂಡಮೇಲೆ ೧೯೪೬ ಜೂನ್ ೨ರಂದು ಇಟಲಿಯಲ್ಲಿ ನಡೆಸಿದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಶೇ.೫೪.೩ ಜನ ಗಣರಾಜ್ಯದ ಪರವಾಗಿಯೂ ಶೇ.೪೫.೭ ಜನ ಅರಸೊತ್ತಿಗೆ ಉಳಿಸಿಕೊಳ್ಳಬೇಕೆಂದೂ ಅಭಿಪ್ರಾಯಪಟ್ಟರು. ಸಂವಿಧಾನ ಸಭೆಗೆ ಪ್ರಥಮ ಬಾರಿಗೆ ಚುನಾವಣೆ ನಡೆಯಿತು.೫೫೬ ಸದಸ್ಯರುಳ್ಳ ಸಭೆ ಸಿನಾಲರ ಎನ್ರಿಕೋ ಡಿ.ನೀಕೋಲಾನನ್ನು ಅಧ್ಯಕ್ಷನನ್ನಾಗಿ ಆರಿಸಿತು. ಹೊಸ ಸಂವಿಧಾನ ರೂಪಿಸಿ ಶಾಂತಿ ಒಡಂಬಡಿಕೆಯನ್ನು ಕ್ರಮಬದ್ಧಗೊಳಿಸಿದ್ದು ಇದರ ಮುಖ್ಯ ಕೆಲಸ. ೧೯೪೭ ಡಿಸೆಂಬರ್ ೨೭ರಂದು ನೂತನ ಸಂವಿಧಾನ ಅಂಗೀಕೃತವಾಯಿತು. ೧೯೪೮ ಜನವರಿ ೧ರಂದು ಅದು ಜಾರಿಗೆ ಬಂತು. ಗ್ರೇಟ್ ಬ್ರಿಟನ್ , ಫ್ರಾನ್ಸ್ , ಅಮೆರಿಕ ಸಂಯುಕ್ತ ಸಂಸ್ಥಾನಗಳ ಅನುಭವವನ್ನೂ ಉದಾಹರಣೆಗಳನ್ನೂ ಇಟಲಿಯ ಸಂವಿಧಾನ ಪ್ರತಿಬಿಂಬಿಸುತ್ತದೆ. ಇಟಲಿ ಈ ಸಂವಿಧಾನಕ್ಕನುಗುಣವಾಗಿ ರೂಪಿತವಾದ ಪ್ರಜಾಸತ್ತಾತ್ಮಕ ಗಣರಾಜ್ಯ. ಪರಮಾಧಿಕಾರ ಜನತೆಗೆ ಸೇರಿದ್ದಾದರೂ ಅವರು ಸಂವಿಧಾನಕ್ಕೆ ಬದ್ಧರಾಗಿ ತಮ್ಮ ಹಕ್ಕು ಚಲಾಯಿಸುತ್ತಾರೆ. ಇಟಲಿಯಲ್ಲಿ ದ್ವಿಸದನ ಪದ್ಧತಿಯ ರಾಷ್ಟ್ರೀಯ ಪಾರ್ಲಿಮೆಂಟ್ ಇದೆ. ಮೊದಲನೆಯದು ಚೇಂಬರ್ ಆಫ್ ಡೆಪ್ಯುಟೀಸ್ , ಎರಡನೆಯದು ಸೆನೆಟ್. ಚೇಂಬರಿಗೆ ಪ್ರತಿ ೫ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ೨೧ ವರ್ಷಕ್ಕೆ ಕಡಿಮೆಯಿಲ್ಲದ ಸ್ತ್ರೀ-ಪುರುಷರೆಲ್ಲ ಮತದಾನಕ್ಕೆ ಅರ್ಹರು. ಚೇಂಬರ್ ಆಫ್ ಡೆಪ್ಯುಟೀಸ್ ಗೆ ಸದಸ್ಯರಾಗುವವರ ಕನಿಷ್ಠ ವಯೋಮಿತಿ ೨೫ ವರ್ಷ. ೮೦೦೦೦ ಜನರಿಗೆ ಒಬ್ಬ ಪ್ರತಿನಿಧಿಯಿದ್ದಾನೆ. ಸೆನೆಟ್ಟಿಗೆ ೬ವರ್ಷಗಳಿಗೊಮ್ಮೆ ಚುಣಾವಣೆ ನಡೆಯುತ್ತದೆ. ೨೦೦೦೦೦ ಜನರಿಗೆ ಒಬ್ಬ ಪ್ರತಿನಿಧಿಯಿರುತ್ತಾನೆ. ಅಧ್ಯಕ್ಷನ ಕನಿಷ್ಠ ವಯೋಮಿತಿ ೫೫ವರ್ಷ,ಎರಡೂ ಸದನಗಳ ಸದಸ್ಯರೂ ಪ್ರಾದೇಶೆಕ ಕೌನ್ಸಿಲ್ ನ ಸದಸ್ಯರೂ ಸೇರಿ ಸಂಯುಕ್ತಾಧಿವೇಶನದಲ್ಲಿ ಗಣರಾಜ್ಯದ ಅಧ್ಯಕ್ಷನನ್ನು ಆರಿಸುತ್ತಾರೆ.