ಪುಟ:Mysore-University-Encyclopaedia-Vol-2-Part-2.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಲಿ ೧.ಹೆಗ್ಗಣ ; ಬ್ಯಾಂಡಿಕೋಟ ಏಂಬ ಜಾತಿಗೆ ಸೇರಿದ್ದು ; ಈ ಹೆಸರು ತೆಲುಗಿನ ಪಂದಿಕೋಕು(ಹಂದಿ ಇಲಿ)ಎಂಬ ಹೆಸರಿನ ಅಪಭ್ರಂಶವಿರುಂತೆ ತೋರುತ್ತದೆ .ಮೈಮೇಲಿನ ತುಪ್ಪಳದ ಅರ್ಧದಷ್ಟು ಭಾಗದಲ್ಲಿ ಮುಳ್ಳುಗಳಿವೆ.ಹೆಬ್ಬೆರಳನ್ನುಳಿದು ಮಿಕ್ಕ ಬೆರಳುಗಳಿಗೆ ಚೂಪಾದ ನಳಗಳುಂಟ್ಟು. ಅಂಗಾಲಿನಲ್ಲಿ ಆರು ಮೆತ್ತೆಗಳಿವೆ. ಇದು ಮೂಷಕವರ್ಗದಲ್ಲೇ ದೊಡ್ಡ ಪ್ರಾಣಿ. ತಲೆಯಿಂದ ಬಾಲದಬುಡದವರೆಗೆ ೩೦-೩೩ ಸೆಂ.ಮೀ;ಆದರೆ ಬಾಲವೇ ೨೮-೩೩ ಸೆಂ.ಮೀ ಇರುತ್ತದೆ . ಬಣ್ಣ ಮೇಲ್ಭಾಭಾಗದಲ್ಲಿ ಕಪ್ಪು ಮಿಶ್ರಿತ ಕಂದು ಪಕ್ಕಗಳಲ್ಲಿ ಬೂದು ಛಾಯೆ; ತಳಭಾಗ ಬೂದು ಮಿಶ್ರಿತ ಕಂದು.ಭಾರತ ಮತ್ತು ಶ್ರೀಲಂಕಾದಾದ್ಯಾಂತ ವ್ಯಾಪಿಸಿದೆ.ಆದರೆ ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯಗಳಲ್ಲಿ ವಿರಳ .ಹಗಲು ಹೊತ್ತು ಬಿಲಗಳ್ಳಲ್ಲಿ ಮರೆಯಾಗಿದ್ದು ರಾತ್ರಿ ವೇಳೆ ಸಿಕ್ಕಿದೆಡೆ ತೋಡಿ ಮಣ್ಣುಗುಡ್ಡೆಹಾಕುವುದು ಇದರ ಸ್ವಭಾವ.ಊರ ,ಗ್ರಾಮಗಳಲ್ಲೂ ವ್ಯವಸಾಯ ಪ್ರದೇಶಗಳಲ್ಲೂ ಇದರ ಉಪಟಳ ಹೆಚ್ಚು ಕಾಳು ಕಡ್ಡಿಗಳನ್ನೂ ದವಸಧಾನ್ಯಗಳನ್ನೂ ಹಣ್ಣುಹಂಪಲು ತರಕಾರಿಗಳನ್ನು ಕತ್ತರಿಸಿ ತಿಂದು ಹಾಕಿ ನಷ್ಟ ಉಂಟುಮಾಡುತ್ತದೆ. ಇದು ಸಾಮಾನ್ಯವಾಗಿ ಅಂಜುಬುರುಕ ಪ್ರಾಣಿ ನಾಯಿಗಳು ಇದನ್ನು ಬೇಟೆಯಾಡಿ ತಿಂದುಬಿಡುತ್ತದೆ.ಆದರೂ ಒಮೊಮ್ಮೆ ಶತ್ರುಗಳನ್ನು ಧೈರ್ಯದಿಂದ ಎರಡು ಕಾಲುಗಳ ಮೇಲೆ ಎದ್ದುನಿಂತು ಎದುರಿಸುವುದುಂಟು . ಈ ಜಾತಿಯ ಬ್ಯಾಂಡಿಕೋಟ ಮಲಬಾರಿಕ ಎಂಬ ಪ್ರಭೇದ ಎಲ್ಲ ಕಡೆಯೂ ಹರಡಿದೆ.ಎದುರಾಳಿಯನ್ನು ಕಂಡರೆ ಹಂದಿಯಂತೆ ಎಗರಿನಿಂತು ಎದುರಿಸುತ್ತದೆ.ಗಾತ್ರ ಸಾಧಾರಣ .ತುಪ್ಪಳ ಒರಟು.ಸ್ತನಗಳ ಸಂಖ್ಯೆ ೧೬-೧೮. ೨.ಮುಖಮಲ್ ಹೆಗ್ಗಣ ಇದರಲ್ಲಿ ಎರಡು ಜಾತಿಗಳಿವೆ.ಗುನೋಮಿನ್ ಮತ್ತು ಟಸ್ ,ಗ್ ಮೊದಲಜಾತಿಯ ಪ್ರಾಣಿಗಳಲ್ಲಿ ಸ್ತನಗಳು ೧೦-೧೨ .ಉದರದ ಮೇಲಿನ ಕೂದಲ ಛಾಯೆ ಬಿಳಿ .ಮೇಲ್ಭಾಗದ ತಳಭಾಗದ ಬಣ್ಣಗಳು ಪಕ್ಕದಲ್ಲಿ ಬೆರೆತಿಲ್ಲ.ತಲೆ ಮೈ ಕೂಡಿ ಉದ್ದ ೧೫-೨೬ ಸೆಂ.ಮೀ.ಇವೆರಡು ಜಾತಿಗಳಿಂದಲೂ ಬೆಳೆಗಳಿಗೆ ಭಾರಿ ಪ್ರಮಾಣದ ನಷ್ಟವುಂಟು.ದಕ್ಷಿಣ ಭಾರತದಲ್ಲಿ ಇವುಗಳ ಹಾವಳಿ ಬಲು ಹೆಚ್ಚು .ಬತ್ತ ,ರಾಗಿ ,ಮರಗೆಣಸು,ತೆಂಗಿನ ಸಸಿ,ತರಕಾರಿ,ಹಣ್ಣಿನ ಗಿದ ಇವಕ್ಕೆಲ್ಲ ಭಾರಿನಷ್ಟ ಉಂಟುಮಾಡುತ್ತವೆ.ಗದ್ದೆ ಏರಿಗಳಲ್ಲಿ,ಕಾಲುವೆ ಪಕ್ಕದಲ್ಲಿ ,ಚರಂಡಿ ಸಂದುಗಳಲ್ಲಿ ಇವುಗಳ ವಾಸ.ಬಿಲ ೪೦-೬೦ಸೆಂ.ಮೀಗಳಷ್ಟು ಆಳ. ಒಂದೊಂದು ಗೂಡಿಗೂ ನಾಲ್ಕೈದು ದ್ವಾರಗಳಿರುವುದುಂಟು.ಮುಖ್ಯ ಸುರಂಗದಿಂದ ನಾಲ್ಕೈದು ಉಪ ಸುರಂಗಗಳು ಕವಲೊಡೆದಿರುತ್ತವೆ.ಒಂದೊಂದು ಬಿಲದಲ್ಲೂ ಒಂದು ಜೋಡಿ ಮಾತ್ರ ವಾಸಿಸುತ್ತವೆ.ಹುಲ್ಲು ,ಎಲೆ,ಬಟ್ಟೆ ಚಿಂದಿ-ಇವನೆಲ್ಲ ಹಾಕಿ ಗೂಡಿನಲ್ಲಿ ಹಾಸಿಗೆ ಮಾಡಿ ಮರಿಗಳಿಗೆ ತಾಯಿ ಮೆತ್ತನೆಯ ಸ್ಥಳ ಕಲ್ಪಿಸುತ್ತದೆ.ಒಂದು ಸಲಕ್ಕೆ ಹತ್ತಕ್ಕಿಂತಲೂ ಹೆಚ್ಚು ಮರಿ ಹಾಕುತ್ತದೆ.ಬತ್ತ,ರಾಗಿ,ಹುಲ್ಲು-ಇವುಗಳ ತೆನೆಗಳನ್ನು ಸಾಗಿಸಿ ಗೂಡಿನಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ.ಮಖಮಲ್ ಹೆಗ್ಗಣಗಳು ಅತಿ ಚುರುಕು;ಅಪಾಯದ ಕುರುಹನ್ನು ಬಲುಬೇಗ ಗ್ರಹಿಸಿ ಅಪಾಯ ಒದಗಿದಾಗ ಬಲು ಜಾಣ್ಮೆಯಿಂದ ಓಡಿಹೋಗಿ ಶತ್ರುಗಳಿಂದ ತಪ್ಪಿಸಿಕೊಳ್ಳುತ್ತವೆ.ಕಳ್ಳ ಮಾರ್ಗಗಳಿಂದ ಗುಪ್ತ ಸ್ಥಳಕ್ಕೆ ಹೋಗಿ ಸೇರಿಬಿಡುತ್ತವೆ.ಕೆಲವೇಳೆ,ನೀರಿನಲ್ಲೂ ಅಡಗಿಕೊಳ್ಳುವುದುಂಟು.ವಿಧಿಯಿಲ್ಲದೆ ಶತ್ರುಗಳಿಗೆ ಸಿಕ್ಕಿದಾಗ ಸುಮ್ಮನೆ ಮಣಿಯುವುದಿಲ್ಲ.ಗುಟುರುಹಾಕಿ ವೀರಾವೇಶದಿಂದ ಕಾದಾಡಿ ಸಾಯುತ್ತವೆ.ಇದರ ಮರಿಗಳು ಹುಟ್ಟಿದ ಮೇಲೆ ಕೆಲವು ದಿವಸಗಳ ತನಕ ಕಣ್ಣು ಬಿಡುವುದಿಲ್ಲ ;ಆ ಕಾಲದಲ್ಲಿ ತಾಯಿಹೆಗ್ಗಣ ಮರಿಗಳಿಗೆ ಮೊಲೆಯೂಡಿಸಿ ರಕ್ಷಣೆಯೀಯುತದೆ.ಆದರೂ ಕೆಲವೂ ಪ್ರಭೇದಗಳು ಅಪೂರ್ವವಾಗಿ ತಮ್ಮ ಮರಿಗಳನ್ನೇ ತಿಂದು ಬಿಡುವುದೆಂದು ವರದಿಯಾಗಿದೆ. ೩.ಮನೆ ಇಲಿ;ರಟಸ್ ರೌಟಿನಿ ,ಅಸ್ ರೂಫಿಸೆಸ್ ಎಂಬೆರಡು ಪ್ರಭೇದಗಳನ್ನು ಈ ಹೆಸರಿನಿಂದ ಕರೆಯುವುದುಂಟು.ಇವಕ್ಕೆ ಕಪ್ಪಿಲಿ ಎಂಬ ಹೆಸರೂ ಉಂಟು.ರೈ.ರೌಟಿನಿಗೆ ಉದರದ ಕೂದಲು ಸ್ಲೇಟಿನ ಬಣ್ಣ .ಮೇಲಿನ ಕೆಳಗಿನ ಬಣ್ಣಗಳು ಪಕ್ಕದಲ್ಲಿ ಬೆರೆತಂತಿವೆ.ಮಾನವನ ನಿವಾಸ ಇವುಗಳಿಗೆ ಬಹು ಪ್ರಿಯವೆನಿಸುವ ವಾಸಸ್ಥಳವಾದ್ದರಿಂದ ಇವಕ್ಕೆ ಈ ಹೆಸರು ರ.ರೂಫೆಸೆಸ್ ಅಂಗಾಲಿನಲ್ಲಿ ಆರು ಅಥವಾ ಕಮ್ಮಿ ಮೆತೆಗಳು ಇರುತ್ತವೆ.ಒಟ್ಟು ಸ್ತನಗಳು ಸಂಖ್ಯೆ ೮.ಮನೆ ಇಲಿ ಚಿಕ್ಕವು.ತಲೆ ದೇಹ ೧೨-೨೦ಸೆಂ.ಮೀ ಉದ್ದ. ಇವು ಏಷ್ಯದಲ್ಲಿ ಉಗಮಿಸಿ ವಿಶ್ವದ ಇತರ ಖಂಡಗಳಿಗೆ ವಾಣಿಜ್ಯ ಸಾರಿಗೆಗಳಿಗೆ ಮೂಲಕ ಹರಡಿವೆ.ರಟಸ್ ನಾರ್ವೀಜಿಕಸ ಎಂಬ ಪ್ರಭೇದ ಪ್ರಪಂಚದ ಅನೇಕ ಕಡೆ ಹರಡಿದೆ.ಎಲ್ಲ ಪ್ರಭೇದಗಳೂ ಮಾನವನೊಡನೆಯೂ ಅವನ ಕೃಷಿಕ್ಷೇತ್ರಗಳ್ಲೂ ವಾಸಿಸುತ್ತವೆ.