ಪುಟ:Mysore-University-Encyclopaedia-Vol-2-Part-3.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉತ್ಪಾದನ ಮೀಮಾಂಸೆ

ಘಟಕಗಳಿಗೆ ಏರುತ್ತದೆ.c ಉತ್ಪಾದನಾಂಗವನ್ನು ಹೆಚ್ಚಿಸಿದ ಗತೆಯಲ್ಲಿ(೧/೩)ಉತ್ಪತ್ತಿಯೂ ಅಧಿಕಗೊಂಡ ಕಾರಣ(೧/೩)B ಬಿಂದುವಿನಿಂದ C ವರೆಗೆ ಅಚಲ ಪ್ರತಿಫಲ ಪ್ರವ್ರುತ್ತಿ ಇದೆಯೆಂದ ಹಾಗಾಯಿತು.ಕೊನೆಯದಾಗಿ,ಉತ್ಪಾದನಾಂಗಗಳನ್ನು C ಬಿಂದುವಿನಿಂದ ೫೦% ರಷ್ಟು ಹೆಚ್ಚಿಸಿದರೆ(x=೧೨,x2=೬)ಆಗ ಉತ್ಪತ್ತಿಯ ಮೊತ್ತ ೪೦೦ ಘಟಕ(೨೫% ರಷ್ಟು ಅಧಿಕ).ಇದನ್ನು D ಬಿಂದು ಸೂಚಿಸುತ್ತದೆ.ಈ ಘಟ್ಟದಲ್ಲಿ ಇಳಿಮುಖ ಪ್ರತಿಫಲ ಪ್ರವೃತ್ತಿ ಇದೆಯನ್ನಬಹುದು.

ಉತ್ಪಾದನ ಮಟ್ಟ ರೇಖೆಗಳು ಇನ್ನೂ ಒಂದು ದೃಷ್ಟಿಯಿಂದ ಉಪಯುಕ್ತವಾಗಿವೆ.ಒಂದೊಂದು ಮಟ್ಟದ ಉತ್ಪತ್ತಿಗೂ ಅವಶ್ಯವಾದ ಉತ್ಪಾದನಾಂಗಗಳನ್ನು ಯಾವ ಯಾವ ಪ್ರಮಾಣದಲ್ಲಿ ಸಂಯೋಜಿಸಬಹುದೆಂಬುದನ್ನು ಆಯಾ ರೇಖೆಗಳು ತೋರಿಸುತ್ತವೆ.

ಒಂದು ಗೊತ್ತಾದ ಮಟ್ಟದಲ್ಲಿ ಉತ್ಪತ್ತಿ ಪಡೆಯಲು ಯಾವ ಬಗೆಯ ಸಂಯೋಜನೆಯಿಂದ ಉದ್ಯಮಿಗೆ ಉತ್ಪಾದನೆಯ ವೆಚ್ಚ ಅತ್ಯಂತ ಕಡಿಮೆಯಂಬುದನ್ನು ಅರಿಯಬಹುದು.ಹೆಚ್ಚು ಬೆಲೆಯ ಉತ್ಪಾದನಾಂಗಕ್ಕೆ ಬದಲಾಗಿ ಕಡಿಮೆ ಬೆಲೆಯನ್ನೂ ಉತ್ಪತ್ತಿಯ ಮಟ್ಟ ತಗೆದಂತೆ,ಯಾವ ಮಿತಿಯವರೆಗೆ ಬಳಸಬಹುದು ಎಂಬುದನ್ನು ಈ ರೇಖೆಗಳ ವಿಧಾನದಿಂದ ತಿಳಿಯುವುದು ಸಾಧ್ಯ. (ಎ.ಬಿ.ಎ)

ಉತ್ಪಾದನ ಮೀಮಾಂಸೆ:ಉತ್ಪಾದನೆಯ ವೆಚ್ಚಕ್ಕೂ ಉತ್ಪತ್ತಿಯ ಮೊತ್ತಕ್ಕೂ ಇರುವ ಸಂಬಂಧ.ಉತ್ಪಾದನ ಸಾಧನಗಳ ಬೇಡಿಕೆಯ ಮೂಲ.ಉತ್ಪಾದನಾಂಗಗಳ ಬೆಲೆಗಳ ನಿಷರ್ಷೆ-ಮುಂತಾದವನ್ನು ಕುರಿತ ವಿಶ್ಲೇಷಣೆ,ಮೀಮಾಂಸೆ(ಥಿಯೊರಿ ಆಫ್ ಪ್ರೊಡಕ್ಷನ್).

ಶ್ರಮ,ಭೂಮಿ ಹಾಗೂ ಬಂಡವಾಳಗಳ ನಿರ್ದಿಷ್ಟ ಪರಿಮಾಣಗಳನ್ನು ಒಂದು ಪದಾರ್ಥದ ಉತ್ಪಾದನೆಯಲ್ಲಿ ತೊಡಗಿಸಿದರೆ ಅವುಗಳಿಂದ ದೊರಕುವ ಉತ್ಪತ್ತಿಯೆಷ್ಟು?ಈ ಪ್ರಶ್ನೆಗೆ ಉತ್ತರ ಎಲ್ಲ ಕಾಲ ದೇಶಗಳಲ್ಲೂ ಒಂದೇ ತೆರನಾಗಿರುವುದಿಲ್ಲ.

ತಾಂತ್ರಿಕ ಬೆಳವಣಿಗೆಯ ಮಟ್ಟವನ್ನೇ ಇದು ಅವಲಂಬಿಸಿದೆ.ಆದರೆ ಯಾವುದೇ ಒಂದು ನಿರ್ದಿಷ್ಟ ಕಾಲದಲ್ಲಿ ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಉತ್ಪಾದನಾಂಗಗಳ ನಿರ್ದಿಷ್ಟ ಪರಿಮಾಣಗಳಿಗೆ ದೊರಕುವ ಪರಮಾವಧಿ ಉತ್ಪತ್ತಿ ನಿರ್ದಿಷ್ಟವಾಗಿರುತ್ತದೆ.ಉತ್ಪಾದಕನಿಗೆ ಈ ಸೂತ್ರ ಬಹಳ ಮುಖ್ಯ.ವಿವಿಧ ಉತ್ಪಾದನಾಂಗಗಳ ವಿವಿಧ ಪರಿಮಾಣಗಳ ಬಗೆಬಗೆಯ ಸಂಯೋಜನೆಗಳಿಗೆ ದೊರಕುವ ಉತ್ಪತ್ತಿಯೆಷ್ಟೆಂಬುದನ್ನು ಸೂಚಿಸುವ ಈ ನಿಯಮಕ್ಕೆ ಉತ್ಪಾದಕ ಅನುಚರಿಯೆಂಬುದು ಅರ್ಥಶಾಸ್ತ್ರ ನೀಡಿರುವ ಹೆಸರು.

ಆದರೆ ಈ ಸೂತ್ರ ಮೇಲುನೋಟಕ್ಕೆ ತೋರುವಷ್ಟು ಸರಳವಲ್ಲ.ಉತ್ಪಾದನೆಗೆ ಬಳಸಲಾಗುವ ನಾನಾ ಸಾಧನಗಳ ಬೆಲೆಗಳನ್ನೂ ಇವುಗಳಿಗೆ ಸಂಬಂಧಿಸಿದಂತೆ ಆ ಸಾಧನಗಳ ಉತ್ಪಾದಕತೆಯನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಕನಿಷ್ಠ ವೆಚ್ಚಕ್ಕೆ ಪರಮಾವಧಿ ಉತ್ಪತ್ತಿ ಬರುವಂಥ ಸಂಯೋಜನೆಯನ್ನು ಸಾಧಿಸುವುದು ದೀರ್ಘಕಾಲದ ನಿಷ್ಕೃಷ್ಟ ವಿವೇಚನೆಯಿಂದ ಮತ್ರ ಸಾಧ್ಯ.ಇದಕ್ಕೆ ಅಗತ್ಯವಾದ ನಾನಾ ಅಂಕಿ-ಅಂಶಗಳನ್ನು ಹೊಂದಿರಬೇಕಾದ್ದು ಅವಶ್ಯ.ಈ ನಾನ ಉತ್ಪಾದನ ಸಾಧನಗಳಲ್ಲಿ ಒಂದಕ್ಕೆ ಪ್ರತಿಯಾಗಿ ಇನ್ನೊಂದನ್ನು ಎಷ್ಟರಮಟ್ಟಿಗೆ ಬಳಸಬಹುದೆಂಬ ಪರಿಶೀಲನೆ ಕೈಕೊಳ್ಳಬೇಕಾಗುತ್ತದೆ.ಪ್ರತಿಯೊಂದು ಉತ್ಪಾದನಾಂಗದ ಮಾರುಕಟ್ಟೆಯ ಬೆಲೆಯನ್ನೂ ಆ ಅಂಗವನ್ನು ಬಳಸುವುದರಿಂದ ದೊರಕುವ ಅಧಿಕ ಉತ್ಪತ್ತಿಯನ್ನೂ ಗಮನದಲ್ಲಿಟ್ಟು ಸಾಗಬೇಕಾಗುತ್ತದೆ.

ಉದಾಹರಣೆಗೆ ವ್ಯವಸಾಯವನ್ನು ತೆಗೆದುಕೊಳ್ಳಬಹುದು.ಒಂದು ಎಕರೆ ನೆಲದ ಬಾಡಿಗೆ ೧೦೦ರೂ.ಇದ್ದು,ಶ್ರಮದ ಒಂದು ಘಟಕದ ಬೆಲೆಯೂ(ಕೂಲಿ)೧೦೦ರೂ.ಇದ್ದರೆ ಆಗ ಇವೆರಡರ ಬೆಲೆ ಸಮವಾಗಿರುತ್ತದೆ.ಶ್ರಮದ ಪ್ರತಿಯೊಂದು ಘಟಕಕ್ಕೂ ನೆಲದ ಒಂದೊಂದು ಘಟಕದಿಂದ ದೊರಕುವ ಪ್ರತಿಫಲಕ್ಕಿಂತ ಹೆಚ್ಚು ಪ್ರತಿಫಲ ಎಲ್ಲಿಯ ವರೆಗೆ ದೊರಕುತ್ತಿರುತ್ತದೋ ಅಲ್ಲಿಯವರೆಗೆ ನೆಲದ ಬದಲು ಶ್ರಮವನ್ನು ಪ್ರತಿನಿಧಾನಿಸಬಹುದು.ಅತ್ಯಂತ ಕೊನೆಯ ಘಟ್ಟದಲ್ಲಿ(ಅಂಚಿನ ಘಟ್ಟದಲ್ಲಿ),ವೆಚ್ಚ ಮಾಡಿದ ಪ್ರತಿ ರೂಪಾಯಿಗೂ ಭೂಮಿ-ಶ್ರಮಗಳೆಡರಿಂದಲೂ ಸಮನಾದ ಉತ್ಪತ್ತಿ ಬರುವಲ್ಲಿ,ಸಮಾನ ಬೆಲೆಯ ಭೂಮಿ ಶ್ರಮಗಳಲ್ಲಿ ಯಾವುದನ್ನು ನಿಯೋಜಿಸಿದರೂ ಸಮನಾದ ಉತ್ಪತ್ತಿಗಳು ಯಾವ ಘಟ್ಟದಲ್ಲಿ ದೊರಕುವುವೋ ಅಲ್ಲಿ ಈ ಪ್ರತಿನಿಧಾನವನ್ನು ನಿಲ್ಲಿಸಬೇಕಾಗುತ್ತದೆ.ವೆಚ್ಚ ಮಾಡಿದ ಹಣಕ್ಕೆ ಪರಮಾವಧಿ ಉತ್ಪತ್ತಿ ದೊರಕವುದು ಈ ಘಟ್ಟದಲ್ಲಿ;ಇದು ಕನಿಷ್ಠ ವೆಚ್ಚದ ಘಟ್ಟ.

ಭೂಮಿಯ ಒಂದು ಘಟಕದ ಬೆಲೆಯೂ ಶ್ರಮದ ಒಂದು ಘಟಕದ ಬೆಲೆಯೂ ಸಮನಾಗಿರುವುದೆಂದು ಊಹಿಸಿಕೊಂಡರೆ ಮೇಲಿನ ಪ್ರತಿನಿಧಾನ ನಿಯಮವನ್ನು ಅನ್ವಯಿಸಬಹುದಾಗಿದೆ.ಆದರೆ ವಾಸ್ತವ ಜಗತ್ತಿನಲ್ಲಿ ಹೀಗಿರುವುದು ವಿರಳ.ಭೂಮಿಯ ಒಂದು ಘಟಕದ ಬೆಲೆ ಶ್ರಮದ ಒಂದು ಘಟಕದ್ದರ ಹತ್ತರಷ್ಟಿದೆಯೆಂದು ಹೂಹಿಸಿಕೊಂಡ ಪಕ್ಷದಲ್ಲಿ ಮೇಲೆ ವಿವರಿಸಿದ ಪ್ರತಿನಿಧಾನ ಯಾವ ಹಂತದಲ್ಲಿ ನಿಲ್ಲಬೇಕು-ಎಂಬುದು ಪ್ರಶ್ನೆ.ಭೂಮಿಯ ಒಂದು ಅಂಚಿನ ಘಟಕದಿಂದ ದೊರಕುವ ಉತ್ಪತ್ತಿ,ಶ್ರಮದ ಅಂಚಿನ ಘಟಕದ ಉತ್ಪತ್ತಿಯ ಹತ್ತರಷ್ಟಿರುವಲ್ಲಿ ಶ್ರಮದ ಪ್ರತಿನಿಧಾನವನ್ನು ನಿಲ್ಲಿಸಬೇಕಾಗುತ್ತದೆ.ಅದೇ ಪರಮಾವಧಿ ಸರಾಸರಿ ಉತ್ಪನ್ನದ ಅಥವಾ ಕನಿಷ್ಠ ಸರಾಸರಿ ವೆಚ್ಚದ ಹಂತ.

ಈ ಎರಡು ಉದಾಹರಣೆಗಳ ದೃಷ್ಟಿಯಿಂದ ಎಲ್ಲ ಪರಿಸ್ಥಿತಿಗಳಿಗೂ ಅನ್ವಯವಾಗುವ ಒಂದು ಸೂತ್ರವನ್ನು ರೂಪಿಸುವುದು ಸಾಧ್ಯ.ಒಂದು ಪದಾರ್ಥದ ಉತ್ಪಾದನೆಗೆ x1,x2,x3,......,xn ಸಾಧನಗಳು ಗ್ರಾಸಗಳಾಗಿದ್ದರೆ(ಇನ್ ಪುಟ್ಸ್)ಈ ಒಂದೊಂದು ಸಾಧನದ ಅಂಚಿನ ಘಟಕದ ಹೂಡಿಕೆಯಿಂದಲೂ ಸಾಪೇಕ್ಷವಾಗಿ ಒಂದೇ ಮೊತ್ತದ ಉತ್ಪನ್ನ ದೊರಕುವ ಹಂತವೇ ಕನಿಷ್ಠ ವೆಚ್ಚದ ಹಂತ.ಇದು ಆ ಸನ್ನಿವೇಶದಲ್ಲಿನ ಸಮತೋಲ ಸ್ಥಿತಿ:

ಉತ್ಪಾದನೆಯ ಸಾಧನಗಳಲ್ಲಿ ಯಾವುದರ ಬೆಲೆಯಾದರೂ ಇಳಿದರೆ ಅದನ್ನು ಇತರ ಸಾಧನಗಳ ಸ್ಥಾನದಲ್ಲಿ ಇನ್ನಷ್ಟು ದೂರ ಪ್ರತಿನಿಧಾನಿಸುವುದು ಲಾಭದಾಯಕವಾಗುತ್ತದೆ.ಉತ್ಪಾದನೆಯ ಸಮತೋಲ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ.ಆದರೆ ಬೆಲೆ ಏರಿದರೆ ಸಾಪೇಕ್ಷವಾಗಿ ಇತರ ಸಾಧನಗಳ ಪ್ರತಿನಿಧಾನ ಲಾಭದಾಯಕವಾಗಿ ಮತ್ತೆ ಹೊಸ ಸಮತೋಲಕ್ಕೆ ಹೊಂದಾಣಿಕೆಯಾಗುತ್ತದೆ.ಇದು ಉತ್ಪಾದನೆಯಲ್ಲಿ ಸಾಧನಗಳ ಸಂಯೋಜನೆಯ ನಿಯಮ.ಇಲ್ಲಿ ಇನ್ನೊಂದು ವಿಷಯವನ್ನು ಉಲ್ಲೇಖಿಸುವುದು ಅವಶ್ಯ.ಮೇಲಿನ ಚರ್ಚೆಯಲ್ಲಿ ಉತ್ಪನ್ನದ ಭೌತಿಕ ಮೊತ್ತವನ್ನು ಕುರಿತು ಚರ್ಚಿಸಲಾಗಿದೆ.ಆದರೆ ವಾಸ್ತವ ಜಗತ್ತಿನಲ್ಲಿ ಉತ್ಪಾದಕನಿಗೆ