ಪುಟ:Mysore-University-Encyclopaedia-Vol-2-Part-3.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉನ್ಮಾದ ರೋಗ ಇದು ಯಾವ ರೂಪ ತಳೆಯುತ್ತದೆಯೆಂಬುದಕ್ಕೆ ಆನಂತರ ಸಂಭವಿಸುವ ಘಟನೆಗಳೂ ಕೊಂಚಮಟ್ಟಿಗೆ ಕಾರಣ. ಮನೋರೋಗದ ಹಿನ್ನೆಲೆ ಗೊತ್ತಾಗದಿದ್ದರೆ ರೋಗಿಯ ಚಿಕಿತ್ಸೆ ಬಲು ಲ್ಕಷ್ಟ. ಇತಿಹಾಸ: ಈ ರೋಗದ ವಿಚಾರದಲ್ಲಿ, ನಮಗೆ ದೊರೆಯುವ ಅತ್ಯಂತ ಪ್ರಾಚೀನ ವೈದ್ಯಕೀಯ ಅಭಿಪ್ರಾಯವೆಂದರೆ ಪ್ರಸಿದ್ಧ ಗ್ರೀಕ್ ವೈದ್ಯ ಹಿಪಾಕ್ರಟಿಸ್ ನದು. ಈ ರೋಗ ಹೆಂಗಸರಲ್ಲಿ, ಅದರಲ್ಲಿಯೂ ನವಯುವತಿಯರಲ್ಲಿ ಉಂಟಾಗುತ್ತದೆ ಎಂದು೭ ಆತ ನಂಬಿದ್ದ. ಮಗುವನ್ನು ಪಡೆಯಬೇಕೆಂಬ ಬಯಕೆ ಭಂಗವಾದಾಗ, ಗರ್ಭಕೋಶ ದೇಹದ ನಾನಾ ಭಾಗಗಳಲ್ಲಿಅಲೆಯುವುದರಿಂದ ಈ ರೋಗ ಸಂಭವಿಸುತ್ತದೆಂಬುದು ಆತನ ಅಭಿಪ್ರಾಯ. ಗರ್ಭಕೋಶ ಗಂಟಲಿನಲ್ಲಿ ಸಂಚರಿಸುವಾಗ ಕಂಠ ಬಿಗಿಯುವ ವೇದನೆಯೂ ಗುಲ್ಮದಲ್ಲಿಪ್ರವೇಶಿಸಿದಾಗ ಕೋಪೋದ್ರೇಕಿಅಗಳ ಅನುಭವವೂ ಹೀಗೆ ನಾನಾ ವಿಕಾರಗಳು ಉಂಟಾಗುತ್ತವೆ ಎಂಬುದು ಅಂದಿನ ನಂಬಿಕೆ. ಈ ರೋಗಕ್ಕೆ ಮದುವೆಯೇ ಸೂಕ್ತ ಪರಿಹಾರವೆಂದು ಹಿಪಾಕ್ರಟಿಸ್ ಪ್ರತಿಪಾದಿಸಿದ್ದ. ಅಲ್ಲದೆ ಈ ರೋಗದಲಿ ಪರಿಸರ ಹಾಗೂ ಲೈಂಗಿಕ ತೊಂದರೆಗಳೂ ಪ್ರಮುಖ ಪಾತ್ರ ವಹಿಸುತ್ತವೆಯೆಂದು ಆತನ ಊಹೆ. ಹಿಪಾಕ್ರಟಿಸನ ಆನಂತರ ಈ ರೋಗದ ಚಿಕಿತ್ಸೆಗೆ ಹೆಚ್ಚು ಗಮನಕೊಟ್ಟ ವೈದ್ಯನೆಂದರೆ ಮೆಸ್ಮರ್. ಈ ರೋಗದ ಸೂಕ್ತ ಚಿಕಿತ್ಸೆಗೆ ನಾಂದಿ ಹಾಡಿದ್ದು ಆತನೇ (೧೭೬೬). ಆತ ಅರಿವಿಲ್ಲದೆಯೇ ರೋಗಚಿಕಿತ್ಸೆಯನ್ನು ಆರಂಭಿಸಿದ. ಜೀವ ಆಯಸ್ಕಾಂತತ್ವ ಎಂಬುದು ಆತ ಇದಕ್ಕೆ ಇಟ್ಟ ಹೆಸರು. ಈ ದೃಷ್ಟಿಯಿಂದಲೇ ಆತ ಚಿಕಿತ್ಸಾ ವಿಧಾನವೊಂದನ್ನು ತನ್ನ ರೋಗಿಗಳ ಮೇಲೆ ಪ್ರಯೋಗಿಸಿದ. ಆಯಸ್ಕಾಂತಗಳನ್ನು ರೋಗಿಗಳಿಗೆ ಮುಟ್ಟಿಸಿದಾಗ ಅವುಗಳಿಂದ ಒಂದು ರೀತಿಯ ದ್ರವ ರೋಗಿಗೆ ಪ್ರವಹಿಸಿ ರೋಗವನ್ನು ಗುಣಪಡಿಸುತ್ತದೆ ಎಂಬುದು ಆತನ ನಂಬಿಕೆ. ಮೆಸ್ಮರನ ಆನಂತರ ಈ ವಿಧಾನ ಮೆಸ್ವರಿಸಂ ಎಂದೇ ಪ್ರಸಿದ್ಧವಾಗಿ, ಆನಂತರ ಇದರ ಹೆಸರು ತಂತು ಸಂಮೋಹನೆ (ನ್ಯೂರೋಹಿಪ್ನಾಸಿಸ್) ಎಂದು ಮಾರ್ಪಾಟಾಗಿ ಕೊನೆಗೆ ಇಂಗ್ಲೆಂಡಿನ ಜೇಮ್ಸ್ ಬ್ರಾಯ್ಡ್ ಕೊಟ್ಟ ಸಂಮೋಹನ ಅಥವಾ ಮೋಹನಿದ್ರೆ (ಹಿಪ್ನಾಸಿಸ್) ಎಂಬ ಹೆಸರಿನಿಂದ ಪ್ರಚಲಿತವಾಯಿತು. ವೈದ್ಯನ ಮಾತುಗಳೂ ಸಂಕೇತಗಳೂರೋಗಿಯ ಮನಸ್ಸಿನಲ್ಲಿ ಭಾವಪ್ರೇರಣೆಯನ್ನುಂಟುಮಾಡಿ ರೋಗಿಗುಣಮುಖವಾಗುವಂತೆ ಮಾಡುತ್ತವೆ ಎಂದು ಮೊಟ್ಟಮೊದಲ್ಯು ಪ್ರತಿಪಾದಿಸಿದವನೇ ಜೇಮ್ಸ್ ಬ್ರಾಯ್ಡ್. ಉನ್ಮಾದ ರೋಗದ ವಿಧಿವತ್ತಾದ ಅಧ್ಯಯನವನ್ನು ಆರಂಭಿಸಿದ ಕೀರ್ತಿ ಅಂದುಜಗತ್ಪ್ರಸಿದ್ಧ ತಂತು ವೈದ್ಯನೆನಿಸಿದ್ದ ಚಾರ್ಕಾಟ್ ಗೆ ಸಲ್ಲಬೇಕು. ಆತ ಈ ರೋಗದ ಚಿಕಿತ್ಸೆಗಾಗಿಸಂಮೋಹನ ವಿಧಾನವನ್ನು ಪ್ರಭಾವಪೂರ್ಣವಾಗಿ ಉಪಯೋಗಿಸಿದ. ಮುಂದೆ ಸಿಗ್ಮಂಡ್ ಫ್ರಾಯ್ಡ್ ಪ್ರತಿಪಾದಿಸಿದ ಲೈಂಗಿಕತೆಯ ಪ್ರಮುಖ್ಯ ಈ ರೋಗದಲ್ಲಿಎಷ್ಟೆಂಬುದನ್ನು ಮೊಟ್ಟಮೊದಲಿಗೆ ಮನಗಂಡವನು ಆತನೇ. ಈ ರೋಗನಿದಾನಕಾರ್ಯದಲ್ಲಿಅವನ ಸಿದ್ಧಾಂತಗಳಿಗೆ ಹೆಚ್ಚುಮಹತ್ತ್ವ ಕೊಡಲಾಯಿತು. ಒಂದನೆಯ ಮಹಾಯುದ್ಧದಲ್ಲಿ ಅನೇಕ ಸೈನಿಕರು ಮನೋವಿಕಾರಗಳಿಗೆ ತುತ್ತಾದರು. ಆ ರೋಗಿಗಳ ಅಧ್ಯಯನದಿಂದ ಅತ್ಯಂತ ಪ್ರಮುಖವಾದ ಒಂದು ಸತ್ಯ ಸ್ಥಾಪಿತವಾಯಿತು. ಈ ರೋಗ ಹೆಂಗಸಿರಿಗೆ ಮಾತ್ರ ಮೀಸಲಾಗಿರದೆ, ಗಂಡಸರಲ್ಲಿಯೂ ಉಂಟಾಗುತ್ತ್ದೆ ಎಂಬುದೇ ಈ ಸತ್ಯ. ಆಧುನಿಕ ಮನೋವೈದ್ಯಕೀಯ ಕ್ಷೇತ್ರದಲ್ಲಿ, ಉನ್ಮಾದ ರೋವನ್ನು ಅನೇಕ ಮನೋಮಿಕಾರಗಳ ಒಂದು ಸಮೂಹವೆಂದು(ಸಿಂಡ್ರೋಮಾ) ಪರಿಗಣಿಸಲಾಗಿದೆ. ಅಲ್ಲದೆ ವಾಸ್ತವಜೀವನದ ಕಷ್ಟ ಕಾರ್ಪಣ್ಯಗಳಿಂದ ತಪ್ಪಿಸಿಕೊಳ್ಳುವ ಯಾವೂದೋ ಸುಪ್ತ ಸಂಚಿನಿಂದ ವ್ಯಕ್ತಿಯಲ್ಲಿ ಈ ವರ್ತನಾವಿಕಾರಗಳು ಉಂಟಾಗುತ್ತವೆ ಎಂಬುದು ಇಂದು ಸರ್ವಮಾನ್ಯವಾಗಿದೆ. ಎದರ ಜೊತೆಗೆ, ಉನ್ಮಾದರೋಗಕ್ಕೂ ಲೈಂಗಿಕ ಅತ್ರುಪ್ತಿ ಮತ್ತು ವಿರಸಗಳಿಗೂ ನಿಕಟ ಸಂಬಂಧವಿದೆಯೆಂಬ ಸಿದ್ಧಾಂತಕ್ಕೆ ಅನೇಕರಿಂದ, ಅದರಲ್ಲೂ ಮನೋವಿಶ್ಲೇಷಕರಿಂದ, ಮನ್ನಣೆ ದೊರಕಿದೆ. ರೋಗಲಕ್ಷಣಗಳು: ಈ ರೋಗ ನಾನಾ ವಿಧವಾದ ಹಾಗೂ ಚಿತ್ರವಿಚಿತ್ರವಾದ ವರ್ತನಾ ವಿಕಾರಗಳ ಒಂದು ಸಮೂಹ. ರೋಗದ ಲಕ್ಷಣಗಳು ದಿಗ್ಭ್ರಮೆ ಹಿಡಿಸುವಂಥವು. ರೋಗಲಕ್ಷಣಗಳಿಗೆ ಶರೀರದಲ್ಲಾಗಲೀ ಮಿದುಳಿನಲ್ಲಾಗಲೀ ನ್ಯೂನತೆ, ಹಾನಿ ಇರುವುದಿಲ್ಲ. ಇವನ್ನು ಸ್ಥೂಲವಾಗಿ ಶಾರೀರಿಕ, ಸಂವೇದನಾತ್ಮಕ ಹಾಗೂ ತೋರಿಕೆಯ ರೋಗಲಕ್ಷಣಗಳೆಂದು ಮೂರು ತೆರನಾಗಿ ವಿಂಗಡಿಸಬಹುದು. ಶಾರೀರಿಕ: ಇಂದ್ರಿಯಾನುಭವದ ನ್ಯೂನತೆ-ಯಾವುದಾದರೂ ಒಂದು ಇಂದ್ರಿಯ ಅಥವಾ ಇಂದ್ರಿಯದ ಭಾಗ ತನ್ನ ಕ್ರಿಯಾಶಕ್ತಿಯನ್ನು ಕಳ್ದುಕೊಳ್ಳಬಹುದು. ಉದಾಹರಣೆಗೆ, ಸ್ಪರ್ಶ, ನೋವು ಅಥವಾ ಶೀತೋಷ್ಣ ಉದ್ದೀಪನಗಳ ಅನುಭವವನ್ನು ಚರ್ಮ ಕಳೆದುಕೊಳ್ಳಬಹುದು. ಅಲ್ಲದೆ ಚರ್ಮಸ್ಫುರಣದಂಥ ಅಸಾಮಾನ್ಯ ವೇದನಾನುಭವಗಳಾಗಬಹುದು. ಇವಲ್ಲದೆ ದೃಷ್ಟಿ, ಶ್ರವಣ, ಘ್ರಾಣ ಹಾಗೂ ರಸನ-ಈ ಇಂದ್ರಿಯಾನುಭವಗಳು ಲೋಪ ಹೊಂದಬಹುದು. ದ್ರುಷ್ಟಿಮಾಂದ್ಯ ಕುರುಡು ಮತ್ತು ಇತರ ದೃಷ್ಟಿಸಂಬಂಧಿ ಕ್ರಿಯಾಲೋಪಗಳಾಗುವುದೂ ಉಂಟು. ಮಧ್ಯ ವಯಸ್ಸು ಮೀರಿದ ಒಬ್ಬ ಹೆಂಗಸು ತನ್ನ ಘ್ರಾಣಶಕ್ತಿಯನ್ನೇ ಕಳೆದುಕೊಂಡಳು. ಆಕೆಗೆ ಒಬನೇ ಮಗನಿದ್ದನೆಂದೂ ಆತ ಅತಿಯಾಗಿ ಕುಡಿದು ಮನೆಗೆ ಬಂದಾಗ ಆತನ ಉಸಿರಿನಲ್ಲಿ ಬರುತ್ತಿದ್ದ ಮದ್ಯದ ವಾಸನೆ ಆಕೆಗೆ ಅಸಹ್ಯಕರವಾಗಿತ್ತೆಂದೂ ಆ ಅಹಿತಕರ ಅನುಭವದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆಕೆಯ ಸುಪ್ತಚೇತನ್ಮದ ಹಂಚಿಕೆಯ ಪ್ರಕಾರ ಅವಳು ತನ್ನ ಆಘ್ರಾಣಶಕ್ತಿ ಕಳೆದುಕೊಂಡಳೆಂದೂ ಆಮೇಲೆ ನಡೆಸಿದ ಅಧ್ಯಯನದಿಂದ ತಿಳಿದುಬಂತು (ಕೋಲ್ ಮನ್). ಆದರೆ ಈ ಹಿಂದೆ ಸಾಮಾನ್ಯವಾಗಿ ಉನ್ಮಾದರೋಗದಲ್ಲಿ ಕಂಡುಬರುತ್ತಿದ್ದ ವೇದನಾ ಕ್ಷಮತೆಯ ರೋಗಲಕ್ಷಣಗಳು ಇಂದು ಕಡಿಮೆಯಾಗಿವೆಯೆಂಬುದು ವೇದ್ಯವಾಗಿದೆ. ಬಹುಶಃ ಇದಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯೇ ಕಾರಣವಗಿರಬಹುದು. ದೇಹದ ವಿವಿಧ ಭಾಗಗಳಿಗೆ-ತೋಳು, ಕಾಲು, ಮುಖ ಅಥವಾ ಶಬ್ಧಾಂಗಗಳಿಗೆ-ಕ್ರಿಯಾತ್ಮಕ (ಫಂಕ್ಷನಲ್) ಪಾರ್ಶ್ವವಾಯು ತಗಲಬಹುದು. ವೇದನಾಕ್ಷಮತೆಯಲ್ಲಿರುವಂತೆಯೇ ಇಲ್ಲೂ ಪಾರ್ಶ್ವವಾಯು ನರವಿಸ್ತರಣೆಗೆ ಅನುಗುಣವಾಗಿರದೆ, ಅಂಗಗ್ಳನ್ನು ಅವಲಂಬಿಸಿರುವುದು ಕಣುತ್ತದೆ. ಕೆಲವು ವೇಳೆ, ಪಾರ್ಶ್ವವಾಯು ಒಂದು ಅಂಗದ ಎಲ್ಲ ಕ್ರಿಯೆಗಳೆಗೂ ಸಂಬಂಧಿಸಿರದೆ ಕೇವಲ ಕೆಲವು ಕ್ರಿಯೆಗಳಿಗೆ ಸಂಬಂಧಿಸಿರಬಹುದು. ಒಂದು ಚಲನೆಗೆ ಒಂದು ಸ್ನಾಯು ಬೇಕಿರುವುದು ರೋಗಿಗೆ ಗೊತ್ತಿಲ್ಲವಾದರೆ, ಆಡಿಸಲಾಗದೆಂದು ರೋಗಿ ಹೇಳುತ್ತಿರುವ ಸ್ನಾಯು ಕೂಡ ಸರಿಯಾಗಿ ಇರುವುದೆಂದು ಕೆಲವು ಉಪಾಯಗಳಿಂದ ತೋರಿಸಬಹುದು. ಮೈಭಂಗಿ ಹುಚ್ಚಾ ಪಟ್ಟೆ ಸೊಟ್ಟನಾಗಿ ಇರಬಹು. ಕಣ್ಣು, ನಾಲಗೆಗಳನ್ನು ಸರಿಯಾಗಿರಬಹುದು. ಅದರಂತೆಯೇ ಕೈಯಿಂದ ಬರೆಯಲು ಆಗದಿದ್ದರೂ ಇತರ ಕೆಲಸ ಮಾಡಲು ಸಾಧ್ಯವಾಗಬಹುದು. ಯಾವುದೋ ಸುಪ್ತ ಅಭಿಪ್ರೇರಣೆಯಿಂದ ಪಾರ್ಶ್ವವಾಯು ಉಂಟಾದುದೆಂಬುದನ್ನು ಈ ಲಕ್ಷಣ ಸ್ಪಷ್ಟವಾಗಿ ಸೂಚಿಸುತ್ತದೆ. ಕೆಲವು ವೇಳೆ, ಆಕಸ್ಮಿಕಗಳು ರೋಗಿಗಳನ್ನು ಈ ವಿಕಾರಗಳಿಂದ ಉಳಿಸಬಹುದು. ಅನೇಕಿಅ ದಿನಗಳಿಂದ ಪಾರ್ಶ್ವವಾಯು ಪೆಡಿತನಾಗಿ ಬಿದ್ದಿದ್ದ ಒಬ್ಬ ರೋಗಿ ಬೆಂಕಿಯ ಅನಾಹುತದಿಂದ ಪಾರಾಗಲು ಎದ್ದು ಓಡಿದ. ಆ ಘಟನೆಯ ಅನಂತರ ಆತನ ಪಾರ್ಶ್ವವಾಯು ಮಾಯವಾಯಿತು. ಕ್ರಿಯಾತ್ಮಕ ಪಾರ್ಶ್ವವಾಯುವಿನೊಂದಿಗೆ ಇಲ್ಲಿ ಹೆಸರಿಸಬಹುದಾದ ಇತರ ಕೆಲವು ಪ್ರಮುಖ ಚಾಲಕೈಕೃತಿಗಳೆಂದರೆ-ಸ್ನಾಯುಸ್ಪಂದನ (ಟ್ಕ್), ಕಂಪನ (ಟ್ರೆಮರ್), ಧ್ವನಿ ಹೊರಡದಿರುವುದು (ಎಫೋನಿಯ), ಉಗ್ಗು (ಸ್ಟಟರಿಂಗ್), ಮೂಕತನ (ಮ್ಯೂಟಿಸಂ) ಮತ್ತು ಮೂರ್ಛೆ (ಫ಼ೇಂಟಿಂಗ್) ಕ್ಷೀಣಸ್ವರದ ರೋಗಿಯ ದನಿ ಪಿಸುಮಾತಿಗೆ ಇಳಿಯಬಹುದು. ಕೊನೆಗೆ ಸದ್ದೇ ಬರದಂತಾಗಬಹುದು. ಇಷ್ಟಾದರೂ ಕೆಮ್ಮಿದರೆ ಎಂದಿನಂತೆ ಸದ್ದಾಗುತ್ತದೆ. ಬಹಳ ಸೆಟೆತುಕೊಂಡು ಪಾರ್ಶ್ವವಾಯು ಅನುಭವಿಸುತ್ತಲೇ ಇದ್ದರೆ, ಆ ಅಂಗ ಅಥವಾ ಅವಯವ ಪುಷ್ಟಿಗೆಟ್ಟು ಸಣ್ಣಗಾಗುವುದೂ ಕೀಲು ಕಟ್ಟುವುದೂ ಊದಿಕೊಳ್ಳುವುದೂ ಹೆಚ್ಚೇನಲ್ಲ. ಯುದ್ಧನಿರತ ಸೈನಿಕರಲ್ಲಿ ಕಂಡಂತೆ ನಡುಕವೂ ಜೋರಾಗಿರಬಹುದು. ರೋಗಿಯ ಗಮನವನ್ನು ಬೇರೆಡೆ ಸೆಳೆದರೆ ನಡುಕ ಕೆಲವೇಳೆ ನಿಲ್ಲುತದೆ. ಉನ್ಮಾದದಲ್ಲಿ, ಸೆಳವುಗಳೂ (ಫಿಟ್ಸ್) ಸಾಮಾನ್ಯ. ಸುಮ್ಮನೆ ಕೊಂಚ ಮೈ ಮರೆತಂತೆ ಆಗುವುದರಿಂದ ಹಿಡಿದು, ಮಕ್ಕಳು ರಚ್ಚೆ ಹಿಡಿದಂತೆ ಆಡುವ ತನಕ ಎಲ್ಲ ಬಗೆಗಳನ್ನೂ ಕಾಣಬಹುದು. ರೋಗಿಯ ಹಾವಭಾವಗಳೀಂದಲೇ ಕೆಲವೇಳೆ ಕಾಮ ಕೆರಳಿರುವುದನ್ನು ಗುರುತಿಸಬಹುದು. ಕೆಲವೇಳೆ ನಿಜವಾದ ಮೊಲ್ಲಾಗರವನ್ನೇ (ಅಪಸ್ಮಾರ) ಹೋಲುವಷ್ಟು ಜೋರಾಗಿರಬಹುದು. ಸೆಳಱ್ವು ವಿಪರೀತ ಆಗಿರುವ ಹೊತ್ತಿನಲ್ಲಿ ವಿದ್ಯುತ್ನ್ಮಿದುಳ ಚಿತ್ರ (ಎಲೆಕ್ಟ್ರೊಎನ್ಸೆಫೆಲೊಗ್ರಾಫ್) ತೆಗೆದು ನೋಡಿದರೂ ಯಾವ ಬದಲಾವಣೆಗಳೂ ಕಾಣುಲ್ವುದಿಲ್ಲ. ನೋವು,ಲ್ ಸುಟ್ಟು, ಚೋದನೆಗಳಿಂದ ಹಲವೇಳೆ ಸೆಳವು ಹುಟ್ಟಬಹುದು. ರೋಗಿಯ ಹಾವಭಾವಗಳಿಂದಲೇ ಕೆಲವೇಳೆ ಕಾಮ ಕೆರಳಿರುವುದನ್ನು ಗುರುತಿಸಬಹುದು. ಸೆಳವು ಎಷ್ಟೇ ಜೋರಾಗಿರಲಿ, ರೋಗಿ ತನಗೆ ಸ್ವಲ್ಪವೂ ಅಪಾಯವಾಗದಂತೆ ನೋಡಿಕೊಳ್ಳುವನು. ನಿದ್ದೆ ಮಾಡುವಾಗಲೂ ಒಂಡಿಯಗಿ ಇರುವಾಗಲೂ ಸೆಳವು ಬರುವುದಿಲ್ಲ. ಸೆಳವು ಕಾಡಿಸುವ ಹೊತ್ತೂ ಜೋರೂ ಸುತ್ತಲೂ ನೆರೆದಿರುವವರನ್ನು ಅವಲಂಬಿಸಿದೆ. ಸೆಳವಿನ ಅಲುಗಾಟವನ್ನು ತಡೆಯಲು ಕೈ ಹಾಕ್೮ಇದಷ್ಟೂ ಒದರಾಟ, ಕೂಗಾಟ, ವೈಬಿಗಿತ, ಏದುಸಿರು- ಇವು ಇನ್ನೂ ಹೆಚ್ಚುತ್ತಾ ಹೋಗುತ್ತವೆ. ಅದು ಕೊನೆಗೆ ಸರಕ್ಕನೆ ನಿಂತುಬಿಡಬಹುದು. ತಲೆಯಲ್ಲಿ ಆಣಿ ಹೊಡೆದ ನೋವು, ಗಂಟಲಲ್ಲಿ ವಸ್ತು ಸಿಕ್ಕಿಕೊಂಡಂತಹ ಅನುಭವ, ಕುರುಡುತನ, ಕಿವುಡುತನ, ಅರಿವಳಿಕೆ (ಅನೀಸ್ತೀಸಿಯ)-ಇವು ಅರಿವಿನ ಇಲ್ಲ್ವೇ ಇಂದ್ರಿಯಗ್ರಾಹ್ಯವಾದ ಲಕ್ಷಣಗಳು. ಮೊದಲಿನವು ಎರಡೂ ಕಳವಳ ಇರುವ ಮನೋರೋಗಗಳಲ್ಲಿ ಸಾಮಾನ್ಯವಾದ್ದರಿಂದ ಇಲ್ಲಿ ಅಷ್ಟು ಮುಖ್ಯವಲ್ಲ. ಉನ್ಮಾದ ರೋಗಿ ನುಂಗಲು ಕಷ್ಟವೆಂದು ಹೇಳಿದರೆ ತಿನ್ನಲು ಇಷ್ಟವಿಲ್ಲದ್ದರ ಸೂಚನೆ. ರೋಗಿ ಕಂದಿರುವ ಯಾವ ತೆರನ ಚರ್ಮದಲಿ ಸ್ಪರ್ಶದ ತೊಂದರೆ ತೋರಬಹುದು. ಕೆಲವೆಡೆ ಮುಟ್ಟಿದರೆ, ಗಿಂಡಿದರೆ, ಸುಟ್ಟರೆ, ಸೂಜಿ ಚುಚ್ಚಿದರೂ ಗೊತ್ತಾಗದು. ಆದರೆ ವೈದ್ಯರಿಗೆ ಹೊತ್ತಾಗುವ ಯಾವ ನರದ ರೋಗವನ್ನೂ ಇದು ತೋರದು. ರೋಗಿಯ ಈ ಉನ್ಮಾದ ಉಅಕ್ಷಣವನ್ನು ಅನುಭವೀ ವೈದ್ಯ ಚೆನ್ನಾಗಿ ಪತ್ತೆ ಹಚ್ಚಬಲ್ಲ. ರೋಗ ನಟನೆ-ಸುಳ್ಳು ರೋಗಲಕ್ಷಣಕ್ಕೂ (ಮೆಲಿಂಗರಿಂಗ್) ಉನ್ಮಾದಕ್ಕೂ ಇರುವ ವ್ಯತ್ಯಾಸ ತಿಳಿಯಬೇಕು. ಮೆಲರಿಂಗ್ ನಲ್ಲಿ ತಾನು ಮಾಡುತ್ತಿರುವ ಸೋಗಿನ ತಿಳಿವಳಿಕೆ ಚೆನ್ನಾಗಿರುತ್ತದೆ. ಉನ್ಮಾದ ರೋ ತೋರುವ ಕುರುಡುತನ, ಕಿವುಡುತನ ಮತ್ತಿತರ ತೋರಿಕೆಗಳ ಪರೀಕ್ಷೆಗಳನ್ನು ವೈದ್ಯನ ಹೆಚ್ಚಿನ ತಿಳಿವಳಿಕೆಯಿಂದ ಯೋಜಿಸಬೇಕು.