ಪುಟ:Mysore-University-Encyclopaedia-Vol-2-Part-3.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಡ್ಡಯನ (ಪ್ರಾಣಿಗಳಲ್ಲಿ)

ವಿಧಿಸಿಕೊಂಡಿರುವ ನಿರ್ಬಂಧಗಳ ಮಿತಿಯಲ್ಲಿ u ಮತ್ತು a ಗಳ ಯುಕ್ತ ಹೊಂದಾಣಿಕೆಯಿಂದ ಒಂದು ಕಣವನ್ನು ಯಾವುದೇ ಸ್ಥಳದಿಂದ ಯಾವುದೇ ಗುರಿಗೆ ಉಡಾಯಿಸುವುದು ಸಾಧ್ಯ ಸಾಂಪ್ರದಾಯಿಕ ಯುದ್ದ ಕ್ರಮದಲ್ಲಿ ಬಳಕೆಯಲ್ಲಿರುವ ಮಾರ್ಟರ್



ಅಗ್ನಿಶಸ್ತ್ರದ,ಈಚೆಗೆ ಪರಿಷ್ಕರಣಗೊಳ್ಳುತ್ತಿರುವ ಖಂಡಾಂತರ ಕ್ಷಿಪಣಿಯ (ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸ್ಸೈಲ್-ಐಸಿಬಿಎಂ) ಉಡ್ಡಯನಗಳ ಹಿನ್ನೆಲೆಯಲ್ಲಿರುವ ತತ್ತ್ವ್ ಇದೇ.

   ಉಡ್ಡಯನ (ಪ್ರಾಣಿಗಳಲ್ಲಿ): ಗಾಳಿಯಲ್ಲಿ ಹಾರುವುದು. ಹಾರುವ ಪ್ರಾಣಿಗಳ ಜೀವನಕ್ರಮವನ್ನು ಗಮನಿಸಿದರೆ ಎರಡು ರೀತಿಯನ್ನು ನೋಡಬಹುದು.
 ೧.ಗಾಳಿಯಲ್ಲಿ ತೇಲ ಜಾರುವ ಪ್ರಾಣಿಗಳು: ಇವು ಪಕ್ಷಿಗಳಂತೆ ನಿರಂತರವಾಗಿ ಚಲಿಸುವಾಗ ಗಾಳಿಯಲ್ಲಿ ಧುಮುಕಿ,ತೇಲಿ,ತಮ್ಮ ದೇಹದ ಮಾರ್ಪಾಡುಗಳ ಸಹಾಯದಿಂದ ಜಾರಿಕೊಂಡಿದೆ,ಯಾವ ಅಪಯವೂ ಇಲ್ಲದೆ ಗುರಿ ತಲುಪೌತ್ತವೆ.ಈ ಚಲನೆ ಪ್ಯಾರಾಶೂಟ್ ಸಹಾಯದಿಂದ ಧುಮುಕುವವರ ಇಳಿತದಂತಿದೆ.ಇಂಥವನ್ನು ಒಂದು ವಿಧದಲ್ಲಿ ಹಾರುವ ಪ್ರಾಣಿಗಳು ಎನ್ನಬಹುದು.ಉದಾಹರಣೆ ಹಾರಮೀನು,ಹಾರಗಪ್ಪೆ,ಹಾರುಹಲ್ಲಿ,ಹಾರುಬೆಕ್ಕು,ಹಾರುಅಳಿಲು ಇತ್ಯಾದಿ.ಇವುಗಳ ದೇಹಗಳು ಹಾರುವುದಕ್ಕೆ ಪೂರಕವಾಗಿ ರಚಿತವಾಗಿವೆ.

ಹಾರುಮೀನುಗಳು :ಇವು ಎಕ್ಸೋಸಿಟಿಸ್ ಜಾತಿಗೆ ಸೇರಿದವು,ಇವುಗಳಲ್ಲಿ ಭುಜದ ಈಜುರಕ್ಕೆಗಳು ಅಗಲವಾಗಿ ಬೆಳೆದಿವೆ; ಹರಡಿದಾಗ ಸುಮಾರು ೧೪ ಅಗಲವಿರುತ್ತದೆ ನೀರಿನ ಮೇಲಂಚಿನಲ್ಲಿ ವೇಗದಿಂದ ಈಜಿಕೊಂಡು ಬಂದು ಬಾಲದ ಸಹಾಯದಿಂದ ನಿರನ್ನು ತಳ್ಳಿ ಗಾಳಿಗೆ ಜಿಗಿಯುತ್ತವೆ. ಉಯ್ಯಾಲೆ ಆಡುವವರು ಕಾಲಿನಿಂದ ನೆಲವನ್ನು ಮೀಟಿ ತೂಗಿಕೊಳ್ಳಲು ವೇಗವನ್ನು ಪಡೆಯುವಂತೆ ಇವು ಬಾಲದ ನೆರವಿನಿಂದ ಜಿಗಿಯುತ್ತದೆ ,ಗಾಳಿಗೆ ಜಿಗಿದ ಅನಂತರ ತಮ್ಮ ಭುಜದ ಈಜುರೆಕ್ಕೆಗಳನ್ನು ಹರಡಿಕೊಂಡು ಗಾಳಿಯಲ್ಲಿ ಜಾರಿಕೊಂಡು ಪುನಃ ಬಾಲದ ಸಹಾಯದಿಂದ ಗಾಳಿಗೆ ಜಿಗಿಯಬಹುದು,ಹೀಗೆ ಇವು ನೂರಾರು ಗಜಗಳ ದೂರ ಗಾಳಿಯಲ್ಲಿ ಚಲಿಸಬಲ್ಲವು.

ಹಾರುಗಪ್ಪೆ: ರೆಕೋಫೋರಸ್ ರೈನ್ಹಾರಿಡಿ ಹೆಸರಿನ ಮರಕಪ್ಪೆ, ಬೋರ್ನಿಯೋದ್ವೀಪವಾಸಿ, ಕಾಲುಬೆರಳುಗಳ ನಡುವೆ ಇರುವ ಜಾಲಪಾದದ ನೆರವಿನಿಂದ ಗಾಳಿಯಲ್ಲಿ ಜಿಗಿದು ಚಲಿಸುತ್ತದೆ. ಬೆರಳುಗಳಲ್ಲಿರುವ ಅಂಟುಮೆತ್ತೆಗಳ ಸಹಾಯದಿಂದ ಮರ ಹತ್ತಬಲ್ಲದು.

ಹಾರುಹಲ್ಲಿ: ಮಲಯ ದ್ವೀಪದ ಕಾಡುಗಳಲ್ಲಿ ವಾಸ. ಚಿಟ್ಟೆಗಳಂತೆ ವರ್ಣರಂಜಿತ ದೇಹ ಸಾಮಾನ್ಯವಾಗಿ ಇದು ಹೂಗಳ ಹತ್ತಿರದಲ್ಲಿ.ಜೀವಿಸುವುದರಿಂದ ಚಿಟ್ಟೆಗಳಂತೆಯೇ ಕಾಣಿಸುತ್ತದೆ. ಇದರ ಎದೆಯ ಪಕ್ಕೆಲುಬುಗಳು ನೇರವಾಗಿ ಪಕ್ಕಕ್ಕೆ ಬೆಳೆದಿವೆ. ಇವುಗಳ ನಡುವೆ ಚರ್ಮದ ಪದರ ಬೆಳೆದು ಒಂದು ರೀತಿಯ ರಕ್ಕೆಯಂತಿರುವ ರಚನೆ ಉಂಟಾಗಿದೆ ಇದಕ್ಕೆ ಪೆಟೆಜಿಯಂ ಎಂದು ಹೆಸರು. ಇದನ್ನು ಹರಡಿಕೊಂಡು ಎತ್ತರದಿಂದ ತಗ್ಗಿಗೆ ಗಾಳಿಯಲ್ಲಿ ಜಾರಿ ಇಳಿಯುತ್ತದೆ.ಆಗ ರಕ್ಕೆ ಪ್ಯಾರಶೂಟಿನಂತೆ ಸಹಾಯ ಮಾಡುತ್ತದೆ ವಿಶ್ರಾಂತಿಸ್ಥಿತಿಯಲ್ಲಿ ರೆಕ್ಕೆ ಮಡಿಸಿಕೊಂಡಿರುತ್ತದೆ.

ಹಾರುಬೆಕ್ಕು: ಮಡಗಾಸ್ಕರ್ ದ್ವೀಪವಾಸಿ ಸ್ತನಿ. ಅಲ್ಲಿಯ ಜನರ ಭಾಷೆಯಲ್ಲಿ ಇದರ ಹೆಸರು ಕೊಬೆಗಾಸ್ ಕಗುಆನ, ಗಾತ್ರ ಮನೆ ಬೆಕ್ಕಿನಷ್ಟೇ.ನಿಶಾಚರಿ ಚರ್ಮದಿಂದ ರಚಿತವಾದ ಪಟಿಜಿಯಂ ರೆಕ್ಕೆ ಇದೆ. ಇದು ಕುತ್ರಿಗೆಗೂ ಮುಂಗಾಲುಗಳಿಗೂ ನಡುವೆ,ಮುಂಗಾಲು ಹಿಂಗಾಲುಗಳ ನಡುವೆ,ಹಿಂಗಾಲುಗಳ ನಡುವೆ,ಹಿಂಗಾಲುಗಳಿಗೂ ಬಾಲಕ್ಕೂ ನಡುವೆ ಹರಡಿದೆ ಇದರ ಸಹಾಯದಿಂದ ಹಾರಬೆಕ್ಕು ಎತ್ತರದಿಂದ ತಗ್ಗಿಗೆ ಜಾರಬಲ್ಲದು.

ಹಾರುಅಳಿಲು: ಸೈಯುರಾಪ್ಪೆರಸ್,ಟಿರಾಮಿಸ್, ಯುಪಟಾರಸ್ ಮತ್ತು ಅನುಮಾಲುರಿಡೆ ಜಾತಿಗೆ ಸೆರಿದೆ ಭಾರತ,ಮಲೇಷಿಯ,ಅಫ್ಘಾನಿಸ್ತಾನ, ಯುರೋಪ್,ಉತ್ತರ ಅಮೆರಿಕಗಳಲ್ಲಿ ಕಾಣಬಹುದು. ಹಾರುಬೆಕ್ಕಿನಂತೆ ಇದರಲ್ಲಿಯೂ ಪಟೆಜಿಯಂ ಬೆಳೆದಿದೆ. ಆದರೆ ಅದರಷ್ಟು ರೂಪಗೊಂಡಿಲ್ಲ. ಅರಣ್ಯವಾಸಿ ,ನಿಶಾಚರಿ, ಹಾರುವಾಗ ರಕ್ಕೆಯ ಉಪಯೋಗವಿದೆ.

   ೨.ನೈಜವಾಗಿ ಹಾರುವ ಪ್ರಾಣಿಗಳು: ಕೇವಲ ನಾಲ್ಕು ರೀತಿಯ ಪ್ರಾಣಿಗಳಿಗೆ ಈ ಗುಣವಿದೆ ಪಕ್ಷಿಗಳು,ಬಾವಲಿಗಳು ,ಕೀಟಗಳು , ಮತ್ತು ಟೀರೋಡ್ಯಾಕ್ಪೈಲಗಳು.ಇವುಗಳಲ್ಲಿ ಮೊದಲಿನ ಮೂರು ಇಂದಿಗೂ ಬದುಕಿವೆ,ಕೊನೆಯದು ಬದುಕಿಲ್ಲ. ಇವು ಗಳಿಯಲ್ಲಿ ಸ್ವಶಕ್ತಿಯಿಂದ ಚಲಿಸುತ್ತವೆ ಎಂದರೆ ಹಾರುತ್ತವೆ. ಈ ಪ್ರಾಣಿಗಳಲ್ಲಿ ಹಾರಲು ನೆರವಾಗುವಂತೆ ರೆಕ್ಕೆಗಳು ಅಥವಾ ರೆಕ್ಕೆಗಳಂತಿರುವ ರಚನೆಗಳ ಬೆಳೆದಿವೆ.ಟೀರೋಡ್ಯಾಕ್ಪೈಲದಲ್ಲಿ ನಾಲ್ಕನೆಯ ಕೈಬೆರಳು ದೊಡ್ಡದು. ಇದು ಚರ್ಮದ ರೆಕ್ಕೆಗೆ ಆಧಾರ, ಬಾವಲಿಗಳಲ್ಲಿ ಕೈಬೆರಳು ನಡುವೆ, ಕೈಕಾಲುಗಳ ನಡುವೆ ಮತ್ತು ಬಾಲಕ್ಕೂ  ಕಾಲುಗಳಿಗೂ ನಡುವೆ ಮತ್ತು ಬಾಲಕ್ಕೂ ಕಾಲುಗಳಿಗೂ ನಡುವೆ ಚರ್ಮದ ಪಟಲವೊಂದು ಹರಡಿ ರಕ್ಕೆಯ ರಚನೆ ಉಂಟಾಗಿದೆ. ಕೀಟಗಳಲ್ಲಿ ಕ್ಯೂಟಿಕಲ್ ರೆಕ್ಕೆಯಾಗಿ ರೂಪಿತವಾಗಿದೆ.ಪ್ರಾಣಿಗಳಲ್ಲಿ ಹಾರುವಿಕೆಯ ವಿಕಾಸ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕ್ಕೊಳ್ಳಲು ಕಾರಣಗಳು ಬೇರೆ ಬೇರೆಯಾದರು 

ಎಲ್ಲೆಂದರಲ್ಲಿಯೂ ಹಾರಲು ಪ್ರೇರಕವಾದ ಕಾರಣ,ಅದರ ಗುರಿ,ದೇಹದ ಮಾರ್ಪಾಡುಗಳು ಮುಂತಾದವುಗಳಲ್ಲಿ ಒಂದಕ್ಕೊಂದು ಹೋಲಿಕೆ ಕಾಣಬರುತ್ತದೆ

 ಟೀರೋಡ್ಯಾಕ್ಪೈಲ: ಇವು ಮ್ಮೀಸ್ಸೋಓಚೋಯಿಕ್ ಕಲ್ಪ್ದಲ್ಲಿ ಎಂದರೆ ಸರೀಸೃಪಗಳ ಸುವರ್ಣಯುದಲ್ಲಿ ಬಾಳಿ,ಅಳಿ,ಅಳಿದ  ಪ್ರಾಣಿಗಳು. ಇಂದಿನ ಗುಬ್ಬಚ್ಚಿಗಳ ಗಾತ್ರದಷ್ಟು ಚಿಕ್ಕವೂ ಸಾಮಾನ್ಯ ವಿಮಾನಗಳಷ್ಟು ಗಾತ್ರದ ಪ್ರಾಣಿಗಳೂ ಅಂದು ಬದಿಕಿದ್ದವು. ಇವುಗಳ ಕೈಯ ನಾಲ್ಕನೆಯ ಬೆರಳು ಉದ್ದವಾಗಿ ಬೆಳೆದು ಹರಡಿದ ಚರ್ಮದ ಪಟಲಕ್ಕೆ ಆಧಾರವಾದ ರೆಕ್ಕೆಗಳು ರೂಪಿತವಾಗಿದ್ದವು. ಇವುಗಳ ಅವಶೇಷಗಳು ಬವೇರಿಯ, ಕನ್ಸಾಸ್ ದೇಶಗಳ ಸುಣ್ಣಶಿಲಾ ಪದರಗಳೊಂದಿಗೆ ದೊರಕಿವೆ. ಯೇಲ್ ನಗರದ ವಸ್ತು ಸಂಗ್ರಹಾಲಯದಲ್ಲಿ ಇವನ್ನು ಜೋಡಿಸಿಟ್ಟಿದ್ದಾರೆ. 
    ಬಾವಲಿ: ಇವುಗಳ ಕೈಬೆರಳುಗಳು ಉದ್ದವಾಗಿ ಬೆಳೆದಿವೆ; ಈ ನಡುವೆ ಚರ್ಮದ ಪದರ ಹರಡಿದೆ. ಪದರ ಕೈಕಾಲುಗಳ ನಡುವೆ ಹಾಗೂ ಹ್ಂಗಾಲುಗಳೆರಡರ ನಡುವೆಯೂಉಂಟು. ಇದರಲ್ಲಿ ಬಾಲ ಸೇರಿರಬಹುದು ಸೇರದೆಯೂ ಇರಬಹುದು ಸೇರದೆಯೂ ಇರಬಹುದು. ಈ ರಚನೆಯೇ ಬಾವಲಿಯ ರೆಕ್ಕೆ ರೆಕ್ಕೆಗಳ ಬಡಿತದಿಂದ ಬಾವಲಿ ಗಾಳಿಯಲ್ಲಿ ಹಾರುತ್ತದೆ