ಪುಟ:Mysore-University-Encyclopaedia-Vol-2-Part-3.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉತ್ತರ ಕನ್ನಡ ಜಿಲ್ಲೆ ವೆಸ್ಟ್ಕೋಸ್ಟ್ ಪೆಪರ್ ಮಿಲ್ಸ್, ದಾಂಡೇಲಿಯ ಇಂಡಿಯನ್ ಫ್ಲೈವುಡ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ, ಜೈಹಿಂದ ಸಮಿಲ್, ಬಲ್ಲಪುರ ಇಂಡಸ್ಟ್ರಿಯಲ್ ಲಿ, ಬಿಣಗಾದ ದಾಂಡೇಲಿ ಫೆರೊ ಅಲಯ್ಸಿ ಫೃಐಲಿ. ಇವು ಮುಖ್ಯ ಉದ್ದಿಮೆಗಳು.ಇವಲ್ಲದೆ ಸನ್ನ ಕೈಗಾರಿಕ ಘಟಕಗಳು, ಖಾದಿ ಗ್ರಾಮೋದ್ಯೋಗ ಕರಕುಶಲ ಘಟಕಗಳು ಹಾಗೂಕೈಮೊಗ್ಗದ ಘಟಕಗಳು ಜಿಲ್ಲೆಯಲ್ಲಿವೆ, ಹೆಂಛು ಕಾರ ಖಾನೆಗಳಿವೆ. ಮೀನುಗಾರಿಕೆ ಘಟಕಗಳು, ದೋಣಿ ಕಟ್ಟುವ ಘಟಕಗಳು, ಆಹರ ಸಂಸ್ಕರನ ಘಟಕಗಳು, ರಾಸಯನಿಕ ಘಟಕಗಳು, ಚರುಮ ಮತ್ತು ರಬ್ಬರ್ ಘಟ್ಕಗಳು, ಗಂಧ ಚಂದನ ಘಟಕಗಳು, ಮುದ್ರಣ ಘಟಕಗಳು, ನೂಲುವಾ ನೇಯುವ ಘಟಕಗಳು, ಜೇನು ಸಾಕಣೆ, ಬೆತ್ತ ಬಿದಿರುಗಳಿಂದ ವಸ್ತುಗಳನ್ನು ತಯಾರಿಸುವ ಘಟ್ಕಗಳು, ಎಣ್ಣೆ ತಯಾರಿಕ ಘಟಕಗಳು, ಕುಂಬರಿಕೆ ಮೂಂತಾದ ಅನೇಕ ಉದ್ಯಮಗಳಿವೆ. ಇವುಗಳ್ಲ್ಲಿ ಕೆಲವು ಗುಡಿ ಕೈಗಾರಿಕೆಗಳು.

ಶಿಕ್ಷಣ: ಜಿಲ್ಲೆಯ ಸಕ್ಷರತಾ ಪ್ರಮಾಣ ಶೇ. ೭೬.೫೯, ಪುರುಷರು ಶೇ.೮೪.೪೮, ಮಹಿಳೆಯರು ೬೮.೪೮. ಜಿಲ್ಲೆಯಲ್ಲಿ ಮೊದಲು ಜೈನ್, ವೀರಶೈವ, ಬ್ರಾಹ್ ಮಣ ಸಪ್ರದಾಯದ ಪಾಟ ಶಲೆಗಳು ನಡೆಯುತ್ತಿದ್ದವು. ಅದಕ್ಕೆ ಅನೆಕ ಅಗ್ರಹಾರಗಳು ಪ್ರಛಲಿತವಿದ್ದವು. ಅವುಗಳೆಲ್ಲ ಬ್ರಿಟಿಶರ ಆಳಿಕೆಯಲ್ಲಿ ಕೊನೆಗೊಳ್ಳುತ್ತ ಬಂದು ೧೮೬೬ ಸುಮಾರಿಗೆ ಸರಕಾರಿ ಶಾಲೆಗಳು ಆರಂಭವಾದವು. ಹಳಿಯಾಳ, ಕುಮುಟ, ಶಿರಸಿಗಳ್ಲ್ಲಿ ಆಯಂಗ್ಲೊವರನಾಕ್ಕುಲರ್ ಶಾಲೆಗಳಿದ್ದವು.೧೮೬೬ರಲ್ಲಿ ಒಂದು ಉದರದು ಶಾಲೆ ಹಳಿಯಾಳದಲ್ಲಿ ಆರಂಭವಾಯಿತು.

೧೮೬೪ರಲ್ಲಿ ಕಾರವಾರದಲ್ಲಿ ಮೊದಲ ಹೈಸ್ಕೂಲು ಪ್ರರಂಭವಾಯಿತು. ೧೯೩೫ - ೩೬ರಲ್ಲಿ ೮೫೩ ಪ್ರಥಮಿಕ ಶಲೆಗಳಿದ್ದವು. ೨೩.೪೬೫ ಮಂದಿ ಪಡೆಯುತ್ತಿದ್ದರು. ಇವರಲ್ಲಿ ೫೭೭೬ ವಿಧ್ಯಾಥಿ೯ನಿಯರು.ಆ ವಷ೯ದಿಂದ ಪರಿಶಿಷ್ಟ ಜಾತಿಯ, ಮುಸ್ಲಿಮ್ ಸಮುದಯದ ವಿಧ್ಯಾಟಿಗಳನ್ನು ಶಲೆಗೆ ಸೆರಿಸಲು ವಿಶೇಶ್ ಗಮನ ಕೊಡಲಾಯಿತು.ಜಿಲ್ಲ ಸ್ಕೂಲ್ ಬೊಡ್೯ ೧೯೪೪ರಲ್ಲಿ ಆರಂಭವಾಗಿ ಎಲ್ಲ ಶಾಲೆಗಳು ಸ್ಕೊಲ್ ಬೊಡ೯ ಅಧೀನಕ್ಕೆ ಬಂದು ಶಿಕ್ಷಣದಲ್ಲಿ ಒಂದು ಬಗೆಯ ಶಿಸ್ತು ಬಂತು. ಸ್ಕ್ಲಒಲ್ ಬೊಡಿ೯ನಿಂದ ನಿಯಂತ್ರಣಗೊಂಡ ಶಿಕ್ಷಣ ಇಲಾಖೆಯ ಖಚು೯ ಪೊರೈಸಲು ಸ್ಥಳೀಯ ಆಡಳಿತಗಳು ವಿದ್ಯಾ ಕರ ಸಂಗ್ರಹಿಸತೊಡಗಿದವು. ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾನೂನು (೧೯೧೮) ಜಾರಿಗೆ ಬಂದಾಗ ಹಳಿಯಾಳ ಮತ್ತು ಹೋನ್ನಾವರ ಪುರಸಭೆಗಳು ಈ ಯೋಹನೆಯನ್ನು ಜಾರಿಗೆ ತಂದವು. ೧೯೪೭ ರಲ್ಲಿ ಮುಂಬಯಿ ಪ್ರಾಥಮಿಕ ಶಿಕ್ಷಣ ಅಧಿನಿಯಮದಂತೆ ೭-೧೧ ವಷ‌ದ ಮಕ್ಕಳು ಶಾಲೆಗೆ ಹೋಗುವುದು ಕಡ್ಡಾಯವಾಯಿತು. ರಾಜ್ಯ ಪುನಾರಚನೆಯ ಕಾಲದಲ್ಲಿ ೯೬೯ ಪ್ರಾಥಮಿಕ ಶಾಲೆಗಳೂ ೭೧೭೭೯ ವಿದ್ಯಾಥಿಗಳೂ ೧೭೫೯ ಶಿಕ್ಷಕರೂ ಇದ್ದರು. ೧೯೦೦ರ ವೇಳೆಗೆ ಘಟ್ಟದ ಮೇಲೆ ಶಿರಸಿಯಲ್ಲಿ ಒಂದೇ ಒಂದು ಪ್ರೌಢಶಾಲೆಯೋ ಇದ್ದವು. ೧೯೪೭ರ ವರೆಗೂ ಶಿಕ್ಷಣ ಒಂದು ತೀವ್ರ ಆಸಕ್ತಿಯ ವಿಷಯವಾಗಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಅದುವರೆಗೆ ಜಿಲ್ಲೆಯಲ್ಲಿ ಪದವಿಯ ಮಟ್ಟದ ಉನ್ನತ ಶಿಕ್ಷಣದ ಸೌಲಭ್ಯಗಳಿರಲಿಲ್ಲ. ಸಕಾ‍ರದಿಂದ ಎಲದಲವನ್ನೂ ಅಪೇಕ್ಷಿಸುವುದು ಸಾಧ್ಯವಿಲ್ಲವೆಂದು ಮನಗಂಡ ಸಾವ‍ಜನಿಕರು ೧೯೪೭ರಲ್ಲಿ ಕುಮಟದಲ್ಲಿ ಕೆನರಾ ಎಜುಕೇಶನ್ ಸೋಸೈಟಿಯನ್ನು ಆರಂಭಿಸಲಾದ ಮಾಡನ್ ಎಜುಕೇಶನ್ ಸೋಸೈಟಿಯನ್ನು ಆರಂಭಿಸಿದರು. ೧೯೧೯ರಲ್ಲಿ ಭಟ್ಕಳದಲ್ಲಿ ಆರಂಭವಾದ ಅಂಜುಮನ್ ಎಜುಕೇಶನ್ ಟ್ರಸ್ಟ್, ೧೯೫೨ರಲ್ಲಿ ಸಿದ್ದಾಪುರದಲ್ಲಿ ಸ್ಥಾಪಿಸಿದ ಸಹಕಾರಿ ಶಿಕ್ಷಣ ಪ್ರಸಾರ ಸಮಿತಿ, ೧೯೫೪ರಲ್ಲಿ ಯಲ್ಲಾಪುರದಲ್ಲಿ ಆರಂಭವಾದ ಶಿವಾಜಿ ಎಜುಕೇಶನ್ ಸೋಸೈಟಿ, ೧೯೬೧ರಲ್ಲಿ ಅಂಕೋಲದಲ್ಲಿ ಆರಂಭಿಸಲಾದ ನೂತನ ಶಿಕ್ಷಣ ಸಭಾ ಟ್ರಸ್ಟ್, ೧೯೭೦ರಲ್ಲಿ ದಾಂಡೇಲಿಯಲ್ಲಿ ಆರಂಭಿಸಿದ ದಾಂಡೇಲಿ ಎಜುಕೇಶನ್ ಸೋಸೈಟಿ, ೧೯೬೪ರಲ್ಲಿ ಹೋನ್ನಾವರದಲ್ಲಿ ಮಹಾವಿದ್ಯಾಲಯ ಸ್ಥಾಪಿಸಿದ ಮಲ್ನಾಡ್ ಪ್ರೋಗ್ರೆಸ್ಸಿವ್ ಎಜುಕೇಶಶನ್ ಸೋಸೈಟಿ, ೧೯೫೩ರಲ್ಲಿ ದಿನಕರದೇಸಾಯಿ ನೇತೃತ್ವದಲ್ಲಿ ಸ್ಥಾಪಿತವಾದ ಕೆನರ ವೆಲ್ ಫೇರ್ ಟ್ರಸ್ಟ್ ಮೋದಲಾದ ಅನೇಕ ಶಿಕ್ಷಣ ಸಂಸ್ಥೆಗಳು ಜಿಲ್ಲೆಯ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದವು. ೧೯೪೯ರಲ್ಲಿ ಕುಮುಟದಲ್ಲಿ ಕೆನರಾ ಕಾಲೇಜು ಆರಂಭವಾಗಿ ಅನಂತರ ಅದು ಎ.ವಿ.ಬಾಳಿಗಾ ಕಾಲೇಜು ಎಂದು ನಾಮಕರಣ ಗೋಂಡಿತು. ೧೯೬೧ರಲ್ಲಿ ಕಾರವಾರದಲ್ಲಿ ಕಾಲೇಜು ಆರಂಭವಾಯಿತು. ಮುಂದಿನ ಹದಿನೈದು ವಷಗಳಲ್ಲಿ ೧೩ಪದವಿ ಮಹಾವಿದ್ಯಾಲಯಗಳು, ೩ ವೃತ್ತಿಪರ ಮಹಾವಿದ್ಯಾಲಯಗಳು, ೩ ಬಿ. ಇಡಿ. ಮಹಾ ವಿದ್ಯಾಲಯಗಳು, ಒಂದು ಕಾನೂನು ಮಹಾವಿದ್ಯಾಲಯ ಆರಂಭವಾಯಿತು. ಈಗ ಈ ಜಿಲ್ಲೆಯ ಭಟ್ಕಳದಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜು ಇದೆ. ಸಿದ್ದಾಪುರದಲ್ಲೋಂದು ಆಯುವೇದ ಮಹಾವಿದ್ಯಾಲಯ ವಿದೆ. ಶಿರಸಿಯಲ್ಲಿ ಅರಣ್ಯ ವಿಜ್ಞಾನ ಕಾಲೇಜು ಇದೆ. ೧೯೩೭ರಲ್ಲಿ ಮುಂಬಯಿ ಸಕಾರದಿಂದ ಅನುದಾನಿತವಾದ ವಯಸ್ಕರ ಶಿಕ್ಷಣ ಸಮಿತಿಯ ರಚನೆಯಾಗಿತ್ತು. ೧೯೪೭-೫೬ರಅವಧಿಯಲ್ಲಿ ಸಮುದಾಯ ಶಿಕ್ಷಣಕ್ಕೆ ಅದ್ಯತೆ ನೀಡಿದ್ದರಿಂದ ೪ ತಿಂಗಳ ಮತ್ತು ಆರು ತಿಂಗಳ ಅವಧಿಗಳ ಸಾಕ್ಷರತಾ ವಗಗಳು ಆರಂಭವಾದವು. ೧೯೮೦ರಲ್ಲಿ ಶಿರಸಿಯಲ್ಲಿ ವಯಸ್ಕರ ಶಿಕ್ಷಣಕ್ಕೆ ಯೋಜನಾ ಕಚೇರಿ ತೆರೆದ ಅನಂತರ ವಯಸ್ಕರ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಯಿತು. ಈಗ ೧೫೦ ವಯಸ್ಕರ ಶಿಕ್ಷಣ ಕೇಂದ್ರಗಳೂ ೧೫೦ ಸಾಕ್ಷರೋತ್ತರ ತರಬೇತಿ ಕೇಂದ್ರಗಳೂ ಕೆಲಸ ಮಾಡುತ್ತಿವೆ. ಕೇಂದ್ರ ಸಕಾರದ ಯೋಜನೆಯಡಿ ನವೋದಯ ಶಾಲೆಯೂ ನಡೆಯುತ್ತಿವೆ. ವಿದ್ಯಾಥಿಗಳಿಗೆ ವೃತಿ ಮಾಗದಶನ ಸಿಗುವ ನಿಟ್ಟಿನಲ್ಲಿ ಶಿಕ್ಷಣ ಖಾತೆ ೧೯೮೧-೮೨ರಲ್ಲಿ ಪ್ರೌಢಶಾಲೆಯ ೬೫ ಶಿಕ್ಷಕರಿಗೆ ತರಬೇತು ನೀಡಿ ಅವರನ್ನು ಕೆರಿಯರ್ ಮಾಸ್ಟರ್ ಎಂದು ಕರೆದುದಲ್ಲದೆ ಬಿ.ಎಡ್ . ವಿದ್ಯಾಥಿಗಳಿಗೂ ಈ ವಿಷಯ ಪರಿಚಯಿಸಿತು. ಜಿಲ್ಲೆಯಲ್ಲಿ