ಪುಟ:Mysore-University-Encyclopaedia-Vol-2-Part-4.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಚು ಸಿಡಿಗುಂಡು - ಎರಟಾಸ್ಥೆನೀಸ್

೮೭೩

ಮಿಶ್ರಲೋಹಗಳ ಎರಕ ಹುಯ್ಯಬೇಕಾದಾಗ ಅತಿ ಹೆಚ್ಚಿನ ಒತ್ತಡ ಬೇಕು. ಕೋಲ್ಡ್ ಚೇಂಬರ್ ಯಂತ್ರ ಇಂಥ ಒತ್ತಡ ಒದಗಿಸುವುದು. ಈ ಯಂತ್ರದ ಸಿಲಿಂಡರಿನೊಳಕ್ಕೆ ಎರಕಕ್ಕೆ ಎಷ್ಟು ಬೇಕೋ ಅಷ್ಟು ಕರಗಿದ ಲೋಹ ಸುರಿಯುತ್ತಾರೆ. ಇದರೊಳಗೆ ಚಲಿಸುವ ಕೊಂತ ಮತ್ತು ಸಿಲಿಂಡರುಗಳು ಕರಗುವುದನ್ನು ತಪ್ಪಿಸಲು ತಣ್ಣೀರಿನ ಪ್ರವಾಹದಿಂದ ಇವುಗಳ ಉಷ್ಣ ವಿಸರ್ಜನೆ ಮಾಡುತ್ತಾರೆ. ಇಂಥ ಯಂತ್ರಗಳಲ್ಲಿ ಚದರ ಅಂಗುಲ ಒಂದಕ್ಕೆ ೧೦,೦೦೦ ಪೌಂಡುಗಳಷ್ಟು ಒತ್ತಡವನ್ನು ಉಂಟುಮಾಡಬಹುದು. ಈ ಯಂತ್ರದಲ್ಲಿ ಕೊಂತದ ಚಲನೆ ನೀರಿನ ಒತ್ತಡದಿಂದ ಆಗುತ್ತದೆ. ಛಾಪ ಎರಕ ಪದ್ಧತಿಯಲ್ಲಿ ಅತಿಸೂಕ್ಷ್ಮ ಮತ್ತು ಅತಿ ತೊಡಕಾದ ಭಾಗಗಳನ್ನು ಅವುಗಳ ಮೇಲ್ಮೈ ನುಣುಪಾಗಿರುವಂತೆ ಎರಕಹುಯ್ಯಬಹುದು.

ಎರಕದಲ್ಲಿನ ನ್ಯೂನತೆಗಳು: ಎರಕ ಹುಯ್ಯುವುದು ನಷ್ಟವಿಲ್ಲದ ಕೈಗಾರಿಕಾ ಪದ್ಧತಿಯಾಗಬೇಕಾದರೆ ಎರಕ ಹುಯ್ದು ಪ್ರತಿ ಪದಾರ್ಥವೂ ದೋಷರಹಿತವಾಗಿರಬೇಕು. ಈ ದೋಷಗಳ ಮೂಲ ಎರಕದ ಆಲೇಖ್ಯದಲ್ಲಿ (ಡಿಸೈನ್) ಅಥವಾ ಅಚ್ಚಿನಲ್ಲಿ ಕರಗಿದ ಲೋಹದಲ್ಲಿರಬಹುದು. ಅಚ್ಚಿನ ಮರಳಿನಲ್ಲಿರುವ ನೀರಿನಿಂದ ಉತ್ಪನ್ನವಾದ ಹದದಿಂದ ಇಲ್ಲವೇ ಈ ಮರಳಿಗೆ ಸೇರಿಸಿದ ಇತರ ಪದಾರ್ಥಗಳಿಂದ ಉತ್ಪನ್ನವಾದ ಅನಿಲಗಳು ತಪ್ಪಿಸಿಕೊಳ್ಳಲಾಗದೆ ಆರುತ್ತಿರುವ ಲೋಹದೊಳಗೆ ಸಿಕ್ಕಿಕೊಂಡರೆ ಎರಕದ ಒಳಗೆ ವಾಯು ರಂಧ್ರಗಳು ಉಂಟಾಗುವುವು (ಬ್ಲೋಹೋಲ್ಸ್). ಅಚ್ಚು ಮರಳಿನಲ್ಲಿ ತೇವ ಹೆಚ್ಚಾಗಿದ್ದರೆ, ಮಾದರಿಯ ಸುತ್ತಲೂ ಮರಳನ್ನು ಬಲು ಗಡುಸಾಗಿ ಘಟ್ಟಿಸಿದ್ದರೆ, ಕರಗಿದ ಲೋಹದ ಉಣ್ಷತೆ ಕಡಿಮೆ ಇದ್ದರೆ, ಸುರಿಯುವ ಸೌಟು ಒಣಗಿಲ್ಲದೇ ಇದ್ದರೆ, ಕರಗಿದ ಕಬ್ಣಿಣದಲ್ಲಿ ಅಲ್ಯೂಮಿನಿಯಂ, ಆಂಟಿಮೊನಿ ಮೊದಲಾದವುಗಳ ಮಿಶ್ರಣ ಇದ್ದರೆ, ವಾಯು ರಂಧ್ರಗಳಾಗುವುವ ಸಂಭವ ಉಂಟು. ಈ ರಂಧ್ರಗಳು ಮೇಲ್ಮೈನ ಕೆಳಭಾಗದಲ್ಲಿರಬಹುದು ಇಲ್ಲವೆ ಮೇಲ್ಮೈಯ ಮೇಲೆಯೇ ಅನೇಕ ಸೂಜಿ ರಂಧ್ರಗಳ ರೂಪದಲ್ಲಿರಬಹುದು. ಎರಕದ ಮೈಮೇಲೆ ಮರಳು ಮತ್ತು ಲೋಹಗಳ ಮಿಶ್ರಣ, ಕಜ್ಜಿಯಂತೆ ಅಂಟಿಕೊಂಡಿರಬಹುದು. ಲೋಹದ ಉಣ್ಣತೆಯಿಂದ ಕಾದ ಮರಳ ಕಣಗಳು ಉಬ್ಬಿ ಸ್ವಸ್ಥಾನದಿಂದ ಚಲಿಸಿ ಪಕ್ಕದಲ್ಲಿರುವ ಲೋಹಕ್ಕೆ ಅಂಟಿಕೊಂಡರೆ ಹೀಗಾಗುವುದು. ಮರಳನ್ನು ಬಲು ಘಟ್ಟಿಸಿ ಅದರ ಕಣಗಳು ಹಿಗ್ಗುವುದಕ್ಕೆ ಅವಕಾಶ ಕೊಡದಿದ್ದರೆ ಮರಳಿಗೆ ಅಂಟುಮಣ್ಣು ಹೆಚ್ಚು ಸೇರಿಸಿದ್ದರೆ ಅಥವಾ ಮರಳು ದುರ್ಬಲವಾಗದಿದ್ದರೆ ಹೀಗಾಗುವುದು. ಕರಗಿದ ಲೋಹ ಆರುವಾಗ ಸಹಜವಾಗಿ ಕುಗ್ಗುವುದು. ತೆರಪಚ್ಚು ಚೆನ್ನಾಗಿ ಗಟ್ಟಿಯಾಗಿದ್ದರೆ ಇಲ್ಲವೇ ಮರಳನ್ನು ಬಹಳ ಘಟ್ಟಿಸಿದ್ದರೆ ಇಲ್ಲವೇ ಎರಕದ ಆಕಾರದ ಕಾರಣವಾಗಿ ಲೋಹ ಕುಗ್ಗುವುದಕ್ಕೆ ಅವಕಾಶವಿಲ್ಲದಿದ್ದರೆ ಕರಗಿದ ಲೋಹದಲ್ಲಿ ಒತ್ತಡ ಉತ್ಪನ್ನವಾಗಲಿ ಎರಕ ಸೀಳಬಹುದು. ಕರಗಿದ ಲೋಹದಲ್ಲಿ ಉಷ್ಣತೆ ಕಡಿಮೆ ಇದ್ದರೆ ಅದು ಬೇಗ ಆರಿಹೋಗಿ, ಅಚ್ಚಿನೊಳಗೆಲ್ಲ ಪ್ರವಹಿಸದೇ ಇರಬಹುದು. ಅಚ್ಚನ್ನು ಚೆನ್ನಾಗಿ ಘಟ್ಟಿಸದೇ ಇದ್ದರೆ ಮರುಳು ಒಳಗೆ ಬಿದ್ದು ಕರಗಿದ ಲೋಹವನ್ನು ಅಶುದ್ಧಪಡಿಸುವುದು. ಲೋಹವನ್ನು ವೇಗವಾಗಿ ಇಂಥ ಅಚ್ಚಿನಲ್ಲಿ ಸುರಿದರೆ ಅಚ್ಚು ಮುರಿಯಲೂಬಹುದು. ಲೋಹ ಆರುವಾಗ ಉತ್ಪನ್ನವಾದ ಕಣಗಳಲ್ಲಿ ಒಳ್ಳೆಯ ಸಂಘಟನೆ ಇಲ್ಲದೇ ಇರಬಹುದು. ಈ ದೋಷವಿದ್ದ ಕಾರಣ ಎರಕಗಳಲ್ಲಿ ನೀರಿನ ಒತ್ತಡವಿದ್ದರೆ ಅವು ಬೆವರಲಾರಂಭಿಸುತ್ತವೆ (ಸ್ಪಟಿಂಗ್). ಕಬ್ಬಿಣದಲ್ಲಿ ಈ ದೋಷ ತಪ್ಪಬೇಕಾದರೆ ತಕ್ಕಷ್ಟು ಸಿಲಿಕಾನ್ ಇರಬೇಕು.

ಇವುಗಳಲ್ಲದೆ ಎರಕದ ರೂಪರಚನೆಯಲ್ಲೇ ದೋಷವಿರಬಹುದು. ಏರು ಕೊಳವಿಗಳು ಆರಿ ಕುಗ್ಗುತ್ತಿರುವ ಎರಕಕ್ಕೆ ಲೋಹವನ್ನು ಒದಗಿಸುವುವು. ಆದ್ದರಿಂದ ಇವುಗಳನ್ನು ತಕ್ಕ ಸ್ಥಳದಲ್ಲಿ ತಕ್ಕಷ್ಟು ಸಂಖ್ಯೆಯನ್ನು ಒದಗಿಸದೇ ಹೋದರೆ ಎರಕ ಪರಿಪೂರ್ಣವಾಗುವುದಿಲ್ಲ. ಅದು ದೋಷಯುಕ್ತವಾಗುವುದು. ಒಂದು ಎರಕದ ಎರಡು ಭಾಗಗಳು ಸಂಧಿಸುವು ಸ್ಥಳ ಸಮಕೋನದಲ್ಲಿದ್ದರೆ ಅಲ್ಲಿ ಸೀಳಾಗುವ ಸಂಭವ ಉಂಟು ದಪ್ಪ ಮತ್ತು ಸಣ್ಣ ಭಾಗಗಳ ಸೇರುವಿಕ ಕ್ರಮೇಣವಾಗಿರದೆ ಒಮ್ಮೆಲೇ ಆಗಿದ್ದರೆ ಎರಕದಲ್ಲಿ ಬಿರುಕುಂಟಾಗುವ ಸಂಭವ ಉಂಟು. (ವೈ.ವಿ.ಆರ್.)

ಎರಚು ಸಿಡಿಗುಂಡು: ಬಂದೂಕಿಗೆ ಅಳವಿಡಿಸಿರುವ ದುಂಡು ಭರಣಿಯನ್ನು ಸಿಡಿಸಿದಾಗ ಅದರಿಂದ ಎಲ್ಲೆಡೆಗಳಿಗೆ ಬಿರಿಯುವ ಸ್ಫೋಟಕ (ಷ್ರಾಪ್ನೆಲ್). ನಿರ್ಮಾಪಕ ಹೆನ್ರಿ ಷ್ರಾಪ್ನೆಲನ (೧೭೬೧-೧೮೪೨) ಹೆಸರನ್ನೇ ಈ ಅಸ್ತ್ರಕ್ಕೆ ನೀಡಲಾಗಿದೆ. ಶತ್ರುವಿನೆಡೆಗೆ ಎರಚುಸಿಡಿಗುಂಡನ್ನು ಹಾರಿಸಿದಾಗ ಅದರಿಂದ ವ್ಯಾಪಕವಾಗಿ ಸ್ಫೋಟಿಸುವ ಗುಂಡುಗಳು ಎದುರಾದ ಸೈನಿಕರಿಗೆ ಮೃತ್ಯುಕಾರಕಗಳು. (ಎ.ಎನ್.ಎಸ್.ಎಂ.)

ಎರಟಾಸ್ಥೆನೀಸ್: ಪ್ರಾ ಪೂ. ಸು. ೨೭೬-೧೯೬. ಗ್ರೀಕ್ ಖಗೋಳಶಾಸ್ರ್ಥಜ್ಞ. ಇವನ ಆಸಕ್ತಿಯ ಕ್ಷೇತ್ರದ ವ್ಯಾಪ್ತಿ ಅರಿಸ್ಟಾಟಲ್ ನದರಷ್ಟೇ ಇತ್ತು. ಚರಿತ್ರೆ, ಕ್ರೀಡೆ, ಭೂಗೋಳ, ನಾಟಕ, ಗಣಿತ-ಒಂದೊಂದರಲ್ಲೂ ಇವನ ಕುತೂಹಲ ಹರಿದಿರುವುದನ್ನು ಕಾಣುತ್ತೇವೆ. ಇವನಿಗೆ ಬೀಟ (β-ಗ್ರೀಕ್ ಅಕ್ಷರಮಾಲೆಯಲ್ಲಿ ಎರಡನೆಯ ಅಕ್ಷರ) ಎನ್ನುವ ಅಡ್ಡ ಹೆಸರು ಇತ್ತು. β ಎಂದರೆ ಎರಡನೆಯವನು ಎಂದರ್ಥ. ಆಲ್ಫ (α) ಎಂದರೆ ಮೊದಲನೆಯವನು. ಎರಟಾಸ್ಥೆನೀಸನ ಸಮಕಾಲೀನ ಮತ್ತು ಮಿತ್ರ ಆರ್ಕಿಮಿಡೀಸ್ ಪ್ರ.ಶ.ಪೂ. ಸು. ೨೮೭-೨೧೨). ಅಲೆಗ್ಸಾಂಡ್ರಿಯದ ಪುಸ್ತಕಭಂಡಾರದ ಮುಖ್ಯಸ್ಥನಾಗಿರಲು ಎರಟಾಸ್ಥೆನೀಸನನ್ನು ಮೂರನೆಯ ಟಾಲೆಮಿ ಕೇಳಿಕೊಂಡಾಗ ಇವನು ಅದನ್ನು ಒಪ್ಪಿದ. ಇವನ ಹಿರಿಮೆಗೆ ಈ ಮರ್ಯಾದೆ ಒಂದು ಸಾಕ್ಷಿ. ಈತನ ಕೊಡುಗೆಗಳ ಸ್ಥೂಲವಿವರವಿಷ್ಟು: ಟ್ರೋಜನ್ ಯುದ್ಧದ ವರ್ಷವನ್ನು ಗ್ರೀಕ್ ಜಾನಪದಗಳಿಂದ, ಐತಿಹ್ಯಗಳಿಂದ ಮತ್ತು ದೊರೆತ ದಾಖಲೆಗಳ ಆಧಾರದಿಂದ ಇವನು ನಿರ್ಣಯಿಸಿದ (ಪ್ರ. ಪೂ. ಸು. ೧೧೪೦); ಅಲ್ಲಿಂದ ಈಚೆಗೆ ಸಂಭವಿಸಿದ ಎಲ್ಲ ಐತಿಹಾಸಿಕ ಘಟನೆಗಳ ನಿಷ್ಕೃಷ್ಟ ಕಾಲಸೂಚಿಯ ತಯಾರಿಕೆಯನ್ನು ಮೊದಲು ಮಾಡಿದವ ಇವನೇ: ಸಾಹಿತ್ಯ ವಿಮರ್ಶೆಯಲ್ಲಿ ಸಾಕಷ್ಟು ಕೈಯಾಡಿಸಿದ; ಹರ್ಷಾಂತ ನಾಟಕಗಳನ್ನು ಕುರಿತು ಶಾಸ್ತ್ರಗ್ರಂಥ ರಚಿಸಿದ; ಗಣಿತಶಾಸ್ತ್ರದಲ್ಲಿ ಮೂಲ ಸಂಖ್ಯೆಗಳನ್ನು (ಪ್ರೈಮ್ ನಂಬರ್ಸ್) ನಿರ್ಣಯಿಸಲು ಒಂದು ಕ್ರಮ ನಿರೂಪಿಸಿದುದರಿಂದ "ಎರಟಾಸ್ಥೆನೀಸನ ಒಂದರಿ" ಎಂದೇ ಅದು ಇಂದಿಗೂ ಪ್ರಸಿದ್ಧವಾಗಿದೆ; ಅಂದು ತಿಳಿದಿದ್ದ ಪ್ರಪಂಚ ಬ್ರಿಟಿಷ್ ದ್ವೀಪಗಳಿಂದ ಸಿಂಹಳದವರೆಗೂ ಕ್ಯಾಸ್ಪಿಯನ್ ಸಮುದ್ರದಿಂದ ಇಥಿಯೋಪಿಯದವರೆಗೂ ವ್ಯಾಪಿಸಿತ್ತು. ಈತ ಇದನ್ನು ಚಿತ್ರಿಸುವ ಒಂದು ಭೂಪಟ ತಯಾರಿಸಿದ; ಭೂಮಿಯನ್ನು ಸೂರ್ಯ ಪರಿಭ್ರಮಿಸುವ ತೋರ್ಕೆಯ ಸಮತಲ ಮತ್ತು ಭೂಮ್ಯಕ್ಷ-ಇವುಗಳ ನಡುವೆ ಇರುವ ಕೋನವನ್ನು (ಕ್ರಾಂತಿವೃತ್ತದ ಬಾಗು) ನಿಷ್ಕೃಷ್ಟವಾಗಿ ನಿರ್ಣಯಿಸಿದ.

ಭೂಮಿಯ ಗಾತ್ರ ನಿರ್ಣಯದಲ್ಲಿ ಇವನ ಸಂಶೋಧನೆ ಅತ್ಯಾಧುನಿಕವೂ ಸರಳವೂ ಆಗಿದೆ. ಈ ಬೌದ್ಧಿಕ ವಿಜಯದ ಹಿರಿಮೆ ಇಂದಿನ ಕಾಲದವರೆಗೆ ಜನರಿಗೆ ತಿಳಿದಿರಲಿಲ್ಲ. ಕರ್ಕಾಟಕ ಸಂಕ್ರಾಂತಿ ದಿವಸದಂದು ಸೂರ್ಯ ದಕ್ಷಿಣ ಈಜಿಪ್ಟಿನ ಸಯೀನ್ಸಿನ (ಆಧುನಿಕ ಆಸ್ವಾನ್) ನೆತ್ತಿಯ ಮೇಲೆ ಬರುವುದೆಂದೂ, ಅದೇ ಗಳಿಗೆಯಲ್ಲಿ ಅಲೆಗ್ಸಾಂಡ್ರಿಯಾದಲ್ಲಿ ಸೂರ್ಯನ ಖಮಧ್ಯದೂರ (ಜೆನಿತ್ ಡಿಸ್ಟೆನ್ಸ್) ೭° ಎಂದೂ ಗೊತ್ತಿತ್ತು. ಈ ವ್ಯತ್ಯಾಸ ಭೂಮಿನ ಹೊರಮೈ ವಕ್ರತೆಯಿಂದ ಮಾತ್ರ ಸಾಧ್ಯ; ಆದ್ದರಿಂದ ಇವೆರಡು ಸ್ಥಳಗಳ ನಡುವಿನ ದೂರ ತಿಳಿದಿದ್ದರೆ ಮತ್ತು ಭೂಮಿ ಒಂದು ದೊಡ್ಡ ಗೋಲ ಎಂದು ಭಾವಿಸಿದರೆ, ಭೂಮಿನ ತ್ರಿಜ್ಯವನ್ನು ಗಣಿಸಬಹುದು. ಈ ಸೂತ್ರದ ಪ್ರಕಾರ ಎರಸಾಸ್ಥೆನೀಸ್ (ಅಂದಿನ ಗ್ರೀಕ್ ಮಾನದಲ್ಲಿ) ಭೂಮಿಯ ಪರಿಧಿ ೨೫,೦೦೦ ಮೈಲಿಗಳಿಗಿಂದ ಸ್ವಲ್ಪ ಹೆಚ್ಚು ಇದೆ ಎಂದು ತೀರ್ಮಾನಿಸಿದ. ಇಂದಿನ ನಿಷ್ಕೃಷ್ಟ ಬೆಲೆಯೊಂದಿಗೆ ಇದನ್ನು ಹೋಲಿಸಿಸುವಾಗ ಆತನ ತರ್ಕಶುದ್ಧತೆ ನಮ್ಮನ್ನು ದಂಗುಬಡಿಸುವಂತಿದೆ. ಆದರೆ ಎಲ್ಲ ಮಹಾ ಭಾವನೆಗಳಂತೆ ಇದೂ ಸಮಕಾಲೀನ ಮೌಲ್ಯಗಳ ಬುಡ ಕಲಕಿತು. ಅಧಿಕಾರವರ್ಗ ತಿಳಿದಿದ್ದ ನೆಲ ಎಷ್ಟು ಕಿರಿಯದು ಎಂದು ಈ ಗಣನೆ ತೋರಿಸಿತು. ಇದನ್ನು ಅಧಿಕಾರಿಗಳು ಒಪ್ಪಲಿಲ್ಲ; ಭೂಮಿ ಅಷ್ಟು ವಿಶಾಲವಾಗಿರುವುದು ಸಾಧ್ಯವಿಲ್ಲ ಎಂದು ತೀರ್ಮಾನಿಸಿ ಪೊಸೈಡೋನಿಯಸ್ (ನೋಡಿ) ಕೊಟ್ಟಿದ್ದ ಬೆಲೆ (ಸು. ೧೮,೦೦೦ ಮೈಲುಗಳು) ಸರಿಯಾದದ್ದು ಎಂದು ಒಪ್ಪಿಕೊಂಡರು.

ಆಕಾಶ ದೀರ್ಘ ವೀಕ್ಷಣೆಯಿಂದ ೬೭೫ ಸ್ಥಿರನಕ್ಷತ್ರಗಳ ಒಂದು ಯಾದಿ ತಯಾರಿಸಿದ್ದನೆಂದು ತಿಳಿದಿದೆ. ತನ್ನ ೮೦ನೆಯ ಪ್ರಾಯದಲ್ಲಿ ನಿತ್ರಾಣನೂ ದೃಷ್ಟಿಹೀನನೂ ಎರಟಾಸ್ಥೆನೀಸ್ ಸ್ವಪ್ರೇರಣೆಯಿಂದ ನಿರಶನ ಶಿಕ್ಷೆ ವಿಧಿಸಿಕೊಂಡು ಅಸುನೀಗಿದ.

ಸುವರ್ಣ ಕರ್ನಾಟಕ ವರ್ಷದ ನೆನಹು