ಪುಟ:Mysore-University-Encyclopaedia-Vol-2-Part-4.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾಸ -ಉಷಸ್ ಹೆಸರಾಯಿತು.ಇವರು ಕ್ರೂರಿಗಳು.ಆಗಾಗ ಸುಲ್ತಾನನಿಗೆ ತೊಂದರೆಯನ್ನಂಟು ಮಾಡುತ್ತಿದ್ದರು.ಅಲ್ಲಾವುದ್ದೀನ್ ಸುಲ್ತಾನನಾದ ಮೇಲೆ (೧೨೯೬)ಉಲ್ಗು ಖಾನ್ ಮತ್ತು ಆತನ ಮುಖ್ಯ್ ಸಂಬಂಧಿಗಳನ್ನೆಲ್ಲ್ ಕಣ್ಣು ಕೀಳಿಸಿ ಸೆರೆಯಲ್ಲಿಡಿಸಿದ.ತನ್ನ್ ಸಿಂಹಾಸನಾಪಹರಣಕ್ಕೆ ಒಳಸಂಚು ನಡೆಸುತ್ತಿದ್ದರೆಂಬ ಕಾರಣಕ್ಕಾಗಿ ಅಲ್ಲವುದ್ದೀನ್ ಸುಮಾರು ಮೂವತ್ತು ಸಾವಿರ ನ್ಯೂ ಮುಸ್ಲಿಮರನ್ನು ಒಂದೇ ದಿನದಲ್ಲಿ ಕತ್ತರಿಸಿಹಾಕಿಸಿದನೆಂದು ಹೇಳಲಾಗಿದೆ.(ಜೆ.ಆರ್.ಆರ್)

  ಉಲ್ಲಾಸ:ಮಾನವನ ಸಂತುಷ್ಟ್ ಭಾವಗಳ ಪೈಕಿ ಒಂದು,ಪ್ರಸನ್ನತೆ,ಹಿಗ್ಗು,ಬೀಗು-ಎಂದೂ ಕರೆಯುವುದಿದೆ.ಮಕ್ಕಳು ಹುಟ್ಟಿದ ಕೂಡಲೇ ಅವುಗಳಲ್ಲಿ ಉಲ್ಲಾಸ ಕಾಣಿಸಿಕೊಳ್ಳುವುದಿಲ್ಲವೆಂಬುದು ಮನುಷ್ಯನ ಭಾವಜೀವನದ ಬೆಳೆವಣಿಗೆಯನ್ನು ಅಭ್ಯಸಿಸಿದ ಮನೋವಿಜ್ನಾನಿಗಳ ತೀರ್ಮಾನವಾಗಿದೆ. ಹುಟ್ಟಿದ ಮಗು ಯಾವುದೇ ಬಗೆಯ ಪ್ರಚೋದನೆಗೆ ಒಳಪಟ್ಟರೂ ಶರೀರೋದ್ರೇಕದ ಮೂಲಕ ಮಾತ್ರ್ ಪ್ರತಿಕ್ರಿಯೆ ತೋರಿಸಬಲ್ಲುದು.ಆದರೆ ಮಗು ಬೆಳೆದಂತೆ, ಹೆಚ್ಚು ಹೆಚ್ಚು ಕಲಿಯತೊಡಗಿದಂತೆ ಬೇರೆ ಬೇರೆ ಭಾವಗಳನ್ನು ಅನುಭವಿಸುವ ಶಕ್ತಿ ಪಡೆಯುತ್ತದೆ.ಕ್ರಮೇಣ ಸಾಮಾನ್ಯ್ ಶರೀರೋದ್ರೇಕ ಸಂಕಟ (ಡಿಸ್ಟ್ರೆಸ್) ಮತ್ತು ಅನಂದ (ಡಿಲೈಟ್) ಎಂಬೆರಡು ಭಾವಗಳು ತಲೆದೋರುತ್ತವೆ.ಮುಂದೆ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಕಂಡು ಬರುವ ಎಲ್ಲ ಭಾವಗಳಿಗೂ ಇವು ತಳಹದಿಯಾಗುತ್ತವೆ ಬೆಳೆವಣಿಗೆ ಮತ್ತು ಕಲಿಕೆ ಮುಂದುವರಿದಂತೆ ಅನಂದ ಭಾವದಿಂದ ಕವಲೊಡೆದುಕೊಂಡು ಬೇರೊಂದು ಸ್ವತಂತ್ರ ಭಾವ ಎನ್ನಿಸಿಕೊಳ್ಳುವುದೇ ಉಲ್ಲಾಸ.ಅನೇಕ ಮನೋವಿಜ್ನಾನಿಗಳ ಪ್ರಕಾರ ಉಲ್ಲಾಸ ಬೇರೆ ಯಾವ ವಿಶಿಷ್ಟ್ ಭಾವಕ್ಕೂ ಎಡೆ ಮಾಡಿಕೊಡುವಂತೆ ಕಂಡುಬರುವುದಿಲ್ಲ.ಇದು ಹೆಚ್ಚು ಸಂಕೀರ್ಣವಗಬಹುದು.ಅಷ್ಟೇ.
     ಶಾರೀರಿಕ ದೃಷ್ಟಿಯಿಂದ ದೊಡ್ಡವರಲ್ಲಿ ಎಲ್ಲಭಾವಗಳೂ ನರಮಂಡಲದ ಅತಿಎಚ್ಚರದ(ಅರೌಸಲ್)ಸ್ಥಿತಿಗಳು.ಆದರೆ ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ನರಮಂಡಲ ಎಚ್ಚರದ ಎರಡೇಅವಸ್ಥೆಗಳನ್ನು ತೋರಿಸುತ್ತದೆ;ನೋವು,ಚಳಿ,ಹಸಿವೆ ಇತ್ಯಾದಿ ಅನಾನುಕೂಲ ಸ್ಥಿತಿಯಲ್ಲಿ ನರಮಂಡಲ ಅತಿ ಎಚ್ಚರದ ಸ್ಥಿತಿಗೆ ಹೋಗುತ್ತದೆ;ಎತ್ತಿಕೊಂಡಾಗ,ಹಾಲೂಡುವಾಗ,ಒಟ್ಟಿನಲ್ಲಿ ಮಗು ಸಂತೃಪ್ತವಾದಾಗ ನರಮಂಡಲ ಎಚ್ಚರ ಸ್ಥಿತಿಗೆ ಕನಿಷ್ಠಮಟ್ಟಕ್ಕೆ ಇಳಯುತ್ತದೆ.ಅಂದರೆ ಆರು ತಿಂಗಳವರೆಗೂ ಮಕ್ಕಳಲ್ಲಿ ಸಂತುಷ್ಟ್ ಭಾವ ಕಡಿಮೆ ಎಚ್ಚರದ ಸ್ಥಿತಿಯಲ್ಲೂ ಅಸಂತುಷ್ಟ್ ಭಾವ ಅತಿ ಎಚ್ಚರದ ಸ್ಥಿತಿಯಲ್ಲೂ ಇರುತ್ತದೆ.ಆದರೆ ಒಂದು ವರ್ಷದ ಹೊತ್ತಿಗೆ ಅನಂತರ ಸಂತುಷ್ಟಸ್ಥಿತಿಯಲ್ಲೂ ನರಮಂಡಲ ಅತಿಯಾಗಿ ಎಚ್ಚರಗೊಳ್ಳುತ್ತದೆ.ಅಂದರೆ ಬೆಳೆವಣಿಗೆ ಮುಂದುವರಿದಂತೆಲ್ಲ ಆನಂದ,ಸಂತೋಷ,ಉತ್ಸಾಹ,ಕೋಪ, ತಾಪ, ಸಂಕಟ,ನೋವು ಇತ್ಯಾದಿ ಎಲ್ಲ ಭಾವಗಳನ್ನು ಅನುಭವಿಸುವಾಗಲೂ ನರಮಂಡಲ ಉದ್ರೇಕಗೊಳ್ಳುತ್ತದೆ. ಹೀಗೆ ಉಲ್ಲಾಸ ಕೂಡ ನರಮಂಡಲದ ಎಚ್ಚಸ್ಥಿತಿಗಳಲ್ಲಿ ಒಂದು,ವ್ಯಕ್ತಿಯೊಬ್ಬ್ ಉಲ್ಲಾಸ, ಆನಂದಗಳನ್ನು ಅನುಭವಿಸುತ್ತಿದ್ದಾನೊ ಅಥವಾ ಸಂಕಟ,ಕೋಪಗಳನ್ನು ಅನುಭವಿಸುತ್ತಿದ್ದಾನೊ ಎಂಬುದು ಮುಖ್ಯ್ವಾಗಿ ಯಾವ ಪ್ರಚೋದನೆಗಳು,ಸನ್ನಿವೇಶಗಳು ನರಮಂಡಲವನ್ನು ಚುರುಕುಗೊಳಿಸುತ್ತಿವೆ ಎಂಬುದನ್ನು ಅವಲಂಬಿಸುತ್ತದೆ. ಜೀವದ ಬೆಳವಣಿಗೆ ಮತ್ತು ಪರಿಸರದ ತರಬೇತಿ-ಇವುಗಳ ಪರಿಣಾಮದಿಂದ ಕೆಲವು ತರದ ಪ್ರಚೋದನೆಗಳು ಆನಂದ ಮತ್ತು ಉಲ್ಲಾಸದಾಯಕವಾಗಿಯೂ ಕೆಲವು ತರದ ಪ್ರಚೋದನೆಗಳು ಸಂಕಟ ಮತ್ತು ತಾಪದಾಯಕವಾಗಿಯೂ ತೋರುತ್ತವೆ.
    ಆರೋಗ್ಯಕರವಾದ ಮತ್ತು ಹೆಚ್ಚು ಸಾಮಾನ್ಯವಾದ ಉಲ್ಲಾಸ ಭಾವದ ಬಗ್ಗೆ ದುರದೃಷ್ಟವಶಾತ್ ಹೆಚ್ಚು ಮನೋವೈಜ್ನಾನಿಕ ಸಂಶೋಧನೆ ಆಗ್ಗಿಲ್ಲ್.ಆಗಿರುವ ಹೆಚ್ಚಿನ ಸಂಶೋಧನೆ ಉನ್ಮಾದದ-ಆಂದರೆ ವಿಷಾದಮನೋವಿಕೃತಿಯಲ್ಲಿ ಕಾಣಿಸಿಕೊಳ್ಳವ ಅತಿ ಉಲ್ಲಾಸದ-ಬಗ್ಗೆ ಮಾತ್ರ ಗಂಭೀರ ಸ್ವರೂಪ ಪಡೆಯುವ ಈ ಮನೋರೋಗದಲ್ಲಿ ರೋಗಿ ಒಮ್ಮೆ ಉನ್ಮತ್ತನಾಗಿ ಇನ್ನೊಮ್ಮೆ ವಿಷಣ್ಣನಾಗಿ ವರ್ತಿಸುತ್ತಾನೆ.ಈ ರೋಗಿ ಉನ್ಮತ್ತಸ್ಥಿತಿಯಲ್ಲಿರುವಗ ಅನುಭವಿಸುವ ಮುಖ್ಯವಾದ ಭಾವವೆಂದರೆ ಅವಾಸ್ತವಿಕವಾದ ಉಲ್ಲಾಸ. ಉನ್ಮತ್ತರೋಗಿ ಈ ಅತಿಯಾದ ಉಲ್ಲಾಸ,ಕಾರಣವಿಲ್ಲದ ಖುಷಿ,ಅರ್ಥವಿಲ್ಲದ ಆನಂದ, ಹಿಡಿತಡೆ ಇಲ್ಲದ ಉತ್ಸಾಹ ಅಪಾರವಾದ ಹೆಮ್ಮೆ ಹುಚ್ಚಧೈರ್ಯ,ಕೆಟ್ಟ ಶಕ್ತಿಸಾಮರ್ಥ್ಯ-ಇವುಗಳಿಂದಾಗಿ ತನಗೂ ಜನರಿಗೂ ಅಪಾಯಕಾರಿಯಾಗುತ್ತಾನೆ. ಪರಿಣಾಮವಾಗಿ ಈ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ.(ನೋಡಿ-ಉನ್ಮಾದರೋಗ)
          ಕೆಲವು ರಾಸಾಯನಿಕ ದ್ರವ್ಯಗಳು,ಔಷಧಿಗಳು ಆರೋಗ್ಯವಂತರಲ್ಲೂ ಕೃತಕವಾಗಿ ಉಲ್ಲಾಸವನ್ನು ಉಂಟುಮಡುತ್ತದೆ.ಮಧ್ಯಮ ಅಂತಿಮ ಪರಿಣಾಮ ಸ್ವೀಕರಿಸಿದ ಮೊದಲ ಹಂತದಲ್ಲಿ ಉಲ್ಲಾಸ ಉಂಟಾಗುತ್ತದೆ. ಹಾಗೆಯೇ ಕೊಕೇನ್,ಗಾಂಜ,ಅಫೀಮು,ಮಾರ್ಫೀನ್,ಇತ್ಯಾದಿ ದ್ರವ್ಯಗಳು ಉಲ್ಲಾಸಕಾರಿಗಳು.(ನೋಡಿ-ಆಲ್ಕೋಹಾಲ್-ಪಾನೀಯಗಲು):(ನೋಡಿ-ಕುಡುಕತನ)
          ಅಭೀಷ್ಟ್ಸಿದ್ಧಿಯಾದಾಗ,ಹಿರಿಯನ್ನು ಸಾಧಿಸಿದಾಗ,ಪುರಸ್ಕಾರ ಪಡೆದಾಗ.ಪ್ರಶಂಸೆಗೆ ಪಾತ್ರನಾದಾಗ ತನ್ನನ್ನು ಎಲ್ಲರೂ ಪ್ರೀತಿಸುತ್ತಾರೆ,ಗೌರವಿಸುತ್ತಾರೆ ಎಂಬ ಭಾವ ಪುಷ್ಟಿಗೊಂಡಗ ಮನುಷ್ಯ ಉಲ್ಲಾಸಗೊಳ್ಳುತ್ತಾನೆ.ಸಹಜವಾದ ಆರೋಗ್ಯಕರವಾದ ಉಲ್ಲಾಸ ಒಳ್ಳೆಯ ವ್ಯಕ್ತಿತ್ವದ ಲಕ್ಷಣ.ವಾಸ್ತವಿಕತೆಗೆ ಹೊಂದಿಕೊಂಡಾಗ ಈ ಭಾವ ಅನೇಕ ಸಾಧನೆಗಳಿಗೆ ಮೂಲವಾಗಬಹುದು. ಮಕ್ಕಳಲ್ಲಿ ಉಲ್ಲಾಸ ಭಾವವನ್ನು ಉತ್ತೇಜಿಸುವುದು ಒಳ್ಳೆಯದು.ಸದಾಕಾಲವೂ ಅವರನ್ನು ಉಲ್ಲಾಸಿತರನ್ನಾಗಿಟ್ಟಲ್ಲಿ ಅವರ ವ್ಯಕ್ತಿತ್ವ ಸರ್ವತೋಮುಖವಾಗಿ ಬೆಳೆಯುತ್ತದೆ.
          
         ಉಲ್ಲಾಳ:ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನಲ್ಲಿ ಮಂಗಳೂರುರಿನಿಂದ 8ಕಿಮೀ ದೂರದಲ್ಲಿ ನೇತ್ರಾವತಿ ದಕ್ಷಿಣ ದಂಡೆಯ ಮೇಲಿರುವ ಊರು.ಇಂದು ಮಂಗಳೂರು ಪಟ್ಟಣದ ಸಮೂಹದಲ್ಲೇ ಸೇರಿಹೋಗಿದೆ.
  ಪುತ್ತಿಗೆಯ ಚೌಟ ಅರಸುಮನೆತನದ ಒಂದು ಶಾಖೆಯ ರಾಜರು ಉಲ್ಲಾಳವನ್ನು ಆಳುತ್ತಿದ್ದರು.ಇಲ್ಲಿಯ ಸೋಮನಾಥ ಅವರು ಕುಲದೇವರು.ಮ್೧೬ಮ್ನೆಯ ಶತಮಾನದಲ್ಲಿ ರಾಜ್ಯಭಾರ ಮಾಡುತ್ತಿದ್ದ ಅಬ್ಬಕ್ಕ ಈ ಶಾಖೆಯಲ್ಲಿ ಪ್ರಸಿದ್ಧಳು.ವಿದೇಶಿಯರು ಬಲವನ್ನು ಮುರಿಯಲು ಸರ್ವಪ್ರಯತ್ನಮಾಡಿದ ಈ ವೀರರಾಣಿ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದಳು.ಆಕೆಯ ತರುವಾಯ ಉಲ್ಲಾಳ ರಾಜ್ಯವನ್ನಾಳಿದ ಆಕೆಯ ಮಗಳು ಕಾರ್ಕಳದ ಅರಸರೊಡನೆ ಯುದ್ಧ ಮಾಡಿ ಸತ್ತಳು.ಆಕೆಯ ಮಗ ಚಿಕ್ಕರಾಯ (1606-28)ಬಿದನೂರು ವೆಂಕಟಪ್ಪನಾಯಕನ ನೆರವನ್ನು ಪಡೆದು ಕಾರ್ಕಳದ ಅರಸನನ್ನು ಸೋಲಿಸಿದ (1608).ಭೋಜರಾಜನ ಆಳ್ವಿಕೆಯಲ್ಲಿ (1630-44) ಉಲ್ಲಾಳ ಬಿದನೂರು ಸಂಸ್ಥಾನಕ್ಕೆ ಸೇರಿತು.
    ಉಲ್ಲಾಳದಲ್ಲಿ ಕೋಟೆ ಮತ್ತು ಅರಮನೆಯ ಅವಶೇಷಗಳಿವೆ. ಸೋಮನಾಥ ದೆವಾಲಯದಲ್ಲಿ ಇಟಾಲಿಯನ್ ಶೈಲಿಯ ಹಲವು ಸುಂದರ ಶಿಲ್ಪಗಳಿವೆ. ಊರಿನಿಂದ ಸು.9ಕಿಮೀ ದೂರದಲ್ಲಿ ಉಲ್ಲಾಳ ಅರಸರ ಭದ್ರತಾಣವಾಗಿದ್ದ ಉಚ್ಚಿಲ ಕೋಟೆ ಮತ್ತು ಮಣೇಲ ಅರಮನೆ ಇವೆ .ಕಾರ್ಕಳದ ಭೈರರಸ ಒಡೆಯರೂ ಇಲ್ಲಿ ಅರಮನೆಗಳನ್ನು ಕಟ್ಟಿದ್ದರೆಂದು ಹೆಳಿಕೆ.
   ಉಲ್ಲಾಳದಲ್ಲಿ ಸೈಯದ್ ಮಹಮ್ಮದ್ ಷರೀಫ ಮದನೀ ಅವರ ದರ್ಗಾ ಬಹುಪ್ರಸಿದ್ಧ. ಈ ಸಂತರು ಸು400 ವರ್ಷಗಳ ಹಿಂದೆ ಮದೀನದಿಂದ ಬಂದು ಇಲ್ಲಿನ ಮೇಲಂಗಡಿ ಮಸೀದಿಯಲ್ಲಿ ನೆಲಸಿ ಇಲ್ಲಿಯೇ ಮದುವೆಯಾಗಿ ಅನೇಕಪವಾಡಾಗಳನ್ನು ಮೆರೆಸಿ ಜನಮನ್ನಣೆ ಗಳಿಸಿದರೆಂದು ಪ್ರತ್ತೀತಿ. ಇವರ ಗೌರವಾರ್ಥ ಐದು ವರ್ಷಗಳಿಗೊಮ್ಮೆ ಉರುಸ್ ನಡೆಯುತ್ತದೆ. ಎಲ್ಲ ಜಾತಿಮತಗಳ ಜನ ಇಲ್ಲಿಗೆ ಬರುತ್ತಾರೆ. ಸಂತರ ಮರಣಾನಂತರ ಕಟ್ಟಿದ ದರ್ಗಾ ನಾಲ್ಕು ಬಾರಿ ಪುನರ್ನಿಮಾರ್ಣವಾಯಿತು. ಇಂದು ಇವರು ಭವ್ಯ ಕಟ್ಟಡ 1970ರ ರಚನೆ.ಈ ದರ್ಗಾದ ಆಡಳಿತವರ್ಗ ಅರಬ್ಬೀ ಕಾಲೇಜು ಮತ್ತು ಪ್ರೌಢಶಾಲೆಯನ್ನು ನಡೆಸುತ್ತಿದೆ.16ನೆಯ ಶತಮಾನದಲ್ಲಿ ಫ್ರಾನ್ಸಿಸ್ಕನ್ ಪಾದ್ರಿಗಳು ಕಟ್ಟಿಸಿದ ಚರ್ಚ್ ನಗರದಲ್ಲಿದೆ.ಕವಿ ಉಲ್ಲಾಳ ಮಂಗೇಶರಾಯರು ಈ ಊರಿನವರು.
         ಉಶೀನರ:1 ಯಾದವ ವಂಶದ ಒಬ್ಬ ದೊರೆಯ ಹೆಸರು.2 ಚಂದ್ರವಂಶದ ಅನುಕುಲದಲ್ಲಿ ಜನಿಸಿದ ಒಬ್ಬ ರಾಜ.ಭೋಜ ದೇಶವನ್ನು ಆಳುತ್ತಿದ್ದ. ಯಯಾತಿಯ ಮಗಳಾದ ಮಾಧವಿ ಇವನ ಪತ್ನಿ,ತ್ಯಾಗಶೀಲನೆಂದು ಪ್ರ್ಸಿದ್ಧನಾಗಿರುವ ಶಿಬಿ ಚಕ್ರವರ್ತಿ ಇವನ ಮಗ.3 ಭಾಗವತದ ಪ್ರಕಾರ ಅನುರಾಜನ ಕುಲದಲ್ಲಿ ಜನಿಸಿದ ಸೃಂಜಯನ ಮಗನಾದ ಮಹಾಮನಸನ ಮಗ.4 ಒಂದು ದೇಶದ ಹೆಸರು.
       ಉಷಸ್:ಉಷೆ,ಉಷಾದೇವಿ ಎಂದು ಪ್ರಸಿದ್ಧಳಾಗಿರುವ ವೈದಿಕ ದೇವತೆ.ಮುಂಬೆಳಗಿನ ಸಾಮ್ರಾಜ್ನಿ.ಜ್ಯೋತಿರ್ಮಂಡಲಗಳಲ್ಲೆಲ್ಲ ಅತ್ಯಧಿಕವಾದ ತೇಜಸ್ಸುಳ್ಳವಳು.ದೇವಮಾತೆಯಾದ್ದರಿಂದ ದೇವತೆಗಳಿಗೂ ಪೂಜ್ಯಳು. ಇವಳ ಸ್ವರೂಪ ಎರಡು ವಿಧ. ಜಗತ್ತನ್ನು ಆಕರ್ಷಿಸುವ ಭವ್ಯವಾದ ಲೌಕಿಕ ಸ್ವರೂಪ ಒಂದಾದರೆ,ಗುಹ್ಯವೂ ಸತ್ಯಾತ್ಮಕವೂ ಆದ ದಿವ್ಯಸ್ವರೂಪ ಮತ್ತೋಂದು.
  ವಸ್ತ್ರಾಲಂಕಾರಗಳಿಂದ ಭೂಷಿತಳಾದ ಪತ್ನಿ ಪತಿಯ ಆಗಮನವನ್ನು ನಿರೀಕ್ಷಿಸುವಂತೆ ಉಷೆ ನಾನಾ ವರ್ಣಾತ್ಮಕವಾದ ದಿವ್ಯ ಪ್ರಭೆಯಿಂದ ಶೋಭಿಸುತ್ತ ಪತಿಯಾದ ಆದಿತ್ಯನನ್ನು ನಿರೀಕ್ಷಿಸುತ್ತಿದಾಳೆ.ಸ್ನಾನಮಾಡಲಿಳಿದ ಸುಂದರ ತರುಣೆ ಲಜ್ಜೆಯಿಂದ ಬಳುಕುತ್ತ ಮೇಲೆದ್ದು ಬರುವಂತೆ ಆಕರ್ಷವಾದ ರೂಪವುಳ್ಳ ಈಕೆ ತನ್ನ ದಿವ್ಯ ಸೌಂದರ್ಯವನ್ನು ಪ್ರಕಾಶಪಡಿಸುತ್ತ ಅಂತರಿಕ್ಷದಲ್ಲಿ ಆವಿರ್ಭವಿಸುತ್ತಾಳೆ. ನರ್ತನಮಾಡುವ ಸ್ತ್ರೀಯಂತೆ ರೂಪಲಾವಣ್ಯಗಳನ್ನು ತೋರಿಸುತ್ತಾಳೆ.ಹೀಗೆಂದು ಉಷೆಯನ್ನು ಬಣ್ಣಿಸಲಾಗಿದೆ.
    ಕೇವಲ ಚಿತ್ತಾಕರ್ಷಕವಾದ ಸೌಂದರ್ಯ ಮಾತ್ರವಲ್ಲದೆ ಜಗದುಪಕಾರಕವಾದ ತೇಜಸ್ಸನ್ನೂ ಈಕೆ ಹೊಂದಿದ್ದಾಳೆ.ತಾಯಿ ಮಕ್ಕಳನ್ನು ಆದರದಿಂದ ಭೋಜನಕ್ಕೆ ಎಬ್ಬಿಸುವಂತೆ ಜಗತ್ತನ್ನು ಎಚ್ಚರಗೊಳಿಸಿ ಕಾರ್ಯನಿರತವಾಗುವಂತೆ ಮಾಡುತ್ತಾಳೆ.ಆಜ್ನಾನನಾಶಕಳಾಗಿ ಜ್ನಾನಪ್ರೇರಕಳಾಗುತ್ತಾಳೆ.ಋತುಮಾರ್ಗವನ್ನನುಸರಿಸಿ ದಿವ್ಯ ನಿಯಮವನ್ನು ಪಾಲಿಸಿ ದೇವಮಾನವಾದಿಗಳಿಗೆಲ್ಲ ಮಾರ್ಗದರ್ಶಕಳಾಗಿದ್ದಾಳೆ.
     ಅದರೆ, ಲೋಕಕ್ಕೆಲ್ಲ ಚೈತನ್ಯವನ್ನೂ ಬೆಳಕನ್ನೂ ಕೊಟ್ಟು ಜೀವಕಳೆಯನ್ನು ತುಂಬುತಕ್ಕ ಉಷೆ ತಾನು ಮಾತ್ರ ನಿತ್ಯತಾರುಣ್ಯವನ್ನು ಹೊಂದಿ ತನ್ನೆದುರಿಗೆ ಹುಟ್ಟಿ ಬೆಳದ ಸಕಲ ಜಂತುಗಳಿಗೂ ಮುಪ್ಪನ್ನುಂಟುಮಾಡಿ ಮೃತರಾಗುವಂತೆ ಮಾಡುತ್ತಾಳೆ. ಈ ವಿಷಯದಲ್ಲಿ ಇವಳಿಗೆ ಕರುಣೆಯೇ ಇಲ್ಲ.