ಪುಟ:Mysore-University-Encyclopaedia-Vol-4-Part-1.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ಕರ್ನಾಟಕ ಜನಪದ ನೃತ್ಯ ಸರಿದು ಕೂಟನೃತ್ಯದಲ್ಲಿ ಭಾಗವಹಿಸುತ್ತಾರೆ.ಕುಂದಾಪುರ,ಉಡುಪಿಯ ಹರಿಜನರಲ್ಲಿ ೫-೬ ಯುವಕರ ಚಿಕ್ಕ ಕೋಲುಗಳನ್ನು ಹಿಡಿದು ಸರಳವಾಗಿ ಹೆಜ್ಜೆ ಹಾಕಿ ಕುಣಿಯುತ್ತಾರೆ. ಹಿನ್ನೆಲೆ ಸಂಗೀತಕ್ಕೆ ಇಬ್ಬರು ಚರ್ಮವಾದ್ಯದವರು,ಒಬ್ಬ ಕೊಳಲ್ಲು ಬಾರಿಸುವವನು ಇರುತ್ತಾರೆ.ಹೆಂಗಸೊಬ್ಬಳು ದೊಡ್ದ ತಾಳಗಳನ್ನು ಬಾರಿಸುತ್ತಾಳೆ.ಸಂಗೀತದ ಲಯ ಹೆಚ್ಚಾದಂತೆ ನೃತ್ಯಗಾರರ ಆವೇಶ ಹೆಚ್ಚಾಗುತ್ತದೆ.ಪುತ್ತೂರು ತಾಲ್ಲೂಕಿನ ಮೇರಾ ಜನರಲ್ಲಿ ಹೆಂಗಸರು ಮಾಡುವ ಕೂಟನೃತ್ಯಗಳಿವೆ.ಇಬ್ಬರು ಗಂಡಸರು ದುಡಿಬಡಿದಂತೆ ಬಿಳಿ ಸೀರೆ ಉಟ್ಟ ಹೆಂಗಸರು ಕೈಚಪ್ಪಾಳೆಗಳಿಂದ ಹಿಂದೆಮುಂದೆ ಬಳುಕಿ ಬಾಗಿ ವಾದ್ಯಗಾರರ ಸುತ್ತಲೂ ಕುಣಿಯುತ್ತಾರೆ.ಅವರ ಸರಳ ಲಲಿತ ಚಲನೆಗಳಲ್ಲಿ ಸ್ನೇಹಪರವಶತೆಯ ಆನಂದ ಉಕ್ಕಿ ಹರಿಯುತ್ತದೆ.ರಾಣಿಯಾರ್ ಪಂಗಡದವರ ಭಕ್ತಿ ಶಕ್ತಿಗಳಿಂದ ಕೋಲಾಟ ಮಾಡುವಾಗ ಅವರ ಕೋಲುಗಳೂ ಕಾಲುಗೆಜ್ಜೆಗಳೂ ಮಾತನಾಡುವಂತೆ ಭಾಸವಾಗುತ್ತದೆ.ಕಾರ್ಕಳ ತಾಲ್ಲೂಕಿನ ಕುಡುಬಿಯರಲ್ಲಿ ಸುಂದರ ಕೂಟ ನೃತ್ಯವಿದೆ.ಗಂಡಸರು ಬಿಳಿ ಬಟ್ಟೆಯುಟ್ಟು ಕೆಂಪು ರುಮಾಲು ಸುತ್ತಿ,ಕೈಯಲ್ಲಿ ಮಣ್ಣಿನ ವಾದ್ಯ ಹಿಡಿದು ಎರಡು ಸಾಲಾಗಿ ನಿಂತು ಹಾಡುತ್ತ ಸಂಭಾಷಣೆ ನಡೆಸುತ್ತಾರೆ. ಪಶ್ಚಿಮ ಘಟ್ಟದ ಮಲೆಕುಡಿಯರ ಪಂಗಡಗಳಲ್ಲಿ ವಿಶೇಷ ತರಹದ ಒಂದು ಭೂತನೃತ್ಯವಿದೆ.ಮೂವರು ಯುವಕರು ಖಡ್ಗಾಯುಧರಾಗಿ ಕಹಳೆ-ಕೊಂಬು ವಾದ್ಯಕ್ಕೆ ಹೊಂದಿದಂತೆ ಮೈಮರೆತು ಕುಣಿಯುತ್ತಾರೆ.ಈ ನೃತ್ಯ ಅನಾಗರಿಕರ ಯುದ್ಧನೃತ್ಯವನ್ನು ಹೋಲುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತಗಳ ಕುಣಿತ ಹೆಸರಾದುದು.ಬೇರೆ ಬೇರೆ ಜನರು ಬೇರೆ ಬೇರೆ ಭೂತಗಳನ್ನು ನಂಬಿ ಪೂಜಿಸುತ್ತಾರೆ.ವರ್ಷದ ನಾನಾಕಾಲಗಳಲ್ಲಿ ಈ ದೆವ್ವಗಳಿಗೆ ಜಾತ್ರೆ ನಡೆಯುತ್ತದೆ.ದೆವ್ವದ ಆವೇಶ ಪಡೆಯುವವರ ಜಾತೀಯ ಬೇರೊಂದಿದೆ.ಈ ನೃತ್ಯಗಳೆಲ್ಲ ಭಕ್ತಿಪ್ರಧಾನವಾದುವು.ಭಕ್ತರು ತಾವು ನಂಬುವ ಭೂತಗಳ ತೃಪ್ರಿಗಾಗಿ ಅವನ್ನು ಆಹ್ವಾನಿಸಿ,ಉಣಿಸುವರು.ಭೂತದ ಆವೇಶ ಪಡೆಯುವ ಪೂಕಾರಿ ವಿಶಿಷ್ಟ ವೇಷಭೂಷಣಗಳನ್ನು ಧರಿಸಿ ಬಣ್ಣ ಲೇಪಿಸಿಕೊಂಡು ವೀರಾವೇಶದಿಂದ ಕುಣಿದು ತನ್ನನ್ನೇ ಮರೆಯುತ್ತಾನೆ. ಆತನ ಬಾಯಿಂದ ಬರುವ ಮಾತುಗಳು ಭೂತದ ಮಾತುಗಳೆಂಬ ಭ್ರಾಂತಿ ಜನರಲ್ಲಿ ಮಾಡುತ್ತದೆ.ಬೇರೆ ಬೇರೆ ಭೂತಗಳಿಗೆ ತಕ್ಕ ನಡೆ,ನೃತ್ಯ,ವೆಷ,ಕಿರೀಟ,ಭೂಷಣಗಳಿರುತ್ತನೆ.ಸಾಮಾನ್ಯವಗಿ ಭೂತಗಳ ಉಗ್ರಸ್ವರೂಪ ಆಯೂ ವೇಷದಲ್ಲಿ ವ್ಯಕ್ತವಾಗುತ್ತದೆ.ಇಂಥ ನೃತ್ಯ ಸಂಪ್ರದಾಯದಲ್ಲಿ ನಾಗನೃತ್ಯ ವಿಚಿತ್ರವಾದುದು.ವೈದ್ಯರೆಂಬ ಪೂಜಾರಿಗಳ ಈ ನೃತ್ಯಕ್ಕೆ ನಾಗಮಂಡಲವೆನ್ನುತ್ತರೆ.ರಂಗಮಂಟಪದಲ್ಲಿ ಮಹಾಶೇಷನ ರಂಗೋಲಿಯನ್ನು ಹಾಕಿಸುತ್ತರೆ.ಪೂಜಾರಿ ಕೆಂಪು ರೇಷ್ಮೆಯನ್ನುಟ್ಟು ಚದುರಿದ ಕೂದಲನ್ನು ಬಿಟ್ಟು ಸುಬ್ಬರಯನಾಗಿ ಬಂದು ನಿಲ್ಲುತ್ತಾನೆ.ಅವನ ಮುಂದೆ ಪ್ರಕೃತಿ ಪುರುಷ ಸುಚಕವಾಗಿ ಅರ್ಧ ಗಂಡಸಿನ ಅರ್ಧ ಹೆಂಗಸಿನ ಉಡುಪನ್ನು ಧರಿಸಿದ ನೃತ್ಯಗಾರ ನಿಂತಿರುತ್ತಾನೆ.ಹಿಮ್ಮೇಳದ ಗಾಯಕರು ದೇವರು ಲೀಲೆಗಳನ್ನು ಹಾಡುತ್ತಾರೆ.ಒಂದು ಡಮರು,ಒಂದು ಜೊತೆ ತಾಳಕ್ಕೆ ಅನುಗುಣವಾಗಿ ನಾಗದ ಆವೇಶ ತಂದುಕೊಂಡು ದೇಹಕ್ಕೆ ಮೂಳೆಗಳೇ ಇಲ್ಲವೆಂಬಂತೆ ನಾಗನರ್ತನ ನರ್ತಿಸುವಾಗ ಅದು ಪ್ರೇಕ್ಷಕರಿಗೆ ರೋಮಾಂಚನಕಾರಿಯಾಗಿ ಪರಿಣಮಿಸುತ್ತದೆ.ನಾಗಬ್ರಹ್ಮನೇ ಪ್ರತ್ಯಕ್ಷವಾಗಿ ಎದುರಿಗೆ ಬಂದಂತೆ ಭಾಸವಾಗುತ್ತದೆ. ಕನ್ನಡ ನಾಡಿನ ಯಕ್ಷಗಾನ ಬಯಲಾಟದ ಪರಂಪರೆ ಆ ಸಂಸ್ಕೃತಿಯ ಅತ್ಯಂತ ಸಂದರವಾಗಿ ಅಂಗವಾಗಿದೆ.ಯಕ್ಷಗಾನ ಬಯಲಾಟ ಪ್ರೇಕ್ಷಣೀಯ ನೃತ್ಯ ಸಂಪ್ರದಾಯ. ಮಹಾಭಾರತ ರಾಮಾಯಣಾದಿ ಕಥಾನಕಗಳಲ್ಲಿ ಬರುವ ಪಾತ್ರಗಳು ಅತಿಮಾನುಷ ವೇಷಭೂಷಣ.ಕಿರೀಟ,ಬಣ್ಣಲೇಪನಗಳಿಂದ ಕೂಡಿದ್ದು ಪ್ರೇಕ್ಷಕರನ್ನು ಮೈಮರೆಸುತ್ತಾರೆ.ತಾಳ ನೃತ್ಯಕ್ಕೂ ಸಂಗೀತಕ್ಕೂ ಹೊಂದಿಕೊಂಡು ಭಾವಾವೇಶವನ್ನೂ ಸ್ಪೂರ್ತಿಯನ್ನೂ ಒದಗಿಸತ್ತದೆ.ಸಾಹಿತ್ಯ ಪಂಡಿತಪಾಮರರನ್ನು ರಂಜಿಸುವಂತಿರುತ್ತದೆ.ಭಾಗವತರು ಚಂಡೆ,ಮದ್ದಳೆ,ಶ್ರುತಿ,ತಾಳಗಳೊಡನೆ ಕಥೆಯನ್ನು ಆರಂಭಿಸುತ್ತಾರೆ.ಇಬ್ಬರು ಎತ್ತಿಹಿಡಿದ ಪರದೆಯ ಹಿಂದಿನಿಂದ ಅದ್ಭುತವೇಷಧಾರಿಗಳು ನೃತ್ಯಕ್ಕೆ ಸಿದ್ಧರಾಗುತ್ತಾರೆ.ಪಾತ್ರಧಾರಿಗಳು ನರ್ತಿಸುತ್ತಿರಲು ಭಾಗವತರು ಜಾಗಟೆ ಕೋಲುಗಳಿಂದ ತಾಳ ಸೂಚಿಸುತ್ತ ಪ್ರಸಂಗದ ಸಾಹಿತ್ಯವನ್ನು ಹಾಡಿ ಸಭಿಕರಗಿ ಹಾಸ್ಯಗಾರರಾಗಿ ಕಥಾಸರಣಿಯನ್ನು ಮುಂದುವರಿಸುತ್ತಾರೆ.ಯಕ್ಷಗಾನ ವೀರರಸ ಪ್ರಧಾನವಾದದ್ದು.ಅಲ್ಲಿನ ವೇಷಗಳ ಅಲಂಕಾರಾದಿಗಳಲ್ಲಿ ಚಿತ್ರಕಲಾಪ್ರುಡ್ಡಿಮೆಯಿದೆ;ಧರ್ಮವಿಷಯವನ್ನು ಸರಳ ಮಾತಿನಲ್ಲಿ ಉದಾಹರಣೆ ಸಹಿತ ಕಥಾರೂಪಕವಾಗಿ ಬೋಧಿಸುವ ಮಧುರ ಸಂಭಾಷಣೆಯಿದೆ.ವೇದೋಪನಿಷತ್ತುಗಳ ತತ್ತ್ವಾರ್ಥವನ್ನು ಯಕ್ಷಗಾನ ಸುಲಭವಾಗಿ ತಿಳಿಸುತ್ತದೆ.ದೇದೀಷ್ಯಮಾನರಾದ ಪುರಾಣವ್ಯಕ್ತಿಗಳ ಪಾತ್ರಧಾರಿಗಳು ರಂಗಸ್ಥಳದ ಎತ್ತರವಾದ ಕಾಲು ದೀಪಗಳ,ದೀವಟಿಗೆಗಳ ಬೆಳಕಿನಲ್ಲಿ ಸಂಜೆಯಿಂದ ಮುಂಜಾನೆಯವರೆಗೆ ನರ್ತಿಸುವಾಗ ಪ್ರೇಕ್ಷಕರು ತನ್ಮಯರಾಗುತ್ತಾರೆ.ಯಕ್ಷಗಾನ ಬಯಲಾಟ ಅವರನ್ನು ಮಾಯೆಯ ಸುಂದರ ಕಲಾಜಗತ್ತಿಗೆ ಕೊಂಡೊಯ್ಯುತ್ತದೆ. ಗೊಂಬೆ ಕುಣೆತಗಳು ಗಾರುಡಿ ಗೊಂಬೆ:ಮೆರವಣಿಗೆಯ ಒಂದು ಸಾಲಿನಲ್ಲಿ ಮೊದಲು ಕಾಣುವುದು ದೊಡ್ಡ ಗೊಂಬೆಗಳು-ಒಂದು ಹೆಣ್ಣು ಒಂದು ಗಂಡು.ಅವುಗಳ ಮೈ ಬಿದಿರ ಬುಟ್ಟಿಗಳದ್ದು.ಮೇಲಿನ ಹೊದಿಕೆ ಹರಕು ಸೀರೆ,ತಲೆಗೆ ಒಂದು ಮಡಕೆ.ರಂಗಕ್ಕೆ ಸಿದ್ದವಾದ ಮೇಲೆ ಅವಕ್ಕೆ ಗಾರುಡಿಗತನದ ಆವೇಶ ಬರುತ್ತದೆ.ಅವುಗಳ ಜಡ ದೇಹದಲ್ಲಿ ಜೀವ ಸುಳಿದಾಡುತ್ತದೆ.ಅವಕ್ಕೆ ಹೀಗೆ ಜೀವ ಕೊಡುವವ ಅವನ್ನು ಕುಣಿಸುವಾತ;ಬೊಂಬೆಯ ಬಟ್ಟೆಯೊಳಗೆ ಸೇರಿಕೊಂಡು ನರ್ತಿಸುವ ಮನುಷ್ಯ! ಸೂತ್ರದ ಗೊಂಬೆ:ಈ ಆಟ ಯಕ್ಷಗಾನದ ಇನ್ನೊಂದು ಪದ್ದತಿ.ಗೊಂಬೆಗಳನ್ನು ಕುಣಿಸುವ ಆಟಗಾರರು ಪರದೆಯ ಹೊಂದೆ ನಿಂತು,ಅಲಂಕೃತ ಗೊಂಬೆಗಳನ್ನು ಪರದೆಯ ಮುಂದೆ ಬಿಟ್ಟು ಪ್ರೇಕ್ಷಕರಿಗೆ ಕಾಣದಂತೆ ಇದ್ದು ದಾರಗಳಿಂದ ಅವನ್ನು ಆಡಿಸುತ್ತಾರೆ.ಅವು