ಪುಟ:Mysore-University-Encyclopaedia-Vol-4-Part-1.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಜಾನಪದ ಪರಿಷತ್ತ-ಕರ್ನಾಟಕ ನಂದಿನಿ ಕೊಡವರ ಇನ್ನೊಂದು ನೃತ್ಯವೆಂದರೆ ಪಡೆಕಳಿ ಅಥವಾ ಪರಿಯಕಳಿ,ಇದು ಒಂದು ರೀತಿಯ ಸಮರ ನೃತ್ಯ,ಕೊಡವ ಜನಾಂಗದವರಲ್ಲಿ ಪರಂಪರಾನುಗತವಾಗಿ ಬಂದ ಸಮರೋತ್ಸಾಹವನ್ನೂ,ಕ್ರೀಡಾಭಿಮಾನವನ್ನೂ ಈ ನೃತ್ಯದಲ್ಲಿ ಕಾಣಬಹುದು.ಇದರಲ್ಲಿ ಸಮಾನಶಕ್ತಿ ಮತ್ತು ಶೌರ್ಯಗಳುಳ್ಳ ಈರ್ವರು,ತಮ್ಮ ಬಲಗೈಯಲ್ಲಿ ಬೆತ್ತದ ಕೋಲನ್ನು ಎಡಗೈಯಲ್ಲಿ ಬೆತ್ತದ ಗುರಾಣಿಯನ್ನೂ ಹಿಡಿದು ಪರಸ್ಪರ ಕಾದಾಡುವ ರೀತಿಯಲ್ಲಿ ನರ್ತಿಸುತ್ತಾರೆ.ಅವರ ನಡುವೆ ಒಂದು ರೀತಿಯ ಅಣಕು ಹೋರಾಟವೇ ನಡೆಯುತ್ತದೆ. ಕೊನೆಯಲ್ಲಿ ಕ್ರೀಡಾಭಿಮಾನಿಗಳಿಗೆ ಯೋಗ್ಯವಾದ ರೀತಿಯಲ್ಲಿ ಅವರ ಪರಸ್ಪರ ಆಲಂಗಿಸಿ ನಗುನಗುತ್ತ ಅಗಲುತ್ತಾರೆ.ಸಾಮಾನ್ಯವಾಗಿ ಹುತ್ತರಿಹಬ್ಬದ ಕೋಲಾಟದ ಕೊನೆಯಲ್ಲಿ ಈ ನೃತ್ಯ ನಡೆಯುತ್ತದೆ. ಮೇಲೆ ಹೇಳಿದಂತೆ ಈ ಎಲ್ಲ ನೃತ್ಯಗಳಲ್ಲಿ ಭಾಗವಹಿಸುವವರು ಪುರುಷರೇ.ಅವರು ತಮ್ಮ ದೇಶೀಯಸಮವಸ್ತ್ರಗಳನ್ನು ತೊಟ್ಟು ಈ ನೃತ್ಯಗಳಲ್ಲಿ ತೊಡಗುವುದು ಸಂಪ್ರದಾಯ. ಈ ಸಮವಸ್ತ್ರ ಷರ್ವಾನಿಯಂಥ ಒಂದು ಉದ್ದದ ಕಪ್ಪುವರ್ಣದ ಮೇಲೆ ಕೋಟು, ಅದರ ಮೇಲೆ ಸೊಂಟದ ಸುತ್ತ ಸುತ್ತಿದ ಕೆಂಪು ರೇಷ್ಮೆಯ ನೀಳ ನಡುದಟ್ಟಿ,ಅದರ ನಡುವೆ ಸ್ವಲ್ಪ ಬಲಕ್ಕೆ ಸಿಕ್ಕಿಸಿದ ಪೀಚೆಕತ್ತಿ ಎಂಬ ಚಿಕ್ಕ ಕತ್ತಿ ಮತ್ತು ತಲೆಗೆ ಸುತ್ತಿದ ಉದ್ದದ ಬಿಳಿಯ ಜರಿ ರುಮಾಲು-ಇವುಗಳನ್ನೊಳ್ಗೊಂಡಿರುತ್ತದೆ. ಈ ನೃತ್ಯಗಳಲ್ಲದೆ ಕೊಡಗಿನ ಉತ್ತರ ಭಾಗದಲ್ಲಿ ಕಾಣಸಿಗುವ ಇನ್ನೊಂದು ನೃತ್ಯವೆಂದರೆ ಸುಗ್ಗಿಕಿಣಿತ. ಹುತ್ತರಿಹಬ್ಬದ ಕೋಲಾಟಕ್ಕೆ ಸ್ವಲ್ಪ ಭಿನ್ನವಾದ ಈ ನೃತ್ಯದಲ್ಲಿ ಕೊಡವೇತರರು ಮಾತ್ರ ಭಾಗವಹಿಸುತ್ತಾರೆ.ಪ್ರತಿಯೊಬ್ಬ ನರ್ತಕನ ಕೈಯಲ್ಲೂ ಒಂದೊಂದು ಉದ್ದನೆಯ ಕಠಾರಿಯಿರುತ್ತದೆ.ಅದನ್ನು ವಿವಿಧ ಭಂಗಿಗಳನ್ನು ಬೀಸುತ್ತ ಅವರ ಬಿರುಸಾಗಿ ನರ್ತಿಸುತ್ತಾರೆ. ಕೆಲವು ನೃತ್ಯಗಳಿಗೆ ಕಠಾರಿಯ ಬದಲು ಮರದ ಕೋಲುಗಳನ್ನು ಉಪಯೋಗಿಸುತ್ತಾರೆ. ಇನ್ನು ಕೊಡವ ಸ್ತ್ರೀಯರು ನರ್ತಿಸುವ ಇನ್ನೊಂದು ಸರಳ ಹಾಗೂ ಸುಂದರ ನೃತ್ಯವಿದೆ.ಇದನ್ನು ಕೊಡವ ನುಡಿಯಲ್ಲಿ ಉಮ್ಮತ್ತಾಟ್ ಎಂದು ಕರೆಯುತ್ತಾರೆ.ಈ ನೃತ್ಯದಲ್ಲಿ ಭಾಗವಹಿಸುವ ಸ್ತ್ರೀಯರೂ ಸಮಸ್ತ್ರ ಧರಿಸಿ(ಇವರ ಸೀರೆಯ ನೆರಿದೆಯನ್ನು ಹಿಂದಕ್ಕೆ ಬಿಟ್ಟು,ಸೀರೆಯ ಒಂದು ಕೊನೆಯನ್ನು ಬೆನ್ನಿನ ಮೇಲಿಂದ ಎದೆಯ ಮೇಲೆ ಹಾಯಿಸಿ ಬಲಗಡೆ ಬಿಗಿಯಾಗಿ ಗಂಟು ಹಾಕುತ್ತಾರೆ.ಜೊತೆಗೆ ತಲೆಯ ಮೇಲಿಂದ ಬೆನ್ನಿನ ಮೇಲೆ ಹರಡುವಂತೆ ಒಂದು ವೆಶಾಲ ಶಿರವಸ್ತ್ರವನ್ನು ಧರಿಸುತ್ತಾರೆ.)ಕೈಯಲ್ಲಿ ತಾಳ ಹಿಡಿದು,ಅದನ್ನು ಕ್ರಮಬದ್ದವಾಗಿ ತಟ್ಟುತ್ತ ಅದರ ನಾದಕ್ಕೆ ತಕ್ಕಂತೆ ಬಾಗುತ್ತ ಬಳುಕುತ್ತ ನರ್ತಿಸುತ್ತಾರೆ.ನೃತ್ಯದ ಜೊತೆಗೆ ಅದಕ್ಕೆ ಸಂಬಂಧಿಸಿದ ಜನಪದ ಹಾಡುಗಳನ್ನು ಹಾಡುತ್ತಾರೆ.ಕೊಡವ ಸ್ತ್ರೀಯರ ಈ ನಯನಮನೋಹರ ನೃತ್ಯ ಇತ್ತೀಚೆಗೆ ತೀರಾ ಅಪೂರ್ವವಾಗುತ್ತಿದೆ. ಕೊಡಗಿನ ಜನಪದ ಸಾಹಿತ್ಯ ಹೀಗೆ ಅಲ್ಲಿನ ಸಂಸ್ಕ್ರತಿಗೆ,ಜನ ಜೀವನಕ್ಕೆ ಹಿಡಿದ ಕನ್ನಡಿಯಾಗಿದೆ.ಕೊಡವರ ಆಚಾರ ವಿಚಾರಗಳೂ ಸಂಪ್ರದಾಯ ನಂಬಿಕೆಗಳೂ ದಟ್ಟವಾಗಿ ಅರ್ಥಪೂರ್ಣವಾಗುತ್ತಿದೆ. ಕೊಡಗಿನ ಜನಪದ ಸಾಹಿತ್ಯ ಹೀಗೆ ಅಲ್ಲಿನ ಸಂಸ್ಕ್ರತಿಗೆ,ಜನ ಜೀವನಕ್ಕೆ ಹಿಡಿದ ಕನ್ನಡಿಯಾಗಿದೆ. ಕೊಡವರ ಆಚಾರ ವಿಚಾರಗಳೂ ಸಂಪ್ರದಾಯ ನಂಬಿಕೆಗಳೂ ದಟ್ಟವಾಗಿ ಅರ್ಥಪೂರ್ಣವಾಗಿ ಈ ಸಾಹಿತ್ಯದಲ್ಲಿ ಚಿತ್ರಿತವಾಗಿವೆ. ಕೊಡವರ ಜನಪದ ಸಾಹಿತ್ಯದ ಸಮರ್ಪಕ ಸಂಗ್ರಹ,ಅಧ್ಯಯನ ಇನ್ನೂ ಆಗಬೇಕಾಗಿದೆ. ಅನೇಕ ಮಂದಿ ವಿದ್ವಾಂಸರು ಸಂಗ್ರಹಕಾರ್ಯವನ್ನು ನಡೆಸಿದ ನಿದರ್ಶನಗಳನ್ನು ಅಲ್ಲಲ್ಲಿ ಕಾಣಬಹುದು.ಈ ಪೈಕಿ ದಿವಂತರ ನಡಿಕೇರಿಯಂಡ ಚಿಣ್ಣಪ್ಪನವರಿಗ ಅಗ್ರಸ್ಥಾನ ಸಲ್ಲಬೇಕು. ಅವರ ಕೊಡವ ಭಾಷೆಯ ಅಳಿದುಳಿದ ಜನಪದ ಗೀತೆಗಳನ್ನು ಸಂಗ್ರಹಿಸಿ ಸೂಕ್ತ ವಿವರಣೆ ಮತ್ತು ಟಿಪ್ಪಣಿಗಳೊಂದಿಗೆ ಪಟ್ಟೋಲೆ ಪಳಮೆ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಐ.ಮಾ.ಮುತ್ತಣ್ಣನವರು ಆಂಗ್ಲಭಾಷೆಯಲ್ಲಿ ಬರೆದಿರುವ ಕೊಡಗಿನ ಚರಿತ್ರೆಯಲ್ಲಿ ಅಲ್ಲಿನ ಜನಪದ ಸಾಹಿತ್ಯದ ಸ್ಥೂಲ ಪರಿಚಯ ಮಾಡಿಕೊಟ್ಟಿದ್ದಾರೆ.ಪೇರಿಯಂಡಾ ಚಂಗಪ್ಪ ಅವರ ಕೊಡವರ ಅಪೂರ್ವ ಜನಪದ ಗೀತೆಗಳನ್ನು ಕಲೆಹಾಕಿ "ಕೊಡವಡ ಅಂದೋಳತ್ ಪಾಟ್"ಎಂಬ ಕೃತಿಯನ್ನು ಹೊರತಂದಿದ್ದಾರೆ.ಬಿ.ಡಿ.ಗಣಪತಿಯವರೂ ತಮ್ಮ ಕೃತಿಗಳಲ್ಲಿ ಕೊಡವ ಜನಪದ ಸಾಹಿತ್ಯದ ಪರಿಚಯವನ್ನು ಅಲ್ಲಲ್ಲಿ ಮಾಡಿಕೊಟ್ಟಿದ್ದಾರೆ.ಕೆಲವು ಕೊಡವ ಹಾಡುಗಳನ್ನು ಆಂಗ್ಲ ಹಾಗೂ ಹರ್ಮನ್ ಬರೆಹಗಾರರು ವಿದೇಶೀ ಭಾಷೆಗಳಿಗೂ ಅನುವಾದ ಮಾಡಿದ್ದಾರೆ.ಅದರೆ ಸಮಗ್ರ ಕೊಡೆಗಿನ ಜಾನಪದ ಇನ್ನೂ ವ್ಯಾಪಕವಾಗಿ.ಶಾಸ್ತ್ರೀಯವಾಗಿ ಸಂಗ್ರಹಿತವಾಗಬೇಕಾದ ಅಗತ್ಯ ಇದ್ದೇ ಇದೆ. ಕರ್ನಾಟಕ ಜಾನಪದ ಪರಿಷತ್ತು:ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ಮೈಸೂರಿನಲ್ಲಿ ಸ್ಥಾಪಿತಗೊಂಡಿತು(೧೩-೧-೧೯೬೮).ಕರ್ನಾಟಕದ ನಾನಾ ಮೂಲೆಗಳಲ್ಲಿ ಅಡಗಿ ಹೋದಗಿರುವ ಜನಪದ ಸಾಹಿತ್ಯ,ಕಲೆಗಳನ್ನೂ ಅದರ ಪರಿಚಯವುಳ್ಳ ಕಲಾವಿದರನ್ನೂ ಗುರುತಿಸಿ ಬೆಳಕಿಗೆ ತರುವುದು;ಆಧುನಿಕ ನಾಗರಿಕತೆಯ ಬೆಳವಣಿಗೆಯ ಭರದಲ್ಲಿ ನಶಿಸಿ ಹೋಗಿತ್ತಿರುವ ಪ್ರಾಚೀನ ಕಲೆಯನ್ನು ಇಂದಿನ ನಾಗರಿಕ ಜನತೆಗೆ ಪರಿಚಯ ಮಾಡಿಕೊಡುವುದು;ಅವುಗಳಿಗೆ ಒಂದು ಸ್ಥಾಯೀಸ್ಥಾನ ಒದುಗುವಂತೆ ಮಾಡುವುದು-ಇವು ಪರಿಷತ್ತಿನ ಮುಖ್ಯ ಉದ್ದೇಶ. ಪರಿಷತ್ತಿನ ಅಂಗವಾಗಿ ಜಾನಪದ ಎಂಬ ಒಂದು ದ್ವೈವಾರ್ಷಿಕ ಪತ್ರಿಕೆ ಪ್ರಕಟಗೊಳ್ಳುತ್ತಿದೆ. ಜಾನಪದ ಸಂಗ್ರಹ,ಶಾಸ್ತ್ರೀಯ ಅಧ್ಯಯನ ಮತ್ತು ಪ್ರಕಟಣೆಗಳಿಗೆ ಮೀಸಲಾದ ಹೊತ್ತಿಗೆ ಇದು ಈಗ ಪ್ರಕಟಣೆ ಸ್ಥಗಿತಗೊಂಡಿದೆ. ಕರ್ನಾಟಕ ನಂದಿನಿ:ಮಹಿಳೆಯರ ಶಿಕ್ಷಣ,ಅವರಲ್ಲಿ ಧರ್ಮನೀತಿಗಳ ಬೆಳೆವಣಿಗೆ, ಸೌಜನ್ಯಾಭಿವೃದ್ಧಿ ಇವುಗಳಿಗಾಗಿಯೇ ಮೀಸಲಾಗಿದ್ದ,ಮಹಿಳೆಯೊಬ್ಬರಿಂದ ಸಂಪಾದಿತವಾಗಿ ಪ್ರಕಟವಾಗುತ್ತಿದ್ದ ಪತ್ರಿಕೆ.ಪತ್ರಿಕಾ ಪ್ರಪಂಚದಲ್ಲಿ ಸಾಹಿತ್ಯ ಲೋಕದಲ್ಲಿ ಮಹಿಳೆಯರ ಸಾಹಸದ ಗುರುತಾಗಿ ಅದು ಕಂಗೊಳಿಸಿತು.ಮೂರು ವರ್ಷಗಳ ಕಾಲ ಈ ಪತ್ರಿಕೆ ಪ್ರಕಟವಾಗಿತ್ತಿದ್ದು ಅನಂತರ ನಿಂತರೂ ಪಾತ್ರಿಕಾ ಪ್ರಪಂಚದಲ್ಲೂ ಸಾಹಿತ್ಯ ಸಂವರ್ಧನೆಯಲ್ಲೂ ಅದು ತಕ್ಕಮಟ್ತಿಗೆ ಸೇವೆ ಸಲ್ಲಿಸಿತು.ಮೈಸೂರಿನ ಬಳಿಯ ನಂಜನಗೂಡಿನಲ್ಲಿ ಸತೀಹಿತೈಷಿಣೀ ಗ್ರಂಥಮಾಲೆಯ ತಿರುಮಲಾಂಬಾ ೧೯೧೬ರ ಅಕ್ಟೋಬರಿನಲ್ಲಿ ಈ ಪತ್ರಿಕೆಯನ್ನು ಪ್ರಾರಂಭಿಸಿದರು. ಅವರು ೧೯೧೩ರಲ್ಲಿ ಪ್ರಾರಂಭಿಸಿದ ಸತೀ ಹಿತೈಷಿಣೀ ಗ್ರಂಥಮಾಲೆಯಲ್ಲಿ ಪ್ರಕಟವಾದ ಸಾಹಿತ್ಯ ಕೃತೆಗಳಿಗೆ ದೊರೆತ ಪ್ರೋತ್ಸಾಹವೇ ಇದಕ್ಕೆ ಪ್ರೇರಣೆ.ಆದರೆ ಆರ್ಥಿಕ ತೊಂದರೆಯಿಂದಾಗಿ ಅವರ ಈ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು(೧೯೨೦).ಇದರ ಚಂದಾದಾರರ ಸಂಖ್ಯೆ ಆಗ ಸುಮಾರು ೩೦೦.ಆದರೆ ಕರ್ನಾಟಕದ ಹೊರಗಿನ ಮುಂಬಯಿ,ಕಲ್ಕತ್ತ,ಆಗ್ರ ಮೊದಲಾದ ಸ್ಥಳಗಳಲ್ಲೂ ಇದರ ಪ್ರಸಾರ ಸಾಕಷ್ಟಿತ್ತು. ಮಂಗಳೂರಿನಲ್ಲಿ ವಿಶೇಷವಾದ ಪ್ರಸಾರವಿತ್ತು. ಪತ್ರಿಕೆ ನಂಜನಗೂಡಿನಿಂದ ಪ್ರಕಟವಾಗುತ್ತಿದ್ದರೂ ಮುದ್ರಣವಾಗುತ್ತಿದ್ದುದು ಧಾರವಾಡದ ಕೃಷ್ಣ ಮುದ್ರಣಾಲಯದಲ್ಲಿ.ಈ ಮುದ್ರಣಾಲಯದೊಂದಿಗೆ ಲೋಕಮಾನ್ಯ ತಿಲಕರ ಸಂಬಂಧವಿದ್ದುದರಿಂದ ಪತ್ರಿಕೆಯ ಮುದ್ರಣಕ್ಕೆ ಸರ್ಕಾರ ಪ್ರತಿಬಂಧಕ ಹೇರಬಯಸಿದಾಗ, ತಮ್ಮ ಪತ್ರಿಕೆಯಲ್ಲಿ ರಾಜಕೀಯ ವಿಚಾರಗಳನ್ನು ಪ್ರಕಟಿಸುವುದಿಲ್ಲವೆಂದು ಬರೆದುಕೊಟ್ಟು ಪ್ರಕಟಣೆಗೆ ಅನುಮತಿ ಪಡೆಯಬೇಕಾಯಿತು. ಮೊದಲ ಪುಟ ಕವನದಿಂದ ಪ್ರಾರಂಭವಾಗುತ್ತಿತ್ತು.ಸಾಮಾನ್ಯವಾಗಿ ಇದು ದೇವತಾ ಪ್ರಾರ್ಥನೆಯಾಗಿರುತ್ತಿತ್ತು.ಶ್ರೀಪಾದರೇಣು ಅವರ ಕವಿತೆಗಳೇ ಹೆಚ್ಚು.ಮೊದಲ ಪುಟದ ಪಕ್ಕದಲ್ಲಿ ರನ್ನಗನ್ನಡಿಯಲ್ಲಿ ಪರಿಚಯ ಮಾಡಿಸುತ್ತಿದ್ದ ಪ್ರಸಿದ್ಧ ವ್ಯಕ್ತಿಗಳ ಚಿತ್ರ ಪ್ರಕಟಿಸುತ್ತಿದ್ದರು. ಮುಖಪುಟದಲ್ಲಿ 'ವಂದೇ ತ್ವಾ ಭೂದೇವಿ ಆರ್ಯ ಮಾತರಂ'ಎಂಬ ವಾಕ್ಯವಿರುತ್ತಿತ್ತು.ಕ್ರೌನ್ ಅಷ್ಟಪತ್ರದ ೫೨ ಪುಟಗಳಿಂದ ಕೊಡಿದ್ದ ಪತ್ರಿಕೆಯ ಬಿಡಿ ಪ್ರತಿಯ ಬೆಲೆ ೨.೫ ಆಣೆ:ವಾರ್ಷಿಕ ಚಂದಾ ೧.೫ ರೂ ಅಂಚೆ ವೆಚ್ಚ ಸೇರಿ.