ಪುಟ:Mysore-University-Encyclopaedia-Vol-4-Part-1.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಸಂಗೀತ ದೇಶೀ ರಾಗಗಳನ್ನು ೨೦ ಮೇಳಗಳಲ್ಲಿ ಅಡಕಮಾಡಲು ಯತ್ನಿಸಿದ. ಹಿಂದಿನ ಕಾಲದಿಂದ ಬಂದಿದ ಗ್ರಾಮಮೂರ್ಛನ ಪದ್ಧತಿಯಿಂದ ರಾಗಗಳನ್ನು ಹಿಡಿಯುವ, ಹೆಸರಿಸುವ ಹುಟ್ಟಿಸುವ ಪದ್ಧತಿಯನ್ನು ಧೈರ್ಯದಿಂದ ಬದಿಗಿಟ್ಟಾತ ರಾಮಾಮಾತ್ಯ. ಈ ಪದ್ಧತಿ ಲಕ್ಷಣಪ್ರಧಾನವಾದದ್ದು. ಮೇಳವೆಂಬ ಮಾತಿಗೆ ಹಿರಿಮೆ ಕೊಟ್ಟವರಲ್ಲಿ ರಾಮಾಮಾತ್ಯ ಮೊದಲಿಗ. ಇವನ ಗ್ರಂಥದಲ್ಲಿ ಮೇಳ ಪ್ರಕರಣವೆಂಬ ಪ್ರತ್ಯೇಕವಾದ ಪರಿಚ್ಛೇದವೇ ಇದೆ. ಇದೇ ಕಾರಲದಲ್ಲಿದ್ದ ನಿಜಗುಣಶಿವಯೋಗಿ ತನ್ನ ವಿವೇಸಚಿಂತಾಮಣಿಯಲ್ಲಿ ನಾಲ್ಕನೆಯ ಅಧ್ಯಾಯವನ್ನು ಸಂಗೀತಶಾಸ್ತ್ರದ ನಿರೂಪಣೆಗೆ ವಿನಿಯೋಗಿಸಿರುವುದಲ್ಲದೆ ಪಲ್ಲವಿ ಮತ್ತು ಚರಣಗಳನ್ನು ಸಹಸ್ರಾರು ಶೈವಪರ ಕೀರ್ತನೆಗಳನ್ನು ಕನ್ನಡದಲ್ಲಿ ರಚಿಸಿದ್ದಾನೆ. ಈ ಕೀರ್ತನೆಗಳೊಂದರಿಂದ ಆ ಕಾಲದ ವೀಣೆಗೆ ಹದಿನಾರು ಮೆಟ್ಟಲುಗಳು ಇದ್ದವೆಂದು ತಿಳಿಯುತ್ತದೆ. ವಿವೇಕ ಚಿಂತಾಮಣಿ ದಕ್ಷಿಣಾದಿ ಸಂಗೀತಶಾಸ್ತ್ರವನ್ನು ಕನ್ನಡದಲ್ಲಿ ತಿಳಿಸುವ ಮೊತ್ತಮೊದಲ ಗ್ರಂಥ. ವಿಜಯನಗರದ ಪತನಾನಂತರ ತಮಿಳುನಾಡಿನ ಕೊಡುಗೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ದಕ್ಷಿಣ ಕರ್ನಾಟಕದ ಹಲವು ಸಂಸ್ಥಾನಗಳು ಸಂಗೀತ ಪ್ರೋತ್ಸಾಹವನ್ನು ಮುಂದುವರೆಸಿದವು. ಮಾಗಡಿ ಕೆಂಪೇಗೌಡ ಸಂಗೀತಪ್ರಿಯನಾಗಿದ್ದಂತೆ ತೋರುತ್ತದೆ. ವಿಜಯನಗರದ ಸಂಪ್ರದಾಯಗಳನ್ನು ಮೈಸೂರಿನ ಒಡೆಯರು ಪೋಷಿಸಿ ಮುಂದುವರೆಸಿದರು. ಐದನೆಯ ಚಾಮರಾಜ ಒಡೆಯರು ಚತುಷ್ಪಷಿವಿ ಕಲಾಪರಿಣತರಾಗಿದ್ದರು. ಕಂಠೀರವ ನರಸಿಂಹರಾಜ ಒಡೆಯರ ನಿತ್ಯದೋಲಗದಲ್ಲಿ ನಾಟ್ಯ, ತಂಬುರ, ವೀನಾದಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಿತು. ಅವರ ಆಸ್ಥಾನದಲ್ಲಿ ಸಂಗೀತಕೋವಿದೆಯರಿದ್ದರು. ಅವರು ಸ್ವತಃ ಸಂಗೀತಸಾಹಿತ್ಯಶಾಸ್ತ್ರ ವಿಶಾರದರು. ಚಿಕ್ಕದೇವರಾಜ ಒಡೆಯರ ಆಸ್ಥಾನದಲ್ಲಿ ಸಂಗೀತ ಗಾನ ವಾದ್ಯ ನಾಟ್ಯಗಳು ಪ್ರೋತ್ಸಾಹಿತವಾಗಿದ್ದವು. ಇಲ್ಲಿ ವೀಣಾವಾದನ ತತ್ವಲಯಜ್ಞಾನಕುಶಲ ಕಲಾವಿದರಿದ್ದರು. ಇವರು ಸಂಗೀತಸಾರಜ್ಞರೇ ಆಗಿದ್ದರು. ಚಿಕ್ಕದೇವರಾಜ ಒಡೆಯರು ವೈಣಿಕರೊಳು ಪ್ರವೀಣರಾಗಿದ್ದರು. ಮುಮ್ಮಡಿ ಕೃಷ್ಣರಾಜ ಒಡೆಯರು ಸಂಗೀತಶಾಸ್ತ್ರ ಸಂಪ್ರದಾಯಗಳಲ್ಲಿ ನಿಶ್ಚಿತ ಯೋಗ್ಯತೆಯನ್ನು ಪಡೆದಿದ್ದ ವಿದ್ವಾಂಸರಾಗಿದ್ದು ಸ್ವತಃ ಕೆಲವು ಗೇಯ ಕೃತಿಗಳನ್ನು ರಚಿಸಿದ್ದಲ್ಲದೆ ಬಹುಮಂದಿ ಸಂಗೀತ ವಿದ್ವಾಂಸರಿಗೆ ಉದಾರ ಆಶ್ರಯ ಕೊಟ್ಟಿದ್ದರು. ಹಾಗೆಯೇ ೯ನೆಯ ಚಾಮರಾಜ ಒಡೆಯರವರೂ ಕಲಾಪ್ರೇಮಿಯಾಗಿದ್ದು ಕಲೆಯನ್ನು ಪೋಷಿಸುತ್ತಾ ಬಂದರು. ಅನಂತರ ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರು (೧೮೯೫-೧೯೪೦) ರಸಾಭಿಜ್ಞರಾಗಿದ್ದು ಸಂಗೀತಾದಿ ಕಲೆಗಳಿಗೆ ಉದಾರ ಪೋಷಣೆ ನೀಡಿ ಮೈಸೂರನ್ನು ತಂಜಾವೂರಿಗೆ ಸಮನಾಗಿ ಮಾಡಿದರು. ಇವರ ಆಸ್ಥಾನ ಅನೇಕ ವೈಣಿಕರು, ಗಾಯಕರು, ನಾಟ್ಯಕಲಾಪ್ರವೀಣರಿಂದ ಶೋಭಿಸುತ್ತಿತ್ತು. ಜಯಚಾಮರಾಜರೂ ಸಂಗೀತ ಪೋಷಕರಾಗಿದ್ದರು. ಈ ಕಾಲದ ಶಾಸ್ತ್ರ ಗಂಥಕರ್ತರಲ್ಲಿ ಬೆಂಗಳೂರು ಜಿಲ್ಲೆಯ ಶಿವಗಂಗೆಯ ಸಮೀಪದ ಸಾತನೂರಿನ ಪುಂಡಲೀಕವಿಠಲ (ಸು.೧೫೬೨-೯೧) ಮುಖ್ಯನಾದವನು. ಬುರ್ಹಾನ್ ಖಾನನ ಆಹ್ವಾನದ ಮೇಲೆ ಖಾನ್ ದೇಶಕ್ಕೆ ಹೋಗಿ ಷಡ್ರಾಗ ಚಂದ್ರೋದಯ, ರಾಜಮಾಲಾ, ರಾಗಮಂಜರಿ, ನರ್ತನನಿರ್ಣಯ ಎಂಬ ನಾಲ್ಕೂ ಸಂಗೀತ ಗ್ರಂಥಗಳನ್ನು ರಚಿಸಿದ್ದಾನೆ. ಪುಂಡರೀಕವಿಠಲ ಉತ್ತರಾದಿ ದಕ್ಷಿಣಾದಿ ಸಂಗೀತಗಳೆರಡರಲ್ಲೂ ನಿಷ್ಣಾತನಾಗಿದ್ದ. ತಂಜಾವೂರಿನ ಅರಸು ರಘುನಾಥನನಾಯಕನ ಆಳ್ವಿಕೆಯಲ್ಲಿ (ಸು.೧೬೧೪-೨೮) ಮಂತ್ರಿಯಾಗಿದ್ದು ಸಂಗೀತ ಸುಧೆ ಎಂಬ ಪ್ರಖ್ಯಾತ ಗ್ರಂಥವನ್ನು ಬರೆದ ಗೋವಿಂದ ದೀಕ್ಷಿತನೂ ಕನ್ನಡದವನೇ, ಕರ್ನಾಟಕ ಸ್ಮಾರ್ತ ಬ್ರಾಹ್ಮಣ. ಈಗ ಪ್ರಚುರವಾಗಿರುವ ವೀಣೆಯ ಸ್ವರೂಪವನ್ನು ಸಿದ್ದಮಾಡಿಕೊಟ್ಟವ ಇವನೇ (ಈ ಕೆಲಸ ತಂಜಾವೂರಿನಲ್ಲಿ ನಡೆದಿದ್ದು ಆದ್ದರಿಂದ ವೀಣೆಗೆ ತಂಜಾವೂರು ವೀಣೆಯೆಂದು ಹೆಸರಾಯಿತು). ಇವನ ಮಗ ವೆಂಕಟಮಖಿ (ವೆಂಕಟೇಶ ಧೀಕ್ಷಿತ) ಮೇಳ ಪಧತಿಯನ್ನು ಮುಂದುವರಿಸಿ ತನ್ನ ಚತುರ್ದಂಡಿ ಪ್ರಕಾಶಿಕೆಯನಲ್ಲಿ (ಸು.೧೬೨೦) ಎಪ್ಪತ್ತೆರಡು ಮೇಳಕರ್ತ ರಾಗಳ (ಮೂಲಪದ ಮೇಳಕರ್ತೃ ಎಂದು) ವಿಭಜನೆಯನ್ನು ಮಾಡಿಕೊಟ್ಟಿದ್ದಾನೆ. ತಂಜಾವೂರಿನ ವಿಜಯ ರಾಘವ ನಾಯಕನ ಆದೇಶದ ಮೇಲೆ ಬರೆದ ಈ ಪ್ರಸಿದ್ಧ ಗ್ರಂಥ ಕರ್ಣಾಟಕ ಸಂಗೀತಕ್ಕೆ ಸ್ಪಷ್ಟವಾದ ಕಟ್ಟಡವನ್ನು ಕಟ್ಟಿಕೊಟ್ಟಿತು. ಎಲ್ಲ ರಾಗಗಳನ್ನು ನುಡಿಸಲು ಅನುಕೂಲವಾಗುವಂತೆ ಮೇಳದ ಮೆಟ್ಟಲುಗಳನ್ನು ಮೇಣದಲ್ಲಿ ಸ್ಥಿರವಾಗಿರಿಸಿದ ಇಂದಿನ ವೀಣೆ ಈತನ ಕಲ್ಪನೆಯಂತೆ. ಇವನ ಗ್ರಂಥದ ಹೆಸರಿನಲ್ಲಿ ಬರುವ ಚತುರ್ದಂಡಿಯೆಂದರೆ ಗೀತ, ಆಲಾಪ, ಲಯ ಮತ್ತು ಪ್ರಬಂಧ - ಇವು ರಾಗ ಹರಿಯುವ ನಾಲ್ಕು ದಾರಿಗಳು. ಈ ಗ್ರಂಥದಲ್ಲಿ ವೀಣೆ, ಶ್ರುತಿ, ಸ್ವರ, ಮೇಳ, ರಾಗ, ಆಲಾಪ, ಠಾಯ, ಗೀತ ಪ್ರಬಂಧಗಳನ್ನು ವಿವರಿಸುವ ಪರಿಸಚ್ಛೇದಗಳಿವೆ. ತಾಳ ಪ್ರಕರಣ ಉಪಲಬ್ಧವಿಲ್ಲ. ಈತ ರಾಗಾಂಗ ಉಪಾಂಗ ಭಾಷಾಂಗ ರಾಗಗಳಿಗೆ ಶ್ಲೋಕರೂಪದಲ್ಲಿ ಲಕ್ಷಣವನ್ನು ಗೀತ ರೂಪದಲ್ಲಿ ಲಕ್ಷ್ಯವನ್ನು ನಿರೂಪಿಸಿದ್ದಾನೆ. ಅನಂತರದಲ್ಲಿ ಉಲ್ಲೇಖನೀಯ ಶಾಸ್ತ್ರ ಗ್ರಂಥಗಳಾವುವೂ ಹುಟ್ಟಲಿಲ್ಲವೆಂದು ತೋರುತ್ತದೆ. ನಾಲ್ವಡಿ ರಾಜ ಒಡೆಯರ ಕಾಲದಲಿ ತಚೂರು ಶಿಂರಾಚಾಯರೆಂಬುವರು ತಮ್ಮ ಸಹೊದರ ಹಿರಿಯ ಶಿಂಗರಾಚಾಯರೊಡನೆ ಸೆರಿಕೊಂಡು ಸ್ವರಮಂಜರಿ,ಗಾಯಕ ಪಾರಿಜಾತಂ,ಸಂಗೀತಕಲಾನಿದಿ,ಗಾಯಕಲೊಚನಂ,ಗಾಯಕಸಿದಾಂಜನಂ,ಗಾನೆಂದುಶೆಖರಂ,ಭಾಗವತ ಸಾರಾಮತಂ ಎಂಬ ಶಾಸ್ತ್ರಗ್ರಂತಗಳನು ರಚಿಸಿ ಪ್ರಕಟಿಸಿದಾರೆ.

ಗೆಯ : ಸಂಗೀತ ಲಕ್ಷಣದ ಬಗೆ ಹುಟಿರುವ ಹಲವಾರು ಗ್ರಂತಗಳು ಶಾಸ್ತ್ರದ ಪ್ರಾಗಲ್ಬ್ಯ್ ತೆಯನು ಸೂಚಿಸುತಿರುವಂತೆ ರಚನೆಯೂ ವ್ಯಾಪಕವಾಗಿ ಆಗಿರಬೆಕು.ಇದರ ಬಗ್ಗೆಯೂ ಹಿಂದೆ ತಿಳಿಸಿರುವ ಹಲವಾರು ಶಾಸನ ಮತ್ತು ಸಾಹಿತ್ಯ ಉಲೆಖಗಳು ಉತ್ತಮ ಸಾಕ್ಷಿಗಳಾಗಿವೆ.ಗ್ರಂಥಗಳಲಿ ಲಕ್ಷಣದ ಜೊತೆಗೆ ಲಕ್ಶ್ಸ್ ಬರೆಯುತ್ತಿದ್ದುದು ರೂಡಿ.ಹೀಗೆ ಸಂಗೀತರೂಪಗಳ ರಚನೆಯಲ್ಲೂ ಕರ್ನಾಟಕದ ಕೊಡುಗೆ ಹೆರಳವಾಗಿ ವೈವಿಧ್ಯದಿಂದ ಕೂಡಿದೆ. ಕರ್ನಾಟಕದಲ್ಲಿ ರೂಪಗೊಂಡ ರಚನೆಗಳ ಬಗ್ಗೆ ಸುಮಾರು ಇವತ್ತು ಪ್ರಬಂಧಗಳ ವಿವರಣೆ ಮತಂಗನ ಬ್ರುಹದ್ದೆಶೀಯಲ್ಲೆ ಉಕ್ತವಾಗಿದೆ.ಇವುಗಳಲ್ಲದೆ ಬೆದಂಡ,ಮೆಲ್ವಾಡು,ಪಡುಗಬ್ಬ,ಪಡು,ಬಾಜನೆಗಬ್ಬ,ಚತ್ತಾಣ,ಸುವ್ವಿ,ಆಡ್ಡತನ,ಒನಕೆವಾಡು,ಓವಿ,ಧವಳ,ಮಂಗಳಾಚಾರ,ಎಂಬ ರಚನೆಗಳೂ ರೂಢಿಯಲ್ಲಿದ್ದುವೆಂದು ತಿಳಿದುಬರುತ್ತದೆ.ವಚನ ಸಾಹಿತ್ಯದಲ್ಲಿ ಸಂಗೀತ ಉಲ್ಲೆಖನ ಆನೆಕ ಕಡೆ ಬಂದಿದೆ.ಶರಣರು ವಚನಗಳಲ್ಲದೆ,ಹಾಡುಗಳನ್ನೂ ಬರೆದಿದ್ದರು.ಎನ್ನಕಾಯವ ದಂಡಿಗೆಯ ಮಾಡಯ್ಯ,ಬತ್ತೀಸರಾಗವ ಹಾಡಯ್ಯ,ಉರದಲಲೊತ್ತಿಬಾರಿಸುಕೂಡಲಸಂಗಮದೆವಯ್ಯ ಎಂಬ ಬಸವಣ್ಣನವರ ವಚನದಿಂದ೩೨ ರಾಗಗಳು ಕರ್ನಾಟಕದಲ್ಲಿ ಮುಖ್ಯವಾಗಿದ್ದುವೆಂದು ಕಾಣುತ್ತದೆ.ಹರಿಹರ ತನ್ನ ಕವ್ಯದಲ್ಲಿ ಒಂದು ಕಡೆ ಗೀತಗಳಂ ಪಾಡುತಂ ಎಂದು ಹೆಳಿದ್ದಾನೆ.ಶರಣರು ವಚನಗಳನ್ನು ಹಾಡುತ್ತಿದ್ದರೆನ್ನಬಹುದು.ಬಸವಣ್ನ,ಅಲ್ಲಮಪ್ರಭು,ಅಕ್ಕಮಹಾದೆವಿ ಮುಂತಾದ ಶರಣಶರಣೆಯರೂ ದೆವರಾಯನ ಕಾಲದಲ್ಲಿದ್ದ೧೦೧ ವಿರಕ್ತರಲ್ಲಿ ಅನೆಕರು ಗುರುಬಸವ,ಕರಸ್ಥಲದ ನಾಗಿದೆವ,ಮುಂತಾದವರೂ ವಿಚಾರಪ್ರಧಾನವಾದ ಸಂಗೀತ ರಚಿಸಿದರು.ಅನಂತರ ಯುಗದಲ್ಲಿ ರಚಿತವಾದ ಮುಖ್ಯಕ್ರುಥಿ ನಿಜಗುಣಶಿವಯೊಗಿಯದು.ಇವನು ತ್ರಿಪದಿ,ಸಾಂಗತ್ಯ ಮುಂತಾದ ಹಾಡುಗಳಲ್ಲಿ ತನ್ನ ಪಟ್ ಶಾಸ್ತ್ರಗಳನ್ನೆಲ್ಲಾ ರಚಿಸಿದ.ಕೈವಲ್ಯಪದ್ಧತಿಯ ಹಾಡುಗಳು ರಾಗ ತಾಳ ಸಮನ್ವಿತವಾದ ಸಂಗೀತ ಕ್ರುತಿಹಳು,ನಾದನಾಮಕ್ರಿಯೆ,ಧನ್ಯಾಸಿ,ಶಂಕರಾಭರಣ,ಲಲಿತೆ,ದೆಶಿ ಸಾರಗ,ಸುವ್ವಾಲೆ,ಭೆರವ,ತೊಡಿ,ಕಾಂಬೊಧಿ,ಭವುಳಿ,ಕುರಂಜಿ,ಮಧು ಮಾಧವಿ,ಸಾವಂತ,ಕಲ್ಯಾಣಿ ಮೊದಲಾದ ರಾಗಗಳಲ್ಲಿರುವ ಭಾವಪ್ರಧಾನವಾದ ನಾದಮಾಧುರ್ಯ ಮತ್ತ್ತುಪದವಿನ್ಯಾಸದಿಂದ ಕೂಡಿದ ಸಂಗೀತ ಸಾಹಿತ್ಯಗಳ ಸಮನ್ವಯವುಳ್ಲ ಶ್ರೆಷವಿ ಕ್ರುತಿಗಳು ಇದರಲ್ಲಿವೆ.

ಅಲ್ಲಿಂದ ಮುಂದೆ ದಾಸಸಾಹಿತ್ಯ ಒಂದು ಹೊಸ ಶಕೆಯನ್ನು ಆರಂಭಿಸಿತು.ಹರಿದಾಸ ಸಾಹಿತ್ಯದ ಆದ್ಯಾಚಾಯ್ರ್ ರಾದ ನರಹರಿತೀಥ್ರರು ರಘುಪತಿ ಎಂಬ ಅಂಕಿತದಲ್ಲಿ ಕನ್ನಡದ ಹಾಡುಗಳನ್ನು ರಚಿಸಿದರು.ಶ್ರಿಪಾದರಾಯರು ಕನ್ನಡದಲ್ಲಿ ಅನೆಕ ಸುಳಾದಿಗಳನ್ನೂ ದೆವರ ನಾಮಗಳನ್ನೂ ರಂಗವಿಠಲ ಮುದ್ರಿಕೆಯಿಂದ ರಚಿಸಿ,ತಮ್ಮಶಿಷ್ಯರುಗಳಾದ ಪುರಂದರದಾಸ,ಕನಕದಾಸ,ವಾದಿರಾಜ ಇವರಿಗೆ ಸಂಗೀತ ಕ್ರುತಿಗಳ ರಚನೆಯಲ್ಲಿ ಮಾಗ್ರ ದಶ್ರಾಕರಾದರು.ಅನಂತರಕಾಲದಲ್ಲಿ ವಿಜಯದಾಸರು,ಗೊಪಾಲದಾಸರು, ರಾಘವೆಂದ್ರ ಸ್ವಾಮಿಗಳು,ಮೊಹನದಾಸರು ಮತ್ತು ಜಗನ್ನಾಥದಾಸರೆ ಮುಂತಾದವರು ದಾಸಸಾಹಿತ್ಯವನ್ನು ಬೆಳೆಸಿದರು.ಈ ಕಾಲಕ್ಕೆ ಆನೆಕ ರಾಗಗಳನ್ನು ಬಳಸಿಕೊಂಡು ವ್ವೆವಿಧ್ಯಮಯವೂ ಶಾಸ್ತ್ರೀಯವೂ ಆದ ಮಾಗ್ರದಲ್ಲಿ ಬೆಳೆದು ಬಂದ ಸಂಗೀತವನ್ನು ಆತ್ಯಂತ ಜನಪ್ರಿಯವಾಗಿ ಈ ಹರಿದಾಸರು ಪರಿವತ್ರಿಸಿದರು.

ಹರಿದಾಸರಲ್ಲಿ ಬಹು ಮುಖ್ಯರಾದವರು ಅಪಾರ ಸಂಖ್ಯ್ಯ ಕೀತ್ರನೆಗಳನ್ನು ರಚಿಸಿರುವ ಪ್ರರಂದರದಾಸರು. ಇವರು ಸಂಗೀತದ ಅಭ್ಯಾಸಕ್ಕೆ ಒಂದು ಹೊಸ ಹಾದಿಯನ್ನು ಹಾಕಿಕೊಟ್ಟು, ಕರ್ಣಾಟಕ ನಂಗೀತವನ್ನು ಕಲಿಯಲು ವೈಜಾನಿಕವೂ ವ್ಯವಸ್ಥಿತವೂ ಆದ ಪದ್ದತಿಯನ್ನು ರೂಪಿಸಿದರು, ಸರಳೆ,ಜಂಟಿವರಸೆ,ಅಲಂಕಾರಗಳನ್ನು ಮಾಯಾಮಾಳವಗಳ ರಾಗಗಳನ್ನೂ ರಚಿಸಿದರು.ಅನೆಕ ಜನಪದ ಸಂಗೀತದ ಮಟ್ಟುಗಳಿಗೆ ಶಾಸ್ತ್ರೀಯವಾದ ರಾಗಗಳ ಸ್ವರೂಪ ಕೊಟ್ಟರು.ತುತ್ತುರುತುರೆಂದು,ನಳಿನಜಾಂಡ-ಎಂಬ ಕೀತ್ರನೆಗಳಿಂದ ೧೨ನೆಯ ಶತಮಾನದಿಂದಲೂ ಬೆಳೆದುಬಂದಿದ್ದ ಬತ್ತೀಸ ರಾಗಗಳಲ್ಲಿ ಹಾಡಿದ್ದಾರೆಂದು ತಿಳಿದುಬರುತ್ತದೆ.ಅಲ್ಲದೆ ಅನೆಕ ಸುಳಾದಿ ಉಗಾಭೊಗಗಳನ್ನೂ ರಚಿಸಿದರು.

ಮಾಯಾಮಾಳವಗೊಳವನ್ನು ಶುಧ್ದಮೆಳವನ್ನು ಶುಧ್ದಮೆಳವೆಂದು ಗ್ರಹಿಸಿದುದೆ ಕರ್ಣಾಟಕ ಸಂಗೀತದ ಇತಿಹಾಸದಲ್ಲಿ ದೊಡ್ದದೊಂದು ಕ್ರಾಂತಿಯಾಗಿ ಪರಿಮಿಸಿತು ಎನ್ನಬಹುದು.ಸಮಾನಾಂತರ ಶ್ರುತಿಯ ಈ ರಾಗದ ಹಿರಿಮೆಯನ್ನು ಅಥ್ರಮಾಡಿಕೊಂಡವರಲ್ಲಿ ಪುರಂದರದಾಸರು.