ಪುಟ:Mysore-University-Encyclopaedia-Vol-4-Part-1.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕನಾ೯ಟಕ ಶಬ್ದರೂಪದ ಬಗ್ಗೆ ವಿದ್ವಾಂಸರ ಚಚೆ೯ಗಳು ಏನೇ ಇದ್ದರೂ ಕನ್ನಡನಾಡಿಗೆ ಕನಾ೯ಟಕ ಎಂಬ ಹೆಸರು ಇರಬೇಕೆಂದು ವಿಧಾನಮಮಂಡಲಗಳಲ್ಲಿ ತೀಮಾ೯ನವಾಗಿ(1973) ಈಗ ಈ ರೂಪವೇ ಮಾನ್ಯವಾಗಿದೆ.

ಕನಾ೯ಟಕ: ದಕ್ಷಿಣ ಭಾರತದ ರಾಜ್ಯಗಳಲ್ಲೊಂದು.ಇದರ ಹಿಂದಿನ ಹೆಸರು ಮೈಸುರು ಸಂಸ್ಥನ. ಉತ್ತರದಲ್ಲಿ ಕೃಷ್ಣಾ ಮತ್ತು ದಕ್ಷಿಣದಲ್ಲಿ ಕಾವೇರಿ ನದಿ ವ್ಯವಸ್ಧದಿಂದ ಕೂಡಿ ದಖನ್ ಪ್ರಸ್ಧಭೂಮಿಯ ನೈಋತ್ಯ ಭಾಗದಲ್ಲಿ,ಉ.ಖ.11 3'ನಿಂದ 18 45'ವರೆಗೂ ಪೂ.ರೇ.74 12'ನಿಂದ 78 40'ವರೆಗೂ ಈ ನಾಡಿಗೆ ಕನಾ೯ಟಕ,ಕನ್ನಡ ನಾಡು, ಕನ್ನಾಡು ಎಂಬ ಹೆಸರು ಇವೆ.ವಾಯವ್ಯ ಮತ್ತು ಉತ್ತರ ದಿಕ್ಕುಗಳಲ್ಲಿ ಮಹಾರಾಷ್ಟ್ರ ಪೂವ೯ದಲ್ಲಿ ಆಂಧ್ರಪ್ರದೇಶ,ಆಗ್ನೇಯ ದಕ್ಷಿಣಗಳಲ್ಲಿ ತಮಿಳುನಾಡು, ನೈಋತ್ಯದಲ್ಲಿ ಕೇರಳ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಇದರ ಮೇರೆಗಳು. ಪೂವ೯ಪಶ್ಚಿಮವಾಗಿ ಸು.400 ಕಿಮೀ ಮತ್ತು ಊತ್ತರದಕ್ಷಿಣವಾಗಿ ಸು.700 ಕಿಮೀ ಹಬ್ಬಿರುವ ಕನಾ೯ಟಕದ ವಿಸ್ತೀಣ೯ 1,91,791 ಚ.ಕಿಮೀ. ಬೆಂಗಳೂರು,ಬೆಂಗಳೂರು ಗ್ರಾಮಾಂತರ,ಬೆಳಗಾಂವಿ,ಬಳ್ಳಾರಿ,ಬೀದರ್,ಬಿಜೌಪುರ,ಚಿಕ್ಕಮಗಳುರು,ಚಿತ್ರದುಗ೯ ಕೊಡಗು,ಧಾರವಾಡ,ಬಾಗಲಕೋಟೆ,ಗದಗ,ಕೊಪ್ಪಳ,ಗುಲ್ಬಗ೯,ಹಾಸನ,ಕೋಲಾರ,ಮಂಡ್ಯ,ಮೈಸೂರು,ಚಾಮರಾಜನಗರ,ಉತ್ತರ ಕನ್ನಡ,ರಾಯಚೂರು,ಶಿವಮೊಗ್ಗ,ಉಡುಪಿ,ದಕ್ಷಿಣ ಕನ್ನಡ,ದಾವಣಗೆರೆ,ಹಾವೇರಿ,ತುಮಕುರು,ರಾಮನಗರ ಮತ್ತು ಚಿಕ್ಕಳ್ಳಾಪುರ, ಯಾದಗಿರಿ ಎಂಬ 30 ಜಿಲ್ಲೆಗಲಿವೆ.ರಾಜಧಾನಿ ಬೆಂಗಳೂರು.ರಾಜ್ಯದ ಜನಸಂಖ್ಯೆ 61,130,704 (2011).

ಮೇಲ್ಕೈ ಲಕ್ಷಣ:ಕನಾ೯ಟಕದ ಬಹುಭಾಗ ದಖನ್ ಪ್ರಸ್ಥಭೂಮಿ ಪ್ರದೇಶದಲ್ಲಿದೆ.ಇದು ಭಾರತದಲ್ಲಿ ಅತ್ಯಂತ ಪುರಾತನವಾದ ನೆಲ.ಕನಾ೯ಟಕದ ಪಶ್ಚಿಮದಂಚಿನ ಕಿರಿದಾದ ನೆಲ ಮಾತ್ರ ತಗ್ಗುಪ್ರದೇಶ. ದಖನ್ನಿನ ಆಚೀಚೆ ಮಾಲೆಯಂತೆ ಹಬ್ಬಿರುವ ಪೂವ೯ ಪಶ್ಷಿಮ ಘಟ್ಟಗಳು ಕನಾ೯ಟಕದ ದಕ್ಷಿಣದಲ್ಲಿ ನೀಲಗಿರಿಯಲ್ಲಿ ಸಂಧಿಸುತ್ತವೆ.ಪಶ್ಚಿಮ ಕರಾವಳಿಯಿಂದ ಕಡಿದಾಗಿ ಮೇಲೇರುವ ಪಶ್ಷಿಮ ಘಟ್ಟಗಳು ಪೂವ೯ಘಟ್ಟಗಳಗಿಂತ ಹೆಚ್ಚು ಎತ್ತರ.ಸು.350 ಕಿಮೀ. ಉದ್ದದ ಪಶ್ಷಿಮಾದ ಕಡಲ ಕರೆ ಬಹುತೇಕ ನೇರ.ತೀರದಿಂದ ಸಮುದ್ರದತ್ತ ಚಾಚಿದಂತೆ 65-80 ಕಿಮೀ. ಖಂಡಾವರಣ ಪ್ರದೇಶದಲ್ಲಿ ಕದಲ ಆಳ 180 ಮೀ. ಅಡಿಗಳಿಗಿಂತ ಕಡಿಮೆ.ಕಡಿದಾದ ಬೆಟ್ಟದಿಂದ ಕೆಳಗಿಲಿದು ಸಮುದ್ರ ಸೇರುವ ಹೊಳೆ ಝರಿಗಳು ಜಲರಾಶಿಯಲ್ಲಿ ಹೊತ್ತು ತರುವ ಆಹಾರವು ಕಿರಿ ಆಳದ ಕಡಲೂ ಕನಾ೯ಟಕದ ಮತ್ಸ್ಯ ಸಂಪತ್ತಿಗೆ ಮೂಲಾಧಾರ.

ಕನಾ೯ಟಕದ ಮಧ್ಯ ಭಾಗದಲ್ಲಿ 15 ಉ.ಆ.ದ ಸನಯದಲ್ಲಿ ಹರಿಯುವ ತುಂಗಭದ್ರಾ ನದಿಯ ಉತ್ತರ ದಕ್ಷಿಣ ಭಾಗಗಳು ಕ್ರಮವಾಗಿ ಉತ್ತರ ಮತ್ತು ದಕ್ಷಿಣ ಕನಾ೯ಟಕಗಳೆಂದು ಹೆಸರಗಿವೆ.ಭೂ ರಚನೆ,ಮೇಲ್ಮೈಲಕ್ಷಣ,ಮಳೆಬೆಳೆ,ಜನರ ನಡೆ ನುಡಿ,ವ್ಯವಹಾರ,ಆಹಾರ,ಉಡಿಗೆತೊಡಿಗೆ ಇವುಗಳಲ್ಲಿ ಉತ್ತರ ದಕ್ಷಿಣಗಳಲ್ಲಿ ವೈಶಿಷ್ಟ್ಯಗಳುಂಟು.ಆದ್ದರಿಂದ ಪ್ರಾಕೃತಿಕವಾಗಿ ಕನಾ೯ಟಕವನ್ನು 3 ಪ್ರಮುಕ ವಿಭಾಗಗಳಾಗಿ ವಿಂಗಡಿಸಬಹುದು:1.ಮಲೆನಾಡು 2.ಮೈದಾನ ಮತ್ತು 3.ಕರಾವಳಿ.

1.ಮಲೆನಾಡು: ಇದ್ದು ಬೆಟ್ಟ ಗುಡ್ಡಗಳ ಬೀಡಾಗಿದ್ದರೂ ಕನಾ೯ಟಕದ ಸಂಪದ್ಭರಿತವಾದ ಪ್ರಾಕೃತಿಕ ವಿಭಾಗ.ರಾಜ್ಯದ ಪಶ್ಷಿಮಕ್ಕಿದ್ದು ಸಹ್ಯಾದ್ರಿ ಎಂದೇ ಪ್ರಸದ್ಧಿ.ಉತ್ತರ ದಕ್ಷಿಣವಾಗಿ 650 ಕಿಮೀ ಉದ್ದವಾಗಿ ಹಬ್ಬಿರುವ ಈ ಸಾಲುಗಳು ದಕ್ಷಿಣದತ್ತ ಸಾಗಿದಂತೆ ಹೆಚ್ಚು ಎತ್ತರವಾಗಿ,ಕೊನಗೆ ನೀಲಗಿರಿಯಲ್ಲಿ ಸಮಾವೇಶಗೊಳ್ಳುತ್ತವೆ.ರಾಜ್ಯದ ಸ್ಥಳವಿನ್ಯಾಸದ ಮೇಲೂ ಮೇಲ್ಮೈ ರಚನೆಯ ಮೇಲೂ ಇವುಗಳ ಪ್ರಭಾವ ಅತ್ಯಧಿಕ.ರಾಜ್ಯದ ಅನೇಕ ಮುಖ್ಯ ನದಿಗಳಿಗೆ ಈ ಸಹ್ಯಾದ್ರಿಯೇ ಉಗಮಸ್ಥನ.ಇದು ಪೂವ೯ಪಶ್ಚಿಮ ಜಲವಿಭಾಜಕ.ಉತ್ತರದಲ್ಲಿ ಈ ಶ್ರೇಣಿಗಳ ತಳದಲ್ಲಿ ಧಾರವಾಡ ಶಿಲಾವಗ೯ ದಕ್ಷಿಣದಲ್ಲಿ ಗ್ರಾನೈಟ್ ಶಿಲೆಗಳೂ ಊಂಟು.ಸಹ್ಯಾದ್ರಿಯ ನೆತ್ತಿಯ ಮೇಲಣ ಗಟ್ಟಿ ಶಿಲೆಗಳು ಮಳೆಗಾಳಿಗಳೇ ಮುಂತಾದ ಪ್ರಾಕೃತಿಕ ಜಂಜಡಗಳನ್ನೆದುರಿಸಿ ನಿಂತು ಎತ್ತರವಾಗಿಯೇ ಉಳಿದುಕೊಂಡಿವೆ.ಮೃದು ಶಿಲೆಗಳು ಸವೆದುಹೋಗಿ ಬಾಯ್ದೆರೆದು,ಘಟ್ಟಗಳ ನಡುವೆ ಅಲ್ಲಲ್ಲಿ ಸೀಳುಗಳು ಸಂಭವಿಸಿವೆ.ಸಹ್ಯಾದ್ರಿಯ ಶ್ರೇಣಿಗಳಲ್ಲಿ ಅನೇಕ ಉತ್ತುಂಗ

ಶಿಖರಿಗಳಿವೆ.ಈ ಭಾಗದಲ್ಲಿ ಕನಾ೯ಟಕದ ಅತ್ಯುನ್ನತ ಶಿಖರಿಗಳಿವೆ.ಸಹ್ಯಾದ್ರಿಯ ಬೃಹದ್ ಬಾಹುಗಳಲ್ಲೊಂದಾದ ಚಂದ್ರದ್ರೋಣಪವ೯ತ ಅಥವಾ ಬಾಬಾಬುಡನ್ ಗಿರಿಯಲ್ಲಿರುವ ಮುಳ್ಳಯ್ಯನಗರಿ ಶಿಕರದ.