ಪುಟ:Mysore-University-Encyclopaedia-Vol-4-Part-1.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಏಕೀಕರಣ

ಸರ್ಕಾರದ ವಿದ್ಯಾ ಇಲಾಖೆಯವರು ಬೆಂಗಳೂರಿನಲ್ಲಿ ನಡೆಸಬೇಕಾಗಿತ್ತು. ಕಾರಣಾಂತರಗಳಿಂದ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಲಿಲ್ಲ. ಎರಡನೆಯ ಸಮ್ಮೇಳನವೂ ಧಾರವಾಡದಲ್ಲಿ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್:ಮೂರನೆಯ ಅಖಿಲ ಕರ್ನಾಟಕ ಮಟ್ಟದ ಗ್ರಂಥಕರ್ತರ ಸಮ್ಮೇಳನವಾದರೂ ಬೆಂಗಳೂರಿನಲ್ಲಿ ನಡೆಯಬೇಕೆಂಬ ಕೆಅಲ್ವು ಗಣ್ಯರ ಅಪೇಕ್ಷೆಯು ಕರ್ನಾಟಕ (ಕನ್ನಡ) ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣವಾಯಿತು. ಎರಡೂ ಸಂಘಟನೆಗಳು ಸಾಹಿತ್ಯಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಟ್ಟರು ಸಹ, ಅವಕಾಶ ದೊರೆತಾಗಲೆಲ್ಲ ಏಕೀಕರಣದ ವಿಷಯದಲ್ಲೂ ಸಮರ್ಥವಾಗಿ ಕಾರ್ಯೋನ್ಮುಖವಾದವು. ಕರ್ನಾಟಕ ವಿದ್ಯಾವರ್ಧಕ ಸಂಘವು 7-10-1917 ರಂದು ನಡೆದ ತನ್ನ ವ್ಯವಸ್ಥಾಪಕ ಸಮಿತಿಯ ಸಭೆಯಲ್ಲಿ ಏಕೀಕರಣಕ್ಕೆ ಸಂಭಂಧಿಸಿದಂತೆ ಸ್ವೀಕಾರ ಮಾಡಿದ ಗೊತ್ತುವಳಿಯು ಈ ಕೆಳಕಂಡಂತಿದೆ.

'ಬ್ರಿಟಿಷ್ ಅಧಿಕಾರಕ್ಕೆ ಒಳಗಾದ ಎಲ್ಲಾ ಕನ್ನಡ ಊರು ತಾಲೂಕು, ಜಿಲ್ಲೆಗಳನ್ನು ಒಟ್ಟುಗೂಡಿಸಿ ಒಂದು ರಾಜಕೀಯ ವಿಭಾಗವನ್ನು ಮಾಡಿ ಅದಕ್ಕೆ ಕರ್ನಾಟಕ ಪ್ರಾಂತವೆಂದು ಕರೆಯುವ ಬಗ್ಗೆ ಸರ್ಕರಕ್ಕೆ ಬಿನ್ನಹ ಮಾಡಬೇಕು. ಉದಾಹರಣಾರ್ಥಸೊಲ್ಲಾಪುರ ಜಿಲ್ಲೆಯ ಕೆಲವು ಭಾಗ ಕನ್ನಡವಿರುತ್ತದೆ. ಮದ್ರಾಸ್ ಇಲಾಖೆಯಲ್ಲಿ ಬಳ್ಳರಿ, ದಕ್ಷಿಣ ಕನ್ನಡ ಈ ಜಿಲ್ಲೆಗಳು ಪೂರ್ಣಕನ್ನಡವಿದ್ದು ಕಡಪಾ, ಕರ್ನೂಲ, ಅನಂತಪುರ ಮುಂತಾದ ಜಿಲ್ಲೆಯಲ್ಲಿ ಎಷ್ಟೋ ಹಳ್ಳಿಗಳು ತಾಲೂಕುಗಳು ಕನ್ನಡ ಇರುತ್ತವೆ. ಇವುಗಳನ್ನೆಲ್ಲಾ ಒಟ್ಟುಗೂಡಿಸಿ ಒಂದು ಕರ್ನಾಟಕ ಇಲಾಖೆ ಅಥವ ಪ್ರಾಂತವೆಂಬ ರಾಜಕೀಯ ವಿಭಾಗವನ್ನು ಮಾಡಿದರೆ ಕನ್ನಡಿಗರ ಐಕ್ಯಕ್ಕೂ ಹಿತಕ್ಕೂ ಬೆಳವಣಿಗೆಗೂ ಅನುಕೂಲವಾಗುವುದು'.

ಮಾತ್ರವಲ್ಲದೆ ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮದ್ರಾಸ್ ಅಧಿಪತ್ಯ, ಕೊಡಗು ಇತ್ಯದಿ ಕನ್ನಡ ಪ್ರಾಂತಗಳ ಪ್ರಾತಿನಿಧ್ಯವೂ ಇದ್ದ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸಾಹಿತ್ಯ ಸಮ್ಮೇಳನಗಳಲ್ಲಿ ಏಕೀಕರಣದ ಪರವಾಗಿ ನಿರ್ಣಯ ಸ್ವೀಕರಿಸುವುದಲ್ಲದೆ, ತನ್ನ ಕನ್ನಡ್ ನುಡಿ ಮತ್ತು ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಗಳಲ್ಲಿ ಏಕೀಕರಣದ ಪರವಾದ ಲೇಖನಗಳನ್ನು ಪ್ರಕಟಿಸಿ ಏಕೀಕರಣಕ್ಕೆ ಶ್ರಮಿಸಿತು.

ಕರ್ನಾಟಕ ಸಭೆ: ರಾಷ್ಟೀಯ ನಾಯಕರು ಕರ್ನಾಟಕ ಏಕೀಕರಣದ ವಿಷಯದಲ್ಲಿ ಆಸಕ್ತಿವಹಿಸಿದ ಆನಂತರ ಅದಕ್ಕೊಂದು ನಿಶ್ಚಿತ ಎಂಬ ಸ್ವರೂಪ ದೊರೆತು. ಈ ನಿಟ್ಟಿನಲ್ಲಿ ಯಜಮಾನ್ಯ ವಹಿಸಿದವರು ಆಲೂರು ವೆಂಕಟರಾಯರು. 1905ರಿಂದಲೂ ಕರ್ನಾಟಕ ಏಕೀಕರಣಕ್ಕೆ ದುಡಿದು, ಏಕೀಕರಣ ಆದದ್ದನ್ನು ನೋಡಿ ಸಂತೋಷಪಟ್ಟ ಹಿರಿಯರಾದ ಆಲೂರು ವೆಂಕಟರಾಯರನ್ನು 'ಕನ್ನಡ ಕುಲಪುರೋಹಿತ' ಎಂದೇ ಕರೆಯಲಾಗಿದೆ. ಆಲೂರರ ಕರ್ನಾಟಕ ಏಕೀಕರಣ ಪರ ಹೋರಾಟಕ್ಕೆ 'ಹೋಂರೂಲ್' ಸಂದರ್ಭದಲ್ಲಿ ತಿಲಕರು ಆಡಿದ್ದ ಕನ್ನಡದಲ್ಲಿ ಮಾತನಾಡಿ ಕನ್ನಡ ಭಾಷೆಯ ಹಕ್ಕನ್ನು ಸ್ಥಾಪಿಸು ಎಂಬ ಮಾತುಗಳು ಪ್ರೇರಣೆ ಆಗಿದ್ದವು. ಕನ್ನಡ ಮತ್ತು ಕರ್ನಾಟಕದ ಬಗ್ಗೆ ಆಲೂರರಿಗೆ ಇದ್ದ ಗೌರವ ಅಭಿಮಾನ ಮತ್ತು ಕಳಕಳಿಗಳನ್ನು ಅವರ ಕರ್ನಾಟಕಗತವೈಭವ ಕೃತಿಯಲ್ಲಿ ಗುರುತಿಸಬಹುದು. ಆಲೂರರ ಜೊತೆಗೆ ವೆಂಕಟ ರಂಗೋಕಟ್ಟಿ, ಮುದವೀಡು ಕೃಷ್ಣರಾಯರು ಬಿಂದುರಾವ್ ಮುತಾಲಿಕ ದೇಸಾಯಿ, ಕಡಪಾ ರಾಘವೇಂದ್ರ ರಾವ್, ಗದಿಗೆಯ್ಯ ಹೊನ್ನಾಪುರ ಮಠ ಪಾಟೀಲ ಸಂಗಪ್ಪ ಮುಂತಾದ ಹಿರಿಯ ರಾಷ್ಟ್ರೀಯ ನಾಯಕರಿದ್ದರು. ಗದಿಗೆಯ್ಯ ಹೊನ್ನಾಪುರ ಮಠ ಅವರ ಅಟ್ಟದ ಮೇಲೆ 1961ರಲ್ಲಿ ಆಲೂರರು ಕಡಪ ರಾಘವೇಂದ್ರ ರಾಯರು ನರಗುಂದಕರರು ಒಟ್ಟಾಗಿ ಸ್ಥಾಪಿಸಿದ ಕರ್ನಾಟಕ ಸಭೆಯು ಕರ್ನಾಟಕ ಏಕೀಕರಣ್ವನ್ನೇ ಪ್ರಧಾನ ವಿಷಯವನ್ನಗಿ ಸ್ವೀಕರಿಸಿ ಕಾರ್ಯತತ್ಪರವಾಯಿತು.

ಕರ್ನಾಟಕ ರಾಜಕೀಯ ಪರಿಷತ್ತು: 1918ರಲ್ಲಿ ಅಖಿಲ ಕರ್ನಾಟಕ ರಾಜಕೀಯ ಪರಿಷತ್ತು ಸ್ಥಾಪನೆ ಆಯಿತು . ಏಕೀಕರಣ ವಿಚಾರಗಳಿಗೆ ರಾಜಕೀಯ ಬೆಂಬಲವೂ ದೊರೆಯಿತು. ಪರಿಷತ್ತಿನ ಮೊದಲು ಅಧಿವೇಶನವು 1920ರಲ್ಲಿ ಧಾರವಾಡದ ಉಳವಿ ಚನ್ನಬಸಪ್ಪನ ಗುಡ್ಡದ ಮೇಲೆ ಮೈಸೂರು ಸಂಸ್ಥಾನದ ನಿವೃತ್ತ ದಿವಾನ್ ವಿ.ಪಿ. ಮಾಧವರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸ್ಥೆಯು ಕನ್ನಡ ಮಾತನಾಡುವ ಜನರ ಪ್ರದೇಶವನ್ನೆಲ್ಲಾ ಸೇರಿಸಿ ಒಂದು ಸ್ವತಂತ್ರ ಪ್ರಾಂತವನ್ನಾಗಿಸಬೇಕೆಂಬ ನಿರ್ಣಯವನ್ನು ಸ್ವೀಕರಿಸಿತು. ಅದೇ ವರ್ಷ ನಾಗಪುರದಲ್ಲಿ ಸೇರಿದ್ದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಪ್ರಾಂತಿಕ ಕಂಗ್ರೆಸ್ ಸಮಿತಿಗಳ ರಚನೆಗೆ ಅವಕಾಶ ದೊರೆಯಿತು. ಕಡಪ ರಾಘವೇಂದ್ರರಾಯರು ಮತ್ತು ಶಾಂತಕವಿಗಳೆಂದು ಹೆಸರಾಗಿದ್ದ ಸಕ್ಕರಿ ಬಾಳಾಚಾರ್ಯರ ಪ್ರಯತ್ನದಿಂದಾಗಿ ಆ ಅಧಿವೇಶನಕ್ಕೆ ಕರ್ನಾಟಕದಿಂದ ಸುಮಾರು 800 ಪ್ರತಿನಿಧಿಗಳು ಹೋಗಿದ್ದರು. ಪ್ರಾಂತಗಳನ್ನು ಗುರುತಿಸಲು ಭಾಷೆಯೇ ಸರಿಯಾದ ಆಧಾರ ಎಂಬ ನಂಬಿಕೆ ಇದ್ದ ಮಹಾತ್ಮ ಗಾಂಧೀಜಿ ಅವರಿಗೆ ಭಾಷಾವಾರು ಪ್ರಾಂತ ರಚನೆಯ ಬಗ್ಗೆ ಒಲವಿತ್ತು.