ಪುಟ:Mysore-University-Encyclopaedia-Vol-4-Part-1.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಇತಿಹಾಸ ವೈಜ್ಞಾನಿಕ ಸಂಶೋಧನೆಗಳು ಬ್ರಹ್ಮಗಿರಿ,ಸಂಗನಕಲ್ಲು,ಮಸ್ಕಿ,ಜಡಿಗೆನಹಳ್ಳೀ ಮುಂತಾದೆಡೆಗಳಲ್ಲಿ ಮಾತ್ರ ನದೆದಿದೆ. ಪುರಾಣೇತಿಹಾಸ ಕಾಲದಲ್ಲಿ ಕರ್ನಾಟಕ ; ದಕ್ಷಿಣಭಾರತಕ್ಕೆ ಆರ್ಯರ ಪ್ರವೇಶವಾದ ಕಾಲದಿಂದ ಈ ಪ್ರದೇಶದ ಇತಿಹಾಸ ಆರಂಭವಾಗುತ್ತದೆ.ಅಗಸ್ತ್ಯ ದಕ್ಷಿಣದಲ್ಲಿ ಆರ್ಯ ಸಂಸ್ಕೃತಿ ಹರಡಿದನೆಂಬ ಸಂಗತಿ ಕಾವ್ಯ ಪುರಾಣಾಗಳಲ್ಲಿ ವಿಸ್ತೃತವಗಿದೆ.ಮಹಾಭಾರತದ ರೀತ್ಯಾ ಅಗಸ್ತ್ಯ ಕರ್ನಾಟಕದ ಉತ್ತರಭಾಗದಲ್ಲಿದ್ದ ವಾತಾಪಿ ಇಲ್ಲಲರೆಂಬ ಆರ್ಯಕುಲದ್ವೇಷಿಗಳಾದ ದೈತ್ಯಸೋದರರಲ್ಲಿ ಕಿರಿಯನಾದ ಇಲ್ಲಲನನು ಭಂಜಿಸಿ ವಾತಾಪಿಯ ಗರ್ವಭಂಗ ಮಾಡಿದ ಚಾಳುಕ್ಯ ರಾಜಧಾನಿಯಾದ ವಾತಾಪಿ(ಈಗಿನ ಬಾದಾಮಿ)ಈ ದೈತ್ಯಸೋದರರ ಸ್ಥಳವಾಗಿತ್ತೆಂದು ಇತಿಹಾಸಕಾರರ ನಂಬಿಕೆ.ಜಮದಗ್ನಿಪುತ್ರ ಪರಶುರಾಮ ಕ್ಷತ್ರಿಯ ನಿಗ್ರಹದ ಅನಂತರ ತನ್ನ ವಾಸಕ್ಕಾಗಿ ವರುಣದೇವನ ಪ್ರಸಾದದ ಫಲವಾಗಿ ಸಮುದ್ರದವರೆಗಿನ ಪಶ್ಚಿಮ ಕರಾವಳಿ ಕ್ಷೇತ್ರವನ್ನು ಪಡೆದನಂತೆ. ಇದು ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಐತಿಹ್ಯ ೧೨ನೆಯ ಶತಮಾನದ ಈ ಪ್ರದೇಶದ ಶಾಸನಗಳಲ್ಲೂ ಇದು ಉಕ್ತವಾಗಿದೆ. ರಾಮಯಣದ ದಂಡಕಾರಣ್ಯ ಪ್ರದೇಶವೇ ಅನಂತರದ ಕರ್ನಾಟಕದ ಭೂಭಾಗ ವಾನರಪ್ರಭುಗಳಾದ ವಾಲೀಸುಗ್ರೀವರ ಕಿಷ್ಕಿಂಧಾರಾಜ್ಯ ತುಂಗಭದ್ರಾ ತೀರದ ಈಗಿನ ಹಂಪೆಯ ಬಳಿಯಿರುವ ಪಂಪಾಸರೋವರದ ಪ್ರದೇಶವೆಂದು ಹೇಳಲಾಗಿದೆ.ಅಭಿನವ ಪಂಪನೆಂದು ಹೆಸರಾದ ನಾಗಚಂದ್ರನಿಂದ(ಸು೧೧೦೦)ರಚಿತವಾದ ರಾಮಚಂದ್ರಚರಿತ ಪುರಣದಲ್ಲಿ ಕಿಷ್ಕಿಂಧೆಯ ರಾಜನೂ ಪ್ರಜೆಗಳೂ ವಾನರರಲ್ಲವೆಂದೂ ಅವರ ಧ್ವಜದ ಲಾಂಛನ ವಾನರಸಂಕೇತ ಹೊಂದಿದ್ದುದರಿಂದ ಅವರನ್ನು ಹಾಗೆಂದು ವರ್ಣಿಸಲಾಗಿದೆಯೆಂದೂ ಹೇಳಿದೆ. ಇತಿಹಾಸ ದೃಷ್ಟಿಯಿಂದ ಕರ್ಣಾಟಕ ಪ್ರಸ್ತಾಪ ಮೊಟ್ಟಮೊದಲಿಗೆ ಮಹಾಭಾರತದಲ್ಲಿ ಬಂದಿದೆ. ಮಹಿಷಕ,ವನವಾಸಕ ಮತ್ತು ಕುಂತಳಗಳು ಉಕ್ತವಾಗಿವೆ.ಮಹಿಷಕವೆಂದರೆ ಅನಂತರ ಕಾಲದ ಮಹಿಷಮಂಡಲ(ಈಗಿನ ಮೈಸೂರು).ಈಗಿನ ಬನವಾಸಿ ಪ್ರಾಂತ್ಯವೇ ವನವಾಸಕವೆಂದೂ ಅನಂತರ ಕಾಲಾದಲ್ಲಿ ಉತ್ತರ ಕರ್ನಾಟಕದಲ್ಲಿದ್ದ ರಾಜ್ಯವೇ ಕುಂತಳವೆಂದೂ ಗುರುತಿಸಬಹುದಗಿದೆ.ರಾಮಾಯಣ ಮಹಾಭಾರತಗಳ ಘಟನಾವಳಿಗಳ ಕಾಲ ಚರ್ಚಾಸ್ಪದವಾಗಿದ್ದರೂ ಈಗಿನ ರೂಪದಲ್ಲಿ ಅವನ್ನು ಪ್ರಶ.ಪೂ ೨೦ ರಿಂದ ೧೦ನೆಯ ಶತಮಾನಗಳ ಕಾಲಕ್ಕೆ ವಿದ್ವಾಂಸರು ನಿರ್ದೇಶಿಸಿರುತ್ತಾರೆ.ಅದುದರಿಂದ ಕ್ರಿಸ್ತಶಕೆಗೂ ಮುನ್ನವೇ ಕರ್ನಾಟಕ ಅಸ್ತಿತ್ವಕ್ಕೆ ಬಂದಿತ್ತು. ಪ್ರಶ.ಪೂ.ನಾಲ್ಕನೆಯ ಶತಮಾನದಲ್ಲಿ ಮಗಧ ರಾಜ್ಯದ ನಂದ ಸಾರ್ವಭೌಮರ ಕಾಲದಲ್ಲಿ ಅವರ ಪ್ರಭವ ಕರ್ನಾಟಕದವರೆಗೂ ಹಬ್ಬಿತ್ತೆಂದು ತಿಳಿಸುವ ಐತಿಹಾಸಿಕ ಮಾಹಿತಿಗಳು ದೊರಕುತ್ತವೆ.ಮೌರ್ಯ ವಂಶದ ಸ್ಥಾಪಕನಾದ ಚಂದ್ರಗುಪ್ತ(ಪ್ರಶ.ಪೂ.ಸು ೩೨೪-೩೦೦)ಕರ್ನಾಟಕದ ಶ್ರವಣಬೆಳಗೊಳದಲ್ಲಿ ತನ್ನ ಗುರುವಿನೊಡನೆ ಬಂದು ನೆಲೆಸಿದುದಾಗಿ ಐತಿಹ್ಯಗಳೂ ಮಧ್ಯಕಾಲೀನ ಶಾಸನಗಳೂ ತಿಳಿಸುತ್ತವೆ.ಆತನ ಮೊಮ್ಮಗನಾದ ಅಶೋಕನ ಶಿಲಾಶಾಸನಗಳು ಈ ರಾಜ್ಯದ ಮಸ್ಥಿ,ಕೊಪ್ಪಳ,ಬ್ರಹ್ಮಗಿರಿ,ಸಿದ್ದಾಪುರ ಮತ್ತು ಜಟಿಂಗ ರಾಮೇಶ್ವರಗಳಲ್ಲಿ ದೊರಕಿರುವುದಲ್ಲದೆ ಮಸ್ಥಿಯ ಬಳಿಯ ಸುವರ್ಣಗಿರಿ ಮತ್ತು ಬ್ರಹ್ಮಗಿರಿಯ ಬಳಿಯ ಇಸಿಲ ನಗರಗಳು ಆತನ ಪ್ರಾದೇಶಿಕ ಮುಖ್ಯ ನಗರಗಳಾಗಿದ್ದುವೆಂಬ ಅಂಶವನ್ನು ತಿಳಿಸುತ್ತವೆ.ಇದರಿಂದ ಕರ್ನಾಟಕದ ಬಹುಭಾಗ ಮೌರ್ಯ ಸಾಮ್ರಾಜ್ಯಕ್ಕೆ ಸೇರಿದ್ದಿತೆಂದು ತಿಳಿದುಬರುತ್ತವೆ.ಅಶೋಕನ ರಾಜ್ಯ ಕಂಚಿಯವರೆಗೂ ಹಬ್ಬಿದ್ದು ಇಡೀ ಕರ್ನಾಟಕ ಅದರಲ್ಲಿ ಸೇರಿತ್ತೆಂಬುದು ನೀಲಕಂಟಶಾಸ್ತ್ರಿಯವರ ಅಭಿಪ್ರಾಯ. ಸಾತವಾಹನರು;-ಅನಂತರ ದಕ್ಷಿಣಾಪುರದ ಸಾರ್ವಭೌಮರಾಗಿದ್ದ ಸಾತವಾಹನರ ಆಡಳಿತಕ್ಕೆ ಕರ್ನಾಟಕದ ಬಹುಭಾಗ ಸೇರಿದ್ದಂತೆ ಕಾಣುತ್ತದೆ.ಸಾತವಾಹನದ ಮೂಲಪುರುಷನಾದ ಸೀಮುಕ(ಪ್ರಶ.ಪೂ ಸು ೬೦)ಕರ್ನಾಟಕದವನೆಂದೂ ಈತ ಬಳ್ಳಾರಿ ಜಿಲ್ಲೆಗೆ ಸೇರಿದವನೆಂದೂ ಹಲವಿದ್ವಾಂಸರು ಪ್ರತಿಪಾದಿಸಿದ್ದಾರೆ.ಈ ಪ್ರದೇಶದ ಮೇಲೆ ಅವರ ಆಳ್ವಿಕೆಯಿತ್ತೆಂಬುದಾಗಿ ಅನಂತರ ಶಾಸನಗಳೂ ಸೂಚಿಸುತ್ತವೆ.ಕರ್ನಾಟಕದ ಉತ್ತರಭಾಗ ಅವರ ಆಳ್ವಿಕೆಯಲ್ಲಿದ್ದರೆ ದಕ್ಷಿಣದಲ್ಲಿ ಮನ್ನಾಟ ಮೊದಲಾದ ಹಲವು ಸಣ್ಣರಾಜ್ಯಗಳಿದ್ದವು.ಈ ಕಾಲದಲ್ಲಿ ಸಾತಾವಾಹಾನರು ಮೆಡಿಟೆರೀನಿಯನ್ ಸಮುದ್ರದ ಪ್ರದೇಶಗಳೊಂದಿಗೂ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಪಡೆದಿದ್ದುದರಿಂದ ಕರ್ನಾಟಕದ ಜನರೂ ಅವುಗಳ ಪ್ರಯೋಜನ ಪಡೆಯುವಂತಾಯಿತು.ಇವರು ಪೂರ್ವದಿಕ್ಕಿನಲ್ಲಿ ಬಂಗಾಲ ಕೊಲ್ಲಿಯಿಂದಾಚೆಯಿದ್ದ ಪ್ರದೇಶಗಳೊಂದಿಗೂ ವ್ಯಾಪಾರ ಸಾಂಸ್ಕೃತಿಕ ಸಂಪರ್ಕಗಳನ್ನು ಹೊಂದಿದ್ದರೆಂಬುದಕ್ಕೆ ಅನೇಕ ಆಧಾರಗಳಿವೆ.ತತ್ಸಂಬಂಧವಾದ ಸಂಶೋಧನೆಗಳು ಇನ್ನೂ ಮುಂದುವರಿಯಬೇಕಾಗಿದೆ.ಸಾತವಾಹನ ವಂಶಕ್ಕೆ ಸೇರಿದ ಹಲವು ರಾಜರು ಕರ್ನಾಟಕದೊಡನೆ ಹೆಚ್ಚಿನ ಸಂಬಂಧ ಪಡೆದಿದ್ದರು.ಪುರಾಣಗಳಲ್ಲಿ ಈ ವಂಶದ ರಾಜನೊಬ್ಬನನ್ನು ಕುಂತಳ ಸಾತಕರ್ಣಿಯೆಂದು ಕರೆಯಲಾಗಿದೆ.ಸಾತವಾಹನ ವಂಶದ ೧೭ನೆಯ ದೊರೆಯೆಂದು ಹೇಳಲಾಗಿದ ಹಾಲ ಕುಂತಳದ ದೊರೆಯೆಂದು ವರ್ಣಿತನಾಗಿದ್ದನೆ.ಗಾಥಾ ಸಪ್ತಶತಿಯ ಕರ್ತ್ಯ ಈತನೇ ಎಂದು ಹೇಳಲಾಗಿದೆ. ಸುಮಾರು ಈ ಕಾಲದಲ್ಲಿದ್ದ ಕೆಲವು ಪಾಶ್ಚಾತ್ಯ ಲೇಖಕರು ಕರ್ನಾಟಕದ ಕೆಲವು ಪ್ರದೇಶಗಳ ಪ್ರಸ್ತಾಪ ಮಾಡಿದ್ದರೆ.ಪೆರಿಪ್ಲಸ್ ಆಫ್ ದಿ ಎರಿತ್ರಿಯನ್ ಸೀ ಎಂಬ ಗ್ರಂಥದಲ್ಲಿ (೧ನೆಯ ಶತಮಾನ)ಮತ್ತು ಪ್ಲಿನಿಯ (೭೭-೭೮),ಬರೆಹಗಳಲ್ಲಿ ಈ ಪ್ರಸ್ತಾಪಗಳಿವೆ.ಬಾದಾಮಿ (ಬಡಿಯಮಇಯೊಇ),ಮುದ್ಗಲ್(ಮಗೌಗೌಲ್ಕ),ಬನವಾಸಿ(ಬನಾಔಅಸೆಇ),ಹೊವಿನ ಹಿಪ್ಪರಗಿ(ಹಿಪ್ಪೊಕೌರ)ಗಳನ್ನೂ(ಮಲಿಪ್ಪಲ)ಟಾಲೆಮಿ(ಸು.೧೫೦)ಹೆಸರಿಸುತ್ತಾನೆ.ಸು.೨೯೦ರಲ್ಲಿ ರಚಿತವಾದ ಗ್ರೀಕ್ ಪ್ರಹಸನವೊದರಲ್ಲಿ ಬರುವ ಕೆಲವು ಶಬ್ದಗಳು ಕನ್ನಡವೆಂದು ವಿದ್ವಾಂಸರು ವಾದಿಸಿದ್ದಾರೆ.ಈ ಎಲ್ಲ ಆಧಾಗಳಿಂದ ಆ ವೇಳೆಗಾಗಲೇ ಕರ್ನಾಟಕ ಅಸ್ತಿತ್ವಕ್ಕೆ ಬಂದಿದ್ದುದಲ್ಲದೆ ತನ್ನದೇ ಆದ ಸಂಸ್ಕೃತಿಯನ್ನು ನಿರ್ಮಿಸಿಕೊಂಡಿದ್ದು ಪರಕೀಯರೊಂದಿಗೂ ಸಂಪರ್ಕ ಬೆಳೆಸಿಕೊಂಡಿತ್ತೆಂದು ಹೇಳಬಹುದು. ಸಾತವಾಹನದ ಅನಂತರ ಚುಟುವಂಶದ ರಾಜರು ಬನವಾಸಿ ಪ್ರಾಂತ್ಯದಲ್ಲಿ ಪ್ರಬಲರಾದರು.ಸ್ವಲ್ಪಕಾಲಾನಂತರ ಈ ಪ್ರದೇಶದಲ್ಲಿ ಕದಂಬರೂ ದಕ್ಷಿಣ ಕರ್ನಾಟಕದಲ್ಲಿ ಗಂಗರೂ ಇತರ ಭಾಗಗಳಲ್ಲಿ ಬಾಣರೂ ಆಳುಪರೂ ಸೇಂದ್ರಕರೂ ನಳರೂ ಸಣ್ಣ ಸಣ್ಣ ರಾಜ್ಯಗಳನ್ನು ಸ್ಥಾಪಿಸಿಕೊಂಡಿದ್ದರೆಂದು ತಿಳಿದುಬರುತ್ತದೆ.ಚುಟುವಂಶದ ರಾಜರ ವಿಷಯ ಹೆಚ್ಚು ತಿಳಿಯದಿದ್ದರೂ ಬನವಾಸಿಯ ನಾಗಶಾಸನದಲ್ಲಿ ಉಕ್ತನಾಗಿರುವ ಹಾರೀತಿಪುತ್ರ ವಿಣ್ಣುಕಡ ಚುಟುಕುಲಾನಂದ ಸಾತಕರ್ಣಿ ಇವರಲ್ಲೊಬ್ಬ ಈಗಿನ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿರುವ ನಾಗಶಿಲೆಯ ಶಾಸನದಲ್ಲಿ ವಿಣ್ಣುಕಡ ಚುಟುಕುಲಾನಂದ ಸಾತಕರ್ಣಿ,ಆತನ ಪುತ್ರಿ ಶಿವಸ್ಕಂಧನಾಗಶ್ರೀ-ಇತರ ಹೆಸರುಗಳು ಉಕ್ತವಾಗಿವೆ.ವಿಣ್ಣುಕಡ ಸಾತಕರ್ಣಿ ಬನವಾಸಿಯ ದೊರೆಯೆಂದು ಮಳವಳ್ಳಿ ಶಾಸನ ತಿಳಿಸುತ್ತದೆ.ಬಹುಶಃ ಮಳವಳ್ಳಿ ಶಾಸನದ ವಿಣ್ಣುಕಡ ಸಾತಕರ್ಣಿ ಅದೇ ಹೆಸರಿನ ೨ನೆಯ ವ್ಯಕ್ತಿಯಾಗಿದ್ದು ೧ನೆಯ ಸಾತಕರ್ಣಿಯ ಮೊಮ್ಮಗನೂ ಶಿವಸ್ಕಂಧ ನಾಗಶ್ರೀಯ ಮಗನೂ ಆಗಿದ್ದಿರಬಹುದು.ಶಿವಸ್ಕಂಧ ನಾಗಶ್ರೀ ಮತ್ತು ಸಮಕಾಲೀನ ಪಲ್ಲವದೊರೆ ಶಿವಸ್ಕಂಧವರ್ಮ-ಈ ಹೆಸರುಗಳಲ್ಲಿ ಹೋಲಿಕೆಯಿರುವುದರಿಂದಲೂ ಆ ಕಾಲಾದಲ್ಲಿ ಪಲ್ಲವರು ಬಳ್ಳಾರಿ ಪ್ರದೇಶದ ಮೇಲೆ ಅಧಿಕಾರ ಪಡೆದಿದ್ದುದರಿಂದಲೂ ಇವರುಗಳಲ್ಲಿ ಸಂಬಂಧವಿದ್ದಿರಬಹುದೆಂದು ಭಾವಿಸಲಾಗಿದೆ.ಕದಂಬ ಸಂತತಿಯ ಸ್ಥಾಪಕ ಮಯೂರಶರ್ಮ ಪಲ್ಲವರಿಂದ ತನ್ನ ರಾಜ್ಯಪ್ರದೇಶವನ್ನು ಗೆದ್ದನೆಂಬ ಅಂಶ ಈ ವಾದಕ್ಕೆ ಸಹಾಯಕವಾಗಿದೆ.ಬಾಣರು ಪ್ರಸಕ್ತ ಶಕೆಯ ಆರಂಭಕಾಲದಿಂದ ಸುಮಾರು ೧೦ನೆಯ ಶತಮಾನದವರೆಗೂ ಕೋಲಾರ ಜಿಲ್ಲೆಯ ಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದರು.ಬಾಣರು ಪೂರ್ವಭಾಗದಲ್ಲಿದ್ದರೆ ಆಳುಪರು ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಪ್ರಸಕ್ತ ಶಕೆಯ ಆರಂಭದಿಂದ ೧೫ನೆಯ ಶತಮಾನದವರೆಗೂ ರಾಜ್ಯಭಾರ ಮಾಡುತ್ತಿದ್ದರು.ಶಿವಮೊಗ್ಗ ಪ್ರದೇಶದಲ್ಲಿ ಸೇಂದ್ರಕರೂ ಬಳ್ಳಾರಿಯ ಸುತ್ತುಮುತ್ತಣ ನಳರೂ ಆಳುತ್ತಿದ್ದರು. ಕದಂಬರು;ಸಾತವಾಹನದ ಅನಂತರ ಪ್ರಾಮುಖ್ಯಗಳಿಸಿದ ಕದಂಬ ಸಂತತಿಯನ್ನು ೩೦೦ರ ಸುಮಾರಿನಲ್ಲಿ ಸ್ಥಾಪಿಸಿದಾತ ಬ್ರಾಹ್ಮಣ ಕುಲದ ಮಯೂರವರ್ಮ.ಈಚೆಗೆ ಇವರ ರಾಜಧಾನಿ ಬನವಾಸಿ ಬಳಿಯ ಗುಡ್ನಾಪುರದಲ್ಲಿ ದೊರೆಕಿದ ರವಿವರ್ಮನ ಶಾಸನದಲ್ಲಿ ಈತನ ತಂದೆತಾತಂದಿರ ವಿಷಯವಾಗಿ ಕೆಲವು ಮಾಹಿತಿಗಳು ದೊರೆಕಿವೆ.ಪಲ್ಲವರಿಗೆ