ಪುಟ:Mysore-University-Encyclopaedia-Vol-4-Part-1.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಟಕ ಸ್ವಾತಂತ್ರ್ಯ ಚಳುವಳಿ:ಬ್ರಿಟಿಷರು ಆಕ್ರಮಣ ಕಾಲದಿಂದಲೇ ಒಂದು ದೃಷ್ಟಿಯಲ್ಲಿ ಆರಂಭವಾಗಿ,೧೯ನೆಯ ಶತಮಾನದ ನಡುಗಾಲದಿಂದ ಕ್ರಮೇಣ ತೀವ್ರವಾಗಿ,೨೦ನೆಯ ಶತಮಾನದ ವ್ಯಪಕವಾಗಿ ಹಬ್ಬಿ,೧೯೪೭ರಲ್ಲಿ ಯಶಸ್ವಿಯಾಗಿ ಪರ್ಯವಸಾನ ಹೊಂದಿನ ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಅಂಗವಾಗಿದ್ದೂ ವಿಶಿಷ್ಟವಾಗಿ ವಿಕಾಸಗೊಂಡ ಕರ್ನಾಟಕ ಸ್ವತಂತ್ರ್ಯ ಚಳವಳಿಯಲ್ಲಿ ಇತಿಹಾಸವನ್ನು ಸ್ಥೂಲವಾಗಿ ಮೂರು ಕಾಲಗಳಾಗಿ ವಿಂಗಡಿಸಬಹುದಾಗಿದೆ.ಅಂತರಾಷ್ಟೀಯವೆನ್ನಬಹುದಾದ ರೀತಿಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಬ್ರಿಟಿಷರು ವಿರುದ್ದ ನಡೆಸಿದ ಹೋರಾಟಗಳದು ಮೊದಲನೆಯ ಘಟ್ಟ ಬ್ರಿಟಿಷರು ಭಾರತದಲ್ಲಿ ಭದ್ರವಾಗಿ ನೆಲೆಗೊಳ್ಳುತ್ತಿದ್ದ ಕಾಲದಲ್ಲಿ ಇವರ ಆಡಳಿತವನ್ನು ಪ್ರತಿಭಟಿಸಿ ಅಲ್ಲಲ್ಲಿ ಸಂಭವಿಸಿದ ಸಶಸ್ತ್ರ ಬಂಡಾಯಗಳದು ಎರಡನೆಯ ಘಟ್ಟ ಮುಂದೆ,ಸುಮಾರು ಮುಕ್ಕಾಲು ಶತಮಾನದ ಅನಂತರ,ಸಾರ್ವತ್ರಿಕವಾಗಿ ಪರಿಣಮಿಸಿ ಬ್ರಿಟಿಷರ ಉಚ್ಚಾಟನೆಗೆ ಕಾರಣವಾದ ಅಹಿಂಸಾತ್ಮಕ ಸಮರದ್ದು ಮೂರನೆಯ ಘಟ್ಟ ಈ ಮೂರು ಘಟ್ಟಗಳನ್ನೂ ಈ ಲೇಖನದಲ್ಲಿ ವಿವೇಚಿಸಲಾಗಿದೆ.

೧೮ನೆಯ ಶತಮಾನ ಮುಗಿಯುವ ವೇಳೆಗೆ ಆಗಲೇ ಬ್ರಿಟಿಷರು ಭಾರತದ ಭಾವೀ ಆಡಳಿತಗಾರರು ಎಂಬ ಸ್ಪಷ್ಟವಾಗಿತ್ತು.೧೬-೧೭ನೆಯ ಶತಮಾನಗಳಲ್ಲಿ ಸಮಗ್ರ ಭಾರತವನ್ನಾಳಿ(ದಕ್ಷಿಣದ ಕೆಲವು ಪ್ರದೇಶಗಳು ಹೊರತು) ಮೆರೆದ ಮೊಗಲ್ ಸಾಮ್ರಾಜ್ಯ ೧೮ನೆಯ ಶತಮಾನದ ಆರಂಭ ಕಾಲಕ್ಕೇ ಕ್ಷೀಣಿಸಿತು.ಮರಾಠರು ಆ ಸಾಮ್ರಾಜ್ಯದವು ಉತ್ತರಾಧಿಕಾರಿಗಳಾಗಲೆತ್ನಿಸಿ ವಿಫ಼ಲರಾದರು;ಮೂರನೆಯ ಪಾಣಿಪಟ್ ಕದನದಲ್ಲಿ(೧೭೬೧) ಅವರ ಪ್ರಯತ್ನಗಳೆಲ್ಲ ಮಣ್ಣುಗೂಡಿದುವು.ವ್ಯಪಾರಕ್ಕಾಗಿ ಭಾರತಕ್ಕೆ ಬಂದಿದ್ದ ಇಂಗ್ಲಿಷರು ಭಾರತದ ರಾಜಕೀಯ ಗೊಂದಲವನ್ನು ತಮ್ಮ ಲಾಭಕ್ಕಾಗಿ ಉಪಯೋಗಿಸಿಕೊಂಡರು.೧೭೫೭ರಲ್ಲಿ ನಡೆದ ಪ್ಲಾಸಿ ಕದನದ ಅನಂತರ ಬಹು ಬೇಗ ಬಂಗಾಳ ಅವರ ಸ್ವಾಧೀನವಾಯಿತು.ದಕ್ಷಿಣ ಭಾರತದಲ್ಲೂ ಅವರ ದೇಶೀಯರ ಪಕ್ಷ-ಪ್ರತಿಪಕ್ಷ ಹೋರಾಟಗಳಲ್ಲಿ ಭಾಗವಹಿಸಿದರು.೧೭೬೦ರಲ್ಲಿ ನಡೆದ ವಂಡಿವಾಷ್ ಕದನದಲ್ಲಿ ಅವರ ಗಳಿಸಿದ ವಿಜಯದ ಫ಼ಲವಾಗಿ ಅಲ್ಲೂ ಅವರೇ ಅಳರಸರಾಗುವುದು ಖಂಡಿತವೆಂಬುದು ಸ್ಪಷ್ಟವಾಯಿತು.ಕರ್ನಟಕದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಗೆ ಈ ಘಟನೆಗಳೇ ಹಿನ್ನೆಲೆಯೆನ್ನಬಹುದು.