ಪುಟ:Mysore-University-Encyclopaedia-Vol-4-Part-1.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಸ್ವಾತಂತ್ರ್ಯ ಚಳವಳಿ

ಲಕ್ಕ್ಷ್ಮೇಶ್ವರದಲ್ಲಿ ಪಿಂಗಾಂಣಿ ಸಾಮಾನು- ಹೀಗೆ ನಾನಾ ಕಡೆಗಳಲ್ಲಿ ದಿನಬಳಿಕೆಯ ಸಾಮಾನು ತಯಾರಿಕೆ ಪ್ರಾರಂಭವಾಯಿತು. ಇದಕ್ಕೆ ಪೋಷಕವಾಗಿ ರಾಷ್ಟ್ರೀಯ ಬ್ಯಾಂಕ್ ಗಳನ್ನು ಸ್ಥಾಪಿಸಿದ್ದರು. ರಾಣಿಬೆನ್ನೂರು ಮುಂತಾದ ಕಡೆಗಳಲ್ಲಿ ವಿದೇಶಿ ಬಟ್ಟೆಗಳನ್ನು ಸುಟ್ಟರು. ಧಾರವಾಡ, ಬೆಳಗಾವಿ ನವಗುಂದ, ಹಾನಗಲ್ ಮುಂತಾದ ಅನೇಕ ಕಡೆಗಳಲ್ಲಿ ರಾಷ್ಟ್ರೀಯ ವಿದ್ಯಾಶಾಲೆಗಳು ಸ್ಥಾಪಿತವಾದವು.

ಲೋಕಮಾನ್ಯ ತಿಲಕರ ಕೇಸರಿ ಪತ್ರಿಕೆಯಲ್ಲಿ ಬರೆದಿದ್ದ ಒಂದು ಲೇಖನ್ ರಾಜ್ಯದ್ರೋಹವೆಂದು ಅವರನ್ನು ನ್ಯಾಯಸ್ಥಾನದಲ್ಲಿ ವಿಚಾರಣೆಗೊಳಪಡಿಸಿ ಅವರಿಗೆ ಆರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದಾಗ ಇದಕ್ಕೆ ವಿರೋಧವಾಗಿ ಮೆರವಣಿಗೆಗಳು, ಸಭೆಗಳು ದೇಶದ ನಾನಾ ಕಡೆ ಜರುಗಿದವು. ಇವುಗಳನ್ನ್ನಡಗಿಸುವುದಕ್ಕೆ ನಾಟಿ ಪ್ರಯೋಗವೆ ಮುಂತಾದ ಕ್ರಮಗಳಾನ್ನು ಸರ್ಕಾರ ಕೈಗೊಂಡಿತು. ಕರ್ನಾಟಕದಲ್ಲಿ ಸರ್ಕಾರಕ್ಕೆ ಪ್ರತಿಭಟನೆ ವ್ಯಾಪಕವಾಗಿತ್ತು. ದಕ್ಷಿಣ ಕನ್ನಡದಲ್ಲಿ ಅಮ್ಮೆಂಬಳ ಶ್ರೀನಿವಾಸ ಪೈ, ಸುಬ್ಬರಾಯ ಬಾಳಿಗ ಮುಂತಾದವರು. ಬಳ್ಳರಿಯ ಕಡೆ ಕೋಲಾಚಲಂ ವೆಂಕಟರಾವ್ ಮತ್ತು ಸಭಾಪತಿ ಮೊದಲಿಯರ್ ಮುಂತಾದವರು ಸರ್ಕಾರವನ್ನು ಖಂಡಿಸಿದಲ್ಲದೆ ಕಾಂಗ್ರೆಸ್ ಚಳುವಳಿಯನ್ನು ಮುಂದುವರೆಸಿದರು. 1909ರಲ್ಲಿ ಮಾರ್ಲೆ-ಮಿಂಟೊ ಸುಧರಣಿಗಳು ಬಂದಾಗ ಕಾಂಗ್ರೆಸ್ ಅದನ್ನು ವಿರೋಧಿಸಿತು. 

1914ರಲ್ಲಿ ಯೂರೋಪಿನಲ್ಲಿ ವಂದನೆಯ ಮಹಾಯುದ್ಧ ಪ್ರಾರಂಭವಾಯಿತು. ಪ್ರಜಾಪ್ರಭುತ್ವದ ಉಳಿವಿಗಾಗಿ ಈಯುತ ನಡೆಯಿತೆಂಬುದಾಗಿ ಮಿತ್ರ ರಾಷ್ಟ್ರಗಳು ಘೋಷಿಸಿಕೊಂಡರು. ಭಾರತದಲ್ಲಿ ಮಾತ್ರ ಅದನ್ನು ಸ್ಥಾಪಿಸುವ ಸೂಚನೆಗಳಿರಲಿಲ್ಲ. ಆದರೂ ಭಾರತ ಬ್ರಿಟನ್ ಗೆ ನೀಡಿದ ನೆರವು ಅಪಾರ. ಇದರ ಫಲವಾಗಿ 1919ರ ಸುಧಾರಣೆಗಳು ಬಂದವು. ಆದರೆ ಇವು ಕಾಂಗ್ರೆಸ್ ಗೆ ತೃಪ್ತಿ ಕೊಡಲಿಲ್ಲ. ಗಾಂಧೀಜಿಯವರಾಗಲೆ ದಕ್ಷಿಣ ಆಫಿಕಾದಿಂದ ಭಾರತಕ್ಕೆ ಬಂದಿದ್ದರು. ಮುಂದೆ ಭಾರತದ ಹೋರಾಟ ನಿರ್ದಿಷ್ಟ ಮಾರ್ಗದಲ್ಲಿ ಮುಂದುವರೆಯಿತು.

ಬೆಳಗಾಂವಿಯ ಕಾಂಗ್ರೆಸ್ ಅಧಿವೇಶನ: ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ಕರ್ನಾಟಕದ ಬೆಳಗಂವಿಯಲ್ಲಿ ಜರುಗುವುದೆಂಬ ತೀರ್ಮಾನವಾದಾಗ ಕನ್ನಡ ಜನ ಹೆಮ್ಮೆಯಿಂದಲೂ ಉತ್ಸಾಹದಿಂದಲೂ ಅದಕ್ಕೆ ಸಿದ್ಧತೆ ಮಾಡಿಕೊಂಡರು. ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಅಧಿವೇಶನ, ಬಿಜಾಪುರ ಜಿಲ್ಲಾ ಕಾಂಗ್ರೆಸ್ ಅಧಿವೇಶನ, ಕರ್ನಾಟಕ ಖಿಲಾಫತ್ ಪರಿಷತ್, ಭಗಿನಿಮಂಡಲ ಪರಿಷತ್, ಕರ್ನಾಟಕ ಸಾಹಿತ್ಯ ಸಮ್ಮೇಳನ, ಸ್ವಯಂ ಸೇವಕರ ಸಮ್ಮೇಳನ ಇವು ಬಿಜಾಪುರದಲ್ಲಿ ಜರುಗಿದವು. ಖಾದಿ ವಸ್ತುಪ್ರದರ್ಶನ, ದನಗಳ ಜಾತ್ರೆ ಮತ್ತು ರಾಶ್ಟ್ರೀಯ ಗೀತೆಗಳ ಕಂಠಪಾಠ ಸ್ಪರ್ಧೆಗಳು ಸಾಂಗವಾಗಿ ನೆರವೇರಿದವು.ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮ್ಮೇಳನಕ್ಕೆ ಸಿ. ರಾಜಗೋಪಾಲಚಾರಿ ರವರೇ ಅಧ್ಯಕ್ಷರು. ಕಾರ್ನಾಡ್ ಸದಾಶಿವರಾವ್, ಹರ್ಡೇಕರ್ ಮಂಜಪ್ಪ, ಎನ್. ಸಿ. ಕೇಳ್ಕರ್ ಮುಂತಾದ ಅಖಿಲ ಭಾರತ ಖ್ಯಾತಿ ಪಡೆದ ಅನೇಕರು ಅಧಿವೇಶನದಲ್ಲಿ ಹಾಜರಿದ್ದರು. ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಕರ್ನಾಟಕದ ಭಾಗ್ಯ ವಿಶೇಶವೆಂಬಂತೆ ಗಾಂಧೀಜಿಯವರೇ ಬೆಳಂಗಾವಿಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು.

ಗಾಂಧೀಜಿಯವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ನಾಡಿನ ಐಕ್ಯಮತ್ಯ ಅಸ್ಪೃಶ್ಯತಾ ನಿವಾರಣೆ, ಖಾದಿ ಪ್ರಚಾರ, ಗ್ರಾಮೋದ್ಯೋಗ, ಸ್ವದೇಶಿ, ಅಹಿಂಸೆ ಮುಂತಾದವುಗಳ ಬಗ್ಗೆ ಭಾಷಣ ಮಾಡಿದರು. ಈ ರಚನಾತ್ಮಕ ಕಾರ್ಯಗಳು ಸ್ವಾತಂತ್ರ್ಯ ಚಳವಳಿಯಷ್ಟೆ ಮುಖ್ಯವೆಂದು ಒತ್ತಿ ಹೇಳಿದರು. ಕರ್ನಾಟಕ ಜನತೆಯಲ್ಲಿ ಹೊಸ ಸ್ಪೂರ್ಥಿ ಮೂಡಿತು. ನಾಡಿನ ಮುಖಂಡರೆಲ್ಲಾ ಕರ್ನಾಟಕದ ನಾನಾ ಕಡೆ ಸಂಚರಿಸಿ ಗಾಂಧೀಜಿಯವರ ಸಂದೇಶವನ್ನು ಜನರಲ್ಲಿ ಹರಡಿದರು. ಮೈಸೂರು ಸಂಸ್ಥಾನದಲ್ಲಿ ಕೆಲವು ಕಡೆ ಮೆರವಣಿಗೆ ಭಾಷಣಗಳನ್ನು ಅಧಿಕಾರಿಗಳು ನಿಶೇಧಿಸಿದರು ರಚನಾತ್ಮಕ ಕಾರ್ಯಗಳಿಗೆ ಸರ್ಕಾರ ಅಡ್ಡಿಬರಲಿಲ್ಲ. ಆದರೆ ಕರ್ನಾಟಕದ ಇತರೆ ಕಡೆಗಳಲ್ಲಿ ಚಳುವಳಿಗಾರರಿಗೂ ಅಧಿಕಾರಿಗಳಿಗೂ ಘರ್ಷಣೆ ಅನಿವಾರ್ಯವೆಂಬುದು ಸ್ಪಷ್ಟವಾಯಿತು. ಹೋರಾಟ ಮುಂದುವರೆಯಬೇಕಿತ್ತು. ಕರ್ನಾಟಕದ ಜನರು ಸಿದ್ಧವಾಗಿದ್ದರು.

ಕಾನೂನುಭಂಗ ಚಳವಳಿ: ಗಾಂಧೀಜಿಯವರು 1930ರ ಎಪ್ರಿಲ್ 6ರಂದು ದಂಡಿಯಾತ್ರೆ ಪ್ರಾರಂಭಿಸಿದರು. ಕರ್ನಾಟಕದ ತಂಡದಲ್ಲಿ ಮೊದಲಿಂದ ಇದ್ದವರು ಮೈಲಾರ ಮಹಾದೇವಪ್ಪ ಮಾತ್ರ. ಆದರೆ ಹುಬ್ಬಳ್ಳಿ, ಬೆಳಗಾಂವಿ, ಮಂಗಳೂರು ಮುಂತಾದ ಕಡೆಗಳಿಂದ ಸ್ವಯಂ ಸೇವಕರು ಬಂದು ಸೇರಿಕೊಂಡರು. ಸರ್ಕಾರದ ಮುಖಂಡರನ್ನು ಹಿಡೀದು ಶಿಕ್ಷೆಗೊಳಪಡಿಸಿತು. ವಿದ್ಯಾರ್ಥಿಗಳು ಬಂದು ಸೇರಿಕೊಂಡರು. ಸರ್ಕಾರದ ದಬ್ಬಳಿಕೆ ಹೆಚ್ಚಿದಂತೆ ಸತ್ಯಾಗ್ರಹಿಗಳ ಸಂಖ್ಯೆಯು ಹೆಚ್ಚಿತು. ಸ್ತ್ರೀಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದರು. ಗಾಂಧೀಜಿಯವರು ದರ್ಶನದಲ್ಲಿದ್ದ ಉಪ್ಪಿನ ಉಗ್ರಾಣದ ಮೇಲೆ ದಾಳಿ ನಡೆಸಿದಾಗ, ಕರ್ನಾಟಕದ ತಂಡ ಸಾಣುಕಟ್ಟೆ ಉಗ್ರಾಣಕ್ಕೆ ಹೋಗಿ ನೂರಾರು ಪೌಂಡು ಉಪ್ಪನ್ನು ಸಾಗಿಸಿ ಕುಮಟದಲ್ಲಿ ಮಾರಿತು. ಮೇ 4ರಂದು ಗಾಂಧೀಜಿಯವರನ್ನು ಬಂಧಿಸಿ ಏರ್ವಡ್ ಸೆರೆಮನೆಗೆ ಕೊಂಡೊಯ್ದರು. ಹರತಾಳ ಖಂಡನಾಸಭೆ ಪ್ರದರ್ಶನಗಳು ಎಲ್ಲೆಲ್ಲು ಜರುಗಿದವು. ಉಪ್ಪಿಗೆ ಮಾತ್ರ ಸೀಮಿತವಾಗಿದ್ದ ಕಾನೂನು ಉಲ್ಲಂಘನೆ ಇತರ ಕೆಲವು ವಸ್ತುಗಳಿಗೂ ಹರಡಿತು. ಸತ್ಯಾಗ್ರಹದ ಸಮಾಚಾರ ಹರಡದಂತೆ ಸರ್ಕಾರ ಹೊಸ ವೃತ್ತಪತ್ರಿಕಾ ಆಜ್ಞೆಗಳ್ನ್ನು ಹೊರಡಿಸಿತು: ಜನ ಕಲ್ಲಚ್ಚಿನ ಪತ್ರಿಕೆಗಳನ್ನು ಹೊರಡಿಸಿ ಜನರಲ್ಲಿ ಹಂಚಿದರು. ಸತ್ಯಾಗ್ರಹಿಗಳು ಯಾವ ರೀತಿಯ ಆಶ್ರಯವನ್ನು ಕೊಡಬಾರದೆಂದು ಸರ್ಕಾರ ಆಜ್ಞೆ ಹೊರಟಿತು. ಗೃಹಿಣಿಯರು ಕೂಡ ಇದನ್ನು ಉಲ್ಲಂಘಿಸಿ ಅವರಿಗೆ ಆಶ್ರಯ ನೀಡಿದರು.