ಪುಟ:Mysore-University-Encyclopaedia-Vol-4-Part-2.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಳಿದವೆಲ್ಲ ಗಂಭೀರ ವಿಷಯಗಳು. ಕೊನೆಯ ಸುಮಾರು ೨೦ ಪುಟಗಳಲ್ಲಿ ಯಾವುದಾದರೊಂದು ಪ್ರಸಿದ್ಧ ಪುಸ್ತಕದ ಸಂರಗ್ರಹ ಇರುತ್ತದೆ. ಒಟ್ಟಿನ ಮೇಲೆ ಶೇಕಡ ೬೫ ರಿಂದ ೭೫ ರ ವ ಅರೆಗೆ ಕಥೇತರ ವೆಷೆಯಗಳನ್ನೊಳಗೊಂಡ ಈ ಮಾಸಪತ್ರಿಕೆ ತುಂಬ ಜನಪ್ರಿಯವಾಗಿದೆ. ಕಸ್ತೂರಿ ತೀರ ಗಹನವೂ ಅಲ್ಲದೆ ತೀರ ಸಮಾನ್ಯ ಮನರಂಜನೆಗೂ ಮೀಸಲಾಗಿಲ್ಲದೆ, ಸುಶಿಕ್ಷಿತ ವರ್ಗದ ಓದುಗಳನ್ನು ಗುರಿಯಾಗಿಟ್ಟುಕೊಂಡು ಲೇಖನೆಗಳನ್ನು ಆರಿಸುತ್ತದೆ ಅದು ಭಾರತೀಯ ಅಥವಾ ವಿದೇಶಿ ಇಂಗ್ಲಿಷ್ ಪುಸ್ತಕ ಪತ್ರಿಕೆಗಳಿಂದಲ್ಲದೆ ಎಲ್ಲ ಪ್ರೌಡ ಭಾರತೀಯ ಭಾಷೆಗಳಿಂದಲೂ ಕಥೆ ಮತ್ತು ಲೇಖನಗಳ‍ನ್ನು ಆಯ್ದುಕೊಳ್ಳತ್ತದೆ ಇವಲ್ಲದೆ ಸ್ವತಂತ್ರ ಲೇಖನ ಮತ್ತು ಕಥೆಗನ್ನು ಸಾಕಷ್ಟು ಒಳಗೊಂಡಿರುತ್ತದೆ ಒಂದು ಮಾದರಿ ಸಂಚಿಕೆಯಲ್ಲಿ ಇಂಗ್ಲಿಷ್,ಹಿಂದಿ, ಮರಾಟಿ, ಬಂಗಾಲಿ, ತೆಲುಗು,ತಮಿಳು, ಮಲಯಾಲಿ ಲೇಖನ ಅಥವಾ ಕಥೆಗಳು ಇರಬಹುದು ಪ್ರತಿಸಲವೂ ಜೀವನಚರಿತ್ರ ಮತ್ತು ವ್ಯಕ್ತಿಚರಿತ್ರಳೂ ವಿಜ್ಞಾನ ವೈದ್ಯಾಕೀಯ ರಾಜಕೀಯ ಸಮಾಜಿಕ ಭೌಗೋಳಿಕ ವಿಷಯಗಳೂ ಇರುತ್ತವೆ ರಾಜಕೀಯದಲ್ಲಿ ಪಕ್ಷಪಂಥಗಳ ಪ್ರತಿಪಾದನೆಗಿಂತಲೂ ವಿಷಯಗಳ ನೇರವಾದ ನರ್ವಿಕಾರವಾದ ವಿವರಣೆಗೆ ಪ್ರಾಧಾನ್ಯ ಕೊಡಲಾಗುತ್ತದೆ ವಿಜ್ಞಾನದಲ್ಲಿ ಅತ್ಯಾಧುನಿಕ ಸಂಶೋಧನೆಗಳ ಗಮನಾರ್ಹ ಅಂಶಗಳನ್ನು ಪರಿಚಯ ಮಾಡಿಕೊಡಲಾಗುತ್ತದೆ, ಹೆಚ್ಚಿನ ವಿಷಯಗಳೂ ಸಚಿತ್ರವಾಗಿರುತ್ತವೆ ಸಂಪಾದನೆ ಕರ್ಯದಲ್ಲಿ ಬಹಳ ಹೆಚ್ಚರಿಕೆ ವಹಿಸಲಾಗುತ್ತದೆ. ಸುಶಿಕ್ಷಿತ ಆದರೆ ಸಮಾನ್ಯ ಮಟ್ಟದ ಒದುಗರಿಗೆ ಅರ್ಥವಾಗುವ ಸರಳ ಶೈಲಿಯನ್ನು ಉಪಯೋಗಿಸಲಾಗುತ್ತದೆ ಪ್ರಾಚೀನ ಸಂಸ್ರೃತಿಯನ್ನು ನಿರಾಕರಿಸದೆ ಆಧುನಿಕ ಜಗತ್ತಿನ ಆಗುಹೋಗುಳ ಪರಿಜ್ಞಾನವನ್ನು ಅದು ಒದಗಿಸುತ್ತದೆ. ಪಾವೆಂ ಎಂದೇ ಹೆಸರಾದ ಪಾಡಿಗಾರು ನೆಂಕಟರಮಣಾಚಾರ್ಯ ದೀರ್ಘಕಾಲ ಇದರ ಸಂಪಾದಕರಾಗಿ ಅಚ್ಚುಕಟ್ಟಾಗಿ ಹೊಣೆ ನರ್ವಹಿಸಿದರು ಡೈಜೆಸ್ಟ್ ಗಳಿಗೆ ಸೂಕ್ತವಾದ ವಿಶಿಷ್ಟ ವಿಷಯ ಸಂಗ್ರಹ ಬರವಣಿಗೆಯಲ್ಲಿ ಹೊಸ ಲೇಖಕರಿಗೆ ಮಾರ್ಗ ದರ್ಶನ ನೀಡಿದರು ೨೦೦೫ ಕಸ್ತೂರಿ ೫೦ ನೆಯ ವರ್ಷಕ್ಕೆ ಪದಾರ್ಪಣೆ ಮಾಡಿತು ಆಗಿನ ಸಂಪಾದಕ ಅರುಣ್ ನಾರಾಯಣ್.