ಪುಟ:Mysore-University-Encyclopaedia-Vol-4-Part-2.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಫಿ ಕೊಡಲು ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ.ಭಾರತದ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುವುದಿಲ್ಲವಾದ್ದರಿಂದ ವಾಣಿಜ್ಯ ದೃಷ್ಟಿಯಿಂದ ಪ್ರಮುಖವಾದುದಲ್ಲ. ತೋಟಗಾರಿಕೆ:ಕಾಫಿ ತೋಟಗಾರಿಕೆ ಪ್ರಪಂಚದ ಉಷ್ಣ ಹಾಗೂ ಉಷ್ಣೋಣೋವಲಯದ ದೇಶಗಳಿಗೆ ಮಾತ್ರ ಸೀಮೀತವಾಗಿದೆ. ಇದರ ಬೇಸಾಯಕೆ ತಂಪುಹವೆಯುಳ್ಳ ಮತ್ತು ಹೆಚ್ಚು ಮಳೆ ಬೀಳುವ ಬೆಟ್ಟ ಪ್ರದೇಶಗಳು ಅತ್ಯಂತ ಅನುಕೂಲ. ವರ್ಷಕ್ಕೆ 90"-150" ಮಳೆ ಬೀಳುವ ಹಾಗೂ 2,000'-5,000' ಎತ್ತರದ ಪ್ರದೇಶಗಳು ಇದರ ಬೇಸಾಯಕ್ಕೆ ಅನುಕೂಲತಮವಾದವು. ಮಳೆ ಹೆಚ್ಚು ಬೇಕಾಗಿದ್ದರೂ ನೀರು ನಿಬಾರದು. ಬಿದ್ದ ನೀರು ಸುಲಭವಾಗಿ ಹರಿದುಹೋಗುವಂತೆ ಇಳಿಜಾರು ಇರಬೇಕು. ಆದರೆ ಆಫ್ರಿಕದಲ್ಲಿ ಸಮತಟ್ಟಾದ ನೆಲದಲ್ಲಿ ಕಾಫಿಯನ್ನು ಬೆಳೆಸುವುದುಂಟು. ಕಾಫಿಗಿಡಕ್ಕೆ ನೆರಳು ಅತ್ಯವಶ್ಯಕ. ನೇರವಾಗಿ ಬೀಳುವ ಬಿಸಿಲನ್ನು ತೆಗೆದುಕೊಳ್ಳುವ ಶಕ್ತಿ ಇದಕಿಕಲ್ಲ.ಗಿಡಗಳು ಚಿಕ್ಕವಾಗಿದದ್ದು ಇನ್ನು ಬೆಳೆಯುತ್ತಿರುವಾಗ ಹಾಲುವಾಣದ ಮರವನ್ನು (ಎರತ್ತೈನ ಜಾತಿ)ನೆರೆಳಿಗೆಂದು ಬೆಳೆಸುತ್ತಾರೆ.ಜೊತೆಗೇ ದೊಡ್ಡಗಾತ್ರಕ್ಕೆ ಬೆಳೆಯುವ ಮರಗಳನ್ನೂ ಬೆಳೆಸಿ ಕಾಫಿಗಿಡಗಳು ದೊಡ್ಡವಾದ ಮೇಲೆ ಹಾಲುವಾಣದ ಮರಗಳನ್ನು ತೆಗೆದುಹಾಕುತ್ತಾರೆ. ಹೀಗೆ ಬೆಳೆಸಲಅಗುವ ನೆರಳನ ಮರಗಳಲ್ಲಿ ಮುಖ್ಯವಾದವು ಸಿಲ್ವರ ಮರ,ಹಲಸು,ಹೊನ್ನೆ,ನೀಲಿ,ಬೀಟೆ,ನೇರಿಳೆ, ಕಲ್ಬಾಗಿ,ಹೊಟ್ಟೆಬಾಗಿ, ಬಿಳಿಬಸರಿ, ಕರಿಬಸರಿ,ಅತ್ತಿ,ಮಿಟ್ಲಿ, ಕಂದಗರಿಗೆ ಮುಂತಾದವು. ಕಾಫಿಗಿಡ ಕಡುಚಳಿಯನ್ನು ತಡೆದುಕೊಳ್ಳಲಾರದು. ಇದರ ಬೆಳೆವಣಿಗೆಗೆ ಸುಮಾರು55-80 ಫ್ಯಾ ವರೆಗಿನ ಉಷ್ಣತೆಯ ವ್ಯಾಪ್ತಿ ಬೇಕು. 70 ಫ್ಯಾ. ಉಷ್ಣತೆ ಅತ್ಯಂತ ಅನುಕೂಲವದದ್ದು. ಬ್ರೆಜಿಲ್ ದೇಶದಲ್ಲಿ 50 ಫ್ಯಾ. ಉಷ್ಣತೆ ಇರುವ ಪ್ರದೇಶದಲ್ಲಿ ಕಾಫಿಯನ್ನು ಬೆಳೆಸುವುದಿದ್ದರೂ ಭಾರತದಲ್ಲಿ 55 ಫ್ಯಾ. ಗಿಂತ ಕಡಿಮೆ ಉಷ್ಣತೆಯಲ್ಲಿ ಬೆಳೆಸಲಾಗುವುದಿಲ್ಲ.

ಕಾಫಿಗೆ ಎಂಥ ಮಣ್ಣಿನಲ್ಲಾದರೂ ಬೆಳಯುವ ಸಾಮರ್ಥ್ಯ ಇದೆ. ಬ್ರೆಜಿಲ್ ದೇಶದಲ್ಲಿ ಲ್ಯಾಟರೈಟ್ ಮಣ್ಣಿನಲ್ಲೂ ಕೊಲಂಬಿಯ , ಮಧ್ಯ ಆಫ್ರಿಕ, ಕೀನ್ಯಾ ಮತ್ತು ಟಾಂಜಾನಿಯಗಲಿಲ್ಲಿ ಜ್ವಾಲಮುಖಿಜ ಬೂದಿಯ ಮಣ್ಣಿನಲ್ಲೂ ಹವಾಯ್ ದ್ವೀಪಗಳಲ್ಲಿ ಲಾವಾ ಕಲ್ಲಿನಿಂದ ಉಂಟಾದ ಆಳವಾದ ಕೆಂಪು ಗೋಡು ಇದರ ಬೇಸಾಯಕ್ಕೆ ಶ್ರೇಷ್ಠವಾದುದು. ಮೂಲ ಯಾವುದೇ ಇರಲಿ ಅದು ಗಾಳಿ ನೀರು ಮುಂತಾದವು ಸರಾಗವಾಗಿ ಚಲಿಸುವಂತೆ ಬಿಡಿಕಣಗಳುಳ್ಳದ್ದೂ ಆಳವಾದದ್ದೂ ಸುಲಭವಾಗಿ ಪುಡಿಪುಡಿಯಾಗುವುದೂ ಆಗಿರಬೇಕು. ಮಣ್ಣಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಸ್ಯಜನ್ಯ ಸಾವಯವ ಪದಾರ್ಥಗಳಿರಬೇಕು.ಮಣ್ಣಿನ ಆಮ್ಲತೆ ಮತ್ತು ಕ್ಷಾರತೆಗಳು ಬಲುದೊಡ್ಡದಾದ ಅಂಶ.ಸುಮಾರು ೫.೫-೬.೫ pH ಉಳ್ಳ ಮಣ್ಣು ಕಾಫಿ ಬೆಳೆಗೆ ಯೋಗ್ಯವಾದುದು.ಭಾರತದಲ್ಲಿ ಕಾಫಿ ಬೆಳೆಯುವ ಪ್ರದೇಶದಲ್ಲಿನ ಮಣ್ಣು ಹೆಚ್ಚು ಆಮ್ಲೀಯವಾಗಿದ್ದರು(ಇದರ pH ಸುಮಾರು ೪.೫)ಇದರಲ್ಲಿ ಸಾವಯವ ಅಂಶ ಚೆನ್ನಾಗಿರುವುದರಿಂದ ಕಾಫಿ ಚೆನ್ನಾಗಿ ಬೆಳೆಯಬಲ್ಲದು.ಕಪ್ಪುಗೋಡು ಮತ್ತು ಜೇಡಿಮಣ್ಣಿನಲ್ಲೂ ಕಾಫಿಯ ಬೇಸಾಯ ಉಂಟು.ರೊಬಸ್ಟ ಕಾಫಿಗೆ ಅರ್ಯಾಬಿಕ ಕಾಫಿಗಿಂತ ಹೆಚ್ಚಿನ ಉಷ್ಣತೆ ಮತ್ತು ಆರ್ದ್ರತೆ ಅಗತ್ಯ.

ಬೇಸಾಯದ ವಿಧಾನ:ಕಾಫಿ ಬೆಳೆಯುವ ಪ್ರದೇಶಗಳೆಲ್ಲಾ ಕಾಡು ಪ್ರದೇಶಗಳಾದ್ದರಿಂದ ಬೇಸಾಯದ ಮೊದಲ ಕ್ರಮ ಕಾಡನ್ನು ಕಡೆಯುವುದು,ಕೆಲವೆಡೆ ಸಸಿಗಳನ್ನು ಪಡೆದು ಆನಂತರ ಅವುಗಳ ಶಾಶ್ವತ ಸ್ಥಳಕ್ಕೆ ಸಾಗಿಸಿ ನೆಡುತ್ತಾರೆ.ಬೀಜಗಳನ್ನು ವಿಶೇಷ ಬಗೆಯ ನರ್ಸರಿಗಳಲ್ಲಿ ನೆಟ್ಟು ಮೊಳೆಸುತ್ತಾರೆ.ಹೀಗೆ ನರ್ಸರಿಗಳಲ್ಲಿ ನೆಡುವ ಮೊದಲು ಅವನ್ನು ಸಂಸ್ಕರಿಸಬೇಕು.ಬೀಜಕ್ಕೆಂದೇ ಬೆಳೆಸಿದ ಗಿಡಗಳಿಂದ ಒಳ್ಳೆಯ ಹದವಾದ ಬೀಜವನ್ನು ಹೊರತೆಗೆದು ಬೂದಿಯೊಂದಿಗೆ ಮಿಶ್ರ ಮಾಡಿ ನೆರಳಲ್ಲಿ ಒಣಗಿಸುತ್ತಾರೆ.ದಿವಸಕ್ಕೆ ಮೂರು ಸಲ ಬೀಜಗಳನ್ನು ಕದಡಿ ಅವು ಏಕಪ್ರಕಾರವಾಗಿ ಒಣಗುವಂತೆ ಮಾಡಬೇಕು.ಹೀಗೆ ೫ ದಿವಸಗಳು ಒಣಗಿಸಿದ ನಂತರ ಹೆಚ್ಚಾದ ಬೂದಿಯನ್ನು ತೆಗೆದುಹಾಕಿ ಬೀಜಗಳನ್ನು ಯಾವುದಾದರೂ ಒಳ್ಳೆಯ ಬೂಷ್ಟು ನಿರೋಧಕದೊಂದಿಗೆ(ಅಗ್ರೋಸಾನ್ ಪುಡಿ) ಮಿಶ್ರ ಮಾಡುವುದು ಒಳ್ಳೆಯದು.ಇದರಿಂದ ಮುಂದೆ ಅಂಟಬಹುದಾದಂತಹ ಬೂಷ್ಟನ್ನು ತಡೆಯಲು ಅನುಕೂಲ.ಹೀಗೆ ಸಂಸ್ಕರಿಸಿದ ಬೀಜವನ್ನು ಜನವರಿ-ಮಾರ್ಚ್ ನಡುವಣ ಕಾಲದಲ್ಲಿ ನೆಟ್ಟು ಮೊಳೆಸುತ್ತಾರೆ.ಬೀಜಗಳನ್ನು ಮಣ್ಣಿನಲ್ಲಿ ನೆಟ್ಟು ಅವುಗಳ ಮೇಲೆ ತೆಳುವಾದ ಮಣ್ಣನ್ನು ಹರಡುತ್ತಾರೆ.ಇದರ ಮೇಲೆ ದಪ್ಪವಾಗಿ ಭತ್ತದ ಹುಲ್ಲನ್ನು ಮುಚ್ಚುವುದೂ ರೂಡಿಯಲ್ಲಿದೆ.ಇದರಿಂದ ಒಂದೇ ಸಮನಾದ ಉಷ್ಣತೆಯನ್ನು ಕಾಪಾಡಲೂ ನೆಲದಿಂದ ನೀರು ಆರದಿರುವಂತೆ ಮಾಡಲೂ ಅನುಕೂಲ.ಇದರ ಮೇಲೆ ಚಪ್ಪರ ಹಾಕುವುದೂ ಬಹಳ ಮುಖ್ಯ.ಪ್ರತಿ ದಿವಸ ನೀರನ್ನು ಹಾಯಿಸಬೇಕು.ಬೀಜಗಳು ಸುಮಾರು ೪೫ ದಿವಸಗಳಲ್ಲಿ ಮೊಳಕೆಯೊಡೆಯುತ್ತವೆ.ಆನಂತರ ಸಸಿಗಳನ್ನು ಎರಡನೆಯ ನರ್ಸರಿಗೋ ಇಲ್ಲವೇ ಸಣ್ಣ ಬಿದಿರಿನ ಬುಟ್ಟಿಗಳಿಗೋ ಅಥವಾ ಪಾಲಿಥೀನ್ ಚೀಲಗಳಿಗೋ ವರ್ಗಾಯಿಸುತ್ತಾರೆ.ಬುಟ್ಟಿ ಅಥವಾ ಚೀಲಗಳಿಗೆ ಗೊಬ್ಬರ,ಮರಳು ಮತ್ತು ಕಾಡಿನ ಮಣ್ಣನ್ನು ಮಿಶ್ರಣವನ್ನು ಭರ್ತಿಮಾಡಿ ಸಸಿಗಳನ್ನು ವರ್ಗಾಯಿಸುವುದು ಸಾಮಾನ್ಯ ಕ್ರಮ.ಎಳೆಯ ಸಸಿಗಳನ್ನು ಕೀಟ ಹಾಗೂ ಬೂಷ್ಟುರೋಗಗಳಿಂದ ದೂರವಿಡಲು ಕಾಲಕಾಲಕ್ಕೆ ಕೀಟ ಹಾಗೂ ಬೂಷ್ಟುನಿರೋಧಕಗಳನ್ನು ಸಿಂಪಡಿಸಬೇಕು.

ಸಸಿಗಳನ್ನು ನೆಡುವಿಕೆ:ಸಸಿಗಳು ಸಿದ್ದವಾಗುವ ಮೊದಲೆ ಗುಂಡಿಗಳನ್ನು ಅಗೆದಿರಬೇಕು.ಕಾಫಿ ಸಸಿಗಳನ್ನು ನೆಡುವ ಕಾಲವೆಂದರೆ ಜುಲೈ ತಿಂಗಳಿನಿಂದ ಸೆಪ್ಟ್ಂಬರ್ ವರೆಗೆ.ಗುಂಡಿಗಳನ್ನು ಏಪ್ರಿಲ್ ಮೇ ತಿಂಗಳಲ್ಲಿ ತೋಡಬೇಕು.ಗುಂಡಿಗಳ ಗಾತ್ರ ೨' ಆಳ,೧೧/೨' ಅಗಲ ಹಾಗೂ ಅಷ್ಟೆ ಉದ್ದ ಇರಬೇಕು.ತೋಡಿದ ಮೇಲು ಭಾಗದ ಮಣ್ಣನ್ನು ಬೇರೆ ಹಾಕಬೇಕು.ಗುಂಡಿಗಳು ನೆಡುವ ಕಾಫಿ ತಳಿಗಳನ್ನು ಅವಲಂಬಿಸಿದೆ.ಕಾಫಿಯ ಅರ್ಯಾಬಿಕ್ ತಳಿಗಳಿಗೆ ೬' ಚದರಗಳಲ್ಲಿ ಗುಂಡಿಗಳನ್ನು ತೋಡುತ್ತಾರೆ.ವಿಶಾಲವಾಗಿ ಮತ್ತು ಎತ್ತರವಾಗಿ ಬೆಳೆಯುವ ಲೈಬೀರೀಯ ಮತ್ತ್ಯ್ ರೊಬಸ್ಟ ತಳಿಗಳಿಗೆ ೯' ಅಥವಾ ೧೦' ಚದರಗಳಲ್ಲಿ ಗುಂಡಿಗಳನ್ನು ತೋಡಬೇಕು.ಮುಂಗಾರು ಮಳೆ ಪ್ರಾರಂಭವಾದ ಮೇಲೆ ಕಾಫಿ ಸಸಿಗಳನ್ನು ನೆಡಬೇಕು.ಸಾಧಾರಣವಾಗಿ ಜುಲೈ ತಿಂಗಳಲ್ಲಿ ನೆಡಲು ಪ್ರಾರಂಭಿಸಿ ಸೆಪ್ತೆಂಬರ್ ತಿಂಗಳಿನವರೆಗೂ ಮುಂದುವರೆಸುತ್ತಾರೆ.ಗುಂಡಿ ತೆಗೆದ ಮೇಲು ಮಣ್ಣು,ಗೊಬ್ಬರ ಮುಂತಾದುವುಗಳನ್ನು ಮಿಶ್ರ ಮಾಡಿ ಗುಂಡಿಗಳನ್ನು ತುಂಬುತ್ತಾರೆ.ಆನಂತರ ಮಧ್ಯದಲ್ಲಿ ಕಾಫಿಯ ಸಸಿಗಳನ್ನು ಇಟ್ಟು ಸುತ್ತಲೂ ಮಣ್ಣನ್ನು ಭದ್ರವಾಗಿ ಅಮುಕಬೇಕು .ಬುಟ್ಟಿಗಳಲ್ಲಿ ಬೆಳೆಸಿದ ಸಸಿಗಳನ್ನು ನೆಡುವಾಗ ಬುಟ್ಟಿಗಳನ್ನು ಮುರಿದು ಹಾಕಬೇಕು.ಪಾಲಿಥೀನ್ ಚೀಲದಲ್ಲಿರುವ ಸಸಿಗಳನ್ನು ನೆಡುವಾಗ ಪಾಲಿಥೀನ್ ಚೀಲಗಳನ್ನು ಹರಿದುಹಾಕಿ ನೆಡಬೇಕು.ಸಸಿಗಳು ಗಾಳಿಗೆ ಅಲುಗಾಡಿ ಮುರಿದುಹೋಗದಂತೆ ಊರುಗೋಲುಗಳನ್ನು ನೆಟ್ಟು ಅವಕ್ಕೆ ಸಸಿಗಳನ್ನು ಕಟ್ಟಬೇಕು.ಸಸಿಗಳನ್ನು ನೆಟ್ಟ ಮೇಲೆ ಚಿಗುರುವ ತನಕ ಪ್ರತಿನಿತ್ಯ ನೀರು ಕೊಡಬೇಕು. ಸಸಿಗಳಿಗೆ ನೆರಳು:ಸಸಿಗಳನ್ನು ಬಿಸಿಲು ಆಲಿಕಲ್ಲು ಮಳೆ ಮುಂತಾದವುಗಳಿಂದ ರಕ್ಷಿಸಲು ಸಣ್ಣ ಚಪ್ಪರವನ್ನು ಹಾಕಬೇಕು.ಅನೇಕ