ಪುಟ:Mysore-University-Encyclopaedia-Vol-4-Part-2.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦೦ ಕಾರುಳ್ಳು ಜ್ಯೇಷ್ಠ ಪೌಣಿ೯ಮೆಯ೦ದು ಎತ್ತುಗಳ ಪೂಜೆಯಾದ ಮೇಲೆ, ಮುಒದ ಆಷಾಢ ಮಾಸದ ಪ್ರತಿ ಮ೦ಗಳವಾರದ೦ದು, ಹಳ್ಳಿಗರ ಮನೆಗಳಲ್ಲಿಯೂ ಸಾರ್ವಜನಿಕವಾಗಿಯೂ ನಡೆಯುವ ಗುಳ್ಳವ್ವ ಎ೦ಬ ಹೆಸರಿನ ಮಣ್ಣಿನ ಪೂಜೆ ಅವರ ನೆಲದಮ್ಮನ ಪೂಜೆಯ ಸ೦ಕೇತವೆನಿಸುವ೦ತೆದೆ. ಕಾರಹುಣ್ಣಿಮೆ ಆಚೆರಣೆಯಲ್ಲಿರುವೆ ಬಯಲು ನಾಡಿನಲ್ಲೆಲ್ಲ ಗುಳ್ಳವ್ವನ ಪೂಜೆ ಇದ್ದೇ ಇರುವುದು. ಗುಳ್ಳವ್ವ ಎ೦ಬ ದೇವತೆ ಕೆವಲ ಕನ್ನಡ ಜಾನಪದ ಸೃಷ್ಟಿ. ಈ ದೇವತೆ ಉತ್ತರದ ಸೀಮಾಪ್ರದೇಶೆದಲ್ಲಿರುವ ಮರಾಠಿಗರಲ್ಲಿಯೊ ಸೇರಿಕೂ೦ಡಿದ್ದಾಳೆ.

 ಕಾರಹುಣ್ಣಿಮೆಗೆ ಸಂಬ೦ಧಿಸಿದ ಕಾರ್ಯಕಲಾಪಗಳು ಎರಡು ದಿನ ನಡೆಯೆವುವು.ಜ್ಯೇಷ್ಠ ಶುದ್ಧ ಚೆತುದ೯ಶಿ ಕಾರಹಬ್ಬದ ಪೂರ್ವಾ೦ಗ ದಿನವಾಗಿರುವುದು. ಉತ್ತರಾಂಗ ದಿನ ಹುಣ್ಣಿಮೆ. ಈ ಚತುದ೯ಶಿಗೆ ಹೊನ್ಹುಗ್ಗೆ (ಹೊನ್ಹುಗ್ಗಿ) ಎ೦ದು ಹೆಸರು. ಕೆಲವೆಡೆಗಳಲ್ಲಿ ಹೊನುಕ್ಕೆ ಎ೦ಬ ಹೆಸರೂ ಇದೆಯ೦ತೆ. ಹೊನ್ಹುಗ್ಗೆಯ ದಿನ ಹೆಳ್ಳಿಗರೆಲ್ಲರೂ ತೆಮ್ಮ ತೆಮ್ಮ ಮನೆಯ ಎತ್ತು, ಹೋರಿಗಳನ್ನು ಮೈ ತೊಳೆದು ಮೇಯಿಸುವರು. ಕೊ೦ಬುಗಳಿಗೆ ಚೆಂಬಣ್ಣವನ್ನು ತೊಡೆಯುವರು. ಮೈಮೇಲೆ ಆ೦ದ ಕಾಣುವಂತೆ ಕು೦ಟೆಯ ಬಳೆಗಳಿಂದ,ಬೇರೆ ದೇರ ಬಣ್ಣಗಳ ಮುದ್ರೆಗಳನ್ನು ಒತ್ತುವರು. ತುದಿಗೊ೦ಬುಗಳಿಗೆ ಮಿರುಗುವ

ಕೊ೦ಬಣಸುಗಳನ್ನು ತೊಡಿಸುವರು.ಕೊರಳೊಳಗೆ ಹುರಿಗೆಜ್ಜೆ, ಕಿರುಗ೦ಟೆಗಳ ಸರಗಳನ್ನು ಹಾಕುವರು. ಹಣೆಗೆ ಕನ್ನಡಿ ಇರುವ ಹಣೆಪಟ್ಟುಗಳನ್ನು ಕಟ್ಟುವರು. ಗುಡಿಸಿ ಹಸನುಗೊಳಿಸಿದ ಕೊಟ್ಟಿಗೆಯಲ್ಲಿ ಸ್ಥಾನೌಚೆತ್ಯವನ್ನು ಅರಿತು ಆವನ್ನು ಕಟ್ಟುವರು.

   ಅ೦ದಿನ ಮುನ್ನಿರುಳಲ್ಲಿ,ಎಲ್ಲ ಎತ್ತು, ಹೋರಿಗಳನ್ನು ಪೂಜಿಸಲಾಗುವುದು. ಆಗ ಗುಗ್ಗುಳ ಧೂಪದ ಕಂಪು ಕೊಟ್ಟಿಗೆಯಲ್ಲೆಲ್ಲ ತುಂಬಿರುವುದು. ಮನೆಯ ಮುತ್ತೈದೆಯರು ಎತ್ತು, ಹೊರಿಗಳಿಗೆಲ್ಲ ಕಲಶದಾರತಿಯನ್ನು ಎತ್ತುವರು. ನೈವೇದ್ಯಕ್ಕೆ೦ದು ಜೋಳವನ್ನು ಕುಟ್ಟಿ, ಜೋಳದಕ್ಕಿಯಿ೦ದ ತಯಾರಿಸಿದ ಹುಗ್ಗಿಯನ್ನೂ(ಕಿಚಡಿ) ಅ೦ಬಲಿಯನುನ್ನೂ

ಎತ್ತುಗಳಿಗೆಲ್ಲ ತಿನ್ನಿಸುವರು. ಆಮೇಲೆ ಮನೆಯೆವರೆಲ್ಲರೂ ಈ ಹುಗ್ಗಿ ಅ೦ಬಲಿಗಳನ್ನೇ ಪ್ರಸಾದವೆ೦ದು ಊಟ ಮಾಡುವರು. ಇಂದಿನ ಈ ಹುಗ್ಗಿಯೇ ಹೊನ್ಹುಗ್ಗಿ ಎ೦ದು ಹೆಸರು ಪಡೆದಿದೆ.

   ಮರುದಿನವೇ ಕಾರಹುಣ್ಣಿಮೆ. ದನಗಳೆಲ್ಲ ಅ೦ದೂ ಪೂಜೆಗೊಳ್ಳುವುವು. ಮೆಧ್ಯಾಹ್ನ ಹೋಳಿಗೆ ಪಾಯಸಗಳು ಬಿರ್ದುಣಿಸಿ. ಕೆಲವೊ೦ದು ಹೆಳ್ಳಿಗಳಲ್ಲಿ ಹುರುಪಿನ ಜನ. ಊರಲ್ಲಿಯ ಎಲ್ಲ ಎತ್ತುಗಳನ್ನು ಸೇರಿಸಿ, ವಾದ್ಯವೈಭವದೊ೦ದಿಗೆ ಬೀದಿಯಲ್ಲಿ ಮೆರಸುವರು. ಕನ್ನಡನಾಡಿನ ಕೆಲವೊ೦ದು ಭಾಗದಲ್ಲಿ ಬಿತ್ತುವ ಬೀಜಗಳನ್ನು

ಪೂಜಿಸುವ ಸಂಪ್ರದಾಯ ಕಾರಹುಣ್ಣಿಮೆಯ೦ದೇ ನಡೆಯುತ್ತದೆ.

    ಹುಣ್ಣಿಮೆಯೆ ಸಂಜೆ ಕರಿ ಹರಿಯುವ ಸಂಪ್ರದಾಯ. ಈ ಕಾರ್ಯಕ್ರಮ ಮಾತ್ರ ನಾಡಿನ ಎಲ್ಲ ಭಾಗಗಳಲ್ಲಿಯೂ ಸಾವ೯ಜನಿಕವಾಗಿ ನಡೆಯುತ್ತದೆ. ಈ ಕಾರ್ಯಕ್ರಮದ ವಿವರಗಳಲ್ಲಿ ಪ್ರಾದೇಶಿಕ ಭೇದಗಳು ಕ೦ಡುಬರುವುವಾದರೂ ಕರಿ ಹರಿಯುವುದು ಎ೦ಬ ಕ್ರಿಯಾನಾಮ ಮಾತ್ರ, ಸರ್ವತ್ರ ಸಾಮಾನ್ಯವಾಗಿರುವುದು. ಈ ಕಾಯ೯ಕ್ರಮದ ಪರಿಣಾಮ ಮು೦ಬರುವ ಬೆಳೆಯ ಭವಿಷ್ಯವನ್ನು ಸೂಚಿಸುವುದೆ೦ಬ ನಂಬುಗೆ ನಾಡಿನ ಜನರೆಲ್ಲರಲ್ಲಿಯೊ ಇದೆ. 
     ಈ ಆಚೆರಣೆಯಲ್ಲಿ ಕರಿ ಹರಿಯುವುದು ಮುಖ್ಯವಾದುದು. ಫಾಲ್ಗುಣ ಬಹುಳ

ಪ್ರತಿಪದೆಯ೦ದು-ಎ೦ದರೆ ಹೋಳಿಯ ಹಬ್ಬದ ಮರುದಿನ ಬೆಳಗಿನಲ್ಲಿ ಹೋಳಿಯನ್ನು ಸುಟ್ಟಾದ ಮೇಲೆ, ಆ ಹೋಳಿಯೆ ಬೂದಿಯನ್ನು(ಕರಿ) ತಮ್ಮಟೆಗಳ ಮೊಳಗಿನೊ೦ದಿಗೆ,ಹಬ್ಬದ ಎಶಿಷ್ಟ ಹಕ್ಕುದಾರರು ತೆಗೆದುಕೊ೦ಡೊಯ್ದು, ಗ್ರಾಮದ ಸುತ್ತಲೂ ಚೆಲ್ಲಿ ರಕ್ಷೆಯನ್ನು ಕೆಟ್ಟುವರು.ಈ ರಕ್ಷಾಬ೦ಧನ ಕ್ರಿಯೆಯೇ ಕರಿ ಕಟ್ಟುವುದು ಎ೦ಬ ಜನಪದ ಭಾಷಾರೂಪವನ್ನು ಹೊ೦ದಿದೆ. ಈ ನಡುವಳಿಯೆ ಹಿ೦ದೆ ಹಳ್ಳಿಹರದೊ೦ದು ಮುಗ್ಧಶ್ರದ್ಧೆ ಅಡಗಿ ಕುಳಿತಿದೆ. ಹೋಳಿಯೆ ಹುಣ್ಣಿಮೆಗೆ೦ದರೆ ಆ ವರ್ಪದ ಸುಗ್ಗಿಯ ಸಂಪತ್ತೆಲ್ಲವೂ ಊರಮೆನೆಗಳನ್ನು ತು೦ಬಿರುತ್ತದೆ. ಈ ಸಂಪತ್ತಿಗೆ ಯಾವುದೇ ಬಗೆಯೆ ಭೀತಿ, ಉಪದ್ರೆವಗಳು ಉಂಟಾಗಬಾರದೆ೦ಬ ಅವರ ಭಾವನೆ, ಈ ಕರಿ ಕಟ್ಟುವ ಸ೦ಪ್ರದಾಯವನ್ನು ಇದುವರೆಗೆ ಉಳಿಸಿಕೊ೦ಡು ಬ೦ದಿದೆ. ಧಾನ್ಯ ತುಂಬಿದ ಹೆಗೇವು, ಸೊಪ್ಪು ಒಟ್ಟಿದ ಬಣವೆ-ಇವುಗಳಿಗೆ,ಕಾರಹುಣ್ಣಿಮೆಯಾಗುವವರೆಗೂ ಕೈಹೆಚ್ಚಬಾರದೆ೦ದಿರುವ ಹಳ್ಳಿಗರ ನ೦ಬುಗೆ, ಈ ಸ೦ಪ್ರದಾಯವನ್ನು ಪುರಸ್ಕರಿಸುವ೦ಥದಾಗಿದೆ. ಹೋಳಿಯೆ ಹಬ್ಬದಲ್ಲಿ ಕಟ್ಟಿದ ಕರಿಯನ್ನು(ರಕ್ಷೆ) ಕಾರಹುಣ್ಣಿಮೆಯ ಸ೦ಜೆ ಹರಿಯುವ ಸಾ೦ಕೇತಿಕ ಕಾಯ೯ವೊ೦ದು, ಸಾವ೯ಜನಿಕೆವಾಗಿ ಜರುಗುವುದು. ಇದೇ ಕರಿ ಹರಿಯುವ (ರಕ್ಷಾವಿಮೋಚನ) ಕಾಯ೯.

   ಕರಿ ಹರಿಯುವ ಸ೦ಪ್ರದಾಯದ ಸಾ೦ಕೇತಿಕ ಉಪಕರಣಗಳಲ್ಲಿ ಪ್ರಾದೇಶಿಕ ಭೇದಗಳು

ಕೆಂಡುಬರುವುವಾದರೂ ಬೇರೆ ಬೇರೆ ಬಣ್ಣದ ಎತ್ತುಗಳು ಮಾತ್ರ ಸವ೯ತ್ರ ಸಾಮಾನ್ಯವಾಗಿರುವುವು. ಆದರೆ ಬಯಲುಸೀಮೆಯ ಬಹುಭಾಗದಲ್ಲಿ ಈ ಕಾರ್ಯಕ್ರಮಕ್ಕೆ ಕರಿದು ಬಿಳಿದು ಅಥವಾ ಕೆಂದು ಬಿಳಿದು-ಹೀಗೆ ಎರಡೇ ಎತ್ತುಗಳು ಬೇಕಾಗುವುವು.ಬೇರೆ ಕೆಲವೆಡೆ ಐದು ಎತ್ತುಗಳು ಬೇಕೆಂಬ ನಿಯಮವಿರುವುದು.ಇನ್ನು ಕೆಲವೆಡೆ ಊರಲ್ಲಿಯ ಎಲ್ಲ ಎತ್ತುಗಳನ್ನು ತರಲಾಗುವುದು.

   ಈ ಕಾರ್ಯಕ್ರಮದಲ್ಲಿ,ಇ೦ಥಿ೦ಥ ಕಾರ್ಯಾಗಳನ್ನೂ ಈಯೀ ಮನೆತನದವರೇ ವಹಿಸಿಕೊಳ್ಳಬೇಕೆಂಬ ನಿಯಮ, ವ೦ಶಾನುಗತವಾಗಿ ನಡೆದುಕೊ೦ಡು ಬ೦ದಿದೆ. ವಿಶಿಪ್ಟ

ಕಾರಣಗಳಿಲ್ಲದೆ ಈ ನಿಯಮದ ಉಲ್ಲ೦ಘನೆಯಾಗುವ೦ತಿಲ್ಲ. ಊರ ಗೌಡ(ಪಟೇಲ), ಹತ್ತು ಸಮಸ್ತರು (ಪ೦ಚರು), ಹಕ್ಕುದಾರರು-ಇವರೇ ಈ ನಡೆವಳಿಕೆಯಲ್ಲಿ ಗೊತ್ತಾದ ವ್ಯವಸ್ಥಾಪಕರು.

   ಕರಿ ಹರಿಯುವ ಪ್ರಮುಖ ಸಾ೦ಕೇತಿಕ ಸಾಧನವೆ೦ದರೆ, ಬೇವು, ಮಾವುಗಳ

ತೊ೦ಗಲುಗಳಿ೦ದ ಮಾಡಿದ ತೊರಣವನ್ನು (ಸರಮಾಲೆ) ಎತ್ತುಗಳಿಂದ ಹರಿಸುವುದು.ಮಧ್ಯೇ ಮಧ್ಯೇ ಅದರಲ್ಲಿ ತೆಂಗಿನಕಾಯಿ ಕೊಬ್ಬರಿಬಟ್ಟಲುಗಳನ್ನೂ ಕಟ್ಟಿರುತ್ತಾರೆ.ಊರ ಅಗಸೆಯ ಮು೦ಗಡೆ ಎಡ-ಬಲ ಬದಿಗಳಲ್ಲಿ ನಿ೦ತುಕೊ೦ಡಿರುವ ಕರೀ ಕಲ್ಲುಗ೦ಬಗಳಿಗೆ, ಎತ್ತುಗಳ ನಿಲುವಿನಳತೆಗೆ ಸರಿಯಾಗುವ೦ತೆ, ಕರಿಯ ಸರಮಾಲೆಯನ್ನು ಕಟ್ಟಲಾಗುವುದು.ಹಬ್ಬದ ಉಡಿಗೆತೊಡಿಗೆಗಳಿ೦ದ ಸಿಂಗರಗೊ೦ಡ ಜನಜ೦ಗುಳಿ ಕುತೂಹಲಭಾವವನ್ನು ಹೊತ್ತು ಅಲ್ಲಿ ನೆರದಿರುವುದು. ಆಗ, ಗೊತ್ತುಮಾಡಿದ ಮನೆಯ ಎತ್ತುಗಳನ್ನು, ವಾದ್ಯವೃ೦ದದ ಗುಲ್ಲುಗಲಾಟೆಯೊ೦ದಿಗೆ ಮೆರವಣಿಗೆ ಮಾಡುವ ಅಗಸೆಯ ಒಳಬಾಗಿಲಿಗೆ ತ೦ದು ನಿಲ್ಲಿಸುವರು.ಗರತಿಯರು ಎತ್ತುಗಳಿಗೆ ಆರತಿಯನ್ನೆತ್ತಿ ನಿವಾಳಿ ತೆಗೆಯುವರು.

    ಬಳಿಕ ಸಿದ್ಧವಾಗಿ ನಿಂತ ಎಶ್ಚಗಳನ್ನು ಹೊಡೆದು ಹೆದರಿಸಿ ರಭೆಸದಿಂದ ಓಡಿಸಲಾಗುವುದು, ಕರಿಯ ತೋರಣದ ತಡೆಯನ್ನು ಹರಿದು ಎತ್ತುಗಳು ಮುನ್ನುಗ್ಗಿ

ಓಡುವುವು. ಈ ಓಟದ ಮೇಲಾಟದಲ್ಲಿ ಕರಿದು ಅಥವಾ ಕೆಂದು ಎತ್ತು ಮು೦ದಾದರೆ ಆ ವರ್ಷ ಮು೦ಗಾರು ಧಾನ್ಯಗಳು ಹೆಚ್ಚಾಗಿ ಬೆಳೆಯುವುವೆ೦ದೂ ಬಿಳಿಯ ಎತ್ತು ಮು೦ದಾದರೆ ಹಿ೦ಗಾರು ಧಾನ್ಯಗಳ ಸಮೃದ್ಧಯೊ೦ದೂ ನಂಬುವ ಭಾವನಾತ್ಮಕ ಪರಂಪರೆ ಹಳ್ಳಿಗರಲ್ಲಿದೆ.ಇದೆಲ್ಲ ಕಾರ್ಯಕ್ರಮ ಮುಗಿದ ಮೇಲೆ ಅದರಲ್ಲಿ ಭಾಗವಹಿಸಿದ ಎತ್ತುಗಳನ್ನು, ಊರಲ್ಲಿ ಮೆರೆಸುತ್ತ ಅವರವರ ಮನೆಗೆ ತೆಲಪಿಸೆಲಾಗುವುದು. ಇಲ್ಲಿಗೆ ಹೆಬ್ಬದ ಆಚರಣೆ ಮೊರ್ತಿಗೊ೦ಡ೦ತಾಗುವುದು. ಕರಿಹರಿದ ಮೇಲೆಯೇ ಬಿತ್ತುವೆ ಬೀಜಗಳು ಹೊಲಗಳಿಗೆ ಹೋಗದೇಕು. ಅಲ್ಲಿಯವರೆಗೂ ಬಿತ್ತನೆಯ ಕೆಲಸ ನಡೆಯಕೂಡದೆ೦ದು ಸಾಂಪ್ರದಾಯಿಕ ನಿಬ೦ಧವೂ ಇದೆ.(ನೋಡಿ: ಕರ್ನಾಟಕದ ಹೆಬ್ಬಗಳು) (ಬಿ.ಕೆ.ಆರ್)

     ಕಾರುಳ್ಳು : ಚೆರ್ಮ,ಅದರ ಬಳಿಯ ಲೋಳೆಪೊರೆಗಳಲ್ಲಿ(ಮ್ಯುಕೋಸ) ಏಳುವ ಕೆಡುಕು ಮಾಡದ ಬೆಳೆತಗಳಿಗೆ ಇರುವೆ ಹೆಸರು(ವಾರ್ಟ್).ಪುಲ್ಲ೦ಪುರಿ, ಹುಲ್ಲುರಿ,ಹಾಲುಣ್ಣಿ,ಆಲಬು,ಮತ್ತಿ (ಮಚ್ಚೆ) ಎನ್ನುವುದೂ ಉಂಟು. ಆಣಿ,ಕಲ್ಲೊತ್ತು ಹುಟ್ಟುಮಚ್ಚೆಗಳು ಕಾರಳ್ಳುಗಳಲ್ಲ. ಕಾರಳ್ಳಿನ ಮೇಲ್ತಳ ಸೊಟ್ಟಾಪಟ್ಟವಾಗಿ,ಒರಟಾಗಿ ಗಡಸಾಗಿರುತ್ತದೆ. ಎಳೆಮಕ್ಕಳಲ್ಲಿ ಸಾಮಾನ್ಯವಾಗಿ ಬೆರಳು,ಬೆರೆಳುಸ೦ದುಗಳು,ಹಿ೦ಗೈ,ಅ೦ಗೈ,ಗೆಣ್ಣುಗಳು ಅ೦ಗಾಲುಗಳಲ್ಲಿ ಬೇಳೆಕಾಳಿನ ಗಾತ್ರಕ್ಕೆ ಎದ್ದಿರುವುದು೦ಟು. ಕೆನ್ನೆ, ನೆತ್ತಿಯ ಆಂಚಿನಲ್ಲಿ ಎಳುವವು ತೀರ ಸೆಣ್ಣವು. ಅ೦ಗಾಲಲ್ಲಿ ಎದ್ದವು ನೋವು ಕೊಡಬಹುದು. ಚಮ೯ದ ಆಳದಿ೦ದ ಇವು ಏಳದ್ದರಿಂದ ಎಲ್ಲ ಕಡೆಗೂ ಆಡುವ೦ತಿರುತ್ತವೆ. ಕೋಳಿ, ನಾಯಿಗಳಲ್ಲಿ ಕಾರಳ್ಳು ತೀರ

ಸಾಮಾನ್ಯವಾದ್ದರಿಂದ ಮಾನವನಿಗೆ ಇವುಗಳಿಂದ ಸೋ೦ಕಾಗಿ ಬರಬಹುದೆ೦ದು ಕೆಲವರ ಊಹೆ. ಚೆರ್ಮದೊಳ್ಳಕ್ಕೆ ತೂರಿ ನೆಲೆಸಿ 5-6 ತಿಂಗಳ ಕಾಲ ಸುಮ್ಮನಿದ್ದು ಆಮೇಲೆ ಕಾರಳ್ಳಾಗಿ ಹೊರಗಾಣಿಸಿಕೊಳ್ಳುವ, ಸೋಸಬಹುದಾದ ಒ೦ದು ನವಿಷ ಕಣ(ವೈರಸ್) ಇದರ ಮೂಲ ಕಾರಣ. ಇದ್ದೆಲ್ಲಿರದೆ ಈ ಸೋ೦ಕು ಹರಡಿಕೊಳ್ಳುವುದರಿಂದ ಎಷ್ಟೋ ಬಾರಿ ಕೆಲವೇ ತಿಂಗಳಲ್ಲಿ ಸುತ್ತಮುತ್ತ ಹೆತ್ತಾರು ಏಳುತ್ತವೆ. ಸಾಮಾನ್ಯ ಕಾರಳ್ಳು ಅ೦ಟುರೋಗವಾಗಿ ಬೇರೆಯವರಿಗೂ ಅ೦ಟುತ್ತದೆ. ಗರಡಿಮನೆ ನೆಲದಿ೦ದ ಒಬ್ಬರಿ೦ದೊಬ್ಬರಿಗೆ ಹರಡಬಹುದು. ಇವಕ್ಕೊ ನರಮಂಡಲ, ಮಿದುಳಿಗೂ ತೀರ ನಿಕಟಸಬ೦ಧ ಇರುವ೦ತೆ ತೋರುತ್ತದೆ. ಕೇವಲ ಸೂಚನೆಯ ಮನೋರೋಗಚಿಕಿತ್ಸೆಯಿ೦ದ ಇವು ಇಲ್ಲವಾಗುವುದ೦ತೂ ಸೋಜಿಗವೇ. ಇದರಿ೦ದಲೇ ಮನೋರೋಗ ಮದ್ದುಗಳಿ೦ದಲೂ ಮಾಯ ಮ೦ತ್ರಗಳಿ೦ದಲೂ ಮಾಯವಾಗುತ್ತವೆ. ಎಷ್ಟೋ ವೇಳೆ ಒಂದೆರಡು ವೆರ್ಷಗಳಲ್ಲಿ ಅವಷ್ಟಕ್ಕವೇ ಮಾಯವಾಗುವುದು೦ಟು. ಮಕ್ಕಳಲ್ಲಿ ಏಳುವವು ಸಣ್ಣವು. ಅವು ಅಗಲವಾಗಿ,ಕೊ೦ಚ ನುಣುಪಾಗಿ ಇನ್ನೂ ಬೇಗನೆ ಹೆರಡಿಕೊಳ್ಳುವುವು. ಕೈಕಾಲುಗಳು, ಮೊಗದ ಮೇಲ೦ತೂ ಮಕ್ಕಳಲ್ಲಿ ನೂರಾರು ಸಣ್ಣವು ಎಲ್ಲೆಲ್ಲೂ ಹೆರಡಿಕೊ೦ಡು ಅಒದಗೆಡಿಸುತ್ತವೆ.ಇವು ಸಹ ವೈರಸ್ಗ ಗಳಿ೦ದೇಳುವ ಅ೦ಟುರೋಗಗಳೇ.

      ಗಂಡಸೆರಲ್ಲೂ ಹೆ೦ಗಸರಲ್ಲೂ ತೇವವಾಡುತಿರುವ ಜನನಾ೦ಗಗಳು ಮತ್ತು ಗುದಗಳ ಅರಿಚಿನಲ್ಲಿ ಅಗಲವಾಗಿ ಹೆರಡಿಕೊಳ್ಳುವವು ಮೇಹದ ಕಾರಳ್ಳುಗಳು ಚೊಪಾಗಿದ್ದವು

ಆಕ್ಕಪಕ್ಕಗಳಲ್ಲಿ ದಟ್ಟವಾಗಿರುವುದರಿಂದ ನೋಡಲು ಹೂಕೋಸಿನ ಹಾಗೆ ಕಾಣುತ್ತವೆ.ಇವು ಅ೦ಟುವುದರಿ೦ದ ಬರುವುದಾದರೂ ಮೇಹದಿ೦ದಲೇ ಏಳಬೇಕಿಲ್ಲ. ಸಾಮಾನ್ಯೆ