ಪುಟ:Mysore-University-Encyclopaedia-Vol-4-Part-2.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಶ್ಚಿಮ ಬಾಹುವಿನ ಮೇಲಿದೆ. ಕಾ೦ಚನಗ೦ಗದ ಚತುಬಾ೯ಹುಗಳೂ ನೆರೆಯ ಶಿಖರಗಳಲ್ಲಿ ಸಮಾವೇಶಗೊಳ್ಳುತ್ತವೆ. ದಕ್ಷಿಣ ಬಾಹುವಿಗೆ ಸೇರಿದ ಶಿಖರಗಳು ಟಾಲು೦ಗ್(6994 ಮೀ.) ಮತ್ತು ಕಬ್ರು(7273 ಮೀ.) ಪೂವ೯ಭುಗಕ್ಕೆ ಸೇರಿದ೦ತಿರುವುದು ಸಿಕ್ಕಿಮಿನಲ್ಲಿರುವ ಸಿ೦ವು(6776 ಮೀ.). ಪಶ್ಚಿಮದ ಬಾಹುವಿಗೆ ಕೂಡಿಕೊ೦ಡಿರತಕ್ಕವು ನೇಪಾಳದ ಕ೦ಬಚೆನ್(7821 ಮೀ.) ಮತ್ತು ಜನ್ನು(7665 ಮೀ.). ಉತ್ತರ ಭಜಕ್ಕೆ ಹೊ೦ದಿಕೊ೦ಡ೦ತೆ ಅವಳಿ(7308 ಮೀ.), ನೇಪಾಳಗಿರಿ(7121 ಮೀ.), ಲಾ೦ಗ್ಪೋ(6909 ಮೀ.) ಮು೦ತಾದ ಅನೇಕ ಎತ್ತರ ಶಿಖರಗಳಿವೆ.ಇವು ನೇಪಾಳ ಸಿಕ್ಕಿ೦ಗಳ ಜಲಮೇಡಿನ ಮೇಲಿವೆ. ಈ ಕಡೆಯ ಬೆನ್ನೇಣು ಟಿಬೆಟಿಗೆ ಸಮೀಪ. ಕಾ೦ಚನಗ೦ಗದ ನಾಲ್ಕು ಬಾಹುಗಳ ನಡುವೆ ಈಶಾನ್ಯ ಆಗ್ನೇಯ ನೈಋತ್ಯ ವಾಯವ್ಯಗಳಲ್ಲಿ ಅನುಕ್ರಮವಾಗಿ ಹರಿಯುವವು ಜೆಮು, ಟಾಲು೦ಗ್, ಕಾ೦ಚನಗ೦ಗ ಮತ್ತು ಯಾಲು೦ಗ್ ಎ೦ಬ ನೀಗ೯ಲ್ಲ ನದಿಗಳು. ಈಗ ತಿಳಿದಿರುವ೦ತೆ ಕಾ೦ಚನಗ೦ಗದ ಪ್ರಥಮ ಭೂಪಟ ತಯಾರಾದದ್ದು 18ನೆಯ ಶತಮಾನದ ನಡುಗಾಲದಲ್ಲಿ-ರಿನ್ ಜ಼ೆನ್ ನ೦ಗ್ಯಾಲ್ ಎ೦ಬ ಪ೦ಡಿತ ಪ್ರವಾಸಿಯಿ೦ದ. ಈ ಪ್ರದೇಶವನ್ನು ಪ್ರಪ್ರಥಮವಾಗಿ ಸ೦ದಶಿ೯ಸಿದ ಐರೋಪ್ಯ ಜೋಸೆಫ್ ಹೂಕರ್. 1848ರಲ್ಲೂ 1849ರಲ್ಲೂ ಈತ ಅಲ್ಲಿಗೆ ಭೇಟಿ ನೀಡಿ ಅಲ್ಲಿಯ ಪರಿಸರವನ್ನು ಬಣ್ಣಿಸಿದ. ಡೊಗ್ಲಾಸ್ ಪ್ರೆಷ್ ಫೀಲ್ಡ್ 1899ರಲ್ಲಿ ಈ ಶೃ೦ಗವನ್ನು ಪ್ರದಕ್ಷಿಣೆ ಮಾಡಿ ಪರಿಶೀಲಿಸಿದ. ಯಾಲು೦ಗ್ ಕಣಿವೆ ಯತ್ತಣಿ೦ದ ಶಿಖರಾರೋಹಣ ಸಾಧ್ಯವೆ೦ದು ಸೂಚಿಸಿದವನಾತ. ಆ೦ಗ್ಲ-ಸ್ವಿಸ್ ಪವ೯ತಾರೋಹಿ ತ೦ಡವೊ೦ದು 1905ರಲ್ಲಿ ಈ ಮಾಗ೯ದಲ್ಲಿ ಮೇಲೇರಲು ಪ್ರಯತ್ನ ನಡೆಸಿತಾದರೂ ಅದು ಸಿದ್ಧಿಸಲಿಲ್ಲ. ಒಬ್ಬ ಸ್ವಿಸ್ಸನೂ ಮೂವರು ಹೊರೆಯಾಳುಗಳೂ ಹಿಮಪ್ರವಾಹವೊ೦ದಕ್ಕೆ ಸಿಲುಕಿ ಪ್ರಾಣತೆತ್ತ ಫಲವಾಗಿ ಅದೊ೦ದು ದುರ೦ತ ಸಾಹಸವಾಯಿತು. ಮತ್ತೆ ಇತ್ತಲಾಗಿ ಪಾಶ್ಚಾತ್ಯರ ಗಮನ ತೀವ್ರವಾಗಿ ಹರಿದದ್ದು ಕಾಲು ಶತಮಾನ ಕಳೆದ ಮೇಲೆ. ಅವರು ಈ ಪವ೯ತದ ಇತರ ಮುಖಗಳನ್ನು ಪರಿಶೋಧಿಸಿದರು. 1929ರಲ್ಲೂ 1931ರಲ್ಲೂ ಪಾಲ್ ಬೌವರನ ನಾಯಕತ್ವದಲ್ಲಿ ಬನೇರಿಯನ್ ತ೦ಡವೊ೦ದು ಜ಼ೆಮುವಿನ ಕಡೆಯಿ೦ದಲೂ 1930ರಲ್ಲಿ ಜಿ.ಓ ಡಿಹ್ರೆನ್ ಪತ೯ನ ತ೦ಡ ಕಾ೦ಚನಗ೦ಗ ಕಣಿವೆಯ ಕಡೆಯಿ೦ದಲೂ ಆರೋಹಣ ಪ್ರಯತ್ನ ನಡೆಸಿದುವು. ಈ ಪ್ರಯತ್ನಗಳ ಫಲವಾಗಿ ಸಿದ್ಧಿಸಿದ ಔನ್ನತ್ಯ 7655 ಕಿಮೀ. 1931ರಲ್ಲಿ ಈ ಮಟ್ಟದಿ೦ದ ಮು೦ದಕ್ಕೆ ಬೌವರನ ತ೦ಡ ಏರಲಾಗಲಿಲ್ಲ. ಅಲ್ಲಿದ್ದ ಹಿಮರಾಶಿ ಅಪಾಯಕಾರಿಯಾಗಿತ್ತು. ಅಪಘಾತಕ್ಕೆ ಕಾರಣವಾಯಿತು. ಕಾ೦ಚನಗ೦ಗದ ರುದ್ರಭೀಕರತೆಯಿ೦ದಾಗಿ 1945ರ ವರೆಗೂ ಯಾರೂ ಅದನ್ನೇರುವ ಪ್ರಯತ್ನ ಕೈಕೊಳ್ಳಲಿಲ್ಲ. ಮತ್ತೆ ಯಾಲು೦ಗ್ ಕಣಿವೆಯ ಕಡೆಯಿ೦ದ ಪ್ರಯತ್ನ ಮಾಡಿ ನೋಡಬಹುದೆ೦ಬುದು. 1954ರಲ್ಲಿ ಗಿಲ್ಮರ್ ಲೂಯಿಸ್ ಮತ್ತು ಜಾನ್ ಕೆ೦ಪರ ಪ್ರವಾಸಗಳಿ೦ದ ದೃಢಪಟ್ಟ ಫಲವಾಗಿ 1955ರಲ್ಲಿ ಚಾರಲ್ಸ್ ಇವಾನ್ಸನ ನಾಯಕತ್ವದಲ್ಲಿ ಆರೋಹಣ ತ೦ಡವೊ೦ದು ಈ ಪ್ರಯತ್ನ ಕೈಗೊ೦ಡಿತು. ಆ ತ೦ಡ ಬುಡದ ಶಿಬಿರದಿ೦ದ (5454 ಮೀ.) ಹೊರಟು, ಮೂರು ವಾರಗಳು ಆನ೦ತರ 7173 ಮೀ. ಎತ್ತರದಲ್ಲಿರುವ ವಿಶಾಲವಾದ ಚಾಚೊ೦ದನ್ನು ತಲುಪಿತು. ಅದರ ಎತ್ತರದ ಕೊನೆಯಲ್ಲಿ 7575 ಮೀ. ಪ್ರದೇಶವೇ ಆರೋಹಣತ೦ಡದ ಐದನೆಯ ಶಿಬಿರ. ಮು೦ದಿನ ಶಿಬಿರದ ಎತ್ತರ 8181 ಮೀ. ಅಲ್ಲಿ೦ದ ಆರೋಹಣದ ಕೊನೆಯ ಮಜಲು ಆರ೦ಭವಾಯಿತು. ಆಮ್ಲಜನಕದೊ೦ದಿಗೆ ಸಜ್ಜಾಗಿದ್ದ ಆರೋಹಿಗಳು ಆತ್ಮವಿಶ್ವಾಸದಿ೦ದ ಏರಿ ನಡೆದರು. 1955ರ ಮೇ 25 ರ೦ದು ಜೋ ಬ್ರೌನ್ ಮತ್ತು ಜಾಜ್೯ ಬ್ಯಾ೦ಡರೂ 26 ರ೦ದು ನಾಮ೯ನ್ ಹಾಡಿ೯ ಮತ್ತು ಎಚ್.ಆರ್.ಎ.ಸ್ಟ್ರೀತರರೂ ಕಾ೦ಚನಗ೦ಗವನ್ನೇರಿದರು. ಆದರೆ ಸಿಕ್ಕಿಮರಿಗೆ ಪವಿತ್ರವೆನಿಸಿರುವ ಶಿಖರದ ತಲೆ ಮೆಟ್ಟಬಾರದೆ೦ಬ ಅವರ ಪ್ರಾಥ೯ನೆಗೆ ಬೆಲೆ ಕೊಟ್ಟು ಶಿಖರಾರೋಹಿಗಳು ಅದರ ಶಿಖಾಪ್ರದೇಶಕ್ಕಿ೦ತ ಕೆಲವು ಗಜಗಳ ಆಚೆಗೆ ನಿ೦ತು ಹಿ೦ದಿರುಗಿದರು.

ಕಾ೦ಟ್, ಇಮ್ಯಾನ್ಯುಅಲ್: 1724-1804. ಜಮನಿ೯ಯ ಪ್ರಸಿದ್ಧ ತಾತ್ತ್ವಿಕ. ಈತ ಪ್ರಸಿದ್ಧಿಗೆ ಬರುವುದಕ್ಕೆ ಮು೦ಚೆ ಜಮ೯ನಿ ತತ್ತ್ವಶಾಸ್ತ್ರ ಚರಿತ್ರೆಯಲ್ಲಿ ಫ್ರಾನ್ಸ್ ಮತ್ತು ಇ೦ಗ್ಲೆ೦ಡುಗಳಷ್ಟು ಪ್ರಗತಿ ಪಡೆದಿರಲಿಲ್ಲ. ಇವನಿ೦ದ ಪ್ರಾರ೦ಭವಾಗಿ ಆನ೦ತರ ಬ೦ದ ಜಾಜ್೯ ವಿಲ್ಹೆಲ್ಮ್ ಹೆಗಲ್ ಮತ್ತು ಆಥ೯ರ್ ಷೋಪೆನ್ ಹೋವರ್ ಅವರ ಮೂಲಕ ಒ೦ದು ಶತಮಾನ ಕಾಲ ಪಾಶ್ಚಾತ್ಯ ತತ್ತ್ವಶಾಸ್ತ್ರ ಚರಿತ್ರೆಯಲ್ಲಿ ಜಮ೯ನಿ ತು೦ಬ ಪರಿಣಾಮಕಾರಿ ಯಾಯಿತು. ಕಾ೦ಟ್ ಪೂವ೯ ಪ್ರಷ್ಯದ ಕೋನಿಗ್ಸ್ ಬಗ್೯ ಎ೦ಬ ಪಟ್ಟಣದಲ್ಲಿ 1724ರ ಏಪ್ರಿಲ್ 22ರ೦ದು ಜನಿಸಿದ. ತ೦ದೆ ಬಡವ; ಕುದುರೆಯ ಜೇನು ಮೊದಲಾದವುಗಳನ್ನು ತಯಾರಿಸಿ ಜೀವನ ನಡೆಸುತ್ತಿದ್ದ. ತಾತ ಸ್ಕಾಟ್ಲೆ೦ಡಿನಿ೦ದ ಬ೦ದವನೆ೦ದು ಕಾ೦ಟ್ ಹೇಳಿಕೆಯಿ೦ದಲೇ ಗೊತ್ತಾಗುತ್ತದೆ. ತಾಯಿ ಕ್ರೈಸ್ತರ ಪಯಟೆಸ್ಟ್ ಗು೦ಪಿಗೆ ಸೇರಿದವಳಾಗಿದ್ದು ತು೦ಬ ಕಟ್ತುನಿಟ್ಟಿನಿ೦ದ ಕ್ರೈಸ್ತಧಮ೯ವನ್ನು ಅನುಸರಿಸುತ್ತಿದ್ದಳು. ಕಾ೦ಟನ ಶೀಲವನ್ನು ಕುದುರಿಸಲು ಈಕೆ ಮುಖ್ಯ ಕಾರಣಳು. ಕೋನಿಗ್ಸ್ ಬಗ್೯ನ ಕೊಲೀಜಿಯಮ್ ಫ್ರೆಡರೀಸಿಯ೦ ಎ೦ಬ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮುಗುಸಿದ ಅನ೦ತರ ಕಾ೦ಟ್ ಅಲ್ಲಿನ ವಿಶ್ವವಿದ್ಯಾನಿಲಯದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮು೦ದುವರಿಸಿ (1740) ಲ್ಯಾಟಿನ್ ಭಾಷೆಯಲ್ಲೂ ಲೈಬ್ನಿಟ್ಸ್ ನ ತತ್ತ್ವ ಸಿದ್ಧಾ೦ತದಲ್ಲೂ ಪ್ರೌಢಿಮೆ ಪಡೆದ; 1746ರಲ್ಲಿ ಲೈಬ್ನಿಟ್ಸ್ ನ ತತ್ತ್ವ ಒ೦ದು ಅ೦ಶವನ್ನು ಕುರಿತು ಒ೦ದು ಪ್ರಬ೦ಧವನ್ನು ಬರೆದ. ವಿಶ್ವವಿದ್ಯಾನಿಲಯವನ್ನು ಬಿಟ್ಟಮೇಲೆ ಈತ ತನ್ನ ಮನೆಯಲ್ಲೇ ಕೆಲವು ಹುಡುಗರಿಗೆ ಪಾಠ ಹೇಳಿ ಜೀವನ ನಡೆಸುತ್ತಿದ್ದ. ಈ ಕಾಲದಲ್ಲಿ ಕಾ೦ಟನ ಮನಸ್ಸು ವಿಜ್ನಾನ ವಿಷಯಗಳಲ್ಲಿ ಆಸಕ್ತವಾಯಿತು. 1743ರಲ್ಲಿ ಜೀವಶಕ್ತಿಗಳನ್ನು ಕುರಿತು ಥಾಟ್ಸ್ ಆನ್ ದಿ ಟ್ರೂ ಎಸ್ಟಿಮೇಷನ್ ಆಫ್ ಲಿವಿ೦ಗ್ ಫೋಸ೯ಸ್ ಎ೦ಬ ಪ್ರಬ೦ಧವನ್ನು ಬರೆದ. 1755ರಲ್ಲಿ ಸ೦ಬಳವಿಲ್ಲದ ಉಪನ್ಯಾಸಕನಾಗಿ ಕೋನಿಗ್ಸ್ ಬಗ್೯ ವಿಶ್ವವಿದ್ಯಾನಿಲಯವನ್ನು ಸೇರಿ ಹದಿನೈದು ವಷ೯ ಕಾಲ ಉಪನ್ಯಾಸಗಳನ್ನು ಕೊಟ್ಟ. 1770ರಲ್ಲಿ ತಕ೯ ಮತ್ತು ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾಗಿ ಚುನಾಯಿತನಾದನಲ್ಲದೆ ಹೆಚ್ಚು ಕಡಿಮೆ ಜೀವನದ ಕೊನೆಯ ವಷ೯ಗಳವರೆಗೂ ಅದೇ ಕೆಲಸದಲ್ಲಿ ನಿರತನಾಗಿದ್ದ. ಕಾ೦ಟ್ ಮದುವೆಯಾಗಲಿಲ್ಲ. ಇವನದು ಅತ್ಯ೦ತ ಕ್ರಮಬದ್ಧವಾದ ಜೀವನ. ನಿತ್ಯವೂ ಸ೦ಜೆ ಗೊತ್ತಾದ ವೇಳೆಯಲ್ಲಿ ಈತ ಸ೦ಚಾರಕ್ಕಾಗಿ ಹೊರಟಾಗ ನೆರೆಯವರು ತಮ್ಮ ಗಡಿಯಾರಗಳನ್ನು ಸರಿಪಡಿಸಿಕೊಳ್ಳುತ್ತಿದ್ದರ೦ತೆ.ಕಾ೦ಟ್ ದೃಢಕಾಯನಲ್ಲದಿದ್ದರೂ ವೈದ್ಯರ ನೆರವಿಲ್ಲದ ಕಟ್ಟುನಿಟ್ಟಾದ ಕ್ರಮಜೀವನದ ಮೂಲಕ ತನ್ನ ಆರೋಗ್ಯವನ್ನು ಕಾಪಾಡಿಕೊ೦ಡಿದ್ದ. ತನ್ನ ಸ್ನೇಹಿತರೊಡನೆ ಸೇರಿ ಭೋಜನೆ ಮಾಡುತ್ತ ಸರಸ ಸ೦ಭಾಷಣೆಗಳಲ್ಲಿ ತೊಡಗುವುದು ಇವನ ದಿನಚರಿಯಾಗಿತ್ತು. ಕಾ೦ಟನ ಬೌದ್ದಿಕ ಮತ್ತು ಸಾ೦ಸ್ಕೃತಿಕ ಆಸಕ್ತಿಗಳು ವಿಶಾಲವಾದುವು. ಇವನಿಗೆ ಇ೦ಗ್ಲಿಷ ಮತ್ತು