ಪುಟ:Mysore-University-Encyclopaedia-Vol-4-Part-2.pdf/೫೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಷಾಣರು

    ಹೋಗಿದ್ದು. ತಮ್ಮೆರಡು ರಾಜ್ಯಗಳ ನಡುವೆ ಬೆಳೆಯುತ್ತಿದ್ದ ಪ್ಯಾಪಾರ ಸಂಬಂಧವನ್ನು

ಬಲಗೊಳಿಸಿದರು. ಭಾರತೆದಿಂದ ರೋಂ ಸಾಮ್ರಾಜ್ಯಕ್ಕೆ ಮೆಣಸು. ರೇಷ್ಮ ಜರಿಬಟ್ಟೆ ವಜ್ರ ವೈಡುರ್ಯ ಮತ್ತು ಪರಿಮಳ ದ್ರವೃಗಳು ಹೋಗುತ್ತಿದ್ದುವು. ಆ ದೇಶದಿರಿದ ವಿಪುಲ ಸಂಪತ್ತು ಭಾರತಕ್ಕ ಬರುತ್ತಿತ್ತು.

    ಕುಷಾಣರ ರಾಜವಂಶದಲ್ಲಿ ಅತ್ಯುನ್ನತ ಕೀರ್ತಿಗಳಿಸಿದ ಪ್ರೆಭಾವಶಾಲಿ ಚೆಕ್ರವರ್ತಿ ಕನಿಷ್ಯ. ಇವನು

78 ರಿಂದ 120 ರವರೆಗೆ ಆಳಿದ. ಇವನ ಕಾಲದಲ್ಲಿ ಸಾಮ್ರಾಜ್ಯ ವಿಸ್ತಾರವೂ ಬಲಾಧ್ಯವೊ ಅಗಿತ್ತು; ಉತ್ತರದಲ್ಲಿ ಖೋಟಾನ್ ಹಾಗೂ ದಕ್ಷಣದಲ್ಲಿ ಕೊಂಕಣ. ಪೂವ೯ದಲಿ ಬಿಹಾರ ಹಾಗೂ ಪಶ್ಚಿಮೆದಲ್ಲಿ ಖೋರಾಸಾನ್ ವೆರೆಗೆ ಹರಡಿತ್ತೆರಿದು ಇವನ ಶಾಸನಗಳಿಂದ ತಿಳಿದುಬರುತ್ತದೆ. ಎರಡನೆಯ ಕಡ್ ಫೀಸಿಸ್ ಹಾಗೂ ಅನಂತರ ಪಟ್ಟಕ್ಕೆ ಬಂದೆ ಕನಿಷ್ಕನೇ ಮಧ್ಯೆ ಸ್ಥಲ್ಡ ಕಾಲಾಂತರವಿದ್ದರೂ ಕೆನಿಷ್ಠನೇ ಎರಡನೆಯ ಕಡ್ಫೀಸಿಸೆನ ತರುವಾಯದ ಕುಷಾಣ ದೊರೆಯೆಂಬುದು ಖಚಿತವಾಗಿದೆ. ಈತ ಕಾಶ್ಮೀರವನ್ನು ಗೆದ್ದು ಅಲ್ಲಿ ಕನಿಷ್ಕಪುರವನ್ನು ಕಟ್ಟಿಸಿದ. ಬುದ್ಧಗಯೆ ಹಾಗೂ ಷಾಟಲಪುತ್ರೆವನ್ನು ತನ್ನ ಆಡಳಿತಕ್ಕೆ ಸೇರಿಸಿಕೊಂಡ. ಬೌದ್ಭಪಂಡಿತ ಅಶ್ವಘೊಷವನ್ನು ಕನಿಷ್ಕ ಪಾಟಲೀಪುತ್ರದಿಂದ ತನ್ನಲ್ಲಿಗೆ ಆಹ್ವಾನಿಸಿದ. ಪರುಷಪುರ ಅಥವಾ ಪೆಷಾವರ್ ಇವನ ರಾಜಧಾನಿ. ತನ್ನ ಎಸ್ತಾರವಾದ ಸಾಮ್ರಾಜ್ಯವನ್ನು ರಾಜಕೀಯ ಆನುಕೂಲತೆಗಾಗಿ ಹಲವು ಪ್ರಾಂತ್ಯಗಳನ್ನಾಗಿ ವಿಂಗಡಿಸಿ ರಾಜಪ್ರತಿನಿಧಿಗಳ ಸಹಾಯದಿಂದ ರಾಜ್ಯಭಾರ ಸಾಗಿಸಿದೆ. ಕ್ಷತ್ರಪರ ರಾಜ್ಯಪದ್ದತಿಯನ್ನೂ ಮುಂದುವರಿಸಿಕೊಂಡು ಬಂದ. ಕ್ಷತ್ರಪರು ಮತ್ತು ಮಹಾಕ್ಷತ್ರಪರೇ ಪ್ರಾಂತ್ಯಾಧಿಪತಿಗಳು. ಎರಡನೆಯ ಕಡ್ ಫೀಸಿಸ್ ಧರಿಸಿದ ದೇವಪುತ್ರನೆಂಬ ಬಿರುದನ್ನು ಕನಿಷ್ಕನೂ ಧರಿಸುತ್ತಿದ್ದ. ಚೇನದ ದಳಪತಿ ಪಾನ್ ಚಾವನೊಂದಿಗೆ ನಡೆದ ಕದನದಲ್ಲಿ ಕನಿಷ್ಕ ಸೋಲನ್ನನುಭವಿಸಿದರೂ ಅವನ ಮಗ ಪಾನಯಾಂಗನನ್ನು ಸೋಲಿಸಿ ಸೇಡು ತೀರಿಸಿಕೊಂಡು, ಕ್ಯಾಷಫರ್, ಯಾರ್ಕಂಡ್ ಮತ್ತು ಖೋಟಾನುಗಳನ್ನು ವಶಪಡಿಸಿಕೊಂಡ. ಅನಂತರ ಪಾರ್ಥಿಯನರನ್ನೂ ಸೋಲಿಸಿದ. ಈ ಹಲವಾರು ವಿಜಯಗಳ ಸ್ಮಾರಕವಾಗಿ ಒಂದು ಹೊಸ ಶಕವನ್ನು ಪ್ರಶ.೭೮ ರಲ್ಲಿ ಪ್ರಾರಂಭಿಸಿದ. ರಾಜಧಾನಿಯಾದ ಪುರುಷಪುರದಲ್ಲಿ ಭವ್ಯವಾದ ಸಾರ್ವಜನಿಕ ಕಟ್ಟಡಗಳನ್ನೂ ಬೌದ್ದವಿಹಾರಗಳನ್ನೂ ಬುದ್ದನ ಅವಶೇಷಗಳನ್ನೊಳಗೊಂಡಿದ್ದ ಸ್ತೂಪವನ್ನೂ ಈತ ಕಟ್ಟಿಸಿದನೆಂದು ಹೇಳಲಾಗಿದೆ.

    ಕನಿಷ್ಕನು ಅಶೋಕ ಚಕ್ರವರ್ತಿಯಂತೆ ಬೌದ್ದ ಧರ್ಮಾನುಯಾಯಿ ಮತ್ತು ಪ್ರಸಾರಕನೆಂದು ಬೌದ್ದ ಧರ್ಮಾನುಯಾಯಿ ಮತ್ತು ಪ್ರಸಾರಕನೆಂದು ಬೌದ್ಧಗ್ರಂಥಗಳಲ್ಲಿ ಕೀರ್ತಿ ಪಡೆದಿದ್ದಾನೆ. ಬೌದ್ಧಧರ್ಮದೊಂದಿಗೆ ಇತರ ಧರ್ಮಗಳಲ್ಲೂ ಕನಿಷ್ಕನಿಗೆ ನಿಷ್ಠೆಯಿತ್ತೆಂಬ ಸಂಗತಿ ಅವನ ನಾಣ್ಯಗಳ ಮೇಲಿರುವ ಗ್ರೇಕ್, ಸುಮೇರಿಯ, ಪರ್ಷಿಯ ಹಾಗೂ ಭಾರತದ ಹಿಂದೂ ದೇವತೆಗಳು ಲಾಂಛನಗಳಿಂದ ಕಂಡುಬರುತ್ತದೆ.  ಬೌದ್ಧಧರ್ಮದ ವಸುಮಿತ್ರ ಮತ್ತು ಅಶ್ವಷೋಷ ಇವರಿಂದ ಪ್ರಭಾವಿತನಾಗಿ,

ಬೌದ್ಧಧರ್ಮವನ್ನು ಸ್ವೀಕರಿಸಿದರೂ ಕನಿಷ್ಕ ಅನ್ಯಮತೀಯರನ್ನು ಹಿಂಸಿಸದೆ, ಪರಧರ್ಮ ಸಹಿಷ್ಟುವಾಗಿದ್ದ. ಬೌದ್ಧಧರ್ಮ ಪ್ರಚಾರಕರನ್ನು ಎಷ್ಯದ ಮೂಲೆಮೂಲೆಗೂ ಕಳಿಸಿದುದರ ಪರಿಣಾಮವಾಗಿ ಬೌದ್ಧಧರ್ಮ ಬಹುಬೇಗನೆ ಚೀನ, ಜಪಾನ್, ಟಿಬೆಟ್ ಹಾಗೂ ಮಧ್ಯ ಏಷ್ಯದಲ್ಲಿ ಪ್ರಸರಿಸಿತು.

    ಕನಿಷ್ಕ ಕಾಲದಲ್ಲಿ ನಡೆದ ಒ೦ದು ಮಹತ್ವದ ಘಟನೆಯೆಂದರೆ ಬೌದ್ಧಧಮ೯ದ ನಾಲ್ಕನೆಯ ಮಹಾಸಭೆ. ಸು. 500 ಬೌದ್ಧ ಸಂನ್ಯಾಸಿಗಳು ಇದರಲ್ಲಿ ಭಾಗವಹಿಸಿದ್ದರು. ಉದ್ಯಾಮ ಪಂಡಿತರೆನಿಸಿದ ವಸುಮಿತ್ರ, ಅಶ್ವಘೋಷ, ನಾಗಾಜು೯ನ ಮತ್ತು ಪಾಶ್ವ೯ ಈ ಸಭೆಯಲ್ಲಿ ಉಪಸ್ಥಿತೆರಿದ್ದರು. ಸಭೆಯ ಕಾಯ೯ಕಲಾಪಗಳಮ್ನ ನಡೆಸಲು ವಸುಮಿತ್ರ ಅಧ್ಯಕ್ಷನಾಗಿಯೂ ಆಶ್ವಘೋಷ ಉಪಾಧ್ಯಕ್ಷೆನಾಗಿಯೂ ಇದ್ದರು. ಬೌದ್ಧಧರ್ಮದಲ್ಲಿ ಬೆಳೆದುಬಂದ ಕೆಲವು ನಿವಾದಾಸ್ಪದವಾದ ವಿಷಯಗಳನ್ನು ಕೂಲಂಕಷವಾಗಿ ಚರ್ಚಿಸಿ, ಆ ಧಮ೯ಕ್ಕೆ ಒಂದು ಹೊಸ ರೂಪ ಕೊಡುವುದೇ ಈ ಸಭೆಯ ಮೂಲ ಉದ್ದೇಶವಾಗಿತ್ತು.

ಪಂಡಿತರು ಬೌದ್ಧ ಸಾಹಿತ್ಯವನ್ನು ಪರಿಶೀಲಿಸಿ ತ್ರಿಪಿಟಕಗಳ ಮೇಲೆ ಭಾಷ್ಯವನ್ನು ಬರೆದರು. ಅದೇ ಸಮಯದಲ್ಲಿ ಬೌದ್ಧಧರ್ಮೀಯರಲ್ಲಿದ್ದ ಭಿನ್ನಾಭಿಪ್ರಾಯಗಳಿಂದ ಮತದ ಎಕತೆಗೆ ಭ೦ಗ ಬ೦ದು ಇಬ್ಭಾಗವಾಗಿ, ಹೀನಯಾನ ಮತ್ತು ಮಹಾಯಾನಗಳೆಂಬ ಎರಡು ಪಂಗಡಗಳು ಹುಟ್ಟಿಕೊಂಡುವು.

    ಬುದ್ಧನಿಂದ ಪ್ರಾರಂಭವಾಗಿ ಅಶೋಕನ ರಾಜಾಶ್ರಯ ಪಡೆದು ಪ್ರಬಲವಾದ ಬೌದ್ಧಧರ್ಮ ಈ ಒಡಕಿನಿಂದಾಗಿ ಬಲಗುಂದಿತು. ಮೊದಲು ಬುದ್ಧನ ಲಾಂಛನವನ್ನು ಮಾತ್ರ ಪೂಜಿಸುತ್ತಿದ್ದರೆ, ಮಹಾಯಾನದ ಉಗಮದಿಂದಾಗಿ ಬುದ್ಧನನ್ನು ದೇವರ ಅವತಾರವೆಂದು ಬಗೆದು ಅವನ ಪ್ರತಿಮೆಯನ್ನು ಮೊಜಿಸತೊಡಗಿದರು. ಮಹಾಯಾನ ಪಂಗಡದವರು

ಕೇವಲ ಭಗವಾನ್ ಬುದ್ಧನ ಹಾಗೂ ಅವನ ಭಕ್ತರ ನಡುವೆ ವಾಹಕರೆಂದು ನಂಬಲಾದ