ಪುಟ:Mysore-University-Encyclopaedia-Vol-4-Part-2.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಸೂತಿ

<article><footer></footer></article>

ಕಟ್ಟೆಯಿತ್ತು. ಕ್ರಾಂತಿಯ ಆನಂತರ ಪುರುಷರ ಉಡುಪುಗಳ ಮೇಲೆ ಚಿತ್ರಗಳನ್ನು ಬಿಡಿಸುವುದು ಕಡಿಮೆಯಾದರೂ ಸ್ರ್ತೀಯರ ತೆಳುವಾದ ಪಾರದರ್ಶಕ ಉಡುಪುಗಳ ಮೇಲೆ ಬಿಡಿಬಿಡಿಯಾದ ಹೂಗಳನ್ನು ಬಿಡಿಸುತ್ತಿದ್ದರು. ತದನಂತರ ಅಂಚುಗಳನ್ನು ಕಟ್ಟುವುದು ಬಳಕೆಗೆ ಬಂತು. ೧೯ನೆಯ ಶತಮಾನದಿಂದೀಚೆಗೆ, ಢಾಕಾದ ಕಸೀದಾ ಮಾದರಿಯ ಕಸೂತಿ ಫ್ರಾನ್ಸಿನಲ್ಲೂ ಯುರೋಪಿನ ಇತರ ದೇಶಗಳಲ್ಲೂ ಸಾಮಾನ್ಯವಾಗ ತೊಡಗಿದುವು.

೧೦-೧೧ನೆಯ ಶತಮಾನಗಳಲ್ಲಿ ಜರ್ಮನಿಯ ಕಸೂತಿ ಕಲೆ ಬಿಜ಼ಾಂಟಿನ್ ಪ್ರಭಾವಕ್ಕೆ ಒಳಗಾಗಿತ್ತು. ಆಗ ಅದನ್ನು ಕೇವಲ ಧಾರ್ಮಿಕ ಕಾರ್ಯಗಳಿಗೆ ಬಳಸಲಾಗುತ್ತಿತ್ತು. ವಸ್ತ್ರಗಳ ಮೇಲೆ ವಜ್ರಾಕೃತಿಗಳನ್ನು ಬಿಡಿಸುವುದು ಜರ್ಮನರ ವೈಶಿಷ್ಟ್ಯ. ಕ್ರಾಂತಿಯಿಂದೀಚೆಗಿನ ಕಲೆಯಲ್ಲೆ ಧಾರ್ಮಿಕತೆಯ ಹಿನ್ನಲೆ ಕಡಿಮೆಯಾಗಿ ಸಾರ್ವಜನಿಕರು ಕಲಾಭಿರುಚಿಯಿಂಚ ಅದನ್ನು ಬಳಸಲಾರಂಭಿಸಿದರು. ಅನಂತರದಲ್ಲಿ, ದೊಡ್ಡ ಕೊಡ್ಡ ಹೂವಿನ ಆಕಾರಗಳು ಮತ್ತು ಅವುಗಳ ಮಧ್ಯೆ ವಂಶಲಾಂಛನಗಳನ್ನು ಧರಿಸುವ ಪದ್ಧತಿ ಬಂತು. ಉಣ್ಣೆಯ ಕಲೆಗಾರಿಕೆ ಹಾಗೂ ವಿಶಿಷ್ಟ ರೀತಿಯ ಕಸೂತಿದಾರಗಳ ಬಳಕೆಗಾಗಿ ಇಂಗ್ಲೆಂಡ್ ಜರ್ಮನಿಗೆ ಋಣಿಯಾಗಿರಬೇಕು. ಹದಿನಂಟನೆಯ ಶತಮಾನದಲ್ಲಿ ಬಿಳಿಯ ಕಸೂತಿ ಕೆಲಸಕ್ಕೆ ಸ್ಯಾಕ್ಸನಿ ಬಹಳ ಪ್ರಸಿದ್ಧವಾಯಿತು. ಸೂಕ್ಷ್ಮವಾದ ಮಸ್ಲಿನ್, ಕೇಂಬ್ರಿಕ್ ಮತ್ತು ಲಿನೆನ್ಗಳ ಮೇಲೆ ಬಿಳಿಯ ಹತ್ತಿಯಲ್ಲಿ ಕಸೂತಿಮಾಡಲಾಗುತ್ತಿದ್ದು ಇದನ್ನು ಕಾಲರ್, ಕಫ್, ಸ್ಕಾರ್ಫ್ ಮತ್ತು ಕರವಸ್ತ್ರಗಳಂತೆ ಉಪಯೋಗಿಸುತ್ತಿದ್ದರು. ವಿಕ್ಟೋರಿಯ ಕಾಲದಲ್ಲಿ ಬರ್ಲಿನಿನ ಉಣ್ಣೆಯ ಕೆಲಸ ಖ್ಯಾತಿವೆತ್ತಿದ್ದು ಕ್ಯಾನ್ ವಾಸ್ ಗಳ ಮೇಲೂ ಹೊಲಿಗೆ ಕೆಲಸಗಳನ್ನು ಮಾಡಲಾಗುತ್ತಿತ್ತು. ಅನಂತರ ೧೮೫೬ರಿಂದೀಚೆಗೆ, ಜೇಡಿಮಣ್ಣಿನ ಪಾತ್ರೆಗಳ ಮೇಲೆ ಚಿತ್ರಗಳನ್ನು ಬಿಡಿಸುತ್ತಿದ್ದರು. ಅವುಗಳ ಮೇಲೆ ನಾಯಿ, ಸಿಂಹ, ಗಿಳಿಗಳು, ಜಿಂಕೆ ಮೊದಲಾದವನ್ನೂ ಚಿಕ್ಕಿಯ ಚಿತ್ರಗಳನ್ನೂ ಹೂವಿನ ಕುಂಡಗಳನ್ನೂ ಬಿಡಿಸುತ್ತಿದ್ದರು. ಈ ಕಲೆ ಯುರೋಪಿನಿಂದ ಅಮೆರಿಕದವರೆಗೆ ಪ್ರಸರಿಸಿತು.

ನಾರ್ವೆಯ ಕಸೂತಿ ಚಿತ್ರಗಳ ರೋಮನೆಸ್ಕ್ ಕಾಲದಿಂದಲೂ ಪ್ರಸಿದ್ಧವಾಗಿವೆ. ಲಿನೆನ್ ಮತ್ತು ಇತರ ವಸ್ತ್ರಗಳ ಮೇಲೆ ಆಭರಣಗಳಿಂದ ಕಸೂತಿ ಮಾಡುವುದು ಅನೇಕ ವರ್ಷಗಳ ಪರ್ಯಂತ ಈ ಜನತೆಯ ಒಂದು ವೈಶಿಷ್ಟ್ಯವಾಗಿತ್ತು. ಪುನರುತ್ಥಾನದ ಅನಂತರ ಟೆಲ್ಲೆಸೋಂ ಎಂಬ ಜ್ಯಾಮಿತೀಯ ಆಕೃತಿಗಳುಳ್ಳ ಕಸೂತಿಗೆ ಮನ್ನಣೆ ದೊರೆಯಿತು. ಗ್ರಾಮಪ್ರದೇಶಗಳಲ್ಲಿ ಕಸೂತಿಯೇ ಮುಖ್ಯವಾಗಿದ್ದರೂ ಕೆಲವಾರು ಬಾರಿ ರೇಷ್ಮೆಯನ್ನು ಉಪಯೋಗಿಸುತ್ತಿದ್ದರು. ಸಾಂಪ್ರದಾಯಿಕ ಕಸೂತಿ ಮಾದರಿ ಉಚ್ಛೃಂಖಲವಾಗಿ ಕೆಲವಾರು ಪ್ರದೇಶಗಳಲ್ಲಿ ತಲೆದೋರಿತ್ತು. ಕೆಂಪು ಮತ್ತು ನೀಲಿ ಬಣ್ಣಗಳನ್ನು ಆಮದು ಮಾಡಿಕೊಳ್ಳುತ್ತಿದ್ದರಾದರೂ ಮಿಕ್ಕೆಲ್ಲ ಬಣ್ಣಗಳನ್ನೂ ಸ್ವತಃ ತಯಾರಿಸುತ್ತಿದ್ದರು. ಅಲ್ಪವಿರಾಮ ಚಿಹ್ನೆಯನ್ನು (ಕಾಮ) ಹೋಲುವ ಕೃತಿಯಲ್ಲಿ ಮಣಿಗಳಗಳನ್ನು ಪೋಣಿಸಿ ಹೊಲಿಯಲಾಗುತ್ತಿತ್ತು.

ಡೇನಿಷ್ ಹೆಬೆಡೋ ಮಾದರಿಯ ಕಸೂತಿ ಡೆನ್ಮಾರ್ಕಿನಲ್ಲಿ ಪ್ರಮುಖವಾಗಿತ್ತು. ಇದನ್ನು ಪುರುಷರ ಉಡುಪುಗಳು, ಸ್ರ್ತೀಯರ ಒಳುಡುಪುಗಳ ಹಾಗೂ ಗೃಹಾಲಂಕಾರಗಳಿಗಾಗಿ ಲಿನೆನ್ ಬಟ್ಟೆಯ ಮೇಲೆ ಹಾಕಲಾಗುತ್ತಿತ್ತು. ಪುನರುತ್ಥಾನದ ಪೀಠೋಪಕರಣಗಳಿಂದ ಕೆಲವು ಮಾದರಿಗಳನ್ನು ಆಯ್ದು ಹೊಲಿಯುತ್ತಿದ್ದ ಈ ಕಸೂತಿಯಲ್ಲಿ ಹಳೆಯ ಗ್ರಂಥಗಳಲ್ಲಿ ಹೇಳಲಾದ ಸುರುಳಿ ಚಿತ್ರಗಳನ್ನು ಬಳಸುತ್ತಿದ್ದರು. ಹತ್ತೊಂಬತ್ತನೆಯ ಶತಮಾನದಲ್ಲಿ ಕೆಲವಾರು ಬದಲಾವಣೆಗಳುಂಟಾಗಿ, ಮಧ್ಯೆ ಮಧ್ಯೆ ಜಾಗ ಬಿಟ್ಟು ಉದ್ದಕ್ಕೂ ಅಗಲಕ್ಕೂ ಚೌಕಾಕೃತಿ ಮೂಡುವಂತೆ ಅನೇಕ ದಾರಗಳಲ್ಲಿ ಹೊಲಿಯುವ ಪದ್ಧತಿ ಬಳಕೆಗೆ ಬಂತು. ಮಧ್ಯದ ಸ್ಥಳಗಳಲ್ಲಿ ಎಳೆ ತುಂಬುತ್ತಿದ್ದರು. ಆ ಶತಮಾನದ ಮಧ್ಯಭಾಗದಲ್ಲಿ ಈ ಕಸೂತಿ ಕೆಲಸಗಾರರು ಸಾಂಪ್ರದಾಯಿಕ ಮಾದರಿಗಳನ್ನು ಬಿಟ್ಟು ಹೊಸ ಧಾಟಿ ಹಿಡಿದರು. ಎಲೆ, ಹೂವು, ನಕ್ಷತ್ರಗಳೇ ಮೊದಲಾದವು ಕಸೂತಿಯಲ್ಲಿ ಮೂಡಲಾರಂಭಿಸಿದುವು; ಕಲೆಯಾಗಿದ್ದ ಕಸೂತಿಗಾರಿಕೆ ಶತಮಾನದ ಕೊನೆಯ ಹೊತ್ತಿಗೆ ಒಂದು ಕಸಬಾಗಿ ಸೌಂದರ್ಯ ಮತ್ತು ಮೌಲಿಕತೆಗಳನ್ನು ಕಳೆದುಕೊಂಡಿತು.

೧೪ ಮತ್ತು ೧೫ನೆಯ ಶತಮಾನಗಳಲ್ಲಿ ಉತ್ತರ ಯುರೋಪಿನ ಬ್ರೂಗ್ಸಿನಲ್ಲಿ ಕಸೂತಿಯೇ ಮುಂತಾದ ಕೆಲಸಗಳಿಗೆ ರಾಜ ಶ್ರೀಮಂತದಿಂದ ವಿಶೇಷ ಪ್ರೋತ್ಸಾಹ ಲಭಿಸಿತು. ಅದು ಧಾರ್ಮಿಕತೆಯ ಮುಸುಕನ್ನು ಕಿತ್ತೊಗೆದು ಸೌಂದರ್ಯ ಹಾಗೂ ಕಲಾಭಿರುಚಿಯ ಸಾಧನವಾಯಿತು. ಪವಿತ್ರ ಕುರಿಮರಿಯ ಆರಾಧನೆ ಎಂಬುದು ಹರ್ಬರ್ಟ್ ವ್ಯಾನ್ ಐಕನ ಅಮೂಲ್ಯ ಕೃತಿಗಳಲ್ಲೊಂದಾಗಿತ್ತು. ಇದರಲ್ಲಿಯ ಕನ್ಯೆ ಚಿನ್ನ, ಮುತ್ತು, ರತ್ನ ಮತ್ತು ಬೆಲೆ ಬಾಳು ಆಭರಣಗಳನ್ನು ಧರಿಸಿರುವಂತೆ ಅವನ್ನು ಪೋಣಿಸಿ ಹೊಲಿಯಲಾಗಿದೆ. ೧೬ನೆಯ ಶತಮಾನದ ಪ್ಲೆಯಿಷ್ ಮಾದರಿಯೊಂದರಲ್ಲಿ ಕ್ರಿಸ್ತನ ಬಾಲ್ಯದ ದೃಶ್ಯಗಳಿವೆ. ಇವನ್ನು ಲಿನೆನ್ ಮೇಲೆ, ಚಿನ್ನದ ಎಳೆಗಳಿಂದ ಪಾರದರ್ಶಕವಾಗಿ ಕಾಣುವಂತೆ ಕತ್ತರಿ ಕಸೂತಿ ಮಾಡಿದೆ. ಆನಂತರದ ಶತಮಾನದ ಇನ್ನೊಂದು ಉತ್ಕೃಷ್ಟ ಉದಾಹರಣೆಯಿಂದರೆ ಸೇಂಟ್ ಮಾರ್ಗರೆಟ್ ಚಿತ್ರ. ಇದರ ಮೇಲೆ ಗಾಥಿಕ್ ಮಾದರಿಯಲ್ಲಿ ಚಿನ್ನದ ಹೊಲಿಗೆಗಳಿಂದ ಮೇಲ್ಕಟ್ಟುಗಳನ್ನು ಹೊಲಿಯಲಾಗಿದೆ. ೧೬ನೆಯ ಶತಮಾನದಲ್ಲೆಲ್ಲ ಫ್ಲೆವಿಷ್ ಮಾದರಿಯ ಕಸೂತಿಯೇ ಬಹಳವಾಗಿ ಪ್ರಚಲಿತವಾಗಿತ್ತು.

ಮಧ್ಯ ಮತ್ತು ಪೂರ್ವ ಯುರೋಪುಗಳಲ್ಲಿ ಕಸೂತಿ ಮೂಲತಃ ಒಂದು ಗ್ರಾಮೀಣ ಕಲೆ. ಮನೆಗಳಲ್ಲಿಯ ದಿಂಬು ಆವರಣ, ಪರದೆ, ಕರವಸ್ತ್ರ, ಅಣೆಕಟ್ಟು ಮೊದಲಾಲ ವಸ್ತುಗಳ ಮೇಲೆ ಜ್ಯಾಮಿತೀಯ ಆಕಾರದ ಮತ್ತು ಹೂವುಗಳ ಚಿತ್ರಗಳನ್ನು ಬಿಡಿಸುತ್ತಿದ್ದರು. ಪೋಲೆಂಡಿನಲ್ಲಿ ಉಣ್ಣೆಬಟ್ಟೆಗಳ ಮೇಲೆ ಅಂಚು ಸೇರಿಸಿದೆಡೆಯಲ್ಲಿ ಬಣ್ಣಬಣ್ಣದ ದಾರಗಳಿಂದ ಆಲಂಕಾರಿಕವಾಗಿ ಹೊಲಿಗೆ ಕೆಲಸ ಮಾಡುತ್ತಿದ್ದರು. ಬಿಳಿಯ ಕುಪ್ಪಸಗಳಿಗೆ ತೋಳಿನ ತುದಿ ಮತ್ತು ಕುತ್ತಿಗೆಗಳ ಹತ್ತಿರ ಕಸೂತಿ ಮಾಡುತ್ತಿದ್ದರು. ಹಂಗರಿಯ ರಾಷ್ಟ್ರೀಯ ಉಡುಗೆಗಳಿಗೆ ಅವುಗಳದೇ ವೈಶಿಷ್ಟ್ಯವಿತ್ತು. ಬಿಳುಪು ಪ್ರಮುಖ ಬಣ್ಣ. ಫೆಲ್ಪ್ ಕೋಟಿನ ಮೇಲೆ ಹತ್ತಿ ಮತ್ತು ರೇಷ್ಮೆ ಕಸೂತಿ ಮಾಡುತ್ತಿದ್ದರು. ರೊಮೇನಿಯದಲ್ಲಿ ಹಬ್ಬದ ದಿನಗಳಲ್ಲಿ ಜ್ಯಾಮಿತೀಯ ಆಕಾರಗಳಲ್ಲಿ ಮಣಿಗಳನ್ನು ಸೇರಿಸಿ ಅಡ್ಡಹೊಲಿಗೆಯನ್ನು ಹೊಲಿದು ಕಸೂತಿಮಾಡಿದ ಬಟ್ಟೆಗಳನ್ನು ಧರಿಸುತ್ತಾರೆ. ಬಲ್ಗೆರಿಯದಲ್ಲೂ ಹಂಗರಿಯಂತೆ ಬಿಳಿಹೊಲಿಗೆ ಪ್ರಮುಖ. ಬಣ್ಣದ ಹೊಲಿಗೆಗಳಲ್ಲಿ ಬಲ್ಗೆರಿಯನರಿಗೆ ಕಂಪು ಬಹಳ ವೆಚ್ಚಿಕೆಯಾದುದು. ಪುರುಷರ ಷರಾಯಿ, ಷರ್ಟು ಮತ್ತು ಕೋಟು, ಸ್ರ್ತೀಯರ ಕುಪ್ಪಸಗಳು ಮತ್ತು ಇತರ ಉಡುಪುಗಳ ಮೇಲೆ ಮುಖ್ಯವಾಗಿ ಕೆಂಪು, ಹಳದಿ ಮತ್ತು ಕರಿಯ ಬಣ್ಣಗಳಲ್ಲಿ ಕಸೂತಿ ಮಾಡುತ್ತಾರೆ. ಚೆಕೊಸ್ಲೊವಾಕಿಯದಲ್ಲಿ ೧೯ ಮತ್ತು ೨೦ನೆಯ ಶತಮಾನಗಳಲ್ಲಿ ಕಸೂತಿ ಕಲೆ ಮರೆಯಾದರೂ ಜಾನಪದ ಕಲೆಯನ್ನು ಉತ್ತೇಜಿಸುವುದಕ್ಕೋಸ್ಕರ ಎಲ್ಲ ಪ್ರಾಂತ್ಯಗಳಲ್ಲೂ ಜಾನಪದ ರೀತಿಯ ಕಸೂತಿಯನ್ನು ಹಾಕಲಾಗುತ್ತಿದೆ. ನೃತ್ಯ ಮುಂತಾದ ಲಲಿತಕಲೆಗಳಿಗಾಗಿ ವಿಧವಿಧವಾಗಿ ಕಸೂತಿ ಮಾಡಿದ ಬಟ್ಟೆಗಳನ್ನು ಉಪಯೋಗಿಸುವುದುಂಟು.

ಯುಗೊಸ್ಲಾವಿಯದಲ್ಲಿ ದಕ್ಷಿಣ ಸ್ಲಾವ್ ಜನರ ರಾಷ್ಟ್ರೀಯ ಉಡುಪುಗಳು ಬಹಳ ಪುರಾತನವಾದವು. ಸಾಮಾನ್ಯವಾಗಿ ಜ್ಯಾಮಿತೀಯ ಆಕಾರಗಳು, ಹೂವು, ಪ್ರಾಣಿ ಮುಂತಾದವುಗಳ ಚಿತ್ರಗಳನ್ನು ಹೊಲಿದು ಅವುಗಳ ಮೇಲೆ ಮಧ್ಯದಲ್ಲಿ ಪುರಾತನ ಚಿಹ್ನೆಗಳಾದ ಶಿಲುಬೆನ್ನೋ ಅರ್ಧಚಂದರಾಕೃತಿಯನ್ನೋ ಸೇರಿಸುತ್ತಿದ್ದರು. ವನಸ್ಪತಿಯಿಂದ ತಯಾರಿಸಿದ ಹಳದಿ, ಕಂದು ಮತ್ತು ನೀಲಿಬಣ್ಣಗಳನ್ನು ಉಪಯೋಗಿಸಲಾಗುತ್ತಿತ್ತು. ಕರಿಬಣ್ಣದ ಕುರಿಯ ಉಣ್ಣೆಯಿಂದ ಕರಿಯ ಬಣ್ಣದ ಕಸೂತಿ ಕೆಲಸವನ್ನು ಬಹಳ ಚಾಕಚಕ್ಯೆತೆಯಿಂದ ಯುಗೊಸ್ಲಾವಿಯನರು ಮಾಡುತ್ತಿದ್ದರು.

ರಷ್ಯನರ ಜೀವನ ಮತ್ತು ಕಲೆಗಳಲ್ಲಿ ಬಿಜ಼ಾಂಟಿನ್ ಸಂಸ್ಕೃತಿ ಹಾಸುಹೊಕ್ಕಾಗಿದ್ದುದರಿಂದ, ಅವರ ನಿಲುವಂಗಿಗಳು ಮತ್ತು ಧರ್ಮಿಕ ಉಡುಗೆತೊಡುಗೆಗಳಿಗೆ ಮುತ್ತು ರತ್ನಗಳನ್ನು ಸೇರಿಸಿ ಕಸೂತಿ ಮಾಡುತ್ತಿದ್ದರು. ತಲೆಯ ಮೇಲೆ ಧರಿಸುತ್ತಿದ್ದ ಧಾರ್ಮಿಕ ಶಿರವಸ್ತ್ರಗಳಿಗೆ ಮುತ್ತು ಮಾಣಿಕ್ಯಗಳನ್ನೂ ಬೆಲೆಬಾಳುವ ಕಲ್ಲುಗಳನ್ನೂ ಸೇರಿಸಿ ಹೊಲಿಯುತ್ತಿದ್ದರು. ೧೮ನೆಯ ಮತ್ತು ೧೯ನೆಯ ಶತಮಾನಗಳ ಧರ್ಮಸಂಬಂಧವಾದ ಉಡುಪುಗಳಿಂದ ಬಿಜ಼ಾಂಟಿನ್ ಕಲೆಯ ಪ್ರಭಾವ ಎಷ್ಟಿತತೆಂಬುದು ಚೆನ್ನಾಗಿ ವಿದಿತವಾಗುತ್ತಿದೆ. ಉಕ್ರೇನಿನಲ್ಲಿ ವಿವಿಧ ವರ್ಣ ರಂಜಿತವಾದ ನಾಜೂಕಿನ ಹೂಗಿಡಗಳನ್ನು ಬಿಡಿಸುವ ಕಲೆ ಮುಂದುವರಿಯಿತು. ಟಾಟರರ ಪ್ರದೇಶಗಳಲ್ಲಿ ಬಣ್ಣಗಳಿಗೆ ಬಹಳ ಮಹತ್ತ್ವ ಕೊಡಲಾಗಿತ್ತು. ಕೈಚೀಲ, ಥೈಲಿ (ಪರ್ಸ್), ಮುಖಮಲ್ ಟೋಪಿಗಳು ಮೊದಲಾದವುಗಳ ಮೇಲೆ ಚಿನ್ನದ ಎಳೆಗಳಿಂದ ಕಸೂತಿ ಹಾಕುತ್ತಿದ್ದರು. ಆರ್ಮೇನಿಯ ಮತ್ತು ಕ್ರಿಮಿಯಗಳಲ್ಲಿ ಕಲೆ ಇನ್ನೂ ಲಲಿತವಾಗಿದ್ದು, ಮಾದರಿಗಳು ಪೌರಸ್ತ್ಯ ರೀತಿಯವಾಗಿದ್ದುವು. ಬಿಳಿಯ ಬಟ್ಟೆಯ ಮೇಲೆ ರೇಷ್ಮೆಯಿಂದ ಕಸೂತಿ ಹಾಕಿ ನಡುನಡುವೆ ಚಿನ್ನಬೆಳ್ಳಿ ಎಳೆಗಳನ್ನು ಸೇರಿಸುತ್ತಿದ್ದರು.

ಬ್ರಿಟಿಷ್ ದ್ವೀಪಗಳಲ್ಲಿ ದೊರೆಯುವ ಕಸೂತಿಯ ಅತ್ಯಂತ ಪುರಾತನ ನಮೂನೆಯೆಂದರೆ ಸು. ೯೦೩ರ ಸ್ಪೋಲ್ ಎಂಬ ಕಂಠವಸ್ತ್ರ ಮತ್ತು ಮ್ಯಾನಿಪಲ್ ಎಂಬ ಉಡುಪುಗಳು. ಇವು ಡೆರ್ಹಮ್ ನಲ್ಲಿ ಸೇಂಟ್ ಕತ್ ಬರ್ಟ್ ಸಮಾಧಿಯಲ್ಲಿ ದೊರಕಿವೆ. ಕಸೂತಿಮಾಡಿದ ಬೂಯೆರ್ಸ್ ಜವನಿಕೆಯೊಂದು ಆ ಕಾಲದ್ದೆಂದು ಹೇಳಬಹುದಾದ ಮತ್ತೊಂದು ನಮೂನೆ. ಇಂಗ್ಲಿಷರ ಕಸೂತಿ ಕಲೆಯ ಚರಿತ್ರೆಯಲ್ಲಿ ೧೩ನೆಯ ಶತಮಾನ ಬಹಳ ಗಮನಾರ್ಹವಾದದ್ದು. ಹೆಣೆದ ನಿಲುವಂಗಿಗಳ ಮತ್ತು ಚರ್ಚಿನ ಇತರ ವಸ್ತುಗಳ ಮೇಲೆ ಮೇಲಿನ ದಾರವನ್ನು ಹಿಂದಕ್ಕೆ ಎಳೆದು ಬಿಗಿಮಾಡಿ ಸಾಟಿನ್ ಹೊಲಿಗೆಯ ಹಾಗೆ ಮಾಡುತ್ತಿದ್ದರು. ಮನುಷ್ಯರ ಆಕೃತಿಗಳನ್ನು ಹೊಲಿಯಬೇಕಾದಾಗ ಕೂದಲು ಮೊದಲಾದವನ್ನು ತುಂಡು ಹೊಲಿಗೆಯಿಂದಲೂ ಮುಖವನ್ನು ಸುರುಳಿಹೊಲಿಗೆಯಿಂದಲೂ ಅಲಂಕರಿಸಿ ಹೊಲಿಯುತ್ತಿದ್ದರು. ವಸ್ತ್ರಗಳಿಗೆ ಮುತ್ತು ರತ್ನಗಳನ್ನೂ ಆಭರಣಗಳನ್ನೂ ಜೋಡಿಸುತ್ತಿದ್ದರು. ಇಂಗ್ಲೆಂಡಿನಲ್ಲಿ ೧೪ನೆಯ ಶತಮಾನದಲ್ಲಿ ಕಸೂತಿಯನ್ನು ಧಾರ್ಮಿಕ ಕಾರ್ಯಗಳಿಗಾಗಿಯೆ ಉಪಯೋಗಿಸುತ್ತಿದ್ದರಾದರೂ ಕೆಲಮಟ್ಟಿಗೆ ಅವನ್ನು ಸೌಂದರ್ಯಾಭಿವ್ಯಕ್ತಿಯ ಸಾಧನವಾಗಿ ಐಹಿಕೋದ್ದೇಶಗಳಿಗೂ ಉಪಯೋಗಿಸುತ್ತಿದ್ದರು. ೧೫ನೆಯ ಶತಮಾನದಲ್ಲಿ ಯುರೋಪಿನ ಇತರ ದೇಶಗಳಿಂದ ಬಂದ ಮುಖಮಲ್ ಮತ್ತು ಡಮಾಸ್ಕ್ ಬಟ್ಟೆಗಳ ಮೇಲೆ ಕಸೂತಿ