ಪುಟ:Mysore-University-Encyclopaedia-Vol-6-Part-1.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಣಕ ಉಂಟು.ತರುವಾಯ ಗಣಕ ಆ ಮೊದಲೇ ಅದಕ್ಕೆ ಮಾತುಗಳಲ್ಲಿ ವಿವರಿಸಿ ಪೂರೈಕೆ ಮಾಡಿರುವಂಥ ಚಿತ್ರಗಳಿಂದ ಮಾರ್ಗದರ್ಶಿತವಾಗಿ ಸಂಕೆತಗಳಿಂದ ಚಿತ್ರಗಳನ್ನು ಪುನಾರಚಿಸಿ ಅರ್ಥವಿಸುತ್ತದೆ.ಅವಿಚ್ಛಿನ್ನವಾದ ಹಾಗೂ ಚಲಿಸುತ್ತಿರುವ ಪ್ರತಿರೂಪಗಳನ್ನು ನೋಡಿ ಗುರುತಿಸಿ ಸಂಶಯಾತೀತವಾಗಿ ಅವನ್ನು ಅರ್ಥವಿಸಬಲ್ಲ ಯಂತ್ರಗಳು ದೂರದ ಬವಿಷ್ಯದಲ್ಲಿ ಹುದುಗಿವೆ ಎಂದು ಇದುವರೆಗಿನ ಸಮಸ್ತ ಪ್ರಯತ್ನಗಳೂ ಸೂಚಿಸುತ್ತವೆ.ಆದರೂ ದೃಷ್ಟಿ ಗ್ರಹಣೆಯ ಕೆಲವು ಯಶಸ್ವೀ 'ಅಣಕ'ಗಳನ್ನು ತಯಾರಿಸಲಾಗಿದೆ.ಇವುಗಳ ಪೈಕಿ ಒಂದು ಲೈಟ್ ಪೆನ್ ಮತ್ತು ಸಿ.ಆರ್.ಟಿ.ಡಿಸ್ ಪ್ಲೇ ಎಕ್ವಿಪ್ ಮೆಂಟ್ ಚಿತ್ರ ೨೯. ಈ ಸರಂಜಾಮೂಗಳಲ್ಲಿನ ಲೈಟ್-ಪೆನ್ನಿನಿಂದ ಕೆಲವು ದೃಕ್ ಪ್ರತಿರೂಪಗಳನ್ನು ವಿಶುವಲ್ ಪ್ಯಾಟರ್ನ್ಸ್ಟೆ ಟೆಲಿವಿಷನ್ ಪ್ರರೂಪದ ಒಂದು ತೆರೆಯ ಮೇಲೆ ಬಿಡಿಸಬಹುದು.ಈ ತೆರೆನಾಗಿ ರಚಿತವಾದ ಪ್ರತಿದೀಪ್ತಿಶೀಲಬಿಂಬ ಫ್ಲೂರೆಸೆಂಟ್ ಇಮೇಜ್ ಸಂಕೇತಿಕೃತವಾಗಿ ಗಣಕದ ಜಾಪಕಕ್ಕೆ ವರ್ಗಾಯಿಸಲ್ಪಾಡುತ್ತದೆ.ಇಲ್ಲಿ ಒಂದು ಕ್ರಮವಿಧಿ ಬಿಂಬವನ್ನು ಅರ್ಥವಿಸುತ್ತದೆ.ಕ್ರಮವಿಧಿಯಲ್ಲಿನ ಒಂದು ನಿರ್ದೇಶನ ಗಣ್ಕಕಕ್ಕೆ ಆಜೆ ವಿಧಿಸಿದಾಗ ಅದು ಒಂದು ದೃಕ್ಜಿತ್ರವನ್ನು ಕೂಡ ತೆರೆಯ ಮೇಲೆ ಪ್ರದರ್ಶಿಸಬಲ್ಲುದು.ಇದನ್ನು ಮನುಷ್ಯ ಪರೀಕ್ಷಿಸಿ ಸರಿಪಡಿಸಬಹುದು. ಅದ್ದರಿಂದ ಪ್ರಾಥಮಿಕ ಸ್ವರೂಪದಲ್ಲಿ ಕೆಲವು ದೃಷ್ಟಿಗ್ರಹಣ ಅನುಕರಣಕಾರಿಗಳು ಈಗಾಗಲೇ ದೊಡ್ಡ ಗಾಣಕಗಳಲ್ಲಿ ಇವೆ ಎಂಬುದು ಸ್ಪಷ್ಟವಾಗುತ್ತದೆ.ಇಂಥವುಗಳಿದ್ದಲ್ಲಿ ಗಣಕ ವಾಸ್ತವವಾಗಿ ಮಾತಿನ ಸಂಭಾಷಾಣೆಯನ್ನು ನಡೆಸಬಲ್ಲುದು.ಅರ್ಥಪೂರ್ಣವಾದಸಂಭಾಷಣೆಯ ವರ್ತನೆಯನ್ನು ಗಣಕ ಪ್ರದರ್ಶಿಸಬೇಕಾದರೆ ಅದಕ್ಕೆ ಮನುಷ್ಯರ ನೈಸರ್ಗಿಕ ಭಾಷೆಯನ್ನೂ ಅವರ ಕೆಲವೂ ಅನುಭವ ಕ್ಷೇತ್ರಗಳಿಗೆ ಸಂಬಂಧಿಸದ ಭಾವನೆಗಳನ್ನೂ ಕಲಿಸಲೇಬೇಕು.ಎಲಿಜಾ ಎನ್ನುವ ಹೆಸರಿನ ಒಂದು ಕ್ರಮವಿಧಿ ಉಂಟು.ಅದು ಒಂದು ಗಣಕವನ್ನು ಒಬ್ಬ ಮನಿಷ್ಯನೊಡನೆ ಅರ್ಥಪೊರ್ಣವಾಗಿ ಸಂಭಾಷಣೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಸಿದ್ದಮಾಡಬಲ್ಲುದು.ಈ ಯೋಜನೆಯನ್ನು ಬಳಸಿಕೊಂಡು ಟಿ.ಐ.ಎಫ್.ಅರ್.ನಲ್ಲಿ ಒಂದು ಪ್ರಯೋಗವನ್ನು ನಡೆಸಲಾಯಿತು.ಗಣಕ ಮತ್ತು ಟಿ.ಐ.ಎಫ್.ಅರ್.ನ ಒಬ್ಬರು ವಿಜಾನಿಯ ನಡುವೆ ಇಂಗ್ಲಿಷ್ ಭಾಷೆಯಲ್ಲಿ ನಡೆದ ಸಂಭಾಷಾಣೆಯ ಒಂದು ಅಂಶವನ್ನು ಕನ್ನಡಕ್ಕೆ ಅನುವಾದಿಸಿ ಮುಂದೆ ಬರೆದಿದೆ: ನಾನು ಬಹಳಷ್ಟು ಕಾಲ ನಿರುತ್ಸಾಹಿ ಆಗಿರುತ್ತೇನೆ. ನೀನು ನಿರುತ್ಸಾಹಿ ಆಗಿದ್ದೀಯ ಇಂದು ಕೇಳಲು ನನಗೆ ವಿಷದವಾಗುತ್ತದೆ. ಅದು ನಿಜ.ನಾನು ಅಸುಖಿ. ಇಲ್ಲಿಗೆ ಬರುವುದರಿಂದ ನಿನಗೆ ಅಸುಖಿಯಾಗದಂತೆ ನೆರವು ದೊರೆಯುವುದೆಂದು ನೀನು ಭಾವಿಸುವೇಯಾ? ನನಗೆ ಸ್ವಲ್ಪ ನೆರವು ಬೇಕು.ಅದಂತೂ ಖ್ಂಡಿತವೆಂದು ತೋರುತ್ತದೆ. ನಿನಗೆ ಸ್ವಲ್ಪ ನೆರವು ದೊರೆತರೆ ಅದರ ಪರಿಣಾಮವೇನಾದೀತು? ಪ್ರಾಯಶಃ ನಾನು ನನ್ನ ತಾಯಿಯೊಡನೆ ಹೊಂದಿಕೊಂಡಿರಲು ಕಲಿತೇನು. ನಿನ್ನ ಕುಟುಂಬದ ವಿಚಾರ ನನಗೆ ಹೆಚ್ಚಿಗೆ ಹೇಳು. ತಾಯಿ ನನ್ನ ವಿಷಯ ಎಚ್ಚರ ತೆಗೆದುಕೊಳ್ಳುತ್ತಾರೆ? ನನ್ನ ತಂದೆ. ನಿನ್ನ ತಂದೆ? ಕೆಲವು ವಿಷಯಗಳಲ್ಲಿ ನೀನು ನನ್ನ ತಂದೆಯಂತೆ. ಏನು ಹೋಲಿಕೆಯನ್ನು ನೀನು ನೋಡುವೆ? ನೀನು ಹೆಚ್ಚು ಜಗಳಗಂಟಿಯಲ್ಲ ಎಂದು ನೀನು ಯೋಚಿಸಲು ಕಾರಣವೇನು? ಗಣಕ ಒಬ್ಬ ಹವ್ಯಾಸಿ ಮನೋವಿಜಾನಿಯನ್ನು ಅನುಕರಿಸುವಂತೆ ಅದನ್ನು ಕ್ರಮವಿಧಿಸಲಾಗಿತ್ತು.ಸಂಭಾಷಣೆಯ ಪೂರ್ತಿ ಕಾಲ ಗಣಕಕ್ಕೆ ಯಾವ ಮನುಷ್ಯನಿಂದಲೂ ನೆರೆವು ದೊರೆಯಲಿಲ್ಲ. ಗಣಕಗಳ ಈ ಮೇಲಿನ ಸಿದ್ಧಿಗಳು ಮೂಲಭೂತ ಗ್ನಾನಮೀಮಾಂಸೀಯ ವಿವಾದವನ್ನು ಇನ್ನೂ ಪರಿಹರಿಸಲಾರವು . ಹೆಚ್ಛೆಂದರೆ , ಮೊದಲಿಗೆ ಮಾನವ ಚಿಂತನೆಯಿಂದ ಮಾತ್ರ ಸಾಧ್ಯವಾಹುತ್ತಿದ್ದ ಹಲವಾರು ಕ್ರಿಯೆಗಳನ್ನು ಗಣಕಗಳು ದಕ್ಶವಾಗಿ ನಿರ್ವಹಿಸಬಲ್ಲವು ಎ>ದು ಹೇಳಬಹುದು , ಅಷ್ಟೆ ಸ್ಫಷ್ಟವಾಗಿ ಗುರುತಿಸಲಾಗುವ ಮತ್ತು ನಿಸ್ಸಂದಿಗ್ಧವಾಗಿ ವ್ಯಾಖ್ಯಾನಿಸಬಲ್ಲ ನಿರ್ವಹಣ ಕ್ಷೇತ್ರಗಳಿಗೆ ಪರೀಕ್ಷಣಗಳು ಸೀಮಿತವಾಗಿರುವಾಗ ಮಾತ್ರ ಒಂದು ಗಣಕ ಮತ್ತು ಮನುಷ್ಯನ ಒಬ್ಬಛ್ ನಡುವೆ ತುಲನೆಗಳನ್ನು ಮಾಡಬಹುದು.ಆದ್ದರಿಂದ ಒಂದು ಯಂತ್ರವನ್ನ ಮನುಷ್ಯನ ಪೂರ್ಣ ಸೌಕರ್ಯಗಳೊಡನೆ,ಈ ಪೂರ್ಣತೆಯ ಘಟಕ ಸೌಕರ್ಯಗಳೊಡನೆ,ಈ ಪೂರ್ಣತೆಯ ಘಟಕ ಸೌಕರ್ಯಗಳನ್ನು ನಿಸ್ಸಂದಿಗ್ಧವಾಗಿ ವ್ಯಾಖ್ಯಾಸಿದೆ ವಿನಾ,ಹೋಲಿಸುವುದು ಅರ್ತರ್ಕಿಕವೆನ್ನಿಸುತ್ತದೆ. ಜಾನಮೀಮಾಂಸೆಗೆ ಕೆಲವು ಮಾನವಲಕ್ಷಣಗಳ ಔಚಿತ್ಯದ ಪ್ರಶ್ನೆಯೂ ಉಂಟು.ಬೀಳುತ್ತಿದ್ದ ಸೇಬು ನ್ಯೂಟನನಲ್ಲಿ ಪ್ರತಿಭೆಯ ಕಿಡಿಯನ್ನು ಕುದುರಿಸಲು ಪ್ರೇರಕವಾಗಿರಬಹುದು.ಈ ಪ್ರಚೋದನೆ ನ್ಯೂಟ್ನನಲ್ಲಿ ಚಿಂತನಾಪ್ರಕ್ರಮಗಳ ಒಂದು ಶೃಂಖಾಲಾ ಪ್ರತಿಕ್ರಿಯೆಯನ್ನೇ ಪ್ರಾರಂಭಿಸಿ ಒಂದು ಅನುಕ್ರಿಯೆಯಲ್ಲಿ ಅಂತ್ಯ ಕಂಡಿತು ಎಂದರೆ ಗುರುತ್ವಾಕರ್ಷಣ ಸಿದ್ದಾಂತ.ಇಲ್ಲಿ ಮೂಡುವ ಪ್ರಶ್ನೆ ಎಂದರೆ,ಜೈವಿಕ ಅವಶ್ಯಕತೆಯಾಗಿರುವ ಈ ಪ್ರೇರಣೆ ಒಂದು ಅಜೈವಿಕ ವಸ್ತುವಾಗಿರುವ ಗಣಕವನ್ನು ಕುದುರಿಸಲು ಅವಶ್ಯಕವೇ ಎನ್ನುವುದ್ದು .ನಾವು ಅಪೇಕ್ಷಿಸುವ ಅಂತಿಮ ಫ಼ಲಿತಾಂಶ ಗುರುತ್ವಾಕರ್ಷಣೆಯ ಒಂದು ಸಿದ್ದಾಂತವಾದರೆ ಅದನ್ನು ಪ್ರಯತ್ನಿಸುವಾಂತೆ,ತಾತ್ವಿಕವಾಗಿ ಒಂದು ಗಣಕವನ್ನು ಕ್ರಮವಿಧಿಸಬಹುದು .ಆದರೆ ಅಂತಿಮ ಫ಼ಲಿತಾಂಶವನ್ನು ಅಪೇಕ್ಷಿಸದಿರುವಾಗ-ನ್ಯೂಟನನ ಸಂದರ್ಭದಲ್ಲಿ ನಡೆದದ್ದು ಇದೇ ತಾನೇ-ಪ್ರತಿರೂಪವನ್ನು ಪರಿಪೂರ್ಣವಾಗಿ ಗುರುತು ಹಿಡುಯಬಲ್ಲ ವಿಭಾಗವಿರುವ ಒಂದು ಗಣಕವನ್ನು ಅದು ತಿಳಿಯಬಲ್ಲ ಪ್ರತಿಯೊಂದು ದೃಕ್ ಪ್ರತಿರೂಪವನ್ನು ವಿಶ್ಲೇಷಿಸಿ ಅನುಗಮನತ್ಮಕ ಅನುಮಾನಗಳನ್ನು ಪಡೆಯುವ ದೆಶೆಯಲ್ಲಿ ಕೆಲಸ ಮಾದುವಂತೆ ಕ್ರಮ ವಿಧಿಸಬಹುದು , ಹೀಗೆ ಮಾಡುವಾಗ ಅನುಮಾನ ಸಂತ್ರುಪ್ತ ಸ್ತಿತಿಗೆ ಬರುವಲ್ಲಿವರೆಗೆ ಒಂದೊಂದು ಸಲವೂ ಗಣಕಗಳನ್ನು ಸಾರ್ವತ್ರೀಕರವನ್ನು ಪ್ರಯತ್ನಿಸಬೇಕು ಸಾಕಶ್ಟು ದೊಡ್ಡದಾದ ಗಣಕಾಳನ್ನು ಪರಿಪೂರ್ಣ ಅನುಮನಾತ್ಮಕ ಅನುಮಾನಗಳನ್ನು ಪಡೇಯುವಂತೆ ಕ್ರಮವಿಧಿಸಬಹುದಾದರೆ ಅವು ಏಕೆ ವಿಶ್ವಸಿದ್ಧಾಂತಗಳನ್ನು ರಚಿಸಲು ಕಲಿಯುವುದನ್ನು ಕಲಿಯಬಾರದು ಎನ್ನುವುದಕ್ಕೆ ಯಾವ ಕಾರಣಗಳು ಇಲ್ಲ . ಪ್ರಸಕ್ತ ಖಂಡದ ಪ್ರಾರಂಭದಲ್ಲಿ ಎತ್ತಿದ ಮೂಲಭೂತ ಜ್ನಾನಮಿಮಾಂಸೀಯ ಪ್ರಶ್ನೆಯನ್ನು ಪರಿಹರಿಸಲು ಮಿದುಳಿನ ಅಂಗರಚನೆ ಮತ್ತು ಗಣಕ ಆಲೇಖ್ಯಗಳು ಇವೆ ಮೊದಲಾದ ಕಾರಣಗಳ, ಅವು ಅರ್ಥಪೂರ್ಣವಾಗಿಯೀ ಇದ್ದರೂ , ತುಲನೆ ಇಲ್ಲ ಅಲ್ಲ ಬದಲು ಪ್ರಛೂದನೆ ಅನುಕ್ರಿಯೆ ಸಂಭಂದ್ಗಗಳಂಥೆ ಪರಿಣಾಮಗಳು ಎಂಬುದನ್ನು ಮೇಲಿನ ಚರ್ಚೆ ಗಳು ತೋರಿಸುತ್ತವೆ . ಇಂದು ಈ ಚರ್ಚೆ ಗಳು ಬೀರೆಯೀ ಸ್ವರೂಪವನ್ನು ಪದೆದುಕೊಳ್ಳುತ್ತಿವೆ ಎಕೆಂದರೆ ಇಂದು ಮನುಶ್ಯ ತನ್ನೊಳಗೆಯೇ ಗಣಕದಾ ಭಾಗಗಳನ್ನು ಜೊಡಿಸಿಕೊಂಡು ತಾನು ಮತ್ತು ಗಣಕ ಎರದು ಒಟ್ಟೊಟ್ಟಿಗೆ ಛಿಂತಿಸಿ ನಿರ್ಧಾರ ತೆಗೆದುಕೊಳ್ಲ ಬಹುದಾದ ನಿದರ್ಶನಗಳು ನಮ್ಮ ಮುಂದಿವೆ . ಮೂಲ ಭೂತ ಜನಾನವಿಮಾಂಸಿಯ ಪ್ರಶ್ನೆಗಳು ಎಂದಿಗಿಂತ ಹೆಚ್ಚು ಸಂಕೀರ್ಣವಾಗುತ್ತಿದೆ ಎಂದು ಮಾತ್ರ ಹೇಳಬಹುದು.(ಎನ್.ಎಸ್)