ಪುಟ:Mysore-University-Encyclopaedia-Vol-6-Part-1.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಣಕ ಸಂಖ್ಯೆಗಳು ಮೇಲೆ ಗಣಕ ಬೇರೆ ಬೇರೆ ಬಗೆಯ ಪರಿಕರ್ಮಗಳನ್ನು ಮಾಡಬಲ್ಲುದು.ಹೆಚ್ಚಿನ ಪರಿಕರ್ಮಗಳು ವಾದಗಳು (ಆರ್ಗ್ಯುಮೆಂಟ್ಸ್) ಎಂದು ಕರೆಯಲ್ಪಡುವ ಎರಡು ಸಂಖ್ಯೆಗಳನ್ನು ಸಂಯೋಜಿಸಿ ಮೂರನೆಯ ಫಲಿತಾಂಶ್(ರಿಸಲ್ಟೆಂಟ್) ಎಂಬ ಸ್ಂಖ್ಯೆಯನ್ನು ಉಂಟುಮಾಡುಟತ್ತವೆ.ಇಂಥ ಪರಿಕರ್ಮಗಳು ಸಂಕಲನ, ವ್ಯವಕಲನ ,ಗುಣಾಕಾರ ,ಭಾಗಾಕಾರ ಇಲ್ಲವೆ ಘಾತಾರೋಪಣ(ಎಕ್ಸಪೊನೆನ್ಶಿಯೇಷನ್) ಆಗಿಬಹುದು.ಗಣಕದ ಮೇಲೆ ಒಂದು ನಿರ್ಬಂಧ ಉಂಟು -ಆದು ಒಮ್ಮೆಗೆ ಒಂದು ಪರಿಕರ್ಮವನ್ನು ಮಾತ್ರ ನಿರ್ವಹಿಸಬಲ್ಲುದು.ಹಲವಾರು ಪರಿಕರ್ಮಗಳನ್ನು ಮಾತ್ರ ನಿರ್ವಹಿಸಬಲ್ಲುದು .ಹಲವಾರು ಪರಿಕರ್ಮಗಳನ್ನು ಮಾಡಬೇಕಾದಾಗ ಗಣಕ ಅವನ್ನು ಒಂದು ನಿರ್ದಿಷ್ಟ್ ಸರಣಿಯಲ್ಲಿ ನಿರ್ವಹಿಸುತ್ತದೆ.ಆದು ಮಾಡಬೇಕಾದ ಪರಿಕರ್ಮಗಳಿಗೆ ನಿದೇಶನಗಳು (ಇನ್ಯಟ್ರಕ್ಸ್ಷನ್ಸ್) ಎಂದು ಹೆಸರು.

ಉದಾಹರಣೆಗೆ ಈ ಕೆಳಗಿನದರ ಮೌಲ್ಯವನ್ನು ಗಣಿಸಬೇಕಾಗಿದೆ(ಕಂಪ್ಯೂಟ್) ಎ೦ದು ಭಾವಿಸೋಣ.

ಕೋಷ್ಟಕ : ಆಗ ಒಂದು ಗಣಕದಲ್ಲಿ ಇದನ್ನು ಮಾಡಲು ನೀಡುವ ನಿರ್‍ದೇಶನದ ಸರಣಿ ಈ ಕೆಳಗಿನ ಕೋಷ್ಟಕದಲ್ಲಿ ಬರೆದಂತಿದೆ.

ನಿರ್‍ದೇಶನ ೧ನ್ನು ಗಣಕ ಮೊದಲು ಕಾರ್ಯಗತಗೋಳಿಸುತ್ತದೆ.ಬಳಿಕ ಅದು ೨,೩,೪,೫,೬ ಈ ನಿರ್‍ದೇಶಗಳನ್ನು ಇದೇ ಕ್ರಮದಲ್ಲಿ ಕಾರ್ಯಗತಗೊಳಿಸುತ್ತದೆ.

ಹಂತ ೨:ಗಣಕವನ್ನು ಎರಡು ಪಧಾನ ಭಾಗಗಳಾಗಿ ವಿಭಾಗಿಸಬಹುದು;ಚಿತ್ರ್೧೨ ರಲ್ಲಿ ತೋರಿಸುವಂತೆ ಜ್ಞಾಪಕಾಂಗ (ಮೆಮೊರಿ ಯೂನಿಟ್) ಮತ್ತು ಗಣನಾಂಗ (ಕಂಪ್ಯೂಟಿಂಗ ಯೂನಿಟ).ಜ್ಞಾಪಕಾಂಗ ಸಂಖ್ಯೆಗಳನ್ನೂ ನಿರ್‍ದೇಶಗಳನ್ನೂ ದಾಸ್ತಾನಿಸಿಕೊಳ್ಳುತ್ತದೆ.ಉದಾಹರಣೆಗೆ,ಮೇಲಿನ ನಿರ್‍ದೇಶಗಳ ೧ಕ್ಕೆ ಬೇಕಾಗಿರುವ ವಾದಗಳಾದ a ಮತ್ತು ೨ನ್ನು ಜ್ಞಾಪಕಾಂಗ ದಾಸ್ತಾನಿಸುವುದರ ಜೊತೆಗೆ ಫಲಿತಾಂಶ dಯನ್ನು ಸಹ ದಾಸ್ತಾನಿಸಿಕೊಳ್ಳುತ್ತದೆ.ನಿರ್‍ದೇಶನ ೧ನ್ನು ನೆರವೇರಿಸಿದ ಬಳಿಕ ನಿರ್‍ದೇಶನ ೨ ಸುಲಭವಾಗಿ ಜ್ಞಾಪಕದಲ್ಲಿ ದೊರೆಯುತ್ತದೆ.ಈ ನಿರ್‍ದೇಶನದ ಒಂದು ವಾದ d ಜ್ಞಾಪಕಾಂಗದಲ್ಲಿ ಕೂಡ ನಿರ್‍ದೇಶನಗಳು ದಾಸ್ತಾನಾಗಿರುತ್ತವೆ.ಗೂಡುಯಂತ್ರದಲ್ಲಿ ವ್ಯಕ್ತಿ A ಹೇಗೆ ವರ್ತಮಾನ ನಿರ್‍ದೇಶನದ ಒಂದು ಅಂಶವಾಗಿ ಮುಂದಿನ ನಿರ್ದೇಶನದ ಸ್ಥಾನಕ್ಕೆ ಮುನ್ನಡೆಸಲ್ಪಟ್ಟನೋ ಹಾಗೆ ಗಣಕದಲ್ಲಿ ಪ್ರತಿಯೊಂದು ನಿರ್ದೇಶನವೂ ಆದರ ನಿರ್ವಹಣೆ ಆಗಬೇಕಾದಾಗ ಗಣನಾಂಗಕ್ಕೆ ಪ್ರೇಷಿಸಲ್ಪಡುತ್ತದೆ(ಟ್ರಾನ್ಸಮಿಟೆಡ್).ಮೇಲಿನ ಉದಾಹರಣೆಯಲ್ಲಿ ,ಮೊದಲಾಗಿ ನಿರ್ದೇಶನ ೧ಜ್ಞಾಪಕಾಂಗದಿಂದ ಗಣಕನಾಂಗಕ್ಕೆ ಪ್ರೇಷಿಸಲ್ಪಡುತ್ತದೆ.ಇದು ನಿರ್ವಹಿಸಲ್ಪಟ್ಟ್ ಬಳಿಕ ನಿರ್ದೇಶನ ೨ ಪ್ರೇಷಿಸಲ್ಪಡುತ್ತದೆ.ಈ ಮುನ್ನಡೆ ನಿರ್ದೇಶನ ನಿರ್ವಹಿಸಲ್ಪಡುವವರೆಗೂ ಮುಂದುವರಿಯುವುದು.

ಗಣಕದ ಒಳಗೆ ಜ್ಞಾಪಕಾಂಗವನ್ನು ನೆಲೆಗೊಳಿಸುವುದರಿಂದ ಸ್ಪಷ್ಟವಾದ ಒಂದು ಅನುಕೂಲತೆ ಉಂಟು.ಇಂಥ ಜ್ಞಾಪಕಾಂಗ ಹಾಗೂ ಗಣನಾಂಗಗಳ ನಡುವೆ ಸಂಖ್ಯೆಗಳನ್ನೂ ನಿರ್ದೇಶನಗಳನ್ನೂ ಅತ್ಯುಚ್ಚ್ ವೇಗದಲ್ಲಿ ಪ್ರೇಷಿಸಬಹುದು.ಆಧುನಿಕ ಗಣಕದಲ್ಲಿ ಇಂಥ ಪ್ರೇಷಿಣಗಳು ಪ್ರತಿ ಸೆಕೆಂಡಿಗೆ ಹತ್ತು ಲಕ್ಷ್