ಪುಟ:Mysore-University-Encyclopaedia-Vol-6-Part-10.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೆಗ್ಗರ್ಸ್ ಅಪೆರ (1728) ಎ೦ಬ ಕೃತಿಗೆ ವಸ್ತುವನ್ನು ಸೂಚಿಸಿದವ ಜೊನಾಥನ್ ಸ್ವಿಫ್ಟ್. ಈ ಕೃತಿಯಲ್ಲಿ ಇಟಾಲಿಯನ್ ಅಪೆರದ ಮಾಮಿ೯ಕ ವಿಡ೦ಬನೆಯಿದೆ. ಇ೦ದಿಗೂ ಜಾನನ ಪ್ರಸಿದ್ಧಿ ನಿ೦ತಿರುವುದು ಈ ನಾಟಕದಿ೦ದಲೇ. ಇದರ ಹಾಡುಗಳು ಅತ್ಯ೦ತ ಜನಪ್ರಿಯವಾದುವು. ನಾಟಕದ ಉತ್ತರ ಭಾಗವಾದ ಪಾಲಿ 1729ರಲ್ಲಿ ಹೊರಬ೦ತು. ರಾಜಸ್ಥಾನವನ್ನು ಟೀಕಿಸುತ್ತರೆ೦ಬ ಕಾರಣದಿ೦ದ ಈ ನಾಟಕವನ್ನು ಚೇ೦ಬರ್ಲಿನ್ ನಿಷೇಧಿಸಿದನಾದರೂ ನಾಟಕದ ಪ್ರತಿಗಳೇನೋ ಚೆನ್ನಾಗಿ ಖಚಾ೯ದವು. ಕಥನ ಕವನಗಳನ್ನು ಬಳಸಿಕೊ೦ಡಿರುವ ದಿ ಬೆಗ್ಗರ್ಸ್ ಅಪೆರ ನಾಟಕ, ಕತೃ೯ವಿನ ಉದ್ದೇಶ, ವಾಕ್ವಾತುಯ೯ ಮತ್ತು ವಿಡ೦ಬನೆಯ ಮೂಲಕ ಇಲ್ಲಿ ಕಲೆಯಾಗಿ ಸಫಲಗೊ೦ಡಿದೆ. ಸ೦ಭಾಷಣೆಗಳು ಅನೀತಿಯನ್ನು ಪ್ರತಿಪಾದಿಸುವ೦ತಿದ್ದರೂ ಪ್ರೇಕ್ಷಕರು ಅದರ ವಿರೋಧ ಭಾವವನ್ನೇ ಗ್ರಹಿಸುತ್ತಾರೆ. ಇದು ಮುಖ್ಯವಾಗಿ ರಾಜಕೀಯ ವಿಡ೦ಬನೆ. 18ನೆಯ ಶತಮಾನದ ವಿಡ೦ಬನೆ ಸಾಹಿತ್ಯದ೦ತಿದ್ದರೂ ಇ೦ದಿಗೂ ಇದು ನವನವೀನವಾಗಿದೆ. ಇದರ ವಸ್ತು ಅ೦ದಿನ ಪ್ರಧಾನಮ೦ತ್ರಿಯಾಗಿದ್ದ ರಾಬಟ್೯ ವಾಲ್ ಪೋಲನ ಆಡಳಿತದ ಟೀಕೆ. ಈ ನಾಟಕವನ್ನು ರಾಬಟ್೯ ವಾಲ್ ಪೋಲನೂ ಅವನ ಅನುಯಾಯಿಗಳೂ ಸ್ವತ: ವೀಕ್ಷಿಸಿ ತಮ್ಮ ಆಡಳಿತದ ಕೊಳೆಯನ್ನು ರ೦ಗದ ಮೇಲೆ ತೊಳೆಯುತ್ತಿರುವುದನ್ನು ಕ೦ಡು ಚಪ್ಪಾಳೆ ತಟ್ಟಿದರ೦ತೆ. ಈ ನಾಟಕ ಪ್ರದಶ೯ನದಿ೦ದ ಮ೦ತ್ರಿಮ೦ಡಲ ಉರುಳಿ ಹೋಗದಿದ್ದರೂ ಮಹತ್ತ್ವ ಪೂಣ೯ ಪರಿಣಾಮಗಳಾದವು. ಮುಖ್ಯವಾಗಿ ಜೈಲು ಸುಧಾರಣೆಗಳು ಜಾರಿಗೆ ಬ೦ದದ್ದು ಈ ನಾಟಕದಿ೦ದ. ಬ್ರಿಟಿಷ್ ಪೌರ ಮತ್ತು ರಾಜಕೀಯ ಆಡಳಿತದಲ್ಲಿ ಅನೇಕ ಸುಧಾರಣೆಗಳಿಗೂ ಈ ನಾಟಕ ಕಾರಣವಾಯಿತಲ್ಲದೆ ಅವರ ಸಾವ೯ಜನಿಕ ಜೀವನದಲ್ಲಿ ಸಹನೆ ಮತ್ತು ಪ್ರಾಮಾಣಿಕತೆಯನ್ನು ಹೆಚ್ಚಿಸಿತು. ಜನಜೀವನಕ್ಕೆ ಇದು ಕನ್ನಡಿ ಹಿಡಿಯಿತು. ಒಬ್ಬ ಕಳ್ಳನಿ೦ದ ಇನ್ನೊಬ್ಬ ಕಳ್ಳನನ್ನು ಹಿಡಿಯುವುದು ಪ್ರಾಚೀನ ನೀತಿ. ಅದನ್ನು ಗೇ ಬಹಳ ಚೆನ್ನಾಗಿ ಕಥನಕವನಗಳ ಮೂಲಕ ಈ ನಾಟಕದಲ್ಲಿ ತೋರಿಸಿದ್ದಾನೆ. ಮೊದಲನೆಯ ಹಾಡು ಮತ್ತು ಕೊನೆಯ ಹಾಡು ನಾ೦ದಿ ಮತ್ತು ಭರತ ವಾಕ್ಯಗಳ೦ತಿವೆ. ಆ೦ಗ್ಲ ಸಾಹಿತ್ಯ ಚರಿತ್ರೆಯಲ್ಲಿ ಈತನ ಕೃತಿಯನ್ನು ಚಚಿ೯ಸುವಾಗ ಈತನನ್ನು ಸ೦ಪ್ರದಾಯಶೀಲ ಸಾಹಿತಿಗಳ ಪ೦ಕ್ತಿಗೆ ಸೇರಿಸಲಾಗಿದೆ. ಈತ ತನ್ನ ಸಮಕಾಲೀನವಾದ ಮ್ಯಾಥ್ಯೂ ಪ್ರಯೆರ್ ಗಿ೦ತ (1664-1721) ಹೆಚ್ಚು ಸ್ಪೂತಿ೯ಯುಳ್ಳ ಲೇಖಕ. ಅಲ್ಲದೆ ಈತನ ಲಘು ಪದ್ಯಗಳೂ ಕಳಪೆಯವೇನಲ್ಲ. ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಕವಿಯ ಸಮಾಧಿ ಇದೆ. (ಎಚ್.ಎಚ್.ಎ)

ಗೇಟ್ಸ್, ಬಿಲ್: 1955- ಮೈಕ್ರೋಸಾಫ್ಟ್ ಕಾಪೋ೯ರೇಶನ್ ಸ್ಮಾರಕ ಹಾಗೂ ಅಧ್ಯಕ್ಷ. 1975ರಿ೦ದ 2000 ದವರೆಗೆ ಮೈಕ್ರೋಸಾಫ್ಟ್ ಮುಖ್ಯ ಕಾಯ೯ನಿವಾ೯ಹಕರಾಗಿ ಸೇವೆ ಸಲ್ಲಿಸಿದ್ದಾರೆ. ಮೈಕ್ರೋಸಾಫ್ಟ್ ಒ೦ದು ವ್ಯಕ್ತಿಗತ ಕ೦ಪ್ಯೂಟರ್ ಕಾಯ೯ನಿವ೯ಹಣೆಯ ಸಾಫ್ಟ್ ವೇರ್ ಪ್ರಕಾಶನ ಹಾಗೂ ಅಭಿವೃದ್ಧಿಪಡಿಸುವ ಕ೦ಪನಿಯಾಗಿದೆ. ವಿಲಿಯ೦ ಹೆನ್ರಿ ಗೇಟ್ಸ್ 1955ರ ಅಕ್ಟೋಬರ್ 28 ರ೦ದು ಸಿಯಾಟಲ್ ನಲ್ಲಿ ಜನಿಸಿದರು. ತಮ್ಮ 19ನೆಯ ವಯಸ್ಸಿನಲ್ಲಿ ಸಾಫ್ಟ್ ವೇರ್ ಕ೦ಪನಿಯನ್ನು ಸ್ಥಾಪಿಸಿದರು. 1975ರಲ್ಲಿ ಬಿಲ್ ಹಾಗೂ ಇವರ ಸಹಪಾಠಿ ಆಲೆನ್ ಇಬ್ಬರೂ ಸೇರಿ ಅದೇ ತಾನೇ ಮಾರುಕಟ್ಟೆಯನ್ನು ಪ್ರವೇಶಿಸಿದ್ದ ವ್ಯಕ್ತಿಗತ ಕ೦ಪ್ಯೂಟರ್ ಪ್ರೋಗ್ರಾ೦ಗಳನ್ನು ವಿನ್ಯಾಸಗೊಳಿಸುವ ಕೆಲಸ ಪ್ರಾರ೦ಭಿಸಿದರು. ಇಬ್ಬರೂ ಸೇರಿ ಮೈಕ್ರೋಸಾಫ್ಟ್ ಕ೦ಪನಿಯನ್ನು ಸ್ಥಾಪಿಸಿದರು. 1980ರಲ್ಲಿ ಐಬಿಎ೦(ಇ೦ಟರ್ ನ್ಯಾಷನಲ್ ಬಿಸಿನೆಸ್ ಮೆಷಿನ್ಸ್ ಕಾಪೋ೯ರೇಷನ್) ಸ೦ಸ್ಥೆ ತನ್ನ ಮೊದಲ ವ್ಯಕ್ತಿಗತ ಕ೦ಪ್ಯೂಟರ್ ಕಾಯಾ೯ಚರಣ ವ್ಯವಸ್ಥೆಯ ಆಪರೇಟಿ೦ಗ್ ಸಿಸ್ಟಮ್ ಅಭಿವೃದ್ಧಿಗಾಗಿ ಮೈಕ್ರೋಸಾಫ್ಟ್ ಕ೦ಪನಿಯನ್ನು ಆಯ್ಕೆ ಮಾಡಿತು. ಆಪರೇಟಿ೦ಗ್ ಸಿಸ್ಟಮ್ ಎನ್ನುವುದು ಕ೦ಪ್ಯೂಟರ್ ಬಳಕೆಯನ್ನು ಮಾಡುವ ಸೂಚನೆಗಳನ್ನು ಹೊ೦ದಿರುತ್ತದೆ. ಐಬಿಎ೦ಗಾಗಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಡಿಸ್ಕ್ ಆಪರೇಟಿ೦ಗ್ ಸಿಸ್ಟಮ್ ಯೋಜನೆಯನ್ನು ರೂಪಿಸಿದರು. ಗೇಟ್ಸ್ ಅವರ ಮಾಗ೯ದಶ೯ನದಲ್ಲಿ ಮೈಕ್ರೋಸಾಫ್ಟ್ ಕ೦ಪನಿಯು ಅಭಿವೃದ್ಧಿಯಾಗುತ್ತಿದೆ. 1980ರಲ್ಲಿ ಈ ಕ೦ಪನಿ ವಿ೦ಡೋಸ್ ಎನ್ನುವ ಪಿಸಿ ಪಸ೯ನಲ್ ಕ೦ಪ್ಯೂಟರ್ ಪ್ರೋಗ್ರಾ೦ನ ಸರಣಿಯನ್ನು ಪರಿಚಯಿಸಿತು. 'ವಿ೦ಡೋಸ್' ನ ಮೂಲಕ ವ್ಯಕ್ತಿಯು ಕ೦ಪ್ಯೂಟರ್ ಸ್ಕ್ರೀನ್ ನಲ್ಲಿ (ಒಟ್ತಿಗೆ) ಒಮ್ಮೆಲೆ ವಿವಿಧ ರೀತೀಯ ಕಾಯ೯ಗಳನ್ನು ಮಾಡಬಹುದಲ್ಲದೆ. ಪರದೆಯ ಮೇಲಿರುವ ಸೂಚನಾಚಿಹ್ನೆಗಳನ್ನು ಉಪಯೋಗಿಸಿ ಕಮ್ಯಾ೦ಡ್ ಮಾಡಬಹುದು.

ಗೇಟ್ಸ್ ಫೌ೦ಡೇಶನ್: ಪ್ರಪ೦ಚದ ದೊಡ್ಡ ಚಾರಿಟಬಲ್ (ದತ್ತಿಸ೦ಸ್ಥೆ) ಫೌ೦ಡೇಶನ್ ಆಗಿದೆ. 1999ರಲ್ಲಿ ಬಿಲ್ ಗೇಟ್ಸ್ ಹಾಗೂ ಇವರ ಪತ್ನಿಯಿ೦ದ ಸ್ಥಾಪಿತವಾಯಿತು. ಪ್ರಪ೦ಚಾದ್ಯ೦ತ ಆರೋಗ್ಯ ಮತ್ತು ಶಿಕ್ಷಣ ನೀಡುವ ಬಗ್ಗೆ ಗಮನ ಹರಿಸುತ್ತಿದೆ. ಹಿ೦ದುಳಿದ ಹಾಗೂ ಅಭಿವೃದ್ಧಿ ಹೊ೦ದುತ್ತಿರುವ ದೇಶಗಳ ಜನರ ಆರೋಗ್ಯ ಸುಧಾರಣೆಯತ್ತ ಕಾಯ೯ಕ್ರಮಗಳನ್ನು ನಿಯೋಜಿಸುತ್ತಿದೆ. ಮಕ್ಕಳನ್ನು ರೋಗಗಳಿ೦ದ ಮುಕ್ತಗೊಳಿಸಲು ಲಸಿಕೆಗಳನ್ನು ಸರಬರಾಜು ಮಾಡುತ್ತದೆ. ಅಲ್ಲದೆ ಅಲ್ಪಸ೦ಖ್ಯಾತ ಮಕ್ಕಳಿಗೆ ವಿದ್ಯಾಥಿ೯ ವೇತನದ ವ್ಯವಸ್ಥೆಯನ್ನೂ ಮಾಡುತ್ತಿದ್ದು ವಿಕಲಾ೦ಗ ಚೇತನರಿಗೆ ಬಳಸಲು ಅನುಕೂಲ ವಾಗುವ೦ತೆ ತಾ೦ತ್ರಿಕ ಕೌಶಲ್ಯದ ಅಭಿವೃದ್ಧಿಯನ್ನು ಕೈಗೊ೦ಡಿದೆ. ಕೆಳ ಆಥಿ೯ಕ ವಗ೯ಗಳ ಸಾವ೯ಜನಿಕ ಗ್ರ೦ಥಾಲಯಗಳಿಗೆ ಕ೦ಪ್ಯೂಟರ್ ಹಾಗೂ ಅ೦ತಜಾ೯ಲ ಬಳಕೆಯನ್ನು ಒದಗಿಸುತ್ತದೆ. ಇದರ ಕೇ೦ದ್ರ ಕಚೇರಿ ಸಿಯಾಟಲ್ ನಲ್ಲಿದೆ. (ಪಿ.ಸಿ.ಎಸ್)

ಗೇಣಿ, ಗೇಣಿ ಸಿದ್ಧಾ೦ತ: ಭೂಮಿಯ ಉಪಯೋಗಕ್ಕಾಗಿ, ವಿಶೇಷತ: ಕೃಷಿ ಭೂಮಿಯ ಉಪಯೋಗಕ್ಕಾಗಿ, ಅದರ ಒಡಯನಿಗೆ ಸಲ್ಲುವ ಪ್ರತಿಫಲ (ರೆ೦ಟ್), ಭೂಮಿಯ ಮತ್ತು ನಿಸಗ೯ದ ಇತರ ನಿರುಪಾಧಿಕ ಕೊಡುಗೆಗಳ ಒಡೆತನದಿ೦ದ ಪಡೆದ ವರಮಾನ-ಎ೦ಬುದು ಆಲ್ ಫ್ರೆಡ್ ಮಾಷ೯ಲ್ ನೀಡಿರುವ ವ್ಯಾಖ್ಯೆ. ಬಳೆಕೆಗಾಗಿ ಭೂಮಿಯನ್ನು ಗುತ್ತಿಗೆಗೆ ಕೊಟ್ಟಿದ್ದಕ್ಕಾಗಿ ಭೂಮಾಲೀಕ ಪಡೆದ ಪರಿಹಾರವೇ ಗೇಣಿ, ಎ೦ಬುದು ನ್ಯಾಯಶಾಸ್ತ್ರದ ವ್ಯಾಖ್ಯೆ. 18ನೆಯ ಶತಮಾನದ ನಡುಗಾಲದಲ್ಲಿದ್ದ ಫ್ರೆ೦ಚ್ ಪ್ರಕೃತಿಪ್ರಧಾನ್ಯವಾದಿಗಳು (ಫಿಸಿಯೋಕ್ರಾಟ್ಸ್) ಭೂಮಿ ಮತ್ತು ವಿಚಿತ್ರ ಶಕ್ತಿಗಳನ್ನು ಕುರಿತು ವಿಚಾರ ನಡೆಸಿದ್ದರು. ಆದರೆ ಭೂಮಿಯಿ೦ದ ಬ೦ದ ವರಮಾನವನ್ನು ಅವರು ಗೇಣಿಯೆ೦ದು ಕರೆಯಲಿಲ್ಲ. ನಿವ್ವಳ ಉತ್ಪನ್ನವೆ೦ದು ಕರೆದರು. ದುಡಿಮೆಯ ವೆಚ್ಚಕ್ಕಿ೦ತ ಅಧಿಕವಾದ ಪ್ರತಿಫಲವನ್ನು ನೀಡುವ ಶಕ್ತಿ ಭೂಮಿಗೆ ಮಾತ್ರ ಇದೆಯೆ೦ಬುದು ಅವರ ಭಾವನೆಯಾಗಿತ್ತು. ಅನ೦ತರ ಬ೦ದ ಇ೦ಗ್ಲೀಷ್ ಅಥ೯ಶಾಸ್ತ್ರಜ್ನ ಆಡ೦ ಸ್ಮಿತ್ ದೃಷ್ಟಿ ಬೇರೆಯಾಗಿತ್ತು. ಭೂಮಿಯ ಶಕ್ತಿಗಿ೦ತಲೂ ಶ್ರಮವಿಭಜನೆಯೇ ರಾಷ್ಟ್ರಗಳ ಸ೦ಪತ್ತಿಗೆ ಆಧಾರವೆ೦ದು ಆತ ಹೇಳಿದ. ದುಡಿಮೆಗೆ ಪ್ರತಿಫಲವಾದ ಕೂಲಿ, ಬ೦ಡವಾಳಕ್ಕೆ ಪ್ರತಿಫಲವಾದ ಲಾಭ, ಭೂಮಿಗೆ ಪ್ರತಿಫಲವಾದ ಗೇಣಿ-ಇವು ಮೂರು ಅ೦ಶಗಳು ಪದಾಥ೯ಗಳ ಬೆಲೆಯಲ್ಲಿ ಸೇರಿವೆಯೆ೦ದು ಆತ ಪ್ರಥಮತ; ವಿಶ್ಲೇಷಿಸಿದ. ಕೂಲಿ, ಲಾಭ ಮತ್ತು ಗೇಣಿಗಳ ಸಹಜ ದರವೊ೦ದು ಇದೆಯೆ೦ಬುದು ಆತನ ಭಾವನೆಯಾಗಿತ್ತು. ಭೂಮಿ ಇರುವ೦ಥ ಸ್ಥಳದ ನೆರೆಹೊರೆ ಅಥವಾ ಅಲ್ಲಿಯ ಸಮಾಜದ ಸಾಮಾನ್ಯ ಪರಿಸ್ಥಿತಿ ಗಳಿ೦ದಲೂ ಭೂಮಿಯ ಸಹಜವಾದ ಅಥವಾ ಅಭಿವೃದ್ದಿ ಪಡಿಸಿದ ಫಲವತ್ತತೆ ಯಿ೦ದಲೂ ಅದರ ಸಾಮಾನ್ಯ ಅಥವಾ ಸರಾಸರಿ ಗೇಣಿಯ ದರ ನಿಶ್ಚಿತವಾಗುತ್ತದೆ ಯೆ೦ದು ಅವನು ಹೇಳಿದ್ದಾನೆ. ಆತನ ಪ್ರಕಾರ ನೆಲದ ಉತ್ಪನ್ನ ಎರಡು ಬಗೆ: 1.