ಪುಟ:Mysore-University-Encyclopaedia-Vol-6-Part-11.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೊಮ್ಮೆ ಚಾಜ್ ಲಾರೆನ್ಸ್ ಪೂರೈಸಲು ಚಾವುಂಡರಾಯ ಬೆಳ್ಗೊಳದಲ್ಲಿ ಇದನ್ನು ಮಾಡಿಸಿದನೆಂದು ಐತಿಹ್ಯವಿದೆ. ಪಂಚಬಾಣನೆಂಬ ಕವಿಯ ಪ್ರಕಾರ ಬಾಹುಬಲಿ ಶಲಾಮೂತಿ‍ಯಾಗಿ ಚಾವುಂಡರಾಯನಿಗೆ ಕಾಣಿಸಿದ. ಚಾವುಂಡರಾಯ ೧೯೮೩ರಲ್ಲಿ ಈ ಮೂತಿ‍ಯನ್ನು ಪ್ರತಿಷ್ಠಾಪಿಸಿದ. ಶ್ರವಣಬೆಳಗೊಳದ ಗೊಮ್ಮಟ ಮೂತಿ‍ ಜನರ ಚಿತ್ತವನ್ನು ಆಕಷಿ‍ಸಿ ಮುಂದೆ ಇದೇ ರೀತಿಯ ಹಲವು ಕೃತಿಗಳು ನಿಮಾ‍ಣವಾಗುವುದಲ್ಲೆ ಸ್ಪೂತಿ‍ಯಾಯಿತು. ಉಡುಪಿ ಜಿಲ್ಲೆಯ ಕಾಕಾ‍ಳದಲ್ಲಿ ಊರಿನ ಬಳಿಯಲ್ಲೇ ಇರುವ ಗೊಮ್ಮಟ ಮೂತಿ‍ ಈ ರೀತಿಯದು. ಈ ಮೂತಿ‍ಯ ಎತ್ತರ ೪೨. ಬೈರವಸನ ಮಗ ವೀರಪಾಂಡ್ಯ ೧೪೩೨ ರಲ್ಲಿ ಇದನ್ನು ಮೂಡಿಸಿ ಪ್ರತಿಷ್ಠಾಪಿಸಿದ. ಇದರ ರಚನೆಯ ಕಥೆಯನ್ನು ಚದುರ ಚಂಧ್ರಮಾನನೆಂಬ ಕವಿ ಕಾಕಾ‍ಳದ ಗೊಮ್ಮಟೇಶ್ವರ ಚರಿತ್ರೆ (೧೬೪೬) ಎಂಬ ಸಾಂಗತ್ಯ ಕೃತಿಯಲ್ಲಿ ಹೇಳಿದ್ದಾನೆ ಶ್ರೀ ಗುರು ಲಲಿತ ಕೀತಿ‍ ಭಟ್ಟರಾಕರ ಆಶೀ‍ವಾದದೊಡನೆ ವಜ್ರಶಿಲೆಯ ಅನ್ವೇಷಣೆಯಿಂದ ಹಿಡಿದು ಮೂತಿ‍ಯನ್ನು ಬೆಟ್ಟದ ಮೇಲಕ್ಕೆ ಸಾಗಿಸಿದ್ದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾನೆ. ಮೂತಿ‍ಯ ಸ್ಥೋಲರೂಪ ಸಿದ್ದವಾದ ಮೇಲೆ ಅದನ್ನು ಕಬ್ಬಿಣದ ದಬ್ಬಕೀಲುಗಳಿರು ಇಪತ್ತ್ತು ಗಲಿಗಳಿಂದ ಬಂಡಿಗಳನ್ನು ಮೂಡಿಸಿ ಹತ್ತುಸಾವಿರ ಸನ್ನೆಗಳನ್ನು ಮೂತಿ‍ಯನ್ನು ಬಂಡಿಗೆ ಸಾಗಿಸಿ ಸಾವಿರಾರು ಜನ ಸೇರಿ ಎಳದರು. ಅದು ಒಂದು ಮಾರು ಮಾತ್ರ ಸಾಗಿತಂತೆ. ಮೂರನೇಯ ದಿನ ಸಾವಿರ ರಾಟೆಗಳನ್ನು ಮಾಡಿಸಿ ದೇವನ ಬಂಡಿ ಬೆಟ್ಟವೆರುವಂತೆ ಮದ್ದನೆಗಳಿಂದ ನೂಕಿಸಿದಾಗ ಆದಿನ ಏಳೇಂಟು ಮಾರು ಸಾರಿಯಿತಂತೆ. ಈಗೆ ಒಂದು ತಿಂಗಳ ಪರಿಯಂತ ಸಾಗಿಸಿದ ಮೇಲೆ ಆ ಮೂತಿ‍ ಬೆಟ್ಟದ ತುದಿಯನ್ನು ತಲುಪಿತು. ಅಲ್ಲಿ ಎಪ್ತತೆರೆಡು ಕಂಬಗಳ ಸೊಗಸಾದ ಚಪ್ಪರದ ಮೇಲೆ ಮೂತಿ‍ಯನ್ನು ಮಲಗಿಸಿ ಸೂಕ್ಷ್ಮ ಕೆಲಸಗಳನ್ನು ಮಾಡಲಾಯಿತು. ಇದಕ್ಕೆ ಒಂದು ವಷ‍ ಇಡಿಯಿತು. ಅನಂತರ ಆ ವಿಗ್ರಹದ ಪ್ರತಿಷ್ಠಾಪನೆಯಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ವೇಣೂರಿನಲ್ಲಿ ಮತ್ತೊಂದು ಗೊಮ್ಮಟ ಮೂತಿ‍ ಇದೆ. ಇದರ ಎತ್ತರ ೩೫' ೧೬೦೪ರಲ್ಲಿ ತಿಮ್ಮಣ್ಣ ಅಜೆಲ ಎಂಬುವನು ಚಾವುಂಡರಾಯನಂತೆ ತಾನೂ ತನ್ನ ರಾಜ್ಯದಲ್ಲಿ ಗೊಮ್ಮಟವನ್ನು ಕೆತ್ತಿಸಿ ಕೀತಿ‍ವಂತನಾಗುಬೇಕೆಂದು ಇದನ್ನು ಮಾಡಿಸಿದ. ಇದೇ ಸಮಯದಲ್ಲಿ ಕಾಕ‍ಳದಲ್ಲಿ ರಾಜ್ಯಭಾರ ಮಾಡುತ್ತಿದ ಹಿಮ್ಮಡಿ ಭೈರವರಾಯ ಕಾಕ‍ಳದಲ್ಲಿರುವಂತೆ ಬೇರೆಲ್ಲೂ ಗೊಮ್ಮಟ ಮೂತಿ‍ಯನ್ನು ಪ್ರತಿಷ್ಠಾಪಿಸಿಬಾರದೆಂದು ವೇಣೂರಿನಲ್ಲಿ ಸಿದ್ದವಾದ ಮೂತಿ‍ಯನ್ನು ಕಾಕಳಕ್ಕೆ ಒಪ್ಪಿಸಬೇಕೆಂದೂ ಇಲ್ಲದಿದ್ದರೆ ಯುದ್ದವನ್ನು ಎದುರಿಸಬೇಕೆಂದೂ ತಿಳಿಸಿದ್ದರಿಂದ ತಿಮ್ಮಣ್ಣ ಅಜಿಲನು ಪ್ರತಿಮೆಯನ್ನು ಮರಳಿನಲ್ಲಿ ಹೂತು ಯುದ್ದಮಾಡಿ ವಿಜಯಿಯಾಗಿ ಅನಂತರವೇ ಪ್ರತಿಮೆಯನ್ನು ಪ್ರತಿಷ್ಠೆ ಮಾಡಿದನಂತೆ. ಮೈಸೂರು ಜಿಲ್ಲೆಯಲ್ಲಿ ೨೫ಕಿಮೀ. ವಾಯವ್ಯದಲ್ಲಿ ಕಾವೇರಿಯ ದಕ್ಷಿಣಕ್ಕೆ ಶ್ರವಣಗುಡ್ಡ ಎಂದು ತಿಳಿಯಲಾಗುತ್ತಿದೆ. ಗೊಮ್ಮಟಗಿರಿ ಕ್ಷೇತ್ರದಲ್ಲಿ ೫.೫ ಮಿ ಎತ್ತರದ ಗೊಮ್ಮಟಮೂತಿ‍ಯಿದೆ. ಇಲ್ಲಿ ಸು. ೩೦.೪೮ ಮೀ. ಎತ್ತರದ ಬಂಡೆಯೊಂದರ ಮೇಲೆ ಮೂತಿ‍ಯ ಸ್ಥಾಪನೆಯಾಗಿದೆ. ದೂರದಿಂದ ಆ ಬೆಟ್ಟ ಒಂದು ದೊಡ್ಡ ರಥದಂತೆ ಕಾಣಿಸುತ್ತದೆ. ಈ ಬೆಟ್ಟದ ಮೇಲೆ ಗೊಮ್ಮಟ ಮೂತಿ‍ಯನ್ನು ಯಾರು ಯಾವಾಗ ಸ್ಥಾಪಿಸಿದರೆಂಬುದಕ್ಕೆ ಶಾಸನವಾಗಲೀ ದಾಖಲೆಯಾಗಲಿ ಇದುವರೆಗೂ ಸಿಕ್ಕಿಲ್ಲ. ಪೂವಾಭಿಮೂಕವಾಗಿರುವ ಈ ಮೂತಿ‍ಯಲ್ಲಿ ಕೈಗಳು, ಸಪ‍ಗಳು ಬಿಚ್ಚಿದ ಎಡೆಯಮೇಲೆ ಸೊಕಿದಂತಿರುವುದು ಬೇರಾವ ಗೊಮ್ಮಟಮೂತಿ‍ಗಳಲ್ಲು ಇಲ್ಲದಿರುವುದು ವೈಶಿಷ್ಟವಾಗಿದೆ. ಈ ಮೂತಿ‍ ವಿಜಯನಗರ ಕಾಲದ ಅಂತ್ಯ ಭಾಗದೆಂದು ಅಂದಾಜಿಸಲಾಗಿದೆ (ನೋಡಿ - ಗೊಮ್ಮಟಗಿರಿ). ಕೃಷ್ಣರಾಜಸಾಗರ ಜಲಾಶಯದ ಉತ್ತರಕ್ಕೆ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲಕಿನ ಮಾವಿನಕೆರೆ ಗ್ರಾಮದ ಹತ್ತಿರದ ಬಸ್ತ್ತಿಹಳ್ಲಯಲ್ಲಿ ೧೮" ಅಡಿ ಎತ್ತರದ ಒಂದು ಗೊಮ್ಮಟಮೂತಿ‍ ಇದೆ. ಈ ಮೂತಿ‍ಗೆ ಗೂಡಿನಂತ ಒಂದು ಗುಡಿಯನ್ನು ಕಟ್ಟಿದ್ದಾರೆ. ಇದರ ಸುತ್ತಮುತ್ತ ಗಂಗರಕಾಲಕ್ಕೆ ಸೇರುವ ಶಿಥಿಲವಾದ ಮೂತಿ‍ಗಳು ವಿಷ್ಣುವಧ‌‍ನನ ಕಾಲದ ಬಸದಿಯ ಅವಶೇಷವೂ ಕಂಡುಬರುತ್ತದೆ. ಈ ಗೊಮ್ಮಟ ಮೂತಿ‍ಯನ್ನು ವಿಷ್ಣುವಧ‍ನನ ಕಾಲದಲ್ಲಿ ಆತನ ದಂಡನಾಯಕ ಪೂಣಸಮಯ್ಯ ಪ್ರತಿಷ್ಠಾಪಿಸಿದಂತೆ ತೋರುತ್ತದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬಸ್ತಿ ತಿಪ್ಪೂರಿನ ಬಳಿಯಿರುವ ದೊಡ್ಡ ಬೆಟ್ಟದ ಮೇಲೆ ಸು. ೧೦ ಎತ್ತರದ ಗೊಮ್ಮಟ ಪ್ರತಿಮೆಯೊಂದಿದೆ. ಇದು ಸಾಮಾನ್ಯ ರೀತಿಯ ಶಿಲ್ಪ. ಸ್ಥಾಪನೆ ಕಾಲ ತಿಳಿದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಧಮ‍ಸ್ಥಳದಲ್ಲಿ ಒಂದು ಗೊಮ್ಮಟ ವಿಗ್ರಹವನ್ನು ಅಲ್ಲಿನ ಧಮಾ‍ಧಿಕಾರಿ ವೀರೇಂದ್ರ ಹೆಗ್ಗಡೆಯವರು ಮೂಡಿಸಿ ಸ್ಥಾಪಿಸಿದ್ದಾರೆ. ಶೀಲ್ಪಿ ರಂಜಾಳ ಗೋಪಾಲ ಶೆಣ್ಮೆ ೧೯೬೭ರಲ್ಲಿ ಇದರ ನಿಮಾ‍ಣ ಕಾಯ‍ವನ್ನು ಪ್ರಾರಂಭೀಸಿ ೧೩೭೩ರಲ್ಲಿ ಮುಗಿಸಿದರು. ಶಿಲ್ಪರಚನೆಗೆ ಉಪಯೋಗಿಸಿರುವ ಈ ಶಿಲೆಯ ಒಟ್ಟು ಉದ್ದ ೫೨' ಇದರಲ್ಲಿ ೬' ಭೂಮಿಗಳಿಯುವ ಬೇರು, ೭' ವಿಗ್ರಹದ ಪೀಠ ಮೂತಿ‍ ಅಂಗುಷ್ಮದಿಂದ ನೆತ್ತಿಯವರೆಗೆ ೩೯' ಎತ್ತರವಿದೆ. ೧೭೦ ಟನ್ ತೂಕದ ಈ ಶಿಲಾ ಮೂತಿ‍ಯನ್ನು ಕಾಕ‍ಳದಲಿ ಮೂಡಿಸಿ ಧಮ‍ಸ್ಥಳಕ್ಕೆ ಸಾಗಿಸಲಾಗಿದೆ. ಅಲ್ಲಿ ಬಾಹುಬಲಿ ವಿಹಾರದಲ್ಲಿ ಸ್ಥಾಪಿತವಾಗಿದೆ. ಧಮ‍ಸ್ಥಳದ ಈ ಗೊಮ್ಮಟ ಮೂತಿ‍ಯಲ್ಲಿ ಕೆಲವು ವಿಶೇಷಗಳು ಕಂಡು ಬರುತ್ತವೆ. ಈ ಮೂತಿ‍ಯಲ್ಲಿ ತಲೆಕೂದಲು ಭುಜದವರೆಗೂ ಇಳಿಬಿದ್ದಿದೆ. ಎರಡು ಪಾದಗಳ ಮೇಲೆಯೋ ಹಾವಿನ ಮರಿಗಳು ಹತ್ತುತ್ತಿವೆ ಮೂತಿ‍ಯ ಮೇಲೆ ಮಲ್ಲಿಗೆ ಬಳ್ಳಿಯ ಜೊತೆಯಲ್ಲಿ ಮಲ್ಲಗೆಯ ಹೂವನ್ನು ಬಿಡಿಸಲಾಗಿದೆ. ಮೂತಿ‍ಯ ಎಡಬಲಗಳಲ್ಲಿ ಕಾಲುಗಳ ಬಳಿಯಲ್ಲಿ ಸೇರುವ ಎರಡು ಪ್ರತ್ಯೇಕ ಶಿಲೆಗಳಲ್ಲಿ ಮಾವಿನಮರ, ಗಿಣಿ, ಮಂಗ, ಜೇನುಗೂಡು ಇತ್ಯಾದಿಗಳನ್ನು ಕೆತ್ತಲಾಗಿದೆ. ಈ ಗೊಮ್ಮಟ ಮೂತಿ‍ಗಳು ಭಾರತೀಯ ಶಿಲ್ಪಕಲೆಗೆ ಕನಾ‍ಟಕದ ಮಹತ್ವಪೂಣ‍ ಕೊಡುಗೆಯಾಗಿವೆ. ಗೊಮ್ಮೆ, ಜಾಜ್‍ ಲಾರೆನ್ಸ್ : ೧೮೫೩-೧೯೧೬. ಪ್ರಸಿದ್ದ ಜಾನಪದ ವಿದ್ವಾಂಸ. ೧೮೫೩ರ ಡಿಸೆಂಬರ್ ಲಂಡನಿನಲ್ಲಿ ಜನಿಸಿದೆ. ಅಲ್ಲೇ ಈತನ ವಿದ್ಯಾಭ್ಯಾಸ ನಡೆಯಿತು. ಆಂಗ್ಲ ಪುರಾತತ್ವ ಶಾಸ್ತ್ರಾಜ್ಞನಾದ ಈತನಿಗೆ ೧೯೧೧ರಲ್ಲಿ ಸರ್ ಎಂಬ ಬಿರುದು ದೊರಕಿತು. ಹುಡುಗನಾಗಿದ್ದನಾಗಿದ್ದಲೇ ಮೆಟ್ರೋಪಾಲಿಟನ್ ಬೋಡ್ ಆಫ್ ವಕ್ಸ್ ನಲ್ಲಿ ಕೆಲಸಕ್ಕೆ ಸೇರಿದ. ೧೮೯೧ರ ವೇಳಗೆ ಲಂಡನ್ ನ ಕೌಂಟಿ ಕೌನ್ಸಿಲ್ ನಲ್ಲಿ ಅಂಕಿಅಂಶಗಳ ಅಧಿಕಾರಿಯಾಗಿ ನೇಮಕೊಂಡ ೧೯೦೦ ವೇಳೆಗೆ ಕೌನ್ಸಿಲನ ಕಾಯ‍ದಶಿ‍ಯಾದ.