ಪುಟ:Mysore-University-Encyclopaedia-Vol-6-Part-12.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋವ ತಾಲ್ಲೂಕಿನಲ್ಲಿ ಮ್ಯಾಂಗನಿಸನ್ನೂ ಕೆಪೆ ತಾಲ್ಲೂಕಿನಲ್ಲಿ ಬಾಕ್ಸೈಟನ್ನು ತೆಗೆಯಲಾಗುತ್ತಿದೆ. ಕಬ್ಬಿಣ ಆದಿರಿನ ಕಬ್ಬಿಣ ಆಂಶ ಶೇ.57-ಶೇ.62. ಗೋವದಲ್ಲಿ ದೊರಕುವ ಮ್ಯಾಂಗನೀಸ್ ಆದಿರು ಪೈರೊಲುಸೈಟ್ ಮತ್ತು ಪ್ಸಿಲೊಮಿಲೇನ್ ಭಾರತದ ಇತರೆಡೆಗಳಲ್ಲಿ ದೊರಕುವ ಬಾಕ್ಸೈಟ್ ಆದಿರುಗಳಿಗಿಂತ ಗೋವದ್ದು ಭಿನ್ನವಾದ್ದು. ಇದೊಂದು ಟ್ರೈ ಹೈಡ್ರೇಟ್. ಇದರಲ್ಲಿ ನಾನಾ ದರ್ಜೆಗಳುಂಟು ಮದ್ಯಮ ದರ್ಜೆಯ ಆಸಿರಿಗೆ ವಿದೇಶಗಳಲ್ಲಿ ಹೆಚ್ಚು ಬೇಡಿಕೆಯಿದೆ. ಪೋರ್ಚುಗೀಸ್ ಆಡಳಿತದಿಂದ ಗೋವದ ವಿಮೋಚನೆಯಾಗುವವದೆಗೂ ಅದರ ಕೈಗಾರಿಕಾಭಿವೃದ್ದಿಗೆ ಹೆಚ್ಚಿನ ಗಮನ ಸಂದಿರಲ್ಲಿಲ. ಆಕ್ಕಿ, ಹಿಟ್ಟು ಮತ್ತು ಎಣ್ಣೆ ಗಿರಣಿಗಳು, ಮರ ಕೊಯ್ಯುವ ಕಾರ್ಖಾನೆಗಳು, ಗೋಡಂಬಿ ಕಾರ್ಖಾನೆಗಳು ಮತ್ತು ಇಟ್ಟಿಗೆ ತಯಾರಿಗೆ ಇವು ಆಲ್ಲಿದ್ದ ಕೆಲವು ಸಣ್ಣ ಉದ್ಯಮಗಳು. ಸೋಣಿಯ ನಿರ್ಮಾಣ ಮತ್ತು ದುರಸ್ತಿ, ಮಾಂಸ, ಹಣ್ನು ಮತ್ತು ಮೀನಿನ ರಕ್ಷಣೆ, ಕೈಮಗ್ಗ, ತೆಂಗಿನ ಎಣ್ಣೆ ತಯಾರಿಕೆ-ಇವು ಹಲವರಿಗೆ ಉದ್ಯೋಗ ದೊರಕಿಸಿಕೊಟ್ಟಿವೆ. ಮರಗೆಲಸ, ತೆಂಗಿನ ನಾರಿನ ವಸ್ತುಗಳ ತಯಾರಿಕೆ, ಬಿದಿರಿನ ಕೆಲಸ, ಪಾದರಕ್ಷೆ ತಯಾರಿಕೆ, ಕುಂಬಾರಿಕೆ, ಕುಶಲ ವಸ್ತುಗಳ ತಯಾರಿಕೆ-ಇವು ಹಿಂದಿನಿಂದ ಬಂದಿರುವ ಕೆಲವು ಮುಖ್ಯ ಉದ್ಯೋಗಗಳು. ಗೋವದಲ್ಲಿ ರಸ್ತೆ ಮಾರ್ಗವಿದೆ. ರಾಷ್ಟ್ರೀಯ ಹೆದ್ದಾರಿ 224 ಕಿಮೀ, ರಾಜ್ಯ ಹೆದಾರಿ 232 ಕಿಮೀ, ಜಿಲ್ಲಾ ರಸ್ತೆಗಳು 815 ಕಿಮೀ ಇವೆ. ಇಂದು ಗೋವ ರೈಲು ಮಾರ್ಗ ಬಹಳಷ್ಟು ಸುದಾರಿಸಿದ್ದ ಮುಂಬಯಿ, ಮಂಗಳೂರು, ತಿರುವನಂತಪುರಗಳಿಗೆ ಕೊಂಕಣ ರೈಲು ಸಂಪರ್ಕ ಕಲ್ಪಿಸಿದೆ. ಮುಂಬಯಿ, ದೆಹಲಿ, ಕೊಚ್ಚಿನ್, ಚೆನ್ನೈ, ಬೆಂಗಳೂರು ನಗರಗಳಿಗೆ ವಿಮಾನ ಸಂಪರ್ಕವಿದೆ. ಗೋವದ ನದಿಗಳು ದೋಣಿಗಳ ಸಂಚಾರಕ್ಕೆ ಆನುಕೂಲವಾಗಿವೆ. ಮಾಂಡವೀ ಮತ್ತು ಜುವಾರೀ ನದಿಗಳು ಈ ದೃಷ್ಟಿಯಿಂದ ಉಪಯುಕ್ತ. ಕಬ್ಬಿಣ ಆದಿರನ್ನ ರಘ್ತು ಮಾಡುವ ಸಲುವಾಗಿ ಮಾರ್ಮಗೋವ ಬಂದರಿಗೆ ಸಾಗಿಸಲು ಇವು ಬಹು ಆನುಕೂಕವಾಗೆವೆ. 100 ಕಿಮೀ ಉದ್ದದ ಕರಾವಳಿಯಿರುವ ಗೋವದ ಮುಖ್ಯ ಬಂದರು ಮಾರ್ಮಗೋವ. ಮುಂಬಯಿ, ಕೊಚ್ಚಿಗಳ ನಡುವಣ ದೊಡ್ಡ ರೇವು ಇದು. ಗೋವದ ಆಯಾತನಿರ್ಯಾತಗಳಲ್ಲಿ ಶೇ.90ಕ್ಕಿಂತಲೂ ಹೆಚ್ಚು ಭಾಗ ಈ ಬಂದರಿನ ಮೂಲಕ ಸಾಗುತ್ತದೆ.ಸೆಪ್ಟೆಂಬರಿನಿಂದ ಮೇ ವರೆಗೆ ಮುಂಬಯಿಯಿಂದ ಮಾರ್ಮಗೋವಕ್ಕೆ ಪ್ರಯಾಣಿಕ ನೌಕೆಗಳು ಸಂಚರಿಸುತ್ತವೆ. ಚಪೋರ ,ಪಣಜಿ, ಬೇತುಲ್, ತಲ್ಪೋರ ಇವು ಇತರ ಬಂದರುಗಳು. ಗೋವದ ರಾಜದಾನಿ ಪಣಜಿ.ಮಾಂಡವೀ ನದಿಯ ಎಡದಂಡೆಯ ಮೇಲೆ ಇರುವ ಪಳಜಿಯ ವಿಸ್ತೀರ್ಣ 36 ಚ.ಕಿಮೀ. ಜನಸಂಖೈ 1,14,405 (2011). ಹಿಂದೆ ಇದು ಮೀನು ಹಿಡಿಯುವವರ ಹಳ್ಳಿಯಾಗಿತ್ತು ಈಗ ಇದೊಂದು ಸುಂದರ ನಗರ. ಎಲ್ಲೆಲ್ಲೂ ಹಸುರು ತುಂಬಿದೆ. ಹಳೆಯ ಗೋವ ಬಹುಮಟ್ಟಿಗೆ ಸಾಳುಬಿದ್ದ ನಗರ. ಗತಕಾಲದ ಸ್ಮಾರಕಗಳಾಗಿ ಕೆಲವು ಕಟ್ಟಡಗಳು ಅಲ್ಲಿ ಉಳಿದಿವೆ. 1511ರಲ್ಲಿ ಕಟ್ಟಿ 1623ರಲ್ಲಿ ಜೀಣೋರ್ದಾರವಾದ ಕ್ರೈಸ್ತ ಆರಾದನ ಮಂದಿರ, ಸೇಂಟ್ ಫ್ರಾನ್ಸಿಸ್ ಕ್ರೈಸ್ತ ಸನ್ಯಾಸಿನೀಯರ ಮರ, ಶಿಥಿಲಾವವಸ್ಥೆಯಲ್ಲಿರುವ್ವ ಸೇಂಟ್ ಪಾಲ್ ಕಾಲೇಜು-ಇವು ಮುಖ್ಯವಾದವು. ಮಾರ್ಗೋವ ಎರಡನೆಯ ಮುಖ್ಯ ನಗರ. ಇದರ ಜನಸಂಖ್ಯೆ 1,06,528 (2011). ಇದು ದಕ್ಷಿಣ ಗೋವದ ಮುಖ್ಯ ವಾಣಿಜ್ಯ ಕೇಂದ್ರ. ಮಾಪುಕ 40,487 (2011) ಉತ್ತರ ಗೋವದಲ್ಲಿದ. ಪ್ರಪಂಚದಲೇ ಅತ್ಯಂತ ಸುಂದರವಾದ ಕೆಲವು ಬೀಚುಗಳು ಗೋವದಲ್ಲಿವೆ ಕಲಾಂಗೂಟೆ, ಕೋಲ್ವ, ದೋನಾ ಪಾಲಾ, ಸಿರಿದಾವೊ, ವಾಗತೋರ, ಮಾಂದ್ರೇ ಮತ್ತು ಮೋರ್ಜಿ ಬೀಚುಗಳಿಗೆ ಪ್ರವಾಸಿಗಳು ಆದಿಕ ಸಂಖ್ಯೆಯಲ್ಲಿ ಬರುತಾರೆ. ಹಳೆಯ ಗೋವದಲ್ಲಿ ಕ್ರೈಸ್ತರು ಹೆಚ್ಚು; ಹೊಸ ಗೋವದಲ್ಲಿ (ನೊವ ಗೋವ) ಹಿಂದುಗಳು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಪೋರ್ಚುಗೀಸರ ಆಂತರ ವಿವಾಹಗಳಿಂದ ಸ್ವಲ್ಪಮಟ್ಟಿಗೆ ಸಂಮಿಶ್ರ ಜನಾಂಗದರಿದ್ದ್ರಾರೆ. ಇಲ್ಲಿಯ ಜನರ ಮಾತೃಭಾಷೆ ಕೊಂಕಣ. ಸಾಮಾನ್ಯವಾಗಿ ಕ್ರಿಶ್ಛಿಯನರು ಪೋರ್ಚುಗೀಸ್ ಭಾಷಯನ್ನೂ ಹಿಂದುಗಳು ಕೊಂಕಣಿ ಭಾಷೆಯನ್ನೂ ಆಡುತ್ತಾರೆ. ಜನಸಾಂದ್ರತೆ ಹಾಗೂ ಪೋರ್ಚುಗೀಸರ ಮಿತಿಮೀರಿದ ತೆರಿಗೆಯಿಂದಾಗಿ ಜನರು ಆನೇಕ ಕಡೆಗಳಿಗೆ ವಲಸೆ ಹೋದರು. ಆನೇಕರು ಆಫ್ರಿಕದತ್ತ ಸಾಗಿ ಮೊಜಾಂಬಿಕ್ ಹಾಗೂ ನೇಟಾಲ್ ಗಳಲ್ಲಿ ನೆಲೆಸಿದರು. ಮುಂಬಯಿಗೆ ತೆರಳಿದ ಗೋವನರೀ ಹೆಚ್ಚು. ಗೋವ ರಾಜ್ಯವನ್ನು ಉತ್ತರ ಗೋವ (ವಿಸ್ತೀರ್ಣ 1736 ಚಕಿಮೀ. ದಕ್ಷಿಣ ಗೋವ (ವಿಸ್ತೀರ್ಣ 1,966 ಚಕಿಮೀ).ಎಂದು ಎರಡು ಜಿಲ್ಲೆಗಳಾಗಿ ವಿಂಗಡಿಸಲಾದಿದೆ. ಪಣಜಿ ಉತ್ತರ ಗೋವದ ಆಡಳಿತ ಕೇಂದ್ರ. ಮಾರ್ಗೋವ ದಕ್ಷಿಣ ಗೋವದ ಆಡಳಿತ ಕೇಂದ್ರ ಗೋವಾ ಭೂದಾಖಲೆಯನ್ನು ಗಣಕೀಕೃತಗೊಳಿಸಿದ ಭಾರತದ ಪ್ರಥಮ ರಾಜ್ಯವಾಗಿದೆ.