ಪುಟ:Mysore-University-Encyclopaedia-Vol-6-Part-12.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೂಳಗುಮ್ಮಟ

ಬಿಜಪುರದಲ್ಲಿ ಆದಿಲ್ ಷಾಹಿ ದೊರೆ ಮಹಮ್ಮದ್ (1627-1656) ತನಾಗಾಗಿ ಕಟ್ಟಿಸಿಕೊಂಡ ಸ್ಮಾರಕ ಜಗತ್ಪ್ರತಿಷ್ಟವಾದದ್ದು. ಇದೊಂದು ಸರಳ ವಿನ್ಯಾಸದ ದೈತ್ಯಾಕಾರದ ಕಟ್ಟಡ. ಹೊರ ತಳ ಅಳತೆ 205 X 205', ಎತ್ತರ 198' 6". ಈ ಕಟ್ಟಡದಲ್ಲಿ ನಾಲ್ಕು ಗೋಡೆಗಳಿಂದ ಆವೃತವಾಗಿ ಮೇಲೆ ಗುಮ್ಮಟದಿಂದ ಆಚ್ಛಾದಿತವಾಗಿರುವ ಒಂದು ದೊಡ್ಡ ಹಾಜಾರ ಮಾತ್ರ ಇದೆ. 135' 5" ಚೌಕವಾಗಿದ್ದು, 18,337,67 ಚ. ಅ. ಪ್ರದೇಶವನ್ನು ಆಕ್ರಮಿಸುವ ಈ ಹಾಜಾರ ಕಂಬಗಳಿಲ್ಲದೆ ಆಚ್ಛಾದಿತವಾಗಿರುವ ಹಾಜಾರಗಳಲ್ಲಿ ಜಗತ್ತಿನಲ್ಲೇ ಅತ್ಯಂತ ದೊಡ್ಡದು. ಹಾಜಾರದ ಸುತ್ತಲಿನ ನಾಲ್ಕು ಗೋಡೆಗಳು ಮೊದಲು ಮೂರುಮೂರು ಕಮಾನುಗಳನ್ನೊಳಗೊಂಡಿದ್ದವು.ಆನಂತರದಲ್ಲಿ ಉತ್ತರದ ಗೋಡೆಯ ಮಧ್ಯದೊಂದನ್ನು ಬಿಟ್ಟು ಉಳಿದ ಕಮಾನುಗಳನ್ನು ಗೋಡೆಗಳೊಂದಿಗೆ ಮುಚ್ಚಲಾಗಿದ್ದು ದಕ್ಷಿಣದ ಮಧ್ಯ ಕಮಾನಿನಲ್ಲಿ ಮಾತ್ರ ಒಂದು ಪ್ರವೇಶದ್ವಾರಕ್ಕೆ ಅವಕಾಶ ಮಾಡಲಾಗಿದೆ. ಒಳಭಾಗದಲ್ಲಿ ಈ ಗೋಡೆಗಳಿಗೆ ಒತ್ತಿದಂತೆಯೇ ಮೇಲಿದ್ದು ಅಡ್ಡವಾಗಿ ಪರಸ್ಪರ ಛೇದಿಸುವ ಎಂಟು ಕಮಾನುಗಳನ್ನು ಅಳವಡಿಸಲಾಗಿದೆ. ನೆಲದಿಂದ ಸುಮಾರು 109' ಎತ್ತರದಲ್ಲಿ ಇವುಗಳ ತಲೆಬಿಂದುಗಳಿಂದ ಒಂದು ಅಷ್ಟಕೋಣ ನಿರ್ಮಾಣವಾಗಿದೆ. ಇವುಗಳ ಮೇಲೆ ಒಂದು ಗುಮ್ಮಟವನ್ನು ಕೂರಿಸಲಾಗಿದೆ. ನೆಲ ಚೌಕವಾಗಿದ್ದರು ಮೇಲೆ, ದುಂದುಗುಮ್ಮಟವನ್ನಿಡಲು ಪರಸ್ಪರ ಛೇದಿಸುವ ಕಮಾನುಗಳನ್ನು ನಿರ್ಮಿಸುವ ತಂತ್ರ ವಾಸ್ತು ರಚನಾ ರೀತಿಯಿಂದ ವಿಶಿಷ್ಟವಾದುದ್ದು. ಈ ಕಮಾನುಗಳ ಮೇಲೆ ಗುಮ್ಮಟದ ಬುಡದಲ್ಲಿ ಅದರ ದುಂಡು ಒಳಗೋಡೆಗೆ ಹೊಂದಿಕೊಂಡಂತೆ ವರ್ತುಲಾಕಾರದಲ್ಲಿ ಹಬ್ಬಿರುವ 11' ಅಗಲದ ಒಂದು ಚಾಚು ಗ್ಯಾಲೆರಿ ಇದೆ. ಈ ಗ್ಯಾಲೆರಿ ನೆಲದಿಂದ 109' 6" ಮೇಲಿದೆ. ಈ ಮಟ್ಟದಿಂದ ಗುಮ್ಮಟದ ತಲೆ 68' 6" ಎತ್ತರದಲ್ಲಿದೆ. ಎಂದರೆ ಹಜಾರದ ಒಳಗೆ ನೆಲದಿಂದ ಗುಮ್ಮಟದ ನೆತ್ತಿಯ ವರೆಗಿನ ಎತ್ತರ 178'. ಗುಮ್ಮಟದ ವ್ಯಾಸ 124' 5". ಏಷ್ಯ ಖಂಡದಲ್ಲಿಯೇ ಅತಿದೊಡ್ಡದಾದ, ವಿಶ್ವದಲ್ಲಿ ಎರಡನೆಯದಾದ ಗುಮ್ಮಟವಿದು. ಗೋಡೆಗಳ ರಚನೆಯಲ್ಲಿ ಸಾಮಾನ್ಯ ಕಲ್ಲು ತುಂಡುಗಳನ್ನು ಗಾರೆಯೊಡನೆ ಹುದುಗಿಸಿ, ಒಳ ಹೊರಮೈಗಳಲ್ಲಿ ಹಲವೆಡೆ ತೆಳು ಚಪ್ಪಡಿಗಳನ್ನು ಅಂಟಿಸಿ ಮೇಲೆ ಗಾರೆ ಬಳಿಯಲಾಗಿದೆ. ಮೇಲೆ ಹೋದಂತೆ ಸ್ವಲ್ಪ ಸ್ವಲ್ಪವಾಗಿ ಒಳ ಚಾಚುವ ಇಟ್ಟಿಗೆಯ ವರ್ತುಲಗಳನ್ನು ಒಂದರ ಮೇಲೊಂದರಂತೆ ಪೇರಿಸಿ ಗುಮ್ಮಟವನ್ನು ರಚಿಸಲಾಗಿದೆ. ಇಲ್ಲಿ ಉಪಯೋಗಿಸಿರುವ ಬಿಗಿ ಗಾರೆಯಿಂದ ಗುಮ್ಮಟ ಕಾಂಕ್ರೀಟಿನಲ್ಲಿ ಮಾಡಿದ ಬೋರಲಿಟ್ಟ ದೊಡ್ಡ ಬಟ್ಟಲಿನಂತೆ ಒಂದೇ ಘನವಾಗಿ ಭದ್ರವಾಗಿ ನಿಂತಿದೆ. ಗುಮ್ಮಟದ ಗೋಡೆಯ ದಪ್ಪ 10'; ಅದರ ಹೊರವ್ಯಾಸ 144'.

ಕಟ್ಟಡದ ಹೊರಗಿನ ನಾಲ್ಕು ಮೂಲೆಗಳಗೆ ಸೇರಿದಂತಿರುವ ಷಟ್ಕೋಣಾಕೃತಿಯ ಗೋಪುರಗಳ ಒಳಗಿರುವ ಮೆಟ್ಟಲುಗಳಿಂದ ಚಾವಣಿಯ ಮೇಲೇರಿ ಗುಮ್ಮಟದಲ್ಲಿ ಕೊರೆದಿರುವ ಎಂಟು ಸಣ್ಣ ದ್ವಾರಗಳ ಮೂಲಕ ಒಳಗಿನ ಚಾಚುಗ್ಯಾಲೆರಿಗೆ ಹೋಗಬಹುದು. ಇಲ್ಲಿ ವಿಶಾಲವಾದ ಆಚ್ಛದನ ಗುಮ್ಮಟದಿಂದ ಶಬ್ಧತಂತ್ರಗಳು ಪ್ರತಿಧ್ವನಿಸಿ ವಿಶಿಷ್ಟಪರಿಣಾಮ ಉಂಟುಮಾಡುತ್ತವೆ. ಮಾತು, ಚಪ್ಪಳೆ ಅಥವಾ ಯಾವುದೇ ಶಬ್ಧವನ್ನು ಇಲ್ಲಿ ಒಮ್ಮೆ ಹೊಮ್ಮಿಸಿದರೆ ಸುಮಾರು ಹತ್ತಕ್ಕೂ ಹೆಚ್ಚು ಸಲ ಅದು ಸ್ಪಷ್ಟವಾಗಿ ಪ್ರತಿಫಲಿಸುವುದಲ್ಲದೆ ಎಷ್ಟೋ ಸಣ್ಣ ಶಬ್ಧವನ್ನೂ ಒಂದೆಡೆ ಉಂಟುಮಾಡಿದರೂ ಈ ಗ್ಯಾಲೆರಿಯ ಯಾವುದೇ ಭಾಗದಲ್ಲಿರುವರಿಗೂ ಅದೇ ಶಬ್ಧ ಸ್ಪಷ್ಟವಾಗಿ ಗೋಡೆಯಿಂದ ಹೊರಬೀಳುವಂತೆ ಕೇಳುತ್ತದೆ. ಈ ಆಶ್ಚರ್ಯಕರ ವೈಶಿಷ್ಟ್ಯದಿಂದಾಗಿ ಇದು ಪಿಸುಗುಟ್ಟುವ ಗ್ಯಲೆರಿ ಎಂದು ಪ್ರಸಿದ್ಧವಾಗಿದೆ.

ಕಟ್ಟಡದ ಹೊರಮೈಯ ವಿನ್ಯಾಸ ಸುಂದರವಾಗಿ ರೂಪಿತವಾಗಿದೆ. ಕಮಾನುಗಳನೊಳಗೊಂಡ ಎತ್ತರದ ಗೋಡೆಗಳ ಮೇಲೆ ಛಾವಣಿಯ ಮಟ್ಟದಲ್ಲಿ ಚಾಚುಕಪೋತವಿದೆ. ಅದರ ಅಡಿಯಲ್ಲಿ ತೂಗಾಡುವ ಬಾಳೆವೋತೆಗಳಿಂದ ಅಲಂಕೃತವಾಗಿರುವ ಗಂಧವಾರಣಗಳುಂಟು. ಎತ್ತರದಲ್ಲಿ ಕಟ್ಟಡದ ಸುತ್ತ ಹಬ್ಬಿರುವ ಈ ಅಲಂಕರಣ, ಗೋಡೆಗಳ ಬರಿಮೈ ವೈಶಾಲ್ಯವನ್ನು ಖಂಡಿಸಿ ಅಲಂಕೃತ ಕಂಠಹಾರದಂತೆ ಸುಂದರವಾಗಿ ಜೋಡಣೆಗೊಂಡಿದೆ. ಅದರ ಮೇಲೆ ಸಣ್ಣ ಕಮಾನುಗಳ ಸಾಲೂ, ಅದಕ್ಕೂ ಮೇಲೆ ಚೂಪು ಪಟ್ಟೆಗಂಬಗಳ ಸಾಲೂ ಇವೆ. ಕಟ್ಟಡದ ನಾಲ್ಕು ಮೂಲೆಗಳಿಗೆ ಹೊಂದಿಕೊಂಡಿರುವ ಷಡ್ಭುಜ ಗೋಪುರಗಳನ್ನು ಏಳು ಅಂತಸ್ತುಗಳಲ್ಲಿ ಎತ್ತಲಾಗಿದೆ. ಒಂದೊಂದು ಮುಖದಲ್ಲೂ ಚೂಪು ತುದಿಯ ಕಮಾನಿನ ಕಿಟಕಿಗಳನ್ನಿಡಲಾಗಿದೆ. ಈ ಗೋಪುರದ ಮೇಲ್ಭಾಗದಲ್ಲಿ ಚಿಕ್ಕ ಗುಮ್ಮಟಗಳಿವೆ. ಇವು ಛಾವಣಿಯ ಮಟ್ಟಕ್ಕಿಂತಲೂ ಮೇಲಿವೆ. ವಿಶಾಲ ಛಾವಣಿಯ ಮೇಲೆ ಮಧ್ಯದಲ್ಲಿರುವ ಬೃಹತ್ ಗುಮ್ಮಟ ಅರೆಗೋಳಾಕಾರದ್ದು. ಇದರ ತಳ ಕೂಡಾ ಮೀನಾರುಗಳ ಮೇಲಿರುವ ಚಿಕ್ಕ ಗುಮ್ಮಟಗಳಂತೆ ಪದ್ಮಗಳಿಂದ ಸುತ್ತುವರಿಯಲ್ಪಟ್ಟಿದೆ. ಅಲ್ಲದೆ ಗೋಡೆಗಳ ಮೇಲೆಲ್ಲಾ ಗಾರೆಯ ಅನೇಕ ಬಗೆಯ ವಿನ್ಯಾಸಗಳ ಅಲಂಕಾರವಿದೆ. ಈ ವಾಸ್ತು ಮತು ಅಲಂಕಾರ ಪರಸ್ಪರ ಪೂರಕವಾಗಿ ಗೋಳಗುಮ್ಮಟವನ್ನು ಮೋಹಕ ಕೃತಿಯನ್ನಾಗಿ ಮಾಡಿವೆ. ಈ ಕಟ್ಟಡವನ್ನು ಹತ್ತಿರದಿಂದ ನೋಡುವವರಿಗೆ ಇದರ ದೈತ್ಯಾಕಾರದ ಎದರು ತಮ್ಮ ವಾಮಾನತ್ವದ ಅನುಭವವಷ್ಟೆ ಆದರೂ ದೂರದಿಂದ ನೋಡಿದಲ್ಲಿ ಈ ಸೌಂದರ್ಯದ ಸ್ವರೂಪ ಸ್ಪಶ್ಟವಾಗಿದೆ.

ಗೋಳಗುಮ್ಮಟದ ಒಳಹಾಜರದ ಮಧ್ಯೆ ದೊಡ್ಡ ಚೌಕ ಕಟ್ಟೆಯ ಮೇಲೆ ಮುಹಮ್ಮದನ ಮತ್ತು ಅವನ ಸಮೀಪ ಸಂಬಂಧಿಗಳ ಕೃತಕ ಗೋರಿಗಳಿವೆ. ನಿಜವಾದ ಗೋರಿಗಳು ಇದರ ನೆಲಮಾಳಿಗೆಯಲ್ಲಿವೆ. ಮುಹಮ್ಮದ ತನ್ನ ಆಳಿಕೆಯ ಉತ್ತರಾರ್ಧದಲ್ಲಿ ಈ ಕಟ್ಟಡವನ್ನು ಕಟ್ಟಲಾರಂಭಿಸಿ ತನ್ನ ಕೊನೆಗಾಲದವರೆಗೂ ಮುಂದುವರೆಸಿದ. ಆದರೆ ಆ ಹೊತ್ತಿಗೂ ಕಟ್ಟಡದ ಗಾರೆಯ ಅಲಂಕರಣ ಮುಗಿದಿರಲಿಲ್ಲವಾಗಿ ಆ ಭಾಗಗಳು ಇಂದು ಅಪೂರ್ಣವಾಗಿಯೇ ಉಳಿದಿವೆ. ಮುಹಮ್ಮದ್ ತನ್ನ ಗೋರಿಗಾಗಿ ಬಹಳ ಆಸ್ಥೆ ವಹಿಸಿದ್ದನೆಂದೂ, ತನ್ನ ದೇಹವನ್ನು ಪವಿತ್ರ ಸ್ಥಳದಲ್ಲಿ ಹುಗಿಯಬೇಕೆಂಬ ಉದ್ದ್ದೇಶದಿಂದ