ಪುಟ:Mysore-University-Encyclopaedia-Vol-6-Part-15.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥಾಲಯ

ಕೈಗೊಳ್ಳುವ ಇಂಥ ಅಭಿವೃದ್ಧಿ ಕಾರ್ಯಗಳಲ್ಲಿ೮ ಅದು ಕೇವಲ ಒಂದು ಪ್ರಚೋದಕ ಮಾಧ್ಯಮದಂತೆ ವರ್ತಿಸುತ್ತಿದೆ. ತಾನು ನೀಡುತ್ತಿರುವ ಸಹಾಯ ಸೊಉಲಭ್ಯಗಳ ವಿಷಯದಲ್ಲಿ ಯುನೆಸ್ಕೊ ಮೂಲಗುರಿಯೊಂದನ್ನು ಇಟ್ಟುಕೊಂಡಿದೆ. ಆಯಾ ಜನತೆಯ ದೃಷ್ಟಿಕೋನವನ್ನು ಅಭಿವೃದ್ಧಿ ಹಾಗೂ ನಾವೀನ್ಯದ ಕಡೆ ತಿರುಗಿಸುವುದೇ ಆ ಗುರಿ. ದೆಹಲಿಯ ಸಾರ್ವಜನಿಕ ಗ್ರಂಥಾಲಯವನ್ನೇ ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇದರ ಪ್ರಭಾವ ಏಷ್ಯದ ಗಡಿಗಳನ್ನು ದಾಟಿ ದಕ್ಷಿಣ ಅಮೆರಿಕದ ವರೆ ವ್ಯಾಪಿಸಿದೆ. ಈ ಯೋಜನೆಯ ಯಶಸ್ಸು ಸಾರ್ವಜನಿಕ ಗ್ರಂಥಾಲಯಗಳ ಬಗ್ಗೆ ಯುನೆಸ್ಕೊ ತೋರಿಸುತ್ತಿರುವ ಆಸಕ್ತಿಗೆ ಮತ್ತಷ್ಟು ಉತ್ತೇಜನ ಕೊಟ್ಟಿದೆ. ಒಮ್ಮೆ ಸಾಮಾನ್ಯ ಪ್ರಜೆಗಳಿಗೆ ಗ್ರಂಥಾಲಯಗಳ ಸೌಲಭ್ಯಗಲನ್ನು ಒದಗಿಸಿ ಅವರಿಗೆ ಜ್ಞಾನಾರ್ಜನೆಯ ಸುಲಭದಾರಿಯನ್ನು ತೋರಿಸಿದರೆ ಸಾಕು. ಹೆಚ್ಚು ಹೆಚ್ಚಾಗಿ ಓದಿ ತಮ್ಮ ಜ್ಞಾನದಾಹವನ್ನು ನೀಗಿಸಿಕೊಳ್ಳುವ ಮಾರ್ಗಗಳನ್ನು ತಮಗೆ ತಾವೇ ಹುಡುಕಿಕೊಳ್ಳುತ್ತಾರೆ. ದೆಹಲಿ ಸಾರ್ವಜನಿಕ ಗ್ರಂಥಾಲಯ ಸ್ಥಾಪನೆಗೊಮ್ಡ ಐದು ವರ್ಷಗಳ ಆನಂತರ ಅದರ ಸ್ಥಿತಿಗತಿಗಳನ್ನು ವಿಶ್ಲೇಷಿಸಿ ವರದಿ ಮಾಡಲು ಯುನೆಸ್ಕೊ ೧೯೫೭ರಲ್ಲಿ ಫ್ರ್ಯಾಂಕ್ ಗಾರ್ಡ್ನರ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಕ ಮಾದಿತು. ಈ ಸಮಿತಿ ಏಕೈಕ ತುಲನಾತ್ಮಕ ವರದಿಯಾಗಿದೆ. ಶಾಲಾ ಗ್ರಂಥಾಲಯಗಳ ಅಭಿವೃದ್ಧಿಗಾಗಿಯೂ ಯುನೆಸ್ಕೊ ಸಾಕಷ್ಟು ಕೆಲಸ ಮಾಡಿತ್ತಿದೆ. ಅಲ್ಲಿನ ಗ್ರಂಥಪಾಲರಿಗೆ ವಿಶೇಷ ತರಬೇತಿಯನ್ನು ಕೊ೯ಡುತ್ತಿರುವುದು ಗಮನಾರ್ಹ ಸಂಗತಿ. ವಿಶ್ವವಿದ್ಯಾಲಯ ಗ್ರಂಥಾಲಯಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವುಗಳ ನಿವಾರಣೆಯನ್ನು ಕುರಿತು ಚರ್ಚೆ ನಡೆಸಲು ಯುನೆಸ್ಕೊ ಒಂದು ಸಮ್ಮೇಳನವನ್ನು ೧೯೬೨ರಲ್ಲಿ ಅರ್ಜೆಂಟೀನದ ಮೆಂಡೋಜದಲ್ಲಿ ಏರ್ಪಡಿಸಿತ್ತು. ಇದರಲ್ಲಿ ಸ್ಯಾಟಿನ್ ಅಮೆರಿಕದ ೧೯ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಇದೊಂದು ಪ್ರಾದೇಶಿಕ ಸಮ್ಮೇಳನವಾದರೂ ಇದರಲ್ಲಿ ಚರ್ಚಿಸಿದ ವಿಷಯಗಳೂ ಮಾಡಿದ ಶಿಫಾರಸ್ಸುಗಳೂ ಮಹತ್ತ್ವಪೂರ್ಣವಾಗಿವೆ. ಪ್ರತಿಯೊಂದು ವಿಶ್ವವಿದ್ಯಾಲಯವೂ ತನ್ನ ಒಟ್ಟು ವೆಚ್ಚದಲ್ಲಿ ಶೇಕಡ ಐದಕ್ಕೆ ಕಡಿಮೆ ಇಲ್ಲದಂತೆ ಹನವನ್ನು ಗ್ರಂಥಾಲಯದ ಸಲುವಾಗಿ ನಿಗದಿ ಮಾಡಬೇಕೆಂಬ ಒಮ್ಮತದ ಸಲಹೆಯನ್ನು ಈ ಸಮ್ಮೇಳನ ಮಾಡಿತು. ಉಳಿದ ಸಲಹೆಗಳು ಈ ರೀತಿ ಇವೆ : ೧. ಪ್ರತಿಯೊಂದು ವಿಶ್ವವಿದ್ಯಾಲಯ ಗ್ರಂಥಾಲಯವು ಕೇಂದ್ರೀಕೃತ ಗ್ರಂಥ ಸಂಗ್ರಹಣೆಗೆ ಯತ್ನಿಸಬೇಕು. ೨. ಸಹಕಾರೀ ಹಾಗೂ ಕೇಂದ್ರೀಕೃತ ಸೂಚೀಕರನ ವ್ಯವಸ್ಥೆ ಆಯಾ ದೇಶದ ಎಲ್ಲ ವಿಶ್ವವಿದ್ಯಾಲಯ ಗ್ರಂಥಾಲಯಗಳಿಗೂ ವ್ಯಾಪಿಸಿರಬೇಕು. ೩. ರಾಷ್ಟ್ರೀಯ ಗ್ರಂಥಪಾಲರ ಸಂಘ ಸಂಸ್ಥೆಗಳಲ್ಲಿ ವಿಶ್ವವಿದ್ಯಾಲಯಗಳಿಗೆ ತಕ್ಕ ಪ್ರಾತಿನಿಧ್ಯಗಳೂ ವಿಭಾಗಗಳೂ ಇರಬೇಕು ಮತ್ತು ೪. ದ್ವಿಪ್ರತಿಗಳ ಮತ್ತು ಪ್ರೌಢ ಪ್ರಬಂಧಗಳ ಪ್ರಕಟನೆಗಲನ್ನು ವಿವಿಧ ವಿಶ್ವವಿದ್ಯಾಲಯ ಗ್ರಂಥಾಲಯಗಳೊಂದಿಗೆ ಎರವಲು ಮತ್ತು ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆಗೆ ಯುನೆಸ್ಕೊ ನೆರವು ನೀಡಬೇಕು. ರಾಷ್ಟ್ರೀಯ ಗ್ರಂಥಾಲಯಗಳು: ರಾಷ್ಟ್ರೀಯ ಗ್ರಂಥಾಲಯಗಳ ಅಭಿವೃದ್ಧಿ ಬಗ್ಗೆ ಮನಿಲದಲ್ಲಿ ಯುನೆಸ್ಕೊದ ಆಶ್ರಯದಲ್ಲಿ ಫೆಬ್ರುವರಿ ೧೯೬೪ರಲ್ಲಿ ನಡೆದ ಪ್ರಾದೇಶಿಕ ಸಮ್ಮೇಳನದಲ್ಲಿ ಇದು ಸ್ಪಷ್ಟವಾಯಿತು. ಇದರಲ್ಲಿ ಏಷ್ಯ ಮತ್ತು ಪೆಸಿಫಿಕ್ ವಲಯದ ರಾಷ್ಟ್ರಗಳ ೨೪ ಪ್ರತಿನಿಧಿಗಳು ಭಾಗವಹಿಸಿದ್ದರು. ಇಂಥದೇ ಒಂದು ಸಮ್ಮೇಳನ ೧೯೫೮ರಲ್ಲಿ ವಿಯನ್ನದಲ್ಲಿ ಜರುಗಿತು. ಈ ಎರಡು ಸಮ್ಮೇಳನಗಲು ರಾಷ್ಟ್ರೀಯ ಗ್ರಂಥಾಲಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಅವುಗಳು ಎದುರಿಸುತ್ತಿರುವ ಸಮಸ್ಯೆಗಲಿಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸಿವೆ. ವಿವಿಧ ರಾಷ್ಟ್ರೀಯ ಗ್ರಂಥಾಲಯಗಳ ಗ್ರಂಥಪಾಲರು ಮತ್ತು ನಿರ್ದೇಶಕರನ್ನು ಒಂದೆಡೆ ಸೇರಿಸಿ ಗ್ರಂಥಗಳ ಅಂತಾರಾಷ್ಟ್ರೀಯ ಎರವಲು ಮತ್ತು ವಿನಿಮಯಗಳನ್ನು ಕುರಿತು ಚರ್ಚಿಸುವುದು ಮತ್ತು ಈ ವಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯಗಳು ಎದ್ಚುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವುದು-ಇವು ಈ ಸಮ್ಮೇಳನದ ಉದ್ದೇಶಗಳಾಗಿದ್ದವು; ಗ್ರಂಥ ಸಂಗ್ರಹಣೆ, ಗ್ರಂಥಸೂಚಿ, ಪರಾಮರ್ಶನ ಸೇವೆ, ಪ್ರಲೇಖನವಿಧಾನ, ಗ್ರಂಥಸ್ವಾಮ್ಯ, ಗ್ರಂಥಾಲಯ ಸಹಕಾರ, ಗ್ರಂಥಪಾಲರ ತರಬೇತಿ, ಗ್ರಂಥಾಲಯದ ಕಟ್ಟಡ, ಗ್ರಂಥ ಸಂರಕ್ಷಣೆ ಮತ್ತು ಗ್ರಂಥಪಾಲರ ಸಂಸ್ಥೆ ಸಂಘಗಳು-ಇವನ್ನು ಕುರಿತು ಚರ್ಚಿಸಲಾಯಿತು. ಮನಿಲ ಸಮ್ಮೇಳನಕ್ಕೆ ಮೊದಲು ನಡೆಸಿದ ಸಮೀಕ್ಷೆಯಿಂದ ಈ ಕೆಳಗಿನ ಅಂಶಗಳು ಬೆಳಕಿಗೆ ಬಂದುವು. ೧. ಕೇವಲ ೨೦ ರಾಷ್ಟ್ರೀಯ ಗ್ರಂಥಾಲಯಗಳು ರಾಷ್ಟ್ರೀಯ ಗ್ರಂಥ ಸೂಚಿಗಲನ್ನು ಪ್ರಕಟಿಸುತ್ತಿವೆ. ೨. ಬಹುಸಂಖ್ಯಾತ ರಾಷ್ಟ್ರೀಯ ಗ್ರಂಥಾಲಯಗಳು ಸಾರ್ವಜನಿಕ ಗ್ರಂಥಾಲಯಗಲ ಮಾದರಿಯಲ್ಲಿ ಸೇವೆ ಸಲ್ಲಿಸುತ್ತಿವೆ. ೩. ಶೇ. ೬೧ರಷ್ಟು ಗ್ರಂಥಾಲಯಗಳು ಮಾತ್ರ ಅಂತಾರಾಷ್ಟ್ರೀಯ ಗ್ರಂಥ ವಿನಿಮಯ ಕಾರ್ಯದಲ್ಲಿ ಭಾಗವಹಿಸುತ್ತಿವೆ: ೪. ಕೇವಲ ೫೦ ರಾಷ್ಟ್ರೀಯ ಗ್ರಂಥಾಲಯಗಳು ತಮ್ಮ ತಮ್ಮ ವಲಯದಲ್ಲಿ ಗ್ರಂಥಗಳ ಎರವಲು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. ಪ್ರಲೇಖನ ಕೇಂದ್ರಗಳ ಸ್ಥಾಪನೆಗೆ ನೆರವು ನೀಡುವುದನ್ನು ಯುನೆಸ್ಕೊ ೧೯೫೧ರಲ್ಲಿ ಪ್ರಾರಂಭಿಸಿತು. ಈವರೆಗೆ ಅಂಥ ೧೨ ಕೇಂದ್ರಗಳು ಸ್ಥಾಪನೆಗೊಂಡಿವೆ. ಅಂಥ ಇನ್ನೂ ೯ ಕೇಂದ್ರಗಳು ವಿವಿಧ ಹಂತದಲ್ಲಿ ರೂಪುಗೊಳ್ಳುತ್ತಿದೆ. ಇಂಥ ಕೇಂದ್ರಗಳಲ್ಲಿ ಭಾರತ ರಾಷ್ಟ್ರೀಯ ವೈಜ್ಞಾನಿಕ ಪ್ರಲೇಖನ ಕೇಂದ್ರವೂ (ಇಂಡಿಯನ್ ನ್ಯಾಷನಲ್ ಸೈಂಟಿಫಿಕ್ ಡಾಕ್ಯುಮೆಂಟೇಷನ್ ಸೆಂಟರ್) ಒಂದು. ಇದು ದೆಹಲಿಯನ್ನು ೧೯೫೨ರಲ್ಲಿ ಅಸ್ತಿತ್ವಕ್ಕೆ ಬಂತು. ಯುನೆಸ್ಕೊ ಮತ್ತು ಭಾರತ ಸರ್ಕಾರದಿಮ್ದ ರೂಪಗೊಂಡ ಮಹಾನ್ ಸಂಸ್ಥೆಯಾಗಿ ಇದು ಬೆಳೆದು ನಿಂತಿದೆ. ಭಾರತದಲ್ಲಿರುವ ರಾಷ್ಟೀಯ ಪ್ರಯೋಗಶಾಲೆಗಳು, ವೈಜ್ಞಾನಿಕ ಸಂಶೋಧನ ಕೇಂದ್ರಗಳು-ಇವೇ ಮುಂತಾದವುಗಳಿಗೆ ಗ್ರಂಥಗಳನ್ನು, ಮಾಹಿತಿಗಳನ್ನು ಮತ್ತು ಲೇಖನಗಳ ನಕಲುಗಳನ್ನು ಒದಗಿಸುವುದರ ಮೂಲಕ ಸೇವೆ ಸಲ್ಲಿಸುತ್ತಿದೆ. ಯುನೆಸ್ಕೊದ ಪ್ರಾದೇಶಿಕ ವಿಜ್ಞಾನ ಸಹಕಾರ ಕಚೇರಿಗಳು ಆಯಾ ವಲಯಗಳಲ್ಲಿ ವೈಜ್ಞಾನಿಕ ಮಾಹಿತಿ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ. ಬ್ಯಾಂಕಾಕ್, ಕೈರೋ, ಮಾಂಟೆವಿಡಿಯೋ, ನವದೆಹಲಿ ಮತ್ತು ನೈರೋಬಿಗಳಲ್ಲಿ ಸ್ಥಾಪಿತವಾಗಿರುವ ಕೇಂದ್ರಗಳು ಕ್ರಮವಾಗಿ ಆಗ್ನೇಯ ಏಷ್ಯ, ಮಧ್ಯಪ್ರಾಚ್ಯ, ಲ್ಯಾಟಿನ್ ಅಮೆರಿಕ, ದಕ್ಷಿಣ ಏಷ್ಯ ಮತ್ತು ಪೂರ್ವ ಆಫ್ರಿಕ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ವೈಜ್ಞಾನಿಕ ಹಾಗೂ ತಾಂತ್ರಿಕ ಪ್ರಲೇಖನ ಕೇಂದ್ರಗಳು; ಅವುಗಲ ಅಭಿವೃದ್ಧಿಗೆ ಯುನೆಸ್ಕೊ ನೆರವು ಎಂಬ ಪುಸ್ತಕ ೧೯೬೫ರಲ್ಲಿ ಪ್ರಕಟವಾಗಿದೆ. ಗ್ರಂಥ ಮತ್ತು ಇತರ ವೈಜ್ಞಾನಿಕ ಸಲಕರನೆಗಳ ಮೇಲಿನ ಸುಂಕ ಮತ್ತು ಅಂಚೆ ರಿಯಾಯಿತಿ : ಯುದ್ಧಾನಂತರ ದಿವಸಗಲಲ್ಲಿ ಸಾಮಾನ್ಯವಾಗಿ ಎಲ್ಲ ಗ್ರಂಥಾಲಯಗಳೂ ಎದುರಿಸುತ್ತಿದ್ದ ಬಹು ದೊಡ್ಡ ಸಮಸ್ಯೆಯೆಂದರೆ ವಿದೇಶಗಳಿಂದ ತರಿಸಿದ ಗ್ರಂಥಗಳ ಮೇಲೆ ತೆರಬೇಕಾಗಿದ್ದ ಸುಂಕ. ಈ ಸಮಸ್ಯಯನ್ನು ನಿವಾರಿಸಲು ಯುನೆಸ್ಕೊ ಯತ್ನಿಸಿತು. ವಿಜ್ಞಾನ, ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯಾವಶ್ಯಕವಾದ ಸಲಕರಣೆಗಳ ಮೇಲೆ ವಿಧಿಸಲಾಗುತ್ತಿದ್ದ ಸುಂಕ ವಿನಾಯಿತಿಯ ಬಗ್ಗೆ ಒಂದು ಅಂತಾರಾಷ್ಟ್ರೀಯ ಒಡಂಬಡಿಕೆ ಏರ್ಪಡಿಸಿತ್ತು. ಈ ಒಡಂಬಡಿಕೆಗೆ ೧೯೫೨ರ ಮೇ ೨೧ರಂದು ಒಟ್ಟು ೪೫ ರಾಷ್ಟ್ರಗಳು ಸಹಿ ಹಾಕಿದವು. ಗ್ರಂಥಾಲಯಗಳು, ವಸ್ತು ಸಱ್ಂಗ್ರಹಾಲಯಗಳು, ಪ್ರಯೋಗಶಾಲೆಗಳು, ಮತ್ತು ವಿದ್ಯಾಸಂಸ್ಥೆಗಳು ತಮಗೆ ಬೇಕಾದ ಸಲಕರಣೆಗಳನ್ನು ವಿದೇಶಗಲಿಂದ ತರಿಸಿಕೊಂಡಾಗ ಅವುಗಳ ಮೇಲೆ ಆಮದು ಸುಂಕವನ್ನು ಮೊದಲಿನಂತೆ ತೆರಬೇಕಗಿಲ್ಲ. ಕೆಲವಕ್ಕೆ ರಿಯಾಯಿತಿ ದೊರೆತರೆ ಮತ್ತೆ ಕೆಲವು ಸಂಪೂರ್ಣ ಸುಂಕ ವಿಮೋಚನೆ ಪಡೆಯುತ್ತವೆ. ಯುನೆಸ್ಕೊದ ಸಲಹೆಯನ್ನು ಪುರಸ್ಕರಿಸಿ ವಿಶ್ವ ಅಂಚೆ ಸಂಸ್ಥೆ ೧೯೫೭ರಲ್ಲಿ ಆಟ್ಟವದಲ್ಲಿ ನಡೆದ ೧೪ನೆಯ ಸಮ್ಮೇಳನದಲ್ಲಿ ಅನೇಕ ಹೊಸ ರಿಯಾಯಿತಿಗಲನ್ನು ಪ್ರಕಟಿಸಿತು. ಅದರ ಪ್ರಕಾರ ಗ್ರಂಥಗಳು, ವರ್ತಮಾನ ಪತ್ರಿಕೆಗಳು ಇಲ್ಲವೇ ಮತ್ತಾವುದೇ ಮುದ್ರಿತವಾದ ವಾಚನ ಸಾಮಗ್ರಿಗಳ ಮೇಲೆ ತೆರಬೇಕಾಗಿದ್ದ ಅಂಚೆವೆಚ್ಚ ಬಹಳ ಮಟ್ಟಿಗೆ ತಗ್ಗಿದೆ. ಈ ಹೊಸ ಸೌಲಭ್ಯಗಳು ೧೯೫೮ರಲ್ಲಿ ಜಾರಿಗೆ ಬಮ್ದು ಪ್ರಪಂಚದ ಮೂಲೆಮೂಲೆಗೂ ಯಾವ ಅಡೆತಡೆಯೂ ಇಲ್ಲದದ್ಂತೆ ಜ್ಞಾನ ಪ್ರವಹಿಸಲು ಸಾಧ್ಯವಾಗಿದೆ. ಗ್ರಂಥ ಕೂಪನ್ನುಗಳು : ವಿದೇಶಗಳಿಂದ ನೇರವಾಗಿ ಗ್ರಂಥಗಳನ್ನು ಕೊಳ್ಳುವಾಗ ಇದ್ದ ವಿದೇಶೀ ವಿನಿಮಯದ ಆರ್ಥಿಕ ಸಮಸ್ಯೆಗಳನ್ನು ಈ ವ್ಯವಸ್ಥೆ ನಿವಾರಿಸುತ್ತದೆ. ಇದು ೧೯೪೮ರಲ್ಲಿ ಜಾರಿಗೆ ಬಂತು. ಅಂತಾರಾಷ್ಟ್ರೀಯ ಮೌಲ್ಯವುಳ್ಳ ಈ ಕೂಪನ್ನುಗಳನ್ನು ಗ್ರಂಥಾಲಯಗಲು ತಮ್ಮ ರಾಷ್ಟ್ರೀಯ ನಾಣ್ಯಗಳಿಗೇ ವಿನಿಮಯ ಮಾಡಿಕೊಂಡು ಅವನ್ನು ವಿದೇಶಗಳಲ್ಲಿ ಪ್ರಕಟವಾದ ಗ್ರಂಥಗಲನ್ನು ಕೊಳ್ಳಲು ಉಪ್[ಅಯೋಗಿಸಲಾಗುತ್ತಿದೆ. ಇತ್ತೀಚೆಗೆ ಮೈಕ್ರೋಫಿಲ್ಮ್, ವೈಜ್ಞಾನಿಕ ಸಲಕರನೆ ಹಾಗೂ ಇತರ ಶೈಕ್ಷಣಿಕ ವಸ್ತುಗಳನ್ನು ಆಮದು ಮಾದಿಕೊಳ್ಳಲು ಯುನೆಸ್ಕೊ ಅನುಮತಿ ನೀಡಿದೆ. ಪ್ರಕಟಣೆಗಳು, ನಿಯತಕಾಲಿಕೆಗಳು : ಹಲವಾರು ಗ್ರಂಥಗಳನ್ನು ಮತ್ತು ನಿಯತಕಾಲಿಕೆಗಲನ್ನು ಪ್ರಕಟಿಸುವುದರ ಜೊತೆಗೆ ಯುನೆಸ್ಕೊ ವಿವಿಧ ಸಂಘಸಂಸ್ಥೆಗಳಿಗೆ ಅಂಥ ಪ್ರಕಟನ ಕಾರ್ಯದಲ್ಲಿ ನೆರವನ್ನು ನೀಡುತ್ತಿದೆ. ಈ ಗ್ರಂಥಗಳ ಪಟ್ಟಿ ಈವರೆಗೆ ಯುನೆಸ್ಕೊ ಹೊರತಮ್ದಿರುವ ಗ್ರಂಥಗಲ ಬೃಹತ್ ಸಂಖ್ಯೆಯನ್ನಷ್ಟೇ ಅಲ್ಲ, ಅವು ಎಂಥ ಅಮೂಲ್ಯ ಜ್ಞಾನಸಂಪತ್ತು, ಎಷ್ಟು ವೈವಿಧ್ಯಮಯ ಎಂಬುದನ್ನು ತೋರಿಸುತ್ತದೆ. ಯುನೆಸ್ಕೊ ಪ್ರಕಟಿಸಿದ ಹಲವಾರು ಗ್ರಂಥಗಳು ಅನೇಕ ಭಾಷೆಗಳಿಗೆ ತರ್ಜುಮೆಗೊಂಡಿವೆ.