ಪುಟ:Mysore-University-Encyclopaedia-Vol-6-Part-15.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ್ರಮವಾಗಿ ಜೋಡಿಸಿ ಒ೦ದು ಕಟ್ಬಾಗಿ, ಗಂಟಾಗಿ ಹುರಿ ಸುತ್ತಿ ಇಡುತ್ತಿದ್ದರು. ಪೋಥಿ ಮತ್ತು ಗ್ರಂಥಿ (ಗಂಟು) ಎಂಬ ಪದಗಳಲ್ಲಿ ಮೂಲಾಥ೯ ಉಳಿದು ಬಂದಿದೆ. ಈಗಲೂ ರಿಕಾರ್ಡುಗಳು, ದಫ್ತರ ಕಟ್ಟು ಎಂಬುದನ್ನು ಕೆಂಥಾ, ಕಂತೆ ಎಂದೂ ಕರೆವುದಿದೆ. ಬುಕ್ ಎಂಬ ಇಂಗ್ಲಿಷ್ ಪದ ಬೈಗೆನ್ ಎ೦ಬ ಜರ್ಮನ್ ಪದದಿಂದ ಬಂದಿದೆಯೆಂದು ಕೆಲವರ ವಾದ. ಆದರೆ ಜನಸಾಮಾನ್ಯರ ತಿಳಿವಳಿಕೆ ಮತ್ತು ರೂಢಿಯನ್ನು ನೋಡಿದರೆ ಬುಕ್ ಶಬ್ದಕ್ಕೆ ಮೋಲತಃ ಬೀಚ್ ವೃಕ್ಷದ ತೊಗಟೆ ಅಥವಾ ಫಲಕ ಎ೦ಬ ಆಥ೯ ಇರುವಂತೆ ಕಾಣುತ್ತದೆ. ಜನಪದ ಸಾಹಿತ್ಯವೂ ಇದಮ್ನ ಪುಷ್ಟೀಕರಿಸುತ್ತದೆ. ಗ್ರೀಕರ ಬಿಬ್ಲೋಸ್ ವಿಂಬುದು ಜಂಬುಕಾಗದವನ್ನೂ ರೋಮನ್ನರ ಕೋಡೆಕ್ಸ್ ಎಂಬುದು ಗಿಡದ ಬೊಡ್ಡೆಯನ್ನೂ ಸೂಚಿಸುವುದನ್ನು ಇಲ್ಲಿ ನೆನೆಯಬಹುದು.

ಲಿಪಿ ಬಳಕೆಗೆ ಬಂದಿದ್ಧರೂ ಮಸಿ, ಜಂಬುಕಾಗದ, ಕಾಗದ ಮೊದಲಾದವುಗಳ ಉಪಯೋಗ ಗೊತ್ತಿರದಿದ್ದ ಪ್ರಾಚೀನ ಕಾಲದಲ್ಲಿ ಮನುಷ್ಯ ಕಲ್ಪು ಫಲಕಗಳ ಮೇಲೆ ಇಟ್ಟಿಗೆಗಳ ಮೇಲೆ ಬರೆಯುತ್ತಿದ್ದುದಕ್ಕೆ ದಾಖಲೆಗಳಿವೆ. ಇತಿಹಾಸಕರ ಯೋಸೆಫಸ್ ಪ್ರ.ಶ.ಪೂ. ಒಂದನೆಯ ದಶಕದಲ್ಲಿ ಇಂಥವು ಇದ್ದುವೆಂದು ಹೇಳಿದ್ದಾನೆ. ಈ ಲೇಖನ ವಿಧಾನ ಬರೆವಣಿಗೆಯ ಸಾಧನಗಳ ಅಭಾವದಿಂದ ಬಂದುದಾದರೂ ಬರೆದುದನ್ನು ಶಾಶ್ವತವಾಗಿಸಿತು ಎಂಬುದನ್ನು ಮರೆಯಲಾಗದು.

ಆದಿಮಾನವ ತನ್ನ ಭಾವನೆಗೆಳನ್ನು ವ್ಯಕ್ತಪಡಿಸುವಸಲುವಾಗಿ ಮೊದೆಲು ನಿಸರ್ಗದತ್ತವಾದ ಕಲ್ಲನ್ನೇ ಬಳಸಿದ. ಒಂದು ದೊಡ್ಡ ಬಂಡೆಗಲ್ಲಿನ ಮೇಲೆ ಕೆಲ್ಲಿನಿಂದಾಗಲಿ ಇಲ್ಲವೇ ಚಾಣ ದಿಂದಾಗಲಿ ಚಿತ್ರಗಳನ್ನು ತೆಗೆದ. ಅವುಗಳಿಗೆ ಬಣ್ಣ ಹಚ್ಚಿದ. ಇವೇ ಶಿಲಾ ಚಿತ್ರಗಳು. ಸ್ಪೇನಿನ ಅನೇಕ ಗುಹೆಗಳಲ್ಲಿ ಇಂಥ ಚಿತ್ರಗಳು ಕಾಣಸಿಗುತ್ತವೆ. ತನ್ನ ಸಂದೇಶವನ್ನು ಮಾತಲ್ಲಿ ತಿಳಿಸಲು ಆತ ನಡೆಸಿದ ಪ್ರಯತ್ನಗಳಿಗೆ ವಿಪುಲವಾಗಿ ದೊರೆಯುವ ಶಿಲಾಶಾಸನಗಳೇ ಸಾಕ್ಷಿಯಾಗಿವೆ. ಕಲ್ಲು ಬರೆಯುವ ಸಾಧನವಾದರೊ ಅದನ್ನು ಸ್ಥಳಾಂತರಿಸಕ್ಕಾಗಲಿಲ್ಲವಾಗಿ ಹಗುರ ಸಾಧನಗಳು ಬಳಕೆಗೆ ಬಂದವೆನ್ನಬಹುದು. ಜೇಡಿಮಣ್ಣಿನ ಫಲಕಗಳನ್ನು ಬ್ಯಾಬಿಲೋನಿಯದ ಪುರಾತನ ನಿವಾಸಿಗಳು ಹೇರಳವಾಗಿ ಬಳಸಿತ್ತಿದ್ದರು.

ನಿಸರ್ಗದತ್ತ ಬರೆವಣಿಗೆ ಸಾಮಗ್ರಿಯಾದ ಕಲ್ಪನ್ನು ಬಿಟ್ಟರೆ ಜಂಬುಕಾಗದದ (ಭೂರ್ಜಪತ್ರ) ಸುರಳಿಯಿಂದ ಮಾನವನ ಬರೆಯುವ ಸಧನಗಳ ಮೊದಲನೆಯ ಆಧ್ಯಾಯ ಪ್ರಾರಂಭವಾಗಿದೆ. ಇದೂ ನಿಸರ್ಗದತ್ತವಾದುದಾದರೂ ಇಟ್ಟಿಗೆಗಳಿಗಿಂತ ಉತ್ತಮ ಎನಿಸಿತು. ಈ ಕಾಗದದ ಒಂದೇ ಮಗ್ಗುಲಿಗೆ ಬರೆಯುತ್ತಿದ್ದರು. ಬರೆಯುವ ಈ ಸಾಧನ ಸಂಪೂರ್ಣವಾಗಿ ಪುರಾತನ ಈಜಿಪ್ಟ್ ನಾಗರಿಕರ ಸ್ವತ್ತಾಗಿತ್ತು. ಭೂರ್ಜವೃಕ್ಷ ನೈಲೆ ನದಿಯ ಕಣಿವೆಯಲ್ಲಿ ಹೇರಳವಾಗಿ ಬೆಳೆಯುತ್ತಿತ್ತು. ಈ ಸಸ್ಯದ ದೇಟುಗಳನ್ನು ಕತ್ತರಿಸಿ, ತೆಳುವಾದ ಪಟ್ಟಿಗಳಿಂದ ಕಾಗದವನ್ನು ತಯಾರಿಸುತ್ತಿದ್ದರು. ಇಂಥ ಪದರುಗಳನ್ನು ಒಂದಕ್ಕೊಂದು ಕೂಡಿಸಿ ಬಹಳ ಉದ್ಧನೆಯೆ ಕಾಗದದ ಸುರುಳಿಯನ್ನು ಮಾಡುತ್ತಿದ್ದುದೂ ಉಂಟು. ಪುರಾತನ ಕಾಲದಲ್ಲಿ ಎಲ್ಲ ಗ್ರಂಥಗಲಿಗಾಗಿ ಬಹುಶಃ ಇದನ್ನೇ ಹೇರಳವಾಗಿ ಬಳಸಲಾಗಿದೆ. ಸುಮಾರು ಪ್ರ.ಶ.ಪೂ.ಸು. 3500ರಲ್ಲೇ ಇಜಿಪ್ಷಿಯನ್ನರು ಈ ಸಾಧನವನ್ನು ಬಳಸಲಾರಂಭಿಸಿದರು. ಅನಂತರ ರೋಮನ್ನರ ಗ್ರೀಕರೂ ಇದನ್ನು ಹೇರಳವಾಗಿ ಬಳಸಿದರು.

ಜಂಬುಕಾಗದದ ಸುರಳಿಯ ಎರಡು ದಂಡೆಗೂ ಕಿಟ್ಟಿಗೆಯ ಹಿಡಿಕೆಗಳನ್ನು ಕೂಡಿಸಿ ಒಯ್ಯಲು ಅನುಕೂಲವಾಗುವಂತೆ ಮಾಡುತ್ತಿದ್ದರು. ಹಿಡಿಕೆಗೆ ಅಂಟಿಸಿದ ಚೀಟಿ ಅವನ್ನು ಗುರುತಿಸಲು ಸಹಾಯಕವಾಗುತ್ತಿತ್ತು ಸಾಮಾನ್ಯವಾಗಿ 2-3 ಇಂಚು ಅಂಕಣದಲ್ಲಿ ಬರೆವಣಿಗೆ ಇರುತ್ತಿತ್ತು. ಗ್ರ೦ಥದಲ್ಲಿ ಬೇಕಾದ ಭಾಗವನ್ನೋದಲು ಸುರುಳಿಯನ್ನು ಬಿಚ್ಚಬೇಕಾಗುತ್ತಿತ್ತು, ಇಲ್ಪವೆ ಸುತ್ತಬೇಕಾಗುತ್ತಿತ್ತು. ಕ್ರಮೇಣ್ ಹಾಳೆಗಳನ್ನು ಒ೦ದು ಮಗ್ಗಲು ಹೊಲಿದು ಉಪಯೋಗಿಸಲು ಪ್ರಾರಂಭವಾಯಿತು. ಅದರಿಂದಾಗಿ ಪುಸ್ತಕದ ರೂಪ ಬದಲಿಸಿತು. ತರುವಾಯ ಬರೆಯಲು ಬಳಕೆಗೆ ಬಂದ ವಸ್ತುವೆಂದರೆ ಪ್ರಾಣಿಗಳ ತೊಗಲು (ಪಾಚ್೯ಮೆಂಟ್ ಮತ್ತು ವೆಲಮ್-ಈ ಎರಡೂ ಶಬ್ದಗಳನ್ನು ಚಮ೯ಪತ್ರ ಎಂಬ ಒಂದೇ ಅಥ೯ದಲ್ಲಿ ಬಳಸುವುದಿದೆ). ಇತಿಹಾಸ ಪ್ರಪಿತಾಮಹ ಹೀರಡಾಟಸ್ ತನ್ನ ಕಾಲದಲ್ಲಿ ತೊಗಲಿನ ಮೇಲೆ ಬರೆಯುವ ಪರಿಪಾಠವಿತ್ತೆಂದು ತಿಳಿಸುತ್ತನೆ. ಮೊದಲಿನಿಂದಲೂ ಪರ್ಷಿಯದಲ್ಲಿ ಮಹತ್ತ್ವದ ಕಾಗದಪತ್ರಗಳು ಚರ್ಮದ ಮೇಲೆಯೇ ಬರೆಯಲ್ಪಡುತ್ತಿದ್ದುವು. ಪ್ರಾರಂಭದಲ್ಲಿ ತೊಗಲಿನ ಒಂದೇ ಮಗ್ಗಲಿಗೆ ಬರೆಯುತ್ತಿದ್ದರು. ಆದರೆ ಚರ್ಮದ ಮೇಲಿನ ಬರವಣಿಗೆ ಹೆಚ್ಚುಕಾಲ ನಿಲ್ಲುವಂತಿರಲಿಲ್ಲವಾಗಿ ಎಷ್ಟೋ ಮಹಾಕಾವ್ಯಗಳು ನಶಿಸಿ ಹೋಗಿರುವುದರಲ್ಲಿ ಆಶ್ಚರ್ಯವಿಲ್ಲ. ಪ.ಶ.ಪೂ. ೧೫೦೦ರ ವರೆಗೂ ಹೇರಳವಾಗಿ ಬಳಕೆಯಲ್ಲಿದ್ದ ಚರ್ಮಪತ್ರ ಆನಂತರ ಪ್ರ.ಶ. ಪ್ರಾರಂಭದವರೆಗೂ ಸುದಿನಗಳನ್ನು ಕಾಣಲಿಲ್ಲ. ಆಮೇಲೆ ಅದರ ಬಳಕೆ ಬಹುವಾಯಿತು. ಪ್ರಾಣಿಚರ್ಮವನ್ನು ಸ್ವಚ್ಛಮಾಡಿದ ಬಳಿಕ ಬಿಸಿಲಲ್ಲಿ ಒಣಗಿಸಿ, ಚಾಕುವಿನಿಂದ ಹೆರೆದು ಹದ ಮಾಡುತ್ತಿದ್ಧರು. ಆಮೇಲೆ ಅದರ ಮೇಲೆ ಸುಣ್ಣದ ಪುಡಿಯನ್ನು ಉದುರಿಸಿ ಕಲ್ಲಿನಿಂದ ಉಜ್ಜಿ ನುಣುಪು ಮಾಡಿ ಬರೆಯಲು ಪ್ರಾರಂಭಿಸುತ್ತಿದ್ದರು. ನಸುಗೆಂಪು ಬಣ್ಣದ ಚೆಮ೯ಪತ್ರದಿ೦ದ ಬರೆವಣಿಗೆಗೆ ಮೆರಗು ಬರುತ್ತಿತ್ತು. ಈ ಸಾಮಗ್ರಿಯ ಮೇಲೆ ಬರೆದ ಪುಸ್ತಕಗಳು ಈಗ ಕಾಣಸಿಗುವುದು ಅಪೂವ೯.

3ನೆಯೆ ಶತಮಾನದ ಹೊತ್ತಿಗೆ ಹೊಲೆದ ಚಮ೯ಪತ್ರ ಪುಸ್ತಕಗಳು ಮ್ಶೆದಳೆದವು.ಬ್ಯಾಬಿಲೋನಿಯ ಮತ್ತು ಆಸ್ಸೀರಿಯ ನಿವಾಸಿಗಳು ಜೇಡಿಮಣ್ಣಿನ ಫಲಕಗಳನ್ನು ಉಪಯೊಳಿಗಿಸಿದರೆ ಮಧ್ಯಯುಗದ ಪಾದ್ರಿಗಳು ಕಟ್ಟಿಗೆಯ ಚೌಕಾಕೃತಿಯ ಫಲಕಗಳನ್ನು ಉಪಯೋಗಿಸಿದ್ದಾರೆ. ಇದಲ್ಲದೆ ಗ್ರೀಕರು ಮತ್ತು ರೋಮನ್ನರು ಹಸ್ತಿದಂತದ ಫಲಕಗಳನ್ನು ಬರೆಯುವ ಸಾಧನಗಳನ್ನಾಗಿ ಬಳಸಿದ್ದಾರೆ. ಕಟ್ಟಿಗೆಯೆ ಫಲಕಗಳ ಒಳಮೈಯನ್ನು ಕೆತ್ತಿ.ಮೇಣವನ್ನು ತುಂಬಿ ಮೊನೆಯಾದ ಸಾಧನದಿಂದ ಅಕ್ಷರಗಳಮ್ನ ಬರೆಯುತ್ತಿದ್ದರು.ಇಂಥ ಫಲಕಗಳ ಹಿಮ್ಮಗ್ಗಲಿನಲ್ಲಿ ತಂತಿಯನ್ನು ಪೋಣಿಸಿ ಕಟ್ಟುತ್ತಿದ್ದರು. ಭಾರತೀಯು ಲೇಖನ ಸಾಮಗ್ರಿಗಳು:ಪುರಾತನ ಭಾರತೀಯ ಬರೆಹದ ಸಾಮಗ್ರಿಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಬಹುದು (1) ಶಾಶ್ವತವಾದುವು.(2) ನಶಿಸಿ ಹೋಗುವಂಥವು. ಕಲ್ಲು,ತಾಮ್ರ,ಕಬ್ಬಿಣ.ಬೆಳ್ಳಿ, ಬಂಗಾರ ಇತ್ಯಾದಿ ಮೊದಲ ಗುಂಪಿನಲ್ಲಿ ಬಂದರೆ ಎರಡನೆಯ ಗುಂಪಿನಲ್ಲಿ ಭೂರ್ಜಪತ್ರ,ತಾಡೋಲೆಗಳು,ಅರಿವೆ (ರೇಷ್ಮೆಯನ್ನು ಗಣನೆಗೆ ತೆಗೆದುಕೊಂಡರೆ) ಬರುವುವು. ರಾಜಾ,ದತ್ತಿ, ಶಾಸನ ಹಾಗೂ ಕಾಯದೆ ಕಾಗದ ಪತ್ರಗಳನ್ನು ಬರೆಯಲು ಶಾಶ್ವತ ಸಾಧನಗಳನ್ನು ಬಳಸುತ್ತಿದ್ದರು. ಜನಸಾಮಾನ್ಯರು ಎರಡನೆಯ ಭಾಗದ ಸಾಧನ ಸಾಮಗ್ರಿಗಳನ್ನು ಉಪಯೋಗಿಸುತ್ತಿದ್ದರು. ಕಲ್ಲುಬಂಡೆಯ ಮೇಲಿನ ಬರೆಹಕ್ಕೆ ಅಶೋಕನ ಕಾಲದಿಂದ ಉಳಿದು ಬಂದಿರುವ ಶಾಸನಗಳು ಸಾಕ್ಷಿಯಾಗಿವೆ. ಭಾರತೀಯರು ಮಣ್ಣಿನ ಫಲಕಗಳನ್ನು ಹೇರಳವಾಗಿ ಬಳಸಿದಂತಿಲ್ಲ.ಭಾರತೀಯ ಪ್ರಾಚ್ಯ ಸಂಶೋಧನೆ ಇಲಾಖೆಯ ನಿರ್ದೇಶಕ ಜನರಲ್ ಕನ್ನಿಂಗ್ ಹ್ಯಾಮ್ ಮೊದಲಾದ ವಿದ್ವಾಂಸರು ಬಳಕೆಯಲ್ಲಿದ್ದ ಇಂಥ ಸಾಧನಗಳನ್ನು ಶೋಧಿಸಿದ್ದರೆ. ಬುದ್ಧಸೂತ್ರದ ಅವತರಣಿಕೆಗಳನ್ನು ಬರೆದ ಕೆಲವು ಫಲಕಗಳನ್ನು ಉತ್ತರ ಪ್ರದೇಶದಲ್ಲಿ ಹೋ ಎಂಬ ವಿದ್ವಾರಿಸ ಶೋಧಿಸಿದ್ದಾನೆ. ಕಟ್ಟಿಗೆಯ ಹಲಗೆಗಳನ್ನು ಭಾರತೀಯರು ಸುಮಾರು ಬುದ್ಧನ ಕಾಲದಿಂದಲೂ ಬಳಸಿದ್ದಾಗಿ ಕಂಡುಬರುತ್ತದೆ.

ಬೌದ್ಧಗ್ರಂಥಗಳಾದ ವಿನಯಪಿಟಕ ಮತ್ತು ಜಾತಕಗಳಲ್ಲಿ ಇದರ ಬಗ್ಗೆ ಅನೇಕ ಉಲ್ಲೇಖಗಳಿವೆ.ಅಕ್ಷರಾಭ್ಯಾಸಗಳಿಗೆ ಇಂಥ ಹಲಗೆಗಳ ಮೇಲೆ ಮೊದಲು ಪಾಠ ಕೊಡುತ್ತಿದ್ದರು.ಓಲೆಗಳನ್ನು ಬರೆಯಲು ಈ ಹಲಗೆಗಳನ್ನು ಉಪಯೋಗಿಸುತ್ತಿದ್ದರೆಂಬುದಕ್ಕೆ ಆಕ್ಸ್ ಫಡ್೯ನಲ್ಲಿರುವ ಬೋಡ್ಲಿಯನ್ ಗ್ರಂಥಾಲಯದಲ್ಲಿ ಒಂದು ನಿದರ್ಶನ ದೊರೆಯುತ್ತದೆ. ಬೆಳ್ಳಿ ಮತ್ತು ಬ೦ಗಾರ ವಿಫುಲವಾಗಿ ಸಿಕ್ಕುತ್ತಿದ್ದರೂ ಭಾರತೀಯರು ಬರೆಯಲು ಅವನ್ನು ಹೇರಳವಾಗಿ ಬಳಸಿಲ್ಲ.ತಾಮ್ರ,ಹಿತ್ತಾಳೆ, ಕಂಚು, ಕಬ್ಬಿಣ ಮುಂತಾದ ಲೋಹಗಳನ್ನು ಹೇರಳವಾಗಿ ಬಳಸಿದ್ದಾರೆ. ಅರಸರ ಪ್ರಮುಖ ಪತ್ರವ್ಯವಹಾರ ಮತ್ತು ದತ್ತಿಗಳನ್ನು ಬರೆಯಲು ಮಾತ್ರ ಬಂಗಾರ ಮೀಸಲಾಯಿತು. ಬುದ್ಧನ ಜಾತಕ ಕಥೆಗಳಲ್ಲಿಯೂ ಇದರ ಉಲ್ಲೇಖವಿದೆ. ಬೆಳ್ಳಿಯನ್ನು ಬರೆಯಲು ಅಷ್ಟಾಗಿ ಬಳಸಿದಂತಿಲ್ಲ ದತ್ತಿ, ದಾನಧರ್ಮ, ರಾಚಾಜ್ಞೆ ಹಾಗೂ ರಾಜನ ವಬಖ್ಯ ವ್ಯವಹಾರಗಳನ್ನು ನಮೂದಿಸಲು ತಾಮ್ರವನ್ನು ಹೇರಳವಾಗಿ ಉಪಯೋಗಿಸಲಾಗಿದೆ. ತಾಮ್ರಶಾಸನಗಳು ಇಂದಿಗೂ ನೋಡಲು ಸಿಗುತ್ತವೆ. ಯುವಾನ್ ಚಾಂಗ್ ಮೆದಲಾದ ಚೀನಿ ಯುತ್ರಿಕರು ಇವುಗಳ ಬಗ್ಗೆ ಬರೆದಿದ್ದಾರೆ.ತಾಡೋಲೆಗಳಂತೆ