ಪುಟ:Mysore-University-Encyclopaedia-Vol-6-Part-16.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಾಮಕೈಗಾರಿಕೆಗಳು ಪಾಶ್ಚಾತ್ಯ ಪ್ರಭಾವಗಳು, ಯಂತ್ರತಂತ್ರದ ಆಗಮನ, ಬ್ರಿಟಿಷ್ ಆಡಳಿತ. ಅಂತಾರಾಷ್ಟ್ರೀಯ ಮಾರುಕಟ್ಟೆ ನಗರೀಕರಣ ಮೊದಲಾದ ಪ್ರಾಭಾವಗಳಿಗೆ ಸಿಕ್ಕು ಬದಲಾಗಿವೆ (ನೋಡಿ- ಗ್ರಾಮ ಸಮಾಜ) ಗ್ರಾಮಕೈಗಾರಿಕೆಗಳು : ಕೃಷಿಪ್ರಧಾನವಾದ ಗ್ತಾಮಗಳಲ್ಲಿ ರೈತರ ನಿತ್ಯಜೀವನ್ನಕ್ಕೆ ಪೂರಕವಾಗಿರುವ ಉಪಕಸಬುಗಳು ಮತ್ತು ಸಣ್ಣ ಕೈಗಾರಿಕೆಗಳು. ಭಾರತದಂಥ ಅಭಿವೃದ್ಧಿ ಶೀಲ ರಾಷ್ಟ್ರಗಳ ಅನೇಕ ಕ್ಲಿಷ್ಟ ಸಮಸೈಗಳಿಗೆ ಗ್ರಾಮ ಕೈಗಾರಿಕೆಗಳು ಉತ್ತಮ ಪರಿಹಾರಮಾರ್ಗಗಳಾಗಿವೆ. ಅಭಿವೃದ್ಧಿಶೀಲ ರಾಷ್ಟ್ರಗಳ ಬಹುಪಾಲು ಜನರು ಜೀವನೊಪಾಯಕ್ಕಾಗಿ ವ್ಯವಸಾಯವನ್ನೇ ಆಶ್ರಯಿಸುತ್ತಾರೆ. ಜನಸಂಖ್ಯೆ ಹೆಚ್ಚಿದಂತೆ ವ್ಯವಸಾಯದ ಮೇಲೆ ಜನರ ಒತ್ತಡವೂ ಹೆಚ್ಚುತ್ತದೆ. ಹೆಚ್ಚಿನ ಜನಕ್ಕೆ ಬೇರೆ ಯಾವ ಕಸಬೂ ಲಭ್ಯವಿಲ್ಲದ್ದರಿಂದ ಈ ಒತ್ತಡ ಆನಿವಾರ್ಯವಾಗುತ್ತದೆ. ಇದನ್ನು ಕಡಿಮೆ ಮಾಡಲು ಗ್ರಾಮಕೈಗಾರಿಕೆಗಳನ್ನು ಸ್ಥಾಪಿಸುವುದು ಆವಶ್ಯಕವಾಗುತ್ತದೆ. ಆಲ್ಲದೆ, ಒಂದು ಆಥಿ೯ಕತೆಯಲ್ಲಿ ಸಮತೋಲ ಆರ್ಥಿಕ ಆಭಿವೃದ್ಧಿಯನ್ನೂ ರಾಷ್ಟ್ರಿಯ ಆದಾಯದ ಸಮಾನ ಹಂಚಿಕೆಯನ್ನೂ ಸಾಧಿಸಲು. ನಗರಗಳಲ್ಲಿ ಕೈಗಾರಿಕೆಗಳ ಕೇಂದ್ರಿಕರಣವಾಗುವುದನ್ನು ತಪ್ಪಿಸಲು ಗ್ರಾಮಕೈಗಾರಿಕೆಗಳು ಸಹಕಾರಿಯಾಗಿವೆ. ಗ್ರಾಮಗಳಲ್ಲಿ ನಿರುಪಯೋಗಿಯೆನಿಸಿದ ಕಾರ್ಮಿಕ ಶಕ್ತಿಯನ್ನು ರೂಢಿಸಲು. ಗ್ರಾಮದ ಸುಪ್ತ ಬಂಡವಾಳವನ್ನು ಹೊರಕ್ಕೆ ತರಲು. ನಿರುದ್ಯೋಗಿಗಳಾದ ಜನಕ್ಕೆ ಉದ್ಯೋಗ ದೊರಕಿಸಿಕೊಡಲು ಪ್ರಾದೇಶಿಕ ಅಸಮಾನತೆಯನ್ನು ಹೊಗಲಾಡಿಸಲು ಗ್ರಾಮ ಕೈಗಾರಿಕೆಗಳು ನೆರವಾಗುತ್ತವೆ. ಗ್ರಾಮಗಳಲ್ಲಿ ಕೈಗಾರಿಕೆಗಳ ಹಾಗೂ ಇತರ ಉಪಕಸಬುಗಳ ಆಭಾವದಿಂದಾಗಿ ಗ್ರಾಮವಾಸಿಗಳು ನೆರೆಯ ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು. ವಸತಿ. ಆರೋಗ್ಯ ಮುಂತಾದ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಕೈಗಾರಿಕೆಗಳ ಸ್ಥಾಪನೆ ನೆರವಾಗುತ್ತದೆ. ಕೈಗಾರಿಕೆಗಳನ್ನು ಗ್ರಾಮಗಳಲ್ಲಿ ಸ್ಥಾಪಿಸುವುದರಿಂದ ಕಾರ್ಮಿಕ ಶಕ್ತಿಯ ಹಾಗೂ ಬಂಡವಾಳ ಸಂಘಟನೆಯ ಜೊತೆಗೆ ಗ್ರಾಮವಾಸಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯ ಪ್ರಕಾಶಕ್ಕೆ ಅತ್ಯುತ್ತಮ ಅವಕಾಶ ಒದಗುತ್ತದೆ. ವ್ಯವಸಾಯೆಕ್ಷೇತ್ರ ಎಷ್ಟೇ ಅಭಿವೃದ್ಧಿಯುದರೂ ಅದು ಒದಗಿಸುವ ಉದ್ಯೋಗಾವಕಾಶಗಳ ವ್ಯಾಪ್ತಿ ಗಣನೀಯವಾಗಿರುವುದಿಲ್ಲ ಆದ್ದರಿಂದ ಗ್ರಾಮಾಂತರ ನಿರುದ್ಯೋಗ ಮತ್ತು ಅಪೂರ್ಣ ಉದ್ಯೋಗಗಳಿಗ ಶಾಶ್ವತವಾದ ಪರಿಹಾರ ಒದಗಿಸಬೇಕಾದರೆ. ಗ್ರಾಮಾಂತರ ಕೈಗಾರಿಕೆಗಳನ್ನು ಸ್ಥಾಷಿಸಬೇಕಾಗುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲ್ಪಡುವ ಕೈಗಾರಿಕೆಗೆಳಿಂದ ವ್ಯವಸಾಯಕ್ಕೆ ತೊಡಕಾಗುವಂತಿರಬಾರದು. ಈ ಕೈಗಾರಿಕೆಗಳು ಸುಲಭವಾಗಿಯೂ ಸರಳವಾಗಿಯೂ ಇದ್ದು. ಕುಟಂಬಕ್ಕೆ ಸೇರಿದ ವ್ಯಕ್ತಿಗಳು ನಡೆಸುವಂತಿರಬೇಕು. ಕಡಿಮೆ ಬಂಡವಾಳದಲ್ಲಿ ಈ ಕೈಗಾರಿಕೆಗಳನ್ನು ಸ್ಥಾಪಿಸುವಂತಿರಬೇಕು. ಪ್ರಾದೇಶಿಕ ಸೌಲಭ್ಯಗಳು. ಕಚ್ಚಾಸಾಮಗ್ರಿಯ ಲಭ್ಯತೆ. ಮಾರುಕಟ್ಟೆಯ ಸಾಮೀಪ್ಯ ಮುಂತಾದವುಗಳ ಆಧಾರದ ಮೇಲೆ ಗ್ರಾಮ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು. ಈ ಕೈಗಾರಿಕೆಗಳು ವ್ಯವಸಾಯಕ್ಕೆ ಪೂರಕವಾಗಿರಬೇಕಾದ್ದು ಆತ್ಯಾವಶ್ಯಕ. ಅಲ್ಲಿ ಕೆಲಸವಿಲ್ಲದಾಗ ಇವು ಕೆಲಸ ಒದಗಿಸುವಂತಿರಬೇಕು. ಗ್ರಾಮಕೈಗಾರಿಕೆಗಳನ್ನು ಕೃಷಿ ಕೈಗಾರಿಕೆ. ಗುಡಿಸಿಲು ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳೆಂದು ವಿಂಗಡಿಸಬಹುದಾಗಿದೆ. ಆಹಾರದ ಕೈಗಾರಿಕೆ, ಹೆಣ್ಣು ತರಕಾರಿ, ಮಾಂಸ ಮೀನು ಮುಂತಾದವುಗಳನ್ನು ಹದಗೊಳಿಸುವಿಕೆ ಮತ್ತು ಡಬ್ಬಿಕರಣ ಉಪಾಹಾರ ತಯಾರಿಕೆ, ರೊಟ್ಟಿ ತಯಾರಿಕೆ, ಪಶು ಮತ್ತು ಕೋಳಿಗಳ ಆಹಾರ ತಯಾರಿಕೆ, ವ್ಯವಸಾಯ ಮತ್ತು ಇತರ ಕೃಷಿ ಕೈಗಾರಿಕೆಗಳಿಗೆ ಬೇಕಾದ ವಸ್ತುಗಳ ಉತ್ಪಾದನೆ. ಕೃಷಿಯಂತ್ರೋಪಕರಣಗಳ ಮತ್ತು ಕೋಳಿ ಸಾಕಣೆಗೆ ಬೇಕಾದ ಯಂತ್ರೋಪಕರಣಗಳ ತಯಾರಿಕೆ. ಕೀಟನಾಶಕಗಳ ತಯಾರಿಕೆ. ರಾಸಾಯನಿಕ ಗೊಬ್ಬರದ ತಯಾರಿಕೆ ಮುಂತಾದವು ವ್ಯವಸಾಯಕ್ಕೆ ಪೂರಕವಾದ ಹಾಗೂ ಗ್ರಾಮಪ್ರದೇಶಗಳಲ್ಲಿ ಸ್ಥಾಪಿಸಬಹುದಾದ ಕೈಗಾರಿಕೆಗಳಾಗಿವೆ. ಕೃಷಿ ಕೈಗಾರಿಕೆಗಳಲ್ಲಿ ಎರಡು ವಿಧಗಳನ್ನು ಕಾಣಬಹುದು. ಕೃಷಿಮೂಲ ವಸ್ತುಗಳನ್ನು ಕಚ್ಚಾಸಾಮಗ್ರಿಯಾಗಿ ಉಪಯೋಗಿಸುವ ಕೈಗಾರಿಕೆಗಳು (ಉದಾ; ಹಣ್ಣು ಮತ್ತು ತರಕಾರಿಗಳ ಸಂಸ್ಕರಣ. ಅಕ್ಕಿ ಮತ್ತು ಬೇಳೆ ಗಿರಣಿಗಳು). ಕೃಷಿಗೆ ಬಳಸಲಾಗುವ ಯಂತ್ರೋಪಕರಣಗಳ. ರಾಸಾಯನಿಕ ಗೊಬ್ಬರದ ಮಿಶ್ರಣ. ಟ್ರಾಕ್ಟರುಗಳ ರಿಪೇರಿ. ಕೋಳಿ ಆಹಾರ ತಯಾರಿಕೆ-ಇವು ಮತ್ತೊಂದು ವಿಧದ ಕೃಷಿ ಕೈಗಾರಿಕೆಗಳಾಗಿವೆ. ಗ್ರಾಮಕೈಗಾರಿಕೆಗಳಲ್ಲಿ ಕುಟುಂಬದ ಜನರೇ ನಡೆಸುವ ಕೈಗಾರಿಕೆಗಳನ್ನು ಗುಡಿಸಿಲು ಕೈಗಾರಿಕೆಗಳೆಂದು ಕರೆಯಲಾಗಿದೆ (ನೋಡಿ- ಗುಡಿಸಿಲು ಕೈಗಾರಿಕೆಗಳು). ಇವು ಪೂರ್ಣ ವೇಳೆಯೆ ಕೈಗಾರಿಕೆಗಳಾಗಿರಬಹುದು ಅಥವಾ ಒಪ್ಪೊತ್ತಿನ ಕೈಗಾರಿಕೆಗಳಾಗಿರಬಹುದು. ಗುಡಿಸಿಲು ಕೈಗಾರಿಕೆಗೂ ಸಣ್ಣ ಕೈಗಾರಿಕೆಗೊ ಇರುವ ವ್ಯತ್ಯಾಸವೆಂದರೆ ಸಣ್ಣ ಕೈಗಾರಿಕೆಗಳಲ್ಲಿ ಕೂಲಿಗಾಗಿ ದುಡಿಯುವ ಕಾರ್ಮಿಕರಿರುತ್ತಾರೆ. ಆವುಗಳಲ್ಲಿ ಯಂತ್ರ ಮತ್ತು ವಿದ್ಯುಚ್ಛಕ್ತಿಗಳನ್ನು ಮಿತಪ್ರಮಾಣದಲ್ಲಿ ಉಪಯೋಗಿಸಲು ಅವಕಾಶವಿದೆ. ಆದರೆ ಗುಡಿಸಿಲು ಕೈಗಾರಿಕೆಗೆ ಸಾಮಾನ್ಯವಾಗಿ ಯಂತ್ರ ಮತ್ತು ವಿದ್ಯುತ್ತಿನ ಸಹಾಯ ಇರುವುದಿಲ್ಲ (ಉದಾ: ಗೊಂಬೆಗಳ ತಯಾರಿಕೆ. ಕಸೂತಿ ಕೆಲಸ. ಬುಟ್ಟಿ ಹೆಣೆಯುವುದು). ಆಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗ್ರಾಮಕೈಗಾರಿಕೆಗಳ ಸ್ಥಾಪನೆಗೆ ಅವಕಾಶಗಳು ಹೇರಳವಾಗಿವೆ. ಗ್ರಾಮಪ್ರದೇಶಗಳ ಸೌಲಭ್ಯಗಳಿಗ ಇವು ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತವೆ. ಇವುಗಳಲ್ಲಿ ಕಡಿಮೆ ಬಂಡವಾಳಕ್ಕಿಂತ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಬಹುದು. ಏಕೆಂದರೆ ಇಲ್ಲಿ ಬ೦ಡವಾಳಕ್ಕಿ೦ತ ಶ್ರಮಕ್ಕೆ ಹೆಚ್ಚಿನ ಪ್ರಾಧಾನ್ಯ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಲಾಪಿಸುವುದರ ಮೂಲಕ ಬಂಡವಾಳದ ಕೊರತೆಯನ್ನೂ ನಿರುದ್ಯೋಗ ಸಮಸ್ಯಯನ್ನು ಪರಿಹರಿಸಬಹುದು. ಕೃಷಿಕ್ಷೇತ್ರದಲ್ಲಿ ಕಡಿಮೆ ಕೆಲಸವಿರುವ ಕಾಲದಲ್ಲಿ ಹಾಗೂ ಸಂಪೂರ್ಣವಾಗಿ ಕೆಲಸವಿಲ್ಲದಿರುವ ಕಾಲದೆಲ್ಲಿ ರೈತರನ್ನು ಉತ್ಪಾದಕ ಕಾರ್ಯಗಳಲ್ಲಿ ತೊಡಗಿಸಲೂ ಆ ಮೂಲಕ ರೈತ ಜನ ತಮ್ಮ ಆದಾಯವಮ್ನ ಹೆಚ್ಚಿಸಿಕೊಳ್ಳಲೂ ಗ್ರಾಮಕೈಗಾರಿಕೆಗಳು ನೆರವಾಗುತ್ತವೆ. ಸಣ್ಣ ಕೈಗಾರಿಕೆಗಳಿಗೆ ಕಡಿಮೆ ಬಂಡವಾಳ ಬೇಕಾಗಿರುವುದರಿಂದ ಬಂಡವಾಳವನ್ನು ಭಾರಿ ಉದ್ಯಮಗಳ ಸ್ಥಾಪನೆಗೆ ಹೆಚ್ಚು ಲಾಭದಾಯಕವಾಗಿ ಉಪಯೋಗಿಸಿಕೊಳ್ಳಬಹುದಾಗಿದೆ. ಆಭಿವೃದ್ಧಿಶೀಲ ರಾಷ್ಠ್ರಗಳಲ್ಲಿ ಬಂಡವಾಳದ ಕೊರತೆಯಿರುವುದರಿಂದಲೂ ತೀರ ಆವಶ್ಯಕವಾದ ಭಾರಿ ಉದ್ಯಮಗಳ ಸ್ಥಾಪನೆಗೆ ಬಂಡವಾಳ ಅಧಿಕ ಗಾತ್ರದಲ್ಲಿ ಬೇಕಾಗುವುದರಿಂದಲೂ ಸಣ್ಣ ಕೈಗಾರಿಕೆಗೆ ಹೆಚ್ಚಿನ ಪ್ರಾಮುಖ್ಯ ಉಂಟಾಗಿದೆ. ಗ್ರಾಮಕೈಗಾರಿಕೆಗಳಿಂದ ಗ್ರಾಮವಾಸಿಗಳಲ್ಲಿ ಉಳಿತಾಯಕ್ಕೆ ಪ್ರೋತ್ಸಾಹ ಲಭ್ಯವಾಗುತ್ತದೆ. ಗ್ರಾಮಗಳಲ್ಲಿ ಅಡಗಿರುವ ಬಂಡವಾಳ ಹೊರಕ್ಕೆ ಬರಲು ಅವಕಾಶ ದೊರೆಯುತ್ತದೆ. ಈ ಕೈಗಾರಿಕೆಗಳಿಗೆ ಹೆಚ್ಚು ನೈಪುಣ್ಯದ ಆವಶ್ಯಕತೆಯಲ್ಲ. ಭಾರಿ ಉದ್ಯಮಗಳಲ್ಲಿ ಮೇಲ್ವಿಚಾರಣೆಯ ಹಾಗೂ ಆಡಳಿತ ನಿರ್ವಹಣೆಯ ನೈಪುಣ್ಯ ಆತ್ಯಾವಶ್ಯಕ.