ಪುಟ:Mysore-University-Encyclopaedia-Vol-6-Part-16.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗ್ರೀಕ್ ನಾಟಕಗಳು (ಪ್ರಾಚೀನ)

ಡಿಥಿರ್ಯಾಂಬ್ (ಆವೇಶಕುಣಿತ) ಎಂದು ಅಂಕಿತ. ಅದರ ವಿಷಯ ಡಯೊನೈಸಸ್ಸನ ಕಷ್ಟಸುಖಮಿಶ್ರಿತ ಜೀವನದ ಘಟನಾವಳಿ. ನೃತ್ಯಮೇಳದಲ್ಲಿ ಐವತ್ತು ಮಂದಿ, ಡಯೊನೈಸಸ್ಸನ ಪರಿವಾರದವರಾದ ಸ್ಯಾಟಿರೈ ಮತ್ತು ಸೈಲಿದೈಗಳಂತೆ ವೇಷ ಧರಿಸಿ ಭಾಗವಹಿಸುತ್ತಿದ್ದರು. ಒಳ್ಳೆಯ ಗೀತೆಗಳನ್ನು ಕಟ್ಟಿಕೊಟ್ಟು ಹೆಸರುಗೊಂಡ ಏರಿಯನ್ ನಾಟ್ಯದ ಮಧ್ಯೆ ಮದ್ಯೆ ಬಳಸುವುದಕ್ಕಗಿ ಸಂಭಷಣ ಪದ್ಯ ಪಂಕ್ತಿಗಳನ್ನು ತಂದು ಸೇರಿಸಿದ. ಅದನ್ನು ನಾಟಕತೆಯ ಪ್ರಥಮ ಪ್ರವೇಶ ಎನ್ನಬಹುದು. ಆಮೇಲೆ ಬಂದ ಥೆಸ್ಟಿಸ್ ಐವತ್ತು ನರ್ತಕರ ಎದುರಿಗೆ ಒಬ್ಬ ನಟನನ್ನು (ಹೈಪೊಕ್ರಿಟಿಸ್-ಉತ್ತರ ಹೇಳುವವ) ತಂದಿರಿಸಿ, ಕಥನ ಮಾಯವಾಗಿದ್ದ ನೃತ್ಯಗೀತವನ್ನು ಕಥಾಭಿನಯಕ್ಕೆ ತಿರುಗಿಸಿ, ನಾಟಕದ ನಿಜಸ್ಥಾಪಕನಾದ. ಸಂವಾದಕ್ಕೆ ಸ್ವಲ್ಪ ಗಮನವೂ ಪ್ರಶಸ್ತಿಯೂ ದೊರಕಿದರೂ ನೃತ್ಯಗೀತ (ಕೂರಸ್, ಮೀಳಗೀತ) ತನ್ನ ಮುಖ್ಯಪ್ರಭಾವವನ್ನು ಉಳಿಸಿಕೊಂಡೇ ಇತ್ತು. ಈಸ್ಕಿಲಸ್ (ನೋಡಿ) ಎರಡನೆಯ ನಾಟಕವನ್ನು ತಂದು ಸೇರಿಸಿದ ಅನಂತರವು ಅದು ಕುಗ್ಗಲಿಲ್ಲ. ಗಂಭೀರವಾಗಲಿ ವಿನೂದವಾಗಲಿ ಲೇವಡಿಯಾಗಲಿ ಎಲ್ಲಾ ಬಗೆಯ ನಾಟಕಕ್ಕು ಕೋರಸ್ ಎಂಬ ನಾಮಧ್ಯೇಯವೇ ಬಹುಕಾಲ ಸಲ್ಲುತಿತ್ತು. ಟ್ರಾಜಡಿ ಕಾಮೆಡಿ ಸ್ಯಾಟಿರ್ ನಾಟಕಗಳ ಉಚ್ಛ್ರಾಯ ಸಮಯದಲ್ಲೂ ಕವಿಗೆ ತನ್ನ ರೂಪಕಗಳನ್ನು ಪ್ರದರ್ಶಿಸಲು ಅಪ್ಪಣೆಯೀಯುವ ರಹದಾರಿಗೆ 'ಅವನಿಗೊಂದು ಕೋರಸ್ ಕೊಟ್ಟರು' (ಹಿ ವಾಸ್ ಗಿವನ್ ಎ ಕೋರಸ್) ಎಂಬ ನಿರೂಪಣೆ ಇರುತಿತ್ತು. ಪ್ರದರ್ಶನಾಧಿಕಾರಿ ಕವಿಗೆ ನೀನು ನಿನ್ನ ಟ್ರಾಜಡಿ ಅಥವ ಕಾಮೆಡಿ ಶುರುವಾಗಲಿ ಎನ್ನುವುದರ ಬದಲು ನಿನ್ನ ಕೋರಸ್ ಪ್ರವೇಶಿಸಲಿ ಎನ್ನುತ್ತಿದ್ದ. ಈಸ್ಕಿಲಸನ ಸುಧಾರಣೆಯನ್ನು ಮುಂದುವರೆಸಿ ಸಾಫೊಕ್ಲೀಸ್ ಮೂರನೆಯ ನಟನನ್ನು ತಂದು ಕೂಡಿಸಿದ ಮೇಲೂ ನೃತ್ಯಗೀತವಿಲ್ಲದೆ ನಾಟಕ ನಡೆಯುವಂತಿರಲಿಲ್ಲ.

ಡಯೊನೈಸಸ್ ಪೂಜೆಯ ಅಂಗವಾದ ನೃತ್ಯಗೀತ ಬಹುಶಃ ಒಂದೇ ಬಗೆಯದಾಗಿರದೆ ಹಲವು ವಿಧದ ಭಾವ ಭಾವನೆಗಳನ್ನು ಪ್ರಕಟಿಸುವ ಸಾಮೂಹಿಕ ಸಾಧನವಾಗಿತ್ತು.ಕೆಲವು ವೇಳೆ ಕೊಪ, ಮರುಕ, ಭಯ, ವಿಸ್ಮಯ ಮೊದಲಾದ ಗಂಭೀರರಾಗವೂ ಮತ್ತೆ ಕೆಲವು ವೇಳೆ ಪರಿಹಾಸ ಸಮ್ಮೋದ ವಿಡ್ಂಬನ ನಗು ಗೇಲಿ ಮುಂತಾದ ಹಗುರ ರಾಗವೂ ಅದರಲ್ಲಿ ತುಂಬಿರುತ್ತಿತ್ತು. ಭಾವಗಳ ಮಿಶ್ರಣ ತೋರಿಬರುತ್ತಿದ್ದದ್ದೂ ಉಂಟು. ಕ್ರಮೇಣ ನೃತ್ಯಗೀತ ಕವಲೊಡೆದು ಮೂರು ಮುಖ್ಯ ಪ್ರಕಾರದ ನಾಟಕಗಳ ಉತ್ಪತ್ತಿಗೆ ಕಾರಣವಾಯಿತು; ಗಂಭೀರ ನಾಟಕ (ಟ್ರಾಜಡಿ), ಹರ್ಷ ನಾಟಕ (ಕಾಮೆಡಿ), ಮಿಶ್ರ ನಾಟಕ (ಸ್ಯಾಟಿರ್ ಪ್ಲೇ). ಅವು ಮೂರಕ್ಕೂ ತಮ್ಮತಮ್ಮದೇ ಆದ ವಿಕಾಸ, ಚರಿತ್ರೆ, ಸಾರ್ಥಕತೆ ಒದಗಿಬಂದದ್ದು ನ್ಯಾಯವೇ.

1) ಗಂಭೀರನಾಟಕ; ಟ್ರಾಜದಡಿ ಅರ್ಥಾತ್ ಗ್ರೀಕ್ ಭಾಷೆಯ 'ಟ್ರ್ಯಾಜಡಿಯ' ಬಂದದ್ದು ಅದೇ ಭಾಷೆಯ ಟ್ರ್ಯಾಗಡಾಯ್ ಎಂಬ ಪದದಿಂದ. ಟ್ರ್ಯಾಗಡಾಯ್ ಎಂದರೆ ಪ್ರಾಯಶಃ ಹೋತನಂತೆ ವೇಷ ಹಾಕಿಕೊಂಡು ಡಯೊನೈಸಸ್ಸನ ಹಿಂಬಾಲಕರಾದ ಸ್ಯಾಟಿರ್ ತಂಡ ತಾವೆಂದು ನಟಿಸುತ್ತ, ನೃತ್ಯಗೀತದಲ್ಲಿ ಭಾಗವಹಿಸುತ್ತಿದ್ದವರು; ಅಥವಾ ಒಂದು ಹೋತದ ಬಹುಮಾನಕ್ಕಾಗಿ ನರ್ತಿಸುತ್ತಿದ್ದ ಗುಂಪು; ಅಥಾವಾ ಡಯೊನೈಸಸ್ಸನ ಬಲಿಪೀಠದಲ್ಲಿ ಹೊಯ್ದು ಕೆಡವಿದ ಹೋತನ ಸುತ್ತ ಭಯಭಕ್ತಿಯಿಂದ ನರ್ತಿಸುತ್ತಿದ್ದವರು. ಹೀಗೇ ಎಂದು ಹೇಳುವುದು ಸಾಧ್ಯವಿಲ್ಲ. ಒಬ್ಬಿಬ್ಬರು ವಿದ್ವಾಂಸರಂತೂ ಗಂಭೀರ ನಾಟಕಕ್ಕೂ ಹೋತಕ್ಕೂ ಏನೇನೂ ಸಂಭಂಧ ಇಲ್ಲವೆಂದು ಹೇಳಿದ್ದರೆ; ಏತಕ್ಕೆಂದರೆ, ಟ್ರಾಜೆಡಿ ಎಂಬ ಪದ ಅರ್ಥವತ್ತಾಗಿ ಪ್ರಭಾವಯುಕ್ತವಾಗಿ ಬಳಕೆಗೆ ಬರುವ ಹೊತ್ತಿಗಾಗಲೆ ಏರಿಯನ್, ಥೆಸಿಸ್ಟ್ ಅಳಿದು ಹಲವು ದಶಕ ಕೆಳೆದು ಹೋಗಿದ್ದವು. ನಾಟಕದ ಸ್ವರೂಪವು ನೃತ್ಯಗೀತೆಯ ಸ್ವರೂಪವು ಬಹುಮಟ್ಟಿಗೆ ಬದಲಾಗಿ ಹೋಗಿತ್ತು. ಆ ಪದ ಪಾರಿಭಾಷಿಕ ಪದವಾಗಿ ಉಪಯೋಗ.

ಬೆಟ್ಟದ ತಪ್ಪಲಿನ ಬಯಲು ಪ್ರದೇಶವೇ ನಾಟಕಾಲಯದ ಜಾಗ. ಅಲ್ಲಿ ಕುದುರೆಲಾಳದ ಆಕಾರದ ಸ್ಥಳವನ್ನು ಅಣೆಮಾಡಿ, ಮಧ್ಯದಲ್ಲಿ ನೃತ್ಯಮೇಳದ ವರ್ತುಳವನ್ನು ಗುರುತಿಸಿ, ಅದರ ನಡುವೆ ಡಯೊನೈಸಸ್ಸನ ವೇದಿಕೆಯನ್ನು ನಿರ್ಮಿಸಲಾಗುತ್ತಿತ್ತು. ಮೇಳದವರ ಸಂಖ್ಯೆಯನ್ನು ಐವತ್ತರಿಂದ ಹನ್ನೆರಡಕ್ಕೆ ಈಸ್ಕಿಲಸ್ ಇಳಿಸಿದ. ಸಾಘೊಕ್ಲೀಸ್ ಹದಿನೈದಕ್ಕೆ ಹೆರಿಸಿದ. ಅವರನ್ನು ಚಚ್ಜೌಕ ಕ್ರಮದಲ್ಲಿ ನಿಲ್ಲಿಸುವ ಏರ್ಪಾಡಿತ್ತು. ಅವರು ನರ್ತಿಸುತ್ತ ಪ್ರವೇಶಿಸಿದೊಡನೆ ನಾಟಕದ ಪ್ರಾರಂಭ ಕೊನೆಯಲ್ಲಿ ಅವರು ನರ್ತಿಸುತ್ತ ಕಣ್ಮರೆಯಾಗುವುದೇ ನಾಟಕದ ಅಂತ್ಯ. ಅವರ ಗೀತನಾಟ್ಯ ಆಮೇಲೆ ಚಿಕ್ಕ ನೇಪಥ್ಯದ ಮೇಲೆ ಪಾತ್ರಗಳ ಸಂವಾದ, ಪುನಃ ಗೀತನಾಟ್ಯ, ಅನಂತರ ಸಂವಾದ ಹೀಗಿರುತ್ತಿತ್ತು ನಾಟಕದ ಬೆಳವಣಿಗೆ.ಗೀತವೂ ನೃತ್ಯವೂ ನಾನಾ ಭೇಧಗಳಿಂದ ಕೂಡಿರುತ್ತಿತ್ತು.

ಸುಮಾರು ಹತ್ತು ಹದಿನೈದು ಸಾವಿರ ಮಂದಿ ಪ್ರೇಕ್ಷಕರಾಗಿ ಕುಳ್ಳಿರುತ್ತಿದ್ದರು; ಯಾವ ಶುಲ್ಕವನ್ನೂ ಅವರು ಕೊಡಬೇಕಾದ್ದಿರಲಿಲ್ಲ. ಮೇಳದವರಿಗೂ ನಟರಿಗೂ ತಕ್ಕ ತರಬೇತು ಕೊಡುವುದು ಕವಿಯ ಜವಾಬ್ದಾರಿ; ಆಗೊಮ್ಮೆ ಈಗೊಮ್ಮೆ ಕವಿ ತನ್ನ ನಾಟಕದಲ್ಲಿ ತಾನೇ ಒಂದು ಪಾತ್ರವಹಿಸುತ್ತಿದ್ದ. ನಟರಿಗೆ ಗೊತ್ತಾದ ವೇತನ ಆಡಳಿತವರ್ಗದವರಿಂದ ಬಟವಾಡೆಯಾಗುತ್ತಿತ್ತು. ರಂಗಸಜ್ಜು, ನಟರ ವೇಷಭೂಶ್ಣ ಮುಂತಾದ ಪರಿಕರದ ಖರ್ಚನ್ನು ಚುನಾಯಿತ ಧನವಂತ ಹೊರುತ್ತಿದ್ದ. ನಾಟಕಕಾರರಲ್ಲಿ ಮೂವರನ್ನು ಆರಿಸಿಕೊಂಡು, ಅವರಲ್ಲಿ ಒಬ್ಬೊಬ್ಬನಿಂದಲೂ ಮೂರು ಗಂಭೀರ ನಾಟಕ ಮತ್ತು ಒಂದು ಮಿಶ್ರ ನಾಟಕ, ಹೀಗೆ ಒಟ್ಟು ನಾಲ್ಕರ ಕಟ್ಟು (ಟೆಟ್ರಾಲಜಿ) ಸಿದ್ಧವಾಗುವಂತೆ ಮಾಡಿ ಅಧಿಕಾರ ಸಂಪುಟ ಒಂದು ಸ್ಪರ್ಧೆ ಹೂಡುತ್ತಿತ್ತು ಗೆದ್ದವನಿಗೂ ಧನವಂತನಿಗೂ ಕಿರೀಟದ ಬಹುಮಾನ. ನಟರು ಮೊಗವಾಡ, ರಜಾಯಿನಂಥ ಬಟ್ಟೆಯ ನಿಲುವಂಗಿ, ತಲೆಯ ಮೇಲೆ ಒಂದು ಕಿರೀಟ, ಕಾಲಿಗೆ ಮರದ ದಪ್ಪ ಅಟ್ಟೆಯ ದೊಡ್ಡ ಬೂಟು-ಇವುಗಳಿಂದ ಅಲಂಕೃತರಾಗಿ ಸುಮಾರು ಆರುವರೆ ಏಳು ಅಡಿ ಎತ್ತರದವರಾಗಿ ಸೌಮ್ಯ ವೈಭವದ ನಿಧಾನ ಹೆಜ್ಜೆಯಿಂದ ಪರಿಣಾಮ ಬೀರುತ್ತಿದ್ದರು. ಸ್ತ್ರೀ ಪಾತ್ರಗಳಲ್ಲೂ ಗಂಡಸರೇ. ಪರಿಚಿತವಾದ ಪುರಾಣ ಕಥಾವಳಿಯಿಂದಲೇ ನಾಟಕಕ್ಕೆ ವಿಷಯವನ್ನು ಕವಿ ತೆಗೆದುಕೊಳ್ಳಬೇಕಾಗಿತ್ತು. ಒಂದೇ ಮುಖ್ಯ ಘಟನಾವಳಿ, ಕ್ಲುಪ್ತಕಾಲದಲ್ಲೂ ಹೆಚ್ಚು ಕಡಿಮೆ ಒಂದೇ ಸ್ಥಳದಲ್ಲು ಅದು ಜರುಗಬೇಕು. ಕೆಲವೇ ಪಾತ್ರಗಳ ಸಂಭಾಷಣೆ ಇರಬೇಕು.ಘೋರ ಘಟಣೆ ರಂಗದ ಮೇಲೆ ನಡೆಯಕೂಡದು ವಾದ ವಿವಾದವೇ ಕೃತ್ಯ. ಭಾಷೆ ಛಂಧಸ್ಸುಗಳು ನಿಯಮಬದ್ಧ ಹೀಗೆ ಕಟ್ಟುಕಟ್ಟಳೆ ಇದ್ದಿತಾಗಿ ಕವಿಯ ಸ್ವಾತಂತ್ರಕ್ಕೆ ಸಾಕಷ್ಟು ಆಸ್ಪದವಿರಲಿಲ್ಲ. ಆದರೂ ಗ್ರೀಕ್ ಗಂಭೀರ ನಾಟಕ ಮಾನವ ಸ್ವಭಾವದ ಮೂಲ ಚಲನವಲನಗಳ ನಿಕಟ ಪರಿಚಯವನ್ನು ನಮಗೆ ಮೂಡಿಸುತ್ತದೆ. ಅದನ್ನು ಸರಿಗಟ್ಟುವ ಮಹಾಸಾಹಿತ್ಯ ಈಚಿನ ಯುಗಗಳಲ್ಲಿ ದಿಟವಾಗಿ ಅಪರೂಪ.