ಪುಟ:Mysore-University-Encyclopaedia-Vol-6-Part-17.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಗ್ರೀಕ್ ಸಾಹಿತ್ಯ

ಮನೋರಂಜನೆಯ ಸಾಧನೆಗಳನ್ನು ಬಳಸಿಕೊಂಡರು. ಆ ದೃಷ್ಟಿಯಿಂದಲೇ ಹಲವಾರು ಸಂತರ ಜೀವನಚರಿತ್ರೆಗಳನ್ನು ಬರೆದರು. ಇವುಗಳಲ್ಲಿ ೪ನ್ಯ ಶತಮಾನದಲ್ಲಿ ಜೀವಿಸಿದ್ದ ಈಜಿಪ್ಟಿನ ಸೇಂಟ್ ಆಂಟೊನಿಯನ್ನು ಕುರಿತ ಜೀವನ ಚರಿತ್ರೆ ತುಂಬ ಪ್ರಧ್ಯಾತವಾದುದು.

ಎಲ್ಲಕ್ಕಿಂತ ಹೆಚ್ಚಾಗಿ ಮಧ್ಯಯುಗದ ಜನರ ಆಸಕ್ತಿಯನ್ನು ಸೆಳೆದ ಸಾಹಿತ್ಯ ಪ್ರಕಾರವೆಂದರೆ ಚರಿತ್ರೆ, ಲಿಯೋ, ಮೈಕಲ್ ಸೆಲ್ಲಸ್, ಆನಾಕಾಮ್ ನೀನಾ ಮುಂತಾದ ಬೈಜಾಂಟಿಯನ್ ಇತಿಹಾಸಕಾರ್ಱರು ಪುರಾತನ ಗ್ರೀಸಿನ ತ್ಯೋಸಿಡಿಡೀಸ್ ಮುಂತಾದವರಿಂದಲೇ ಸ್ಫೂರ್ತಿ ಪಡೆದು ಕ್ರಾನಿಕಲ್ಸ್ ಎಂಬ ಒಂದು ವಿಶಿಷ್ಟ ರೀತಿಯ ಐತಿಹಾಸಿಕ ವೃತ್ತಾಂತಗಳನ್ನು ಬರೆದರು. ಸುಶಿಕ್ಷಿತ ಸಮುದಾಯದ ಸಲುವಾಗಿ ಬರೆದ ಈ ಶಸ್ತ್ರೀಯ ಆಕರಗ್ರಂಥಗಳು ಹೆಚ್ಚು ಮಾನ್ಯತೆ ಪಡೆದುವು. ಮಧ್ಯಯುಗದ ಬೈಜಾಂಟಿಯನ್ ಸಾಹಿತ್ಯದಲ್ಲಿ ಡೈಜೀನಸ್ ಆಕ್ರಿಟಾಸ್ ಎಂಬ ಕಥನಕವನ ತುಂಬ ಜನಪ್ರಿಯವಾಯಿತು. ಎಪಿಗ್ರಾಮ್ ಎಂಬ ವಿಶಿಷ್ಟರೀತಿಹ ಕಾವ್ಯರಚನೆ ಆ ಯುಗದ ಲೌಕಿಕ ಸಾಹಿತ್ಯದ ಸಾಹಿತ್ಯದ ಕೊಡುಗೆ. ಇವು ಗ್ರೀಕ್ ಅಭಿಜಾತ್ಱ ಛಂದಸ್ಸಿನಲ್ಲಿ ರಚಿತವಾದ ಭಾವಗೀತಾತ್ಮಕ ಪ್ರೇಮಕವನಗಳು. ೧೦ನೆಯ ಶತಮಾನದ ಜಾನ್ ಜಿಯೋಮಿಟ್ರಿಯನ ರಚ್ಚನೆಗಳು ಇದಕ್ಕೆ ಉತ್ತಮ ನಿದರ್ಶನವಾಗಿವೆ. ಬೈಜಾಂಟಿಯನ್ ಯುಗದ ಫ಼್ರಾಜ್ಯಾಡಳಿತಕ್ಕೆ ಸಂಬಂಧಿಸಿದ ದಸ್ತಾವೇಜುಗಳು ಆ ಕಾಲದಲ್ಲಿ ಗದ್ಯಶೈಲಿ ಹೇಗೆ ವಿಕಾಸವಾಯಿತೆಂಬುದಕ್ಕೆ ಮುಖ್ಯ ನಿದರ್ಶನವಾಗಿವೆ.

ಆಧುನಿಕ ಗ್ರೀಕ್ ಸಾಹಿತ್ಯ: ಜನ ಆಡುವ ಜೀವಂತ ಭಾಶೆಯಲ್ಲಿಯ ಕೃತಿಗಳನ್ನೂ ಅಭಿಜಾತ ಯುಗದ ಜಾನಪದ ಶೈಲಿಯ ಜಾನಪದ ಶೈಲಿಯ ಕೃತಿಗಳನ್ನೂ ಸೇರಿಸಿಕೊಣಂಡು ಆಧುನಿಕ ಗ್ರೀಕ್ ಸಾಹಿತ್ಯ ಎಂದು ಕರೆಯುವ ವಾಡಿಕೆ. ಜಾನಪದ ಸಾಹಿತ್ಯ ಎಂದು ಕರೆಯುವ ವಾಡಿಕೆ. ಜಾನಪದ ಮುಖ್ಯವಾಗಿ ಕಾವ್ಯಾತ್ಮಕವಾಗಿದ್ದು, ೧೯ನೆಯ ಶತಮಾನದ ವರೆಗಿನ ಬೈಜಾಂಟಿಯನ್ ಸಾಹಿತ್ಯ ಅಭಿಜಾತ ಶೈಲಿಯ ಅನುಕರಣೆಯಾಗಿದ್ದುದರಿಂದ ಬಹುಕಾಲ ಗದ್ಯಶೈಲಿಯೆಂಬುದೇ ಬಳಕೆಗೆ ಬರಲಿಲ್ಲ.

೧. ಪುರಾತನ ಅಭಿಜಾತ ಯುಗದಿಂದಲೂ ಬೆಳೆದು ಬಂದ ಜಾನಪದ ಕಾವ್ಯ. ಇದು ಇಂದಿಗೂ ವಿಶೇಷ ಪ್ರಭಾವಯುತವಾಗಿ ಉಳಿದುಕೊಂಡಿದೆ. ೨. ಪ್ರಶ. ೧೩ನೆಯ ಶತಮಾನದಿಂದ ೧೮ನೆಯ ಶತಮಾನದ ವಎಗಿನ ಅವಧಿಯಲ್ಲಿ ಗ್ರೀಕ್ ಸಂಸ್ಕೃತಿ ಫ್ರೆಂಚ್ ಹಾಗೂ ಇಟಾಲಿಯನ್ ಸಂಸ್ಕೃತಿಗಳೊಂದಿಗೆ ಸಂಯೋಗವಾದಾಗ ರಚಿತವಾದ ಶಿಷ್ಟಕಾವ್ಯ. ೩. ೧೮ನೆಯ ಶತಮಾನದಿಂದ ೨೦ನೆಯ ಶತಮಾನದವರೆಗಿನ ಆಧುನಿಕ ಗ್ರೀಸಿನ ಶಿಷ್ಟ ಸಾಹಿತ್ಯ.

೧) ಜನಪದ ಕಾವ್ಯ : ಗ್ರೀಕ್ ಭಾಷೆ, ಜಾನಪದ ಕಾವ್ಯಶೈಲಿ ಎರಡೂ ಗ್ರೀಕ್ ಸಂಸ್ಕೃತಿಯ ಪ್ರಮುಖ ಅಂಶಗಳಾಗಿವೆ. ಗ್ರೀಸಿನ ಜಾನಪದ ಕಾವ್ಯ ವಸ್ತುತಃ ಕ್ರೈಸ್ತಪೂರ್ವಯುಗದ ಪೇಗನ್ ಜೀವನವನ್ನೇ ಚಿತ್ರಿಸುತ್ತದೆ. ಯೌವನಸಹಜವಾದ ಜೀವನಾಸಕ್ತಿ, ಮಾನವ ಪ್ರೇಮ, ಪ್ರಕೃತಿಯುತ್ತ ಒಲುಮೆ, ಜೀವನದ ಕಷ್ಟಕಾರ್ಪಣ್ಯಗಳನ್ನು ಕುರಿತ ವ್ಯಥೆ, ಸತ್ತ ಮೇಲೆ ಆತ್ಮ ಅಧೋಲೋಕದ ಕತ್ತಲೆಯಲ್ಲಿ ಕರಗಿ ವಿಲೀನವಾಗುವುದೆಂಬ ನಂಬಿಕೆ-ಇವು ಗ್ರೀಕ್ ಜಾನಪದ ಕಾವ್ಯದ ಪ್ರಮುಖ ಅಂಶಗಳು. ಇವು ಅಭಿಜಾತ ಯುಗಧರ್ಮವನ್ನೇ ಪಡಿಮೂಡಿಸುವಂತೆ ಕಾಣುವ ಗುಣಲಕ್ಷಣಗಳು. ಈ ಕವನಗಳ ಕಾಲಜ್ನಿರ್ಣಯ ತೀರ ಕಷ್ಟ ಇವು ಬಹುತೇಕ ಮಾತ್ರಾಗಣದ ರಾಜಕೀಯ ಛಂದಸ್ಸಿನಲ್ಲಿವೆ-ಆರನೆಯ ಶತಮಾನದಿಂದಲೂ ಬೈಜಾಂಟಿಯನ್ ಕವಿಗಳು ರಾಜಕೀಯ ವಸ್ತುವನ್ನುಳ್ಳ ಪ್ರಶಸ್ತಿ, ಪ್ರತಿಭಟನೆ, ವಿಡಂಬನೆಗಳನ್ನು ಈ ಛಂದಸ್ಸಿನಲ್ಲೇ ಬರೆಯುತ್ತಿದ್ದುದರಿಂದ ಈ ಹೆಸರು ಬಂತು. ಪುರಾನೇತಿಹಾಸಫ಼್ದ ನಾಯಕರನ್ನು ಕುರಿತ, ಕಾನ್ ಸ್ಟಾಂಟಿನೋಪಲ್ ಪರನ ಮುಂತಾದ ಕಥನಕವನಗಳು ೯ನೆಯ ಶತಮಾನಕ್ಕಿಂತ ಈಚೆನವು. ಇವು ಆಯಾ ಕಾಲದ ಸಮಾಜಗಳನ್ನು ಯಥಾವತ್ತಾಗಿ ಚಿತ್ರಿಸುವುದರಿಂದ ಜನರ ಆಸಕ್ತಿಯನ್ನು ಅರಳಿಸಿ ಬಹುಬೇಗ ಜನಪ್ರಿಯವಾದುವು.

೨) ಶಿಷ್ಟಕಾವ್ಯ : ಗ್ರೀಕ್ ಮಾತಾಡುವ ಜನರಿಗೆ ಫ್ರೆಂಚ್ ಸಂಸ್ಕೃತಿಯೊಂದಿಗೆ ಹೆಚ್ಚು ಸಂಪರ್ಕ ಬೆಳೆದದ್ದು ಯುರೋಪಿನ ಧರ್ಮ ಯುದ್ಧಗಳ (ಕ್ರೂಸೇಡ್ಸ್) ಕಾಲದಲ್ಲಿ ಮಧ್ಯಯುಗದ ಬೈಜಾಂಟಿಯಮ್ ನಲ್ಲಿ ರೊಮ್ಯಾಂಟಿಕ್ ಸಂಪ್ರದಾಯದ ಹಿನ್ನೆಲೆಯಲ್ಲಿ ಹಲವು ಕಥಾನಕಗಳು ಹುಟ್ಟಿದುವು. ಜನಸಾಮಾನ್ಯರನ್ನು ರಂಜಿಸಲೆಂದು ಶಿಷ್ಟಕವಿಗಳೇ ಇವನ್ನು ರಚಿಸುತ್ತಿದ್ದುದರಿಂದ ಅವರು ಪ್ರೇಮ, ಸಾಹಸ, ಅದ್ಭುತ ಘಟನೆಗಳು ಮುಂತಾದ ವಸ್ತುಗಳನ್ನೇ ಆರಿಸಿಕೊಂಡರು. ಆದರೆ ಇವು ಬಹುಮಟ್ಟಿಗೆ ಫೆಂಚ್ ರೊಮಾನ್ಸ್ ಗಳನ್ನೇ ಅನುಕರಿಸುವುದರಿಂದ ನೀರಸವೆನಿಸಿದುವು. ಗ್ರೀಕ್ ಸಂಸ್ದೃತಿಗೆ ಫ್ರಾನ್ಸ್ ಹಾಗೂ ಇಟಲಿಯ ನೈಜ ಸಂಪರ್ಕವುಂಟಾದದ್ದು (ನಾಲ್ಕು ಶತಮಾನಗಳ ಕಾಲ್ ಅವೆನ್ನಿಸ್ಸಿನ ಆಕ್ರಮಣಕ್ಕೆ ಒಳಗಾಗಿದ್ದ) ಕ್ರೀಟ್ ದ್ವೀಪದಲ್ಲಿ. ಯುರೋಪಿನ ಸಂಸ್ಕ್ರುತಿಯನ್ನು ಸಮನ್ವಯಗೊಳೊಸಿಕೊಂಡ ಕ್ರೀಟ್ ಪ್ರದೇಶದ ಮಧ್ಯಮ ವರ್ಗದ ಸಮಾಜವ್ವೇ ಹೊಸ ಸಾಹಿತ್ಯದ ಆವಿಷ್ಕಾರಕ್ಕೆ ಕಾರಣವಾಯಿತು. ಕ್ರಮೇಣ ಅಲ್ಲಿಯ ಸಾಹಿತಿಗಳು ಇಟಲಿಯ ಸಾಹಿತ್ಯದಿಂದ ಸ್ಫೂರ್ತಿ ಪಡೆದು ಗಂಭೀರ ಹಾಗೂ ವಿನೋದ ನಾಟಕಗಳನ್ನು ಬರೆದರು. ಗ್ರಾಮೀಣ ಜೀವನ ಹಾಗೂ ಐತಿಹಾಸಿಕ ವಸ್ತುಗಳ ಆಧಾರದ ಮೇಲೆ ಕ್ರೀಟನ್ ಉಪಭಾಷೆಗಳಲ್ಲಿ ನಾಟಕಗಳನ್ನು ರಚಿಸಲಾಯಿತು. ಅವುಗಳಲ್ಲಿ ಮುಖ್ಯವಾಗಿ ಹಾರ್ಟ್ಯಾಟ್ಸೆಸ್ ಬರೆದ ಇರೋಫಿಲ್ ಎಂಬ ಗಂಭೀರ ನಾಟಕ ಮತ್ತು ಅಜ್ಞಾನ ಕವಿ ವಿರಚಿಗ್ತ ಯಿಪಾರಿಸ್ ಎಂಬ ಗ್ರಾಮೀಣ ವಿನೋದ ನಾಟಕ ಜೀವಂತ ಕೃತಿಗಳಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ, ೧೬೬೫ರಲ್ಲಿ ಕಾರ್ನರೋಸ್ ಬರೆದ ಏಬ್ರಾಹಿಮ್ಸ್ ಸ್ಯಾಕ್ರಿಫೈಸ್ ತುಂಬ ಪ್ರ್ಸಿದ್ಧ ಕೃತಿ. ಇದರಲ್ಲಿ ಮಧ್ಯಯುಗದ ಮಿಸ್ಟರಿ ನಾಟಕವನ್ನು ಪುನರುಜ್ಜೀವನ ಯುಗದ ಮಾನವತಾ ಧರ್ಮಕ್ಕನುಸಾರವಾಗಿ ಅಳವಡಿಸಿಕೊಳ್ಳಲಾಗಿದೆ. ಕಾರ್ನರೋಸ್ ನ ರೋಟಾಕ್ರೀಟಾಸ್ ಎಂಬ ಕಥನಕವನವಂತೂ ಗ್ರೀಕ್ ಭಾಷೆಯಲ್ಲಿ ಅತ್ಯಂತ ಜನಪ್ರಿಯ ಕೃತಿ. ಇದರಲ್ಲಿ ಮಧ್ಯಯುಗದ ಅದ್ಭುತ ಪ್ರೇಮಕಥೆಯೊಂದನ್ನು ಆಧುನಿಕ ಮಾನವೀಯ ಹಾಗೂ ಯಥಾರ್ಥ ಜೀವನ ರುಚಿಗೆ ಒಪ್ಪುವಂತೆ ಚಿತ್ರಿಸಿದ್ದಾನೆ.

ಇಷ್ಟೆಲ್ಲ್ ಹೇಳಿದರೂ ಕ್ರೀಟನ್ ಸಾಹಿತ್ಯದ ಉಜ್ವಲ ಪುನರುಜ್ಜೀವನ ಕೇವಲ ೭೦ ವರ್ಷಗಳ ಅವಧಿಗೆ ಮಾತ್ರ ಸೀಮಿತವಾಯಿತೆಂಬದನ್ನು ಮರೆಯಲಾಗದು. ೧೬೬೯ರಲ್ಲಿ ಕ್ರೀಟ್ ದ್ವೀಪ ತುರ್ಕಿಯ ದೈವಶವಾದಾಗ ಅಲ್ಲಿಯ ಸಾಹಿತ್ಯದ ಉತ್ಕರ್ಷ ಕೊನೆಯಾಯಿತು. ಇದರ ಫಲವಾಗಿ ಗ್ರೀಕ್ ಸಂಸ್ಕೃತಿ ತನ್ನ ಪ್ರತ್ಯೇಕತೆಯನ್ನು ಬಿಟ್ಟು ಸಮಗ್ರ ಯುರೋಪಿನ ಸಂಪ್ರದಾಯದ ಪ್ರವಾಹವನ್ನು ಸೇರುವಂತಾಯಿತು. ಗ್ರೀಕ್ ಭಾಷೆ ಹಲವು ಕಡೆಗಳಿಂದ ಬೇರೆ ಬೇರೆ ಪ್ರಭಾವಗಳನ್ನು ಮೈಗೂಡಿಸಿಕೊಂಡು ಶ್ರೀಮಂತವಾಯಿರು. ಕಾವ್ಯಾತ್ಮಕವಾದ ಆಧುನಿಕ ಶೈಲಿಯ ನಿರ್ಮಾಣಕ್ಕೂ ಪ್ರೇರಣೆ ಸಿಕ್ಕಿದಂತಾಯಿತು. ಕ್ರೀಟನ್ ಸಂಸ್ಕೃತಿಯ ಸಮನ್ವಯ ಲಕ್ಷಣಗಳು ಹೇಗೆ ಹೊಸ ಸಾಹಿತ್ಯ ನಿರ್ಮಾಣಕ್ಕೆ ಕಾರಣವಾದವೆಂಬ ಅಂಶವನ್ನು ೧೯ನೆಯ ಶತಮಾನದಲ್ಲಿ ನೋಡಬಹುದು.

ಆದರೆ ಅದಕ್ಕೆ ಪೂರ್ವಭಾವಿಯಾಗಿ ಕೆಲವು ಅಂಶಗಳನ್ನು ಗಮನಿಸಬೇಕು. ೧೮ನೆಯ ಶತಮಾನ ಗ್ರೀಕ್ ಸಾಹಿತ್ಯದಲ್ಲಿ ತೀರ ಶುಷ್ಕವಾದ ಕಾಲ. ಕೆಲವು ಜಾನಪದ ಕವನಗಳನ್ನುಳಿದು ಗಮನಾರ್ಹ ಸಾಹಿತ್ಯವೇ ಹೊಮ್ಮಲಿಲ್ಲವೆನ್ನಬಹುದು. ಆದರೆ ಆ ಶತಮಾನದ ಉತ್ತರಾರ್ಧದಲ್ಲಿ ಭಾಷೆಗೆ ಸಂಬಂಧಿಸಿದ ಒಂದು ಸ್ವಾರಸ್ಯ ಆಂದೋಳನವುಂಟಾಯಿತು. ಗ್ರೀಕ್ ದೇಶ ತನ್ನ ಸ್ವಾಂತಂತ್ರ್ಯಕ್ಕಾಗಿ ಹೋರಾಟ ಪ್ರಾರಂಬಿಸಿದಾಗ ಯಾವುದು ದೇಶಭಾಷೆಯಾಗಬೇಕೆಂಬ ಬಗೆಗೆ ಪ್ರಬಲವಾದ ಚಳವಳಿ ಪ್ರಾರಂಭವಾಯಿತು. ಸುಧಿಕ್ಷಿತ ಯುರೋಪಿಯನ್ ಪಂಗಡದವರು ಕ್ಲಾಸಿಕಲ್ ಗ್ರೀಕ್ ಭಾಷೆಯನ್ನು ರೂಢಿಸಿಕೊಂಡು ಆದರಿಂದ ಸ್ವಾತಂತ್ರ್ಯ ಸಮರಕ್ಕೆ ಸ್ಫೂರ್ತಿ ಪಡೆಯಬೇಕೆಂದು ವಾದಿಸಿದರು. ಆದರೆ ಇನ್ನು ಕೆಲವರಿಗೆ, ಚರ್ಚುಗಳಲ್ಲಿ ಬಳಸುತ್ತಿದ್ದ ಫಾನೆರಿಯಟ್ ಎಂಬ ಬೈಜಾಂಟಿಯನ್ ಪರಿಶುದ್ಧ ಭಾಶೆಯಲ್ಲಿ ಆಸಕ್ತಿ ಹುಟ್ಟಿತು.

ಈ ಎರಡು ವಿರೋಧ ಪಂಗಡಗಳ ನಡುವೆ ಸಾಮರಸ್ಯ ಸಾಧಿಸಹೊರಟವರಲ್ಲಿ ಆಡಮ್ಯಾಷಿಯೋಸ್ ಕೋರೆ ಮುಖ್ಯನಾದವ. ಆದರೆ ಅಭಿಜಾತ ಗ್ರೀಕ್ ಸಾಹಿತ್ಯದಲ್ಲೇ ಅವನಿಗೆ ಹೆಚ್ಚು ಆಸಕ್ತಿಯಿದ್ದುದರಿಂದ ಜೀವತವಾದ ಅಭಿವ್ಯಕ್ತಿಯನ್ನು ರೂಪಿಸುವುದು ಅವನಿಂದ್ ಅಸಾಧ್ಯವಾಗಲಿಲ್ಲ. ಅವನಿಂದ ರೂಪಿತವಾದ ಪರಿಷ್ಕೃತ ಶಿಷ್ಟ ಭಾಷೆ ಸಾಮಾನ್ಯರಿಗೆ ಎಟುಕಲಿಲ್ಲ. ಇಟಲಿಯ ಕ್ಲಾಸಿಕಲ್ ಕಾವ್ಯಗಳಿಂದ ಪ್ರೇರಣೆ ಪಡೆದು ಆಂಡ್ರಿಯಾಸ್ ಕ್ಯಾಲ್ಟೊಸ್ ಅತಿಕೃತಕ ಪ್ರಗಾಥಗಳನ್ನು ಬರೆದ. ಸಾಹಿತ್ಯದ ಜೀವಾಳವನ್ನು ಅರ್ಥಮಾಡಿಕೊಂಡು ಬರೆದ ಆಯೋನಿಯನ್ ದ್ವೀಪದ ಸಾಹಿತಿಗಳು ಮಾತ್ರಗಟ್ಟಿ ಭದ್ರ ಕೃತಿಗಳನ್ನು ರಚಿಸಿದರು. ಆಯೋನ್ಸ್ ವಿಲರಾನ್ (೧೭೭೧-೧೮೨೩) ರೊಮೈಕಾಗ್ಲೋಸಾ ಎಂಬ ಗ್ರಂಥಬರೆದು ಜಾನಪದ ಗ್ರೀಕ್ ಶೈಲಿಯ ಮಹತ್ತ್ವವನ್ನು ಎತ್ತಿಹಿಡಿದ. ಆತ ಜಾನಪದ ಶೈಲಿಯಲ್ಲಿ ಬರೆದ ಕವನಗಳು ನೀರಸವಾಗಿದ್ದರೂ ಅವು ಮುಮ್ದಿನ ಕವಿಗಳಿಗೆ ಸ್ಫೂರ್ತಿ ನೀಡಿವೆ. ಡಯೊನೈಸಸ್ ಸಾಲೋಮಾಸ್ ಆಧುನಿಕ ಗ್ರೀಸಿನ ಅತ್ಯಂತ ಶೇಷ್ಠ ಕವಿ. ಅಯೋನಿಯನ್ ಜನಪದ ಕಥನಕವನಗಳಿಂದ ಸ್ಫೂರ್ತಿ ಪಡೆದು ಆ ಶೈಲಿಯಲ್ಲಿ ಆತ ಸೊಗಸಾದ ಕವನಗಳನ್ನು ಬರೆದಿದ್ದಾನೆ. ಇವನ ಓಡ್ ಟು ಲಿಬರ್ಟಿ ಎಂಬ ಕವಾವನ್ನು ಸಂಗೀತಕ್ಕೆ ಅಳವಡಿಸಿ ಗ್ರೀಸಿನ ರಾಷ್ಟ್ರಹೀತೆಯಾಗಿ ಹಾಡುತ್ತಾರೆ. ಇವನು ಮಾಡಿದ ಸಾಹಿತ್ಯಕೃಷಿಯಿಂದಾಗಿ ಗ್ರೀಸ್ ದೇಷ ಮುಂದಿನ ಪೀಳಿಗೆಯ ಜೆಯಾನಿಸ್ ಸೈಕಾರಿಸರಂಥ ಶೇಷ್ಠ ಕವಿಗಳನ್ನು ಗ್ರೀಸ್ ದೇಶ ಮುಂದಿನ ಪೀಳಿಗೆಯ ಜಿಯಾನಿಸ್ ಸೈಕಾರಿಸರಂಥ ಶೇಷ್ಠ ಕವಿಗಳನ್ನು ಕಾಣುವಂತಾಯಿತು. ಸ್ವಾತಂತ್ರೋತ್ತರ ಅಥೆನ್ಸ್ ನಲ್ಲಿ ಫಾನೆರಿಯಟ್ ಪಂಥದ ಪರಿಶುದ್ಧತಾವಾಧಿಗಳು ಹತ್ತೊಂಬತ್ತನೆಯ ಶತಮಾನದ ಕೊನೆಯ ವರೆಗೂ ಕಾವ್ಯ ಹಾಗೂ ಗದ್ಯ ಪ್ರಕಾರಗಳಲ್ಲಿ ಕೃಷಿ ನಡೆಸಿ ತಮ್ಮ ಅಸ್ತಿತ್ವವನ್ನು ಗುರುತಿಸಿದಕೊಂಡರು. ಅವರ ಕಾವ್ಯ ಸುಸ್ವನಪೂರ್ಣವಾಗಿದ್ದರೂ ಅದರಲ್ಲಿ ಸಹಜ ಸ್ಫೂರ್ತಿಯ ಕಾವಿಲ್ಲ. ಲೆಫ್ ಕಾಸಿನ ನೆವಾಸಿ ಆರಿಸ್ಟೋಟೆಲೀಸ್ ಏಲ್ಯೋರೈಟ್ಸ್ ದಕ್ಷಿಣ ಗ್ರೀಕ್ ಭಾಷೆಯಲ್ಲಿ ಸಾಲೋಮಾಸ್ ಕವಿಯ ಶೈಲಿಯನ್ನು ಚೆನ್ನಾಗಿ ದುಡಿಸಿಕೊಂಡ.

ಕಳೆದ ಶತಮಾನದ ಕೊನೆಯಲ್ಲಿ ಗ್ರೀಕ್ ಭಾಷೆ-ಸಾಹಿತ್ಯಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನುಂಟು ಮಾಡಿದವರು ಜಿಯಾನಿಸ್ ಸೈಕಾರಿಸ್ ಮತ್ತು ಕೋಸ್ಟೆಸ್