ಪುಟ:Mysore-University-Encyclopaedia-Vol-6-Part-17.pdf/೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರೀಕ್ ನ್ಯಾಯ ದೊರೆತು ಅವನ ಮುಖಾಂತರ ಅಡ್ಡಿ ಅಡಚಣೆ ದಾಟಿ ಅವಳು ಗೃಹಸ್ಥೆಯಾಗುತ್ತಾಳೆ. ಅಥವಾ ನಾಯಕಿ ಬಾಲ್ಯದಲ್ಲಿ ಅಪಹೃತಳಾಗಿ ಕೆಟ್ಟ ಹೆಂಗಸರ ಕೈಗೆ ಸಿಕ್ಕಿ ತೊಳಲಿ ಕೊನೆಗೆ ಒಬ್ಬ ಧೀರ ಬಂಧುವಿನಿಂದ ಬಿಡುಗಡೆ ಹೊಂದುತ್ತಾಳೆ. ಒಂದೆರಡು ನಾಟಕಗಳಲ್ಲಿ ಉನ್ನತ ವಂಶದವಳೋ ರಾಜಕುಮಾರಿಯಾದವಳೋ ಕಷ್ಟಗಳಿಗೆ ಪಕ್ಕಾಗಿ ಪಾರಗುತ್ತಾಳೆ.ಒಟ್ಟಿನಲ್ಲಿ ನಾಟಕ ನಗುವಿಗಿಂತಲೂ ಹೆಚ್ಚಾಗಿ ಒಳ್ಳೆಯ ರಾಗಭಾವವನ್ನು ಪ್ರಚೋದಿಸುತ್ತದೆ.ಹೊಸ ಹರ್ಷನಾಟಕಕ್ಕೆ ಯೂರೋಪಿಡೀಸನ ಇಯಾನ್ ಮೊದಲಾದ ನಾಟಕಗಳೇ ಆಕರ;ಆಧುನಿಕ ನಾಟಕ ಹೊಸ ಹರ್ಷನಾಟಕದ ಸಂತಾನ.

ಅರಿಸ್ಟಾಫನೀಸ್(೪೪೮-೩೮೫)ಸುಮಾರು ನಲವತ್ತು ನಾಟಕಗಳನ್ನು ಬರೆದ.ಹನ್ನೊಂದು ಉಳಿದಿದೆ.ಇವನ ನಾಟಕಗಳಲ್ಲಿ ಪ್ರಸಂಗಗಳು ಒಂದಕ್ಕೊಂದು ಹೊಂದಿಕೊಂಡು ವಿಕಸಿತವಾಗುವುದಿಲ್ಲ.ಇವನ ನಾಟಕಗಳಿಗಾಗಿ ನೃತ್ಯಮೇಳಗಳ ಹೆಸರುಗಳೇ ಸಾಮಾನ್ಯ ಕೆಲವು ನಾಟಕಗಳಲ್ಲಿ ಪ್ರಾಣಿಗಳು ಪಕ್ಷಿಗಳು ನೃತ್ಯಮೇಳ;ಆದುದರಿಂದಲೇ ಅವುಗಳಿಗೆ 'ದಿ ಫ್ರಾಗ್' 'ದಿ ಬರ್ಡ್ಸ್' ಮೊದಲಾದ ಹೆಸರುಗಳು.

ಪ್ರ.ಶ.ಪೂ.೪೧೩ರಲ್ಲಿ ಅಥೆನ್ಸ್ ಪೆಲೆಪೊನೀಷಿಯನ್ ಯುದ್ಧದಲ್ಲಿ ಸೋತು ಪೇಜೋವಧೆ ಅನುಭವಿಸಿತು.ಈ ಕಾಲದ ಆನಂತರ ಅರಿಸ್ಟಾಫನೀಸ್ ಬರೆದ ನಾಟಕಗಳಲ್ಲಿ ಹಿಂದಿನ ಲವಲವಿಕೆ,ಚೈತನ್ಯ,ಫ್ಯಾಂಟಸಿಯ ಪ್ರಾಧಾನ್ಯವಿಲ್ಲ.ಗ್ರೀಕ್ ನಾಟಕದ ಮಹಾಯುಗಕ್ಕೆ ತೆರೆ ಬೀಳುತ್ತಿರುವುದು ಸ್ಪಷ್ಟವಾಗಿದೆ.

ಇವರ ಮುಂಚಿನ ನಾಟಕಗಳು ಅದ್ಭುತ ಮನರಂಜನೆ ನೀಡುತ್ತವೆ.ಅರಿಸ್ಟಾಫನೀಸಿನ ಹಾಸ್ಯ ಯಾವಾಗಲೂ ಸದಭಿರುಚಿಯದು ಎಂದು ಹೇಳುವಂತ್ತಿಲ್ಲ.ನಮಗೆ ಅಸಾಧ್ಯ ಎನ್ನಿಸುವ,ತೀರ ಒರಟು ಎನ್ನಿಸುವ ಮಾತುಗಳೂ ಉಂಟು.

ಅರಿಸ್ಟಾಫನೀಸ್ ಫ್ಯಾಂಟಸಿಯನ್ನು ದೃಷ್ಟಿಗೆ ರಂಜಕವಾಗಿ ಬಳಸುತ್ತಾನೆ.ಒಂದು ಅಸಂಬದ್ಧ ಕಲ್ಪನೆಯನ್ನು(ಉದಾ:ಭೂಮಿಗೂ ಸ್ವರ್ಗಕ್ಕೂ ನಡುವೆ ಗೋಡೆಯನ್ನು ಕಟ್ಟುವುದು)ಅದು ತರ್ಕಬದ್ಧ ಎನ್ನುವಂತೆ ಬಳಸಬಲ್ಲ.ತನ್ನ ಹಾಸ್ಯನಾಟಕಗಳಲ್ಲಿ ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದ.ಅವನು ತನ್ನನ್ನು 'ಡಿಸ್ಕಲಾಯ್'(ಉಪಾಧ್ಯಾಯ)ಎಂದು ಕರೆದುಕೊಳ್ಳುತ್ತಾನೆ.ತನ್ನ ನಗರದ ಆಡಳಿತದಲ್ಲಿ,ಧೋರಣೆಯಲ್ಲಿ ಕಂಡ ಸಣ್ಣತನವನ್ನು,ದ್ವೇಷ ಅಸೂಯೆಗಳನ್ನು ಎತ್ತಿ ತೋರಿಸುತ್ತಾನೆ.ಶಾಂತಿಗಾಗಿ ಹಂಬಲಿಸುತ್ತಾನೆ.

ಯೂರೋಪಿನ ಸಾಹಿತ್ಯದ ಮೇಲೆ ಮಾತ್ರವಲ್ಲ,ಜಗತ್ತಿನ ಹಲವು ದೇಶಗಳ ಸಾಹಿತ್ಯಗಳ ಮೇಲೆ ಪ್ರಾಚೀನ ಗ್ರೀಕ್ ನಾಟಕ ಪ್ರಭಾವ ಬೀರಿದೆ.ಯುರೋಪ್ ಮತ್ತು ಅಮೆರಿಕಗಳ ನಾಟಕಕಾರರು ಮತ್ತೆ ಮತ್ತೆ ಪ್ರಾಚೀನ ಗ್ರೀಕ್ ನಾಟಕಗಳು,ಅವುಗಳಲ್ಲಿ ವ್ಯಕ್ತವಾದ ಜೀವನ ಪರಾಮರ್ಶೆ,ಇವುಗಳತ್ತ ತಿರುಗುತ್ತಾರೆ.ಕನ್ನಡ ಸಾಹಿತ್ಯದ ನವೋದಯದ ಪ್ರಾರಂಭದಲ್ಲಿ ಅಚಾರ್ಯ'ಶ್ರೀ'ಯವರು ಈಸ್ಕಿಲಸನ 'ಪಾರಸಿಕರು'ನಾಟಕವನ್ನೇ ಅನುವಾದಿಸಿದರು.'ಅಶ್ವತ್ಥಾಮ'ನಾಟಕಕ್ಕೆ ಸಾಫೊಕ್ಲೀಸನ 'ಅಯಾಸ್' ನಾಟಕವನ್ನು ಆಧಾರ ಮಾಡಿಕೊಂಡರು.ಪ್ರಾಚೀನ ಗ್ರೀಸ್ ನ ಶ್ರೇಷ್ಠ ನಾಟಕಗಳು ಮತ್ತೆ ಮತ್ತೆ ಕನ್ನಡಕ್ಕೆ ಅನುವಾದವಾಗುತ್ತಲೇ ಇವೆ.

ಗ್ರೀಕ್ ನ್ಯಾಯ: ಮೂರು ಸಾವಿರ ವರ್ಷಗಳಿಗೂ ದೀರ್ಘವಾದ ಇತಿಹಾಸ ಪಡೆದಿರುವ ಗ್ರೀಸ್ ದೇಶ ಪಾಶ್ಚಾತ್ಯ ಸಂಸ್ಕೃತಿಯ ತೊಟ್ಟಿಲು ಎಂದು ಪರಿಗಣಿತವಾಗಿದೆ.ಒಂದು ದೇಶದ ಸಂಸ್ಕೃತಿಯ ಪ್ರಮುಖ ಲಕ್ಷಣಗಳಲ್ಲಿ ಅದರ ನ್ಯಾಯಸೂತ್ರಗಳೂ ಸೇರಿರುತ್ತವೆ.ಪ್ರಪಂಚದ ಚರಿತ್ರೆಯಲ್ಲಿ ವಿಶಿಷ್ಟವಾದಂಥ ಗುರುಶಿಷ್ಯ ಪರಂಪರೆಯ-ಸಾಕ್ರಟೀಸ್,ಪ್ಲೇಟೊ,ಅರಿಸ್ಟಾಟಲ್,ಅಲೆಗ್ಸಾಂಡರ್ ಇವರ-ವೈಚಾರಿಕ ಕೊಡುಗೆಗಳಲ್ಲಿ ಗ್ರೀಸ್ ದೇಶದಲ್ಲಿದ್ದ ನ್ಯಾಯದ ರೂಪರೇಷೆಗಳನ್ನು ಕಾಣಬಹುದು,ಅವರಿಗೂ ಹಿಂದಿನ ಕಾಲದ ಗ್ರೀಕ್ ನ್ಯಾಯದ ಸ್ವರೂಪವನ್ನು ಹೋಮರನ ಇಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯಗಳಿಂದ ತಿಳಿಯಬಹುದು.ವಿಶ್ವದ ಪ್ರಮುಖ ನ್ಯಾಯವ್ಯವಸ್ಥೆಗಳಲ್ಲಿ ಗ್ರೀಕ್ ನ್ಯಾಯವೂ ಒಂದು.ಇದು ಇಂದು ಪ್ರಾಚೀನ ಕುರುಹು ಆಗಿರದೆ ಜೀವಂತ ಸಂಪ್ರದಾಯವಾಗಿದೆ.ಗ್ರೀಕ್ ನ್ಯಾಯದ ಇತಿಹಾಸವನ್ನು ಐದು ಪ್ರಮುಖ ಘಟ್ಟಗಳನ್ನಾಗಿ ಪರಿಗಣಿಸುವುದುಂಟು:೧ ಪ್ರಾಚೀನ ಯುಗ(ಗ್ರೀಸ್ ದೇಶ ರೋಮನ್ ಸಾಮ್ರಾಜ್ಯದ ಪ್ರಾಂತ್ಯವಾಗುವ ವರೆಗೆ),೨ ಹೆಲೆನಿಸ್ಟಿಕ್ ಯುಗ(ಬೈಜ಼ಾಂಟಿಯನ್ ಸಾಮ್ರಾಜ್ಯ ಸ್ಥಾಪನೆಯ ವರೆಗೆ), ೩ ಬೈಜ಼ಾಂಟಿಯನ್ ಯುಗ(ಕಾನ್ಸಟಾಂಟಿನೋಪಲ್ ನಗರದ ಪತನದ ವರೆಗೆ, ೪ ಬೈಜ಼ಾಂಟಿಯನ್ ಆನಂತರದ ಯುಗ(೧೮೨೧ರ ಗ್ರೀಕ್ ಕ್ರಾಂತಿಯ ವರೆಗೆ) ಮತ್ತು ೫ ಆಧುನಿಕ ಯುಗ (೧೮೨೧ರ ಗ್ರೀಕ್ ಸ್ವಾತಂತ್ರ್ಯ ಸಮರದಿಂದ ಈಚೆಗೆ).

೧.ಪ್ರಾಚೀನ ಯುಗ:ಗ್ರೀಸ್ ದೇಶದ ನಗರರಾಜ್ಯಗಳ ಉದಯದ ಕಾಲದಿಂದ ಗ್ರೀಕ್ ನ್ಯಾಯ ವ್ಯವಸ್ಥಿತವಾಗಿ ಬೆಳೆದಿದೆ.ಅದಕ್ಕೆ ಮುಂಚೆ ಗ್ರೀಕ್ ನ್ಯಾಯಪದ್ಧತಿಗೆ ಪಂಗಡದ ಅಥವಾ ಬುಡಕಟ್ಟಿನ ನಿಯಮಗಳು ಮತ್ತು ಕಟ್ಟೆಳೆಗಳು ಆಧಾರವಾಗಿದ್ದುವು.ಬಂಧುತ್ವದ ಗುಂಪುಗಳಲ್ಲಿಯ ವ್ಯಾಜ್ಯಗಳನ್ನು ಸಾಧಾರಣವಾಗಿ ಪರಸ್ಪರ ಹೊಂದಾವಣೆಯ ಒಡಂಬಡಿಕೆಗಳ ಮೂಲಕ ಇತ್ಯರ್ಥಗೊಳಿಸಿಕೊಳ್ಳಲಾಗುತ್ತಿತ್ತು.ಪಂಗಡಗಳ ನಾಯಕರು,ರಾಜರು ಆಗಿನ ಕಾಲದಲ್ಲಿ ವ್ಯಾಜ್ಯಗಳನ್ನು ಬಗೆಹರಿಸುತ್ತಿದ್ದರು.ಪಂಗಡಗಳಲ್ಲಿ ಒಮ್ಮತವನ್ನು ಕಾಯ್ದುಕೊಳ್ಳಲ್ಲು ಮತ್ತು ಪಂಗಡಗಳಲ್ಲಿ ಪರಸ್ಪರ ಸ್ನೇಹ ನಂಬಿಕೆಗಳನ್ನು ಕಾಯ್ದುಕೊಳ್ಳಲು ಏಕರೀತಿಯ ನಿಯಮಗಳನ್ನು ರೂಢಿಸಿಕೊಳ್ಳಬೇಕಾಯಿತು.ಈ ರೀತಿಯ,ರೂಢಿಗತವಾಗಿ ಬಂದ,ನಿಯಮಗಳು ಸಾಧಾರಣವಾಗಿ ಜನಪದ ಸ್ಮೃತಿಶಕ್ತಿಯನ್ನವಲಂಬಿಸಿದ್ದುವು.ಅವುಗಳಲ್ಲಿ ಬದಲಾವಣೆಯಾಗಲು ಬಹುಕಾಲ ಬೇಕಾಗುತ್ತಿತ್ತು.ವ್ಯತ್ಯಾಸ ಮಾಡದಿರುವುದಕ್ಕೆ ದೈವ ಭಯವೂ ಒಂದು ಕಾರಣವಾಗಿತ್ತು.ರಾಜರು ವಿವಾದಗಳನ್ನು ನಿರ್ಣಯಿಸುತ್ತಿದ್ದ ರೀತಿಯನ್ನು ಹೋಮರನ ಇಲಿಯಡ್ ಕಾವ್ಯದಲ್ಲಿ ಕಾಣಬಹುದು.ಪಂಗಡಗಳಲ್ಲಿ ನ್ಯಾಯವಿತರಣೆ ಹೆಚ್ಚಾಗಿ ಸ್ವಸಹಾಯ ಮತ್ತು ಜನಬೆಂಬಲವನ್ನವಲಂಬಿಸಿತ್ತು.ಆಪಾದಿತ ತನಗಿದ್ದ ಬಲದ ಮೇಲೆ ವಿವಾದವನ್ನು ಬಗೆಹರಿಸಿಕೊಳ್ಳುತ್ತಿದ್ದ.ಸ್ವಸಹಾಯ ಅಥವಾ ಇತರರ ಬಲವಿಲ್ಲದಿದ್ದಲ್ಲಿ ಅವನು ಓಡಿ ಹೋಗಬೇಕಾಗುತ್ತಿತ್ತು;ಇಲ್ಲವೇ.ತಪ್ಪು ಮಾಡಿರಲಿ ಮಾಡದಿರಲಿ,ತಪ್ಪು ಮಾಡಿದನೆಂದು ಒಪ್ಪಿಕೊಳ್ಳಬೇಕಾಗುತ್ತಿತ್ತು.ಪ್ರ.ಶ.ಪೂ.೭ನೆಯ ಶತಮಾನದ ವರೆಗೆ ಕೌಟುಂಬಿಕ ಜೀವನಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಯಾವ ಕ್ರಾಂತಿಕಾರಕ ಬದಲಾವಣೆಗಳೂ ಆದಂತೆ ಕಂಡುಬರುವುದಿಲ್ಲ.ಆದರೆ ಖೂನಿ ಮಾಡುವುದನ್ನು ತಡೆಗಟ್ಟುವುದಕ್ಕೆ ಸರ್ಕಾರ ಕ್ರಮ ಕೈಗೊಳ್ಳಲು ಆರಂಭಮಾಡಿತು.ಖೂನಿ,ಸುಲಿಗೆ,ಕಳವು,ಹಟಸಂಭೋಗ ಮುಂತಾದ ಅನೇಕ ಅಪರಾಧಗಳ ವಿಚಾರಣೆ ಮತ್ತು ದಂಡನೆಗೆ ಸರ್ಕಾರ ಕ್ರಮೇಣ ವ್ಯವಸ್ಥೆ ಮಾಡತೊಡಗಿತು.ನ್ಯಾಯಾಧೀಶರು ನ್ಯಾಯವನ್ನು ನಿರ್ಣಯಿಸುವುದನ್ನು ಬಿಟ್ಟು ಕೇವಲ ಸಂಗತಿಗಳ ಆಧಾರದ ಮೇಲೆ ತೀರ್ಪು ಕೊಡುತ್ತಿದ್ದುದಕ್ಕೆ ಲಿಖಿತ ನ್ಯಾಯಸೂತ್ರಗಳಲ್ಲಿದಿದ್ದುದು ಮತ್ತು ಸಂಪ್ರದಾಯಗಳು ಅಸ್ಪಷ್ಟವಾಗಿದುದ್ದು ಕಾರಣಗಳಾಗಿದ್ದುವು.ಹೊಸ ಸಮಸ್ಯೆಗಳು ಉದ್ಭವಿಸಿದಾಗ ಅಂಥ ಸಂದರ್ಭಗಳಿಗೆ ಅನ್ವಯವಾಗುವ ನ್ಯಾಯಾಸೂತ್ರಗಳು ಇಲ್ಲದ್ದು ನ್ಯಾಯ ವಿತರಣೆಯಲ್ಲಿಯ ತೊಡಕುಗಳಲ್ಲಿ ಒಂದಾಗಿತ್ತು.ಪ್ರ.ಶ.ಪೂ.೬೮೩ರಲ್ಲಿ ಆರು ಸದಸ್ಯರ ಸಮಿತಿಯೊಂದನ್ನು ಸಂಪ್ರದಾಯಗಳ ನಿರ್ಣಯಕಾರರಾಗಿರಲು ನೇಮಿಸಲಾಗಿತ್ತು.ನ್ಯಾಯಾಧೀಶರು ತಾವು ನಿರ್ಧರಿಸಬೇಕಾಗಿದ್ದ ಘಟನೆಗಳಿಗೆ ಅನ್ವಯವಾಗುವ ನ್ಯಾಯಪತ್ರಗಳನ್ನು ಅವರಿಂದ ಪಡೆಯಬೇಕಾಗಿತ್ತು.

ಪ್ರ.ಶ.ಪೂ.೭ನೆಯ ಶತಮಾನದಲ್ಲಿ ಗ್ರೀಸ್ ದೇಶದ ನಗರ ರಾಜ್ಯಗಳು ನ್ಯಾಯಾಸೂತ್ರಗಳನ್ನು ಬರೆಯಿಸಿ ರಚಿಸಲು ಆರಮ್ಭಿಸಿದವು.ಎಲ ನ್ಯಾಯಾಸೂತ್ರಗಳನ್ನೂ ಕ್ರೋಡೀಕರಿಸುವ ಮತ್ತು ಅವನ್ನು ಪ್ರಕಟಿಸುವ ಕಾರ್ಯವನ್ನು ಏಕಸದಸ್ಯ ನ್ಯಾಯ ನಿರ್ಧಾರಕನಾಗಿ(ನೋಮಾಥಿಟೀಸ್)ವಹಿಸಿಕೊಡುವ ಪದ್ಧತಿ ಜಾರಿಗೆ ಬಂತು.ಆ ಕಾಲದ ಕ್ರೋಡೀಕೃತ ಕೃತಿಗಳು ಉಪಲಬ್ಧವಾಗಿಲ್ಲ.ಕೆಲವು ಬಿಡಿಭಾಗಗಳು ಮಾತ್ರ ದೊರೆಕಿವೆ.ಏನು ಮಾಡಬೇಕು,ಏನು ಮಾಡಬಾರದು,ಮಾಡಬಾರದ್ದನ್ನು ಮಾಡಿದಾಗ ಮತ್ತು ನಿಯಮಗಳನ್ನು ಪಾಲಿಸದಿದ್ದಾಗ ಆ ಬಗ್ಗೆ ಕ್ರಮ ಮತ್ತು ದಂಡಗಳು-ಇವುಗಳು ಬಗ್ಗೆ ವಿವರಗಳು ದೊರೆತಿವೆ.ಈ ಪ್ರಾಚೀನ ಸಂಹಿತೆಗಳು ಧಾರ್ಮಿಕ ಮತ್ತು ವ್ಯಾವಹಾರಿಕ ನಿಯಮಗಳು ಸಂಗ್ರಹಗಳ ರೂಪದಲ್ಲಿರುತ್ತಿದ್ದುವು.

ಪ್ರತಿ ನಗರ ರಾಜ್ಯವೂ ತನ್ನದೇ ಆದ ನ್ಯಾಯಸೂತ್ರಗಳನ್ನು ಮತ್ತು ನ್ಯಾಯಿಕ ವ್ಯವಸ್ಥೆಯನ್ನು ಹೊಂದಿರುತ್ತಿತ್ತು.ಆದ್ದರಿಂದ ಆಗಿನ ಕಾಲದಲ್ಲಿ ಗ್ರೀಕ್ ನ್ಯಾಯವೆಂಬ ಏಕೈಕ ನ್ಯಾಯಿಕ ವ್ಯವಸ್ಥೆ ಇರಲಿಲ್ಲವಾದರೂ ಪ್ರ.ಶ.ಪೂ. ೭ರಿಂದ ಪ್ರ.ಶ.ಪೂ. ೪ನೆಯ ಶತಮಾನದ ವರೆಗಿನ ಕಾಲದಲ್ಲಿ ನ್ಯಾಯಸೂತ್ರಗಳ ಬೆಳೆವಣಿಗೆ ಏಕರೂಪದತ್ತ ಸಾಗಿತ್ತು.ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಬೆಳೆದುಬಂದ ಸಾಮಾನ್ಯ ನ್ಯಾಯ ಇಲ್ಲಿ ಬೆಳೆಯಲಿಲ್ಲ.ಅಥೆನ್ಸ್ ನಗರದ ಡ್ರೇಕೋ ಪ್ರ.ಶ.ಪೂ.೬೨೧ರ ಸುಮಾರಾಗಿ ಒಂದು ಸಂಹಿತೆಯನ್ನು ಸಿದ್ಧಗೊಳಿಸಿದ್ದ.ಜ಼ಲ್ಯೂಕಸ್ ಸಿದ್ಧಗೊಳಿಸಿದ್ದ ಸಂಹಿತೆ ಲೋಕ್ರಿಸಿನಲ್ಲಿ ಪ್ರಚಲಿತವಿತ್ತು.ಆ ನ್ಯಾಯಸೂತ್ರಗಳು ಸಿಬರಿಸಿನಲ್ಲೂ ಪ್ರಭಾವಗಳಿಸಿದ್ದವು.ಕ್ಯಾಟನಕ್ಕೆ ಅನ್ವಯವಾಗುವಂತೆ ಸಿದ್ಧಗೊಳಿಸಲಾಗಿದ್ದ ನ್ಯಾಯಸೂತ್ರಗಳನ್ನು ಇತಲಿ ಮತ್ತು ಸಿಸಿಲಿ ನಗರರಾಜ್ಯಗಳೂ ಅಳವಡಿಸಿಕೊಂಡಿದ್ದುವು.ಗ್ರೀಸ್ ನ ನಗರರಾಜ್ಯಗಳ ನ್ಯಾಯಸೂತ್ರಗಳಲ್ಲಿ-ಅದರಲ್ಲೂ ವಿವಾಹ,ವ್ಯವಹಾರ,ಉತ್ತರಾಧಿಕಾರ,ದತ್ತುಸ್ವೀಕಾರ ಮುಂತಾದವಕ್ಕೆ ಸಂಬಮ್ಧಿಸಿದ ನ್ಯಾಯಸೂತ್ರಗಳಲ್ಲಿ-ಸಾಮ್ಯ ಇತ್ತು.ಅರಿಸ್ಟಾಟಲ್ ಮುಂತಾದವರು ಹೇಳುವಂತೆ ಅಥೆನ್ಸ್ ನಗರರಾಜ್ಯದ ನ್ಯಾಯಸೂತ್ರಗಳು ಬಹು ಮುಖ್ಯವಾದವು.

ಡ್ರೇಕೋಗಿಂತ ಮುಂಚೆ ಕೆಲವೇ ಜನ ಸರ್ಕಾರವನ್ನು ನಡೆಸುತ್ತಿದ್ದರು.ಜನತೆಯ ಬಹುಭಾಗ ಭೂಮಾಲಿಕರ ಪರವಾಗಿ ವ್ಯವಸಾಯ ಮಾಡುತ್ತಿದ್ದ ಜೀತಗಾರರು(ಸರ್ಫ್ಸ್).ಗೇಣಿಯನ್ನು ಸರಿಯಾಗಿ ಕೊಡದಿದ್ದವರನ್ನು ಗುಲಾಮರನ್ನಾಗಿ ಪರಿಗಣಿಸಲಾಗಿತ್ತು.ರಾಜ,ಪಾಲಿಮಾರ್ಕ್(ದಂಡನಾಯಕ) ಮತ್ತು ಆರ್ಕಾನ್ (ಮುಖ್ಯನ್ಯಾಯಾಧೀಶ) ಇವರು ಕಾಲನುಕ್ರಮದಲ್ಲಿ ತೀರ್ಪುಗಳನ್ನು ಕೊಡುತ್ತಿದ್ದರು.ರಾಜಕೀಯ ಸಭೆಗಳಿಗೆ ಸದಸ್ಯರಾಗಿಯೂ