ಪುಟ:Mysore-University-Encyclopaedia-Vol-6-Part-17.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೮೩೦ ಗ್ರೀಕ್ ನ್ಯಾಯ

 ಬರದಿದ್ದವರು ದಂಡ ತೆರಬೇಕಾಗುತ್ತಿತ್ತು. ಭೂಮಿ  ಕೆಲವೇ ಜನರ ಸ್ವತ್ತಾಗಿತ್ತು. ಸಾಲ ವ್ಯಕ್ತಿಗತವಾಗಿತ್ತು. ಡ್ರೇಕೋನ ಮೇರೆಗೆ ಆರಿಜಪೆಗಸ್ ಪರುಷತ್ತು ಆಗಿನ ನ್ಯಾಯಸೂತ್ರಗಳನ್ನು ರಕ್ಶಿಸಿಕೊಂಡು ಬರುತ್ತಿತ್ತು.ತೀರ್ಪುಗಳನ್ನು ಬಹಿರನ್ಗವಾಗಿ ಕೊಡುವುದಕ್ಕೆ ಮತ್ತು ಅವನ್ನು ಕಾಪಾಡಿಕಕೊಂಡು ಬರುವುದಕ್ಕೆ ಥೆಸ್ಮಾಥಿಟೀಸರನ್ನು(ನ್ಯಾಯ ನಿರ್ಣಯಕಾರರು) ನೇಮಿಸುವ ಪದ್ಧತು ರೂಡಿಯಲ್ಲಿತ್ತು.
   
          ಆಗಿನ ನ್ಯಾಯವ್ಯವಸ್ಥೆಗೂ ರಾಜಕೀಯ ಸ್ವರೂಪ್ಪಕ್ಕೊ ನಿಕಟ ಸಂಬಂಧವಿತ್ತು.ಬಡವರ ಮತ್ತು ಶ್ರೀಮಂತರ ನಡುವೆ ರಾಜಕೀತಯ ಹಕ್ಕುಬಾಧ್ಯತೆಗಳಿಗಾಗಿ ಘರ್ಷಣೆ ನಡೆಯುತ್ತ್ಲಲೇ ಇತ್ತು.ಕೊನೆಗೆ ಉಭಯ ಪಕ್ಷದವರೂ ಸೇರಿ ಮಧ್ಯಸ್ಥ ಮತ್ತು ತೀರ್ಪುಗಾರನನ್ನಾಗಿ ಸೋಲಾನನನ್ನು (ಪ್ರ,ಶ.ಪೂ.ಸು.೬೩೯-ಪ್ರ.ಶ.ಪೂ.ಸು.೫೫೯)ನೇಮಿಸಿದರು.ಅತ ರೂಪಿಸಿದ್ದ ನ್ಯಾಯಸೂತ್ರಗಳ ರೂಪರೋಶಗಳು ಪುರಾತನ ಗ್ರಂಥಗಳಲ್ಲಿ ದೊರೆಯುತ್ತವೆ.ಆತನ ಕಾಲದಲ್ಲಿ ಸ್ವತ್ತಿನ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತಿದ್ದುವು.ಆಸ್ತಿಯ ಆಧರದ ಮೇಲೆ ಸಾಲ ತೆಗೆದುಕೊಳ್ಳ್ಬಹುದಾಗಿತ್ತು.ತನಗೆ ನ್ಯಾಯ ದೊರೆತಿಲ್ಲವೆಂಬ ಕಾರಣದ ಮೇಲೆ ನ್ಯಾಯದರ್ಶಿಗಳ ನ್ಯಾಯಲಯಕ್ಕೆ ಮೇಲರ್ಜಿ ಹಾಕಿಕೊಳ್ಳಬಹುದಾಗಿತ್ತು.ಅಪರಾಧವನ್ನವಲಂಬಿಸಿ ದಂಡ ವಿಧಿಸುವುದಕಿಂತ ವ್ಯಕ್ತಿಯ ವರ್ಗೀಕರಣದ ಮೇಲೆ ದಂಡ್ ವಿಧಿಸಲಾಗುತ್ತಿತ್ತು. ಪಿತ್ರಾರ್ಜಿತ ಸ್ವತ್ತಿಗೆ ಸ್ತ್ರೀಪುರುಷರು ವಾರಸುದಾರರಾಗಬಹುದಿತ್ತು.ಪ್ರ.ಶ.ಪೂ.೪೫೦ಕ್ಕೆ ಮುಂಚೆ ಉಯಿಲು ಮಾಡುವ ಹಕ್ಕಿಗೆ ನ್ಯಾಯದ ಮನ್ನಣೆ ದೊರೆತಿರಲಿಲ್ಲ. ಹಟಾಂಭೋಗವನ್ನು ಅಪ್ರಾದವೆಂದು ಗಣನೆಗೆ ತೆಗೆದುಕೊಳಲ್ಲಾಅಗುತ್ತಿತ್ತು ಮತು ಆ ಬಗ್ಗೆ ದಂಡ ವಿದಿಸಲಾಗುತ್ತಿತ್ತು.ದಂಡ ವ್ಯಕ್ತಿಯ ವರ್ಗೀಕರಣವನ್ನವಲಂಸಿದಂತ, ಸಾಕ್ಶಿಗಳ ಸಂಖ್ಯೆಗೂ ವರ್ಗೀಕರಣ ಆಧಾರವಗಿತ್ತು.
         

ಸೋಲಾನ್ ನರಹತ್ಯೆಗೆ ಸಂಬಂಧಿಸಿದ ನ್ಯಾಯಸೂತ್ರಗಳನ್ನುಳಿದು ಇತರ ನ್ಯಾಯಸೂತ್ರಗಳಲ್ಲಿ ಬದಲಾವಣೆ ಮಾಡಿದ.ಹುಟ್ಟಿನ ಆದರದ ಮೇಲೆ ವ್ಯಕ್ತಿಯ ವರ್ಗಿಕರಣ ಮಾಡುವುದನ್ನು ತಪ್ಪಿಸಿ ಆಸ್ತಿಯ ಆದರದ ಮೇಲೆ ವ್ಯಕ್ತಿಯ ವರ್ಗೀಕರಣ ಮಾಡಿದೆ.ಆಟಿಕದಲ್ಲಿಯ ಎಲ್ಲ ಸ್ವತಂತ್ರ ವಯಸ್ಕರಿಗೊ ಮತದಾನದ ಹಕ್ಕನ್ನು ನೀಡಲಾಗಿತ್ತು. ಸಾಮಾಜಿಕ ಸ್ತಾನಮಾನ ಮತ್ತು ಸರ್ಕಾರಿ ಸೇವೆಗಳಲ್ಲಿ ವ್ಯಕ್ತಿಯ ವರ್ಗಿಕರಣ ಮಹತ್ತ್ವದ ಪಾತ್ರ ವಹಿಸುತ್ತಿತ್ತು.ಈ ನ್ಯಾಯಸೂತ್ರಗಳು ಹೆಚ್ಚಿನ ಬದಲಾವಣೆಯಿಲ್ಲದೆಯೇ ಪೈಸಿಸ್ತ್ರೇಟಸ್ ಮತು ಕ್ಲೈಸ್ಥೆನೀಸರ ಕಾಲದಲ್ಲಿಯೂ ಜಾರಿಯಲ್ಲಿದ್ದುವು.