ಪುಟ:Mysore-University-Encyclopaedia-Vol-6-Part-17.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರೋಮನರು ರಾಜಕೀಯವಾಗಿ ಗ್ರೀಸ್ ದೇಶವನ್ನು ವಶಪಡಿಸಿಕೊಂಡಿದ್ದರೂ ಗ್ರೀಕರ ಬಗ್ಗೆ ಅವರಿಗೆ ವೈಷಮ್ಯವಿರಲಿಲ್ಲ. ಅಲ್ಲದೆ ಗ್ರೀಕರ ಕಲೆ, ವೈಚಾರಿಕ ಪ್ರಗ್ನ್ಯೆ, ಸಾಹಿತ್ಯ ಇವುಗಳ ಬಗ್ಗೆ ಅವರಿಗೆ ಆದರವಿತ್ತು. ಅಂತೆಯೇ ಗ್ರೀಕ್ ನ್ಯಾಯ ಮತ್ತು ಸಂಸ್ಕೃತಿಗಳು ಉಳಿದುಕೊಂಡವು. ೩ಬೈಜಾಂಟಿಯನ್ ಯುಗ:೫೬೫-೧೪೫೩, ಬೈಜಾಟಿಯನ್ ಚಕ್ರಾಧಿಪತ್ಯದ ಕಾಲದಲ್ಲಿ ನ್ಯಾಯಸೂತ್ರಗಳನ್ನು ಗ್ರೀಕ್ ಭಾಷೆಯಲ್ಲಿ ಬರೆಯಲಾಗುತ್ತಿತ್ತು. ಎಕ್ಲೋಗ ಲೀಗಂ ಎಂಬ ನ್ಯಾಯಸಂಹಿತೆ ೩ನೆಯ ಲಿಯೋ ಚಕ್ರವರ್ತಿಯಿಂದ (೭೧೭-೭೪೦) ಮಂಜೂರಾತಿ ಪಡೆದಿತ್ತು. ಈ ಕಾಲದ ಗ್ರೀಕ್ ನ್ಯಾಯವನ್ನು ರೋಮನರ ಸಂಪ್ರದಾಯಬದ್ದತೆ, ಕ್ರೈಸ್ತ ಧರ್ಮದ ನೀತಿ ಮತ್ತು ಗ್ರೀಕರ ನ್ಯಾಯಿಕವಿವೇಚನೆ ಇವುಗಳ ತ್ರಿವೇಣೀಸಂಗಮವೆಂದು ಹೇಳಬಹುದು. ಈ ಕಾರಣದಿಂದಾಗಿ ಪೂರ್ವ ಐರೋಪ್ಯ ದೇಶಗಳಲ್ಲಿ ಮತ್ತು ಬಾಲ್ಕನ್ ದೇಶಗಳಲ್ಲಿ ಬೈಜಾಂಟಿಯನರ ಕಾಲದ ನ್ಯಾಯಸೂತ್ರಗಳ ಪ್ರಭಾವ ಬಿತ್ತು. ಒಂಬತ್ತನೆಯ ಕಾನ್ಸ್ ಟಂಟೈನ್ ೧೦೪೫ರ ಸುಮಾರಿಗೆ ಕಾನ್ಸ್ ಟಾಂಟಿನೋಪಲಿನಲ್ಲಿ ಒಂದು ನ್ಯಾಯಶಸ್ತ್ರಶಾಲೆ ಆರಂಭಿಸಿದ ಈ ಕಾಲದಲ್ಲಿ ನ್ಯಾಯಸೂತ್ರಗಳನ್ನ, ನ್ಯಾಯವ್ಯವಸ್ಥೆ ಮತ್ತು ನ್ಯಾಯವಿತರಣೆಗಳನ್ನು ಕುರಿತು ಕೆಲವು ಸಂಗ್ರಹಗಳು ಪ್ರಕಟವಾದವು ಮತ್ತು ಗ್ರೀಕರ ಪುರಾತನ ಸಂಪ್ರಾದಯಗಳು ಮತ್ತು ಚರ್ಚಿನ ಕಾನೂನುಗಳು ಹೊರಬಂದವು.