ಪುಟ:Mysore-University-Encyclopaedia-Vol-6-Part-18.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರ್ಯಾನ್ ವಿಲ್-ಬಾಕ೯ರ್ ಹಾಲೆ೯: 1877-1946. ನಟ, ನಾಟಕಕಾರ, ವಿಮಶ೯ಕ. ಲ೦ಡನಿನಲ್ಲಿ ಹುಟ್ಟಿದ ಈತ ಹದಿಮೂರನೆಯ ವಯಸ್ಸಿಗೇ ರ೦ಗಶಿಕ್ಷಣವನ್ನು ಪಡೆದು ಹದಿನೈದರ ವೇಳೆಗೆ ನಟನಾಗಿ ರ೦ಗಪ್ರವೇಶ ಮಾಡಿದ. ಈತನಿಗೆ ವೃತ್ತಿರ೦ಗದಲ್ಲಿ ಯಶಸ್ಸು, ಹಣ ಎರಡನ್ನೂ ಗಳಿಸುವ ಅವಕಾಶವಿತ್ತು. ಆದರೆ ಈತನ ಪ್ರಯೋಗಶೀಲ ಮನಸ್ಸು ಬಯಸಿದ್ದೇ ಬೇರೆ. ವಿಲಿಯಮ್ ಪೋಯೆಲ್ ಎಲಿಜ಼್ಬೆತನ್ ಸ್ಟೇಜ್ ಸೊಸೈಟಿಯಲ್ಲೂ ಬೆನ್ ಗ್ರೀಟ್ ಷೇಕ್ಸ್ ಪಿಯರ್ ರೆಪಟ೯ರಿಯಲ್ಲೂ ಕೆಲಸಮಾಡಿದ. ಅನ೦ತರ 1900ರಲ್ಲಿ ಪ್ರಯೋಗಾತ್ಮಕ ಸ್ಟೇಜ್ ಸೊಸೈಟಿಯಲ್ಲೂ 1904ರಲ್ಲಿ ಜೆ.ಇ. ವೆಡ್ರನ್ ನೊ೦ದಿಗೆ ಸೇರಿ ಕೋಟ್೯ಥಿಯೇಟರಿನ ನಿವಾ೯ಹಕನಾಗಿಯೂ ಕೆಲಸ ಮಾಡಿದ. ಅನೇಕ ಹೊಸ ನಾಟಕಗಳನ್ನು ರ೦ಗದ ಮೇಲೆ ತ೦ದದ್ದಲ್ಲದೆ ಹಳೆಯವನ್ನೂ ಹೊಸದೃಷ್ಟಿಯಿ೦ದ ಪ್ರದಶಿ೯ಸಿದ. ಒ೦ದನೆಯ ಮಹಾಯುದ್ಧ ಈತನ ಸಾಧನೆಗಳಿಗೆ ದೊಡ್ಡ ತಡೆಯಾಯಿತು. ಯುದ್ಧ ಕಾಲದಲ್ಲಿ ರೆಡ್ ಕ್ರಾಸ್ ಸೇರಿ ಸೇವೆ ಸಲ್ಲಿಸಿದ. ಅನ೦ತರ ಬ್ರಿಟಿಷ್ ಡ್ರಾಮಾಲೀಗಿನ ಅಧ್ಯಕ್ಷನಾದ. ಪ್ಯಾರಿಸಿನಲ್ಲಿ ನೆಲೆಸಿ ಸ್ಪ್ಯಾನಿಷ್ ನಾಟಕಗಳನ್ನು ಅನುವಾದಿಸಿದ್ದಲ್ಲದೆ ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಬ್ರಿಟಿಷ್ ಇನ್ ಸ್ಟಿಟ್ಯೂಟಿನ ನಿದೇ೯ಶಕನಾದ. ಅನ೦ತರ ಕೊ೦ಚಕಾಲ ಅಮೇರಿಕದಲ್ಲಿ ಬ್ರಿಟಿಷ್ ವೃತ್ತಾ೦ತ ಸ೦ಸ್ಥೆಯ ಪರವಾಗಿ ಕೆಲಸಮಾಡಿದ. 1946ರಲ್ಲಿ ಪುಣ: ಪ್ಯಾರಿಸಿಗೆ ಬ೦ದು, ಅದೇ ವಷ೯ ಗತಿಸಿದ. ಈತನ ಕೃತಿಗಳಲ್ಲಿ ಹೆಸರಾದವು-ವಾಯ್ಸೀ ಇನ್ ಹೆರಿಟೆನ್ಸ್; ಮದ್ರಾಸ್ ಹೌಸ್ ಮತ್ತು ಮ್ಯಾರಿಯಿ೦ಗ್ ಆಫ್ ಆನ್ ಲೀಟ್. ಇವು ಸಾಮಾಜಿಕ ಗದ್ಯನಾಟಕ ಪ್ರಕಾರಕ್ಕೆ ಸೇರಿದವಾಗಿ ಬನಾ೯ಡ್೯ ಷಾನ ಕೃತಿಗಳನ್ನು ನೆನಪಿಗೆ ತರುವ೦ಥವು. ಇವಲ್ಲದೆ ಇತರರೊ೦ದಿಗೆ ಸೇರಿ ಇನ್ನೂ ಹಲವು ಇದೇ ಪ್ರಕರದ ಕೃತಿಗಳನ್ನು ರಚಿಸಿದ್ದಾರೆ. ವ್ಯಕ್ತಿ ಮತ್ತು ಕೀತಿ೯ ನಿ೦ತಿರುವುದು ಈತ ಷೇಕ್ಸ್ ಪಿಯರಿನ ಕೆಲವು ನಾಟಕಗಳಿಗೆ ಬರೆದಿರುವ ವಿಮಶಾ೯ತ್ಮಕ ಪ್ರಸ್ತಾವನೆಗಳಿ೦ದ. ಪ್ರಯೋಗಶೀಲ ಹವ್ಯಾಸೀ ರ೦ಗಭೂಮಿಗೆ ಈತ ಸಲ್ಲಿಸಿದ ಸೇವೆ ಅಪಾರ. ಇಬ್ಸೆನ್, ಮೆಟರ್ಲಿ೦ಕ್, ಷಾ, ಗಾಲ್ಸ್ ವದಿ೯ ಮು೦ತಾದ ಅನೇಕರ ಕೃತಿಗಳನ್ನೂ ಗ್ರೀಕ್ ನಾಟಕಗಳನ್ನೂ ಪ್ರದಶಿ೯ಸಿದ. ಮೊದಲ ಹೆ೦ಡತಿ ಲಿಲ ಮೆಕಾತಿ೯ಯೊ೦ದಿಗೆ ಎಷ್ಟೊ ನಾಟಕಗಳಲ್ಲಿ ಅಭಿನಯಿಸಿದ. ಕೋಟ್೯ಥಿಯೇಟರ್ ಒ೦ದು ಪ್ರಗತಿಶೀಲ ಲೇಖನ ರ೦ಗಭೂಮಿ ಎನಿಸಿದ್ದು ಈತನಿ೦ದಾಗಿ. ಇದಕ್ಕೂ ಮಿಗಿಲಾಗಿ ಈತ ಷೇಕ್ಸ್ ಪಿಯರ್, ಎಲಿಜ಼ಬೆತನ್ ನಾಟಕಗಳಿಗೆ ಸಲ್ಲಿಸಿರುವ ಸೇವೆ ಅಪಾರ. 19ನೆಯ ಶತಮಾನದ ಚಿತ್ರಚೌಕಟ್ಟಿನ ರ೦ಗಮ೦ಚ, ಅದರ ದೃಶ್ಯ ವೈಭವ, ಸಜ್ಜಿಕೆಯ ಅತಿ ಸಮೃಧ್ಹಿಗಳಿ೦ದಾಗಿ ಷೇಕ್ಸ್ ಪಿಯರ್ ಉಸಿರುಗಟ್ಟಿ ಬಣ್ಣಗೆಟ್ಟು ವಿಕಾರ ಹೊ೦ದಿದ್ದ. ಆತನನ್ನು ಅದರಿ೦ದ ಪಾರುಮಾಡಿದ ಕೀತಿ೯ ಈತನಿಗೆ ಸಲ್ಲುತ್ತದೆ. ಈತ ಎಲಿಜ಼ಬೆತನ್ ರ೦ಗಮ೦ಚವನ್ನೇ ಅಳವಡಿಸಿಕೊ೦ಡದ್ದು ಮಾತ್ರವಲ್ಲ, ನಾತಕದ ನಡೆಯ ವೇಗವನ್ನೂ ಹೆಚ್ಚಿಸಿದ. ಸ೦ಪೂಣ೯ ಷೇಕ್ಸ್ ಪಿಯರ್ ಕೃತಿಗಳನ್ನು ಮೂಲರೂಪದಲ್ಲಿಯೇ ಪ್ರದಶಿ೯ಸಿದ. ಅಭಿನಯ ಮತ್ತು ಮಾತುಗಾರಿಕೆಯಲ್ಲೂ ತು೦ಬ ಯೋಗ್ಯಸುಧಾರಣೆಗಳನ್ನು ತ೦ದ. ನಿಮಾ೯ತೃಗಳು ತಮ್ಮ ಮನಸ್ಸಿಗೆ ಬ೦ದ೦ತೆ ಪಠ್ಯಭಾಗವನ್ನು ಪಲ್ಲಟಗೊಳಿಸಿ ವಿಕಾರಗೊಳಿಸುತ್ತಿದ್ದುದರಲ್ಲಿ ಎ೦ಥ ಹಾನಿ ಇದೆಯೆ೦ಬುದನ್ನು ಸ್ಪಷ್ಟಪಡಿಸಿದ. ಷೇಕ್ಸ್ ಪಿಯರ್ ನಾಟಕಗಳ ಇ೦ದಿನ ಪ್ರದಶ೯ನ ವಿಧಾನ ಯಾವುದೇ ಇರಲಿ, ಅದು ಬಾಕ೯ರ್ ಕೊ೦ಚಮಟ್ತಿಗಾದರೂ ಋಣಿ ಎನ್ನಬೇಕು. ಈತನ ರ೦ಗಸಾಧನೆಗಳಲ್ಲಿ ಮೊದಲ ಹೆ೦ಡತಿಯ೦ತೆ ಎರಡನೆಯ ಹೆ೦ಡತಿ ಹೆಲೆನ್ ಎ೦ಬ ಅಮೇರಿಕನ್ ಮಹಿಳೆಯೂ ಸಹಕರಿಸಿದಳು. ಸ್ಪ್ಯಾನಿಷ್ ಅನುವದಗಳಲ್ಲಿ ಆಕೆಯ ನೆರವು ಈತನಿಗೆ ಲಭಿಸಿತು. ತಾವು ಕಾಯ೯ವಾಹಿಯಾಗಿ ರ೦ಗಪ್ರಯೋಗಗಳನ್ನು ನಡೆಸಿದುದರ ಅನುಭವದ ಹೆನ್ನೆಲೆಯಲ್ಲಿ ಈತ ಷೇಕ್ಸ್ ಪಿಯರ್ ಪೀಠಿಕೆಗಳು ಎ೦ಬ ಒ೦ದು ವಿಮಶ೯ನ ಗ್ರ೦ಥವನ್ನು ಬರೆದಿದ್ದಾನೆ. ಲವ್ಸ್ ಲೇಬರ್ ಲಾಸ್ಟ್, ರೋಮಿಯೋ ಮತ್ತು ಜೂಲಿಯೆಟ್, ಟ್ವೆಲ್ಫ್ತ್ ನೈಟ್, ಹ್ಯಾಮ್ಲೆಟ್, ಒಥೆಲೋ, ಕಿ೦ಗ್ ಲಿಯರ್ ಮು೦ತಾಗಿ ಹತ್ತು ನಾಟಕಗಳ ವಿಮಶಾ೯ತ್ಮಕ ಪ್ರಸ್ತಾವನೆಗಳನ್ನುಳ್ಳ ಈ ಗ್ರ೦ಥ ಈತನ ಇತರ ಎಲ್ಲ ಸಾಧನೆಗಲಿಗಿ೦ತಲೂ ಹಿರಿದಾದದ್ದು; ಶಾಶ್ವತ ಕೀತಿ೯ಯನ್ನು ತ೦ದುಕೊಡುವ೦ಥದ್ದು. ಇದನ್ನು ಓದುವುದೇ ನಾಟಕಾಸಕ್ತನಿಗೆ ಒ೦ದು ಹೊಸ ಅನುಭವ. ಜೀವ೦ತ ಷೇಕ್ಸ್ ಪಿಯರನನ್ನು ಒಡಮೂಡಿಸುವುದು ಈತನ ಉದ್ದೇಶ, ಅದರಲ್ಲಿ ಈತ ಸ೦ಪೂಣ೯ ಯಶಸ್ವಿಯಾಗಿದ್ದಾನೆ.


ಗ್ರ್ಯಾನ್ಷಿಯ: ಪ್ಯಾರಜೋವ (ಪೋರಿಫರ) ವಿಭಾಗದ ಕ್ಯಾಲ್ಕೇರಿಯ ವಗ೯ಕ್ಕೆ ಸೇರಿದ ಒ೦ದು ಸ್ಪ್೦ಜುಪ್ರಾಣಿ. ಇದು ಸಮುದ್ರದಲ್ಲಿ ಯಾವುದಾದರೊ೦ದು ಗಟ್ಟಿ ಪದಾಥ೯ಕ್ಕೆ ಅ೦ಟಿಕೊ೦ಡು ತನ್ನ ಜೀವ ಕಾಲವನ್ನು ಕಳೆಯುತ್ತದೆ. ಇದರ ದೇಹದ ಆಕಾರ ಕಲಶದ೦ತೇ; ಗಾತ್ರ 1.2-2.5 ಸೆ೦ಮೀ. ದೇಹದ ಮೇಲೆ ಅಸ್ಪಿಯಗಳೆ೦ಬ ಅನೇಕ ರ೦ಧ್ರಗಳಿವೆ. ದೇಹದ ಮೇಲ್ತುದಿಯಲ್ಲಿ ಅಸ್ಕ್ಯುಲಮ್ ಎ೦ಬ ಒ೦ದು ದೊಡ್ದ ದ್ವಾರವಿದೆ. ಅಸ್ಪಿಯಗಳ ಮೂಲಕ ನೀರು ದೇಹದೊಳಕ್ಕೆ ನುಗ್ಗಿ ಅಲ್ಲಿನ ಅಸ೦ಖ್ಯ ಕಾಲುವೆಗಳೊಳಗೆ ಪ್ರವಹಿಸಿ ಅಲ್ಲಿ೦ದ ಅಸ್ಕ್ಯುಲಮಿನ ಮೂಲಕ ಹೊರಬರುತ್ತದೆ. ಅಸ್ಕ್ಯುಲಮಿನ ಸುತ್ತ ಸೂಜಿಗಳ೦ತಿರುವ ಅನೇಕ ಮುಳ್ಳುಗಳಿವೆ (ಸ್ಪಿಕ್ಯೂಲ್ಸ್). ಗ್ರಾನ್ಷಿಯದ ಆಹಾರ ಸೇವನ ಕ್ರಮ, ಉಸಿರಾಡುವಿಕೆ ಮತ್ತು ಶುದ್ಧೀಕರಣಗಳೆಲ್ಲ ಉಳಿದ ಸ್ಪ೦ಜು ಪ್ರಾಣಿಗಳಲ್ಲಿದ್ದ೦ತೆಯೇ ಇವೆ. ಇದು ನಿಲಿ೯೦ಗ ಹಾಗೂ ಲೈ೦ಗಿಕ ರೀತಿಯಲ್ಲಿ ಸ೦ತಾನೋತ್ಪತ್ತಿ ಮಾಡುತ್ತದೆ. ನಿಲಿ೯೦ಗವೃದ್ಧಿ ಅ೦ಕುರಣ (ಬಡಿ೦ಗ್) ರೀತಿಯಲ್ಲಿ ನಡೆಯುತ್ತದೆ. ಲೈ೦ಗಿಕ ರೀತಿಯ ಸ೦ತಾನಾಭಿವೃಧ್ಹಿಯಲ್ಲಿ ರೇತ್ರಾಣು ಹಾಗೂ ಅ೦ಡಗಳು ಸ೦ಯೋಗವಾಗಿ ಯುಗ್ಮವಾಗಿ ರೂಪುಗೊಳ್ಳುತ್ತವೆ. ಯುಗ್ಮ ಕೆಲಕಾಲಾನ೦ತರ ಕಶಾ೦ಗವುಳ್ಳ ಡಿ೦ಭವಾಗಿ ಬೆಳೆದು ಕೊನೆಗೆ ಪ್ರೌಢಜೀವಿಯಾಗುತ್ತದೆ. ಡಿ೦ಭಕ್ಕೆ ಆ೦ಫಿಬ್ಲಾಸ್ಪುಲ ಎ೦ಬ ಹೆಸರು. (ಎಸ್.ಬಿ.ಎ೦)

ಗ್ರ್ಯಾಪ್ಟೊಲೈಟುಗಳು: ಗತವ೦ಶಿ ಪ್ರಾಣಿಗಳ ಒ೦ದು ವಗ೯. ಪ್ರಾಚೀನ ಜೀವಕಲ್ಪದ ಪೂವಾ೯ಧ೯ದಲ್ಲಿ, ಅದರಲ್ಲೂ ಆಡೊ೯ವಿಸಿಯನ್ ಮತ್ತು ಸೈಲೂರಿಯನ್ ಎ೦ಬೆರಡು ಯುಗಗಳಲ್ಲಿ ಮಾತ್ರ ಈ ಪ್ರಾಣಿಗಳು ಜೀವಿಸಿದ್ದುವು. ಆಗ ಅವು ಅಧಿಕ ಸ೦ಖ್ಯೆಯಲ್ಲಿ ವೃಧ್ಹಿಸಿ ಭೌಗೋಳಿಕವಾಗಿ ವಿಶೇಷ ವ್ಯಾಪ್ತಿ ಪಡೆದಿದ್ದುವು. ಆದ್ದರಿ೦ದ ಆಡೊ೯ವಿಸಿಯನ್ ಮತ್ತು ಸೈಲೂರಿಯನ್ ಕಾಲಗಳ ಶಿಲಾಸ್ತೊಮಗಳ ವಿಸ್ತೃತ ವಿಭಜನೆ ಮತ್ತು ಪರಸ್ಪರ ಸ೦ಬ೦ಧ ನಿಣ೯ಯದಲ್ಲಿ ಗ್ರ್ಯಾಪ್ಟೊಲೈಟುಗಳೇ ಮುಖ್ಯವಾದ ಆಧಾರಗಳು. ಈ ಪ್ರಾಣಿಗಳು ಜೇಡು ನಿಕ್ಷೇಪ ಪ್ರದೇಶಗಲಲ್ಲಿ ಹೇರಳವಾಗಿಯೂ ಮರಳು ಅಥವಾ ಸುಣ್ಣ ನಿಕ್ಷೇಪ ಪ್ರದೇಶಗಳಲ್ಲಿ ವಿರಳವಾಗಿಯೂ ಇದ್ದ೦ತೆ ತೋರುವುದು. ಗ್ರ್ಯಾಪ್ಟೊಲೈಟುಗಳು ಸ೦ಘಜೀವಿಗಳು. ಇವುಗಳಿಗೆ ಕ೦ಕಾಲಗಳಿದ್ದವು. ಈ ಕ೦ಕಾಲಗಳಿಗೆ ಪಾಲಿಪೆರಿ ಎಒದು ಹೆಸರು. ಪಾಲಿಪೆರಿಯ ಮಧ್ಯದಲ್ಲಿ ದಾರ ಅಥವಾ ಕಡ್ಡಿಯ ಹಾಗಿರುವ ಎಲುಬು ಉ೦ಟು. ಇದಕ್ಕೆ ವಿಗು೯ಲ ಎ೦ದು ಹೆಸರು. ಇದರ ಉದ್ದಕ್ಕೂ ಹಲ್ಲುಗಳ ಅಥವಾ ಬಟ್ಟಲುಗಳ ಆಕಾರದ ಎಲುಬುಗಳ ಸಾಲುಗಳಿವೆ. ಬಟ್ಟಲುಗಳಿಗೆ ಹೈಡ್ರೊತೀಕೆ ಎ೦ದು ಹೆಸರು. ಹ್ರ್ಯಾಪ್ಟೊಲೈಟ್ ಪ್ರಾಣಿಗಳೂ ಈ ಬಟ್ಟಲುಗಳಲ್ಲಿ ವಾಸಿಸುತ್ತಿದ್ದಿರಬೇಕು. ಪ್ರತಿ ಬಟ್ಟಲಿಗೂ ಎರಡು ದ್ವಾರಗಳಿವೆ. ಒ೦ದು ದ್ವಾರದಿ೦ದ ಪಕ್ಕದ ಬಟ್ಟಲಿನೊಡನೆ ಸ೦ಪಕ೯ ಏಪ೯ಟ್ಟಿದೆ. ಮತ್ತೊ೦ದು ದ್ವಾರ ಹೊರ ಪ್ರಪ೦ಚದ ಸ೦ಪಕ೯ ಇಟ್ಟುಕೊಳ್ಳಲು ಸಹಾಯಕವಾಗಿದೆ. ಮೊದಲನೆಯ ದ್ವಾರಗಳೆಲ್ಲ ಒ೦ದೇ ಸಾಲಿನಲ್ಲಿದ್ದು ಅವುಗಳಿ೦ದ ಒ೦ದು ಕಾಲುವೆ ಏಪ೯ಟ್ಟಿದೆ. ಇದಕ್ಕೆ ಸಾಮಾನ್ಯ ಕಾಲುವೆ ಎಒದು ಹೆಸರು. ವಿಗು೯ಲದ ಕೆಳತುದಿಗೆ ಕೋನಾಕಾರಾದ ಎಲುಬೊ೦ದು ತಾಕು ಹಾಕಿದ೦ತಿದೆ. ಇದಕ್ಕೆ ಸಿಕ್ಯುಲ ಎ೦ದು ಹೆಸರು. ಮಾನೊಗ್ರ್ಯಾಪ್ಟಸಿನಲ್ಲಿ ಒ೦ದೆ ಒ೦ದು ಬಟ್ಟಲು ಸಾಲು ಉ೦ಟು. ಅ೦ಥ ಪ್ರಾಣಿ ಸ೦ಘಕ್ಕೆ ಏಕಪ೦ಕ್ತಿ ಸ೦ಘ ಎಒದು ಹೆಸರು. ಅನೇಕ ಗ್ರ್ಯಾಪ್ಟೊಲೈಟುಗಳಲ್ಲಿ ಎರಡು ಅಥವಾ ಹೆಚ್ಚು ಬಟ್ಟಲು ಸಾಲು ಗಳು ಇರುವುದು೦ಟು. ಅವುಗಳಿಗೆ ಅನುಕ್ರಮ ವಾಗಿ ದ್ವಿಪ೦ಕ್ತಿ ಅಥವಾ ಬಹುಪ೦ಕ್ತಿ ಸ೦ಘಗಳು ಎ೦ದು ಹೆಸರು. ದ್ವಿಪ೦ಕ್ತಿ ಸ೦ಘಗಳಲ್ಲಿ ಎರಡು ಸಾಲುಗಳ ಮಧ್ಯೆ ಇರುವ ಕೋನಕ್ಕೆ ವಿಕೇ೦ದ್ರೀಕರಣ ಕೋನ ಎ೦ದು ಹೆಸರು. ಈ ಲಕ್ಷಣ ಗ್ರ್ಯಾಪ್ಟೊಲೈಟ್ ಪ್ರಾಣಿಗಳ ವಗೀ೯ಕರಣಕ್ಕೆ ಸಹಾಯಕವಾಗಿದೆ.