ಪುಟ:Mysore-University-Encyclopaedia-Vol-6-Part-18.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

900 ಗ್ಲಾಸಿ ಹೆನ್ರಿ-ಗ್ಲಾಸೆಮ್ಯಾಟಿಕ್ಸ್



ಕೆಳಕ್ಕೆ ಬಾಗುವ ಇವು ಬೇರೆ ಸಮಯಗಳಲ್ಲಿ ಸಮತಳವಾಗಿ ಇರುತ್ತವೆ. ಆಂಟಿನದ ಮೇಲೆ ಒಂದು ಬಿರುಗೂದಲಿನಂಥ ಅಂಗವಿದೆ. ಇದರ ಮೇಲೆ ಒಂಟಿಸಾಲಿನಲ್ಲಿ ಉದ್ದನೆಯ ಮತ್ತು ಕವಲೊಡೆದ ಕೂದಲುಗಳಿವೆ.

ಗ್ಲಾಸಿನ ನೊಣಗಳ ಆಯಸ್ಸು 1-3 ತಿಂಗಳುಗಳು. ಇವುಗಳಲ್ಲಿನ ಸೋಜಿಗದ ಸಂಗತಿಯೆಂದರೆ ಇವು ಮೊಟ್ಟೆಗಳನ್ನಿಡದೆ ನೇರವಾಗಿ ಮರಿಗಳನ್ನೆ ಹಾಕುವುದು. ಸಾಮಾನ್ಯವಾಗಿ ನೀರಿನ ಆಸರೆಯಿರುವಂಥ ಸ್ಥಳಗಳಲ್ಲಿ ಹೆಣ್ಣು ನೊಣ 10 ದಿವಸಗಳಿಗೊಮ್ಮೆ ಮರಿ ಹಾಕುತ್ತದೆ. ಮರಿಗಳ ಭ್ರೂಣಾವಸ್ಥೆ ಮತ್ತು ಡಿಂಭಾವಸ್ಥೆಗಳ ಅವಧಿ ಸುಮಾರು 9 ದಿವಸಗಳು. ತಾಯಿಯ ಗರ್ಭಕೋಶದ ಭಿತ್ತಿಯ ಮೇಲಿರುವ ಒಂದು ಜೊತೆ ಕ್ಷೀರಗ್ರಂಥಿಗಳಿಂದ ಒಸರುವ ದ್ರವರೂಪದ ಆಹಾರವನ್ನು ಕುಡಿದು ಮರಿಗಳು ಬೆಳೆಯುತ್ತವೆ. ಡಿಂಭಗಳು ಅನಂತರ ಮಣ್ಣನ್ನು ಕೊರೆದುಕೊಂಡು ಒಳಸೇರಿ ಕೋಶಾವಸ್ಥೆಯನ್ನು ಕಳೆಯುತ್ತವೆ. ಅನೇಕ ವಾರಗಳ ಮೇಲೆ ಪ್ರೌಢಜೀವಿಗಳಾಗಿ ಹೊರಬರುತ್ತವೆ.

ಗ್ಲಾಸಿನ ನೊಣಗಳ ಚಟುವಟಿಕೆ ವಾತಾವರಣದ ಉಷ್ಣತೆ ಮತ್ತು ಆದ್ರ್ರತೆಗಳನ್ನು ಅವಲಂಬಿಸಿ ಹೆಚ್ಚು ಕಡಿಮೆಯಾಗುತ್ತದೆ. ಉಷ್ಣತೆ ಹೆಚ್ಚಾಗಿದ್ದಾಗ, ಅಲ್ಲದೆ ಬೆಳಗ್ಗೆ ಹಾಗೂ ಸಂಜೆ ಇವುಗಳ ಚಟುವಟಿಕೆ ಹೆಚ್ಚು. ಗ್ಲಾ. ಬ್ರೆವಿಪಾಲ್ಪಾಲಿಸ್ ಎಂಬುದಕ್ಕೆ ಮಾತ್ರ ರಾತ್ರಿ ಕಾಲದಲ್ಲಿ ಚಟುವಟಿಕೆ ಉಂಟು. ಇವು ಜೀವಿಸುವ ಪೊದೆಗಳನ್ನು ನಾಮಾಡುವುದರಿಂದ, ಕೀಟನಾಶಕಗಳನ್ನು ಬಳಸಿ ಗ್ಲಾಸಿನ ನೊಣಗಳನ್ನು ನಿವಾರಿಸುತ್ತಾರಿ. (ಜಿ.ಆರ್.ಆರ್.ಎಸ್.)

ಗ್ಲಾಸಿ ಹೆನ್ರಿ : 1941-. ಅಮೆರಿಕದ ಜಾನಪದ ತಜ್ಞ. ಈತ 1941ರ ಮಾರ್ಚ್ 24ರಂದು ಜನಿಸಿದ. ಈತ 1964ರಲ್ಲಿ ಬಿ.ಎ. ಪದವಿಯನ್ನು ತುಲನೆ ವಿಶ್ವವಿದ್ಯಾಲಯದಿಂದಲೂ 1965ರಲ್ಲಿ ಎಂ.ಎ ಪದವಿಯನ್ನು ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದಲೂ ಪಡೆದ. 1969ರಲ್ಲಿ ಪೆನ್ಸಿಲ್‍ವೇನಿಯ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದ. ಸಂಶೋಧನೆಯನ್ನು ಮಾಡುವ ಸಮಯದಲ್ಲಿ ಪೆನ್ಸಿಲ್‍ವೇನಿಯ ಪ್ರಾಂತದ ಜಾನಪದ ತಜ್ಞನಾಗಿ ಸೇವೆ ಸಲ್ಲಿಸಿದ. ಈತನಿಗೆ 1972ರಲ್ಲಿ ಗುಗ್ಗೆನ್‍ಹೈಮ್ ಫೆಲೊಶಿಪ್ ಲಭಿಸಿತು. ಈತ ಅಮೆರಿಕನ್ ಫೋಕ್‍ಲೋರ್ ಸೊಸೈಟಿಯ ಮತ್ತು ವರ್ನಾಕ್ಯುಲರ್ ಆರ್ಕಿಟೆಕ್ಚರ್ ಫೋರಮ್‍ನ ಹಿಂದಿನ ಅಧ್ಯಕ್ಷನೂ ಆಗಿದ್ದ. ಈತ ಜಾನಪದ ತಜ್ಞನಾಗಿ, ಇಂಡಿಯಾನ ವಿಶ್ವವಿದ್ಯಾಲಯದ ಬ್ಲೂಮಿಂಗ್‍ಟನ್ ಕಾಲೇಜ್‍ನ ನಿವೃತ್ತ ಪ್ರಾಧ್ಯಾಪಕನಾಗಿ ಬೋಧನೆ ಮತ್ತು ಸಂಶೋಧನೆ ಕಾರ್ಯವನ್ನು ನಿರ್ವಹಿಸುತ್ತಿದ್ದಾನೆ. ಜನಪದ ಕಲೆ, ಜನಪದ ಜೇವನ, ಪ್ರಾದೇಶಿಕ ವಾಸ್ತುಶಿಲ್ಪ ಮತ್ತು ಭೌತಿಕ ಸಂಸ್ಕøತಿ ಮುಂತಾದ ವಿಷಯಗಳ ವಿಶೇಷಜ್ಞನಾಗೆ, ಅಮೆರಿಕ, ಐರ್ಲೆಂಡ್, ಟರ್ಕಿ ಮತ್ತು ಬಾಂಗ್ಲಾದೇಶಗಳ ಜಾನಪದನ್ನು ಅರ್ಥೈಸಿ ಅನೇಕ ಕೃತಿಗಳನ್ನು ರಚಿಸಿದ್ದಾನಿ. ಭೌತಿಕ ಜಾನಪದ ಈತನ ವಿಶೇಷ ಆಸಕ್ತಿಯ ಕ್ಷೇತ್ರ. ಈತ ಭೌತಿಕ ಜಾನಪದ ಕುರಿತು ಪ್ರಕಟಿಸುತ್ತಿರುವ ಕೃತಿಗಳು ವಿದ್ವಾಂಸರ ಗಮನ ಸಳೆದಿವೆ.

ಈತ ತನ್ನ ಸಂಗಾತಿ ಹಾಗೂ ಜಾನಪದ ತಜ್ಞೆ ಪ್ರವೀಣಶುಕ್ಲಳನ್ನು ವಿವಾಹವಾದ. ಈಕೆ ಉಡುಪು ಮತ್ತು ಪ್ರಸಾಧನ ಪ್ರವೀಣೆ. ಈ ದಂಪತಿಗೆ ನಾಲ್ಕು ಮಕ್ಕಳು ಮತ್ತು ನಾಲ್ಕು ಮೊಮ್ಮಕ್ಕಳು ಇದ್ದಾರೆ. 2000ರಲ್ಲಿ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಗ್ಲಾಸಿಯನ್ನು ನ್ಯಾಷನಲ್ ಕೌನ್ಸಿಲ್ ಆನ್ ದಿ ಹ್ಯೂಮ್ಯಾನಿಟಿಸ್‍ಗೆ ನೇಮಿಸಿದರು. ಈತ ಈಗಲೂ ತನ್ನನ್ನು ಜಾನಪದ ಕುರಿತ ಸಂಶೋಧನೆ ಹಾಗೂ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾನೆ. (ಎ.ಎಚ್.)

ಗ್ಲಾಸೆಮ್ಯಾಟಿಕ್ಸ್ : ಭಾಷಾಶಾಸ್ತ್ರದಲ್ಲಿ ಭಾಷಾವಿಶ್ಲೇಷಣ ವಿಧಾನವನ್ನು ಆಧರಿಸಿ ಮಡಿರುವ ಹಲವು ಶಾಖೆಗಳಲ್ಲಿ ಒಂದು. ಈ ಶಾಖೆಗಳಲ್ಲಿ ಮುಖ್ಯವಾದವೆಂದರೆ ಅಮೆರಿಕದಲ್ಲಿ ಬ್ಲೂಮ್‍ಫೀಲ್ಡನಿಂದ ಪೋಷಿತವಾದದ್ದೊಂದು, ಚೆಕೊಸ್ಲೊವಾಕಿಯದ ಪ್ರಾಗ್ ನಗರದಲ್ಲಿ ಟ್ರುಬೆಟ್ಸ್‍ಕೋಯ್, ಯಾಕಬ್‍ಸನ್ ಮೊದಲಾದವರಿಂದ ಪ್ರಾರಂಭಿಸಲ್ಪಟ್ಟ ಶಾಖೆಯೊಂದು, ಜಿನೀವ ನಗರದಲ್ಲಿ ಫರ್ಡಿನಾಂಡ್ ಸಸ್ಸೂರನಿಂದ ಬೆಳೆಸಲ್ಪಟ್ಟ ಶಾಖೆಯೊಂದು, ಹಾಗೆಯೇ ಡೆನ್ಮಾರ್ಕಿನ ಕೋಪೆನ್‍ಹೇಗನ್ ಪಟ್ಟಣದಲ್ಲಿ ಪ್ರಚಾರಕ್ಕೆ ಬಂದ ಎಲ್ಮ್‍ಸ್ಲೆವ್ ಮತ್ತು ಉಲ್ಡಾವ್‍ರವರ ಸಿದ್ಧಾಂತವೊಂದು. ಕೊನೆಯ ಪ್ರಭೇದವೇ ಗ್ಲಾಸೆಮ್ಯಾಟಿಕ್ಸ್ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಗ್ಲಾಸ್ಸ ಎಂದರೆ ಗ್ರೀಕೆನಲ್ಲಿ ಭಾಷೆ ಎಂದರ್ಥ. ಈ ಸಿದ್ಧಾಂತದ ಪ್ರಕಾರ ನಿಶ್ಚಯಿಸಲ್ಪಡುವ ಭಾಷೆಯ ಸರಿಯಾದ ತಿಳಿವಳಿಕೆಗೆ, ಅದರ ವಿವರಣೆಗೆ ಅನುಕೂಲವಾದೊಂದು ಬೇಜಗಣಿತೀಯ ವಿಧಾನವನ್ನು ರಚಿಸುವುದೇ ಈ ಸಿದ್ಧಾಂತದ ಲಕ್ಷ್ಯವೆನ್ನಬಹುದು.

ಅಮೆರಿಕದಲ್ಲಿ ಬ್ಲೂಮ್‍ಫೀಲ್ಡನ ಪ್ರಭಾವ ಬೆಳೆದಂತೆ ಯುರೋಪಿನಲ್ಲಿ ಫರ್ಡಿನಾಂಡ್ ಸಸ್ಸೂರನ ಪ್ರಭಾವ ಬೆಳೆದಿರುವುದನ್ನು ಗಮನಿಸಬಹುದು. ಬ್ಲೂಮ್‍ಫೀಲ್ಡನ ಲ್ಯಾಂಗ್‍ವೇಜ್ ಎಂಬ ಗ್ರಂಥವನ್ನು ಆತನೇ ಬರೆದ. ಸಸ್ಸೂರನ ಗ್ರಂಥವಾದರೋ ಆತನ ಮರಣಾನಂತರ ಆತನ ವಿದ್ಯಾರ್ಥಿಗಳು ತಮ್ಮ ಗುರುವಿನ ತರಗತಿಯ ಪಾಠಗಳನ್ನು ಸಂಗ್ರಹಿಸಿ ಮುದ್ರಿಸಿದ್ದಾಗಿದೆ. ಹಾಗಾಗಿ ಆ ಗ್ರಂಥದಲ್ಲಿ ಪರಸ್ಪರ ವಿರೋಧವೆನಿಸುವ ಅನೇಕ ಉಕ್ತಿಗಳಿವೆ. ಇಲ್ಲಿನ ಮಾತುಗಳನ್ನು ವಿದ್ವಾಂಸರು ತಮ ತಮಗೆ ತೋರಿದಂತೆ ವಿವರಿಸಿದ್ದಾರೆ. ಈ ವಿವರಣೆಗಳಲ್ಲಿ ಎಲ್ಮ್‍ಸ್ಲೆವ್‍ನಿಗೂ ಪ್ರಾಗ್ ಶಾಖೆಗೆ ಸಂಬಂಧಿಸಿದವರಿಗೂ ಭೇದವಿರುವುದನ್ನು ಗಮನಿಸಬಹುದು.

ಸಸ್ಸೂರ್ ಭಾಷೆಯನ್ನು ಸಂಕೇತಗಳ ಒಂದು ವಿಶಿಷ್ಟ ಪದ್ಧತಿ ಎಂದಿದ್ದಾನೆ. ಭಾಷೆಯನ್ನು ಕುರಿತಾದ ಈ ವ್ಯಾಖ್ಯೆಯನ್ನು ಎಲ್ಲರೂ ಒಪ್ಪಿಕೊಳ್ಳುವರಾದರೂ ಸಸ್ಸೂರನ ಸಂಕೇತ ಸ್ವರೂಪ ಕಲ್ಪನೆಯನ್ನು ಒಪ್ಪಿಕೊಂಡಿಲ್ಲ. ಭಾಷೆಯಲ್ಲಿನ ಸಂಕೇತಗಳಿಗೆ, ಉದಾ : ಭಾಷೆಯಲ್ಲಿನ ಯಾವುದೇ ಒಂದು ಪದಕ್ಕೆ, ಎರಡು ಮುಖಗಳಿವೆಯೆಂದೂ ಅದರಲ್ಲಿ ಒಂದನ್ನು ಅದರ ವಾಚ್ಯ ರೂಪವೆಂದೂ (ಸಿಗ್ನಿಫಿಯಂಟ್) ಇನ್ನೊಂದನ್ನು ಅದರ ಸೂಚಿತ ರೂಪವೆಂದೂ (ಸಿಗ್ನಿಫೈ) ಸಸ್ಸೂರ್ ಪರಿಗಣಿಸಿದ. ಈ ಬಗ್ಗೆ ಸಸ್ಸೂರನ ತರ್ಕವನ್ನು ಎಲ್ಮ್‍ಸ್ಲೆವ್ ಸ್ವೀಕರಿಸಲಿಲ್ಲವಾದರೂ ಭಾಷೆಯ ಸಂಕೇತಗಳಿಗಿರುವ ಮೇಲಿನ ಎರಡು ರೂಪಗಳನ್ನು ಒಪ್ಪಿಕೊಂಡ. ಎಲ್ಮ್‍ಸ್ಲೆವ್ ಇವನ್ನು ಕ್ರಮವಾಗಿ ಸಂಕೇತದ ಉಚ್ಚಾರಣಾರೂಪ (ಎಕ್ಸ್‍ಪ್ರೆಷನ್) ಮತ್ತು ಅಡಗಿರುವ ರೂಪ (ಕಂಟೆಂಟ್) ಎಂದು ಕರೆದ. ಈ ಸಿದ್ಧಾಂತರೀತ್ಯ ಇವೆರಡನ್ನೂ ಭಾಷೆಯ ಎರಡು ಸ್ತರಗಳೆನ್ನುತ್ತಾರೆ. ಸ್ಥೂಲವಾಗಿ ಹೇಳಬಹುದಾದರೆ, ಸಂಕೇತಗಳ ಉಚ್ಚಾರ ರೂಪ ಧ್ವನಿಶಾಸ್ತದ ವಸ್ತುವೆಂದೂ ಅವುಗಳ ಅಡಗಿರುವ ಅಥವಾ ಆಂತರಿಕ ರೂಪವನ್ನು ಅರ್ಥವಿಜ್ಞಾನ (ಸೆಮ್ಯಾಂಟಿಕ್ಸ್) ಮತ್ತು ವ್ಯಾಕರಣಕ್ಕೆ ಸೇರಿದ ವಸ್ತುವೆಂದೂ ಹೇಳಬಹುದು. ಉದಾಹರಣೆಗೆ ಮನೆಗಳು ಎಂಬ ಪದವನ್ನು ಮನೆ ಮತ್ತು ಗಳು ಎಂದು ವಿಭಾಗಿಸಬಹುದು. ಇಲ್ಲಿ ಮನೆ ಎಂಬಲ್ಲಿ ಮ್, ಅ, ನ್, ಎ, ಎಂಬುದಾಗೆ ನಾಲ್ಕು ಧ್ವನಿಮಾಗಳಿವೆ. ಹಾಗೆಯೇ ಗಳು ಎಂಬಲ್ಲಿ ಗ್, ಅ, ಳ್, ಉ. ಇವೆರಡರಲ್ಲಿ ಮೊದಲಿನ ಭಾಗಕ್ಕೊಂಡು ನಿಶ್ಚಿತ ಅರ್ಥವೂ ಎರಡನೆಯ ಭಾಗಕ್ಕೆ ಬಹುವಚನ ಎಂಬ ಅರ್ಥವೂ ಇದೆಯೆನ್ನಬಹುದು. ಇದಲ್ಲದೆ, ಎಲ್ಮ್‍ಸ್ಲೆವ್ ಈ ಎರಡು ರೂಪಗಳನ್ನು ರಚನೆ (ಫಾರಮ್) ಹಾಗೂ ತಿರುಳು (ಸಬ್ಸ್‍ಟೆನ್ಸ್) ಎಂದು ಎರಡೆರಡು ಭಾಗಗಳಾಗಿ ವಿಂಗಡಿಸುತ್ತಾನೆ. ಉಚ್ಚಾರಣಾರೂಪ ಧ್ವನಿಗಳಿಂದ ಕೂಡಿದೆಯೆನ್ನಬಹುದು. ಹಾಗೆಯೇ ಆಂತರಿಕ ರೂಪವಾದ ಅರ್ಥವನ್ನು ಮನಶಾಸ್ತ್ರ ಇತ್ಯಾದಿಗಳ ಸಹಾಯದಿಂದ ವಿವರಿಸಬಹುದು.

ಭಾಷೆಯ ಸಂಕೇತಗಳ ಉಚ್ಚಾರಣೆಯನ್ನು ಇಲ್ಲವೆ ಬಾಹ್ಯ ಮತ್ತು ಆಂತರಿಕ ರೂಪಗಳ ನಡುವಣ ಸಂಬಂಧವನ್ನು ವಿವರಿಸುವುದೇ ಭಾಷಾ ವಿಶ್ಲೇಷಣದ ಮುಖ್ಯ ಭಾಗ. ಮನೆಯೆಂಬ ಸಂಕೇತದಲ್ಲಿ ಅದರ ಉಚ್ಚಾರಣಾರೂಪಕ್ಕೂ ಅದರಿಂದ ಸೂಚಿತವಾಗುವ ಆಂತರಿಕ ರೂಪವಾದ ಅರ್ಥಕ್ಕೂ ಒಂದು ವಿಶಿಷ್ಟರೀತಿಯ ಸಂಬಂಧವಿದೆ. ಈ ಸಂಬಂಧ ಎಷ್ಟೇ ಯಾದೃಚ್ಛಿಕವಾದರೂ (ಆರ್ಬಿಟ್ರರಿ) ಯಾವುದೇ ಒಂದು ಭಾಷೆಯಲ್ಲಿ ಅವುಗಳೆರಡರ ನಡುವೆ ಅವಿನಾಭಾವ ಸಂಬಂಧವಿದೆ ಎನ್ನಬಹುದು. ವಿಶ್ಲೇಷಣದ ಪ್ರತಿಸ್ತರಗಳಲ್ಲೂ ಈ ವಿಶಿಷ್ಟ ಸಂಬಂಧವನ್ನು ಅನುಸರಿಸಿ, ನಿಯಮಿತ ಸಂಖ್ಯೆಯ ಭಿನ್ನ ಭಿನ್ನ ಆಕಾರದ ಮೂಲವಸ್ತುಗಳನ್ನು (ಎಲಿಮೆಂಟ್ಸ್) ಗಮನಿಸಬಹುದು. ಭಾಷೆಯಲ್ಲಿ ಎಷ್ಟು ಭಿನ್ನ ಅರ್ಥಗಳನ್ನು ಗುರುತಿಸಬೇಕಾಗುವುದೋ ಅಷ್ಟು ಸಂಖ್ಯೆಯ ಉಚ್ಚಾರಣಾರೂಪಗಳೂ ಇವೆಯೆನ್ನಬೇಕಾಗುತ್ತದೆ. ಬೆಕ್ಕು ಎನ್ನುವ ಬದಲು ನಾಯಿ ಎನ್ನುವುದರಿಂದ ಅರ್ಥದಲ್ಲಿ ವ್ಯತ್ಯಾಸ ತೋರಿಬಂದರೆ ಆಗ ಅವೆರಡನ್ನೂ ಬೇರೆ ಬೇರೆ ಬಾಹ್ಯರೂಪವಿರುವ ಸಂಕೇತಗಳೆನ್ನಬೇಕು. ಭಾಷಾ ವಿಶ್ಲೇಷಣದ ಈ ವ್ಯಾಪಾರವನ್ನು ಆದೇಶ ಅಥವಾ ಒಂದರ ಸ್ಥಾನದಲ್ಲಿ ಇನ್ನೊಂದು ಬರುವಿಕೆ (ಕಾಮ್ಯುಟೇಷನ್) ಎನ್ನುತ್ತಾರೆ.

ಯಾವುದೇ ಒಂದು ಸಂಕೇತದ ಉಚ್ಚಾರಣಾರೂಪವನ್ನು ತೆಗೆದುಕೊಂಡು ಅದರ ರಚನೆಯಲ್ಲಿರುವ ಪ್ರತಿಯೊಂದು ಧ್ವನಿಯ ಸ್ಥಾನದಲ್ಲಿ ಆ ಭಾಷೆಯಲ್ಲಿನ ಇತರ ಧ್ವನಿಗಳನ್ನು ಉಪಯೋಗಿಸಿದಾಗ ಭಿನ್ನಾರ್ಥಕ ಸೂಚಕ ಸಂಕೇತಗಳಾಗುವುವೇ ಎಂದು ಪರೀಕ್ಷಿಸಬಹುದು. ಹಾಗೆಯೇ ಯಾವುದೇ ಸಂಕೇತಕ್ಕೆ ಸಂಬಂಧಿಸಿದ ಅರ್ಥವನ್ನು ಇದೇ ಕ್ರಮದಲ್ಲಿ ವಿಭಾಗಿಸಬಹುದು. ವಾಚಾ ಎಂಬ ಸಂಕೇತದ ಅರ್ಥವನ್ನು ತೃತೀಯಾ