ಪುಟ:Mysore-University-Encyclopaedia-Vol-6-Part-18.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ವಾಟಿಮಾಲ ನಗರ-ಗ್ವಾಡ್ಲೂಪ್

ಸಾಕುವ ಕೇಂದ್ರಗಳಿಂದ ಗ್ವಾಟಿಮಾಲದ ಪ್ರಸಿದ್ಧ ನೇಕಾರರಿಗೆ ಉಣ್ಣೆ ಸರಬರಾಯಿ ಆಗುತ್ತದೆ.ಪೆಸಿಫಿಕ್ ಮತ್ತು ಕೆರಿಬಿಯನ್ ತೀರಗಳಲ್ಲಿ ಹಲವು ಜಾತಿಯ ಮೀನುಗಳಿವೆ.ಕರಾವಳಿಯಲ್ಲಿರುವ ಮೀನುಗಾರಿಕೆ ಸಂಸ್ಥೆಗಳು ಹೊರದೇಶಗಳಿಗೆ ಮೀನು ರಫ್ತು ಮಾಡುತ್ತವೆ.

ಗ್ವಾಟಿಮಾಲದಲ್ಲಿ ಸಿಮೆಂಟ್,ಮೇಣದ ಬತ್ತಿ,ರಾಸಾಯನಿಕ ವಸ್ತುಗಳು,ಸಿಗರೇಟ್,ಆಹಾರ ವಸ್ತುಗಳು,ಟೈರು,ಬಟ್ಟೆ ಕೈಗಾರಿಕೆಗಳಿವೆ.ಬಹುತೇಕ ಕೈಗಾರಿಕೆಗಳು ಸಣ್ಣ ಗಾತ್ರದವು.ಸೀಸ,ತವರ,ಕ್ರೋಮ್ ಮತ್ತು ಬೆಳ್ಳಿ ಇಲ್ಲಿಂದ ರಫ್ತಾಗುತ್ತದೆ.ಚಿನ್ನ ವಸಾಹತು ಕಾಲದಲ್ಲಿ ಹೇರಳವಾಗಿತ್ತು.ಈಗ ರಫ್ತಾಗುವಷ್ಟು ಪರಿಮಾಣದಲ್ಲಿ ಉತ್ಪನ್ನವಾಗುತ್ತಿಲ್ಲ.

ಸಾರಿಗೆ,ಸಂಪರ್ಕ:ಈಗ (2012) ಸು.14000 ಕಿಮೀಗಳಷ್ಟು ಹೆದ್ದಾರಿಗಳಿವೆ.ರೂಸ್ವೆಲ್ಟ್ ಹೆದ್ದಾರಿ ಮತ್ತು ಪೆಸಿಫಿಕ್ ತೀರದ ಹೆದ್ದಾರಿ-ಈ ಎರಡು ಅಂತಾರಾಷ್ಟ್ರೀಯ ಹೆದ್ದಾರಿಗಳು ರಾಜ್ಯವನ್ನು ಹಾದುಹೋಗುತ್ತವೆ.ಗ್ವಾಟಿಮಾಲ ನಗರದಿಂದ ಪ್ವೆರ್ಟೊ ವಾರ್ಯೊಸ್ ಮತ್ತು ಮಾಟಿಯಾಸ್ ದ ಗಾಲ್ವೆಜ್ ರೇವುಗಳಿಗೂ ಸಂಪರ್ಕ ಕಲ್ಪಿಸುವ 290 ಕಿಮೀ ಅಟ್ಲಾಂಟಿಕ್ ಹೆದ್ದಾರಿ 1959 ರಲ್ಲಿ ಸಂಚಾರಕ್ಕೆ ತೆರೆಯಿತು.ಈ ದೇಶದಲ್ಲಿ 1290 ಕಿಮೀಗಳಷ್ಟು ರೈಲು ಮಾರ್ಗಗಳಿವೆ.

ಕೆಲವು ನದಿಗಳು ಮತ್ತು ಸರೋವರಗಳು ಜಲಸಂಚಾರಕ್ಕೆ ಹಾಗು ಸರಕುಗಳ ಸಾಗಣೆಗೆ ಅನುಕೂಲವಾಗಿವೆ. ಗ್ವಾಟಿಮಾಲದ ಮುಖ್ಯ ಬಂದರು ಕೆರಿಬಿಯನ್ ತೀರದಲ್ಲಿರುವ ಪ್ವೆರ್ಟೊ ವಾರ್ಯೊಸ್.ಸ್ಯಾಂಗ್ ಹೋಸೇ ಇನ್ನೊಂದು ಬಂದರು.ಇದು ಪೆಸಿಫಿಕ್ ತೀರದಲ್ಲಿದೆ.ಪ್ರಮುಖ ವಿಮಾನ ನಿಲ್ದಾಣ ಗ್ವಾಟಿಮಾಲ ನಗರದ ಬಳಿ ಇದೆ. ಇದಲ್ಲದೆ 46 ಸಣ್ಣ ವಿಮಾನ ನಿಲ್ದಾಣಗಳು ಗ್ವಾಟಿಮಾಲದ ಮುಖ್ಯ ನಗರಗಳಲ್ಲಿವೆ.

ಗ್ವಾಟಿಮಾಲದ ಮುಖ್ಯ ನಗರಗಳಿವು:ಗ್ವಾಟಿಮಾಲ ನಗರ (9.94,938),ಎಸ್ಕ್ವೀಂಟ್ಲಾ(1,03,165) ಕೆಸಾಲ್ಪೆನಾಂಗೊ(1,32,240), ವಿಟಾಲ್ಹ್ಯೂಲು(34,300), ಕೊವಾನ್(47,202), ಪ್ವೆರ್ಟೊ ವಾರ್ಯೊಸ್(48,581) ಮತ್ತು ಸಾಕಾಪ(30,036).

ಗ್ವಾಟಿಮಾಲದ ಮುಖ್ಯ ಕ್ರೀಡೆಗಳು ಫುಟ್ ಬಾಲ್,ಬೇಸ್ ಬಾಲ್,ಈಜು,ಬ್ಯಾಸ್ಕೆಟ್ ಬಾಲ್.ಇಲ್ಲಿಯ ನಾಣ್ಯ ಕೆಟ್ಸಾಲ್ (100 ಸೆಂಟಾವೋಗಳು).

ಗ್ವಾಟಿಮಾಲ ನಗರ: ಮಧ್ಯ ಅಮೆರಿಕದ ಅತ್ಯಂತ ದೊಡ್ಡ ನಗರ.ಗ್ವಾಟಿಮಾಲದ ರಾಜದಾನಿ;ಆರ್ಥಿಕ ಸಾಂಸ್ಕೃತಿಕ ಕೇಂದ್ರ; ಗ್ವಾಟಿಮಾಲ ವಿಭಾಗದ ಆಡಳಿತ ಕೇಂದ್ರ ಕೂಡ.ಜನಸಂಖ್ಯ 41,00,000 (2011).ಗ್ವಾಟಿಮಾಲದ ಮಧ್ಯದಲ್ಲಿ ಪರ್ವತಗಳ ನಡುವಿನ ಕಣೆವೆಯಲ್ಲಿ ಸು.5000 (1600 ಮೀ) ಎತ್ತರದಲ್ಲಿರುವ ಈ ನಗರ ಪ್ವೆರ್ಟೊ ವಾರ್ಯೊಸ್ ಗೆ ನೈರುತ್ಯದಲ್ಲಿ 240 ಕಿಮೀ ದೂರದಲ್ಲಿದೆ.ಇದರ ಔನ್ನತ್ಯದಿಂದಾಗಿ ಇಲ್ಲಿಯ ವಾಯುಗುಣ ತಂಪಾಗಿದೆ. ಗ್ವಾಟಿಮಾಲದ ರಾಜಧಾನಿಯಾಗಿದ್ದ ಆಂಟೀಗ್ವಾ ನಗರ 1773 ರಲ್ಲಿ ಭೂಕಂಪದಿಂದ ನೆಲಸಮವಾದಾಗ ಅದರ ಬದಲು ಗ್ವಾಟಿಮಾಲ ನಗರ ಸ್ಥಾಪಿತವಾಯಿತು (1776).ಮಧ್ಯ ಅಮೆರಿಕ ಸ್ಪೇನಿನಿಂದ ಸ್ವತಂತ್ರಗೊಂಡ ಮೇಲೆ ಮೆಕ್ಸಿಕನ್ ಚಕ್ರಾಧಿಪತ್ಯದ ಆಡಿಯಲ್ಲಿ ಸ್ಥಾಪಿತವಾದ ಮಧ್ಯ ಅಮೆರಿಕ ಪ್ರಾಂತಕ್ಕೂ (1822-23) ಅನಂತರ ಸ್ಥಾಪಿತವಾದ ಮಧ್ಯ ಅಮೆರಿಕ ಒಕ್ಕೂಟಕ್ಕೂ (1823-33) ಆಮೇಲೆ ಗ್ವಾಟಿಮಾಲ ರಾಜ್ಯಕ್ಕೂ ಕೊನೆಗೆ ಗ್ವಾಟಿಮಾಲ ಗಣರಾಜ್ಯಕ್ಕೂ ರಾಜಧಾನಿಯಾಯಿತು.

1917-18 ರ ಭೀಕರ ಭೂಕಂಪದ ಆನಂತರ ನಗರವನ್ನು ಬಹಳಮಟ್ಟಿಗೆ ಪುನರ್ನಿರ್ಮಿಸಲಾಯಿತು.ಉಕ್ಕು ಮತ್ತು ಕಾಂಕ್ರೀಟಿನ ಹಲವು ಭಾರಿ ಕಟ್ಟಡಗಳು ನಿರ್ಮಾಣವಾದುವು.ನಗರದ ಅನೇಕ ಕಡೆಗಳಲ್ಲಿ ಅಲ್ಪವೆಚ್ಚದ ಮನೆಗಳನ್ನು ಕಟ್ಟಲಾಗಿದೆ.ನಗರದ ರಸ್ತೆಗಳು ದೀಪಾಲಂಕೃತವೂ ಶುಭ್ರವೂ ಆಗಿವೆ.

ಸಾರ್ಕಾರಿ ಕಚೇರಿಗಳ ಜೊತೆಗೆ ಗ್ವಾಟಿಮಾಲ ನಗರ ಕೈಗಾರಿಕ ವಾಣಿಜ್ಯ ಕಚೇರಿಗಳು ಮತ್ತು ಬ್ಯಾಂಕುಗಳಿಂದ ಕೂಡಿದೆ.ಇಡೀ ರಾಷ್ಟ್ರದ ಕೈಗಾರಿಕೆಗಳಲ್ಲಿ ಅರ್ಧದಷ್ಟು ಗ್ವಾಟಿಮಾಲದಲ್ಲೇ ಇವೆ.ಇದೊಂದು ಸಾರಿಗೆ ಕೇಂದ್ರ, ವಾಣಿಜ್ಯಕೇಂದ್ರ,ನಗರದ ದಕ್ಷಿಣದಲ್ಲಿ ಲ ಆರೋರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ.ಇದೊಂದು ಶಿಕ್ಶಣ ಕೇಂದ್ರ ಕೂಡ.ಪ್ರಾಚೀನ ಸ್ಯಾಂಗ್ ಕಾರ್ಲೊಸ್ ವಿಶ್ವವಿದ್ಯಾಲಯ ಸೇರಿದಂತೆ ಒಟ್ಟು 10 ವಿಶ್ವವಿದ್ಯಾಲಯಗಳು ಇವೆ.ಕಲಾ ಶಾಲೆಗಳೂ ವಾಣಿಜ್ಯ ತಾಂತ್ರಿಕ ಹಾಗೂ ಸೈನಿಕ ಶಿಕ್ಷಣ ಶಾಲೆಗಳೂ ಇವೆ.ಅನೇಕ ವಸ್ತುಸಂಗ್ರಹಾಲಯಗಳುಂಟು.

ಗ್ವಾಟಿಮಾಲ ನಗರದಲ್ಲಿಯ ರಾಷ್ಟ್ರೀಯ ಅರಮನೆ,ಅಂಚೆ ಕಚೇರಿ,ಪೋಲಿಸ್ ಕೇಂದ್ರ ಕಚೇರಿ,ರಾಷ್ಟ್ರೀಯ ಪತ್ರಾಗಾರ ಮತ್ತು ರಾಷ್ಟ್ರೀಯ ಗ್ರಂಥಾಲಯ ಕಟ್ಟಡಗಳೂ ಸಾನ್ ಫ್ರಾನ್ಸಿಸ್ಕೊ,ಸಂಟೊ ಡೊಮಿಂಗೊ,ಲ ಮರಸ್ ದ್ ಚರ್ಚುಗಳೂ ಪ್ರೇಕ್ಷಣೀಯ.ಮಿನರ್ವ ಉದ್ಯಾನದಲ್ಲಿ ಗ್ವಾಟಿಮಾಲ ರಾಜ್ಯದ ಉಬ್ಬುತಗ್ಗು ಭೂಪಟವಿದೆ.ಪುರಾತತ್ತ್ವ ಮತ್ತು ಇತಿಹಾಸ ವಸ್ತುಸಂಗ್ರಹಾಲಯಗಳು,ಮೇಲು ಕಾಲುವೆ,ಕೇಂದ್ರೀಯ ಮಾರುಕಟ್ಟೆ,1950ರ ಅಮೆರಿಕನ್ ಒಲಂಪಿಕ್ ಕ್ರೀಡೆಗಳಿಗಾಗಿ ಕಟ್ಟಲಾದ ಒಲಂಪಿಕ್ ನಗರ-ಇವೂ ಪ್ರಸಿದ್ಧವಾಗಿವೆ.

ಗ್ವಾಡರ್:ಪಾಕಿಸ್ತಾನದ ಒಂದು ಬಂದರು.ಅರಬ್ಬೀ ಸಮುದ್ರದ ಮಕ್ರಾನ್ ತೀರದಲ್ಲಿ (ಬಲೂಚಿಸ್ತಾನ),ಕರಾಚಿಯಿಂದ ಪಶ್ಚಿಮಕ್ಕೆ 300 ಕಿಮೀ ದೂರದಲ್ಲಿ ಇದೆ.ಜನಸಂಖ್ಯೆ 53,080 (2006).ಗ್ವಾಡರ್ ಕೊಲ್ಲಿಯ ಪೂರ್ವಭಾಗದಲ್ಲಿ ರಾಸ್ ನುಹ್ ಪರ್ಯಾಯದ್ವೀಪದ ಕಿರಿದಾದ ಪ್ರದೇಶದ ಬಂಡೆಯ ಪ್ರಪಾತದ ಕೆಳಗಿದೆ.ಇದು ಭಾರತ-ಪಾಕಿಸ್ತಾನಗಳಿಂದ ಪರ್ಷಿಯನ್ ಖಾರಿಗೂ ಯುರೋಪಿಗೂ ಹೋಗುವ ತಂತಿ ಮಾರ್ಗದ ಮಧ್ಯದಲ್ಲಿದೆ.

ಗ್ವಾಡರನ್ನೂ ಮಕ್ರಾನ್ ತೀರದ ಇತರ ಪಟ್ಟಣಗಳನ್ನೂ 1797 ರಲ್ಲಿ ಮಸ್ಕತ್ ಸುಲ್ತಾನ ಇಬು ಅಹಮ್ಮದ್ ಗ್ವಾಡರ್ ವಶಪಡಿಸಿಕೊಂಡಿದ್ದ.ಮುಂದೆ ಇವನ ರಾಜ್ಯ ಗ್ವಾಡರ್ ಪ್ರದೇಶಕ್ಕೆ ಮಾತ್ರ ಸೀಮಿತಗೊಂಡಿತ್ತು.1958 ರಲ್ಲಿ ಇದು ಪಾಕಿಸ್ತಾನಕ್ಕೆ ಸೇರಿತು.ಗ್ವಾಡರಿನಿಂದ ಮೀನು,ಖರ್ಜೂರ,ಉಣ್ಣೆ ರಫ್ತಾಗುತ್ತದೆ.

ಗ್ವಾಡ್ಲೂಪ್:ಪೂರ್ವ ಕೆರಿಬಿಯನ್ ಸಮುದ್ರದ ಲೀವರ್ಡ್ ದ್ವೀಪ ಸಮೂಹದಲ್ಲಿ ಫ್ರೆಂಚ್ ಆಂಟಿಲೀಸಿನ ಅತ್ಯಂತ ವಿಸ್ತಾರವಾದ ಪ್ರದೇಶ;ಎರಡು ದ್ವೀಪಗಳನ್ನೂಳಗೊಂಡಿದೆ.ಉ.ಆ.16' 15'ಮತ್ತು ಪ.ರೇ.61'35'ಮೇಲಿದೆ ಬಾಸ್ ಟೇರ್ ದ್ವೀಪಕ್ಕೂ ಪೂರ್ವದ ಗ್ರ್ಯಾಂಡ್ ಟೇರ್ ದ್ವೀಪಕ್ಕೂ ನಡುವೆ ಜವುಗೂ ರಿವ್ಯೇರ್ ಸಾಲೀ ಎಂಬ ಕಿರು ಜಲಸಂಧಿ ಇದೆ.ಈ ದ್ವೀಪಗಳ ಪೂರ್ವ ಮತ್ತು ದಕ್ಷಿಣಗಳಲ್ಲಿ ಸ್ವಲ್ಪ ದೂರದಲ್ಲಿ ಮೇರೀ ಗಲಾಂಟ್ ,ಲಾ ಡೆಸಿರೇಡ್, ಈಲ್ಸ್ ದ ಸೇಂಟ್ಸ್,ಈಲ್ಸ್ ದ ಲ ಪೆಟಿಲ್ ಟೇರ್ ಎಂಬ ದ್ವೀಪಗಳಿವೆ.ಇವುಗಳಲ್ಲಿ ಮೊದಲು ಎರಡು ಸಣ್ಣವು,ಉಳಿದವು ಪುಟ್ಟುವು.ವಾಯವ್ಯದಲ್ಲಿ 208 ಕಿಮೀ ದೂರದಲ್ಲಿ ಸೇಂಟ್ ಬಾರ್ಟೇಲ್ಮೀ ದ್ವೀಪವು 224 ಕಿಮೀ ದೂರದಲ್ಲಿ ಸೇಂಟ್ ಮಾರ್ಟಿನ್ ದ್ವೀಪವೂ ಇವೆ.ಸೇಂಟ್ ಮಾರ್ಟಿನ್ ದ್ವೀಪದ ಉತ್ತರ ಭಾಗವೂ ಉಳಿದೆಲ್ಲ ದ್ವೀಪಗಳೂ ಇವೆ.ಸೇಂಟ್ ಮಾರ್ಟಿನ್ ದ್ವೀಪದ ಉತ್ತರ ಭಾಗವು ಉಳಿದೆಲ್ಲ ದ್ವೀಪಗಳೂ ಗ್ವಾಡ್ಲೂಪಿಗೆ ಅಧೀನವಾಗಿವೆ.ಒಟ್ಟು ವಿಸ್ತೀರ್ಣ 1,628 ಚ.ಕಿಮೀ.

ಪಶ್ಚಿಮ ಮತ್ತು ಪೂರ್ವ ದ್ವೀಪಗಳ ಮೇಲ್ಮೈಲಕ್ಷಣದಲ್ಲಿ ಬಹಳ ವ್ಯತ್ಯಾಸವಿದೆ.ಬಾಸ್ ಟೇರ್ ದ್ವೀಪದಲ್ಲಿ ದಿಣ್ಣೆಗಳೂ ಮಧ್ಯದಲ್ಲಿ ಜ್ವಾಲಾಮುಖಿಗಳ ಮೊನಚಾದ ಗುಡ್ಡಗಳೂ ಇವೆ.ದಕ್ಷಿಣಕ್ಕೆ ಹೋದಂತೆ ಈ ಗುಡ್ಡಗಳ ಎತ್ತರ ಹೆಚ್ಚಿ ಸೂಫ್ರೀಯೇರದಲ್ಲಿ ಪರ್ಯವಸಾನವಾಗುತ್ತದೆ.ಇದು ಲೆಸ್ಸರ್ ಆಂಟಿಲೀಸಿನಲ್ಲೇ ಅತ್ಯುನ್ನತ ಪರ್ವತ.ಇದೊಂದು ಆಗ್ನಿಪರ್ವತ;1797 ಮತ್ತು 1836 ರಲ್ಲಿ ಸ್ಫೋಟಿಸಿತ್ತು.ಪೂರ್ವಕ್ಕಿಂತ ಪಶ್ಚಿಮ ಕರಾವಳಿಯ ಕಡೆಗೆ ಪರ್ವತದ ಇಳಿಜಾರು ಹೆಚ್ಚು ಕಡಿದು.ಗ್ರಾಂಡ್ ಟೇರ್ನಲ್ಲಿ ಭೂಮಿ ಮಟ್ಟಸವಾಗಿದೆ.ಇಲ್ಲೆಲ್ಲೂ ಎತ್ತರದ ಗುಡ್ಡಬೆಟ್ಟಗಳಿಲ್ಲ.ಇಲ್ಲಿಯದು ಸುಣ್ಣಕಲ್ಲು ನೆಲ.ಮೇರೀ ಗಲಾಂಟ್,ಲಾ ಡೆಸಿರೇಡ್ ಗಳ ನೆಲವೂ ಇದೇ ರೀತಿ ಇದೆ.ಬಾಸ್ ಟೇರ್ ಪರ್ವತದ ಇಳುಕಲಿನಲ್ಲಿ ಅನೇಕ ತೊರೆಗಳು ಹರಿಯುತ್ತವೆ.ಆದರೆ ಗ್ರ್ಯಾಂಡ್ ಟೇರ್ನಲ್ಲಿರುವ ತೊರೆಗೆಳು ಕೆಲವು ಮಾತ್ರ.

ಈ ದ್ವೀಪಗಳ ಕ್ಷೇತ್ರ ಚಿಕ್ಕದಾಗಿದ್ದರೂ ವಾಯುಗುಣದಲ್ಲಿ ವ್ಯತ್ಯಾಸಗಳುಂಟು.ಬೇಸಗೆಯ(ಜೂನ್) ಸರಾಸರಿ ಗರಿಷ್ಠ ಉಷ್ಣತೆ 82'ಫ್ಯಾ (28'ಸೆಂ.). ಆದರೆ ಚಳಿಗಾಲದ (ಜನವರಿ) ಸರಾಸರಿ ಕನಿಷ್ಠ್ ಉಷ್ಣತೆ 75'ಫ್ಯಾ.(24'ಸೆಂ.).

ಗ್ರ್ಯಾಂಡ ಟೇರಿನಲ್ಲಿ ವರ್ಷಕ್ಕೆ 40" (100 ಸೆಂಮೀ) ಮಳೆ 100"ಗಿಂತ (250 ಸೆಂಮೀ) ಅಧಿಕ.ಇದು ಮಾರುತಗಳು ಮಾರ್ಗಾದಲ್ಲಿದೆ.ಇಲ್ಲಿ ಜುಲೈ-ಸೆಪ್ಟೆಂಬರ್ ಮಳೆಗಾಲ.