ಪುಟ:Mysore-University-Encyclopaedia-Vol-6-Part-3.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಾಗದಿಂದ ಸುಮ್ಮನೆ ವಾಚನ ಮಾಡುವುದು ಗಮಕವೇ.ಗದ್ಯಕೃತಿಗಳನ್ನು,ನಾಟಕ ಭಾಗಗಳನ್ನು,ಅನೇಕ ಹೊಸಗನ್ನಡ ಕವಿತೆಗಳನ್ನು-ಅದರಲ್ಲೂ ಹೆಚ್ಚಿನ ನವ್ಯಕತೆಗಳನ್ನು ಹಾಡಲಾಗದು.ಅವನ್ನು ಭಾವಪೂಣ೯ವಾಗಿ ಅಭಿನಯ ಸಹಿತವಾಗಿ ಓದುವುದನ್ನು ಅಭ್ಯಾಸ ಮಾಡಬೇಕು. ಕನ್ನಡ ಸಾಹಿತ್ಯದಲ್ಲಿ ಬಗೆಬಗೆಯ ಕಾವ್ಯ ರಚನೆಯಾಗಿರುವುದರಿಂದ ಅವನ್ನು ಗಮಕಿಸುವ ರೀತಿಯೂ ಬಗೆಬಗೆಯಾಗಿದೆ.ಅದರ ಪ್ರಯೋಗವನ್ನು ಗಮಕಿಯಾದವನು ಸಾಧಿಸಬೇಕಾಗಿದೆ.ಮೊದಲು ಹಳೆಯ ಚಂಪೂಕಾವ್ಯವನ್ನು ನೋಡಬಹುದು.ಅದರಲ್ಲಿ ಗದ್ಯ,ಪದ್ಯ ಮಿಶ್ರವಾಗಿರುತ್ತದೆ;ಕಂದ,ವೃತ್ತಗಳಿರುತ್ತವೆ.ಗದ್ಯವನ್ನು ಸ್ಪುಟವಾಗಿ ಸರಾಗವಾಗಿ ಓದಬೇಕು.ಅನೇಕ ವೃತ್ತಗಳಿಗೆ ಹಾಗೂ ಕಂದಕ್ಕೆ ತಾಳವಿಲ್ಲ.ಲಯವುಂಟು.ಅಥ೯ ಕೆಡದಂತೆ,ನಿಲುಗಡೆ ಅರಿತು ಸೂಕ್ತ ರಾಗಗಳನ್ನು ಸಂಯೋಜಿಸಿ ಹಾಡಿದಾಗ ಮನರಂಜನೆಯಾಗುವುದು.ಆದಿಕವಿ ಪಂಪನ ಸಮಸ್ತಭಾರತವನ್ನೂ ಮಹಾಕವಿ ರನ್ನನ ಗದಾಯುದ್ಧವನ್ನೂ ವಾಚಿಸುವ ಬಗೆಯನ್ನು ಅರಿತುಕೊಳ್ಳಬೇಕು;ಜನ್ನನ ಯಶೋದರ ಚರಿತೆ ಬರಿ ಕಂದಗಳಲ್ಲಿ ಬಂದಿದೆಯಾದರೂ ಸುಲಲಿತವಾಗಿದೆ,ಸುನಾದಮಯವಾಗಿದೆ.ವಿವಿಧ ರಾಗಗಳಲ್ಲಿ ಅದನ್ನು ಗಮಕಿಸಬಹುದು.ಷಟ್ಪದಿ ಕಾವ್ಯಗಳಲ್ಲಿ ಕುಮಾರವ್ಯಾಸನ ಮಹಾಭಾರತ ಗಮಕಿಗಳ ಭಾಗ್ಯನಿಧಿ ಎನಿಸಿದೆ.ಕುಮಾರವಾಲ್ಮೀಕಿಯ ತೊರವೆ ರಾಮಾಯಣಕ್ಕೆ ಅನಂತರದ ಸ್ಥಾನ.ಇವೆರಡೂ ತುಂಬ ಜನಪ್ರಿಯವಾಗಿವೆ.ಭಾರತ ಬಿಂದೂರಾಯರೂ,ಕೃಷ್ಣಗಿರಿ ಕೃಷ್ಣರಾಯರು ವಾಚನ ಮಾಡಿ ನಾಡಿನಾದ್ಯಂತ ಇವನ್ನು ಪ್ರಚಾರ ಮಾಡಿದ್ದಾರೆ.ಜನಸಾಮಾನ್ಯರು ಗುರುತಿಸಬಲ್ಲ ನವರಾಗಗಳೇ ಸಾಕು.ಆದ್ದರಿಂದ ಗಮಕಿಗೂ ಸಂಗೀತಾಭ್ಯಾಸ ಬಹಳ ಮುಖ್ಯ.ರಾಗಗಳ ಪರಿಚಯ,ಅವುಗಳನ್ನು ಇಂಪಾಗಿ ಹಾಡುವ ಯೋಗ್ಯತೆ ಅವನಿಗಿರಬೇಕಾಗುತ್ತದೆ.ಸಾಹಿತ್ಯದಲ್ಲಿ ಅಡಗಿರುವ ನವರಸಗಳನ್ನು ಗುರುತಿಸಿ ಅದನ್ನು ಪೋಷಿಸುವ ರಾಗಶಕ್ತಿಯನ್ನು ಗಮಕಿ ಗಳಿಸಿರಬೇಕಾಗುತ್ತದೆ. ಛಂದಸ್ಸಿನ ವಿಚಾರಕ್ಕೆ ಬಂದರೆ ಕವಿಯು ತನ್ನ ಪದ್ಯಗಳನ್ನು ಯಾವ ತಾಳಗತಿಯಲ್ಲಿ ನಡೆಸಿದ್ದಾನೆಂಬ ಅರಿವು ಗಮಕಿಗೆ ಅಗತ್ಯ ತಾಳಯುತವಾಗಿ ವಾಚಿಸುವುದು ರೂಢಿಯಲಿಲ್ಲದಿದ್ದರೂ ಕವಿಕೃತಿಯನ್ನು ವಾಚಿಸುವಾಗ ತಾಳಕ್ಕೆ ಆಧಾರವಾದ ಗತಿಯನ್ನು ಗುರುತಿಸಿ ಆ ಗತಿಯನ್ನು ಮೆರೆಸಬೇಕು.ಕವಿಗೆ ಸ್ಪೂತಿ೯,ಆವೇಶ ಬಂದಾಗ ಅವನ ಮಾತೂ ಲಯಬದ್ದವಾಗುತ್ತದೆ,ರಾಗಬದ್ದವಾಗುತ್ತದೆ.ಆಗ ಅವನ ಪದ್ಯಗಳು ಒಂದು ಗತಿಯಲ್ಲಿ ಅಳವಡುವಂತಾಗುತ್ತದೆ.ಅದನ್ನರಿತು ಗಮಕಿ ವಾಚಿಸಿದರೆ ವಾಚನದ ವೈಶಿಷ್ಟ್ಯ ಹೆಚ್ಚಾಗುವುದರೊಂದಿಗೆ ಕೃತಿಯ ಆಸ್ವಾದವೂ ಹೆಚ್ಚುತ್ತದೆ. ಗಮಕ ಕಲೆಯು ಬಹು ಪ್ರತಿಭೆಗಳನ್ನು ಅಂತಗ೯ತಗೊಳಿಸಿಕೊಂಡಿರುವ ಅದ್ಭುತ ಕಲಾಪ್ರಕಾರ.ಸುಶ್ರಾವ್ಯತೆ,ಕಾವ್ಯದ ಅಥ೯ವಂತಿಕೆ,ರಸಾನುಭವ,ಭಾಷಾಸೌಂದಯ೯ ಇವೆಲ್ಲದರ ಸಮಥ೯ ಅಭಿವ್ಯಕ್ತಿಗೆ ಪೂರಕವಾದ ರಾಗ ಭಾವಗಳ ರಹಸ್ಯ ಇತ್ಯಾದಿಗಳೆಲ್ಲವೂ ಈ ಕಲೆಯಲ್ಲಿ ಅಡಗಿದೆ.ಗಮಕಿ ಎಂಬ ಹೆಸರಿಗೆ ಪಾತ್ರನಾದವನು ಕಾವ್ಯ ವಾಚಿಸುವಾಗ ಈ ಎಲ್ಲ ಅಂಶಗಳ ಸಮಥ೯ ನಿವ೯ಹಣೆಯ ಜವಾಬ್ದಾರಿಯುಳ್ಳವನಾಗಿರಬೇಕು. ಗಮಕವೆಂದರೆ ಸಂಸ್ಕೃತದಲ್ಲಿ ನಡೆ,ಗತಿ ಎಂದಥ೯ವಾಗುವುದು.ಗಮನದ ಭಾವವೆಂತಲೂ ಅಥ೯.ಸಂಗೀತ ಶಾಸ್ತ್ರದ ರೀತಿ ಗಮಕವೆಂದರೆ ಸ್ವರವಿನ್ಯಾಸ,ಧ್ವನಿ ವಿಶೇಷ ಎಂದಥ೯.ಆರೋಹಣ,ಅವರೋಹಣ,ಢಾಲು,ಸ್ಫುರಿತ,ಕಂಪನ,ಆಹತ,ಪ್ರತ್ಯಾಹತ,ತ್ರಿಪುಚ್ಚ.ಆಂದೋಳ,ಮೂಭ೯ನಾ ಎಂದು ಹತ್ತು ವಿಧವಾದ ಗಮಕಗಳು ಸಂಗೀತದಲ್ಲಿವೆ.ಗಮಕಿಯ ಗಮಕಕ್ಕೆ ಕಾಕು ಎಂದೂ ಸಂಸ್ಕೃತದಲ್ಲಿ ಕರೆಯುವರು. ೧೯-೨೦ನೆಯ ಶತಮಾನದ ಅವಧಿಯಲ್ಲಿ ಕನಾ೯ಟಕದಲ್ಲಿ ಗಮಕಲೆ,ಕಾವ್ಯವಾಚನ ಕ್ಷೇತ್ರದಲ್ಲಿ ಶ್ರಮಿಸುತ್ತ ಈ ಪ್ರಾಚೀನ ಕಲೆಯನ್ನು ನಾಡಿನಾದ್ಯಾಂತ ಪ್ರಸಾರ ಮಾಡಿದ ಹಿರಿಯರನೇಕರು ಆಗಿಹೋಗಿದ್ದಾರೆ,ಇನ್ನು ಹಲವು ಹಿರಿಯರು ನಮ್ಮೊಡನಿದ್ದು ಗಮಕ ಪ್ರಸಾರ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.ಅಭಿನವ ಕಾಳಿದಾಸರೆಂದು ಪ್ರಸಿದ್ಧರಾಗಿದ್ದ ಬಸವಪ್ಪಶಾಸ್ತ್ರಿಗಳು (೧೮೪೩-೯೧) ಗಮಕ ಕಲಾಕ್ಷೇತ್ರದಲ್ಲಿ ಪ್ರಥಮ ಸ್ಮರಣೀಯರು.ಇವರು ಸ್ವತಃ ಕವಿಗಳೂ ವಿದ್ವಾಂಸರೂ ಪಂಡಿತರೂ ಆಗಿದ್ದುದು ಇವರ ಗಮಕ ಕಲೆಗೆ ಅದ್ಭುತವಾಗಿ ವಿಶಿಷ್ಟ ಆಯಾಮಗಳನ್ನು ಒದಗಿಸಿತ್ತು.ಸಂಗೀತ-ಸಾಹಿತ್ಯ-ಭಾಷೆಗಳಲ್ಲಿನ ಪಾಂಡಿತ್ಯಪೂಣ೯ತೆ ಇವರ ಗಮಕ ಕಲೆಯ ಶ್ರೀಮಂತಿಕೆಯಾಗಿತ್ತು.ಇವರ ಗಮಕ ವಾಚನವನ್ನು ಕುರಿತಂತೆ ಹಿರಿಯ ವಿದ್ವಾಂಸರಾದ ಆರ್.ನರಸಿಂಹಾಚಾಯ೯ರ ನುಡಿಗಳು ಇಲ್ಲಿ ಉಲ್ಲೇಖನೀಯ:ನನಗೆ ತಿಳಿದ ಹಾಗೆ ಭಾರತವನ್ನು ಈಚೆಗೆ ಚೆನ್ನಾಗಿ ಓದುತ್ತಿದ್ದರು ಮೈಸೂರಿನಲ್ಲಿದ್ದ ಸುಪ್ರಸಿದ್ದ ಬಸವಪ್ಪಶಾಸ್ತ್ರಿಗಳು.ಇವರು ಮೈಸೂರು ಶ್ರೀಮನ್ಮಹಾರಾಜರ ಆಸ್ಥಾನದಲ್ಲಿ ಕವೆಗಳಾಗಿದ್ದು ಅಭಿನವ ಕಾಳಿದಾಸ ಎಂಬುವ ಬಿರುದು ಪಡೆದಿದ್ದವರು.ಇವರಷ್ಟು ಚೆನ್ನಾಗಿ ಭಾರತವನ್ನು ಓದಿದವರನ್ನು ನಾನು ಕಂಡಿಲ್ಲ.ಈ ಮಾತುಗಳಿಂದ ಇವರ ಅವಧಿಯಲ್ಲಿ ಗಮಕಕಲೆ ಸಾಕಷ್ಟು ವ್ಯಾಪ್ತಿಯನ್ನುಳ್ಳದ್ದಾಗಿತ್ತು ಎಂಬುದು ತಿಳಿದುಬರುತ್ತದೆ.ಬಸವಪ್ಪಶಾಸ್ತ್ರಿಗಳ ಸಾಕ್ಷಾತ್ ಶಿಷ್ಯೆ ಹಾಡಿನ ನಾಗಮ್ಮ ಉತ್ತಮ ಗಮಕಿಯೆನಿಸಿಕೊಂಡಿದ್ದರು.ಇನ್ನೂ ಎಷ್ಟು ಎಷ್ಟು ಶಿಷ್ಯರನ್ನು ಶಾಸ್ತ್ರಿಗಳು ತಯಾರು ಮಾಡಿದ್ದರೆಂಬುದು ಸ್ಪಷ್ಟವಾಗಿ ತಿಳಿಯುವುದಿಲ್ಲ.ಹಿರಿಯರಾಗಿದ್ದ ನಿಟ್ಟೂರು ಶ್ರೀನಿವಾಸರಾಯರೂ ಬಸವಪ್ಪಶಾಸ್ತ್ರಿಗಳನ್ನು ಕಂಡುಕೇಳಿದುದನ್ನು ತಿಳಿಸಿದ್ದಾರೆ (ಸಾಚ್ಯಗಮಕ ಸಂಮೇಳನದ ಗಮಕಮಂದಾರ ಎಂಬುವ ಸ್ಮರಣ ಸಂಚಿಕೆಯಲ್ಲಿ).ಅನಂತರದಲ್ಲಿ ಬೆಳೆದು ಬಂದ ಗಮಕ ಕಲೆಯಲ್ಲಿ ಕೆಲವು ಅಂಶಗಳೇ ಕಾಣಬಂದವು.ಸಾಹಿತ್ಯ ಪ್ರಧಾನವೇ,ಸಂಗೀತವೇ ಕಾವ್ಯವೊದುವಲ್ಲಿ ಗಮಕಿಗೆ ವ್ಯಾಖ್ಯಾನದ ಅಗತ್ಯವಿದೆಯೇ ಎಂಬುವ ಅನಿಸಿಕೆಯೂ ಮೂಡಿತು. ಹಿರಿಯ ಗಮಕಿಗಳಲ್ಲಿ ಹೆಸರಾದವರು ಸಂಗೋಬಿಂದೂರಾಯರು (೧೮೭೭-೧೯೬೯)ಅಥವಾ ಭಾರತದ ಬಿಂದೂರಾಯರೆಂದೇ ಪ್ರಸಿದ್ಧರಾದವರು.ಸಾಹಿತ್ಯಕ್ಕೆ ಒತ್ತುಗೊಟ್ಟು ಸಂಗೀತ ರಸಭಾವಕ್ಕಾಗಿ ಮಾತ್ರ ಅಳವಡಿಸಿಕೊಳ್ಳುತ್ತ ಕಾವ್ಯವನ್ನು ಕೇಳುಗರಿಗೆ ಮುಟ್ಟಿಸಿತ್ತಿದ್ದ ಬಿಂದೂರಾಯರ ಕುಮಾರವ್ಯಾಸ ಭಾರತ ಸಾರೋದ್ಧಾರ ಎಂಬುವ ಮೇರು ಕೃತಿ ಇಂದು ಆಕರ ಗ್ರಂಥವೆನಿಸಿದೆ.ರಾಯರ ಗಮಕ ಶುದ್ಧಗಮಕಪದ್ಧತಿಯೆಂದೇ ಪ್ರಸಿದ್ಧ.ಅವರ ಶಿಷ್ಯೆ-ಶಿಷ್ಯೆಯರು - ಮೈಸೂರಿನ ಭಾರತದ ಕೃಷ್ಣರಾಯರು,ಶಕುಂತಲಾಬಾಯಿ,ಪಾಂಡುರಂಗರಾವ್,ಎಂ.ಎಸ್.ಚಂದ್ರಶೇಖರಯ್ಯ,ಧಾರವಾಡದ ಸುಪ್ರಸಿದ್ಧ ಗವಾಯ್ ಗುರುರಾವ್ ದೇಶಪಾಂಡೆ ಮೊದಲಾದವರು. ಹೀಗೆಯೇ ಮೈಸೂರಿನಲ್ಲಿದ್ದ ತಲಕಾಡು ಮಾಯಿಗೌಡರು,ಜವಳಿ ಅಂಗಡಿ ತಮ್ಮಯ್ಯ-ಇವರ ಸುಪ್ರಸಿದ್ಧ ಶಿಷ್ಯರು.ಅನೇಕ ಗ್ರಂಥ ರಚನೆಯನ್ನು ಮಾಡಿದ ಮೈಸೂರು ರಾಘವೇಂದ್ರರಾಯರು,ಕಳಲೆ ಸಂಪತ್ಕುಮಾರಾಚಾಯ೯ರ ಗಮ್ಮತ್ತಿನ ಗಮಕ ಹಾಗೂ ಅವರ ಶ್ಲೋಕ ಸಂಗೀತ,ಗೌರೀದೇವುಡು ನರಸಿಂಹಶಾಸ್ತ್ರೀ ಅವರು(೧೮೭೮-೧೯೩೩),ಮೈ.ಶೇ.ಅನಂತಪದ್ಮನಾಭಯ್ಯ,ಕೆ.ಎ.ವೆಂಕಟಸುಬ್ಬಯ್ಯ ವ್ಯಾಖ್ಯಾನಕಾರ ಕ.ಲಿ.ವೈದ್ಯನಾಥನ್(೧೯೨೮-೨೦೧೩),ಮಾಲೂರಿನ ಟಿ.ವೆಂಕಟಪ್ಪನವರು(೧೯೧೫-೯೫),ಗಮಕ ರೂಪಕಗಳೆಂಬುವ ಹೊಸ ಪ್ರಕಾರವನ್ನು ಸೃಜಿಸಿದ ಹು.ಮ.ರಾಮಾರಾಧ್ಯರು(೧೯೦೭-೭೩),ಸರೋಜಮ್ಮ ಅನಂತರಾಮಯ್ಯ(೧೯೧೮-೯೩),ಮತ್ತೂರಿನ ರಾಮಾಶಾಸ್ತ್ರಿಗಳು ಹಾಗೂ ಲಕ್ಷ್ಮೀಕೇಶವಶಾಸ್ತ್ರಿಯವರು,ಮತ್ತೂರು ಕೃಷ್ಣಮೂತಿ೯ಯವರು ಹೀಗೆ ನಮಗೆ ದೊರಕುವ ದಾಖಲೆಗಳಿಂದ ೫೦೦ಕ್ಕೂ ಹೆಚ್ಚು ಗಮಕಿಗಳು ವ್ಯಾಖ್ಯಾನಕಾರರು ಇದ್ದಾರೆ. ಎಂ.ರಾಘವೇಂದ್ರರಾಯರು ಕುಮಾರವ್ಯಾಸ ಗುರುಕುಲ,ಕಾವ್ಯರಂಜನೀ ಸಭಾ ಮುಂತಾದ ಗಮಕ ಬೋಧನ ಶಾಲೆಗಳನ್ನು ತೆರೆದು ನೂರಾರು ಶಿಷ್ಯರನ್ನು ತಯಾರು ಮಾಡಿದರು ಹಾಗೂ ಕನಾ೯ಟಕ ಸಕಾ೯ರದಿಂದ ಕನಕಪುರಂದರ ಪ್ರಶಸ್ತಿಗೆ ಭಾಜನರಾದರು.