ಪುಟ:Mysore-University-Encyclopaedia-Vol-6-Part-3.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗರಿ

ಇಂಥ ಒಂದೊಂದು ಗರಿಯೂ ಎಲೆಯಂತೆ ಚಪ್ಪಟೆಯಾಗಿದ್ದು ಹೊರ ಹಾಗೂ ಒಳ ಮೇಲಾಯಗಳಿಂದ ಕೂಡಿರುತ್ತದೆ. ಪ್ರತಿಯೊಂದು ಗರಿಯಲ್ಲಿಯೂ ಕೇಂದ್ರ ಅಕ್ಷಭಾಗ ಮತ್ತು ವೇನ್ (ವೆಕ್ಸಿಲಮ್) ಎಂಬ ಎರಡು ಭಾಗಗಳನ್ನು ಗುರುತಿಸಬಹುದು. ಅಕ್ಷಕ್ಕೆ ದಂಡ (ಶಾಫ್ಟ್) ಎಂದು ಹೆಸರು. ದಂಡವನ್ನು ದೇಹದ ಕಡೆಗಿನ ಕ್ವಿಲ್ ಅಥವಾ ಕಲೀಮಸ್ ಮತ್ತು ವೇನ್ ಭಾಗದಲ್ಲಿನ ರೇಕಿಸ್ ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಕ್ವಿಲ್ ಭಾಗದಿಂದಲೇ ಗರಿ ದೇಹಕ್ಕೆ ಅಂಟಿರುವುದು. ಇದು

ಪ್ರರೂಪಿ ಗರಿತಯೊಂದರ ಚಿತ್ರ ವೃತವೆಳೆದಿರುವ ಗರಿಯ ಭಾಗವನ್ನು ಬಲಗಡೆಯ ಚಿತ್ರದಲ್ಲಿ ದೊಡ್ಡದು ಮಾಡಿ ತೋರಿಸಿದೆ ೧. ಬಾರ್ಟ್೨. ಬಾರ್ಬ್ಯುಲ್‌‌ ೩. ರೇಕಿಸ್ ೪. ವೇನ್ ೫. ಕ್ವಿಲ್

ಟೊಳ್ಳಾಗಿದ್ದು ಚರ್ಮದಲ್ಲಿನ ತೋಡಿನಲ್ಲಿ ಹುದುಗಿರುತ್ತದೆ. ಕ್ವಿಲ್ನ ತುದಿಯಲ್ಲಿ ಸಣ್ಣ ರಂಧ್ರವೊಂದಿದೆ. ಇದಕ್ಕೆ ನಿಮ್ನಪಿಚ್ಛ ರಂಧ್ರವೆಂದು ಹೆಸರು. ಗರಿ ಕೂತುಕೊಳ್ಳುವ ಚರ್ಮದ ತೋಡಿನಲ್ಲಿ ಸಣ್ಣ ಪ್ಯಾಪಿಲವೊಂದು ಇದ್ದು ನಿಮ್ನ ಪಿಚ್ಛರಂಧ್ರದ ಮೂಲಕ ಕ್ವಿಲ್ನ ಒಳಗೆ ಚಾಚಿರುತ್ತದೆ. ವೇನಿನಲ್ಲಿ ದಂಡ ಮುಂದುವರಿದು ರೇಕಿಸ್ ಎನಿಸಿಕೊಳ್ಳುತ್ತದೆ. ರೇಕಿಸ್ನ ಒಳಭಾಗ ಕ್ವಿಲ್ನಂತೆ ಟೊಳ್ಳಾಗಿರದೆ ಗಟ್ಟಿಯಾಗಿದೆ. ಕ್ವಿಲ್ ಮತ್ತು ರೇಕಿಸ್ಗಳು ಸಂಧಿಸುವ ಕಡೆ ತಳಭಾಗದಲ್ಲಿ ಇನ್ನೊಂದು ಸೂಕ್ಷ್ಮ ರಂಧ್ರವಿದೆ. ಇದಕ್ಕೆ ಊರ್ಧ್ವ ಪಶ್ಚರಂಧ್ರವೆಂದು ಹೆಸರು. ರೇಕಿಸ್ನ ಎಡಬಲಗಳಲ್ಲಿ ದಟ್ಟವಾಗಿ ಹಾಗೂ ಒಂದಕ್ಕೊಂದು ಸಮಾನಾಂತರವಾಗಿ ಜೋಡಿಸಲ್ಪಟ್ಟಿರುವ ಅಸಂಖ್ಯಾತ ಎಳೆಗಳಿವೆ. ಇವೇ ಬಾರ್ಬುಗಳು. ರೇಕಿಸ್ನ ಅಕ್ಷಕ್ಕೆ ಕೊಂಚ ಓರೆಯಾಗಿ ಜೋಡಿಸಲ್ಪಟ್ಟಿರುವ ಇವನ್ನು ಪರಸ್ಪರ ಬೇರ್ಪಡಿಸುವುದು ಕಷ್ಟ. ಏಕೆಂದರೆ ಬಾರ್ಬ್ಗಳು ಒಂದರೊಡನೊಂದು ಹೆಣೆದುಕೊಂಡಿವೆ. ಈ ಹೆಣಿಕೆಯನ್ನು ನೋಡಲು ಸೂಕ್ಷ್ಮದರ್ಶಿಯ ಸಹಾಯ ಬೇಕು. ಪ್ರತಿ ಬಾರ್ಬ್ನ ಹಿಮ್ಮುಖ ಮತ್ತು ಮುಮ್ಮುಖದ ಮೇಲೂ ಓರೆ ಓರೆಯಾಗಿ ಹಾಗೂ ಒತ್ತೊತ್ತಾಗಿ ಅಳವಡಿಸಿರುವ ಅಸಂಖ್ಯಾತ ಬಾರ್ಬ್ಯುಲ್‌ಗಳೆಂಬ ತಂತುಗಳಿರುತ್ತವೆ. ಕ್ವಿಲ್ನ ಕಡೆ ಚಾಚಿರತಕ್ಕವು ಮತ್ತು ಗರಿಯ ತುದಿಯೆಡೆಗೆ ಚಾಚಿರುವಂಥವು. ಎರಡು ಬಗೆಯ ಬಾಬ್ಯೂಲ್ಗಳನ್ನು ಗುರುತಿಸಬಹುದು. ಬಾರ್ಬ್ಯುಲ್‌‌ಗಳು ಓರೆ ಓರೆಯಾಗಿ ದಟ್ಟವಾಗಿ ಅಳವಡಿಕೆಯಾಗಿರುವುದರಿಂದ ಒಂದು ಬಾರ್ಬ್ನ ದೂರಸ್ಥ ಬಾರ್ಬ್ಯುಲ್‌‌ಗಳು ಸಮೀಪಸ್ಥ ಬಾರ್ಬ್ಯುಲ್‌‍fಗಳನ್ನು ಹಾಯ್ದುಹೋಗುತ್ತವೆ. ಪ್ರತಿ ದೂರಸ್ಥ ಬಾರ್ಬ್ಯುಲ್‌‌ನ ಕೊನೆಯ ಕೆಳ ಅಂಚಿನಲ್ಲಿ ಸಣ್ಣ ಸಣ್ಣ ಕೊಕ್ಕೆಗಳಿವೆ. ಇವಕ್ಕೆ ಬಾರ್ಬಿಸೆಲ್ಗಳೆಂದು ಹೆಸರು. ಒಂದು ಬಾರ್ಬ್ಯುಲ್‌‌ನ ಬಾರ್ಬಿಸೆಲ್ಗಳು ಅದರ ಮುಂದಿರುವ ಬಾರ್ಬ್ಯುಲ್‌‌‍ನ ಅಡ್ಡ ಅಂಚುಗಳಿಗೆ ಕೊಂಡಿ ಕೂಡುತ್ತವೆ. ಇದರಿಂದಾಗಿ ಬಾರ್ಬ್ಯುಲ್‌‌ಗಳು ಒಂದಕ್ಕೊಂದು ಹೆಣೆದು ಹಿಡಿದು ಕೊಂಡಂತಿರುತ್ತವೆ. ಈ ಬಗೆಯ ಹೆಣಿಗೆಯಿಂದ ವೇನ್ ಮೃದುತ್ವವನ್ನು ಪಡೆಯುತ್ತದೆ. ಈ ಹೆಣಿಗೆಯನ್ನು ಸಡಿಲಿಸುವುದರಿಂದ ಗರಿಜಾಲವನ್ನು ಹರಿಯಬಹುದು. ಸ್ವಾಭಾವಿಕವಾಗಿಯೇ ಹೀಗಾಗಬಹುದು. ಇಂಥ ಸಂದರ್ಭಗಳಲ್ಲಿ ಹರಿದ ಭಾಗವನ್ನು ಪಕ್ಷಿ ತನ್ನ ಕೊಕ್ಕಿನಿಂದ ತೀಡಿ ತೀಡಿ ಬಾಚಿ ಮತ್ತೆ ಹೆಣೆದುಕೊಂಡು ಸರಿಪಡಿಸಿಕೊಳ್ಳ ಬಲ್ಲದು. ಕೆಲವು ಗರಿಗಳಲ್ಲಿ ತಳಭಾಗದ ಬಾರ್ಬ್ಗಳು ನೀಳ ಹಾಗೂ ಕೋಮಲ ವಾಗಿರುತ್ತವೆ. ಇವಕ್ಕೆ ನೆರೆಯ ಬಾರ್ಬ್ಗಳೊಡನೆ ಸಂಧಿಸುವ ಸಂಯಂತ್ರವಿರುವುದಿಲ್ಲ. ತತ್ಫಲವಾಗಿ ಗರಿಯ ಈ ಭಾಗ ಮೃದುರೋಮೀಯವಾಗಿರುತ್ತವೆ.

ಹಲವು ಹೊದಿಕೆ ಗರಿಗಳ ತಳಭಾಗದಲ್ಲಿ ಕ್ವಿಲ್ ಮತ್ತು ರೇಕಿಸ್ಗಳು ಕೂಡುವ ಕಡೆ ಒಂದು ಲೇಶಗರಿ (ಆಫ್ಟರ್ ಶಾಫ್ಟ್) ಅಂಟಿಕೊಂಡಿರುತ್ತವೆ. ಸಾಮಾನ್ಯವಾಗಿ ಇದರಲ್ಲಿ ಕೋಮಲವಾದ ಬಾರ್ಬ್ಗಳು ಬಿಡಿಬಿಡಿಯಾಗಿರುತ್ತವೆ. ಲೇಶಗರಿಗಳ ಬೆಳೆವಣಿಗೆ ವಿವಿಧ ಪಕ್ಷಿಗಳಲ್ಲಿ ಬೇರೆಬೇರೆಯಾಗಿರುವುದೇ ಅಲ್ಲದೆ ಒಂದೇ ಪಕ್ಷಿಯ ಬೇರೆ ಬೇರೆ ಭಾಗದ ಗರಿಗಳಲ್ಲೂ ಭಿನ್ನತೆಯನ್ನು ಪ್ರದರ್ಶಿಸುತ್ತದೆ. ಕ್ಯಾಸೋವರಿ ಮತ್ತು ಈಮ್ಯೂ ಹಕ್ಕಿಗಳಲ್ಲಿ ಲೇಶಗರಿ ಮುಖ್ಯಗರಿಯ ಉದ್ದ ಮತ್ತು ಗಾತ್ರವನ್ನು ಹೋಲುವುದಾದರೂ ಸಾಮಾನ್ಯವಾಗಿ ಪ್ರಧಾನ ಗರಿಗಿಂತ ಇದು ಹೆಚ್ಚು ಕೋಮಲ ಮತ್ತು ಚಿಕ್ಕದು. ಕೆಲವು ಹಾರುವ ಪಕ್ಷಿಗಳ ದೊಡ್ಡ ದೊಡ್ಡ ಗರಿಗಳಲ್ಲಿ ಇದು ಕೆಲವು ಬಾರ್ಬ್ಗಳಿಂದ ಕೂಡಿರಬಹುದು ಅಥವಾ ಲೋಪವಾಗಿರಬಹುದು.

ಹಾರುವುದರಲ್ಲಿ ನೆರವಾಗುವ ಪೇನಾಗರಿಗಳು (ಕ್ವಿಲ್ ಫೆದರ್ಸ್) ಇತರ ಹೊದಿಕೆ ಗರಿಗಳಿಗಿಂತ ಬಹು ದೊಡ್ಡವು. ಇವು ರೆಕ್ಕೆ ಮತ್ತು ಬಾಲಗಳಿಗೆ ಮಾತ್ರ ಸೀಮಿತ ವಾಗಿರುತ್ತವೆ. ಈ ಗರಿಗಳ ದಂಡ ಸಾಮಾನ್ಯವಾಗಿ ನೆಟ್ಟಗಿರುತ್ತದೆ. ಆದರೆ ಉಳಿದ ಹೊದಿಕೆ ಗರಿಗಳ ದಂಡ ಸ್ವಲ್ಪ ಬಾಗಿರುತ್ತದೆ. ರೆಕ್ಕೆಯ ಪೇನಾಗರಿಗಳಿಗೆ ರೆಮೀಜೆಸ್ ಎಂದೂ ಬಾಲದ ಪೇನಾಗರಿಗಳಿಗೆ ರೆಟ್ರಿಸಿಸ್ ಎಂದೂ ಹೆಸರು. ರೆಕ್ಕೆಯ ಪೇನಾಗರಿಗಳಲ್ಲಿ ಹಲವು ಬಗೆ. ರೆಕ್ಕೆಯ ಹಿಂಪಾಶರ್್ವದಲ್ಲಿ ಅಂಟಿಕೊಂಡು ಹಿಮ್ಮುಖವಾಗಿ ಚಾಚಿರುವ ಗರಿಗಳಲ್ಲಿ ಪ್ರಾಥಮಿಕ ಮತ್ತು ದ್ವಿತೀಯಕ ಗರಿಗಳು ಮುಖ್ಯವಾದವು. ಪ್ರಾಥಮಿಕ ಗರಿಗಳು ಕೈಭಾಗದ ಎಲುಬುಗಳಿಗೂ ದ್ವಿತೀಯಕ ಗರಿಗಳು ಮುಂದೋಳಿನ ಅಲ್ನ ಎಂಬ ಎಲುಬಿಗೂ ಅಂಟಿಕೊಂಡಿರುತ್ತವೆ. ಹೆಬ್ಬೆರಳಿನ ಸ್ಥಳದಲ್ಲಿ ಅಂದರೆ ರೆಕ್ಕೆಯ ಮುಂಭಾಗದ ಕೊನೆಯಲ್ಲಿ ಆಲ ಸ್ಪೂರಿಯ ಎಂಬ ಒಂದು ವಿಶೇಷವಾದ ಚಿಕ್ಕ ಗರಿಗಳ ಗುಂಪು ಇದೆ. ಬಾಲದ ಪೇನಾಗರಿಗಳು ಅರ್ಧವೃತ್ತಾಕಾರದಲ್ಲಿ ಅಳವಡಿಸಿರುತ್ತವೆ. ಇವೇ ಅಲ್ಲದೆ ಬಾಲದ ಹಾಗೂ ರೆಕ್ಕೆಯ ಪೇನಾಗರಿಗಳ ಬುಡದ ಭಾಗವನ್ನು ಮುಚ್ಚುವ ಮೇಲಿನ ಹಾಗೂ ಕೆಳಗಿನ ಬಾಲ ಹಾಗೂ ರೆಕ್ಕೆಯ ಮುಚ್ಚಕ ಗರಿಗಳಿರುತ್ತವೆ (ವಿಂಗ್ ಕವರ್ಟ್ಸ್ ಅಂಡ್ ಟೈಲ್ ಕವರ್ಟ್ಸ್). ಈ ಮುಚ್ಚಕ ಗರಿಗಳಿಗೆ ಟೆಕ್ಟ್ರಿಸೆಸ್ ಎಂದು ಹೆಸರು.

ಹೊದಿಕೆಗರಿಗಳು ಕೆಲವು ಪಕ್ಷಿಗಳಲ್ಲಿ ಬಗೆಬಗೆಯಾಗಿ ಮಾರ್ಪಟ್ಟಿವೆ. ಉದಾಹರಣೆಗೆ ನವಿಲಿನ ತಲೆಯ ಮೇಲಿನ ಸುಂದರವಾದ ತುರಾಯಿ ಹಾಗೂ ವರ್ಣರಂಜಿತವಾದ ಬಾಲದ ನೀಳಗರಿಗಳು, ಮರಕುಟಿಕ, ಕೂಕೂಹಕ್ಕಿಗಳ ತಲೆಯ ಮೇಲಿನ ಗರಿಗಳು.

೨ ಅರೆಪುಚ್ಚ ಗರಿಗಳು (ಸೆಮಿ ಪ್ಲುಮ್ ಫೆದರ್ಸ) : ಈ ಬಗೆಯ ಗರಿಗಳ ಸಂರಚನೆ ಹೊದಿಕೆ ಗರಿ ಹಾಗೂ ತುಪ್ಪಳ ಗರಿಗಳ ನಡುವಣ ರೀತಿಯಂತಿರುತ್ತದೆ. ಈ ಗರಿಯ ವಿವಿಧ ಭಾಗಗಳು ಹೊದಿಕೆ ಗರಿಯದರಂತೆಯೇ ಇರುತ್ತವೆ. ಆದರೆ ಬಾಬೂರ್್ಯಲ್ಗಳಲ್ಲಿ ಬಾರ್ಬಿಸೆಲ್ಗಳಿರುವುದಿಲ್ಲ. ಅರೆಪುಚ್ಚಗರಿಗಳು ಸಾಮಾನ್ಯವಾಗಿ ದೇಹದ ಎಡಬಲಭಾಗಗಳಲ್ಲಿ ಹಾಗೂ ದೇಹದ ತಳಭಾಗದ ಮೇಲಾಯದಲ್ಲಿ ಕಂಡು ಬರುತ್ತವೆ.


೩ ತುಪ್ಪಳ ಗರಿಗಳು : ಹಲವು ಪಕ್ಷಿಗಳ ಮರಿಗಳು ಮೊಟ್ಟೆಯಿಂದ ಹೊರ ಬಂದಾಗ ಒಂದು ವಿಶಿಷ್ಟಬಗೆಯ ಗರಿಗಳಿಂದ ಹೊದೆಯಲ್ಪಟ್ಟಿರುತ್ತವೆ. (ಕೆಲವು ಪಕ್ಷಿಯ ಮರಿಗಳು ಮೊಟ್ಟೆಯಿಂದ ಹೊರಬಂದಾಗ ಬೋಳಾಗಿರುತ್ತವೆ.) ಈ ಬಗೆಯ ತಾತ್ಕಾಲಿಕವಾದ ಗರಿಗಳಿಗೆ ತುಪ್ಪಳ ಗರಿಗಳು ಅಥವಾ ಗೂಡುಮರಿಯ ಗರಿಗಳು ಎಂದು (ನೆಸ್ಟಿಂಗ್ ಫೆದರ್ಸ) ಹೆಸರು. ದೇಹದ ಶಾಖ ಹೊರಗೆ ಹೋಗದಂತೆ ತಡೆಯುವ ಪ್ರಚಂಡಶಕ್ತಿ ಇವಕ್ಕೆ ಇದೆ. ಮರಿಗಳಲ್ಲಿ ಮಾತ್ರವಲ್ಲದೆ ಇವು ಪ್ರಾಯಸ್ಥ ಪಕ್ಷಿಯ ದೇಹದ ಮೇಲೂ ಹೊದಿಕೆ ಗರಿಗಳ ತಳಭಾಗದಲ್ಲಿ ಬಿಡಿಬಿಡಿಯಾಗಿ ಹರಡಿರುವುದು ಕಂಡುಬರುತ್ತದೆ. ಈ ಬಗೆಯ ಗರಿಯ ದಂಡ ಬಲು ಮೃದುವಾಗಿಯೂ ಕ್ಷೀಣವಾಗಿಯೂ ಇರುತ್ತದೆ. ಇದರ ಮೇಲೆ ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೆ ಚಿಕ್ಕಚಿಕ್ಕ ಬಾಬೂರ್್ಯಲ್ಗಳಿಂದ ಕೂಡಿದ ನೀಳವಾದ ಬಳುಕುವಂಥ ಬಾರ್ಬ್ಗಳಿರುತ್ತವೆ.


೪ ತಂತು ಗರಿಗಳು : ಇವು ಹೊದಿಕೆ ಗರಿಗಳ ನಡುವೆ ಚದರಿದಂತೆ ಹರಡಿರುವ ಮತ್ತು ತೆಳುವಾದ ಕೂದಲಿನಂತಿರುವ ಗರಿಗಳು. ಇವು ಸಾಮಾನ್ಯವಾಗಿ ಹೊದಿಕೆಗಳಂತಿರುವ ಫಾಲಿಕಲ್ಗಳ ಬಳಿಯೇ ಗುಂಪುಗುಂಪಾಗಿ ಬೆಳೆಯುತ್ತವೆ. ಒಂದೊಂದು ತಂತುಗರಿಗೂ ಒಂದು ನೀಳವಾದ ದಾರದಂತಿರುವ ದಂಡ ಇರುತ್ತದೆ. ಇದರ ತುದಿಯಲ್ಲಿ ಚಿಕ್ಕ ಚಿಕ್ಕ ಬಾಬೂರ್್ಯಲ್ಗಳಿಂದ ಕೂಡಿದ ದುರ್ಬಲವಾದ ಹಾಗೂ ಬಿಡಿಬಿಡಿಯಾದ ಬಾರ್ಬ್ಗಳಿವೆ. ಇವು ಎಲ್ಲ ಪಕ್ಷಿಗಳಲ್ಲಿ ಕಾಣಬರುತ್ತವೆ. ಕಾರ್ಮೊರಾಂಟ್ ಪಕ್ಷಿಗಳಲ್ಲಿ ಇವು ಹೊದಿಕೆ ಗರಿಗಳಿಂದ ಹೊರ ಚಾಚಿರುತ್ತವೆ. ಇವು ಹೊದಿಕೆ ಗರಿಗಳ ಅಪಭ್ರಷ್ಟವಾದ ರಚನೆಗಳು.


೫ ಬಿರುಗೂದಲ ಗರಿಗಳು : ಇವು ಹೊದಿಕೆ ಗರಿಗಳ ಒಂದು ರೀತಿಯ ಮಾರ್ಪಾಟು. ಇವು ಒಂದೊಂದಕ್ಕೂ ಒಂದು ಚಿಕ್ಕ ದಂಡವೂ ಇದರ ತಳಭಾಗದಲ್ಲಿ ಕೆಲವು ಬಿಡಿ ಬಿಡಿಯಾದ ಚಿಕ್ಕ ಚಿಕ್ಕ ಬಾರ್ಬ್ಗಳೂ ಇವೆ. ಇವು ಸಾಮಾನ್ಯವಾಗಿ