ಪುಟ:Mysore-University-Encyclopaedia-Vol-6-Part-3.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭ ಕೋತಿ-ರ್ಹಿಸಸ್ ... ೧೬೪ (೧೪೬-೧೮೦) ೨೮ ಚಿಂಪಾಂಜಿ ... ೨೩೭(೨೧೬-೨೬೧) ೨೯ ಬಾವಲಿ ... ೫೦ ೩೦ ಕಾಂಗರೂ- ದೊಡ್ಡದು ... ೩೦-೪೦ ೩೧ ಒಪಾಸಮ್ (ವರ್ಜೀನಿಯದ) ೧೮೧ (೫೦೨-೨.೫) ಸಸ್ತನಿಗಳಲ್ಲೆಲ್ಲ ಆತಿಕಡಿಮೆ ಗಬ್ಬದ ಅವಧಿ ವರ್ಜೀನಿಯದ ಒಪಾಸಮ್ ನಲ್ಲಿ ಕಂಡು ಬಂದರೆ. ಅತಿ ದೀಘಾ೯ವಧಿ ಭಾರತದ ಆನೆಗಳಲ್ಲಿ (ಸುಮಾರು 22 ತಿಂಗಳುಗಳು) ಕಾಣಬಹುದು. ಈ ವ್ಯತ್ಯಾಸದ ಕಾರಣ ನಿಖರವಾಗಿ ಇನ್ನೂ ತಿಳಿದು ಬಂದಿಲ್ಲ. ಪ್ರಾಣಿಗಳು ವಿಕಾಸವಾದಂತೆಲ್ಲ ಅವುಗಳ ದೇಹಸ್ಥಿತಿಗೆ ಅನುಗುಣವಾಗಿ ಗರ್ಭವಸ್ಥ ಹೊಂದಿಕೊಂಡಿರಬಹುದು. ಪಿಂಡದ ಬೆಳವಣಿಗೆ ಹಾಗೂ ಆದರ ಗಾತ್ರ ಗಬ್ಬದ ಆವಧಿಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಚಿಕ್ಕ ಚೆಕ್ಕ ಪ್ರಾಣಿಳಲ್ಲಿ ಗಬ್ಬದ ಅವಧಿ ಕಡಿಮೆ: ದೈತ್ಯಾಕಾರದ ಪ್ರಾಣಿಗಳಲ್ಲಿ ಹೆಚ್ಚು. ಈ ನಿಯಮಕ್ಕೆ ಅಪವಾದದ ಪ್ರಾಣಿಗಳು-ಗಿನಿಹಂದಿ ಹಾಗೂ ಈ ಪ್ರಾಣಿ ಸಂಬಂಧಿಗಳಾದ ದಕ್ಷೆಣ ಅಮೆರಿಕದ ಮೂಷಕಗಳು. ಇವು ಗಾತ್ರದಲ್ಲಿ ಚೆಕ್ಕವಾದರೂ ಇವುಗಳ ಗರ್ಭಾವಸ್ಥೆ ಸಾಕಷ್ಟು ಧೀಘ೯ವಾಗಿಯೇ ಇರುವುದು. ಹೆಚ್ಚು ದಿವಸ ಗರ್ಭದಲ್ಲಿದ್ದು ಹುಟ್ಟುವ ಮರಿಗಳು ಚೆನ್ನಾಗಿ ಬೆಳೆದಿರುತ್ತವೆ. ಕಾಪ೯ಸ್ ಲೂಟಿಯಮಿನ ಪಾತ್ರ: ಪ್ರಾಣಿ ಗಬ್ಬವಾದಾಗ ಆದರ ಗರ್ಭಕೋಶ, ಅಂಡಾಶಯ ಮತ್ತು ದೇಹದ ಅಗಾಂಶಗಳೆಲ್ಲ ಪ್ರಭಾವಿತವಾಗುತ್ತವೆ. ದೇಹದ ಹೊರಗೆ ಒಳಗೆ ಅನೇಕ ರೀತಿಯ ಬದಲಾವಣೆಗಳು ಆಗುತ್ತವೆ. ಅಂಡಾಶಯದಲ್ಲಿ ಕಾಪ೯ಸ್ ಲೂಟಿಯಮ ಕಾಣಿಸಿಕೊಳ್ಳುತ್ತದೆ. ಇದು ಇರುವವೆರೆಗೂ ಗಬ್ಬ ಮುಂದುವರಿಯುವುದು. ಇದು ಒಂದು ಅಂತಃಸ್ತಾವ ಗ್ರಂಥಿಯ ರೀತಿಯಲ್ಲಿ ಕೆಲಸಮಾಡುವುದು. ಇದರಿರಿದ ಪ್ರೋಜೆಸ್ಪಿರಾನ್ ಉತ್ಪತ್ತಿಯುಗುತ್ತದೆ. ಇದು ಇರುವವರೆಗೂ ಪಿ೦ಡ ಗರ್ಭದಲ್ಲಿಯೇ ಇರುತ್ತದೆ. ಕಾಪ೯ಸ್ ಲೂಟಿಯಮ್ ಸಂಕುಚಿತವಾದಾಗ ಪ್ರೋಜೆಸ್ಪಿರಾನ್ ಉತ್ಪಾದನೆ ನಿಂತುಹೊಗುವುದು. ಆಗ ಪ್ರಾಣಿ ಈಯುತ್ತದೆ (ಮರಿಹಾಕುತ್ತದೆ). ಆದ್ದರಿಂದ ಕಾಪ೯ಸ್ ಲೂಟಿಯಮಿನ ಕ್ರಿಯಾಶೀಲತೆಯ ವೇಳೆಯನ್ನು ಗಭಾ೯ವಧಿಯೆನ್ನಬಹುದು. ಒಂದು ವೇಳೆ ಕೃತಕ ರೀತಿಯಲ್ಲಿ ಪ್ರೋಜೆಸ್ಪಿರಾನನ್ನು ದೇಹದೊಳಗೆ ಸೇರಿಸುತ್ತಾ ಹೋದರೆ ಪ್ರಾಣಿಯ ಮರಿಹಾಕುವ ಕಾರ್ಯ ಮುಂದೆ ಹೋಗುವುದಲ್ಲದೆ ಪಿಂಡ ಬೆಳೆಯುತ್ತಲೇ ಹೋಗುತ್ತದೆ. ಕೆಲವು ದಿನಗಳು ಮಾತ್ರ ಈ ರೀತಿ ಮಾಡಿದರೆ ಪಿಂಡಕ್ಕೆ ಅಪಾಯವೇನೂ ಆಗುವುದಿಲ್ಲ. ಆದರೆ ಬಹಳ ದಿವಸಗಳವರೆಗೆ ಪ್ರೋಜೆಸ್ಟಿರಾನನ್ನು ಉಪಯೋಗಿಸುತ್ತ ಹೋದರೆ ಪಿಂಡ ಸತ್ತುಹೋಗುವುದು. ಆದ್ದರಿಂದ ಗಭಾ೯ವಸ್ಥೆಯಲ್ಲಿ ಕಾರ್ಪಸ್ ಲೂಟಿಯಮಿನ ಪಾತ್ರ ಬಹಳ ಪ್ರಧಾನವಾದುದು. ಆದರೆ ಎಲ್ಲ ಪ್ರಾಣಿಗಳಲ್ಲಿಯೂ ಕಾರ್ಪಸ್ ಲೂಟಿಯಮಿನ ಅವಶ್ಯಕತೆ ಅಷ್ಟಾಗಿರದು. ಪೂರ್ವ ಅಫ್ರಿಕದಲ್ಲಿ ಕಾಣಬರುವ ನಿಕ್ಟೀರಿಯಸ್ ಜಾತಿಯ ಬಾವಲಿಗಳಲ್ಲಿ ಪ್ರಾಣಿ ಗರ್ಭಾವಸ್ಥೆಯಲ್ಲಿರುವಾಗಲೆ ಕಾರ್ಪಮ್ ಲೂಟಿಯಮ್ ಸಂಕುಚಿತವಾಗುತ್ತದೆ. ಆದರು ಗಬ್ಬ ಮುಂದುವರಿಯುತ್ತದೆ. ಸಾಕುಪ್ರಾಣಿಗಳಾದ ಕುದುರೆಗಳಲ್ಲಿಯೂ ಇದೇ ಸ್ಥಿತಿ ಕಾಣಬರುತ್ತದೆ. ಕಾಪ೯ಸ್ ಲೂಟಿಯಮಿನ ಕಾರ್ಯವನ್ನು ಬೇರೆ ಅಂತಃಸ್ರಾವ ಗ್ರಂಥಿಗಳು ವಹಿಸಿಕೊಂಡು ಪ್ರೋಜೆಸ್ಪಿರಾನನ್ನು ಉತ್ಪತ್ತಿಮಾಡುವುರರಿಂದ ಗಬ್ಬ ಮುರಿದುವರಿಯುತ್ತದೆ. ಕೆಲವು ಪ್ರಾಣಿಗಳ ಗರ್ಭಾವಸ್ಥೆಯಲ್ಲಿ ಕಾರ್ಪಸ್ ಲೂಟಿಯಮ್ ಇರಲೇಬೇಕು. ಇಲ್ಲದಿದ್ದರೆ ಅಥವಾ ಆದನ್ನು ತೆಗೆದುಹಾಕಿದರೆ ಚಿಟ್ಟಿಲಿ ಮತ್ತು ಮೇಕೆಗಳಲ್ಲಿ ಪಿಂಡವು ಇಂಗಿ ಹೋಗುವುದು. ಪಿಂಡ ತಳವೂರಿದ ಬಳಿಕ ಕೋತಿ ಮತ್ತು ಮನುಷ್ಯರಲ್ಲಿ ಕಾಪ೯ಸ್ ಲೂಟಿಯಮನ್ನು ತೆಗೆದುಹಾಕಿದರೂ ಯುವ ಬಾಧಕವೂ ಆಗುವುದಿಲ್ವ. ಕಾಡಿನಲ್ಲಿ ವಾಸಿಸುವ ಪ್ರಾಣಿಗಳಲ್ಲಿ ಗಬ್ಬದ ಸ್ಥಿತಿ ಇನೂ ವಿಚಿತ್ರ ಅವು ಯಾವ ತಾಣದಲ್ಲಿಯೂ ನಿಲ್ಲದೆ ಕಾಡಿನಲ್ಲೆಲ್ಲ ಓಡಾಡುತ್ತವೆ. ಕೆಲವಾರು ಪ್ರಾಣಿಗಳು ಗುಹೆ ಮತ್ತು ಬಿಲಗಳಲ್ಲಿ ವಾಸಿಸುತ್ತವೆ. ಯಾವ ತಾಣದಲ್ಲಿಯೂ ಇರದ ಪ್ರಾಣಗಳಲ್ಲಿ ಗಬ್ಬದ ಅವಧಿ ದೀಘ೯ವಾದುದು. ಹುಟ್ಟಿದ ಮರಿಗಳು ಸಾಕಷ್ಟು ಬಲಿಷ್ಠವಾಗಿರುತ್ತವೆ. ಆದರೆ ಗುಹೆ, ಬಿಲಿಗಳಲ್ಲಿ ವಾಸಿಸುವ ಇಲಿ ಮುಂತಾದ ಮೂಷಕಗಳ ಮರಿಗಳು ಹುಟ್ಟಿದಾಗ ಬಹಳ ಎಳೆಯ ಸ್ಥಿತಿಯಲ್ಲಿಯೇ ಇರುತ್ತವೆ. ಕರಡಿ ಮರಿಗಳು ಹುಟ್ಟಿದಾಗ ಬಹಳ ಎಳಸಾಗಿರುತ್ತವೆ, ಗಬ್ಬದ ಅವಧಿ ಕಾಂಗುರೂ ಮುಂತಾದ ಮಾರ್ಸ್ಯುಪಿಯಲ್ ಗಳಲ್ಲಿ ಕಡಿಮೆ. ಇವುಗಳ ಮರಿಗಳು ಹುಟ್ಟಿದಾಗ ಬಹಳ ಎಳಸಾಗಿರುತ್ತವೆ. ಮರಿಗಳ ಬೆಳವಣಿಗೆ ಪೂರ್ಣವಾಗಿರುವುದಿಲ್ಲ. ಆದ್ದರಿಂದ ಮರಿಗಳು ಹುಟ್ಟಿದಮೇಲೆ ಆವನ್ನು ತಾಯಿ ಪ್ರಾಣಿ ತನ್ನ ಒಡಲಿನ ಹೊರಭಾಗದಲ್ಲಿ ಕಾಣಬರುವ ಮರಿಚೀಲದಲ್ಲಿ ಸಾಕುತ್ತದೆ. ಈ ಚೀಲದಲ್ಲಿ ಮರಿಗಳ ಬೆಳೆವಣಿಗೆ ಮುರಿದುವರಿದು ಅವು ಪೂಣಾ೯ವಸ್ಥೆಯನ್ನು ತಲಪುತ್ತವೆ. ಕೆಲವೊಂದು ಜಾತಿಯ ಪ್ರಾಣಿಯಗಳಲ್ಲಿ ಈ ರೀತಿಯ ಮರಿಚೀಲ ಕಂಡುಬರುವುದಿಲ್ಲ. ಇಂಥ ಪ್ರಾಣಿಗಳಲ್ಲಿ ಹುಟ್ಟಿದ ಎಳೆಮರಿಗಳು ತಮ್ಮ ಕಾಲುಗಳಿಂದ ತಾಯಿಯ ಎದೆಭಾಗವನ್ನು ತಬ್ಬಿಕೊಂಡಿದ್ದು ಯಾವಾಗಲೂ ಮೊಲೆತೊಟ್ಟನ್ನು ಬಾಯಿಯಿಂದ ಹಿಡಿದುಕೊಂಡಿರುತ್ತದೆ. ಉದಾ: ಒಪಾಸಮ್. ಮಾರ್ಮೊಸಾಟ್, ಅಮೆರಿಕೆಯ ಬಯಲಿನ ಇಲಿ ಮತ್ತು ಕಾಡಿನ ಇಲಿಗಳು. ಭ್ರೂಣದ ಒಳನಾಟಿಕೆ ಹಾಗೂ ಗರ್ಭಾವಧಿ : ಕೆಲವಾರು ಜಾತಿಯ ಪ್ರಾಣಿಗಳಲ್ಲಿ ಭ್ರೂಣದ ಬೆಳೆವಣಿಗೆ ಕೆಲಕಾಲ ನಿಂತುಹೋಗುತ್ತದೆ. ಇದರಿಂದ ಗಬ್ಬದ ಅವಧಿ ಹೆಚ್ಚಾಗುತ್ತದೆ. ಇದು ತುಪ್ಪಳಗೂದಲ ಹೊದಿಕೆಯುಳ್ಳ ಮಾಂಸಗಳಲ್ಲಿ ಸಾಮನ್ಯ. ಉದಾಹರಣೆಗೆ, ತುಪ್ಪಳಿಗ ಮತ್ತು ವೀಸಲ್. ಯುರೋಪಿಯನ್ ಬ್ಯಾಡ್ಜರ್ ಮತ್ತು ಆಮೆರಿಕದಲ್ಲಿನ ತುಪ್ಪಳಿಗ ಜುಲೈ ಮತ್ತು ಆಗಸ್ಟನಲ್ಲಿ ಗಬ್ಬವಾಗುತ್ತವೆ. ಭ್ರೂಣ ಕೆಲಕಾಲ ಮಾತ್ರ ಬೆಳೆದು ಮುಂದೆ ಜನವರಿ ತಿಂಗಳಿನವರೆಗೆ ತನ್ನ ಬೆಳೆವೆಣಿಗೆಯನ್ನು ಸ್ಥಗಿತಗೊಳಿಸುತ್ತದೆ. ಆಗ ಭ್ರೂಣ ಗರ್ಭಕೋಶದೊಳಗೆ ನಾಟುವುದಿಲ್ಲ. ಜನವರಿ ತಿಂಗಳಿನಲ್ಲಿ ಭ್ರೂಣ ಒಳನಾಟಿಕೊಂಡು ಬೆಳೆದು ಮಾರ್ಚ್ ತಿಂಗಳಿನಲ್ಲಿ ಈ ಪ್ರಾಣಿಗಳು ಮರಿಹಾಕುವುವು. ಇಲ್ಲಿ ಗಬ್ಬದ ಅವಧಿ 250 ದಿನಗಳಾದರೂ ಭ್ರೂಣ/ಪಿಂಡ ಬೆಳೆಯಲು ಬೇಕಾಗುವ ಅವಧಿ ಮಾತ್ರ ಕೇವಲ 50 ದಿನಗಳು. ಈ ಪ್ರಾಣಿಗಳನ್ನು ಗಬ್ಬವಾದ ಮೇಲೆ ಪ್ರಯೋಗಿಕವಾಗಿ ಬಿಸಿಲಿನಲ್ಲಿ ಬಿಟ್ಟರೆ ಗಬ್ಬ ಮೂರು ತಿಂಗಳಿನಷ್ಟು ಕಡಿಮೆಯಾಗುತ್ತದೆ. ಬಿಸಿಲಿನ ಪ್ರಭಾವದಿಂದ ಚೇತನಗೊಂಡ ಕಾಪ೯ಸ್ ಲೂಟಿಯಮ್ ಪಿಟ್ಯುಟರಿ ಗ್ರಂಥಿಯನ್ನು ಪ್ರಚೋದಿಸಿ ಅದರಿಂದ ಹಾರ್ಮೋನ್ ಉತ್ಪತ್ತಿಯಾಗುವಂತೆ ಮಾಡುವುದು. ಇದೇ ರೀತಿಯ ಗಬ್ಬದ ಸ್ಥಿತಿ ಆರ್ಮಡಿಲೊ ಮತ್ತು ರೋ ಜಿಂಕೆಗಳಲ್ಲಿ ಸಹ ಕಾಣಬರುತ್ತದೆ. ಕರಡಿ ಮತ್ತು ಸೀಲ್ಗಳಲ್ಲಿಯೂ ಇದೇ ರೀತಿ ಇರಬಹುದೆಂದು ನಂಬಲಾಗಿದೆ. ಈ ಒಳನಾಟಿಕೆ ನಿಧಾನವಾಗುವುದರಿಂದ ಚಿಟ್ಟಿಲಿ ಮುಂತಾದ ಚಿಕ್ಕ ಮೂಷಕಗಳಲ್ಲಿ ಗಬ್ಬ ಮುಂದೆ ಹೋಗುತ್ತದೆ. ತಾಯಿ ಮರಿಗಳಿಗೆ ಹಾಲನ್ನುಣ್ಣಿಸುತ್ತಿದ್ದರೆ 10-20 ದಿವಸಗಳಷ್ಟು ಗಬ್ಬ ಮುಂದೆ ಹೋಗುವುದು. ತಾಯಿಯ ದೇಹದಿಂದ ಹಾಲು ಉತ್ಪತ್ತಿಯಾಗಿ ಉಪಯೋಗವಾಗುವುದರಿಂದ ಹಾಗೂ ತಾಯಿ ಹೆಚ್ಚಿನ ಮರಿಗಳಿಗೆ ಹಾಲನ್ನು ಕೊಡುತ್ತಿರುವ ಸ್ಥಿತಿಯಲ್ಲಿ ಗಬ್ಬವಾಗುವುದು ನಿಧಾನವಾಗುತ್ತದೆ. ಅದರೆ ದೊಡ್ಡ ಗಾತ್ರದ ಮೂಷಕಗಳಲ್ಲಿ ಒಳನಾಟಿಕೆ ನಿಧಾನವಾಗುವುದು ವಿರಳ. ಚಿಟ್ಟಿಲಿಗಿಂತ ಸಾಮಾನ್ಯ ಇಲಿಗಳಲ್ಲಿ ಸೂಲಿನ ಅವಧಿ 22 ದಿನಗಳು. ಅರಳೆ ಇಲಿಯಲ್ಲಿ 27 ದಿನಗಳು. ಗಬ್ಬದ ಪರೀಕ್ಷೆಗಳು : ಮನುಷ್ಯನಲ್ಲಿ ಮಾಡುವಂತೆಯೇ ಆಷಿಂಜಾಂಡೆಕ್ ಪರೀಕ್ಷೆಯ ತತ್ತ್ವವನ್ನು ಪಾಲಿಸಿಕೊಂಡು ಪ್ರಾಣಿಗಳಲ್ಲಿಯೂ ಈ ರೀತಿಯ ಪರೀಕ್ಷೆಗಳನ್ನು ಮಾಡುವ ವಿಧಾನ ಜಾರಿಯಲ್ಲಿದೆ. ಕುದುರೆ ಮತ್ತು ಹಸುಗಳಲ್ಲಿ ಅವು ಗಬ್ಬಗಟ್ಟಿದ ಬಳಿಕ ಈಸ್ಟಿನ್ ಅಥವಾ ಈಸ್ಟ್ರೋನ್ ಚೋದಕಗಳು ಉತ್ಪತ್ತಿಯಾಗುವುದು. ಇದನ್ನು ಸಹ ಇಲಿ ಹಾಗೂ ಚಿಟ್ಟಿಲಿಗಳನ್ನು ಉಪಯೋಗಿಸಿಕೊಂಡು ಗಭಾ೯ವಸ್ಥೆಯೆನ್ನು ಕಂಡುಹಿಡಿಯಬಹುದು. ಸ್ವಲ್ಪವೇ ಗಂಜಲವನ್ನು ಪ್ರಯೋಗದ ಹೆಣ್ಣು ಪ್ರಾಣಿಗಳಿಗೆ ಸೂಜಿಯ ಮೂಲಕ ದೇಹದೊಳಗೆ ಸೇರಿಸಿದರೆ ಇವುಗಳ ಯೋನಿದ್ವಾರದ ಮೇಲುಪೊರೆಯ ಕಣಗಳಲ್ಲಿ ವಿಶಿಷ್ಟವಾದ ಬದಲಾವಣೆಗಳುಂಟಾಗುವುದು. ಆದರ ಗಾಜುಫಲಕ ಮೇಲಿನ ಬಳಿತವನ್ನು (ಸ್ಮಿಯರ್) ಬಣ್ಣವೇರಿಸಿ ಸೊಕ್ಷ್ಮದರ್ಶಕದಡಿ ಈ ಬದಲಾವಣೆಗಳನ್ನು ನೋಡಬಹುದು. ಹೆಣ್ಗುದುರೆಯಲ್ಲಿ ಗಂಡಿನೊಡನೆ ಸಂಗಮವಾದ 42 ದಿವಸಗಳೊಳಗೆ ಈ ಪರಿಣಾಮ ಕಾಣಬರುವುದು. ಆದರೆ ಗರ್ಭನಿದಾನ ಪರೀಕ್ಷೆಯನ್ನು 60-65 ದಿನಗಳ ಬಳಿಕ ಮಾಡಿದರೆ ಕುದುರೆ ಗಂಜಲದಲ್ಲಿ ಈಸ್ಟ್ರಿನ್ ಅಂಶ ಹೆಚ್ಚಾಗಿರುವುದು. ಹಸುವಿನಲ್ಲಿ ಗಂಜಲದ ಮೂಲಕ ಹೊರ ಹೋಗುವ ಈಸ್ಟ್ರಿನ್ ತೀರ ಕಡಿಮೆ ಇರುವುದು. ಆದ್ಧರಿಂದ 90 ದಿನಗಳವರೆಗೂ ಒಳ್ಳಯ ಪರಿಣಾಮ ಕಾಣಬರದು. ಮೇಲಾಗಿ ಒಂದೊಂದು ಹೆಸುವಿನಲ್ಲಿ 175 ದಿನಗಳವರೆಗೂ ಸರಿಯಾದ ಪರಿಣಾಮ ಕಾಣಿಸದು. ಈ ರೀತಿಯಲ್ಲಿ ಈ ಗಭ೯ನಿದಾನ ಪರೀಕ್ಷೆಗಳು ಬಹಳ ಸೊಕ್ಷ್ಮತರವಾದವು. ನಾವೆ೯ಯೆಲ್ಲಿ ಇತ್ತೀಚೆಗೆ ಬಹಳ ಗುರುತರವಾದ ಪರೀಕ್ಷೆಯೊಂದನ್ನು ರೂಪಿಸಿರುವರು. ಹಂದಿಗಳ ಗಬ್ಬದ ಆವಸ್ಥೆಯನ್ನು ತಿಳಿಯಲು ಈ ಪರೀಕ್ಷೆಯನ್ನು ಮಾಡಬಹುದು. ಈ ಪರೀಕ್ಷೆಗೆ ಒಂದು ಗಂಟೆ ಹಿಡಿಯುವುದಲ್ಲದೇ ಬಹಳ ದುಬಾರಿ. ಇದಲ್ಲದೆ ಮಾಂಸಕ್ಕಾಗಿ ಬೀಜ ತೆಗೆದು ಬೆಳೆಸುವ ಕಂದುಬಣ್ಣದ ಕೆಪನ್ ಹುಂಜವನ್ನು ಗಭ೯ನಿದಾನಕ್ಕಾಗಿ ಉಪಯೋಗಿಸಿರುವರು. ಈ ಹಕ್ಕಿಯ ರೆಕ್ಕೆಗಳು ಸಾಮಾನ್ಯವಾಗಿ ಕಪ್ಪಾಗಿರುವುವು. ಈಸ್ಟ್ರಿನನ್ನು ಸೂಜಿಯ ಮೂಲಕ ದೇಹದೊಳಗೆ ಸೇರಿಸಿದರೆ ಬೆಳ್ಳಿಬಣ್ಣದ ಪಟ್ಟೆಗಳು ಬೆಳೆಯುವ ಪುಕ್ಕಗಳ ಮೇಲೆ ಕಾಣಿಸಿಕೊಳ್ಳುವುವು. ಗಂಜಲದಲ್ಲಿ ಈಸ್ಟ್ರಿನ್