ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-4.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾ೦ಧೀ, ಮೋಹನ್ ದಾಸ್ ಕರಮ್ ಚ೦ದ್

          ಗಾ೦ಧೀಯವರ ವಿದ್ಯಾಭ್ಯಾಸ ಪೋರ್ಬ೦ದರ್ ಮತ್ತು ರಾಜಕೋಟೆಗಳಲ್ಲಿ ನಡೆಯಿತು. ಶಾಲೆಯಲ್ಲಿ ಅವರು ಸಾಮಾನ್ಯ ವಿದ್ಯಾಥಿರ್_ಯಾಗಿದ್ದರು. ಅವರು ಎ೦ದಿಗೂ ಕಾಲ ತಪ್ಪಿ ನಡೆಯುತ್ತಿರಲಿಲ್ಲ. ಹಿರಿಯರಲ್ಲಿ ವಿಧೇಯತ್ತೆ, ಎಲ್ಲ ಬಾಲಾಕರ೦ತೆ ಅವರೂ ಕೆಟ್ಟ ಸಹವಾಸ ಸೇರಿ, ಹೊಗೆ ಸೇದಿದರು, ಕಳ್ಳತನವನ್ನೂ ಮಾಡಿದರು, ಮಾ೦ಸ ಕೂಡ ತಿ೦ದರು. ಆದರೆ ಇವು ಮಾಡಬಾರದ ಕೃತ್ಯಗಳೆ೦ದು ಬಹಳ ಬೇಗ ಅರಿತು ಕೊ೦ಡರು. ಪಶ್ಚಾತ್ತಾಪಪಟ್ಟು, ಇವನ್ನು ತ್ಯಜಿಸಿದರು.
         ಗಾ೦ಧಿಯವರು ಪ್ರೌಢಶಾಲೆಯಲ್ಲಿ ವ್ಯಾಸ೦ಗ ಮಾಡುತ್ತಿದ್ದಾಗ, ಹದಿಮೂರನೆಯ ವಯಸ್ಸಿನಲ್ಲಿ, ಕಸ್ತೂರ ಬಾರೊ೦ದಿಗೆ ಅವರ ವಿವಾಹವಾಯಿತು. ಕಸ್ತೂರ ಬಾ ಅವರಿಗೂ ಗಾ೦ಧಿಯವರಿಗಾಗಿದಷ್ಟೇ ವಯಸ್ಸಾಗಿತ್ತು. ಉತ್ತರೋತ್ತರದಲ್ಲಿ ಅವರಿಗೆ ನಾಲ್ವರು ಗ೦ಡುಮಕ್ಕಳಾದರು (ನೋಡಿ-ಕಸ್ತೂರಬಾ).
        ಗಾ೦ಧಿಯವರ ಎಳಮನಸ್ಸಿನ ಮೇಲೆ ಅದ್ಭುತ ಪರಿಣಾಮ ಮಾಡಿದ ನಾಟಕ ಹರಿಶ್ಚ೦ದ್ರ ತಾವೂ ಸತ್ಯಸ೦ಧರಾಗಬೇಕೆ೦ಬುದು ಅವರು ಮನಸ್ಸು ಮಾಡಿದರು.

ರ೦ಭಾ ಎ೦ಬ ದಾದಿ ಅವರಿಗೆ ರಾಮನಾಮ ಕಲಿಸಿದ್ದಳು. ಸತ್ಯ, ರಾಮನಾಮ, ಇವೆರಡೂ ಗಾ೦ಧೀ ಜೀವನದ ಪರಮ ಆದಶರ್_ಗಳಾಗಿದ್ದುವು.

        ಗಾ೦ಧಿಯವರು ೧೮ನೆಯ ವಯಸ್ಸಿನಲ್ಲಿ ರಾಜಕೋಟೆಯ ಆಲ್ಪ್ರೆಡ್ ಪ್ರೌಡಶಾಲೆಯಿ೦ದ ಮೆಟ್ರಿಕ್ಯು ಲೇಷನ್ ಪರೀಕ್ಷೆ ಮುಗಿಸಿದರು. ಅನ೦ತರ ಅವರು ಕಾಲೇಜು ಸೇರಿದರಾದರೂ ಅವರ ವಿದ್ಯಾಭ್ಯಾಸ ಚೆನ್ನಾಗಿ ಆಗಲಿಲ್ಲ. ಆಗ ಹಿತೈಷಿಗಳೊಬ್ಬರ ನಿಧಾರ್ರವಾಯಿತು. ವಿದೇಶದಲ್ಲಿರುವಾಗ ಮಧ್ಯಪಾನ, ಪರಸ್ತ್ರೀಸ೦ಗ, ಮಾ೦ಸಹಾರ ಸೇವನೆ ಮಾಡುವುದಿಲ್ಲವೆ೦ದು ತಾಯಿಗೆ ವಚನವಿತ್ತು, ೧೮೮೮ರ ಸೆಪ್ಟೆ೦ಬರ ೪ರ೦ದು ಗಾ೦ಧಿಯವರು ಇ೦ಗ್ಲೆ೦ಡಿಗೆ ಪ್ರಯಾಣ

ಮಾಡಿದರು. ಮೋಧ್ ಬನಿಯ ಜಾತಿಯಲ್ಲಿ ಮೊಟ್ಟಮೊದಲು ಸಮುದ್ರಯಾನ ಮಾಡಿದರು ಅವರೇ. ಇದು ಜಾತಿಯಲ್ಲಿ ಮೊಟ್ಟಮೊದಲು ಸಮುದ್ರಯಾನ ಮಾಡಿದವರು ಅವರೇ. ಇದು ಜಾತಿಪದ್ಧತಿಗೆ ನಿಷ್ಟಿದ್ಧವೆ೦ದು ಮುಖ೦ಡರು ಅವರಿಗೆ ಬಹಿಷ್ಕಾರ ಹಾಕಿದರು. ಆಗ ಗಾ೦ಧಿಯವರಿಗೆ ೧೯ ವಷರ್. ಕಸ್ತೂರ ಬಾ ಆ ವೇಳೆಗೆ ಒ೦ದು ಗ೦ಡು ಮಗುವಿನ ತಾಯಿಯಾಗಿದ್ದರು.

     ಗಾ೦ಧಿಯವರು ತಮ್ಮ ತಾಯಿಗೆ ಕೊಟ್ಟಿದ್ದ ವಚನಗಳನ್ನು ಈಡೇರಿಸಲು ಬಹಳ ಶ್ರಮಪಟ್ಟರು. ಮಾ೦ಸಾಹಾರ ಸೇವಿಸದೆ ಲ೦ಡನಿನಲ್ಲಿ ಇರುವುದಾದರೂ ಹೇಗೆ ಎ೦ದು ಸ೦ಶಯ ಪಡುತ್ತಿದ್ದ ಅವರು ಒ೦ದು ನಿದಶರ್ನವಾದರೂ ಹೇಗೆ ಎ೦ದು ಸ೦ಶಯ ಪಡುತ್ತಿದ್ದ ಅವರು ಒ೦ದು ನಿದಶರ್ನವಾದರು. ಕೊನೆಗೆ ತಾವೇ ಅಡಿಗೆ ಮಾಡಿಕೊಳ್ಳಲಾರ೦ಭಿಸಿ ಸಸ್ಯಾಹಾರಕ್ಕೆ ಸ೦ಬ೦ಧಿಸಿದ೦ತೆ ಹಲವಾರು ಪ್ರಯೋಗಗಳನ್ನು ಮಾಡಿದರು. ರುಚಿಯ ಅಧಿಷ್ಟಾನ ಮನಸ್ಸೇ ಹೊರತು ನಾಲಗೆಯಲ್ಲವೆ೦ಬುದು ಅವರ ಅರಿವಿಗೆ ಬ೦ತು. ಆಸ್ವಾದ ಅವರ ಜೀವನದ ಒ೦ದು ನಿಯಮವಾಯಿತು. ನೀತಿ ತಪ್ಪುವ೦ಥ ಪ್ರಸ೦ಗವೂ ಒಮ್ಮೆ ಗಾ೦ಧಿಯವರಿಗೆ ಬರುವುದರಲ್ಲಿತ್ತು. ಲ೦ಡನಿನಲ್ಲಿದ್ದಾಗಲೇ ಗಾ೦ದಿಯವರು ಭಗವದ್ಗೀತೆಯನ್ನು ಮೊದಲನೆಯ ಬಾರಿಗೆ ಓದಿದ್ದು. ಆ ಮಹಾಗ್ರ೦ಥ ಅವರ ಮನಸ್ಸಿನ ಮೇಲೆ ಅಚ್ಚಳಿಯದ ಪರಿಣಾಮ ಬೀರಿತು. ಅವರ ಬೈಬಲಿನ ಹೊಸ ಒಡ೦ಬಡಿಕೆಯನ್ನು ಓದಿದ್ದೊ ಅದೇ ಕಾಲದಲ್ಲಿ. ಕೆಡುಕಿಗೆ ಕೆಡುಕನ್ನು ಮಾಡಬೇಡ-ಎ೦ಬ ಸೂಕ್ತ ಅವರಿಗೆ ಬಹಳ ಹಿಡಿಸಿತು. ಅವರು ಚಿಕ್ಕವರಿದ್ದಾಗ ಓದಿದ್ದ, ಗುಜರಾತೀ ಕವಿ ಶಾಮಲಾಲ್ ಭಟ್ಟನ, ಒ೦ದು ಸೀಸಪದ್ಯದ ಉದಾತ್ತ ಭಾವಗಳನ್ನು ಅದು ಸಮಥಿರ್_ಸಿತು.
        ಗಾ೦ಧಿಯವರು ಇ೦ಗ್ಲೆ೦ಡಿನಲ್ಲಿ ವ್ಯಾಸ೦ಗ ಮುಗಿಸಿ ಬ್ಯಾರಿಸ್ಟರ್ ಪದವಿ ಪಡೆದು ೧೮೯೧ರ ಜೂನ್ ೧೨ರ೦ದು ಭಾರತಕ್ಕೆ ಹಿ೦ದಿರುಗಿ ಎರಡು ವಷರ್ಕಾಲ ಮು೦ಬಯಿ ರಾಜಕೋಟೆಗಳಲ್ಲಿ ವಕೀಲ ವೃತ್ತಿ ಮಾಡಿದರು. ಆದರೆ ಅವರಿಗೆ ಯಶಸ್ಸು ದೊರಕಲಿಲ್ಲ. ಅವರಲ್ಲಿ ಆತ್ಮವಿಶ್ವಾಸ, ವಾದಚಾತುಯರ್ ಇರಲಿಲ್ಲ. ದಕ್ಷಿಣ ಆಪ್ರಿಕದಲ್ಲಿದ್ದ ಮುಸ್ಲಿ೦ ವತರ್_ಕರೊಬ್ಬರಿ೦ದ ಅವರಿಗೆ ಅನಿರೀಕ್ಷಿತವಾಗಿ ಬೇಡಿಕೆಯೊ೦ದು ಬ೦ತು. ೧೮೯೩ರ ಮೇ ತಿಗಳಿನಲ್ಲಿ ಡಬರ್_ನಿನಲ್ಲಿ ಬ೦ದು ಇಳಿದ ಒ೦ದು ವಾರದ ಮೇಲೆ ಗಾ೦ಧಿಯವರು ಅಲ್ಲಿಯ ನ್ಯಾಯಾಲಯಕ್ಕೆ ಹೋದಾಗ ಅವರು ತಲೆಗೆ ಸುತ್ತಿದ್ದ ಪೇಟವನ್ನು ತೆಗೆಯಬೇಕೆ೦ದು ನ್ಯಾಯಾಧೀಶ ಆಗ್ನೆ ಮಾಡಿದ. ಅಲ್ಲಿಯ ಬಿಳಿಯರು ಭಾರತಿಯರನ್ನು ಕಾಣುತ್ತಿದ್ದ ರೀತಿ ಎ೦ಥದೆ೦ಬುದು ಗಾಧಿಯವರಿಗೆ ಪ್ರಥಮವಾಗಿ ಅರಿವಿಗೆ ಬ೦ತು. ಇದಕ್ಕಿ೦ತ ಅತ್ಯ೦ತ ತೀವ್ರತರವಾದ ಆಘಾತವೊ೦ದು ಅವರಿಗೆ ಕಾದಿತ್ತು. ಅವರು ಡಬರ್_ನಿನಿ೦ದ ಪ್ರಿಟೋರಿಯಕ್ಕೆ ರೈಲ್ವೆಯ ಮೂಲಕ ಒ೦ದನೆಯ ತರಗತಿಯ ಡಬ್ಬಿಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ಸ೦ಭವಿಸಿತು. ಮಾರಿಟ್ಸ್_ಬಗ್ರ್ನಲ್ಲಿ ಬಿಳಿಯನೊಬ್ಬ ಆ ಡಬ್ಬಿಯನ್ನು ಹೊಕ್ಕ. ಗಾ೦ಧಿಯವರ ಬಳಿ ಒ೦ದನೆಯ ತರಗತಿಯ ಟಿಕೆಟ್ ಇದ್ದರೂ ಆತ ಗಾ೦ಧಿಯನ್ನು ಹೊರತಳ್ಳಿಸಿದ. ವಣೀರ್_ಯರು ಒ೦ದನೆಯ ತರಗತಿಯಲ್ಲಿ ಬಿಳಿಯರೊ೦ದಿಗೆ ಪ್ರಯಾಣಮಾಡುವುದಕ್ಕೆ ನಿಷೇಧವಿತ್ತು. ಕತ್ತಲು ತು೦ಬಿದ ವಿಶ್ರಾ೦ತಿಮ೦ದಿರದಲ್ಲಿ ಗಾ೦ಧಿಯವರು ಚಳಿಯಿ೦ದ ನಡುಗುತ್ತ ರಾತ್ರಿ ಕಳೆಯಬೇಕಾಯಿತು. ನನ್ನ ಗ೦ಟುಮೂಟೆ ಎಲ್ಲಿತ್ತೆ೦ಬುದು ನನಗೆ ಗೊತ್ತಿರಲಿಲ್ಲ. ಹಾಗೆ ಮಾಡಿದರೆ ಮತ್ತೆ ಅವಮಾನ ಹಲ್ಲೆಗಳಿಗೆ ಗುರಿಯಾಗಬೇಕಾಗುತ್ತಿತ್ತು. ನಿದ್ದೆ ಮಾಡುವ ಪ್ರಶ್ನೆಯೇ ಇರಲಿಲ್ಲ. ನನ್ನ ಮನಸ್ಸು ಸ೦ಶಯದ ಪ್ರಭುತ್ವಕ್ಕೆ ಒಳಗಾಯಿತು. ಭಾರತಕ್ಕೆ ಓಡಿಹೋಗುವುದು ಹೇಡೀತನವೆ೦ದು ಸರಿರಾತ್ರಿಯಲ್ಲಿ ತೀಮಾರ್_ನಕ್ಕೆ ಬ೦ದೆ-ಎ೦ದು ಅವರು ಬರೆದುಕೊ೦ಡಿದ್ದಾರೆ. ನನ್ನ ಕತರ್_ವ್ಯವೇನೆ೦ದು ನನ್ನನ್ನು ನಾನೇ ಕೇಳಿಕೊ೦ಡೆ. ನಾನು ಭಾರತಕ್ಕೆ ಮರಳಬೇಕೆ? ಅಥವಾ, ದೇವರ ನೆರವಿಗಿರುವನೆ೦ದು ನ೦ಬಿ, ಮು೦ದುವರಿದು, ಅನುಭವಿಸಬೇಕಾದ್ದನ್ನೆಲ್ಲ ಅನುಭವಿಸಲೆ? ಎ೦ದು ಅವರು  ತಮ್ಮನ್ನು ತಾವೇ ಪ್ರಶ್ನಿಸಿಕೊ೦ಡರು. ಅಲ್ಲೆ ಉಳಿದು ಕಷ್ಟ ಅನುಭವಿಸಬೇಕೆ೦ದು ತೀಮಾರ್_ನಿಸಿದೆ. ನನ್ನ ಕ್ರಿಯಾತ್ಮಕ ಅಹಿ೦ಸೆ ಆರ೦ಭವಾದ್ದು ಅ೦ದಿನಿ೦ದಲೆ.
         ದಕ್ಷಿಣ ಆಫ್ರಿಕದಲ್ಲಿ ಭಾರತೀಯ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸಬೇಕೆ೦ದು ನಿಧರ್_ರಿಸಿದ ಗಾ೦ಧಿಯವರು ಈ ಉದ್ದೇಶಕ್ಕಾಗಿ ೧೮೯೪ರಲ್ಲಿ ನಟಾಲ್ ಇ೦ಡಿಯನ್ ಕಾ೦ಗ್ರೆಸ್ ಎ೦ಬ ಪಕ್ಷ ಸ್ಥಾಪಿಸಿದರು. ಬ್ರಿಟೀಷ್ ಚಕ್ರಾಧಿಪತ್ಯದ ಒಳ್ಳೆಯತನದಲ್ಲಿ ಅವರಿಗೆ ಆಗ ನ೦ಬಿಕೆಯಿತ್ತು. ದಕ್ಷಿಣ ಆಫ್ರಿಕ ಯುದ್ಧದಲ್ಲೂ (೧೮೯೯-೧೯೦೨) ಜುಲು ದ೦ಗೆಯಲ್ಲೂ ಅವರು ಗಾಯಗೋ೦ಡವರಿಗೆ ಚಿಕಿತ್ಸೆ ನೀಡಲು ಸ್ವಯ೦ ಸೇವಕ ದಳವೊ೦ದನ್ನು ನಿಮಿರ್_ಸಿ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಮನಃಪೂವರ್_ಕವಾಗಿ ನೆರವು ನೇಡಿದರು. ಇದಕ್ಕೆ ಬ್ರಿಟಿಷ್ ಸಕಾರ್_ರದ ಮೆಚ್ಚುಗೆ ಲಭಿಸಿತಾದರೂ ಭಾರತೀಯರ ಬಗ್ಗೆ ಅದರ ಧೋತಣೆ ಬದಲಾಗಲಿಲ್ಲ. ಪ್ರತಿಯಾಗಿ ಇನ್ನೂ ಕ್ರೂರವಾಯಿತು. ಈ ವೇಳೆಗೆ ಗಾ೦ಧಿಯವರು ವಕೀಲಿಯಲ್ಲಿ ವಿಶೇಷವಾದ ಕತರ್_ವ್ಯದ ಬಗ್ಗೆ ಅವರ ಮನಸ್ಸು ಹೆಚ್ಚು ಖಚಿತಗೊ೦ಡಿತು. ಈ ನಡುವೆ ಅವರು ಭಾರತಕ್ಕೂ ಹೋಗಿ ಬರುತ್ತಿದ್ದರು. ಗೋಪಾಲಕೃಷ್ಣ ಗೋಖಲೆಯವರನ್ನು ಗಾ೦ಧಿಯವರು ತಮ್ಮ ರಾಜಕೀಯ ಗುರುವೆ೦ದೇ ಭಾವಿಸಿದರು. ಭಾರತೀಯ ನೆಲಸುಗಾರರ ಹಕ್ಕುಗಳಿಗಾಗಿ ಹೋರಾಟ ನಡೆಸಲು ಇ೦ಡಿಯನ್ ಒಪಿನಿಯನ್ ಎ೦ಬ ಪತ್ರಿಕೆಯೊ೦ದು ೧೯೪೦ರಲ್ಲಿ ಪ್ರಾರ೦ಭವಾಯಿತು.