ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-4.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

178 ಗಾಂಧೀ,ಮೋಹನ್ ದಾಸ್ ಕರಮ್ ಚಂದ್

ಆತ್ಮತ್ಯಾಗವನ್ನಿದು ಕಲಿಸುತ್ತದೆ.ಪಶುಬಲಕ್ಕೆ ಇದಿರಾಗಿ ಆತ್ಮಬಲವನ್ನು ನಿಲ್ಲಿಸುತ್ತದೆ-ಎಂದು ಅವರು ವಿವರಿಸಿದ್ದಾರೆ.ಇದನ್ನು ಗಾಂಧೀಜಿ ಮೊದಲು ಗುಜರಾತಿ ಭಾಷೆಯಲ್ಲಿ ಬರೆದರು.ಅವರೇ ಇಂಗ್ಲೀಸ್ಃಇಗೂ ಭಾಷಾಂತರಿಸಿದರು.ಈ ಗ್ರಂಥದಲ್ಲಿ ಪ್ರತಿಪಾದಿಸಿದ ಆದರ್ಶಕ್ಕೆ ಅವರ ಬದುಕು ವೈಯುಕ್ತಿಕವಾಗಿ ಮೀಸಲಾಗಿತ್ತು.ಹಿಂದೂಸ್ಥಾನ ಆ ಆದರ್ಶವನ್ನು ಸಾಧಿಸಲು ಕಾಲ ಮಾಗಿ ಬರಲಿಲ್ಲವೆಂದು ಅವರು ಚೆನ್ನಾಗಿ ಅರಿತಿದ್ದರು.ಆದರೆ,ನನ್ನ ಸಾಮೂಹಿಕ ಪ್ರಯತ್ನ,ಭಾರತೀಯ ಅಭಿಮತದಂತೆ ಶಾಸನಸಮ್ಮತ ಪ್ರಜಾಪ್ರಭುತ್ವಕ್ಕಾಗಿ ನಡೆದಿದೆ- ಎಂದು ಅವರೇ ವ್ಯಕ್ತಪಡಿಸಿದ್ದರು.

ಹಿಂದ್ ಸ್ವರಾಜ್ಯವನ್ನು ಓದಿದವರು ಗಾಂಧೀಜಿ ನ್ಯಾಯಾಲಯಗಲಳು,ಗಿರಣಿ ಯಂತ್ರ,ಸಂಸದಾತ್ಮಕ ಪ್ರಜಾಪ್ರಭುತ್ವ,ಇವೆಲ್ಲವುಗಳ ವಿರೋಧಿಯೆಂದು ಭಾವಿಸುವುದುಂಟು.ಆದರೆ,ವ್ಯಾವಹಾರಿಕ ಆದರ್ಶವಾದಿಯಾಗಿದ್ದ ಅವರು,ತಮ್ಮ ನಿಲುವನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ವ್ಯಕ್ತ ಪಡಿಸಿದ್ದಾರೆ.ಇವು ಯಾವುವೂ ನಿಜ ನಾಗರೀಕತೆಯ ಲಕ್ಷಣಗಳಲ್ಲವೆಂದೂ ಸಹಜವಾಗಿಯೇ ಇವು ನಾಶವಾದರೆ ಲೋಕಕ್ಕೆ ಕ್ಷೇಮವೆಂದೂ ಆದರೆ ಆ ರೀತಿ ಆಗಬೇಕಾದರೆ ಮನುಜವರ್ಗ ಅಪಾರತ್ಯಾಗಕ್ಕೂ ಸರಳಜೀವನಕ್ಕೂ ಸಿದ್ದವಾಗಿರಬೇಕೆಂದೂ ಅವರ ಅಭಿಪ್ರಾಯ.ಬ್ರಿಟಿಷ್ ಸಾಮ್ರಾಜ್ಯವಾದಿಯಾಗಿದ್ದ ಲಾರ್ಡ್ ಲೋದಿಯನ್ ೧೯೩೮ರಲ್ಲಿ ಸೇವಾಗ್ರಾಮದಲ್ಲಿ ಕೆಲವು ದಿನ ತಂಗಿದ್ದಾಗ ಹಿಂದ್ ಸಾಮ್ರಾಜ್ಯದ ಪ್ರತಿ ಇದ್ದರೆ ಕೊಡಿ,ಗಾಂಧೀಜಿ ಹೇಳುವುದೆಲ್ಲ ಅದರಲ್ಲಿ ಬೀಜ ರೂಪದಲ್ಲಿದೆ,ಗಾಂಧೀಜಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಈ ಪುಸ್ತಕವನ್ನು ಎಷ್ಟು ಸಲ ಓದಿದರೂ ಸಾಲದು-ಎಂದು ನುಡಿದಿದ್ದರು.ಈ ಮಾತು ಪುಸ್ತಕದ ಮಹತ್ವವನ್ನು ತೋರಿಸುತ್ತದೆ.

೨ ಸರ್ವೋದಯ:ಇದು ಇಂಗ್ಲೆಂಡಿನ ಪ್ರಸಿದ್ದ ಲೇಖಕ ಜಾನ್ ರಸ್ಕಿನ್ನನ 'ಆಂಟು ದಿಸ್ ಲಾಸ್ಟ್' ಎಂಬ ಪುಸ್ತಕದ ಸಾರಸಂಗ್ರಹ.ಇದಕ್ಕೆ ಗಾಂಧೀಜಿಯೇ ಇಟ್ಟ ಹೆಸರು-ಸರ್ವೋದಯ.ಇದರಲ್ಲಿ ಗಾಂಧೀಜಿ ಕಂಡುಕೊಂಡ ತತ್ತ್ವಗಳು ಮೂರು:(ಅ)ವ್ಯಕ್ತಿಯ ಒಳಿತು ಸಮಾಜದಲ್ಲಿ ಅಡಗಿದೆ.(ಆ)ನ್ಯಾಯ ವಾದಿಯ ಕೆಲಸ,ನಾಯಿಂದನ ಕೆಲಸ ಎರಡಕ್ಕೂ ಸಮಾನ ಬೆಲೆ;ಏಕೆಂದರೆ ಇಬ್ಬರಿಗೂ ತಮ್ಮ ಕೆಲಸದಿಂದ ಉದರಂಭರಣ ಮಾಡುವ ಸಮಾನ ಹಕ್ಕಿದೆ.(ಇ)ಶ್ರಮ ಜೀವಿಯ ಅಂದರೆ ಕೃಷಿಕನ ಮತ್ತು ಕೈಕಸುಬುದಾರನ ಜೀವನವೇ ಯೋಗ್ಯಜೀವನ.ಈ ಮೂರೂ ಆಧ್ಯಾತ್ಮ ಅಥವಾ ತ್ಯಾಗತತ್ತ್ವ,ಆರ್ಥಿಕ ಸಮಾನತೆಯ ತತ್ತ್ವ,ಶ್ರಮ ಗೌರವ ಅಥವಾ ಶ್ರಮನಿಷ್ಠೆ ಇವನ್ನು ತಿಳಿಸುತ್ತದೆ.ಭಾರತದ ಅಷ್ಟೇ ಏನು ಜಗತ್ತಿನ ಸಮಾಜಗಳು ಈ ತತ್ತ್ವಗಳ ಆಧಾರದ ಮೇಲೆ ಪುನರ್ರಚಿತವಾಗಬೇಕೆಂದು ಗಾಧೀಜಿಯ ಆಕಾಂಕ್ಷೆಯಾಗಿತ್ತು.ಸರ್ವೋದಯ ಅವರ ಬೋಧನೆಯ ಸಾರ,ಅದಕ್ಕಾಗಿಯೇ ಅವರು ದುಡಿದು ಮಡಿದರು. ೪ ಆರೋಗ್ಯಮಾರ್ಗದರ್ಶಿನೀ:ಸ್ತ್ರೀಪುರುಷರು ಅರೋಗ್ಯಧೃಢಕಾಯರಾಗಿ ಅನುಸರಿಸಬೇಕಾದ ನಿಯಮಗಳೆಲ್ಲವನ್ನೂ ಈ ಪುಸ್ತಕ ತಿಳಿಸುತ್ತದೆ.ಇವಲ್ಲ ಗಾಂಧೀಜಿಯೇ ಪ್ರಯೋಗಿಸಿದ ವಿಧಾನಗಳ ವಿವರಣೆ.ಗಾಳಿ,ಬೆಳಕು,ನೀರು,ಮೃತ್ತಿಕೆ ಇವುಗಳ ಉಪಯೋಗವೇ,ಇದರ ತಿರುಳು,ಇದನ್ನು ಗಾಂಧೀಜಿ ಪ್ರಕೃತಿಚಿಕಿತ್ಸೆ,ನಿಸರ್ಗ ಚಿಕಿತ್ಸೆ ಎನ್ನುತ್ತಾರೆ.ಮಾನವ ಪ್ರಕೃತಿಯಿಂದ ದೂರವಾದಷ್ಟೂ ರೋಗಗಳಿಗೆ ತುತ್ತಾಗುವುದು ಸಹಜ.ಹಾಗೆಯೇ ಪ್ರಕೃತ್ತಿಯೇ ಅವುಗಳಿಗೆ ನಿಜವಾದ ಚಿಕಿತ್ಸೆಯ ಮಾರ್ಗವನ್ನು ತೋರಿಸುತ್ತದೆಂದು ಗಾಂಧೀಜಿಯ ನಂಬಿಕೆಯಾಗಿತ್ತು. ೫.ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ:ಗಾಂಧೀಜಿ ಸತ್ಯ ಅಹಿಂಸೆಗಳ ಮಾರ್ಗದಲ್ಲಿ ಪ್ರಥಮವಾಗಿ ನಡೆಸಿದ ಸವಿನಯ ಪ್ರತೀಕಾರದ,ಸವಿನ ಶಾಸನೋಂಘಲ್ಲನದ,ಪಾಶವೀ ಶಕ್ತಿಗೆ ವಿರುದ್ಧವಾಗಿ ನಿಲ್ಲಿಸಿದ ಸಾತ್ವಿಕ ಶಕ್ತಿಯ ಅಥವಾ ಪ್ರೇಮ ಶಕ್ತಿಯ ಹೋರಾಟದ ಇತಿಹಾಸವಿದು.ಈ ಹೋರಾಟ ಸತ್ಯಾಗ್ರಹ ಎಂಬ ಹೆಸರಿನಿಂದ ಜಗತ್ತಿನಲ್ಲೆಲ್ಲಾ ಪ್ರಸಿದ್ದಿಯಾಯಿತು.ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಇದು ಸ್ಪೂರ್ತಿ ನೀಡಿತು. ೬ ಮಂಗಳ ಪ್ರಭಾತ:ಇದೊಂದು ಪುಟ್ಟ ಪುಸ್ತಕವಾದರೂ ಸರ್ವೋದಯಕ್ಕೆ ನೆರವಾಗುವ ವ್ಯಕ್ತಿಜೀವನ ಹಾಗೂ ಸಾಮಾಜಿಕ ಜೀವನಗಳನ್ನು ಬೆಳೆಸಿಕೊಳ್ಳಲು ಶಕ್ತಿ ನೀಡುವ ವಿವರಣೆಯನ್ನು ನೀಡುತ್ತದೆ.ಸತ್ಯ,ಅಹಿಂಸೆ,ಆಸ್ತೇಯ ಬ್ರಹ್ಮಚರ್ಯ,ಅಸಂಗ್ರಹ,ಶರೀರ ಶ್ರಮ,ಆಸ್ವಾದ,ಭಯಮುಕ್ತಿ,ಸರ್ವಧರ್ಮಸಮಭಾವ,ಸ್ವದೇಶೀ ಸ್ಪರ್ಶಭಾವನೆ(ಅಸೃಶ್ಯತಾ ನಿವಾರಣೆ ಇವನ್ನು ಸಾಧಿಸಲು ನಮ್ರತೆಯಿಂದ ಪ್ರಯತ್ನ ಮಾಡುವುದರ ಮಹತ್ತ್ವವನ್ನು ಇದು ವಿವರಿಸುತ್ತದೆ.ಈ ಪುಸ್ತಕ ಗಾಂಧೀ ಜೀವನದ ಕೈಪಿಡಿ ಎನ್ನಬಹುದು. ೭ ಆತ್ಮಕಥೆ;ಗಾಂಧೀ ಸಾಹಿತ್ಯದಲ್ಲಿ ಎಂದೆಂದಿಗೂ ಶಿಖರಪ್ರಾಯವಾಗಿ ನಿಲ್ಲುವ ಕೃತಿ ಇದು.ಇದನ್ನು ಓದಿ ಅದೆಷ್ಟೋ ಮಂದಿ ಸ್ಪೂರ್ತಿ ಪಡೆದಿದ್ದಾರೆ.ಗಾಂಧೀಜಿಯಂತೆಯೇ ಈಚೆಗೆ ಹಂತಕನ ಗುಂಡಿಗೆ ತುತ್ತಾಗಿ,ಹುತಾತ್ಮನಾದ ಅಮೇರಿಕದ ನೀಗ್ರೋ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಇದನ್ನು ಓದಿ ಸ್ಪೂರ್ತಿ ಪಡೆದುದಲ್ಲದೆ ಸವಿನಯ ಪ್ರತೀಕಾರ ಚಳವಳಿಯನ್ನು ಬಿಳಿಯರ ದಬ್ಬಾಳಿಕೆಯ ವಿರುದ್ಧವಾಗಿ ನಡೆಸಿದ.ಜಗತ್ತಿನ ಮಹನೀಯರ ಆತ್ಮ ಕಥನ ಗ್ರಂಥಗಳಲ್ಲಿ ಇದಕ್ಕೆ ಅಗ್ರಸ್ಥಾನ ದೊರಕಿದೆ. ೮ ಅನಾಸಕ್ತಿಯೋಗ:ಗಾಂಧೀಜಿ ಭಗವದ್ಗೀತೆಯನ್ನು ನನ್ನ ತಾಯಿ ಎಂದು ಕರೆದರು.ಅದರಲ್ಲಿ ಅವರು ಕಂಡ ಸತ್ಯವೇ ಅನಾಸಕ್ತಿಯೋಗ,ಅವರು ತಮ್ಮ ಜೀವನವನ್ನೂ ಅನಾಸಕ್ತಿಯೋಗದಿಂದಲೇ ನಡೆಸಿದರು.ಎಲ್ಲರನ್ನೂ ಭಗವಂತನಿಗೇ ಅರ್ಪಿಸಿ,ಸುಖ-ದುಃಖಗಳಿಂದ ಉದ್ವಿಗ್ನರಾಗದೆ,ಸೋಲು-ಗೆಲುವುಗಳನ್ನು ಸಮನಾಗಿ ಕಂಡು,ಬಾಳಬೇಕಾದ ಪರಿ,ಜೀವನದ ವಿವೇಕ,ಇದರಲ್ಲಿ ಉಲ್ಲೇಖವಾಗಿದೆ,ಗೀತಾಮಾತೆಯ ಪೀಯೂಷಪಾನದಿಂದಲೇ ಗಾಂಧೀಜಿಯ ಆಧ್ಯಾತ್ಮಿಕ ಶಕ್ತಿ ವೃದ್ದಿಯಾಯಿತು.ಅದು ಅವರ ಎಲ್ಲಾ ಲೌಕಿಕ ಕರ್ಮಗಳಿಗೂ ಪುಷ್ಟಿ ನೀಡಿತು. ೯ ನಿರ್ಮಾಣ ಕಾರ್ಯಕ್ರಮ:ಸರ್ವೋದಯದ ದರ್ಶನದ ಆಧಾರದ ಮೇಲೆ ಶಾಂತಿ ಸಮೃದ್ದವಾದ,ಯುದ್ದಭೀತಿಮುಕ್ತವಾದ ಸ್ವತಂತ್ರ ಭಾರತವನ್ನು ಸೃಷ್ಟಿಸುವುದಕ್ಕೂ ವಿಕೇಂದ್ರೀಕರಣ ಪ್ರಧಾನವಾದ ನಿಜವಾದ ಪ್ರಜಾಪ್ರಭುತ್ವ,ಆರ್ಥಿಕ ಸಮತೆ,ಮಾನವ ಸೋದರಭಾವ ಇವನ್ನು ಕಾರ್ಯರೂಪಕ್ಕೆ ತರುವುದಕ್ಕೂ ಕಾಲ ಕಾಲಕ್ಕೆ ಗಾಂಧೀಜಿ ರೂಪಿಸಿದ ಕಾರ್ಯಕ್ರಮಗಳ ವಿವರಣೆ ಈ ಪುಸ್ತಕದಲ್ಲಿದೆ.ನಿರ್ಮಾಣ ಕಾರ್ಯಕ್ರಮದ ಶ್ರದ್ಧಾಭರಿತ ಅನುಷ್ಠಾನದಿಂದ ನಿಜ ಸ್ವರಾಜ್ಯವನ್ನು ಸಾಧಿಸಬಹಿದೆಂಬ ನಂಬಿಕೆ ಅವರಲ್ಲಿತ್ತು. 'ಗಾಂಧೀ ಸಾಹಿತ್ಯದ ಗುಣ ಲಕ್ಷಣಗಳು':ಜೀವನದ ಸಮಗ್ರ ಚಿತ್ರವನ್ನು ಎದುರಿಗೆ ಇಟ್ಟುಕೊಂಡು ನ್ಯಾಯ ಸಮ್ಮತವೂ ಫಲಕಾರಿಯೂ ಆದ ಮಾತುಗಳನ್ನು ಗಾಂಧೀಯವರಂತೆ ಸೂಚಿಸಿದವರು ಅಪರೂಪ.೬೦ ವರ್ಷಗಳ ತುಂಬು ಜೀವನದಲ್ಲಿ ಅವರು ಎಂದಿಗೂ ಸಮಯಸಾಧಕರಾಗಿ ವರ್ತಿಸಿದವರಲ್ಲ.ದಾರಿ ಯಾವುದಾದರೂ ಸರಿ,ಗುರಿ ಮುಟ್ಟಿದರಾಯಿತು,ಎಂದವರಲ್ಲ.ಜನತೆಯನ್ನು ಒಟ್ಟಾಗಿ ಬಿಡಿಬಿಡಿಯಾಗಿ ತಿದ್ದುವಲ್ಲಿ,ಪ್ರೋತ್ಸಾಹಿಸಿ ಹುರಿದುಂಬಿಸುವಲ್ಲಿ ಕಾರ್ಯೋನ್ಮುಖರನ್ನಾಗಿ ಮಾಡುವಲ್ಲಿ