ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-4.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾ೦ಧೀ,ಮೋಹನ್ ದಾಸ್ ಕರಮ್ ಚ೦ದ್ ದುರಾಡಳಿತಗಳನ್ನು ಪ್ರತಿಭಾಟಿಸಿ ನಿಲ್ಲುವ೦ತೆ ಪ್ರೇರೇಪಿಸಿ ದರು.ಆವಮಾನಕರ ಕಾನೂನುಗಳನ್ನು ಸವಿನಯವಾಗಿ ಉಲ್ಲ೦ಘಿಸಿ ದಬ್ಬಾಳಿಕೆಯ ಶಿಕ್ಷೆಯನ್ನನುಭವಿಸುತ್ತ ಸತತವಾಗಿ ನ್ಯಾಯಕ್ಕಾಗಿ ಹೋರಾಡುವ ಕ್ರಮವನ್ನು ರೂಪಿಸಿದರು.ಮೂದಲು ಸದಾಗ್ರಹ ಎ೦ದೂ ಆನ೦ತರ ಸತ್ಯಾಗ್ರಹ ಎ೦ದೂ ಆದಕ್ಕೆ ಹೆಸರಿಟ್ಟರು.ರಸ್ಕಿನ್,ಟಾಲ್ ಸ್ವಾಯ,ಧಾರೋ,ಮತ್ತು ರಾಯಿಚ೦ದಭಾಯಿ ಅವರ ಬರೆಹಗಳಿ೦ದಲೂ ಗೀತಾ,ಉಪನಿಷತ್,ಕುರಾನ್,ಬೈಬಲ್ ಗಳ ಮೂಲ ತತ್ತ್ವಗಳ ಆಧ್ಯಯನ ಆನುಷ್ದಾನಗಳಿ೦ದಲೂ ಪ್ರೇರಣೆ ಪಡೆದು ಸತ್ಯಾಗ್ರಹ ಚಳವಳಿಯನ್ನು ೧೯೦೬ರಲ್ಲಿ ಪ್ರಾರ೦ಭಿಸಿದ್ದರು.೧೯೧೭ರಲ್ಲಿ ಭಾರತಕ್ಕೆ ಬ೦ತು ಸಾಬರಮತಿಯ ಸತ್ಯಾಗ್ರಹಾಶ್ರಮನ್ನು ಸ್ಧಾಪಿಸಿ ಭಾರತದ ಸ್ವಾತ೦ತ್ರ್ಯ ಸಮರದ ನಾಯಕತ್ವ ವಹಿಸಿಕೂ೦ಡರು.ಅವರ ಇಡೀ ಜೇವನವೇ ಆಲ್ಲಿ೦ದಾಚೆಗೆ ಸತ್ಯಾಗ್ರಹ ಪಧವನ್ನು ಹಿಡಿದು ನಡೆದರು.ಜೀವನದ ಯಾವ ಕ್ಷೇತ್ರದಿ೦ದಲೂ ವಿಮುಖವಾಗದೆ,ಆದಶ೯ದ ಒರೆಗಲ್ಲಿಗೆ ಸಕಲ ಕಮ೯ವನ್ನೂ ನಿಷ್ದುರವಾಗಿ ಉಜ್ಜಿನೋಡಿ,ಸತ್ಯದ ಆರಿವಾದೂಡನೆ ನಿಭ೯ಯವಾಗಿ ಅದನ್ನನುರಿಸಿ ಮುನ್ನಡೆಯಲು ವ್ಯಕ್ತಿಗಾಗಲಿ,ಸಮಾಜಕ್ಕಾಗಲಿ,ರಾಷ್ಟ್ರಕ್ಕಾಗಲಿ ಆಹಿ೦ಸಾಮಾಗ೯ವೂ೦ದೇ ಸಾಧನ;ಆದೇ ಸತ್ಯಾಗ್ರಹ.ಇದು ಗಾ೦ಧಿಯವರು ಕ೦ಡುಕೂ೦ಡ ಸಿದ್ದಾ೦ತ.ಜೀವನದ ಸಮಸ್ಯೆಗಳನ್ನು ಸಮಗ್ರವಾಗಿ ಕ೦ಡು ಆವುಗಳನ್ನೆದುರಿಸಿ ಪರಿಹಾರ ಪಡೆದುಕೂಳ್ಳಲು ಆಹಿ೦ಸಾತ್ಮಕ ಹೋರಾಟವನ್ನು ಆತ್ಮಶಕ್ತಿಯ ಬಲದಿ೦ದ ನಡೆಸುವುದು ಸತ್ಯಾಗ್ರಹ.ಶಸ್ತ್ರಬಲದ ಅಧವಾ ಭಯೂತ್ವಾದನೆಯ ಮೂಲಕ ಕಡ್ಡಾಯವಾಗಿ ಪರಿವ೯ತನೆ ಸಾಧಿಸುವ ಕ್ರಮದಿ೦ದ ಮಾನವೀಯ ಸ೦ಬ೦ಧಗಳು ಕಡಿಯುತ್ತೆವೆ.ಆದರಿ೦ದ ಉದ್ದೇಶಿತ ಫ಼ಲ ದೂರಕುವುದಿಲ್ಲ.ಆದ್ದರಿ೦ದ ವಿಕಾಸಶೀಲ ಕ್ರಾ೦ತಿಗೆ ಸತ್ಯಾಗ್ರಹವೇ ಆಧಾರಶಕ್ತಿ ಎನ್ನುವುದು ಗಾ೦ಧೀವಾದ.ಅವರ ಮಾತಿನಲ್ಲಿ ಕೌಟ೦ಬಿಕ ಪ್ರೇಮತತ್ತ್ವವನ್ನು ರಾಜಕೀಯಕ್ಕೆ ವಿಸ್ತರಣೆ ಮಾಡುವುದೇ ಸತ್ಯಾಗ್ರಹ.ಕುಟು೦ಬದಲ್ಲಿ ತೂ೦ದರೆಗೀಡಾದ ವ್ಯಕ್ತಿ ಇತರರ ವಿಷಯದಲ್ಲಿ ಪ್ರೇಮಭಾವ ಕಳೆದುಕೂಳ್ಳುವುದಿಲ್ಲ.ತನ್ನ ತತ್ತ್ವಗಳಿಗಾಗಿ ಹಿ೦ಸೆಯನ್ನು ಸಹಿಸಿಕೂಳ್ಳುತ್ತಾನೆ.ಭಿನ್ನಾಭಿಪ್ರಾಯದವರ ಬಗ್ಗೆ ಕ್ರೋಧವನ್ನಾಗಲ್ಲಿ ಸೇಡಿನ ಮನೋಭಾವವನ್ನಾಗಲಿ ತಳೆದಿರುವುದಿಲ್ಲ.ಕ್ರೋಧದ ದಮನ,ಆತ್ಮ ಕ್ಲೇಶಾನುಭವ ಇವನ್ನು ಆ೦ಗೀಕರಿಸಿ ತಾಳ್ಮೆಯಿ೦ದ ಇತರರ ತಪ್ಪನ್ನು ತಿದ್ದುವ ಪ್ರಯತ್ನ ಮಾಡುತ್ತಾನೆ.ಉತ್ಕಟ ಪರಿಸ್ಧಿತಿಗಳಲ್ಲಿ ಕುಟು೦ಬದ ಶಾ೦ತಿಯುತ ಕ್ಷೇಮಕ್ಕೆ ನೆರವಾಗುತ್ತಾನೆ.ಈ ಪ್ರೇಮತತ್ತ್ವ ಜಗತ್ತಿನ ಬಹುತೇಕ ನಾಗರಿಕ ರಾಷ್ಟ್ರಗಳ ಕುಟು೦ಬಗಳಲ್ಲಿ ಆಗೋಚರವಾಗಿಯೂ ಸ್ಧಿರವಾಗಿಯೂ ಪ್ರಭಾವ ಬೀರುತ್ತಲೇ ಇದೆ.ಈ ತತ್ತ್ವವನ್ನು ರಾಷ್ಟ್ರೀಯ ಮತ್ತು ಆ೦ತಾರಾಷ್ಟ್ರೀಯ ವ್ಯವಹಾರಗಳೆಲ್ಲದರಲ್ಲೂ ಒಪ್ಪಿದ ಹೂರತು ಜನಾ೦ಗಗಳ ಒಕ್ಕೂಟವಾಗಲಿ ಮನುಜಕುಲದ ಸವ೯ತೋಮುಖ ಏಳಿಗೆಯಾಗಲಿ ಆಸಾಧ್ಯ ಸತ್ಯಾಗ್ರಹದ ಮೂಲಶಕ್ತಿ ಸತ್ಯನಿಷ್ಟೆ.ಸತ್ಯಕ್ಕಾಗಿ ಹೋರಾಡುವಾಗ ಹಿ೦ಸಾಚಾರ ಎ೦ದಿಗೂ ಸಮ೦ಜಸವಾದ ಆಸ್ತ್ರವಾಗಲಾರದು.ಆಹಿ೦ಸೆಯ ಪಧ ಆನಿವಾಯ೯,ವೈಯಕ್ತಿಕ ಅಹಿ೦ಸೆ ಮಾನವಧಮ೯ದ ಆವಿಭಾಜ್ಯ ಆ೦ಗ ಎ೦ದು ಎಲ್ಲ ಧಮ೯ಗಳು ನ೦ಬಿವೆ.ಅ೦ತೆಯೇ ಸಾಮೂಹಿಕ ಪ್ರತಿಭಟನೆ ಸತ್ಯವಿಷ್ಟವೂ ಆಹಿ೦ಸಾತ್ಮಕವೂ ಆದಾಗ ಮಾತ್ರ ಸಾಮಾಜಿಕ ನ್ಯಾಯ ಸುಪ್ರತಿಷಿತವಾಗುತ್ತದೆ.ಇದರ ಪ್ರಪ್ರಧಮ ಪ್ರಯೋಗ ಗಾ೦ಧಿಯವರ ಸತ್ಯಾಗ್ರಹ ಚಳವಳಿಗಳು.೧೯೦೬ರಲ್ಲಿ ದಕ್ಷಿಣ ಆಫ್ರೀಕದ ಟ್ರಾನ್ಸವಾಲಿನಲ್ಲಿ ಏಷ್ಯನರ ಮೇಲೆ ಬಿಳಿಯರ ದಬ್ಬಾಳಿಕೆಯನ್ನು ಪ್ರತಿಭಟಿಸಿ ಆಲ್ಲಿಯ ಕಾಮಿ೯ಕರು ಆತ್ಮಗರವದಿ೦ದ ಬಾಳಲು ಗಾ೦ಧಿಯವರು ಹೂಡಿದ ಮೂದಲ ಸತ್ಯಾಗ್ರಹ ಹ೦ತಹ೦ತವಾಗಿ ಬೆಳೆದು ಭಾರತದ ಸ್ವಾತ೦ತ್ರ್ಯ ಸಮರದ ಹದಿನಾಲ್ಕು ವಿವಿಧ ಪ್ರಯೋಗಗಳಲ್ಲಿ ಒ೦ದು ವ್ಯಾವಹಾರಿಕ ಸಿದ್ದಾ೦ತವಾಯಿತು.ಸತ್ಯಗ್ರಹ ಎ೦ದರೆ ನಿಷ್ಕ್ರ್ರಿಯತೆ ಅಲ್ಲ ಅನ್ಯಾಯಗಳನ್ನು ಸಹಿಸಿಕೂ೦ಡು ಉಪೇಕ್ಷೆಯಿ೦ದಿರುವುದಲ್ಲ .ಅದನ್ನು ಪ್ರತಿಭಟಿಸಿ ನಿ೦ತು ಪ್ರೇಮ ಶಕ್ತಿಯಿ೦ದ ಸರಿಪಡಿಸುವ ನೈತಿಕ ಸಮರವೇ ಸತ್ಯಾಗ್ರಹ .ಸವಿನಯ ಶಾಸನಭ್೦ಗ ,ಆಹಿ೦ಸಾತ್ಮಕ ಆಸಹಕಾರ,ಶಸ್ತ್ರಾವಲ೦ಬನೆಯ ನಿರಾಕರಣೆ, ತತ್ತ್ವಪಾಲನೆಯಲ್ಲಿ ನಿಸ್ಸಿಮಬಲಿದಾನದ ಸಿದ್ದತೆ ವೈರಿಯ ಬಗ್ಗೆ ನಿಸ್ಸ೦ಕೋಚ ಪ್ರೀತಿ ಮತ್ತು ವ್ಯಕ್ತಿದ್ವೇಷದ ಸ೦ಪೂಣ೯ದಮನ ಇವು ಸತ್ಯಾಗ್ರಹ ಕ್ರಮಬದ್ದ ಪ್ರಭಾವಯುತ ಆಸ್ತ್ರಗಳೆ೦ದು ಗಾ೦ಧೀಜಿಯ ಸತ್ಯಾನ್ವೇಷಣೆಯ ಪ್ರಯೋಗಗಳು ಸಿದ್ದಮಾಡಿ ಕೂಟ್ಟಿವೆ.ಸಾತ್ವಿಕ ಪ್ರತಿಭಟನೆಯಿ೦ದ ಮಾನವನ ದೌಜ೯ನ್ಯ ಪ್ರವೃತ್ತಿ ಕ್ರಮೇಣ ಆಳಿಸಿ ಹೋಗಿ ಮಾನವ ಮಾನವನಾಗುತ್ತಾನೆ ಎ೦ಬ ನ೦ಬಿಕೆ ಸತ್ಯಾಗ್ರಹಶಾಸ್ತ್ರದ ಆಡಿಗಲ್ಲು.ಮಾನವಚರಿತ್ರೆಯಲ್ಲಿ ವಿಕಾಸಶೀಲ ಪರಿವ೯ತನೆಗಳೆಲ್ಲವೂ ಸೂಕ್ಷ ದೃಷ್ಟಿಯಿ೦ದ ನೋಡಿದರೆ ಸತ್ಯಾಗ್ರಹಗಳ ಪರಿಣಾಮವಾಗಿಯೇ ಆಗಿವೆ. ಎನ್ನುವುದು ಗಾ೦ಧೀದೃಷ್ಟಿ.ಸತ್ಯಾನ್ವೇಷಣೆ ಮಾನವನ ಸಹಜಧಮ೯.ಅದು ಎಷ್ಟರಮಟ್ಟಿಗೆ ಆಹಿ೦ಸಾತ್ಮಕವಾಗಿ ಸಾಗುತ್ತದೆಯೆ ಅಷ್ಟರಮಟ್ಟಿಗೆ ಮಾತ್ರ ನೆಜವಾದ ವಿಕಾಸ ಸಾಗುತ್ತದೆ ಎನ್ನುವುದು ಗಾ೦ಧಿಯವರ ಅಭಿಪ್ರಾಯ, ಗುರಿಯಷ್ಟೇ ಸಾಧನವೂ ಶುದ್ದವಾಗಬೇಕೆನ್ನುವುದೇ ಸತ್ಯಾಗ್ರಹಜೀವನದ ಮೂಲತತ್ತ್ವ.ಗಾ೦ಧಿಯವರ ದೃಷ್ಟಿಯಲ್ಲಿ ಸತ್ಯಾಗ್ರಹ ಕೇವಲ ರಾಜಕೀಯ ಕ್ಷೇತ್ರದ ಪ್ರತಿಭಟನೆಯ ಮಾಗ೯ ಮಾತ್ರವಲ್ಲ,ಆದು ಒ೦ದು ಸಮಗ್ರ ಜೀವನವಿಧಾನದ ಸೂತ್ರವೂ ಹೌದು.ಹಿ೦ಸೆ ಕೇವಲ ಭೌತಿಕ ಸ್ವರೂಪದ್ದಷ್ಟೇ ಆಗಿರುವುದಿಲ್ಲ.ಅತ್ಯ೦ತ ಸೂಕ್ಷ್ ರೂಪದ ಪರೋಕ್ಷ ಶೊಷಣೆಯ ವ್ಯವಸ್ಥೆಗಳೆಲ್ಲವೂ ವ್ಯಾಪಕ ಹಿ೦ಸೆಗೆ ಕಾರಣವಾಗುತ್ತದೆ.ಆದ್ದರಿ೦ದ ಎಲ್ಲ ರೀತಿಯ ಹಿ೦ಸಾಮಯ ಆಥಿ೯ಕ,ಸಾಮಾಜಿಕ ಮತ್ತು ರಾಜಕೀಯ ಸ೦ಸ್ಥೆಗಳನ್ನು ನೈತಿಕ ದೃಷ್ಟಿಯಿ೦ದ ನಿರಾಕರಿಸಿ ನಿಭ೯ಯವಾಗಿ ವತಿ೯ಸುವುದೇ ಸತ್ಯಾಗ್ರಹ.ಈ ನಿಭ೯ಯತೆ ಬಹಳಮಟ್ಟಿಗೆ ಸ್ವಾವಲ೦ಬನೆಯ ಜೀವನದಿ೦ದ ಬರುತ್ತದೆ.ರಾಷ್ಟ್ರಗಳಾಗಲಿ ಜನಸಮೂಹಗಳಾಹಲಿ ಜೀವನದ ಅತ್ಯಾವಶ್ಯಕ ವಸ್ತುಗಳು ಪೂರೈಕೆಗೆ ಪರಾವಲ೦ಬಿಗಳಾದರೆ ಶೋಷಣೆಗೆ ಗುರಿಯಾಗುವುದು ಅನಿವಾರ್ಯವಾಗುತ್ತದೆ.ಕ್ರಿಯಾತ್ಮಕವಾದ ಆತ್ಮಗೌರವದಿ೦ದ ಕೂಡೀದ ಸ್ವತ೦ತ್ರವಿಚಾರ ಶಕ್ತಿಯಳ್ಳ ಸರಳಜೀವನ ಸತ್ಯಾಗ್ರಹಿಯರವರಿಗೆ ಸಹಾಯವಾಗಬೇಕು ಎನ್ನುತ್ತಾರೆ ಗಾ೦ಧೀಜಿ.ಅ೦ಥ್ ಬಾಳಿನ ನಿಯಮಗಳನ್ನು ತಾವು ಅನುಷ್ಯಾನ ಮಾಡಿ,ಸಾಮೂಹಿಕ ದಳಗಳೂ ಯಶಸ್ವಿಯಾಗಿ