ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-4.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಂಧಾರ ಚಾಂಗ್ ಮತ್ತು ಇತರ ಚೀನೀ ಯಾತ್ರಿಕರ ಇತಿವೃತ್ತಗಳಲ್ಲಿ ಗಾಂಧಾರದ ಪ್ರಸಿದ್ದ ನಗರಗಳು ಮತ್ತು ಬೌದ್ಧ ಕೇಂದ್ರಗಳನ್ನು ವಿಶೇಷವಾಗಿ ವಿವರಿಸಿರುವುದರಿಂದ, ಆ ಪ್ರದೇಶದ ಅಂದಿನ ವ್ಯಾಪ್ತಿಯನ್ನು ಊಹಿಸಬಹುದು. ಇವುಗಳ ಪ್ರಕಾರ ಗಾಂಧಾರ ಈಗಿನ ಉತ್ತರ ಪಾಕಿಸ್ತಾನದಲ್ಲಿ, ಸಿಂಧೂ ನದಿಯ ಪಶ್ಚಿಮದಿಂದ ಪೆಷಾವರ್ ತಗ್ಗಿನವರೆಗಿನ ಪ್ರದೇಶವನ್ನೂ ಪಶ್ಚಿಮೋತ್ತರದಲ್ಲಿ ಈಗಿನ ಆಫ್ಘಾನಿಸ್ತಾನದ ಸ್ವಾಕ್ ಮತ್ತು ಕಾಬುಲ್ ಕಣಿವೆಯ ಪ್ರದೇಶವನ್ನೂ ಒಳಗೊಂಡಿತ್ತೆಂದು ತಿಳಿಯುತ್ತದೆ. ತಕ್ಷಶಿಲೆ (ಪಾಕಿಸ್ತಾನದ ರಾವಲ್ಪಿಂಡಿ ಜಿಲ್ಲೆಯಲ್ಲಿರುವ ಈಗಿನ ಟ್ಯಾಕ್ಸಿಲ) ಗಾಂಧಾರದ ರಾಜಧಾನಿಯಾಗಿತ್ತು. ಪುಷ್ಕಳಾವತಿಯೂ (ಪಾಕಿಸ್ತಾನದ ಪೆಷಾವರ್ ಜಿಲ್ಲೆಯಲ್ಲಿರವ ಚಾರ್ಸದ) ಕೆಲಕಾಲ ರಾಜಧಾನಿಯಾಗಿತ್ತು. ಅಕ್ಬರನ ಕಾಲದ ಐನ್-ಇ-ಆಕ್ಬರಿ ಗ್ರಂಥದ ಪ್ರಕಾರ ಅಂದಿನ ಗಾಂಧಾರ ಕಾಶ್ಮೀರ ಮತ್ತು ಅಟ್ಟಕ್ ಮಧ್ಯದ ಪ್ರದೇಶವಾಗಿದ್ದಿತು. ಈಗ ಆಫ್ಘಾನಿಸ್ತಾನದಲ್ಲಿರುವ ಕಾಂದಹಾರ್ ನಗರದಹ ಹೆಸರಿನಲ್ಲಿ ಹಳೆಯ ಗಾಂಧಾರ ಪ್ರಾಂತ್ಯದ ಸ್ಮರಣೆ ಉಳಿದುಬಂದಿದೆ. ಗಾಂಧಾರದ ಮುಂಡಿಗಕ್, ಬೆಗ್ರಾಮ್, ಹಡ್ಡ, ತಕ್ಷಶಿಲಾ, ಚಾರ್ಸದ ಮುಂತಾದ ಅನೇಕ ಪ್ರಾಚೀನ ನೆಲೆಗಳಲ್ಲಿ ಉತ್ಖನನಗಳು ನಡಿದಿವೆ. ಮುಂಡಿಗಕ್ ನಲ್ಲಿ ಪ್ರ.ಶ.ಪೂ. ೪ನೆಯ ಸಹಸ್ರಮಾನದಿಂದ ಚಾರಿತ್ರಿಕ ಕಾಲದವರೆಗೂ ಪ್ರಚಲಿತವಿದ್ದ ಸಂಸ್ಕ್ರತಿಗಳು ಬೆಳಕಿಗೆ ಬಂದಿವೆ. ಹಡ್ಡ ಮತ್ತು ಬೆಗ್ರಾಮ್ ಬಹು ಮಟ್ಟಿಗೆ ಪ್ರಸಕ್ತಶಕದ ಆದಿ ಶತಮಾನಗಳಿಗೆ ಸೇರಿದ ನಗರಾವಶೇಷಗಳು. ಹಡ್ದದಲ್ಲಿ ಅನೇಕ ವಾಸ್ತು ಶಿಲ್ಪ ಕಲಾಕೃತಿಗಳೂ ಬೆಗ್ರಾಮ್ ನಲ್ಲಿ ಇವುಗಳ ಜೊತೆಗೆ ಕೆತ್ತನೆಗಳೂ ದೊರಕಿವೆ. ತಕ್ಷಶಿಲಾದಲ್ಲಿ ಮೂರು ಕಾಲಗಳ ಅವಶೇಷಗಳು ಬೇರೆಬೇರೆ ದಿಬ್ಬಗಳಲ್ಲಿದ್ದವು. ಮೂದಲನೆಯ ಬೀರ್ ದಿಬ್ಬ ಪ್ರ,ಶ.ಪೂ. ೬ನೆಯ ಶತಮಾನದಿಂದ ಅಲೆಗ್ಯಾಂಡ ರನ ಕಾಲದವರೆಗೆ ಉಪಸ್ಥಿತವಿದ್ದ ನಗರಾವಶೇಷ. ಮೂಂದಿನ ಸಿರ್ಕಪ್ ಪ್ರ.ಶ.ಪೂ. ೨ನೆಯ ಶತಮಾನದಿಂದ ೧೨ನೆಯ ಶತಮಾನದ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ತದನಂತರದ ಸಿಸುರ್ಕ್ ನಲ್ಲಿ ಕುಶಾನರ ಕಾಲದ ಅವಶೇಷಗಳಿವೆ. ತಕ್ಷಿಶಿಲಾ ನಗರ ೫ನೆಯ ಶತಮಾನದ ಹೊತ್ತಿಗೆ ಕೊನೆಗೊಂಡಿತೆಂದು ತೋರುತ್ತದೆ. ಇಲ್ಲಿ ಕೋಟೆ, ಅರಮನೆ, ದೇವಾಲಯಗಳು, ಬೌದ್ಧಸ್ತೂಪಗಳು, ಮಠಗಳು, ವಾಸದ ಮನೆಗಳು ಮುಂತಾದ ಅನೇಕ ವಾಸ್ತು ಅವಶೇಷಗಳಲ್ಲದೆ ಕಲ್ಲು ಮತ್ತು ಲೋಹ ಕಲಾಕೃತಿಗಳೂ ಅನೇಕ ನಾಣ್ಯಗಳೂ ನಿತ್ಯೋಪಯೋಗಿ ಉಪಕರಣಗಳೂ ಆಯೂಧಗಳೂ ಆಲಂಕರಣ ಸಾಮಗ್ರಿಗಳೂ ದೊರೆತಿವೆ. ಚಾರ್ಸದದಲ್ಲಿ ಈಚೆಗೆ ನಡಿದಿರುವ ಉತ್ಖನನದಲ್ಲಿ ಪ್ರಚಲಿತಶಕದ ಆರಂಭದ ಶತಮಾನಗಳು ಕಂಡುಬಂದಿವೆ. ಬಾರತದಲ್ಲಿ ಕ್ರೈಸ್ತಧರ್ಮದ ಅಸ್ತಿತ್ವದ ಬಗ್ಗೆ ಮಾಹಿತಿ ನೀಡುವ ಸಂತ ಪೀಟರನ ಪ್ರತಿಮೆ ಇವುಗಳಲ್ಲಿ ಬಹುಮುಖ್ಯವಾದದ್ದು. ಈ ಪ್ರದೇಶದಲ್ಲಿ ನಡೆದಿರುವ ಇತರ ಅನ್ವೇಷಣೆಗಳಿಂದ ಅನೇಕ ಪ್ರಾಗೈತಿಹಾಸಿಕ ನೆಲೆಗಳು, ಬಾಮಿಯಾನ್, ದರುಂತ, ಮುಂತಾದೆಡೆಗಳಲ್ಲಿ ಗುಹಾದೇವಾಲೆಯುಗಳು, ಅನೇಕ ಶಾಸನಗಳು ಮತ್ತು ನಾಣ್ಯಗಳು ಗೋಚರವಾಗಿವೆ. ಶಾಸನಗಳಲ್ಲಿ ಮಾನ್ಸೇರಾ ಸಾಬಾಸ್ ಗರ್ಹಿಗಳ ಅಶೋಕನ ಶಿಲಾಲಿಪಿಗಳು ಮುಖ್ಯ. ಇತ್ತೀಚೆಗೆ ಕಾಂದಹಾರ್ ಬಳಿ ದೊರಕಿದ ಅದೇ ದೊರೆಯ ಗ್ರೀಕ್ ಮತ್ತು ಆರಮೇಯಿಕ್ ಶಾಸನಗಳೂ ಅನೇಕ ಶಿಲಾವಿಗ್ರಹಗಳ ಮೇಲಿರುವ ಖರೋಷ್ಠಿ ಶಾಸನಗಳೂ ಮುಖ್ಯವಾದವು. ಅನೇಕ ಉತ್ಖನನಗಳಲ್ಲಿ ಭಾರತದ ಅತ್ಯಂತ ಪ್ರಾಚೀನ ನಾಣ್ಯಗಳಾದ ಮುದ್ರಾಂಕಿತ ನಾಣ್ಯಗಳೂ ಗ್ರೀಕರ, ಪಾರ್ಥಿಯನರ, ಶಕರ, ಕುಷಾಣರ,ಸ್ಯಾಸಾನೀಯನರ ಮತ್ತು ಅನಂತರದ ರಾಜವಂಶೀಯರ ನಾಣ್ಯಗಳು ಬೆಳಕಿಗೆ ಬಂದಿವೆ. ಭಾರತದ ಚರಿತ್ರೆಯಲ್ಲಿ ಗಾಂಧಾರಕ್ಕೆ ಪ್ರಾಮುಖ್ಯತೆ ಇದೆ. ಖೈಬರ್, ಬೋಲಾನ್ ಕಣಿವೆಗಳ ಸುತ್ತಲಿನ ಪ್ರದೇಶವನ್ನು ಒಳಗೊಂಡು, ಪಶ್ಚಿಮ ಮತ್ತು ಮಧ್ಯ ಏಷ್ಯದಿಂದ ಭಾರತದ ಕಡೆಯ ಪ್ರವೇಶ ದ್ವಾರದಲ್ಲಿರುವುದೇ ಗಾಂಧಾರದ ಮಹತ್ತ್ವಕ್ಕೆ ಕಾರಣ. ಇದು ಭಾರತೀಯ ಮತ್ತು ಪಶ್ಚಿಮ ಸಂಗಮ ಸ್ಥಾನ. ಇತಿಹಾಸಪೂರ್ವ ಕಾಲದಲ್ಲೇ ಗಾಂಧಾರದಲ್ಲಿ ಇರಾನ್ ಪ್ರಸ್ಥ ಭೂಮಿಯಿಂದ ಹಬ್ಬಿದ ಹಲವು ಸಂಸ್ಕೃತಿಗಳು ಪ್ರಚಲಿತವಿದ್ದವು. ಅನಂತರ ಇದರ ಕೆಲವು ಭಾಗಗಳು ಪ್ರಸಿದ್ಧ ಹರಪ್ಪ ಸಂಸ್ಕೃತಿಯ ಪ್ರಭಾವಕ್ಕೆ ಒಳಪಟ್ಟಿದ್ದವು. ಪ್ರಾಯಶಃ ಆರ್ಯ ಭಾಷಾಭಾಷಿಗಳು ಭಾರತವನ್ನು ಪ್ರವೇಶಿಸಿದ್ದು ಈ ಭಾಗ ದಿಂದಲೇ ಮುಂದೆ ಇತಿಹಾಸ ಯುಗದ ಆರಂಭದಲ್ಲಿ ಇದು ಸುಮಾರು ಎರಡು ಶತಮಾನಗಳ ಕಾಲ ಪರ್ಷಿಯನ್ ಸಾಮ್ರಾಜ್ಯದ ಭಾಗವಾಗಿತ್ತು. ಗ್ರೀಕ್ ಚರಿತ್ರಕಾರ ಹೆಕ್ ಟೀಯಸ್ ನ ಒಂದು ಹೇಳಿಕೆಯ ಪ್ರಕಾರ ಪರ್ಷಿಯನ್ ಸಾಮ್ರಾಜ್ಯದ ಇಪ್ಪತ್ತೆರಡು ಪ್ರಂತ್ಯಗಳಲ್ಲಿ (ಸತ್ರಪಿ) ಗಾಂಧಾರ ಹದಿನೇಳನೆಯದು. ಬೇಹೆಸ್ತಾನ್ ಶಾಸನವೂ ಹಿರಾಡೊಟಸನ ಉಲ್ಲೇಖಗಳು ಇದಕ್ಕೆ ಇಂಬುಗೊಡುತ್ತವೆ. ಗಾಂಧಾರ ಪರ್ಷಿಯನ್ ಸಾಮ್ರಾಜ್ಯದ ಅಧೀನವಾದ್ದು ಪ್ರಾಯಶಃ ಸೈರಸ್ ದೊರೆಯ (ಪ್ರ,ಶ,ಪೂ. ೫೫೯-೫೩೦) ಕಾಲದಲ್ಲಿ. ಪರ್ಷಿಯನ್ ಸಾಮ್ರಾಜ್ಯದ ಅಂತ್ಯಂದ ಅನಂತರ ಪ್ರ.ಶ.ಪೂ. ಸು. ೩೨೭ರಲ್ಲಿ ಮ್ಯಾಸಿಡಾನ್ ದೊರೆ ಅಲೆಕ್ಸಾಂಡರನ