ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-4.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯುತವಾದ ಅಟ್ಟ್ವನ್ನು ಕಟ್ಟಬಹುದು.ವಿಮಾನೋದ್ಯಮದಲ್ಲಿ ಇಂಥ ಬಟ್ಟೆಗೆ ವಿಶೇಷ ಉಪಯುಕ್ತತೆ ಉಂಟು.ಗಾಜಿನ ದಾರಕ್ಕೆ ಪ್ಲಾಸ್ಟಿಕ್ ಸೇರಿಸಿ ತಯಾರಿಸಿದಾಗ ಲಭಿಸುವ ವಸ್ತು ಅತ್ಯಂತ ಸಾಮರ್ಥ್ಯಯುತವಾದದ್ದು.ಕ್ರೀಡಾಕರುಗಳನ್ನೂ ಹಡಗಿನ ಕಟ್ಟಡಗಳನ್ನೂ ಇದರಿಂದ ತಯಾರಿಸುತ್ತಾರೆ.

ಗಾಜಿನ ಮನೆ:ನಿಯಂತ್ರಿತ ಹಮೆಯಲ್ಲಿ ಸಸ್ಯಗಳನ್ನು ಬೆಳೆಸಲು ಕ್ಟ್ಟಿರುವ ಮನೆ .ಈ ಮನೆಯ ಛಾವಣಿ ಮತ್ತು ಗೋಡೆಗಳೆಲ್ಲವೂ ಗಾಜಿನವೆ.ಚಳಿ,ಗಾಳಿ ಮತ್ತು ಮಳೆಯ ಹೊಡೆತದಿಂದ ರಕ್ಷಣೆ ನೀಡಿ ಸಾಕಷ್ಟು ಬೆಳಕು ಬೀಳುವಂತೆ ರೂಪಿಸಿರುವ ಮನೆಯದು.ಚಳಿ ಗಾಳಿಯನ್ನು ಸಹಿಸಿಕೊಂಡು ಬಯಲಿನಲ್ಲೂ ಬೆಳೆಯಬಲ್ಲ ಕೆಲವು ದೃಢಕಾಯ ಸಸ್ಯಗಳುಂಟು.ಅವು ಬೆಳೆಯುವುದು ನಿಧಾನ.ಗಾಜಿನ ಮನೆಯಲ್ಲಾದರೆ ಅವುಗಳ ಬೆಳೆವಣಿಗೆಯನ್ನು ಚುರುಕುಗೊಳಿಸಬಹುದು.ಆದರೆ ಕೋಮಲ ಪ್ರಕೃತಿಯ ಸಸ್ಯಗಳನ್ನು ಮತ್ತು ಪರದೇಶದಿಂದ ತಂದ ಗಿದಗಳನ್ನು ಪೋಷಿಸಲು ಇಂಥ ಗಾಜಿನ ಮನೆಗಳು ಅತ್ಯಾವಶ್ಯಕ.ಆಕಲದಲ್ಲಿ ಶೀತ ಹವೆಯಲ್ಲಿ ಮತ್ತು ಚಳಿದೇಶಗಳಲ್ಲಿ ಸಸ್ಯಗಳನ್ನು ಬೆಳೆಸಲು ಉಷ್ಣವನ್ನು ಕೃತಕವಾಗಿ ಒದಗಿಸಬೇಕು.ಅದಕ್ಕಾಗಿ ಗಾಜಿನ ಮನೆಯೊಳಗೆ ಒಂದು ಒಲೆಯನ್ನು ಉರಿಸಿ ಬೆಚ್ಚಿನ ವಾತಾವರಣ ಕಲ್ಪಿಸುವುದು ರೂಢಿ.ಹಾಗೆ ಮಾಡಿದಾಗ ಅದಕ್ಕೆ ಕಾವು ಮನೆ ಎಂದು ಹೆಸರು.ಖಾಸಗಿ ತೊಟಗಳಿಗೆ ಮತ್ತು ವಾಸಗೃಹಗಳಿಗೆ ಸೇರಿದಂತಿರುವ ಗಾಜಿನ ಮನೆಗಳನ್ನು ಹಸಿರು ಮನೆ ಎನ್ನುತ್ತಾರೆ.ಅವು ಕಾವು ಮನೆಗಳೂ ಆಗಿದ್ದರೆ ರಕ್ಷಣಾಗೃಹಗಳು ಎನಿಸಿಕೊಳ್ಳುತ್ತವೆ ಇಂಥ ಗಾಜಿನ ಮನೆಗಳ ವಿಸ್ತೀರ್ಣ ಒಂದು ಸಣ್ಣ ಕೊತಟಡಿಯಷ್ಟು.ಆದರೆ ಭೂರಿಗಾತ್ರದಲ್ಲಿ ಟೊಮ್ಯಾಟೊ,ಸೌತೆಕಾಯಿ ಮುಂತಾದ ಕಾಯಿಪಲ್ಯಗಳನ್ನು ವಿದೇಶೀಯ ಪುಷ್ಪಗಳನ್ನು ಬೆಳೆಸಬೇಕಾದರೆ ಗಾಜಿನ ಮನೆಯ ವಿಸ್ತೀರ್ಣ ಸಹಸ್ರಾರು ಚದರಡಿಗಳಷ್ಟಿರುವುದು ವಾತಾವರಣದಲ್ಲಿ ಬೆಳಕು ಸಾಲದ ಸಸ್ಯದ ಬೆಳೆವಣಿಗೆ ಕುಂಟಿತವಾಗದಿರಲೆಂದು ಗಜಿನ ಮನೆಯಲ್ಲಿ ಕೃತಕ ಬೆಳಕಿನ ವ್ಯವಸ್ಥೆಯನ್ನು ಮಾಡಿರುತ್ತರೆ .ಗಜಿನ ಮನೆಯಲ್ಲಿ ಪೂರ್ವಪಶ್ಚಿಮವಾಗಿ ಕಟ್ಟಿದ್ದರೆ ಅದರ ಛಾವಣಿ ಒಂದೇ ಹಾಸಿನದು.ದಕ್ಷಿಣಾಭಿಮುಖವಾಗಿ ಇಳಿಜಾರಾಗಿರಿತ್ತದೆ.ದಕ್ಷಣೋತ್ತರವಾಗಿ ಕಟ್ಟಿರುವ ಗಾಜಿನ ಮನೆಗಳ ಛಾವಣಿಯಲ್ಲಿ ಅನೇಕ ಉಬ್ಬುತಗ್ಗುಗಳಿರುವುವು.ಛಾವಣಿಯ ಒಂದು ಪಾರ್ಶ್ವ ಪೂರ್ವಕ್ಕೂ ಮತ್ತೊಂದು ಪಾರ್ಶ್ವ ಪಶ್ಚಿಮಕ್ಕೂ ಇಳಿಜಾರಾಗಿರುತ್ತದೆ.ಇಂಥ ನಿರಿನ ಚಾವಣಿಗಳ ಮೂಲಕ ಸಸ್ಯಗಳಿಗೆ ಇಡೀ ಹಗಲು ಸೂರ್ಯಸ್ನಾನದ ಲಭ ದೊರೆಯೂವುದು.

ಸಾಮಾನ್ಯವಾಗಿ ಗಾಜಿನ ಮನೆಯ ಗೋಡೆಗಳು ಮೊಗಸಾಲೆಯ ಗೊಡೆಗಳಂತೆ ಮೋಟು.ಎತ್ತರ 50-60 ಸೆಂಮೀ.ಅವನ್ನು ಇಟ್ಟಿಗೆ ಅಥಾವ ಸಿಮೆಂಟ್ ಕಾಂಕ್ರೀಟಿನಿಂದ ಕಟ್ಟುವುದು ರೂಢಿ.ಗೋಡೆಯ ಮೇಲೆ ನಿಲ್ಲಿಸಲಾಗಿರುವ ಮರದ ಅಥವಾ ಉಕ್ಕಿನ ಚೌಕಟ್ಟುಗಳಲ್ಲಿ ಗಾಜಿನ ಹಲಗೆಗಳನ್ನು ಅಳವಡಿಸಿರುತ್ತಾರೆ.ಕೆಲವು ಗಾಜಿನ ಮನೆಗಳಿಗೆ ಗೋಡೆಗಳೇ ಇರುವುದಿಲ್ಲ.ಇಳಿಜಾರಾದ ಛಾವಣಿ ನೆಲಗಟ್ಟಿಗೇ ಹೊಂದಿಕೊಂಡಿರುವುದು.ಗರಿಷ್ಟ ಬೆಳಕು ಬೀಳಲು ಈ ರಚನೆ ಬಲು ಅನುಕೂಲ.ಗಾಜಿನ ಮನೆಯ ವಿನ್ಯಾಸ ಹೇಗಿದ್ದರೂ ಧಾರಾಳ ಗಾಳಿ ಸಂಚಾರಕ್ಕೂ ಬಿಸಿಲಿನ ಝಳದಿಂದ ರಕ್ಷಣೆಗೂ ಸೂಕ್ತ ವ್ಯವಸ್ಥೆ ಅಲ್ಲಿ ಇರಬೇಕು.ಗಾಳಿಸಂಚಾರಕ್ಕೆ ಬೇಕಾದ ವಾತಾಯನಗಳು ಬಾಗಿಲುಗಳ ಮೇಲಿರಬಹುದು.ಇಲ್ಲವೆ ಅವು ಮೇಲ್ಗೀಲಿನ ಕಿಟಿಕಿಗಳಾಗಿಬಹುದು.ಆಗ ಕಿಟಕಿಗಳನ್ನುಅಗತ್ಯವಿದ್ದಷ್ಟು ಮೇಲೆತ್ತಿದರೆ ಗಾಳಿ ಒಳಗೆ ಬರಬಹುದು ವಿನಾ ಮಳೆಯ ಎರಿಚಲು ಬಡಿಯಲು ಅವಕಾಶವಿರದು.ಬಿಸಿಳಿನ ಝಳ ಅತಿಯೆನಿಸಿದಾಗ ಗಾಜಿನ ಮನೆಯ ಹೊರಗೆ ಅಥವಾ ಒಳಗೆ ಚಾಪೆಗಳನ್ನೋ ಪರದೆಗಳನ್ನೋ ಇಳಿಬಿಡಬಹುದು.ಇಲ್ಲದಿದ್ದರೆ ಗಾಜಿನ ಸುಣ್ಣ ಬಳಿದರೂ ಸಾಕು.ಗಾಜಿನ ಮನೆಯೊಳಗೆ ಪರಿಚಲನೆಯಲ್ಲಿರುವ ಗಾಳಿಯ ಉಷ್ಣತೆ ಮತ್ತು ಆರ್ದ್ರತೆಗಳ ನಿಯಂತ್ರಣವೂ ಒಂದು ಪ್ರಮುಖ ಸಮಸ್ಯೆ.ಕಾವು ಮನೆಗಳಲ್ಲಾದರೆ ಬಿಸಿನೀರಿನ ಕೊಳಾಯಿಗಳಿಂದ ಉಷ್ಣತಾನಿಯಂತ್ರನ ಸಾಧ್ಯ.ಅರ್ದ್ರತೆಯ ನಿಯಂತ್ರಣಕ್ಕೆ ಗಜಿನ ಮನೆಯಲ್ಲಿರುವ ನೀರಿನ ತೊಟ್ಟಗಳನ್ನು ನಿರ್ದಿಷ್ಟ ಕಾಲ ತೆರೆದಿದುವುದು ಅಥವಾ ಮುಚ್ಚುವುದು ಪದ್ಧತಿ.ಉಷ್ನದೇಶಗಳಲ್ಲಾದರೆ ನೀರನ್ನು ಸಿಂಪಡಿಸಿ ಗಾಳಿನ ಆರ್ದ್ರತೆಯನ್ನು ನಿಯಂತ್ರಸುತ್ತಾರೆ.ಪ್ರತಿಯೊಂದು ಗಾಜಿನ ಮನೆಯೂ ಗರಿಷ್ಟ ಮತ್ತು ಕನಿಷ್ಟ.ಒದ್ದು ಮತ್ತು ಒಣಬುರುಡೆ ಉಷ್ನತಾಮಾಪಕಗಳಿಂದ ಸಜ್ಜಾಗಿರುವುದು.ಚಳಿಗಾಲ್ಲಿ ಗಾಜಿನ ಮನೆಯ ಒಳಾಂಗಣವನ್ನು ಬೆಚ್ಚಗಿಡಲು ಆಲ್ಲಲ್ಲೆ ತೈಲ ಒಲೆಗಳನ್ನು ಹೂಡಿರುತ್ತಾರೆ.

ಗಾಜಿನ ಮನೆಯ ಒಳರಚನೆ ಅದರಲ್ಲಿ ಬೆಳೆಸುವ ಸಸ್ಯಗಳ ಸ್ವಭಾವಕ್ಕೆ ಅನುಗುಣವಾಗಿರುವುದು ಸಹಜ. ಗಿಡ್ಡಗೋಡೆಗಳಾಗಿದ್ದರೆ ಅವುಗಳು ಮೇಲ್ಮಟ್ಟಕ್ಕೆ ಹೊಂದಿಕೊಂಡಂತ ಮನೆಯ ಒಳಸುತ್ತ ಏಕವಾಗಿ ಬಡುವಿರುತ್ತದೆ. ಇದರ ಮೇಲೆ ಕುಂಡಗಳು ಮತ್ತು ಬೀಜದ ಪೆಟ್ಟಗೆಗಳನ್ನು ಪೇರಿಸಬಹುದು. ಅವುಗಳ ಮೇಲೆ ಕುಂಡಗಳು ಮತ್ತು ಬೀಜದ ಪೆಟ್ಟಗೆಗೆಳನ್ನು ಪೇರಿಸಬಹುದು. ಅವುಗಳ ಮೇಲೆ ಧಾರಾಳವಾಗಿ ಬೆಳಕೂ ಬೀಳುತ್ತದೆ. ಬಡುವಿನ ಕೆಳಗೆಲ್ಲ ಮರಳು, ಫಲವತ್ತಾದ ಮಣ್ಣು ಮತ್ತು ಸಸ್ಯಶೇಷಮಿಶ್ರಿತ ಮೃತ್ತಿಕೆಗಳನ್ನು ದಾಸ್ತಾನು ಮಾಡಬಹುದು. ಛಾವಣಿ ನೆಲಗಟ್ಟನ್ನು ಸೋಕುವ ಗಾಜಿನ ಮನೆಗಳಲ್ಲಿ ಇಂಥ ಬದುಗಳಿಗೆ ಅವಕಾಶವಿಲ್ಲ.

ಭುತೇಕ ಹಸಿರುಮನೆ ಮತ್ತು ಕಿತ್ತಳೆಗಿಡಗಳಿಗೆ ಉಷ್ಣತೆ ಚಳಿಗಾಲದಲ್ಲಿ ೪೫-೪೫ ಫ್ಯಾ., ಮಾರ್ಚಿನಿಂದ ಸೆಪ್ಟೆಂಬರವರೆಗೆ ೫೫-೬೫ ಫ್ಯಾ. ಮಿತಿಯಲ್ಲಿರಬೇಕು. ದ್ರಕ್ಷಿ ಬೆಳೆಗಂತೂ ಉಷ್ಣತನಿಯಂತ್ರಣ ಅತ್ಯಗತ್ಯ. ನವೆಂಬರಿನಿಂದ ಫೆಬ್ರುವರಿವರೆಗೆ ೬೦ ಫ್ಯಾ; ಮೊಗ್ಗುಗಳ ಬಿರಿಯುವಾಗ ೬೫ ಫ್ಯಾ.; ಹೂವಿರುವ ತನಕ ೭೫ ಫ್ಯಾ.; ಬೀಜರೂಪಣೆಯ ಕಾಲದಲ್ಲಿ ೬೮ ಫ್ಯಾ.;ಮತ್ತು ಹಣ್ಣು ಮಾಗುವಾಗ ೭೦ ಫ್ಯಾ. ಬಾಳೆಹಾಣ್ಣಿಗೆ ಚಳಿಗಾಲದಲ್ಲಿ ೬೦-೭೦ ಫ್ಯಾ.ಮತ್ತು ಬೇಸಿಗೆಯಲ್ಲಿ ೭೦-೮೫ ಫ್ಯಾ. ಅನಾನಾಸ್ ಹಣ್ಣಿಗೆ ಚಳಿಗಾಲದಲ್ಲಿ ೬೫-೭೫ ಫ್ಯಾ.ಮತ್ತು ಬೇಸಿಗೆಯಲ್ಲಿ ೭೦-೯೦ ಫ್ಯಾ.ಇವುಗಳ ಸಮೃದ್ಧ ಬೆಳೆಗೆ ಇಷ್ಟು ಸೂಕ್ಷ್ಮವಾದ ಉಷ್ಣತಾನಿಯಂತ್ರಣ ಅವಶ್ಯಕ. ಇದು ಗಾಜಿನ ಮನೆಯಲ್ಲಿ ಸಾಧ್ಯವೇ ವಿನಾ ಬಯಲಿನಲ್ಲಲ್ಲ.

ಇಂಗ್ಲೆಂಡ್ ಮತ್ತು ವೇಲ್ಸ್ ದೇಶಗಳೂ ಸೇರಿದಂತೆ ಅಲ್ಲಿ ಗಾಜಿನ ಮನೆಗಳು ಒಳಗೊಂಡಿರುವ ಪ್ರದೇಶದ ವಿಸ್ತೀರ್ಣ ಸುಮಾರು ೪೦೦೦ ಎಕರೆಗಳು. ಜುಲೈ ತಿಂಗಳಿನಲ್ಲಿ ಈ ಪ್ರದೇಶದ ಅರ್ಧದಷ್ಟು ಭಾಗದಲ್ಲಿ ಟೊಮ್ಯಾಟೊ, ೧/೫ ಭಾಗದಲ್ಲಿ ಪುಷ್ಪಗಳು ಮತ್ತು ೧/೮ ಭಾಗದಲ್ಲಿ ಸೌತೆಯನ್ನು ಬೆಳೆಸಲಾಗುವುದು ಒಂದು ಹಾಜಿನ ಮನೆಯಿರುವುದನ್ನು ನೆನೆಯಬಹುದು. ಹಾಗೆಯೇ ಹುಬ್ಬಳ್ಳಿಯಲ್ಲಿ ಒಂದು ಗಾಜಿನ ಮನೆಯಿದೆ. ಬೆಂಗಳೂರಿನಲ್ಲಿ ರಾಜ್ಯಪಾಲರು ವಾಸಿಸುವ ರಾಜಭವನ ಉದ್ಯಾನದಲ್ಲಿ ಒಮ್ದು ಗಾಜಿನ ಮನೆ ನಿರ್ಮಾನವಾಗಿದೆ.

ಗಾಜಿನ ಮನೆ : ಆಕ್ಟಿನೋಪ್ಪೆರ್ಜಿಯೈ ವರ್ಗದ ಪರ್ಸಿಫಾರ್ಮೀಸ್ ಗಣದ ಅಂಬಾಸಿಡೀ ಕುಟುಂಬಕ್ಕೆ ಸೇರಿದ ಒಂದು ಸಿಹಿನೀರು ಮೀನು. ಆಂಬಾಸಿಸ್ ಇದರ ವೈಜಾನಿಕ ನಾಮ ಅಲ್ಲದೆ ಇದಕ್ಕೆ ಸಿಪಾರಿ ಮೀನು ಎಂಬ ಹೆಸರು ಇದೆ. ಸುಮಾರು ೭.೫ ಸೆಂ.ಮೀ ಬೆಳೆಯುವ ಸಣ್ಣ ಮೀನು. ಬಲು ಪಾರದರ್ಶಕವಾಗಿ ಗಾಜಿನಂತೆಯೇ ಕಾಣುವುದರಿಂದ ಈ ಹೆಸರು. ಭಾರತ, ಬರ್ಮಾ, ಇಂಡೋನೇಶಿಯ, ಜಾವಾ, ಮಲಯ, ತೈಲಾಂಡ್ ದೇಶಗಳ ನದಿ ಕೆರೆ ಕುಂಟೆಗಳಲ್ಲಿ ಸಾಮಾನ್ಯವಾಗಿ ಕಾಣಿಸಿಗುವ ಮೀನು. ಪಾರದರ್ಶಕ, ದೇಹದ ಬಣ್ಣದ ಗೆರೆ. ದೊಡ್ಡ ತಲೆ, ಬಾಲದ ರೆಕ್ಕೆ ಸಮ ಭಾಗದ ಹಾಲೆಗಳಾಗಿ ಆಳವಾಗಿ ಕವಲೊಡಿದಿದೆ. ಮುಳ್ಳಿನ ಬೆನ್ನು ರೆಕ್ಕೆ ಮೇಲೆ ಕಪ್ಪು ಗುರುತು. ಭುಜದ ಮೇಲೆ ಚುಕ್ಕೆಗಳು ಧೀರ್ಘ ಚತರಸ್ರಾಕಾರದ ಮಚ್ಚೆಯಾಗಿ ಒಟ್ಟಿಗೂಡಿವೆ. ತಲೆಯ ಮೇಲ್ಭಾಗ ಹಾಗೂ ಬೆನ್ನು ಭಾಗದ ಮೊದಲನೆಯ ಈಜುರೆಕ್ಕೆಯ ಅರ್ಧಭಾಗ ಕಪ್ಪು ಬಣ್ಣದವು.