ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-4.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಜು ಪಾರ್ಶ್ವದ ಈಜುರೆಕ್ಕೆಗಳು ಕಿತ್ತಳೆ ಬಣ್ಣದವು. ಮೇಲಿನ ದವಡೆಗಿಂತ ಉದ್ದವಾಗಿರುವ ಕೆಳದವಡೆ, ಕೆಳದವಡೆಯ ಸಂಯೋಜನಾ ಸ್ಥಾನದ (ಸಿಂಪೈಸಿಸ್) ಎರಡು ಕಡೆಗಳಲ್ಲೂ ಮುಂದಕ್ಕೆ ಚಾಚಿರುವ ಡೊಂಕಾದ ಕೋರೆಹಲ್ಲುಗಳು, ಎರಡು ದವಡೆಗಳಲ್ಲೂ ಹಲ್ಲಿನ ಎರಡು ಪಂಕ್ತಿಗಳು, - ಇವು ಗಾಜಿನ ಮೀನನ್ನು ಗುರುತಿಸಲು ಇರುವ ಮುಖ್ಯ ಲಕ್ಷಣಗಳು. ಗಾಜು: ಕೆಲವು ದ್ರವ್ಯಪದಾರ್ಥಗಳು ಅತಿಯಾಗಿ ತಣಿಸಲ್ಪಟ್ಟು ದ್ರವರೂಪವನ್ನು ಕಳೆದುಕೊಂಡರೂ ದ್ರವದ ಲಕ್ಷಣಗಳನ್ನು ಉಳಿಸಿಕೊಂಡಾಗ ದೊರೆಯುವ ಘನವಸ್ತು (ಗ್ಲಾಸ್).ಸಾಮಾನ್ಯ ಉಷ್ಣತಾಮಟ್ಟದಲ್ಲಿ ಇದು ಗಟ್ಟಿಯಾಗಿರುತ್ತದೆ. ಎತ್ತರದಿಂದ ಬಿದ್ದರೆ ಚೂರುಚೂರಾಗುತ್ತದೆ. ಕೆಲವು ನೂರು ಡಿಗ್ರಿ ಉಷ್ಣತೆಗೆ ಬಿಸಿ ಮಾಡಿದಾಗಲೂ ಗಾಜಿನ ಘನರೂಪ ಬದಲಾಗುವುದಿಲ್ಲ. ಆದರೆ ಇದನ್ನು ಮತ್ತಷ್ಟು ಬಿಸಿ ಮಾಡಿದರೆ ನಿಧಾನವಾಗಿ ಮೆತ್ತಾಗಿ ಮಂದವಾದ ದ್ರವರೂಪವನ್ನು ಪಡೆಯುತ್ತದೆ. ಮಿಕ್ಕ ಘನಪದಾರ್ಥಗಳಂತೆ ನಿರ್ದಿಷ್ಟವಾದ ಉಷ್ಣತಮಟ್ಟದಲ್ಲಿ ಇದು ಒಮ್ಮೆಲೇ ದ್ರವವಾಗುವುದಿಲ್ಲ. ಅಧಿಕ ಉಷ್ಣತಮಟ್ಟದಲ್ಲಿ ಗಾಜು ಮಿಕ್ಕ ದ್ರವಗಳಂತೆ ವರ್ತಿಸುತ್ತದೆ. ಮಿಕ್ಕ ದ್ರವಗಳಂತೆ, ಹರಿಯುವ, ತಾನಿರುವ ಪಾತ್ರೆಯ ಆಕಾರವನ್ನು ಪಡೆಯುವ, ಪಾತ್ರೆಗೆ ಯಾವ ಆಕಾರವಿದ್ದರು ತನ್ನ ಮಟ್ಟವನ್ನು ಉಳಿಸಿಕೊಳ್ಳುವ ಗುಣಗಳು ದ್ರವಗಾಜಿಗೂ ಇವೆ. ದ್ರವಗಾಜನ್ನು ಘನೀಭವನ ಉಷ್ಣತೆಗೆ ತಣಿಸಿದರೂ ಘನೀಭವಿಸುವುದಿಲ್ಲ. ಗಾಜಿನ ಹರಳುಗಳೂ ಕಾಣಿಸುವುದಿಲ್ಲ. ಅದು ದ್ರವರೂಪದಲ್ಲೇ ತಣಿಸಿ ಅದು ಘನರೂಪವನ್ನು ಹೊಂದುವಂತೆ ಮಾಡಬಹುದು. ಈ ಸ್ಥಿತಿಯಲ್ಲಿ ಅದು ದ್ರವರೂಪದಿಂದಿದ್ದರೂ ಅದರ ಹರಿಯುವ ಗುಣ ಅತಿ ಕಡಿಮೆಯಾಗಿ ಅದು ಗಣ ಪದಾರ್ಥದಂತೆ ಕಾಣುತ್ತದೆ. ತಯಾರಿಕೆ: ಶುದ್ಧವಾದ ಮತ್ತು ಕಬ್ಬಿಣದ ಸಂಯುಕ್ತರಹಿತ ಮರಳು (ಗ್ಲಾಸ್ ಸ್ಯಾಂಡ್) ಸೋಡಖಾರ (ಸೋಡಿಯ ಕಾರ್ಬೊನೇಟ್) ಮತ್ತು ಸುಣ್ಣಾದ ಕಲ್ಲು (ಲೈಮ್ ಸ್ಟೋನ್) ಇವು ಅವ್ಶ್ಯಕ ಘಟಕಾಂಶಗಳು. ಇನ್ನು ಗಾಜಿನ ಬಗೆಯನ್ನು ಅನುಸರಿಸಿ ಕೆಲವೊಮ್ಮೆ ಪೊಟ್ಯಾಸಿಯಮ್ ಕಾರ್ಬೊನೇಟ್, ಲೆಡ್ ಮಾನಾಕ್ಸೈಡ್, ಬೋರಾನ್ ಟ್ರೈ ಆಕ್ಸೈಡ್ ಮುಂತಾದವನ್ನು ಸೇರಿಸುವರು. ಇಷ್ಟಲ್ಲದೇ ಕೆಳಗೆ ಕೊಟ್ಟಿರುವ ಒಂದು ಅಥವಾ ಹೆಚ್ಚು ವರ್ಗಗಳ ವಸ್ತುಗಳನ್ನು ಸಹ ಸೇರಿಸುತ್ತಾರೆ. (೧) ಕಲೆಟ್ ಎಂಬ ಅನುಪಯುಕ್ತವಾದ ಗಾಜು ಮತ್ತು ಚೂರಾದ ಗಾಜು; (೨) ಉತ್ಕರ್ಷಣಕಾರಕಗಳು (ಆಕ್ಸಿಡೈಸಿಂಗ್ ಏಜೆಂಟ್ಸ್); (೩) ಬಣ್ಣಗಳನ್ನು ಹೋಗಲಾಡಿಸುವ ವಸ್ತುಗಳು; (೪) ನಿರ್ದಿಷ್ಟ ಬಣ್ಣಗಳನ್ನು ಬರಿಸುವ ವಸ್ತುಗಳು. ಗಾಜಿನ ವಸ್ತುಗಳ ತಯಾರಿಕೆಯಲ್ಲಿ ಹಾಳಾಗಿ ಉಳಿಯುವ ಗಾಜು ಮತ್ತು ಗಾಜಿನ ಚೂರುಗಳು (ಕಲೆಟ್ಸ್) ಗಾಜಿನ ತಯಾರಿಕೆಯಲ್ಲಿ ವಿವಿಧ ರೀತಿಯಲ್ಲಿ ಸಹಾಯಕವಾಗಿವೆ. ಅವನ್ನು ಪುನಃ ಉಪಯೋಗಿಸುವುದರಿಂದ ಹಾಳಾಗಿ ಹೋಗುವ ಪಾಲು ಉಳಿತಾಯವಾಗುತ್ತದೆ. ಅಲ್ಲದೆ ಗಾಜು ದ್ರವಗೊಳ್ಳುವುದಕ್ಕೆ ಕಲೆಟ್ ತುಂಬ ಸಹಾಯಕವಾಗುವುದು. ಉತ್ಕರ್ಷಣಕಾರಕಗಳನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಉಪಯೋಗಿಸುತ್ತಾರೆ. ಉದಾಹರಣೆಗಾಗಿ ಗಾಜಿನ ತಯಾರಿಕೆಯಲ್ಲಿ ಲೆಡ್ ಆಕ್ಸೈಡನ್ನು ಬಳಸಬೇಕಾದ ಕುಲುಮೆಯ ಅನಿಲಗಳಿಂದಾಗಿ ಅದು ಲೋಹರೂಪಕ್ಕೆ ಮಾರ್ಪಾಡು ಗೊಳ್ಳದಂತೆ ಈ ಕಾರಕಗಳನ್ನು ಉಪಯೋಗಿಸಬೇಕಾಗುವುದು. ಅನೇಕ ವೇಳೆ ಗಾಜಿನ ತಯಾರಿಕೆಯಲ್ಲಿ ಉಪಯೋಗಿಸುವ ವಸ್ತುಗಳಲ್ಲಿ ಅನಗತ್ಯವಾದ ಇತರ ವಸ್ತುಗಳು ಬೆರೆತಿರುವುದರಿಂದ ಪೂರೈಸಿದ ಗಾಜಿಗೆ ವಿವಿಧ ಬಣ್ಣಗಳು ಬರುತ್ತದೆ. ಹಾಗೆ ಬಣ್ಣ ಬರದಂತೆ ಈ ಅನಗತ್ಯ ವಸ್ತುಗಳನ್ನು ನಿಷ್ಕ್ರಿಯಗೊಳಿಸಲು ಉತ್ಕರ್ಷಣಕಾರಕ ವಸ್ತುಗಳನ್ನು ಸೇರಿಸುವರು. ಹೀಗೆ ಅಗತ್ಯವಾದ ಎಲ್ಲ ವಸ್ತುಗಳನ್ನು ಸರಿಯಾದ ಒರಮಾಣದಲ್ಲಿ ಬೆರಸಿ, ಮಿಶ್ರಣವನ್ನು ದ್ರವರೂಪ ಬರುವವರೆಗೆ ಕುಲುಮೆಗಳಲ್ಲಿ ಕಾಯಿಸುತ್ತಾರೆ. ಇದಕ್ಕೆ ವಿವಿಧ ರೀತಿಯ ಕುಲುಮೆಗಳನ್ನು ಸಂದರ್ಭಾನುಸಾರ ಉಪಯೋಗಿಸುತ್ತಾರೆ. ವಿಶಿಷ್ಟ ಜಾತಿಯ ಗಾಜನ್ನು ತಯಾರಿಸಲು ಮಡಿಕೆ ಆಕಾರದ ಕುಲುಮೆಯನ್ನು ಸಾಮಾನ್ಯ ಗಾಜನ್ನು ಭಾರಿ ಗಾತ್ರದಲ್ಲಿ ತಯಾರಿಸಲು ಟ್ಯಾಂಕ್ ಆಕಾರ ಕುಲುಮೆಗಳನ್ನೂ (ಟ್ಯಾಂಕ್ ಫರ್ನೇಸಸ್) ಉಪಯೋಗಿಸುವರು. ಮಿಶ್ರಣ ಸರಿಯಾಗಿ ದ್ರವವಾದ ಬಳಿಕ ರಾಸಾಯನಿಕ ಕ್ರಿಯೆಗಳಿಂದ ಉಂಟಾದ ಅನಿಲಗಳು ಹೊರಹೊಮ್ಮುವುದಕ್ಕೆ ಸಾಕಷ್ಟು ಕಾಲವನ್ನು ಬಿಡುತ್ತಾರೆ. ಅನಂತರ ಗಾಜಿನ ದ್ರವವನ್ನು ಹೊರತೆಗೆದು ನುರಿತ ಕಾರ್ಮಿಕರು ಅದನ್ನು ಕೊಳವೆಗಳ ಮೂಲಕ ಊದಿ, ಅಚ್ಚುಗಳಿಂದೊತ್ತಿ ಅಥವಾ ಯಂತ್ರಗಳ ಸಹಾಯದಿಂದ ಅದಕ್ಕೆ ಭಿನ್ನ ರೂಪಗಳನ್ನು ಕೊಟ್ಟು ಜನರ ಉಪಯೋಗಕ್ಕೆ ಒದಗುವ ಹಾಗೆ ಮಾಡುತ್ತಾರೆ. ದ್ರವರೂಪದಲ್ಲಿದ್ದಗ ಗಾಜಿಗೆ ಯಾವ ಆಕೃತಿಯನ್ನು ಕೊಡಲಾಗುವುದೋ ಅದೇ ಆಕೃತಿಯನ್ನು ಅದು ಘನವಸ್ತುವಾದಾಗಲೂ ಇಟ್ಟುಕೊಳ್ಳುವುದು ಗಾಜಿನ ಒಂದು ವಿಶಿಷ್ಟ ಗುಣ. ಗಾಜಿಗೆ ಬೇರೆ ಬೇರೆ ಆಕೃತಿ ಕೊಟ್ಟು ತಣಿಸಿದಾಗ ಅದರಲ್ಲಿ ಒಂದು ಬಗೆಯ ಎಳೆತ ಸೆಳೆತಗಳು ಉಂಟಾಗಿ ಅದು ನಿರ್ಬಲಗೊಳ್ಳುವುದು. ಅದರ ಬಲವನ್ನು ಬಾಳುವಿಕೆಯನ್ನೂ ಹೆಚ್ಚಿಸುವ ಸಲುವಾಗಿ ಎಳೆತೆ ಸೆಳೆತಗಳನ್ನು ಹೋಗಲಾಡಿಸುವುದು ಅಗತ್ಯ. ಅದಕ್ಕಾಗಿ ಗಾಜಿನ ವಸ್ತುಗಳನ್ನು ಪುನಃ ಒಂದು ನಿರ್ದಿಷ್ಟವಾದ ಉಷ್ಣತೆಗೆ ಬಿಸಿಮಾಡಿ ಮತ್ತೆ ನಿಧಾನವಾಗಿ ಅದನ್ನು ತಣಿಸುವ ಕ್ರಮವಿದೆ. ಅನ್ನೀಲನ ಕ್ರಿಯೆ ಎಂದು ಇದರ ಹೆಸರು. ಇದಕ್ಕೆ ಒಳಪಟ್ಟು ಗಾಜಿನ ಬಾಳಿಕೆ ದೀರ್ಘವಾಗುವುದು. ಗಾಜಿನಲ್ಲಿ ವಿವಿಧ ಬಗೆಗಳಿವೆ. ಕುಪ್ಪಿಗಳು, ಪಾತ್ರೆಗಳು, ತಟ್ಟೆಗಳು, ಹಾಳೆಗಳು ಮುಂತಾದವನ್ನು ಸಾಮಾನ್ಯ ಗಾಜಿನಿಂದ ತಯಾರಿಸುವರು. ಈ ಜಾತಿ ಗಾಜಿನಲ್ಲಿ ಶುದ್ಧ ಮರಳು, ಸೋಡಖಾರ ಮತ್ತು ಸುಣ್ಣದ ಕಲ್ಲು ಸೇರಿವೆ. ಇಂಥ ಗಾಜು ಹೆಚ್ಚಿನ ಉಷ್ಣ್ತೆಯನ್ನು ತಡೆದುಕೊಳ್ಳಲಾರದು. ಅತ್ಯುಷ್ಣತೆಯಲ್ಲಿರುವ ಪದಾರ್ಥಗಳನ್ನು ಈ ಪಾತ್ರೆಗಳಿಗೆ ಫಕ್ಕನೆ ಸುರಿದರೆ ಇವು ಒಡೆದುಹೋಗುತ್ತದೆ. ಅದೇ ರೀತಿ ಪಾತ್ರೆಗಳು