ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-4.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ಗಾಂಧಾರಿ

ರೂಪಿಸಿ ಇವನ್ನು ಬಣ್ಣದಿಂದ ಅಲಂಕರಿಸುತ್ತಿದ್ದರು.ಇದು ಗಾಂಧಾರಿ ಶೈಲಿಯ ಸಂಘಾರಾಮಗಳ ವೈಶಿಷ್ಟ್ಯ.ಬೌದ್ಧವಾಸ್ತುವಲ್ಲದೆ ಇತರ ರೀತಿಯ ಕಟ್ಟಡಗಳೂ ಈ ಪ್ರದೇಶದಲ್ಲಿವೆ.ತಕ್ಷಶಿಲೆಯ ಬಳಿಯ ಜಂಡಿಯಾಲ್-ನಲ್ಲಿರುವ ದೀವಾಲಯ ಅವುಗಳ ಪೈಕಿ ಮುಖ್ಯವಾದ್ದು.ಪ್ರ.ಶ.ಪೂ.೨ನೆಯ ಶತಮಾನದ್ದಿರಬಹುದಾದ ಈ ಕಟ್ಟದ,ಗ್ರೀಕ್ ವಾಸ್ತುರೀತಿಯಲ್ಲಿದೆ.ಇದರ ವಿಸ್ತಾರ ೪೭.೪೦x೨೪ ಚ.ಮೀ. ಮಾತ್ರ ಆದರೂ ಗ್ರೀಕರ ದೀವಸ್ಥಾನಗಳಲ್ಲಿರುವಂತೆ ಒಂದು ಗರ್ಭಗೃಹ, ಮುಂಭಾಗದಲ್ಲಿ ಎರಡು ಕಂಬಗಳಿರುವ ಒಂದು ಮುಮ್ಮಂಟಪ,ಹಿಂಭಾಗದಲ್ಲೋಂದು ಸಣ್ಣ ಆವರಣ ಮತ್ತು ಸುತ್ತಲೂ ಕಂದಗಳು ಐಯೋನಿಯನ್ ರೀತಿಯವು.ಕಟ್ಟಡ ಗ್ರೀಕ್ ಮಾದರಿಯಲ್ಲಿದ್ದರು ಇದು ಇರಾನಿನ ಜ಼ೋರೋಆಸ್ಟ್ರಿಯನ್ ಪಂಥದ ಅಗ್ನಿ ದೀವಾಲಯವಿರಬೇಕೆಂದು ವಿದ್ವಾಂಸರ ಊಹೆ.

     ಗಾಂಧಾರ ಕಲಾ ಸಂಪ್ರದಾಯದ ಪರಮೋಚ್ಛಸಾಧನೆಯೆಂದರೆ ಶಿಲ್ಪಗಳು.ಈ ಶೈಲಿಯ     ಶಿಲಾಶಿಲ್ಪಗಳು ತಕ್ಷಶಿಲ,ಹಡ್ಡ,ಚಾಸ್ರದ ಮುಂತಾದೆಡೆಗಳಲ್ಲಿ ಬಹುಸಂಖ್ಯೆತಲ್ಲಿ ದೋರಲಿವೆ. ಆ ಪ್ರದೇಶದ ಸಾಂಸ್ಕೃತಿಕ ಸಂಕರವೇ ಆ ಶೈಲಿಯ ರೂಪಣೆಯಲ್ಲಿ ಮೂಖ್ಯ ಪಾತ್ರ ವಹಿಸಿದೆ. ಇದುವರೆಗೆ ದೋರಕಿರುವ ಶಿಲ್ಪಗಳೇ ಬಹುಮಟ್ಟಿಗೆ ಬೌದ್ಧ ಶೀಲ್ಪಗಳು.ಇವುಗಳಲ್ಲಿ ಹಲವು ಬೌದ್ಧ ಮತ್ತು ಬೋಧಿಸತ್ತ್ವ ವಿಗ್ರಹಗಳಿವೆ. ಈ ಶಿಲ್ಪಗಳ ವಸ್ತು ಬೌದ್ಧಧರ್ಮವಾದರೂ ಇವುಗಳ ರೂಪಣೆಯ ರೀತಿ ಗ್ರೇಕ್ ರೋಮನ್. ಇದರಲ್ಲಿ ಲೆಲವು ಇರಾನೀಯ ಅಂಶಗಳು ಬೆರೆತುಕೋಡಿವೆ.
      ಗಾಂಧಾರದ ಕಲಾ ಶಿಲ್ಪಗಳೆಲ್ಲ ಸಾಮಾನ್ಯವಾಗಿ ಒಂದು ರೀತಿಯ ಕಂದು ಬಣ್ಣದ ಪದರಶಿಲೆಯಲ್ಲಿ ಮಾಡಿದವಾಗಿವೆ.ಬುದ್ಧನನ್ನು ಭಾರತೀಯ ಬೌದ್ಧ ಸಂಪ್ರದಾಯದ ನ್ಂಬಿಕೆಗಳಂತೆ ಕಾವಿ ಧರಿಸಿದ ಯತಿಯೊಬ್ಬ ಅಭಯ ನೀಡುತ್ತಿರುವತೆಯೋ ಧ್ಯಾನಾಸಕ್ತನಾಗಿರುವಂತೆಯೋ ನಿರೂಪಿಸಿದ್ದರು ಬುದ್ಧನ ಮೂಖಭಾವ, ದೈಹಿಲಕ ಪ್ರಮಾಣಗಳು ಮುಂತಾವುಗಳಲ್ಲಿ ಇವು ಗ್ರೀಕ್, ದೇವತೆಗಳ ಶಿಲ್ಪಗಳನ್ನು ಹೋಲುತ್ತವೆ. ಇಲ್ಲಿ ಭಾರತೀಯ ಆದರ್ಶ ವಾದ ಅಂತಃಶಕ್ತಿಯ ನಿರೂಪಣೆಗಿಂತಲೂ ಬಾಹ್ಯ. ಸೌಂದರ್ಯಕ್ಕೇ ಹೆಚ್ಚು ಗಮನ ಕೊಡಲಾಗಿದೆ. ಕೆಲವು ಬುದ್ಧ ವಿಗ್ರಹಗಳಲ್ಲಿ ಮೀಸೆಯನ್ನು ತೋರಿಸಿರುವುದು ಉಂಟು. ತಲೆಕೂದಲು ಗುಂಗುರು ಗುಂಗುರಾಗಿ ಮೇಲೇರಿರುತ್ತದೆ ಧರಿಸಿರುವ ಉಡುಪು ಗ್ರೀಕರ ಟೋಗ ಮಾದರಿಯದು. ಅಲ್ಲದೆ ಭಾರತೀಯ ಸಂಪ್ರದಾಯಗಳಲ್ಲಿರುವಂತೆ ತೆಳುವಾಗಿರದೆ ಅಂಗಗಳು ಪೂರ್ತ ಮುಚ್ಚಿವಂತೆ ದಪ್ಪ ಬಟ್ಟೆಯಲ್ಲಿ ಮಾಡಿದಂತಿದ್ದು ಹಲವು ನೆರಿಗೆಗಾಳನ್ನು ರೂಪಿಸಲಾಗಿರುತ್ತದೆ. ಬುದ್ಧನ ಜನ್ಮ, ನಿಷ್ಕ್ರಮಣ, ಶ್ರಾವಸ್ತಿಯ ಪವಾಡ, ಚೇತವನದ ಆತಿಥ್ಯ, ಸಾರನಾಥದಲ್ಲಿ ಧರ್ಮಪ್ರಸಾರ ಮುಂತಾದವು ಕುರು, ಶಿಬಿ, ಮಹಾಕಪಿ ಮುಂತಾದ ಭಾರತೀಯ ಬೌದ್ಧ ಕಥೆಗಳೂ ಉಬ್ಬು ಶಿಲ್ಪಗಳಲ್ಲಿ ಕಂಡುಬಂದರೂ ಈ ನಿರೂಪಣೆಯಲ್ಲಿ ಬರುವ ಪಾತ್ರಧಾರಿಳೆಲ್ಲ ಗ್ರೀಕರಂತಿವೆ. ಇವುಗಳಲ್ಲಿಯೂ ದೇಹಸೌಂದರ್ಯ, ಮಾಟ, ನಿಲುವು ಎಲ್ಲವೂ ಗ್ರೀಕ್ ಸಂಪ್ರದಾಯದ್ದು. ಅಲ್ಲದೆ ದಪ್ಪ ಹಾರವನ್ನು ಹೊತ್ತಿರುವ ಬೆತ್ತಲೆ ಕುಬ್ಜರ ಚಿತ್ರಗಳೂ ಡೋರಿಕ್, ಐಯೋನಿಯನ್ ಮತ್ತು ಕೊರೆಂಥಿಯನ್ ಮಾದರಿಯ ಆರೆಗಂಬಳೂ ಇರುತ್ತವೆ. ಕೆಲವೊಂಮ್ಮೆ ಇಂದ್ರ, ಬ್ರಹ್ಮ ಮುಂತಾದ ಉಪದೇವತೆಗಳ ಅಥವಾ ಮಾಯಾದೇವಿ ಯಶೋಸಧರ ಮುಂತಾದ ವ್ಯಕ್ತಿಗಳ ನಿರೂಪಣೆ ಗ್ರೀಕ್ ದೆವತೆಗಳ ಪ್ರತಿಕೃತಿಗಳಂತೆ ಕಾಣುತ್ತವೆ. ಹಲವೊಮ್ಮೆ ಸುಂದರ ಸ್ತ್ರೀಯರು, ಮಧ್ಯಪಾನಾಸಕ್ತರು ಮುಂತಾದವರ ನಿರೂಪಣೆಗಳು ಪೂರ್ಣ ಗ್ರೀಕ್ ಮಾದರಿಯಲ್ಲಿ ಬರುವುದೂ ಉಂಟು. ಈ ಶಿಲ್ಪಗಳಲ್ಲಿ ಅಲ್ಲಲ್ಲಿ ಕಂಡುಬರುವ ನಾನೀ ದೇವತೆ, ರೆಕ್ಕಿಯುಳ್ಳ ಸಿಂಹಗಳು, ನಿತಂಬಕ್ಕೆ ನಿತಂಬವನ್ನು ಅನಿಸಿ ಕುಳಿತ ಸಿಂಹಗಳು ಅಥವಾ ಗೂಳಿಗಳು ಇರುವ ಬೋದಿಗೆಗಳನ್ನೋಳಗೋಂಡು ಕಂಬಗಳು, ನರಶಿರಗಳುಳ್ಳ ಅನೇಕ ವಿಚಿತ್ರ ಪ್ರಾಣಿಗಳು ಇರಾನೀಯ ಶಿಲ್ಪಗಳೂ ದೊರಕಿವೆ. ಇವು ಪ್ರಾಯಶಃ ಶಿಲಾಶಿಲ್ಪಗಳ ಅನಂತರದ ಕಾಲದವೆಂದು ಕೆಲವು ವಿದ್ವಾಂಸರ ಊಹೆ.
        ಈ ಭಾರತೀಯ ಗ್ರೀಕ್ ರೋಮನ್ ಇರಾನಿ ಸಂಕರ ಶಿಲ್ಪಶೈಲಿ ಸು.೨ನೇಯ ಶತಮಾನದಿಂದ ೬ನೇ ಶತಮಾನದವರೆಗೆ ಪ್ರಚಲಿತವಾಗಿತ್ತೆಂಬುದು ಅನೇಕ ಮಂದಿ ವಿದ್ವಾಂಸರ ಮತ. ಆದರೆ ಈ ಗಾಂಧಾರ ಶೈಲಿದ ಕಾಲ ನಿಷ್ಕರ್ಷೆ ಅಷ್ಟೇನೂ ನಿಖರವಾಗಿಲ್ಲ. ಕೆಲವು ವಿದ್ವಾಂಸರ ಪ್ರಕಾರ ಇದು ಪ್ರ.ಶ.ಪೂ.೨ನೇಯ ಶತಮಾನದಲ್ಲೆ ಹುಟ್ಟಿ ೭ನೇ ಶತಮಾನದ ವರೆಗೂ ಮುಂದುವರಿದಿತ್ತು. ಇನ್ನು ಕೆಲವು ವಿದ್ವಾಂಸತರ ಪ್ರಕಾರ ಇದರ ಕಾಲ ೧ನೇ ಶತಮಾನದಿಂದ ೩ನೇ ಶತಮಾನದವರೆಗೆ ಮಾತ್ರ. ಈ ಶೈಲಿಯ ಸಹಸ್ರಾರು ಶಿಲ್ಪಗಳು ದೊರಕಿದ್ದರು ಕೇವಲ ನಾಲ್ಕು ಶಿಲ್ಪಗಳ ಮೇಲೆ ಮಾತ್ರ ತೇದಿಯಿರುವ ಶಾಸನಗಳಿವೆ. ಆದರೆ ಈ ತೇದಿಗಳ ಬಗ್ಗೆಯೇ

ಭಿನ್ನಾಭಿಪ್ರಾಯಗಳಿರುವುದು ಸಮಸ್ಯೆಗೆ ಕಾರಣವಾಗಿದೆ. ಗಾಂಧಾರ ಶೈಲೆ ಒಂದು ಪ್ರದೇಶದ ಹೆಸರನ್ನು ಹೋತ್ತಿದ್ದರೂ ಅದು ಆ ಪ್ರದೇಶಕ್ಕಷ್ಟೇ ಸೀಮಿತವಾಗಿರಲಿಲ್ಲ. ಅದರ ಮುಖ್ಯ ಕೇಂದ್ರ ಮಾತ್ರ ಗಾಂಧಾರಗದಲ್ಲಿತ್ತು. ಈ ಶೈಲಿಯ ಶಾಖೆಗಳು ಗಾಂಧಾರದ ಉತ್ತರದ ಬಾಕ್ರಿಯದಲ್ಲೂ ಅಲ್ಲಿಂದಲೂ ಮುಂದೆ ಮಧ್ಯ ಏಷ್ಯದಲ್ಲೂ ಭಾರತದಲ್ಲೂ ಕಾಶ್ಮೀರದಲ್ಲೂ ಕಂಡುಬಂದಿದೆ. ಅಲ್ಲದೆ ಇದರ ಪ್ರಭಾವವನ್ನು ಭಾರತದ ಮಥುರಾ ಮತ್ತು ಅಮರಾವತಿ ಕಲಾಶೈಲಿಗಳಲ್ಲೂ ಟಿಬೆಟ್ ಚೀನಗಳ ಬೌದ್ಧ ಕಲೆಯಲ್ಲೂ ಕಾಣಬಹುಬಾಗಿದೆ.

        ಗಾಂಧಾರ ಶೈಲಿಗೆ ಸೇರಿದ ಅನೇಕ ಲೋಹ ಮತ್ತು ದಂತಕೃಲಿಗಳು ಬೆಗ್ರಾದ್ ಮುಂತಾದೆಡೆಗಳಲ್ಲಿ ದೋರೆತಿವೆ.
      ಗಾಂಧಾರಿ:ಮಹಾಭರತ ಮಹಾಕವ್ಯದ ಪ್ರಮುಖರಲ್ಲೋಬ್ಬಳು. ಧ್ರುತರಾಷ್ತ್ರನ ಪತ್ನಿ. ದುರ್ಯೋಧನಾದಿಗಳ ತಾಯಿ. ಮಗಳು ದುಶ್ಯಲೆ. ನೂರು ಜನ ಶೂರರ ತಾಯಿಯಾದರು ಅವರ ದುಷ್ಟತನದಿಂದ ದುಃಖಶತಜನನಿ ಎಂಬ ಹೆಸರಿಗೆ ಪಕ್ಕಾದವಳು. ವ್ಯಾಸರ ದಿವ್ಯ ಕೂರ್ಚಿಕೆ ಇವಗಳನ್ನು ಉಜ್ವಲ ವರ್ಣನೆಗಳಲ್ಲಿ ಚಿತ್ರಿಸಿವೆ. ಧರ್ಮದೇವತೆಯೆಂದರೆ ಪ್ರಾಜ್ಞರು ಈಕೆಯನ್ನು ಕೈವಾರಿಸಿರುವರು. ಭ್ರಾರತದಲ್ಲಿ ತಮ್ಮ ಪಾತಿವ್ರತ್ಯದಿಂದ ತ್ಯಾಗತಪಗಳಿಂದ ಆದರ್ಶಪ್ರಾಯರಾಗಿರುವ ಸತಿಶಿರೋಮಣಿಯರಲ್ಲೇಕೆ ಅಪೂರ್ವಗಳು. 
      ಗಾಂಸಧಾರಿ ಗಾಂಧಾರ ದೇಶದ ಸುಬಲ ರಾಜನ ಕುಮಾರಿ. ಪರಮಚತುರನಾದ ಶಕುನಿ ಇವಳ ಸೋದರ. ಬಾಲ್ಯದಲ್ಲಿಯೇ ಈಶ್ವರನನ್ನು ಕುರಿತು ತೀವ್ರವಾಗಿ ತಪಸ್ಸುಮಾದಿ ನೂರು ಜನ ಗಂಮಕ್ಕಳಾಗುವಂತೆ ವರ ಪಡೆದಳ. ಇವಳ ಇಂಥ ಪುಣ್ಯಗಳನ್ನೂ ಸದ್ಗುಣಗಳನ್ನು ಕೇಳಿ ಕಲಿತ ಕುರುಕುಲಪಿತಾಮಹ ಗಾಂಗೇಯ ಧ್ರುತರಾಷ್ಟ್ರನಿಗಾಗಿ ಈಕೆಯನ್ನು ಸುಬಲ ರಾಜನಲ್ಲಿ ಯಾಚಿಸಿದ. ಈಕೆಯ ಪುಣ್ಯದಿಂದಲಾದರೂ ಕುಕುವಂಶದಲ್ಲಿ ನಿಯೋಗ ಪದ್ಧತಿ ತಪ್ಪಿ ಔರಸ ಸಂತಾನ ಸಂಪತ್ತು ಅಭಿವೃದ್ಧಿಗೋಳ್ಳಲಿ ಎಂಬುದು ಆ ಮಹಾಪ್ರಾಜ್ಞ ನ ಆಶಯ. 
      ಸುಬಲನಿಗಾದರು ಪ್ರಸಿದ್ಧವಾದ ಕುರುವಂಶದೊಡನೆ ಸಂಬಂಧ ಬೆಳೆಸುವ ಆಸೆಯಾದರೂ ಧೃತರಾಷ್ಟ್ರ ಹುಟ್ಟುಕುರುಡನೆಂಬ ಹಿಂಜರಿಕೆ ಇತ್ತು. ಹೇಗಾದರೂ ಆತನ ವಂಶವಿಭವ ಸಂಪತ್ತು ಅಧಿಕಾರಿಗಳಿಗೆ ಮನಸೋತು ಆ ಮೂಲಕ ತನ್ನ ಗೌರವ ಘನತೆಗಳು ಬೆಳೆಯುವವೆಂದು ಆಶಿಸಿ ಆ ಸಂಬಂಧ ಬೆಳೆಸಲು ಒಪ್ಪಿದ. ತಂದೆ ತನ್ನನ್ನು ಒಬ್ಬ ಜನ್ಮಾಂಧ ರಾಜಕುವರನಿಗೆ ಕೊಡಲಿರುವುದನ್ನು ತಿಳಿದರೂ ಗಾಂಧಾರಿ ಅದರ ವಿರುದ್ಧ ಒಂದು ಮಾತನ್ನು ಆಡಲಿಲ್ಲ. ಅದಕ್ಕೆ ಪ್ರತಿಯಾಗಿ ಮತಪಕ್ಕೆ ಬರುವ ಮುನ್ನ ದಪ್ಪನಾದೋಂದು ಬಟ್ಟೆಯಿಂದ ತನ್ನ ಕಣ್ಣುಗಳನ್ನು ಕಟ್ಟಿಕೋಂಡು ತಾನೂ ನಯನವಿಹೀನೆಯಾದಳು. ಇದನ್ನು ಕಒಡ ವ್ಯಾಸ ಮಹರ್ಷಿಗಳು ಈಕೆಯನ್ನು ಪಾತಿವ್ರತ್ಯಪರಾಯಣಳೆಂಬರು. ಇವಳ ಲೋಕೋತ್ತರವದ ಪತಿಭಕ್ತಿ ತ್ಯಾಹಶಕ್ತಿಗಳನ್ನು ಕಂಡು ಹಸ್ತಿನಾವತಿಯೇ ಕೈಮುಗಿಯಿತು. 
        ಈಕೆಗೆ ತನ್ನ ಮಕ್ಕಳಲ್ಲಿ ಹೇಗೋ ಹಾಗೆಯೇ ಪಾಂಡುವಿತ್ರರಲ್ಲೂ ಅಕ್ಕರೆ. ದ್ರೌಪದಿಯ ಸ್ವಯಂವರ್ರ್ನಂತರ ಆಸ್ಥೆಯಿಂದ ಕೃಷ್ಣೆಯನ್ನು ಮನೆ ತುಂಬಿಕೊಂಡು ಉಪಚರಿಸಿದಳು. ಸುಂದರಿಯಾದ ಹೊಸ ಸೊಸೆಯನ್ನು ಅಧರ್ಮಿಗಳಾದ ತನ್ನ ಮಕ್ಕಳಿಂದ ದೂರಱ್ವಿಟ್ಟು ಕಾಪಾಡುವ ಜಾಗ್ರತೆಯನ್ನು ತೋರಿದಳು.
       ಕಮೇಣ ತನ್ನ ಮಕ್ಕಳಿಗೆ ಪಾಂಡವರಲ್ಲಿ ಬೆಳೆಯುತ್ತಿದ್ದ ಹಗೆಯನ್ನು ಗುರುತಿಸಿ ಅದನ್ನು ತಡೆಯಲು ಪ್ರಯತ್ನಿಸಿ ವಿಘಲಳಾದಾಗ ತುಂಬ ಕೊರಗಿದಳು.
       ಸಂಧಾನಕ್ಕಾಗಿ ಆಗಮಿಸಿದ ಕೃಷ್ಣ ಪಾಂಡವರಿಗೆ ಅರ್ಧ ರಾಜ್ಯವನ್ನು ಕೊಡಬೇಕೆಂದು ಕೇಳಿದಾಗ, ಕರ್ಣ ದುಶ್ಯಾಸನ ಶಕುನಿ ಮುಂತಾದ ಸುಯೋಧನನ ಪಕ್ಷದವರಿಗೂ ಭೀಷ್ಮ ದ್ರೋಣ ವಿದುರ ಮುಂತಾದ ನ್ಯಾಯನಿಷ್ಠರಾದ ವೃದ್ಧರಿಗೂ ಬಿರುಸಿನ ಚರ್ಚೆಯಾಗುತ್ತದಷ್ಟೆ. ಪಂಡವರು ಅಧರಾಜ್ಯಕ್ಕೆ ಹಕ್ಕುದಾರರೆಂದು ಹಿರಿಯರೆಲ್ಲರ ವಾದವನ್ನು ಗಾಂಧಾರಿ ಅನುಮೋದಿಸಿ ಧರ್ಮಾಜ್ಞಾ ದೂರದರ್ಶಿನಿ ಎಂಬ ವ್ಯಾಸಸ್ತುತಿಗೆ ತಕ್ಕವಳಾಗುತ್ತಾಳೆ. 'ಇದು ಪಾಂದುವಿನ ರಾಜ್ಯ. (ಧೃತರಾಷ್ಟ್ರ ಹುಟ್ಟುಕುರುಡನಾದುದರಿಂದ ಅವನಿಗೆ ರಾಜ್ಯದ ಹಕ್ಕೇ ಹುಟ್ಟಲಿಲ್ಲ.)ಅವನ ಮಕ್ಕಳಾದ ಪಾಂಡವರೇ ಇದಕ್ಕೆಲ್ಲ ನಿಜವಾದ ವಾರಸುದಾರರು. ಆದ್ದರಿಂದ ಅರ್ಧ ರಾಜ್ಯವನ್ನುಲ್ಲ, ಸಂಪೂರ್ಣ ರಾಜ್ಯನನ್ನೂ ದುರ್ಯೋಧನ ಧರ್ಮಪುತ್ರನಿಗೆ ಒಪ್ಪಿಸತಕ್ಕದ್ದು'ಎಮ್ಬುದು ಈಕೆಯ ಅಭಿಮತ.
      ಗಾಂಧಾರಿ ಎಂಥ ದೀಘದಶಿನಿ ಮತ್ತು ಮಹಾಪ್ರಜ್ಞಳು ಎಂಬುದು ಆಕೆ ಮಗನಿಗೆ ಮಾಡುವ ಉಪದೇಶದಿಂದ ಚೆನ್ನಾಗಿ ತಿಳಿಯುತ್ತದೆ. ಆರ್ಥ ಫ಼ಾಂಭೀರ್ಯದಿಂದ ಉನ್ನತ ಭಾವಗಳಿಂದ ಕೂಡಿದ ಆಕೆಯ ಉಕ್ತ್ಗಗಳು ಆಕೆಯ ಅಂತರ್ದೃಷ್ಟಿಯನ್ನು ವ್ಯಕ್ತಪಡಿಸುತ್ತವೆ. ಹಠಮಾರಿಯಾದ ಮಗನಿಗೆ ಈಕೆ ಹೇಳುವ ಬುದ್ಧಿವಾದವಿದು:'ಸಿಟ್ಟಿನ ಕೈಯಲ್ಲಿ ಬುದ್ಧಿಯನ್ನು ಕೊಟ್ಟು ನೀನು ಹೋರಾಟಕ್ಕೆ ನಿಂತೆಯಾದರೆ ಭೀಷ್ಮ ದ್ರೋಣ