ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-4.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬ ಗಾಂಧಿ, ದೇವದಾಸ್ - ಗಾಂಧೀನಗರ

ಗಾಂಧೀಯವರ ಜೀವನಮಾರ್ಗದ ಅನುಷ್ಥಾನ-ಈ ಉದ್ದಎಶದಿನ್ದ ಶ್ರೀಮತಿ ಸುಂದರಂ ರಾಮಚಂದ್ರನ್ ಇದನ್ನು ಸ್ಥಾಪಿಸಿದರು.ಜಿ.ರಾಮಚಂದ್ರನ್ ಇದರ ನಿರ್ದೇಶಖರು.
     ಆರಂಭದಲ್ಲಿ ಇಲ್ಲಿ ಎರಡು ಕಟ್ಟಡಗಳು ಮಾರತ್ರ ಇದ್ದುವು.ಕೆಲವು ಅಧ್ಯಾಪಕರು ಮತ್ತು ನೂರಕ್ಕು ಕಡಮೆ ವಿದ್ಯಾರ್ಥಿಗಳಿದ್ದರು. ಮೂಲಶೆಕ್ಷಣ ಶಾಲೆ, ಮೂಲ ಶಿಕ್ಷಕ ಶಿಕ್ಷಣ ಶಾಲೆ, ಸಣ್ಣ ವೈದ್ಯಶಾಲೆ ಇವು ಮಾತ್ರ ಇದ್ದ ಈ ಎಡೆಯಲ್ಲಿ ಈಗ ಅನೇಕ ಶಾಲೆಗಳೂ ಉತ್ಪಾದನ ಸಂಸ್ಥೆಹಳೂ ಸಂಶೋನಾಲಯಗಳೂ ಇವೆ. ಶಿಶುಮಂದಿರ, ಮೂಲಶಿಕ್ಷಣ ಶಾಲೆ, ಕಸ್ತೂರಬಾ ಸೇವಿಕಾಶ್ರಮ, ಗ್ರಾಮ ಪ್ರೌಢವಿದ್ಯಾ ಶಾಲೆ, ಲಕ್ಷ್ಮೀ ಶಿಕ್ಷಣ ಕಾಲೇಜ್, ದಾಂಧೀ ಶತಾಬ್ದಿ ಕುಶಲಕಲಾ ಶಾಲೆ, ಕುಮಾರಪ್ಪ ಗ್ರಾಮ ಕೈಗಾರಿಕ ಕೇಂದ್ರ, ಕಸ್ತೂರಬಾ ಆಸ್ಪತ್ರೆ, ಗ್ರಾಮ ಅರೋಗ್ಯ ಮತ್ತು ಕುಟುಂಬ ಯೋಜನಾ ಕೇಂದ್ರ ಮಕ್ಕಳ ಕ್ಷೇಮಾಭಿವೃದ್ಧಿ ತರಬೇತು ಕೇಂದ್ರ. ಖಾದಿ ಭವನ, ಕಲಾ ಭವನ, ಸತ್ಯಮಿತ್ರರ ಸಹಯೊಗ ಸಂಸ್ಥೆ, ಶಾಂತಿಸೇನೆ ಮುಂತಾದ ೩೦ ಸಂಸ್ಥೆಗಳಿವೆ. ೨೫೦೦ ವಿದ್ಯಾರ್ಥಿಗಳೂ ೫೦೦ ಮಂದಿ ಶಿಕ್ಷಕರೂ ಇದ್ದಾರೆ.
         ಮಕ್ಕಳ ಕಲ್ಯಾಣ ಕೇಂದ್ರದ ಹೆಸರು ಸೌಭಾಗ್ಯಂ. ಇದು ಅನಾಥ ಶಿಶುಗಳ ಗೃಹ ಮಕ್ಕಳ ಮನಸ್ಸಿನಲ್ಲಿ ತಾವು ಅನಾಥರೆಂಬ ಭಾವನೆಯೇ ಬೆಳೆಯದಂತೆ ಅವುಗಳ ರಕ್ಷಣೆ, ಶಿಕ್ಷಣ ನಡೆಯುತ್ತಿವೆ. ಮಕ್ಕಳ ಮನವರಿತು, ಅವರ ಸಾಮರ್ಥ್ಯಕ್ಕೂ, ಇಚ್ಚೆಗೂ ತಕ್ಕಂತೆ ಶಿಕ್ಷಣದ ಜೋತೆಗೆ ಕೈಕಸುಬನ್ನು ಕಲಿಸಲಾಗುವುದು. ಕಸ್ತೂರಬಾ ಸೇವಿಕಾಶ್ರಮ ವಿಧವೆಯರ, ಪರಿತ್ಯಕ್ತೆಯರ, ಸಮಾಜದ ದಬ್ಬಾಳಿಕೆಗೆ ಒಳಗಾದ ನತದೃಷ್ಟ ಅನಾಥಸ್ತ್ರೀಯರ ರಕ್ಷಣೆಯ ಕೇದ್ರವಾಗಿದೆ. ಇಲ್ಲಿ ಬಂದು ಸೇರುವ ಮಹಿಳೆಯರಿಗೆ ಪ್ರೌಢಶಾಲೆಯ ವರೆಗೆ ಶಿಕ್ಷಣ ನೀಡಿ ಅನಂತರ ಅವರ ಇಚ್ಚೆಯಂತೆ ಗ್ರಾಮಕ್ಕೆ ಸಂಬಂಧಪಟ್ಟ ಯಾವುದಾದರೂ ವಿಷಯವನ್ನು ಅಭ್ಯಾಸಮಾಡಿ ಪರಿಣತಿಗಳಿಸಿಕೊಳ್ಳುತ್ತಾರೆ.
            ಗಾಂಧಿಗ್ರಾಮದ ವಿದ್ಯಾರ್ಥಿಗಳು ತಮ್ಮ ತರಬೇತೆಗೆ ಪೂರಕವಾಗಿ ಸಮಾಜಕಲ್ಯಾಣ ಕಾರ್ಯಗಳನ್ನು ಸ್ವಯಂಸೇವಕರಂತೆ ನಿರ್ವಹಿಸುತ್ತಾರೆ. ಬಡವರಿಗೆ ಮನೆಕಟ್ಟಿಕೊಳ್ಳಲು ಸಹಾಯಮಾಡುವುದು, ಉಚಿತವಾಗಿ ಶಾಲೆಯನ್ನು ನಡೆಸಿ ವಿದ್ಯಾದಾನ ಮಾಡುವುದು, ವಯ